Chapter 1
1. ಸೊಲೊಮೋನನ ಗೀತಗಳ ಗೀತ. 2. ತನ್ನ ಬಾಯಿಯ ಮುದ್ದುಗಳಿಂದ ನನಗೆ ಮುದ್ದಿ ಡಲಿ; ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಉತ್ತಮ. 3. ನಿನ್ನ ಒಳ್ಳೇ ತೈಲಗಳ ಪರಿಮಳದಂತೆ ನಿನ್ನ ಹೆಸರು ಹೊಯ್ಯಲ್ಪಟ್ಟ ತೈಲವಾಗಿದೆ; ಆದದರಿಂದ ಕನ್ನಿಕೆಯರು ನಿನ್ನನ್ನು ಪ್ರೀತಿಮಾಡುತ್ತಾರೆ. 4. ನನ್ನನ್ನು ಎಳಕೋ, ನಾವು ನಿನ್ನ ಹಿಂದೆ ಓಡುವೆವು; ಅರಸನು ನನ್ನನ್ನು ತನ್ನ ಕೊಠಡಿಗಳಿಗೆ ಕರಕೊಂಡು ಬಂದಿದ್ದಾನೆ. ನಾವು ನಿನ್ನಲ್ಲಿ ಉಲ್ಲಾಸಪಟ್ಟು ಸಂತೋಷಪಡುತ್ತೇವೆ; ದ್ರಾಕ್ಷಾರಸ ಕ್ಕಿಂತ ನಿನ್ನ ಪ್ರೀತಿಯನ್ನು ಜ್ಞಾಪಕಮಾಡುತ್ತೇವೆ; ಯಥಾ ರ್ಥರು ನಿನ್ನನ್ನು ಪ್ರೀತಿಮಾಡುತ್ತಾರೆ. 5. ನಾನು ಕಪ್ಪಾದವಳು; ಆದರೂ ಓ ಯೆರೂಸ ಲೇಮಿನ ಕುಮಾರ್ತೆಯರೇ, ಕೆದಾರಿನ ಗುಡಾರಗಳ ಹಾಗೆಯೂ ಸೊಲೊಮೋನನ ತೆರೆಗಳ ಹಾಗೆಯೂ ಸುಂದರಿಯಾಗಿದ್ದೇನೆ. 6. ನನ್ನನ್ನು ನೋಡಬೇಡಿರಿ; ನಾನು ಸೂರ್ಯನ ದೃಷ್ಟಿಗೆ ಬಿದ್ದು ಕಪ್ಪಾಗಿದ್ದೇನೆ; ನನ್ನ ತಾಯಿಯ ಮಕ್ಕಳು ನನ್ನ ಮೇಲೆ ಕೋಪಗೊಂಡು ದ್ರಾಕ್ಷೇ ತೋಟಗಳನ್ನು ಕಾಯಲು ನನ್ನನ್ನು ನೇಮಿಸಿದರು. ನನ್ನ ಸ್ವಂತ ದ್ರಾಕ್ಷೇ ತೋಟವನ್ನು ನಾನು ಕಾಯಲಿಲ್ಲ. 7. ನನ್ನ ಪ್ರಾಣ ಪ್ರಿಯನೇ, ನೀನು ನಿನ್ನ ಮಂದೆಯನ್ನು ಮೇಯಿಸಿ ಮಧ್ಯಾಹ್ನದಲ್ಲಿ ವಿಶ್ರಮಿಸಿಕೊಳ್ಳುವ ಸ್ಥಳ ಎಲ್ಲಿ ಎಂದು ನನಗೆ ತಿಳಿಸು. ನಾನು ನಿನ್ನ ಜೊತೆಗಾ ರರ ಮಂದೆಗಳ ಬಳಿಯಲ್ಲಿ ಪರಕೀಯಳ ಹಾಗೆ ಇರುವದೇಕೆ? 8. ಓ ಸ್ತ್ರೀಯರಲ್ಲಿ ಸೌಂದರ್ಯವಂತಳೇ, ನೀನು ತಿಳಿಯದೆ ಇದ್ದರೆ ನೀನು ಮಂದೆಯ ಜಾಡೆಯನ್ನು ಹಿಡಿದು ಹೊರಟುಹೋಗಿ ಕುರುಬರ ಗುಡಾರಗಳ ಬಳಿಯಲ್ಲಿ ನಿನ್ನ ಮೇಕೆಯ ಮರಿಗಳನ್ನು ಮೇಯಿಸು. 9. ಓ ನನ್ನ ಪ್ರಿಯಳೇ, ಫರೋಹನ ರಥಗಳಲ್ಲಿರುವ ಕುದುರೆಗಳ ಗುಂಪಿಗೆ ನಿನ್ನನ್ನು ಹೋಲಿಸಿದ್ದೇನೆ. 10. ನಿನ್ನ ಕೆನ್ನೆಗಳು ಆಭರಣಗಳ ಸಾಲಿನಿಂದಲೂ ಕೊರಳು ಕಂಠಮಾಲೆಗಳಿಂದಲೂ ರಮ್ಯವಾಗಿವೆ. 11. ನಾವು ನಿನ ಗೋಸ್ಕರ ಬಂಗಾರದ ಅಂಚುಗಳನ್ನು ಬೆಳ್ಳಿಯ ಕುಚ್ಚುಗಳೊಂದಿಗೆ ಮಾಡುವೆವು. 12. ಅರಸನು ಮೇಜಿನ ಬಳಿಯಲ್ಲಿ ಕೂತಿದ್ದಾಗ ನನ್ನ ಜಟಾಮಾಂಸಿಯು ಅದರ ವಾಸನೆಯನ್ನು ಬಿಡುತ್ತದೆ. 13. ನನ್ನ ಅತಿಪ್ರಿಯನು ನನಗೆ ಬೋಳದ ಗಡ್ಡೆಯ ಹಾಗೆ ಇರುವನು; ರಾತ್ರಿಯೆಲ್ಲಾ ನನ್ನ ಸ್ತನಗಳ ಮಧ್ಯದಲ್ಲಿ ಮಲಗುವನು. 14. ಏನ್ಗೆದಿಯ ದ್ರಾಕ್ಷೇ ತೋಟ ಗಳಲ್ಲಿರುವ ಗೋರಂಟೆಯ ಪೂಗೊಂಚಲಿನಂತೆ ನನ್ನ ಪ್ರಿಯನು ನನಗೆ ಇರುವನು. 15. ಇಗೋ, ನನ್ನ ಪ್ರಿಯಳೇ, ನೀನು ಸೌಂದರ್ಯ ವಂತೆಯು, ಇಗೋ, ನೀನು ಸೌಂದರ್ಯವಂತೆಯು ನಿನಗೆ ಪಾರಿವಾಳದ ಕಣ್ಣುಗಳಿವೆ. 16. ನನ್ನ ಪ್ರಿಯನೇ, ಇಗೋ, ನೀನು ಸೌಂದರ್ಯ ವಂತನು; ಹೌದು, ರಮ್ಯವಾದವನು; ನಮ್ಮ ಹಾಸಿಗೆ ಹಸುರಾಗಿದೆ. 17. ನಮ್ಮ ಮನೆಯ ತೊಲೆಗಳು ದೇವದಾರು ಮರಗಳು, ನಮ್ಮ ಜಂತೆಗಳು ತುರಾಯಿ ಗಿಡಗಳು.
Chapter 2
1. ಶಾರೋನಿನ ಗುಲಾಬಿ ಹೂವೂ, ತಗ್ಗುಗಳ ತಾವರೆಯೂ ನಾನೇ. 2. ಮುಳ್ಳುಗಳಲ್ಲಿ ತಾವರೆಯು ಹೇಗೋ ನನ್ನ ಪ್ರಿಯಳು ಕುಮಾರ್ತೆ ಗಳಲ್ಲಿ ಹಾಗೆಯೇ ಇದ್ದಾಳೆ. 3. ಅಡವಿಯ ಗಿಡಗಳಲ್ಲಿ ಸೇಬು ಮರ ಹೇಗೋ ಕುಮಾರರಲ್ಲಿ ನನ್ನ ಪ್ರಿಯನು ಹಾಗೆಯೇ. ನಾನು ಅವನ ನೆರಳಿನಲ್ಲಿ ಬಹು ಆನಂದವಾಗಿ ಕುಳಿತು ಕೊಂಡೆನು; ಅವನ ಫಲವು ನನ್ನ ರುಚಿಗೆ ಮಧುರ ವಾಗಿತ್ತು. 4. ಔತಣದ ಮನೆಗೆ ನನ್ನನ್ನು ಕರಕೊಂಡು ಬಂದನು; ನನ್ನ ಮೇಲೆ ಅವನ ಧ್ವಜ ಪ್ರೀತಿಯೇ. 5. ದ್ರಾಕ್ಷೆಯ ಉಂಡಿಗಳಿಂದ ನನ್ನನ್ನು ಹಿಡಿದಿರು; ಸೇಬು ಹಣ್ಣುಗಳಿಂದ ನನ್ನನ್ನು ಆದರಿಸು; ಪ್ರೀತಿಯ ದೆಸೆಯಿಂದ ಅಸ್ವಸ್ಥಳಾಗಿದ್ದೇನೆ. 6. ಅವನ ಎಡಗೈ ನನ್ನ ತಲೆಯ ಕೆಳಗದೆ; ಅವನ ಬಲಗೈ ನನ್ನನ್ನು ಅಪ್ಪಿ ಕೊಳ್ಳುತ್ತದೆ. 7. ಓ ಯೆರೂಸಲೇಮಿನ ಕುಮಾರ್ತೆಯರೇ, ನನ್ನ ಪ್ರಿಯನು ಮೆಚ್ಚುವ ವರೆಗೆ ನೀವು ಎಬ್ಬಿಸಬೇಡಿರಿ, ಇಲ್ಲವೆ ನನ್ನ ಪ್ರಿಯನನ್ನು ಎಚ್ಚರಿಸಬೇಡಿರಿ ಎಂದು ದುಪ್ಪಿಗಳಿಂದಲೂ ಅಡವಿಯ ಜಿಂಕೆಗಳಿಂದಲೂ ನಿಮಗೆ ಆಜ್ಞಾಪಿಸುತ್ತೇನೆ. 8. ನನ್ನ ಪ್ರಿಯನ ಸ್ವರವು! ಇಗೋ, ಅವನು ಪರ್ವತಗಳ ಮೇಲೆ ಹಾರುತ್ತಾ ಗುಡ್ಡಗಳ ಮೇಲೆ ನೆಗೆಯುತ್ತಾ ಬರುತ್ತಾನೆ. 9. ನನ್ನ ಪ್ರಿಯನು ಜಿಂಕೆಯ ಹಾಗೆ ಇಲ್ಲವೆ ದುಪ್ಪಿಯ ಮರಿಯ ಹಾಗೆ ಇದ್ದಾನೆ. ಇಗೋ, ಅವನು ನಮ್ಮ ಗೋಡೆಯ ಹಿಂದೆ ನಿಂತು ಜಲಾಂತರಗಳಿಂದ ತನ್ನನ್ನು ತೋರಿಸಿ ಕಿಟಕಿಗಳಿಂದ ನೋಡುತ್ತಾನೆ. 10. ನನ್ನ ಪ್ರಿಯನು ಮಾತಾಡಿ--ಏಳು, ನನ್ನ ಪ್ರಿಯಳೇ, ನನ್ನ ಸುಂದರಿಯೇ, ಹೊರಟು ಬಾ. 11. ಇಗೋ, ಚಳಿ ಗಾಲವು ಗತಿಸಿತು; ಮಳೆಯು ನಿಂತುಹೋಯಿತು; 12. ಪುಷ್ಪಗಳು ಭೂಮಿಯ ಮೇಲೆ ಕಾಣಿಸುತ್ತವೆ; ಪಕ್ಷಿಗಳು ಹಾಡುವ ಕಾಲ ಬಂತು; ಬೆಳವಕ್ಕಿಯ ಸ್ವರವು ನಮ್ಮ ದೇಶದಲ್ಲಿ ಕೇಳಲ್ಪಡುತ್ತದೆ. 13. ಅಂಜೂರದ ಗಿಡವು ಅದರ ಹೀಚುಗಳನ್ನು ಬಿಡುತ್ತದೆ. ದ್ರಾಕ್ಷೇ ಬಳ್ಳಿಗಳ ಹೂವು ಅದರ ಸುವಾಸನೆಯನ್ನು ಕೊಡು ತ್ತದೆ. ಏಳು, ನನ್ನ ಪ್ರಿಯಳೇ, ನನ್ನ ಸುಂದರಿಯೇ, ಹೊರಟು ಬಾ ಎಂಬದು. 14. ಗುಪ್ತವಾದ ಹಂತಗ ಳಲ್ಲಿಯೂ ಕಲ್ಲು ಸಂದುಗಳ ಮರೆಯಲ್ಲಿಯೂ ಇರುವ ಓ ನನ್ನ ಪಾರಿವಾಳವೇ, ನಿನ್ನ ಮುಖವನ್ನು ನನಗೆ ತೋರ ಮಾಡು. ನಿನ್ನ ಸ್ವರವನ್ನು ಕೇಳಿಸು. ನಿನ್ನ ಸ್ವರವು ರಮ್ಯವಾಗಿಯೂ ನಿನ್ನ ಮುಖವು ಸೌಂದರ್ಯ ವಾಗಿಯೂ ಅದೆ. 15. ನರಿಗಳನ್ನೂ ದ್ರಾಕ್ಷೇ ಗಿಡಗಳನ್ನು ಕೆಡಿಸುವ ಚಿಕ್ಕ ನರಿಗಳನ್ನೂ ನಮಗಾಗಿ ಹಿಡಿಯಿರಿ; ನಮ್ಮ ದ್ರಾಕ್ಷೇಗಿಡಗಳಲ್ಲಿ ಎಳೆಗಾಯಿಗಳಾಗಿವೆ. 16. ನನ್ನ ಪ್ರಿಯನು ನನ್ನವನು, ನಾನು ಅವನವಳು.ಅವನು ತಾವರೆ ಹೂವುಗಳ ಮಧ್ಯದಲ್ಲಿ ಮೇಯಿಸು ತ್ತಾನೆ. 17. ನನ್ನ ಪ್ರಿಯನೇ, ತಿರುಗಿಕೊಂಡು ಬೆಳಗಾಗು ವವರೆಗೂ ನೆರಳುಗಳು ಓಡಿಹೋಗುವ ವರೆಗೂ, ಬತೇರ್ ಪರ್ವತಗಳ ಮೇಲಿರುವ ಜಿಂಕೆಯ ಹಾಗೆ ಇಲ್ಲವೆ ದುಪ್ಪಿಯ ಮರಿಯ ಹಾಗೆ ಇರು.
Chapter 3
1. ರಾತ್ರಿಯಲ್ಲಿ ನನ್ನ ಹಾಸಿಗೆಯ ಮೇಲೆ ನನ್ನ ಪ್ರಾಣ ಪ್ರಿಯನನ್ನು ಹುಡುಕಿದೆನು; ಅವನನ್ನು ಹುಡುಕಿದೆನು, ಆದರೆ ಕಾಣದೆಹೋದೆನು. 2. ನಾನು ಈಗ ಎದ್ದು ಪಟ್ಟಣವನ್ನು ಸಂಚರಿಸಿ ಬೀದಿ ಗಳಲ್ಲಿಯೂ ಮಾರ್ಗಗಳಲ್ಲಿಯೂ ನನ್ನ ಪ್ರಾಣಪ್ರಿಯ ನನ್ನು ಹುಡುಕುವೆನು. ಅವನನ್ನು ಹುಡುಕಿ ಕಾಣದೆ ಹೋದೆನು. 3. ಪಟ್ಟಣವನ್ನು ಸಂಚರಿಸುವ ಕಾವಲು ಗಾರರು ನನ್ನನ್ನು ಕಂಡಾಗ--ನನ್ನ ಪ್ರಾಣಪ್ರಿಯ ನನ್ನು ನೀವು ಕಂಡಿರಾ ಅಂದೆನು. 4. ನಾನು ಅವರನ್ನು ಬಿಟ್ಟು ಸ್ವಲ್ಪ ಆಚೆಗೆ ಹೋದ ತರುವಾಯ, ನನ್ನ ಪ್ರಾಣಪ್ರಿಯನನ್ನು ಕಂಡೆನು. ನಾನು ಅವನನ್ನು ಹಿಡುಕೊಂಡು ನನ್ನ ತಾಯಿಯ ಮನೆಗೂ ನನ್ನನ್ನು ಹೆತ್ತವಳ ಕೊಠಡಿಗೂ ಅವನನ್ನು ಕರತರುವ ವರೆಗೆ ಹೋಗಗೊಡಿಸಲಿಲ್ಲ. 5. ಯೆರೂಸಲೇಮಿನ ಕುಮಾರ್ತೆಯರೇ, ನನ್ನ ಪ್ರಿಯನು ಮೆಚ್ಚುವ ವರೆಗೆ ನೀವು ನನ್ನ ಪ್ರೀತಿಯನ್ನು ಎಬ್ಬಿಸಬೇಡಿರಿ, ಎಚ್ಚರಿಸಬೇಡಿರಿ ಎಂದು ಅಡವಿಯ ಜಿಂಕೆಗಳಿಂದಲೂ ದುಪ್ಪಿಗಳಿಂದಲೂ ನಿಮಗೆ ಆಜ್ಞಾಪಿಸುತ್ತೇನೆ. 6. ರಕ್ತಬೋಳ ಸಾಂಬ್ರಾಣಿಗಳಿಂದಲೂ ವರ್ತಕರ ಸಕಲ ಸುಗಂಧ ದ್ರವ್ಯಗಳಿಂದಲೂ ಧೂಮ ಸ್ತಂಭ ಗಳ ಹಾಗೆಯೂ ಅಡವಿಯಿಂದ ಬರುವ ಇವಳಾರು? 7. ಸೊಲೊಮೋನನ ಹಾಸಿಗೆಯನ್ನು ನೋಡು; ಇಸ್ರಾ ಯೇಲಿನ ಪರಾಕ್ರಮಶಾಲಿಗಳಲ್ಲಿ ಅರವತ್ತು ಮಂದಿ ಪರಾಕ್ರಮಶಾಲಿಗಳು ಅದನ್ನು ಸುತ್ತಿಕೊಂಡಿದ್ದಾರೆ. 8. ಅವರೆಲ್ಲರು ಕತ್ತಿಹಿಡಿದವರು, ಯುದ್ಧನಿಪುಣರು. 9. ರಾತ್ರಿಯ ಭಯದ ನಿಮಿತ್ತ ಪ್ರತಿ ಮನುಷ್ಯನು ತನ್ನ ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದಾನೆ. ಅರಸನಾದ ಸೊಲೊಮೋನನು ಲೆಬನೋನಿನ ಮರದಿಂದ ಒಂದು ರಥವನ್ನು ತನಗೆ ಮಾಡಿಸಿಕೊಂಡನು. 10. ಅವನು ಅದರ ಸ್ತಂಭಗಳನ್ನು ಬೆಳ್ಳಿಯಿಂದಲೂ ಕೆಳಗಿನ ಭಾಗವನ್ನು ಬಂಗಾರದಿಂದಲೂ ಹೊದಿಕೆ ಯನ್ನು ಧೂಮ್ರ ವರ್ಣದ ವಸ್ತ್ರದಿಂದಲೂ ಮಾಡಿ ಸಿದನು. ಯೆರೂಸಲೇಮಿನ ಕುಮಾರ್ತೆಯರ ನಿಮಿತ್ತ ಅದರ ಮಧ್ಯದಲ್ಲಿದ್ದದ್ದು ಪ್ರೀತಿಯಿಂದ ಹಾಸಲ್ಪಟ್ಟಿತು. 11. ಚೀಯೋನಿನ ಕುಮಾರ್ತೆಯರೇ, ನೀವು ಹೊರಟು ಹೋಗಿ ಅವನ ಮದುವೆಯ ದಿವಸದಲ್ಲಿಯೂ ಹೃದ ಯದ ಸಂತೋಷದ ದಿವಸದಲ್ಲಿಯೂ ತನ್ನ ತಾಯಿ ತನಗೆ ಧರಿಸಿದ ಕಿರೀಟ ಇರುವ ಅರಸನಾದ ಸೊಲೊ ಮೋನನನ್ನು ನೋಡಿರಿ.
Chapter 4
1. ಇಗೋ, ನನ್ನ ಪ್ರಿಯಳೇ, ನೀನು ಸುಂದರಿಯು! ಇಗೋ, ನೀನು ಸುಂದರಿಯು! ನಿನ್ನ ಮುಸುಕಿನೊಳಗೆ ನಿನಗೆ ಪಾರಿವಾಳದ ಕಣ್ಣುಗ ಳಿವೆ. ನಿನ್ನ ಕೂದಲು ಗಿಲ್ಯಾದಿನ ಪರ್ವತದಲ್ಲಿ ಕಾಣ ಲ್ಪಡುವ ಮೇಕೆ ಮಂದೆಯ ಹಾಗೆ ಇದೆ. 2. ನಿನ್ನ ಹಲ್ಲುಗಳು ತೊಳೆಯಲ್ಪಟ್ಟು ಮೇಲಕ್ಕೆ ಬರುವ ಉಣ್ಣೆ ಕತ್ತರಿಸಿದ ಕುರಿಮಂದೆಗೆ ಸಮಾನವಾಗಿವೆ; ಅವೆಲ್ಲಾ ಅವಳಿ ಜವಳಿ ಈಯುತ್ತವೆ; ಅವುಗಳಲ್ಲಿ ಒಂದೂ ಬಂಜೆಯಾಗಿರದು. 3. ನಿನ್ನ ತುಟಿಗಳು ಕೆಂಪು ದಾರದ ಹಾಗೆ ಅವೆ; ನಿನ್ನ ಮಾತು ರಮ್ಯವಾದದ್ದು; ನಿನ್ನ ಕೆನ್ನೆಯು ಮುಸುಕಿನೊಳಗೆ ವಿಭಾಗಿಸಿದ ದಾಳಿಂಬರ ಹಣ್ಣಿನ ಹಾಗೆ ಇದೆ. 4. ನಿನ್ನ ಕುತ್ತಿಗೆ ದಾವೀದನ ಆಯುಧ ಶಾಲೆಗೋಸ್ಕರ ಕಟ್ಟಿಸಲ್ಪಟ್ಟ ಬುರುಜಿನ ಹಾಗೆ ಇದೆ; ಅದರಲ್ಲಿ ಸಾವಿರ ಗುರಾಣಿಗಳು ತೂಗ ಹಾಕಿವೆ; ಅವುಗಳೆಲ್ಲಾ ಪರಾಕ್ರಮಶಾಲಿಗಳ ಡಾಲುಗಳು. 5. ನಿನ್ನ ಎರಡು ಸ್ತನಗಳು ತಾವರೆ ಹೂವುಗಳಲ್ಲಿ ಮೇಯುವ ಅವಳಿ ಜವಳಿಯಾದ ಎರಡು ಜಿಂಕೆಯ ಮರಿಗಳ ಹಾಗೆ ಅವೆ. 6. ಉದಯವಾಗುವ ವರೆಗೂ ನೆರಳುಗಳು ಓಡಿಹೋಗುವ ವರೆಗೂ ನಾನು ರಕ್ತಬೋಳದ ಪರ್ವತಕ್ಕೂ ಸಾಂಬ್ರಾಣಿಯ ಗುಡ್ಡಕ್ಕೂ ಹೋಗುವೆನು. 7. ನನ್ನ ಪ್ರಿಯಳೇ, ನೀನು ಪೂರ್ಣ ಸುಂದರಿಯು, ನಿನ್ನಲ್ಲಿ ಕಳಂಕವೇನೂ ಇಲ್ಲ. 8. ನನ್ನ ಸಂಗಡ ಲೆಬನೋನಿನಿಂದ ಬಾ, ಪತ್ನಿಯೇ; ಲೆಬನೋನಿನಿಂದ ನನ್ನ ಸಂಗಡ ಬಾ. ಅಮಾನದ ಶಿಖರದಿಂದ, ಶೆನೀರ್, ಹೆರ್ಮೋನ್ ಶಿಖರದಿಂದ, ಸಿಂಹದ ಗವಿಗಳಿಂದ, ಚಿರತೆಗಳ ಪರ್ವತಗಳಿಂದ ದೃಷ್ಟಿಸು. 9. ನನ್ನ ಹೃದಯವನ್ನು ನೀನು ಸೆಳಕೊಂಡಿದ್ದೀ. ನನ್ನ ಸಹೋದರಿಯೇ, ವಧುವೇ, ನಿನ್ನ ಕಣ್ಣುಗಳ ಏಕದೃಷ್ಟಿಯಿಂದಲೂ ನಿನ್ನ ಕೊರಳಲ್ಲಿರುವ ಒಂದು ಕಂಠಮಾಲೆಯಿಂದಲೂ ನನ್ನ ಹೃದಯವನ್ನು ನೀನು ಸೆಳಕೊಂಡಿದ್ದೀ. 10. ನಿನ್ನ ಪ್ರೀತಿಯು ಎಷ್ಟೋ ಚಂದ! ನನ್ನ ಸಹೋದರಿಯೇ, ವಧುವೇ, ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತ ಎಷ್ಟೋ ಉತ್ತಮ! ಎಲ್ಲಾ ಸುಗಂಧ ಗಳಿಗಿಂತ ನಿನ್ನ ತೈಲಗಳ ವಾಸನೆಯು ಎಷ್ಟೋ ಉತ್ತಮ! 11. ನಿನ್ನ ತುಟಿಗಳು, ಓ ನನ್ನ ವಧುವೇ, ಜೇನುಗೂಡಿನ ಹಾಗೆ ಸುರಿಯುತ್ತವೆ; ಹಾಲೂ ಜೇನೂ ನಿನ್ನ ನಾಲಿಗೆಯ ಕೆಳಗೆ ಅವೆ; ನಿನ್ನ ವಸ್ತ್ರಗಳ ವಾಸನೆಯು ಲೆಬನೋನಿನ ವಾಸನೆಯ ಹಾಗೆ ಅವೆ. 12. ನನ್ನ ಸಹೋದರಿಯು, ಪತ್ನಿಯು, ಮುಚ್ಚಲ್ಪಟ್ಟ ತೋಟವೂ ಮುಚ್ಚಲ್ಪಟ್ಟ ಒರತೆಯೂ ಮುದ್ರೆ ಹಾಕಲ್ಪಟ್ಟ ಬುಗ್ಗೆಯೂ ಆಗಿದ್ದಾಳೆ. 13. ನಿನ್ನ ಗಿಡಗಳಲ್ಲಿ ದಾಳಿಂಬರದ ವನವೂ ರಮ್ಯವಾದ ಫಲಕೊಡುವ ಗಿಡಗಳೂ ಕರ್ಪೂರವೂ ಜಟಾಮಾಂಸಿಯೂ ಕೂಡ ಇವೆ. 14. ಜಟಾಮಾಂಸಿಯೂ-- ಕೇಸರಿಯೂ ಬಜೆಯೂ ಲವಂಗವೂ ಎಲ್ಲಾ ಸಾಂಬ್ರಾಣಿ ಗಿಡಗಳೂ ರಕ್ತಬೋಳವೂ ಅಗರೂ 15. ಸಮಸ್ತ ಮುಖ್ಯವಾದ ಸುಗಂಧದ್ರವ್ಯ ಗಳೂ ತೋಟಗಳ ಬುಗ್ಗೆಯೂ ಜೀವಜಲಗಳ ಬಾವಿಯೂ ಲೆಬನೋನಿನಿಂದ ಹರಿಯುವ ಕಾಲುವೆ ಗಳೂ ನಿನ್ನಲ್ಲಿ ಇವೆ. 16. ಓ ಉತ್ತರ ಗಾಳಿಯೇ, ಎಚ್ಚರವಾಗು! ದಕ್ಷಿಣ ಗಾಳಿಯೇ, ಬಾ! ನನ್ನ ತೋಟದ ಮೇಲೆ ಬೀಸು; ಅದರ ಸುಗಂಧಗಳು ಹರಿಯಲಿ. ನನ್ನ ಪ್ರಿಯನು ತನ್ನ ತೋಟದಲ್ಲಿ ಬಂದು ತನ್ನ ರಮ್ಯವಾದ ಫಲಗ ಳನ್ನು ತಿನ್ನಲಿ.
Chapter 5
1. ನನ್ನ ತೋಟಕ್ಕೆ ಬಂದೆನು, ನನ್ನ ಸಹೋದರಿಯೇ, ವಧುವೇ; ನನ್ನ ರಕ್ತಬೋಳ ವನ್ನೂ ನನ್ನ ಸುಗಂಧಗಳನ್ನೂ ಕೂಡಿಸಿದ್ದೇನೆ; ನನ್ನ ಜೇನು ಗೂಡನ್ನೂ ಜೇನು ತುಪ್ಪವನ್ನೂ ತಿಂದಿದ್ದೇನೆ; ನನ್ನ ದ್ರಾಕ್ಷಾರಸವನ್ನೂ ನನ್ನ ಹಾಲನ್ನೂ ಕುಡಿದಿದ್ದೇನೆ. ತಿನ್ನಿರಿ, ಓ ಸ್ನೇಹಿತರೇ; ಕುಡಿಯಿರಿ. ಹೌದು, ನನ್ನ ಪ್ರಿಯರೇ, ಸಮೃದ್ಧಿಯಾಗಿ ಕುಡಿಯಿರಿ. 2. ನಾನು ನಿದ್ರೆಗೈದರೂ ನನ್ನ ಹೃದಯವು ಎಚ್ಚರ ವಾಗುವದು. ಇದು ತಟ್ಟುವ ನನ್ನ ಪ್ರಿಯನ ಶಬ್ದ; ಅದು--ನನಗೆ ತೆರೆ, ನನ್ನ ಸಹೋದರಿಯೇ, ನನ್ನ ಪ್ರಿಯಳೇ, ನನ್ನ ಪಾರಿವಾಳವೇ, ನಿರ್ಮಲೆಯೇ, ನನ್ನ ತಲೆಯು ಮಂಜಿನಿಂದಲೂ ನನ್ನ ಕೂದಲು ರಾತ್ರಿಯ ಬಿಂದುಗಳಿಂದಲೂ ತೋಯಲ್ಪಟ್ಟಿವೆ ಎಂಬದು. 3. ನಾನು ನನ್ನ ಅಂಗಿಯನ್ನು ತೆಗೆದಿದ್ದೇನೆ; ಅದನ್ನು ತೊಟ್ಟುಕೊಳ್ಳುವದು ಹೇಗೆ? ನಾನು ನನ್ನ ಕಾಲು ಗಳನ್ನು ತೊಳಕೊಂಡೆನು; ನಾನು ಅವುಗಳನ್ನು ಮೈಲಿಗೆ ಮಾಡುವದು ಹೇಗೆ? 4. ನನ್ನ ಪ್ರಿಯನು ಬಾಗಲ ಸಂದಿನಲ್ಲಿ ತನ್ನ ಕೈಹಾಕಿದನು; ನನ್ನ ಕರುಳುಗಳು ಅವನಿಗಾಗಿ ಮರುಗಿದವು. 5. ನಾನು ನನ್ನ ಪ್ರಿಯನಿಗೆ ತೆರೆಯಲು ಎದ್ದಾಗ ಬೀಗದ ಹಿಡಿಗಳ ಮೇಲೆ ನನ್ನ ಕೈಗಳಿಂದ ರಕ್ತಬೋಳವೂ ನನ್ನ ಬೆರಳುಗಳಿಂದ ಸೋರುವ ಬೋಳವೂ ಸುರಿಯಿತು. 6. ನಾನು ನನ್ನ ಪ್ರಿಯನಿಗೆ ಕದತೆರೆದೆನು; ಆದರೆ ನನ್ನ ಪ್ರಿಯನು ಹಿಂದಿರುಗಿ ಹೋಗಿದ್ದನು. ಅವನು ಮಾತನಾಡಿದಾಗ ನನ್ನ ಪ್ರಾಣವು ಸತ್ತಂತಿತ್ತು; ಅವನನ್ನು ಹುಡುಕಿದೆನು; ಸಿಕ್ಕದೆ ಹೋದನು; ಅವನನ್ನು ಕರೆದೆನು; ಪ್ರತ್ಯುತ್ತರ ಕೊಡದೆ ಹೋದನು. 7. ಪಟ್ಟಣದಲ್ಲಿ ಸಂಚರಿಸುವ ಕಾವಲುಗಾರರು ನನ್ನನ್ನು ಕಂಡು, ನನ್ನನ್ನು ಹೊಡೆದು, ಗಾಯಮಾಡಿದರು; ಗೋಡೆಗಳನ್ನು ಕಾಯುವವರು ನನ್ನ ಮುಸುಕನ್ನು ಕಸಕೊಂಡರು. 8. ನಿಮಗೆ ಆಣೆ ಇಡುತ್ತೇನೆ, ಓ ಯೆರೂಸಲೇಮಿನ ಕುಮಾರ್ತೆ ಯರೇ--ನೀವು ನನ್ನ ಪ್ರಿಯನನ್ನು ಕಂಡರೆ ನಾನು ಅನುರಾಗದಿಂದ ಅಸ್ವಸ್ಥಳಾಗಿದ್ದೇನೆಂದು ಅವನಿಗೆ ತಿಳಿಸಿರಿ. 9. ಇತರ ಪ್ರಿಯನಿಗಿಂತ ನಿನ್ನ ಪ್ರಿಯನ ಅತಿಶಯ ವೇನು? ಸ್ತ್ರೀಯರಲ್ಲಿ ಅತಿ ಸುಂದರಿಯೇ, ನೀನು ನಮಗೆ ಹೀಗೆ ಆಣೆ ಇಡುವದಕ್ಕೆ ಇತರ ಪ್ರಿಯನಿಗಿಂತ ನಿನ್ನ ಪ್ರಿಯನ ಅತಿಶಯವೇನು? 10. ನನ್ನ ಪ್ರಿಯನು ಬಿಳುಪೂ ಕೆಂಪೂ ಉಳ್ಳವನು; ಹತ್ತು ಸಾವಿರ ಜನರಲ್ಲಿ ಮೇಲಾದವನು. 11. ಅವನ ತಲೆಯು ಅತಿ ಚೊಕ್ಕ ಬಂಗಾರದ ಹಾಗೆಯೂ ಅವನ ಕೂದಲು ಗುಂಗುರು ಕೂದಲೂ ಕಾಗೆಯ ಹಾಗೆ ಕಪ್ಪಾಗಿಯೂ ಅವೆ. 12. ಅವನ ಕಣ್ಣುಗಳು ಯುಕ್ತವಾಗಿ ಇರಿಸಲ್ಪಟ್ಟು ಹಾಲಿನಿಂದ ತೊಳೆಯಲ್ಪಟ್ಟ ಜಲದ ಕಾಲಿವೆಗಳ ಬಳಿಯಲ್ಲಿರುವ ಪಾರಿವಾಳಗಳ ಕಣ್ಣುಗಳ ಹಾಗೆ ಅವೆ. 13. ಅವನ ಕೆನ್ನೆಗಳು ಸುಗಂಧಮಡಿಯ ಹಾಗೆಯೂ ಸುವಾಸನೆಯ ಪುಷ್ಪಗಳ ಹಾಗೆಯೂ ಅವೆ. ಅವನ ತುಟಿಗಳು ತಾವರೆಗಳ ಹಾಗೆ ಸೋರುವ ಸುಗಂಧ ರಕ್ತಬೋಳವನ್ನು ಸುರಿಯುತ್ತವೆ. 14. ಅವನ ಕೈಗಳು ಬೆರುಲ್ಲಗಳಿಂದ ಜೋಡಿಸಲ್ಪಟ್ಟ ಬಂಗಾರದ ಉಂಗುರಗಳಾಗಿವೆ. ಅವನ ಮೈ ನೀಲಗಳಿಂದ ಖಚಿಸ ಲ್ಪಟ್ಟ ಹೊಳೆಯುವ ದಂತದ ಹಾಗೆ ಅದೆ. 15. ಅವನ ಕಾಲುಗಳು ಶುದ್ಧ ಬಂಗಾರದ ಗದ್ದಿಗೆಯ ಮೇಲೆ ಇರಿಸಿದ ಬಿಳೀ ಕಲ್ಲಿನ ಸ್ತಂಭಗಳ ಹಾಗೆ ಅವೆ. ಅವನ ಮುಖವು ಲೆಬನೋನಿನ ಹಾಗೆ ದೇವದಾರುಗಳ ಹಾಗೆ ಶ್ರೇಷ್ಠವಾಗಿದೆ. 16. ಯೆರೂಸಲೇಮಿನ ಕುಮಾರ್ತೆ ಯರೇ, ಅವನ ಬಾಯಿ ಬಹು ಮಧುರವಾಗಿದೆ; ಹೌದು, ಅವನು ಸರ್ವಾಂಗ ಸುಂದರನು. ಇವನೇ ನನ್ನ ಪ್ರಿಯನು, ಇವನೇ ನನ್ನ ಸ್ನೇಹಿತನು.
Chapter 6
1. ನಿನ್ನ ಪ್ರಿಯನು ಎಲ್ಲಿಗೆ ಹೋದನು? ಸ್ತ್ರೀಯರಲ್ಲಿ ಅತಿ ಸುಂದರಿಯೇ, ನಾವು ಅವನನ್ನು ನಿನ್ನ ಸಂಗಡ ಹುಡುಕುವ ಹಾಗೆ ನಿನ್ನ ಪ್ರಿಯನು ಯಾವ ಕಡೆಗೆ ತಿರುಗಿದ್ದಾನೆ? 2. ನನ್ನ ಪ್ರಿಯನು ತೋಟಗಳಲ್ಲಿ ಮೇಯಿಸುವದಕ್ಕೂ ತಾವರೆಗಳನ್ನು ಕೂಡಿಸುವದಕ್ಕೂ ತನ್ನ ತೋಟಕ್ಕೆ ಸುಗಂಧಗಳ ಮಡಿಗೆ ಹೋಗಿದ್ದಾನೆ. 3. ನಾನು ನನ್ನ ಪ್ರಿಯನವಳು, ನನ್ನ ಪ್ರಿಯನು ನನ್ನವನು; ಅವನು ತಾವರೆ ಹೂವುಗಳಲ್ಲಿ ಮೇಯಿಸುತ್ತಾನೆ. 4. ಓ ನನ್ನ ಪ್ರಿಯಳೇ, ನೀನು ತಿರ್ಚದಂತೆ ಸುಂದ ರಿಯೂ ಯೆರೂಸಲೇಮಿನ ಹಾಗೆ ರಮ್ಯಳೂ ಧ್ವಜ ಗಳಿರುವ ದಂಡಿನ ಹಾಗೆ ಭಯಂಕರಳೂ ಆಗಿದ್ದೀ. 5. ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು; ಅವು ನನ್ನನ್ನು ಜೈಸಿದವು. ನಿನ್ನ ಕೂದಲು ಗಿಲ್ಯಾದಿನಿಂದ ಕಾಣಿಸಲ್ಪಡುವ ಮೇಕೆ ಮಂದೆಯ ಹಾಗೆ ಅದೆ. 6. ನಿನ್ನ ಹಲ್ಲುಗಳು ತೊಳೆದ ಮೇಲೆ ಏರಿ ಬರುವ ಕುರಿ ಮಂದೆಗೆ ಸಮಾನವಾಗಿವೆ; ಅವೆಲ್ಲಾ ಅವಳಿ ಜವಳಿ ಈಯುತ್ತವೆ; ಅವುಗಳಲ್ಲಿ ಒಂದೂ ಬಂಜೆ ಯಾಗಿರದು. 7. ನಿನ್ನ ಕೆನ್ನೆಗಳು ನಿನ್ನ ಮುಸುಕಿನ ಕೆಳಗೆ ವಿಭಾಗಿಸಿದ ದಾಳಿಂಬರ ಹಣ್ಣಿನ ಹಾಗೆ ಅವೆ. 8. ಅರು ವತ್ತು ಮಂದಿ ರಾಣಿಯರೂ ಎಂಭತ್ತು ಮಂದಿ ಉಪಪತ್ನಿಯರೂ ಲೆಕ್ಕವಿಲ್ಲದ ಕನ್ಯೆಯರೂ ಇದ್ದಾರೆ. 9. ನನ್ನ ಪಾರಿವಾಳವು, ನನ್ನ ನಿರ್ಮಲೆಯು, ಒಬ್ಬಳೇ; ಅವಳು ತನ್ನ ತಾಯಿಗೆ ಒಬ್ಬಳೇ. ತನ್ನ ಹೆತ್ತವಳಿಗೆ ಆಯಲ್ಪಟ್ಟವಳಾಗಿದ್ದಾಳೆ, ಕುಮಾರ್ತೆಯರು ಅವ ಳನ್ನು ನೋಡಿ ಆಶೀರ್ವದಿಸಿದರು; ಹೌದು, ರಾಣಿ ಯರೂ ಉಪಪತ್ನಿಯರೂ ಅವಳನ್ನು ಹೊಗಳಿದರು. 10. ಚಂದ್ರನ ಹಾಗೆ ಸುಂದರಿಯೂ ಸೂರ್ಯನ ಹಾಗೆ ನಿರ್ಮಲವಾದವಳೂ ಧ್ವಜಗಳಿರುವ ದಂಡಿನ ಹಾಗೆ ಭಯಂಕರವಾದವಳೂ ಉದಯದ ಹಾಗೆ ದೃಷ್ಟಿಸಿ ನೋಡುವವಳೂ ಆಗಿರುವ ಇವಳು ಯಾರು? 11. ತಗ್ಗಿನ ಫಲಗಳನ್ನು ನೋಡುವದಕ್ಕೂ ದ್ರಾಕ್ಷೇ ಬಳ್ಳಿಯು ಬೆಳೆದು? ದಾಳಿಂಬರ ಗಿಡಗಳು ಚಿಗುರಿ ವೆಯೋ ಎಂದು ನೋಡುವದಕ್ಕೂ ನಾನು ಬಾದಾ ಮಿಯ ತೋಟಕ್ಕೆ ಹೋದೆನು. 12. ನಾನು ತಿಳಿದಿದ್ದಾಗ ನನ್ನ ಪ್ರಾಣವು ನನ್ನನ್ನು ಅಮ್ಮಿನಾದಿಬ್‌ನ ರಥಗಳ ಹಾಗೆ ಮಾಡಿತು. 13. ತಿರಿಗಿ ಬಾ, ತಿರಿಗಿ ಬಾ, ಓ ಶೂಲಮ್‌ನವಳೇ; ನಾವು ನಿನ್ನನ್ನು ದೃಷ್ಟಿಸುವ ಹಾಗೆ ತಿರಿಗಿ ಬಾ, ತಿರಿಗಿ ಬಾ. ಎರಡು ಸೈನ್ಯದ ಗುಂಪಿನವರ ಹಾಗೆಯೇಶೂಲಮ್ಯಳಲ್ಲಿ ನೀವು ದೃಷ್ಟಿಸಬೇಕಾದದ್ದೇನು?
Chapter 7
1. ಓ ರಾಜಪುತ್ರನ ಮಗಳೇ! ಕೆರಗಳು ಮೆಟ್ಟಿರುವ ನಿನ್ನ ಪಾದಗಳು ಎಷ್ಟು ಸುಂದ ರವಾಗಿವೆ; ನಿನ್ನ ಸೊಂಟದ ಕೀಲುಗಳು ಪ್ರವೀಣನ ಕೈಕೆಲಸವಾದ ವಿಚಿತ್ರ ಆಭರಣಗಳಂತಿವೆ 2. ನಿನ್ನ ಹೊಕ್ಕಳು ಮದ್ಯ ಕಡಿಮೆ ಇಲ್ಲದೆ ದುಂಡಾಗಿರುವ ಬಟ್ಟಲಿನ ಹಾಗಿದೆ. ನಿನ್ನ ಉದರವು ತಾವರೆಯ ಹೂವು ಗಳು ಸುತ್ತಿಕೊಂಡಿರುವ ಗೋಧಿಯ ರಾಶಿಯಾಗಿದೆ. 3. ನಿನ್ನ ಎರಡು ಸ್ತನಗಳು ಅವಳಿ ಜವಳಿಯಾದ ಎರಡು ಜಿಂಕೆಮರಿಗಳ ಹಾಗಿವೆ. 4. ನಿನ್ನ ಕುತ್ತಿಗೆ ದಂತ ಗೋಪುರದ ಹಾಗಿದೆ; ನಿನ್ನ ಕಣ್ಣುಗಳು ಬತ್‌ರಬ್ಬಿ ಮ್‌ನ ಬಾಗಲ ಬಳಿಯಲ್ಲಿರುವ ಹೆಷ್ಬೋನಿನ ಕೊಳ ಗಳಾಗಿವೆ; ನಿನ್ನ ಮೂಗು ದಮಸ್ಕದ ಕಡೆಗೆ ನೋಡುವ ಲೆಬನೋನಿನ ಗೋಪುರದ ಹಾಗಿದೆ. 5. ನಿನ್ನ ತಲೆಯು ಕರ್ಮೆಲಿನ ಹಾಗೆಯೂ ನಿನ್ನ ತಲೆಯ ಕೂದಲು ಧೂಮ್ರದ ಹಾಗೆಯೂ ಇವೆ. ಅರಸನು ವೇದಿಕೆಗಳಲ್ಲಿ ಹಿಡಿಯಲ್ಪಟ್ಟಿದ್ದಾನೆ. 6. ಓ ಪ್ರಿಯಳೇ, ನೀನು ಆನಂದಗಳಿಗಾಗಿ ಎಷ್ಟೋ ಸುಂದರಿಯು, ಎಷ್ಟೋ ಮನೋಹರಳು ಆಗಿದ್ದೀ. 7. ನಿನ್ನ ನೀಳವು ಖರ್ಜೂರ ಮರದ ಹಾಗೆ ಇದೆ; ನಿನ್ನ ಸ್ತನಗಳು ದ್ರಾಕ್ಷೇ ಗೊಂಚಲುಗಳ ಹಾಗೆ ಇವೆ. 8. ನಾನು ಖರ್ಜೂರದ ಮರದ ಬಳಿಗೆ ಹೋಗಿ ಅದರ ಗರಿಗಳನ್ನು ಹಿಡುಕೊಳ್ಳುವೆ ಅಂದುಕೊಂಡೆನು. ಇದಲ್ಲದೆ ಈಗ ನಿನ್ನ ಸ್ತನಗಳು ದ್ರಾಕ್ಷೇ ಗೊಂಚಲು ಗಳ ಹಾಗೆಯೂ ನಿನ್ನ ಮೂಗಿನ ವಾಸನೆಯು ಸೇಬುಹಣ್ಣಿನ ಹಾಗೆಯೂ ಇರುವವು. 9. ನಿನ್ನ ಬಾಯಿಯ ಅಂಗಳವು ನನ್ನ ಪ್ರಿಯನ ಉತ್ತಮವಾದ ದ್ರಾಕ್ಷಾರಸದ ಹಾಗಿರುವದು. ಅದು ಸಿಹಿಯಾಗಿ ಹೋಗುವಂಥದ್ದು, ನಿದ್ರೆಮಾಡುವವರ ತುಟಿಗಳನ್ನು ಮಾತಾಡಿಸುವಂಥದ್ದು. 10. ನಾನು ನನ್ನ ಪ್ರಿಯನವಳು; ಅವನ ಇಚ್ಛೆಯು ನನ್ನ ಕಡೆಗಿರುವದು. 11. ನನ್ನ ಪ್ರಿಯನೇ, ನಾವು ಹೊಲಕ್ಕೆ ಹೋಗಿ ಗ್ರಾಮಗಳಲ್ಲಿ ವಸತಿಯಾಗಿರುವ ಬಾ. 12. ನಾವು ಉದಯದಲ್ಲಿ ಎದ್ದು,ದ್ರಾಕ್ಷೇ ತೋಟಗಳಿಗೆ ಹೋಗಿ, ದ್ರಾಕ್ಷೇ ಬಳ್ಳಿಯು ಬೆಳೆಯುವದೋ? ಅದರ ಎಳೆಗಾಯಿಗಳು ಕಾಣಿ ಸುತ್ತವೋ? ದಾಳಿಂಬರ ಗಿಡಗಳು ಚಿಗುರುತ್ತವೋ ನೋಡುವ. ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ತೋರಿಸುವೆನು. 13. ಓ ನನ್ನ ಪ್ರಿಯನೇ, ದುದಾಯಗಳು ವಾಸನೆಕೊಡುತ್ತವೆ; ನಮ್ಮ ಬಾಗಲುಗಳ ಬಳಿಯಲ್ಲಿ ನಿನಗೋಸ್ಕರ ನಾನು ಇಟ್ಟುಕೊಂಡ ವಿವಿಧ ಹೊಸ ಹಳೇ ರಮ್ಯವಾದ ಫಲಗಳು ಅವೆ.
Chapter 8
1. ನೀನು ನನ್ನ ತಾಯಿಯ ಸ್ತನಗಳನ್ನು ಕುಡಿದ ನನ್ನ ಸಹೋದರನ ಹಾಗೆ ಇದ್ದರೆ ಎಷ್ಟೋ ಉತ್ತಮ! ನಾನು ನಿನ್ನನ್ನು ಹೊರಗೆ ಕಂಡರೆ ನಿನಗೆ ಮುದ್ದಿಡುವೆನು; ಹೌದು, (ಜನರು) ನನ್ನನ್ನು ತಿರಸ್ಕರಿಸರು. 2. ನೀನು ನನ್ನನ್ನು ಉಪದೇಶಿಸುವ ಹಾಗೆ ನಾನು ನಿನ್ನನ್ನು ನಡಿಸಿ ನನ್ನ ತಾಯಿಯ ಮನೆಯೊಳಗೆ ನಿನ್ನನ್ನು ಬರಮಾಡಿ, ದಾಳಿಂಬರ ಹಣ್ಣಿನ ರಸವಾದ ಊರಿಟ್ಟ ಪಾನವನ್ನು ನಿನಗೆ ಕುಡಿಸುತ್ತಿದ್ದೆನು. 3. ಅವನ ಎಡಗೈ ನನ್ನ ತಲೆಯ ಕೆಳಗಿರುವದು; ಅವನ ಬಲಗೈ ನನ್ನನ್ನು ಅಪ್ಪಿಕೊಳ್ಳುವದು. 4. ಓ ಯೆರೂಸಲೇಮಿನ ಕುಮಾರ್ತೆಯರೇ, ನಿಮಗೆ ಆಜ್ಞಾಪಿಸುತ್ತೇನೆ--ನನ್ನ ಪ್ರಿಯನು ಮೆಚ್ಚುವ ವರೆಗೆ ನೀವು ಎಬ್ಬಿಸದೆಯೂ ನನ್ನ ಪ್ರೀತಿಯನ್ನು ಎಚ್ಚರಿ ಸದೆಯೂ ಇರ್ರಿ. 5. ತನ್ನ ಪ್ರಿಯನ ಮೇಲೆ ಆತುಕೊಂಡು ಅರಣ್ಯದಿಂದ ಬರುವ ಇವಳು ಯಾರು? ಸೇಬು ಗಿಡದ ಕೆಳಗೆ ನಿನ್ನನ್ನು ಎಚ್ಚರಿಸಿದೆನು; ಅಲ್ಲಿ ನಿನ್ನ ತಾಯಿ ನಿನ್ನನ್ನು ಪಡೆದಳು; ಅಲ್ಲಿ ನಿನ್ನನ್ನು ಹೆತ್ತವಳು ನಿನ್ನನ್ನು ಪಡೆದಳು. 6. ನಿನ್ನ ಹೃದಯದ ಮೇಲೆ ಒಂದು ಮುದ್ರೆಯ ಹಾಗೆಯೂ ನಿನ್ನ ಕೈಮೇಲೆ ಒಂದು ಮುದ್ರೆಯ ಹಾಗೆಯೂ ನನ್ನನ್ನು ಹಾಕು; ಪ್ರೀತಿಯು ಮರಣದ ಹಾಗೆ ಬಲವಾಗಿರುವದು; ರೋಷವು ಸಮಾಧಿಯ ಹಾಗೆ ಕ್ರೂರವಾಗಿರುವದು; ಅದರ ಕಲ್ಲಿದ್ದಲುಗಳ ಬೆಂಕಿಯು ಪ್ರಜ್ವಲಿಸುವ ಜ್ವಾಲೆಯ ಕಿಡಿಗಳಾಗಿ ಇರುವವು. 7. ಅನೇಕ ಜಲಗಳು ಪ್ರೀತಿಯನ್ನು ಆರಿ ಸಲಾರವು; ಪ್ರವಾಹಗಳು ಅದನ್ನು ಮುಣುಗಿಸ ಲಾರವು; ಮನುಷ್ಯನು ತನ್ನ ಮನೆಯ ಆಸ್ತಿಯನ್ನೆಲ್ಲಾ ಪ್ರೀತಿಗೋಸ್ಕರ ಕೊಟ್ಟರೆ ಅದು ಸಂಪೂರ್ಣವಾಗಿ ತಿರಸ್ಕರಿಸಲ್ಪಡುವದು. 8. ನಮಗೆ ಚಿಕ್ಕವಳಾದ ಒಬ್ಬ ಸಹೋದರಿ ಇದ್ದಾಳೆ; ಅವಳಿಗೆ ಸ್ತನಗಳಿಲ್ಲ. ಅವಳು ಕೇಳಲ್ಪಡುವ ದಿವಸದಲ್ಲಿ ನಾವು ನಮ್ಮ ಸಹೋದರಿಗೋಸ್ಕರ ಏನು ಮಾಡುವ? 9. ಅವಳು ಗೋಡೆಯಾಗಿದ್ದರೆ ನಾವು ಅವಳ ಮೇಲೆ ಬೆಳ್ಳಿಯ ಅರಮನೆಯನ್ನು ಕಟ್ಟುವೆವು. ಅವಳು ಬಾಗಲಾಗಿದ್ದರೆ ದೇವದಾರು ಹಲಿಗೆಗಳಿಂದ ಅವಳನ್ನು ಮುಚ್ಚುವೆವು. 10. ನಾನು ಗೋಡೆಯೇ; ನನ್ನ ಸ್ತನಗಳು ಬುರುಜುಗಳ ಹಾಗೆ ಅವೆ. 11. ಆಗ, ನಾನು ಅವನ ದೃಷ್ಟಿಯಲ್ಲಿ ದಯ ಹೊಂದಿದವಳ ಹಾಗಿದ್ದೆನು. ಬಾಲ್ಹಾಮೋನಿನಲ್ಲಿ ಸೊಲೊಮೋನನಿಗೆ ಒಂದು ದ್ರಾಕ್ಷೇ ತೋಟ ಇತ್ತು. ಅವನು ಆ ದ್ರಾಕ್ಷೇ ತೋಟವನ್ನು ಒಕ್ಕಲಿಗರಿಗೆ ಗುತ್ತಿ ಗೆಗೆ ಕೊಟ್ಟನು. ಒಬ್ಬೊಬ್ಬನು ಅದರ ಫಲಕ್ಕೋಸ್ಕರ ಸಾವಿರ ಬೆಳ್ಳಿಯ ನಾಣ್ಯಗಳನ್ನು ತರಬೇಕಾಗಿತ್ತು. 12. ನನ್ನದಾದ ನನ್ನ ದ್ರಾಕ್ಷೇ ತೋಟವು ನನ್ನ ಮುಂದೆ ಅದೆ. ಓ ಸೊಲೊಮೋನನೇ, ನಿನಗೆ ಒಂದು ಸಾವಿರ ಇರತಕ್ಕದ್ದು. ಅದರ ಫಲವನ್ನು ಕಾಪಾಡುವವರಿಗೆ ಇನ್ನೂರು ಆಗಲಿ. 13. ತೋಟಗಳಲ್ಲಿ ವಾಸವಾಗಿರುವವನೇ, ಜತೆ ಗಾರರು ನಿನ್ನ ಶಬ್ದವನ್ನು ಆಲೈಸುತ್ತಾರೆ. ನಾನು ಕೇಳುವಂತೆ ಮಾಡು. 14. ನನ್ನ ಪ್ರಿಯನೇ, ತ್ವರೆಮಾಡು, ಜಿಂಕೆಯ ಹಾಗೆ ಇಲ್ಲವೆ ಸುಗಂಧವುಳ್ಳ ಪರ್ವತಗಳ ಮೇಲಿರುವ ದುಪ್ಪಿ ಮರಿಯ ಹಾಗೆಯೆ ಇರು.
(April28th2012)
|