Chapter 1
1. ಇಸ್ರಾಯೇಲ್ಯರ ಅರಸನೂ ದಾವೀದನ ಮಗನೂ ಆದ ಸೊಲೊಮೋನನ ಸಾಮ ತಿಗಳು. 2. ಜ್ಞಾನವನ್ನು ಶಿಕ್ಷಣವನ್ನು ತಿಳುಕೊಳ್ಳುವದಕ್ಕೂ ವಿವೇಕದ ಮಾತುಗಳನ್ನು ಗ್ರಹಿಸುವದಕ್ಕೂ 3. ಜ್ಞಾನ ನ್ಯಾಯತೀರ್ಪು ನೀತಿ ಇವುಗಳ ಬೋಧನೆಯನ್ನು ಹೊಂದುವದಕ್ಕೂ 4. ಇವು ಮೂಢರಿಗೆ ಜಾಣತನ ವನ್ನೂ ಯೌವನಸ್ಥನಿಗೆ ತಿಳುವಳಿಕೆಯನ್ನೂ ವಿವೇಕ ವನ್ನೂ ಕೊಡುವವುಗಳಾಗಿವೆ. 5. ಜ್ಞಾನಿಯು ಕೇಳಿ ಜ್ಞಾನ ವನ್ನು ಹೆಚ್ಚಿಸಿಕೊಳ್ಳುವನು; ತಿಳುವಳಿಕೆಯ ಮನುಷ್ಯನು ಜ್ಞಾನದ ಆಲೋಚನೆಗಳನ್ನು ಸಂಪಾದಿಸಿಕೊಳ್ಳುವನು. 6. ಸಾಮತಿಯನ್ನು ಅದರ ಅರ್ಥವನ್ನು ಜ್ಞಾನಿಗಳ ಮಾತು ಗಳನ್ನು ಅವರ ಗೂಢವಾದ ಮಾತುಗಳನ್ನು ಗ್ರಹಿಸು ವಂತೆ ಇವು ಮಾಡುವವುಗಳಾಗಿವೆ. 7. ಕರ್ತನ ಭಯವೇ ಜ್ಞಾನದ ಮೂಲ; ಮೂರ್ಖರು ಜ್ಞಾನವನ್ನೂ ಶಿಕ್ಷೆಯನ್ನೂ ಅಸಡ್ಡೆಮಾಡುತ್ತಾರೆ. 8. ನನ್ನ ಮಗನೇ, ನಿನ್ನ ತಂದೆಯ ಶಿಕ್ಷಣವನ್ನು ಕೇಳು, ನಿನ್ನ ತಾಯಿಯ ಕಟ್ಟಳೆಯನ್ನು ತೊರೆಯಬೇಡ; 9. ಅವು ನಿನ್ನ ತಲೆಗೆ ಕೃಪೆಯ ಆಭರಣವೂ ನಿನ್ನ ಕೊರಳಿನ ಸುತ್ತಲೂ ಸರಗಳಂತೆಯೂ ಇರುವವು. 10. ನನ್ನ ಮಗನೇ, ಪಾಪಿ ಗಳು ನಿನ್ನನ್ನು ಆಕರ್ಷಿಸಿದರೆ ನೀನು ಒಪ್ಪಬೇಡ. 11. ಅವರು--ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚು ಹಾಕೋಣ, ನಿರಪರಾಧಿಗಳಿಗಾಗಿ ನಿಷ್ಕಾರಣದಿಂದ ರಹಸ್ಯವಾಗಿ ಅಡಗಿಕೊಳ್ಳೋಣ. 12. ಗುಂಡಿಯೊಳಕ್ಕೆ ಹೋಗುವವರನ್ನು ನುಂಗುವಂತೆ ಸಂಪೂರ್ಣವಾಗಿ ನಾವು ಅವರನ್ನು ಸಮಾಧಿಯಂತೆ ನುಂಗಿಬಿಡೋಣ. 13. ಅಮೂಲ್ಯವಾದ ಎಲ್ಲಾ ಸಂಪತ್ತನ್ನು ನಾವು ಕಂಡು ಹಿಡಿದು ಕೊಳ್ಳೆಯಿಂದ ನಮ್ಮ ಮನೆಗಳನ್ನು ತುಂಬಿ ಕೊಳ್ಳೋಣ. 14. ನೀನು ನಮ್ಮ ಮಧ್ಯದಲ್ಲಿ ಚೀಟನ್ನು ಹಾಕು, ನಮ್ಮೆಲ್ಲರಿಗೂ ಒಂದೇ ಹಣದ ಚೀಲ ಇರಲಿ ಎಂದು ಹೇಳುತ್ತಾರೆ. 15. ನನ್ನ ಮಗನೇ, ಮಾರ್ಗದಲ್ಲಿ ಅವರೊಂದಿಗೆ ನಡೆಯಬೇಡ; ಅವರ ಮಾರ್ಗದಿಂದ ನಿನ್ನ ಹೆಜ್ಜೆಯನ್ನು ಹಿಂದೆ ತಕ್ಕೋ. 16. ಅವರ ಪಾದಗಳು ಕೇಡಿಗೆ ಓಡುತ್ತವೆ, ರಕ್ತವನ್ನು ಸುರಿಸುವದಕ್ಕೆ ಆತುರ ಪಡುತ್ತವೆ. 17. ನಿಶ್ಚಯವಾಗಿ ಪಕ್ಷಿಯ ಕಣ್ಣೆದುರಿಗೆ ಬಲೆಯನ್ನು ಹರಡುವದು ವ್ಯರ್ಥವೇ. 18. ಅವರು ತಮ್ಮ ಸ್ವಂತ ರಕ್ತಕ್ಕೆ ಹೊಂಚುಹಾಕುತ್ತಾರೆ; ತಮ್ಮ ಪ್ರಾಣಗಳಿಗೆ ರಹಸ್ಯವಾಗಿ ಅಡಗಿಕೊಳ್ಳುತ್ತಾರೆ. 19. ತಮ್ಮ ಸ್ವಂತ ಪ್ರಾಣಗಳನ್ನು ತೆಗೆದುಕೊಳ್ಳುವ ದುರ್ಲಾಭಾ ಪೇಕ್ಷಕರ ಪ್ರತಿಯೊಬ್ಬನ ಮಾರ್ಗಗಳು ಹೀಗಿವೆ. 20. ಹೊರಗೆ ಜ್ಞಾನವೆಂಬಾಕೆಯು ಕೂಗುತ್ತಾಳೆ. ಬೀದಿಗಳಲ್ಲಿ ಆಕೆಯು ತನ್ನ ಧ್ವನಿಗೈಯುತ್ತಾಳೆ. 21. ಸಮೂಹದ ಮುಖ್ಯ ಸ್ಥಳದಲ್ಲಿಯೂ ದ್ವಾರಗಳ ಬಳಿಯಲ್ಲಿಯೂ ಅವಳು ಕೂಗುತ್ತಾಳೆ, ಪಟ್ಟಣದಲ್ಲಿ ಅವಳು ತನ್ನ ಮಾತುಗಳನ್ನು ಉಚ್ಚರಿಸುತ್ತಾ-- 22. ಜ್ಞಾನ ಹೀನರೇ, ನೀವು ಎಷ್ಟು ಕಾಲ ಅಜ್ಞಾನವನ್ನು ಪ್ರೀತಿಸುವಿರಿ? ತಿರಸ್ಕರಿಸುವವರು ತಮ್ಮ ತಿರಸ್ಕರಿಸು ವಿಕೆಯಲ್ಲಿ ಎಷ್ಟುಕಾಲ ಆನಂದಿಸುವರು? ಜ್ಞಾನ ಹೀನರು ಎಷ್ಟು ಕಾಲ ತಿಳುವಳಿಕೆಯನ್ನು ಹಗೆ ಮಾಡುವರು? 23. ನನ್ನ ಗದರಿಕೆಗೆ ನೀವು ತಿರುಗಿ ಕೊಳ್ಳಿರಿ; ಇಗೋ, ನಿಮ್ಮ ಮೇಲೆ ನನ್ನ ಆತ್ಮವನ್ನು ಸುರಿಸಿ ನಿಮಗೆ ನನ್ನ ಮಾತುಗಳು ತಿಳಿಯುವಂತೆ ಮಾಡುವೆನು. 24. ನಾನು ಕರೆದಾಗ ನೀವು ತಿರಸ್ಕರಿಸಿದ್ದಕ್ಕಾಗಿಯೂ ನಾನು ನನ್ನ ಕೈಚಾಚಿದಾಗ ಯಾವ ಮನುಷ್ಯನು ಗಮನಿಸದೆ ಇದ್ದದ್ದಕ್ಕಾಗಿಯೂ 25. ನನ್ನ ಆಲೋಚನೆಯನ್ನು ನೀವು ಲಕ್ಷಿಸದೆ ನನ್ನ ಗದರಿಕೆ ಯನ್ನು ನೀವು ಬೇಡವೆಂದು ತಳ್ಳಿಬಿಟ್ಟದ್ದರಿಂದಲೂ 26. ನಿಮ್ಮ ಆಪತ್ತಿನಲ್ಲಿ ನಿಮಗೆ ಹೆದರಿಕೆ ಬರುವಾಗ 27. ನಿಮ್ಮ ಭಯವು ತೀವ್ರ ದುಃಖದಂತೆಯೂ ನಿಮ್ಮ ನಾಶನವು ತುಫಾನಿನಂತೆಯೂ ಬರುವಾಗ ಅಪಾಯ ಮತ್ತು ಆಪತ್ತು ನಿಮ್ಮ ಮೇಲೆ ಬರುವಾಗ ನಾನು ಸಹ ನಕ್ಕು ಪರಿಹಾಸ್ಯಮಾಡುವೆನು. 28. ಅವರು ನನಗೆ ಮೊರೆಯಿಡುವರು, ಆದರೆ ನಾನು ಅವರಿಗೆ ಉತ್ತರಕೊಡೆನು. ಅವರು ಆತುರದಿಂದ ನನ್ನನ್ನು ಹುಡು ಕಿದರೂ ಕಂಡುಕೊಳ್ಳುವದಿಲ್ಲ. 29. ಅವರು ತಿಳುವಳಿಕೆ ಯನ್ನು ಹಗೆಮಾಡಿ ಕರ್ತನ ಭಯವನ್ನು ಆರಿಸಿಕೊ ಳ್ಳದೆ ಇದ್ದದರಿಂದಲೂ 30. ನನ್ನ ಆಲೋಚನೆಯನ್ನು ಗಮನಿಸದೆ ಇದ್ದದಕ್ಕಾಗಿಯೂ ನನ್ನ ಗದರಿಕೆಯನ್ನೆಲ್ಲಾ ಅಸಡ್ಡೆ ಮಾಡಿದ್ದಕ್ಕಾಗಿಯೂ 31. ಅವರು ತಮ್ಮ ಸ್ವಂತ ನಡತೆಯ ಫಲವನ್ನು ಅನುಭವಿಸಿ ತಮ್ಮ ಸ್ವಂತ ಕುಯುಕ್ತಿಗಳಿಂದಲೇ ತುಂಬಿಕೊಳ್ಳುವರು. 32. ಅಜ್ಞಾನಿ ಗಳ ವಿಮುಖವು ಅವರನ್ನು ಕೊಲ್ಲುವದು, ಜ್ಞಾನ ಹೀನರ ಏಳಿಗೆ ಅವರನ್ನು ನಾಶಪಡಿಸುವದು. 33. ನನಗೆ ಕಿವಿಗೊಡುವವನಾದರೋ ಜೀವಿಸಿ ಯಾವ ಕೇಡಿನ ಭಯವಿಲ್ಲದೆ ನೆಮ್ಮದಿಯಲ್ಲಿರುವನು.
Chapter 2
1. ನನ್ನ ಮಗನೇ, ನನ್ನ ಮಾತುಗಳನ್ನು ನೀನು ಅಂಗೀಕರಿಸಿ ನನ್ನ ಆಜ್ಞೆಗಳನ್ನು ನಿನ್ನಲ್ಲಿ ಬಚ್ಚಿಟ್ಟುಕೊಂಡರೆ 2. ನೀನು ಜ್ಞಾನಕ್ಕೆ ಕಿವಿಗೊಡು ವಂತೆಯೂ ತಿಳುವಳಿಕೆಗೆ ನಿನ್ನ ಹೃದಯವನ್ನು ತಿರು ಗಿಸುವಂತೆಯೂ 3. ಹೌದು, ತಿಳುವಳಿಕೆಗಾಗಿ ಮೊರೆ ಯಿಟ್ಟು ವಿವೇಕಕ್ಕಾಗಿ ನಿನ್ನ ಸ್ವರವನ್ನು ಎತ್ತಿ 4. ಬೆಳ್ಳಿ ಯಂತೆ ನೀನು ಅದನ್ನು ಹುಡುಕಿ ಬಚ್ಚಿಡಲ್ಪಟ್ಟ ಸಂಪ ತ್ತಿನಂತೆ ಅದಕ್ಕಾಗಿ ಹುಡುಕಿದರೆ, 5. ನೀನು ಕರ್ತನ ಭಯವನ್ನು ತಿಳಿದುಕೊಳ್ಳುವಿ. ದೇವರ ಜ್ಞಾನವನ್ನು ಕಂಡುಕೊಳ್ಳುವಿ. 6. ಜ್ಞಾನವನ್ನು ಕರ್ತನೇ ಕೊಡುತ್ತಾನೆ; ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ. 7. ನೀತಿವಂತರಿಗೋಸ್ಕರ ಆತನು ಸುಜ್ಞಾನವನ್ನು ಕೂಡಿಸುವನು. ಯಥಾರ್ಥದಿಂದ ನಡೆದುಕೊಳ್ಳುವವರಿಗೆ ಆತನು ಗುರಾಣಿಯಾಗಿದ್ದಾನೆ. 8. ತೀರ್ಪಿನ ದಾರಿಗಳನ್ನು ಆತನು ಕಾಯುತ್ತಾನೆ. ತನ್ನ ಪರಿಶುದ್ಧರ ಮಾರ್ಗವನ್ನು ಭದ್ರಪಡಿಸುತ್ತಾನೆ. 9. ಆಗ ನೀನು ನ್ಯಾಯವನ್ನೂ ತೀರ್ಪನ್ನೂ ನೀತಿಯನ್ನೂ ಮಾತ್ರವಲ್ಲದೆ ಪ್ರತಿಯೊಂದು ಸನ್ಮಾರ್ಗವನ್ನೂ ತಿಳಿದು ಕೊಳ್ಳುವಿ. 10. ನಿನ್ನ ಹೃದಯದಲ್ಲಿ ಜ್ಞಾನವು ಪ್ರವೇಶಿ ಸಿದಾಗ ನಿನ್ನ ಪ್ರಾಣಕ್ಕೆ ತಿಳುವಳಿಕೆಯು ಅಂದವಾಗಿರು ವದು. 11. ವಿವೇಕವು ನಿನ್ನನ್ನು ಭದ್ರವಾಗಿ ಕಾಯುತ್ತದೆ; ತಿಳುವಳಿಕೆಯು ನಿನ್ನನ್ನು ಕಾಪಾಡುವದು; 12. ಕೆಡುಕನ ಮಾರ್ಗದಿಂದ ಮೂರ್ಖನ ಮಾತುಗಳಿಂದ 13. ಕತ್ತ ಲೆಯ ಮಾರ್ಗಗಳಲ್ಲಿ ನಡೆಯುವದಕ್ಕೆ ಯಥಾರ್ಥ ತೆಯ ದಾರಿಗಳನ್ನು ತೊರೆದುಬಿಡುವದರಿಂದ 14. ಕೆಟ್ಟ ದ್ದನ್ನು ಮಾಡುವದಕ್ಕೆ ಸಂತೋಷಿಸಿ ದುಷ್ಟರ ಮೂರ್ಖ ತನದಲ್ಲಿ ಆನಂದಿಸುವದರಿಂದ ನಿನ್ನನ್ನು ತಪ್ಪಿಸುವದು. 15. ಅವರ ಮಾರ್ಗಗಳು ವಕ್ರವಾಗಿವೆ. ತಮ್ಮ ಮಾರ್ಗ ಗಳಲ್ಲಿ ಅವರು ಮೂರ್ಖರಾಗಿದ್ದಾರೆ. 16. ಪರಸ್ತ್ರೀ ಯಿಂದ ಅಂದರೆ ತನ್ನ ಮಾತುಗಳಿಂದ ಮುಖಸ್ತುತಿ ಮಾಡುವ ಸ್ತ್ರೀಯಿಂದ ತನ್ನ ದೇವರ ಒಡಂಬಡಿಕೆ ಯನ್ನು ಮರೆತು 17. ತನ್ನ ಯೌವನ ಕಾಲದ ಸಂಗಾತಿ ಯನ್ನು ತ್ಯಜಿಸುವವಳಿಂದ ಅದು ನಿನ್ನನ್ನು ತಪ್ಪಿಸುವದು. 18. ಅವಳ ಮನೆಯು ಮರಣದ ಕಡೆಗೆ, ಅವಳ ದಾರಿ ಗಳು ಮೃತರ ಕಡೆಗೆ ಇಳಿಸುತ್ತವೆ. 19. ಅವಳ ಬಳಿಗೆ ಹೋಗುವ ಯಾವನೂ ಹಿಂತಿರುಗುವದಿಲ್ಲ, ಇಲ್ಲವೆ ಜೀವದ ಮಾರ್ಗಗಳನ್ನು ಅವನು ಹಿಡಿಯುವದೇ ಇಲ್ಲ. 20. ಒಳ್ಳೆಯವರ ಮಾರ್ಗದಲ್ಲಿ ನೀನು ನಡೆಯು ವಂತೆಯೂ ನೀತಿವಂತರ ದಾರಿಗಳನ್ನು ನೀನು ಹಿಡಿಯು ವಂತೆಯೂ ಅದು ನಿನ್ನನ್ನು ನಡಿಸುವದು. 21. ಯಥಾ ರ್ಥವಂತರು ದೇಶದಲ್ಲಿ ವಾಸಿಸುವರು. ಸಂಪೂರ್ಣರು ಅದರಲ್ಲಿ ನೆಲೆಯಾಗಿ ಇರುವರು. 22. ದುಷ್ಟರಾದರೋ ಭೂಮಿಯಿಂದ ತೆಗೆದುಹಾಕಲ್ಪಡುವರು, ಅಪರಾಧಿ ಗಳು ಬೇರು ಸಹಿತವಾಗಿ ಅದರಿಂದ ಕೀಳಲ್ಪಡುವರು.
Chapter 3
1. ನನ್ನ ಮಗನೇ, ನನ್ನ ಕಟ್ಟಳೆಯನ್ನು ಮರೆಯಬೇಡ. ನಿನ್ನ ಹೃದಯವು ನನ್ನ ಆಜ್ಞೆ ಗಳನ್ನು ಕಾಪಾಡಲಿ: 2. ಆಗ ಹೆಚ್ಚಾದ ದಿನಗಳೂ ದೀರ್ಘಾಯುಷ್ಯವೂ ಸಮಾಧಾನವೂ ನಿನಗೆ ಕೂಡಿಸ ಲ್ಪಡುವವು. 3. ಕರುಣೆಯೂ ಸತ್ಯವೂ ನಿನ್ನನ್ನು ಬಿಡದಿರಲಿ. ನಿನ್ನ ಕೊರಳಿನ ಸುತ್ತಲೂ ಅವುಗಳನ್ನು ಕಟ್ಟಿಕೋ; ನಿನ್ನ ಹೃದಯದ ಹಲಗೆಯ ಮೇಲೆ ಅವುಗಳನ್ನು ಬರೆ. 4. ಹೀಗೆ ನೀನು ದೇವರ ಮುಂದೆಯೂ ಮನುಷ್ಯನ ಮುಂದೆಯೂ ದಯೆಯನ್ನೂ ಒಳ್ಳೆಯ ವಿವೇಕವನ್ನೂ ಪಡೆದುಕೊಳ್ಳುವಿ. 5. ಪೂರ್ಣಹೃದಯದಿಂದ ಕರ್ತನಲ್ಲಿ ಭರವಸವಿಡು; ನಿನ್ನ ಸ್ವಂತ ಬುದ್ಧಿಯ ಮೇಲೆ ಆಧಾರ ಮಾಡಿಕೊಳ್ಳಬೇಡ. 6. ನಿನ್ನ ಎಲ್ಲಾ ಮಾರ್ಗಗಳಲ್ಲಿ ಆತನನ್ನು ಸನ್ಮಾನಿಸು. ಆಗ ಆತನು ನಿನ್ನ ಮಾರ್ಗಗಳನ್ನು ಸರಾಗಮಾಡುವನು. 7. ನಿನ್ನ ದೃಷ್ಟಿಯಲ್ಲಿ ಜ್ಞಾನಿಯಂತೆ ನೀನು ಇರಬೇಡ; ಕರ್ತನಿಗೆ ಭಯಪಟ್ಟು ಕೆಟ್ಟತನದಿಂದ ನೀನು ತೊಲಗಿಹೋಗು. 8. ಅದು ನಿನ್ನ ದೇಹಕ್ಕೆ ಆರೋಗ್ಯವೂ ಎಲುಬುಗಳಿಗೆ ಸಾರವೂ ಆಗಿರುವದು. 9. ನಿನ್ನ ಆಸ್ತಿಯಿಂದಲೂ ಅಭಿವೃದ್ಧಿಯ ಎಲ್ಲಾ ಪ್ರಥಮ ಫಲಗಳಿಂದಲೂ ಕರ್ತನನ್ನು ಸನ್ಮಾನಿಸು. 10. ಹೀಗೆ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬಲ್ಪಡುವವು, ಹೊಸ ದ್ರಾಕ್ಷಾರಸದಿಂದ ನಿನ್ನ ತೊಟ್ಟಿಗಳು ತುಂಬಿ ತುಳುಕುವವು. 11. ನನ್ನ ಮಗನೇ, ಕರ್ತನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಮಾತ್ರವಲ್ಲದೆ ಆತನ ತಿದ್ದುವಿಕೆಗೆ ಬೇಸರ ಗೊಳ್ಳಬೇಡ; 12. ತಾನು ಮೆಚ್ಚುವ ಮಗನನ್ನು ತಂದೆಯು ಶಿಕ್ಷಿಸುವಂತೆ ಕರ್ತನು ಯಾರನ್ನು ಪ್ರೀತಿಸುತ್ತಾನೋ ಅವನನ್ನು ಆತನು ತಿದ್ದುವನು. 13. ಜ್ಞಾನವನ್ನು ಕಂಡು ಕೊಳ್ಳುವವನೂ ವಿವೇಕವನ್ನು ಸಂಪಾದಿಸಿಕೊಳ್ಳುವವನೂ ಧನ್ಯನು. 14. ಅದರ ವ್ಯಾಪಾರವೂ ಬೆಳ್ಳಿಯ ವ್ಯಾಪಾರಕ್ಕಿಂತಲೂ ಅದರ ಲಾಭವು ಸೋಸಿದ ಬಂಗಾರಕ್ಕಿಂತಲೂ ಉತ್ತಮವಾಗಿದೆ. 15. ಅದು ಮಾಣಿಕ್ಯಗಳಿಗಿಂತಲೂ ಬಹು ಅಮೂಲ್ಯವುಳ್ಳದ್ದಾಗಿದ್ದು ನಿನ್ನ ಇಷ್ಟ ವಸ್ತುಗಳೆಲ್ಲವೂ ಅದಕ್ಕೆ ಸಮವಾಗುವದಿಲ್ಲ. 16. ಆಕೆಯ ಬಲಗೈಯಲ್ಲಿ ದೀರ್ಘಾಯುಷ್ಯವೂ ಎಡಗೈಯಲ್ಲಿ ಐಶ್ವರ್ಯವೂ ಘನತೆಯೂ ಇವೆ. 17. ಅವಳ ಮಾರ್ಗ ಗಳು ಸಂತೋಷಕರವೂ ಎಲ್ಲಾ ದಾರಿಗಳು ಸಮಾ ಧಾನಕರವೂ ಆಗಿವೆ. 18. ತನ್ನನ್ನು ಹಿಡಿದುಕೊಳ್ಳುವ ವರಿಗೆ ಆಕೆಯು ಜೀವದ ವೃಕ್ಷವಾಗಿದ್ದಾಳೆ; ಆಕೆಯನ್ನು ಭದ್ರವಾಗಿ ಇಟ್ಟುಕೊಳ್ಳುವ ಪ್ರತಿಯೊಬ್ಬನೂ ಧನ್ಯನು. 19. ಕರ್ತನು ಜ್ಞಾನದಿಂದ ಭೂಮಿಯನ್ನು ಸ್ಥಾಪಿಸಿದನು; ವಿವೇಕದ ಮೂಲಕ ಆತನು ಆಕಾಶಗಳನ್ನು ಸ್ಥಿರಪಡಿಸಿ ದನು. 20. ಆತನ ತಿಳುವಳಿಕೆಯಿಂದ ಅಗಾಧಗಳು ಒಡೆದು ಮೇಘಗಳು ಇಬ್ಬನಿಯನ್ನು ಸುರಿಸುತ್ತವೆ. 21. ನನ್ನ ಮಗನೇ, ನಿನ್ನ ಕಣ್ಣುಗಳಿಂದ ಅವುಗಳು ತಪ್ಪಿಸಿಕೊಳ್ಳದೆ ಇರಲಿ. ಸುಜ್ಞಾನವನ್ನೂ ವಿವೇಕವನ್ನೂ ಇಟ್ಟುಕೋ. 22. ಅವು ನಿನ್ನ ಪ್ರಾಣಕ್ಕೆ ಜೀವವೂ ಕೊರ ಳಿಗೆ ಸೊಬಗೂ ಆಗಿರುವವು. 23. ನಿನ್ನ ಮಾರ್ಗದಲ್ಲಿ ನೀನು ನಿರ್ಭಯವಾಗಿ ನಡೆಯುವಿ, ನಿನ್ನ ಪಾದವು ಎಡವುವದಿಲ್ಲ. 24. ನೀನು ಮಲಗುವಾಗ ನಿನಗೆ ಹೆದರಿಕೆ ಇರುವದಿಲ್ಲ, ಹೌದು, ನೀನು ಮಲಗಿಕೊಳ್ಳುವಿ. ನಿನ್ನ ನಿದ್ರೆಯು ಸುಖವಾಗಿರುವದು. 25. ಆಕಸ್ಮತ್ತಾದ ಭಯ ಕ್ಕಾಗಲಿ ಇಲ್ಲವೆ ಅವರ ಮೇಲೆ ಬರುವ ದುಷ್ಟರ ನಾಶನಕ್ಕಾಗಲಿ ನೀನು ಭಯಪಡದಿರು. 26. ಕರ್ತನೇ ನಿನಗೆ ಭರವಸನಾಗಿದ್ದು ನಿನ್ನ ಪಾದವು ತೆಗೆಯಲ್ಪಡ ದಂತೆ ಆತನು ಕಾಪಾಡುವನು. 27. ನಿನಗೆ ಸಾಧ್ಯವಿರುವಾಗ ಹೊಂದತಕ್ಕವರಿಗೆ ಒಳ್ಳೆ ಯದು ಮಾಡುವದನ್ನು ತಪ್ಪಿಸಬೇಡ. 28. ಕೊಡತಕ್ಕದ್ದು ನಿನ್ನಲ್ಲಿರುವಾಗ--ಹೋಗಿ ಬಾ, ನಾಳೆ ನಿನಗೆ ಕೊಡು ವೆನು ಎಂದು ನಿನ್ನ ನೆರೆಯವನಿಗೆ ಹೇಳಬೇಡ. 29. ನಿನ್ನ ನೆರೆಯವನು ಭದ್ರತೆಯಿಂದ ನಿನ್ನ ಪಕ್ಕದಲ್ಲಿ ಜೀವಿ ಸುತ್ತಿರುವಾಗ ಅವನಿಗೆ ವಿರೋಧವಾಗಿ ಕೇಡನ್ನು ಕಲ್ಪಿಸ ಬೇಡ. 30. ಒಬ್ಬನು ನಿನಗೆ ಯಾವ ಕೇಡನ್ನೂ ಮಾಡ ದಿದ್ದರೆ ಅವನೊಂದಿಗೆ ಯಾವ ಕಾರಣವಿಲ್ಲದೆ ಜಗಳ ವಾಡಬೇಡ. 31. ಬಲಾತ್ಕಾರಿಯ ವಿಷಯದಲ್ಲಿ ನೀನು ಹೊಟ್ಟೇಕಿಚ್ಚುಪಡಬೇಡ, ಅವನ ಮಾರ್ಗಗಳಲ್ಲಿ ಯಾವದನ್ನೂ ನೀನು ಆರಿಸಿಕೊಳ್ಳಬೇಡ. 32. ವಕ್ರ ಬುದ್ಧಿಯವನು ಕರ್ತನಿಗೆ ಅಸಹ್ಯನಾಗಿದ್ದಾನೆ; ಆದರೆ ಆತನ ಗುಟ್ಟು ನೀತಿವಂತರೊಂದಿಗೆ ಇದೆ. 33. ಕರ್ತನ ಶಾಪವು ದುಷ್ಟರ ಮನೆಯಲ್ಲಿದೆ; ಆದರೆ ನ್ಯಾಯಸ್ಥರ ನಿವಾಸವನ್ನು ಆತನು ಆಶೀರ್ವದಿಸುತ್ತಾನೆ. 34. ಆತನು ನಿಶ್ಚಯವಾಗಿಯೂ ಪರಿಹಾಸ್ಯಕರನ್ನು ತಿರಸ್ಕರಿಸುತ್ತಾನೆ; ಆದರೆ ದೀನರಿಗೆ ಆತನು ಕೃಪೆಯನ್ನು ಕೊಡುತ್ತಾನೆ. 35. ಜ್ಞಾನಿಯು ಮಹಿಮೆಗೆ ಬಾಧ್ಯನಾಗುವನು, ಜ್ಞಾನ ಹೀನರ ಏಳಿಗೆಯು ಅವಮಾನವಾಗುವದು.
Chapter 4
1. ಮಕ್ಕಳಿರಾ, ತಂದೆಯ ಶಿಕ್ಷಣವನ್ನು ನೀವು ಕೇಳಿರಿ. ವಿವೇಕವನ್ನು ಗ್ರಹಿಸುವಂತೆ ನೋಡಿರಿ. 2. ನಾನು ನಿಮಗೆ ಸುಬೋಧನೆಯನ್ನು ಮಾಡುವೆನು; ನೀವು ನನ್ನ ಕಟ್ಟಳೆಯನ್ನು ಬಿಡಬೇಡಿರಿ. 3. ನಾನು ಕೋಮಲನೂ ನನ್ನ ತಾಯಿಯ ದೃಷ್ಟಿಯಲ್ಲಿ ಪ್ರಿಯನಾಗಿ ಒಬ್ಬನೇ ಆಗಿದ್ದು ನನ್ನ ತಂದೆಯ ಮಗ ನಾಗಿದ್ದೇನೆ. 4. ಅವನು ಬೋಧಿಸಿ ನನಗೆ ಹೇಳಿದ್ದೇ ನಂದರೆ--ನನ್ನ ಮಾತುಗಳನ್ನು ನಿನ್ನ ಹೃದಯವು ಹಿಡಿದುಕೊಳ್ಳಲಿ; ನನ್ನ ಆಜ್ಞೆಗಳನ್ನು ಕೈಕೊಂಡು ಜೀವಿಸು. 5. ಜ್ಞಾನವನ್ನೂ ವಿವೇಕವನ್ನೂ ಸಂಪಾದಿಸು; ಅವುಗಳನ್ನು ಮರೆಯದಿರು, ಅಲ್ಲದೆ ನನ್ನ ಬಾಯಿಯ ಮಾತುಗಳನ್ನು ನಿರಾಕರಿಸಬೇಡ. 6. ಅವುಗಳನ್ನು ತ್ಯಜಿಸ ದಿದ್ದರೆ ಅವು ನಿನ್ನನ್ನು ಕಾಯುವವು, ಅವುಗಳನ್ನು ಪ್ರೀತಿಸಿದರೆ ಅವು ನಿನ್ನನ್ನು ಕಾಪಾಡುವವು. 7. ಜ್ಞಾನವೇ ಮುಖ್ಯವಾದದ್ದು; ಆದದರಿಂದ ಜ್ಞಾನವನ್ನು ಸಂಪಾ ದಿಸು, ನಿನ್ನ ಎಲ್ಲಾ ಸಂಪತ್ತಿನಿಂದ ವಿವೇಕವನ್ನು ಪಡೆ ದುಕೋ. 8. ಆಕೆಯನ್ನು ನೀನು ಮೇಲೆತ್ತಿದರೆ ಆಕೆಯು ನಿನ್ನನ್ನು ಮೇಲೆತ್ತುವಳು; ಆಕೆಯನ್ನು ನೀನು ಅಪ್ಪಿ ಕೊಂಡರೆ ಆಕೆಯು ನಿನ್ನನ್ನು ಘನತೆಗೆ ತರುವಳು. 9. ಆಕೆಯು ನಿನ್ನ ತಲೆಗೆ ಕೃಪೆಯ ಆಭರಣವಾಗಿರುವಳು; ಆಕೆಯು ನಿನಗೆ ಘನತೆಯ ಕಿರೀಟವನ್ನು ಒಪ್ಪಿಸುವಳು. 10. ಓ ನನ್ನ ಮಗನೇ, ಆಲಿಸಿ ನನ್ನ ಮಾತುಗಳನ್ನು ಅಂಗೀಕರಿಸು; ಆಗ ನಿನ್ನ ಜೀವಿತದ ವರುಷಗಳು ಹೆಚ್ಚಾಗುವವು. 11. ಜ್ಞಾನದ ಮಾರ್ಗದಲ್ಲಿ ನಾನು ನಿನಗೆ ಬೋಧಿಸಿದೆನು; ಸರಿಯಾದ ದಾರಿಗಳಲ್ಲಿ ನಾನು ನಿನ್ನನ್ನು ನಡಿಸಿದೆನು. 12. ನೀನು ನಡೆಯುವಾಗ ನಿನ್ನ ಹೆಜ್ಜೆಗೆ ಇಕ್ಕಟ್ಟಾಗದು; ನೀನು ಓಡುವಾಗ ಮುಗ್ಗರಿಸುವದಿಲ್ಲ. 13. ಶಿಕ್ಷಣವನ್ನು ಗಟ್ಟಿಯಾಗಿ ಹಿಡಿದುಕೋ, ಅದು ನಿನ್ನಿಂದ ತೊಲಗದೆ ಇರಲಿ. ಅದನ್ನು ಕಾಪಾಡು. ಅದು ನಿನ್ನ ಜೀವವಾಗಿದೆ. 14. ದುಷ್ಟರ ದಾರಿಯೊಳಗೆ ಪ್ರವೇಶಿಸದಿರು, ಕೆಟ್ಟವರ ಮಾರ್ಗದಲ್ಲಿ ಹೋಗಬೇಡ. 15. ಅದನ್ನು ತಪ್ಪಿಸು, ಅದರ ಪಕ್ಕದಲ್ಲಿ ಹಾದು ಹೋಗ ಬೇಡ, ಅದರಿಂದ ಹಿಂತಿರುಗಿ ಮುಂದೆ ನಡೆ. 16. ಕೇಡು ಮಾಡದಿದ್ದರೆ ಅವರು ನಿದ್ರೆಹೋಗುವದಿಲ್ಲ; ಯಾರ ನ್ನಾದರೂ ಬೀಳಿಸದೆ ಇದ್ದರೆ ಅವರ ನಿದ್ರೆಗೆ ಭಂಗ ವಾಗುವದು. 17. ಅವರು ದುಷ್ಟತನದ ರೊಟ್ಟಿಯನ್ನು ತಿಂದು ಬಲಾತ್ಕಾರದ ದ್ರಾಕ್ಷಾರಸವನ್ನು ಕುಡಿಯು ತ್ತಾರೆ. 18. ಆದರೆ ಸಂಪೂರ್ಣವಾದ ದಿನಕ್ಕೆ ಹೆಚ್ಚೆಚ್ಚಾಗಿ ಹೊಳೆಯುವ ದೀಪದಂತೆ ನ್ಯಾಯವಂತರ ದಾರಿಯು ಹೊಳೆಯುವದು. 19. ದುಷ್ಟರ ಮಾರ್ಗವು ಕತ್ತಲೆ ಯಂತಿದೆ. ಅವರು ಯಾವದಕ್ಕೆ ಎಡವಿ ಬೀಳುತ್ತಾರೋ ಅದು ಅವರಿಗೆ ಗೊತ್ತಾಗದು. 20. ನನ್ನ ಮಗನೇ, ನನ್ನ ಮಾತುಗಳನ್ನು ಆಲಿಸು; ನನ್ನ ನುಡಿಗಳಿಗೆ ಕಿವಿಗೊಡು. 21. ಅವುಗಳು ನಿನ್ನ ಕಣ್ಣುಗಳಿಗೆ ತಪ್ಪಿಹೋಗದೆ ಇರಲಿ; ಅವುಗಳನ್ನು ನಿನ್ನ ಹೃದಯದ ಮಧ್ಯದಲ್ಲಿ ಇಟ್ಟುಕೋ. 22. ಅವುಗಳನ್ನು ಕಂಡುಕೊಳ್ಳುವವರಿಗೆ ಅವು ಜೀವವೂ ಅವರ ದೇಹ ಕ್ಕೆಲ್ಲಾ ಆರೋಗ್ಯವೂ ಆಗಿವೆ. 23. ಬಹು ಜಾಗ್ರತೆಯಿಂದ ನಿನ್ನ ಹೃದಯವನ್ನು ಕಾಪಾಡಿಕೋ; ಜೀವಧಾರೆಗಳು ಅದರೊಳಗಿಂದ ಹೊರಡುವವು. 24. ವಕ್ರಬಾಯಿ ಯನ್ನು ನಿನ್ನಿಂದ ತೆಗೆದುಬಿಡು; ಕೆಟ್ಟ ತುಟಿಗಳನ್ನು ನಿನ್ನಿಂದ ದೂರ ಇಡು. 25. ನಿನ್ನ ಕಣ್ಣುಗಳು ಮುಂದೆಯೇ ನೋಡಲಿ. ನಿನ್ನ ಕಣ್ಣು ರೆಪ್ಪೆಗಳು ನೆಟ್ಟಗೆ ನಿನ್ನ ಮುಂದೆಯೇ ನೋಡಲಿ. 26. ನೀನು ನಡೆಯುವ ದಾರಿ ಯನ್ನು ವಿಮರ್ಶಿಸಿ ನೋಡು; ನಿನ್ನ ಎಲ್ಲಾ ಮಾರ್ಗ ಗಳು ಸ್ಥಿರವಾಗಿರಲಿ. 27. ನಿನ್ನ ಬಲಕ್ಕಾಗಲಿ ಎಡಕ್ಕಾಗಲಿ ತಿರುಗಬೇಡ; ಕೇಡಿನಿಂದ ನಿನ್ನ ಪಾದವನ್ನು ತಪ್ಪಿಸು.
Chapter 5
1. ನನ್ನ ಮಗನೇ, ನನ್ನ ಗ್ರಹಿಕೆಗೆ ಕಿವಿಗೊಡು; ನೀನು ವಿವೇಕಕ್ಕೆ ಲಕ್ಷಕೊಡು ವಂತೆಯೂ 2. ನಿನ್ನ ತುಟಿಗಳು ತಿಳುವಳಿಕೆಯನ್ನು ಕಾಪಾಡು ವಂತೆಯೂ ನನ್ನ ಜ್ಞಾನವನ್ನು ಆಲಿಸು. 3. ಪರಸ್ತ್ರೀಯ ತುಟಿಗಳು ಜೇನು ತುಪ್ಪದಂತೆ ತೊಟ್ಟಿ ರುವವು, ಅವಳ ಬಾಯಿಯು ಎಣ್ಣೆಗಿಂತಲೂ ಮೃದು ವಾಗಿದೆ. 4. ಆದರೆ ಅವಳ ಅಂತ್ಯವು ಮಾಚಿ ಪತ್ರೆಯಂತೆ ಕಹಿಯೂ ಇಬ್ಬಾಯಿ ಕತ್ತಿಯಂತೆ ಹರಿತವೂ ಇರುತ್ತದೆ. 5. ಅವಳ ಪಾದಗಳು ಮರಣದ ಕಡೆಗೆ ಇಳಿದು ಹೋಗು ತ್ತವೆ. ಅವಳ ಹೆಜ್ಜೆಗಳು ಪಾತಾಳವನ್ನು ಹಿಡಿಯುತ್ತವೆ. 6. ಅವುಗಳನ್ನು ನೀನು ತಿಳಿದುಕೊಳ್ಳಲಾರದಂತೆ ಜೀವದ ಮಾರ್ಗವನ್ನು ನೀನು ವಿವೇಚಿಸಲಾರದಷ್ಟು ಅವಳ ಮಾರ್ಗಗಳು ಚಂಚಲವಾಗಿವೆ. 7. ಆದದರಿಂದ ಓ ಮಕ್ಕಳಿರಾ, ಈಗ ನನ್ನ ಕಡೆಗೆ ಕಿವಿಗೊಡಿರಿ, ನನ್ನ ಬಾಯಿಯ ಮಾತುಗಳಿಂದ ಹೊರಟುಹೋಗಬೇಡಿರಿ. 8. ಅವಳ ಕಡೆಯಿಂದ ನಿನ್ನ ದಾರಿಯನ್ನು ದೂರಮಾಡು. ಅವಳ ಮನೆಯ ಬಾಗಲ ಹತ್ತಿರಕ್ಕೆ ಬಾರದೆ ಇರು. 9. ನೀನು ನಿನ್ನ ಗೌರವವನ್ನು ಬೇರೆಯವರಿಗೂ ನಿನ್ನ ವರುಷ ಗಳನ್ನು ಕ್ರೂರರಿಗೂ ಕೊಡಬೇಡ. 10. ನಿನ್ನ ಸಂಪತ್ತನ್ನು ಪರರು ತುಂಬಿಕೊಳ್ಳದಂತೆಯೂ ನಿನ್ನ ಪ್ರಯಾಸಗಳು ಪರನ ಮನೆಯಲ್ಲಿ ಇರದಂತೆಯೂ ಮಾಡು. 11. ನಿನ್ನ ಮಾಂಸವೂ ದೇಹವೂ ಕ್ಷೀಣಿಸಿದಾಗ ನೀನು ಕೊನೆಯಲ್ಲಿ ಶೋಕಿಸುತ್ತಾ-- 12. ಶಿಕ್ಷಣವನ್ನು ನಾನು ಎಷ್ಟೋ ಹಗೆಮಾಡಿದೆನು; ನನ್ನ ಹೃದಯವು ಗದರಿಕೆಯನ್ನು ತಿರಸ್ಕಾರ ಮಾಡಿತು. 13. ನನ್ನ ಬೋಧ ಕರ ಸ್ವರಕ್ಕೆ ನಾನು ವಿಧೇಯನಾಗದೆ ಇಲ್ಲವೆ ಶಿಕ್ಷಕರಿಗೆ ನಾನು ಕಿವಿಗೊಡದೆ ಹೋದೆನು. 14. ನಾನು ಕೂಟ ಮತ್ತು ಸಭೆಯ ಮಧ್ಯದಲ್ಲಿ ಹೆಚ್ಚು ಕಡಿಮೆ ಎಲ್ಲಾ ಕೇಡಿನಲ್ಲಿ ಇದ್ದೆನು ಎಂದು ಹೇಳುವಿ. 15. ನಿನ್ನ ಸ್ವಂತ ಕೊಳದ ನೀರನ್ನು, ನಿನ್ನ ಸ್ವಂತ ಬಾವಿ ಯೊಳಗಿಂದ ಉಕ್ಕಿಬರುವ ಜಲವನ್ನು ಕುಡಿ. 16. ನಿನ್ನ ಬುಗ್ಗೆಗಳು ಹೊರಗೆ ಮತ್ತು ನೀರಿನ ನದಿಗಳು ಬೀದಿ ಗಳಲ್ಲಿ ಹರಡಿಹೋಗಲಿ. 17. ಅವು ನಿನ್ನ ಸ್ವಂತದವು ಗಳಾಗಿಯೇ ಇರಲಿ. ನಿನ್ನೊಂದಿಗಿರುವ ಪರರಿಗೆ ಇಲ್ಲ ದಿರಲಿ. 18. ನಿನ್ನ ಬುಗ್ಗೆಯು ಆಶೀರ್ವದಿಸಲ್ಪಡಲಿ; ನಿನ್ನ ಯೌವನ ಕಾಲದ ಹೆಂಡತಿಯೊಂದಿಗೆ ಆನಂದಿಸು. 19. ಆಕೆಯು ಮನೋಹರವಾದ ಜಿಂಕೆಯಂತೆಯೂ ಅಂದವಾದ ಹೆಣ್ಣು ಜಿಂಕೆಯ ಹಾಗೆಯೂ ಇರಲಿ; ಆಕೆಯ ಸ್ತನಗಳು ನಿನ್ನನ್ನು ಯಾವಾಗಲೂ ತೃಪ್ತಿಪಡಿ ಸಲಿ; ಆಕೆಯ ಪ್ರೀತಿಯಿಂದ ನೀನು ಯಾವಾಗಲೂ ಆನಂದಪರವಶನಾಗು. 20. ನನ್ನ ಮಗನೇ, ಪರಸ್ತ್ರೀ ಯಲ್ಲಿ ನೀನು ಯಾಕೆ ಆನಂದ ಪರವಶನಾಗಿ ಅವಳ ಎದೆಯನ್ನು ಅಪ್ಪಿಕೊಳ್ಳುವಿ? 21. ಮನುಷ್ಯನ ಮಾರ್ಗ ಗಳು ಕರ್ತನ ಕಣ್ಣುಗಳ ಮುಂದೆಯೇ ಅವೆ; ಆತನು ಅವನ ಮಾರ್ಗಗಳನ್ನೆಲ್ಲಾ ಪರೀಕ್ಷಿಸುತ್ತಾನೆ. 22. ದುಷ್ಟ ನನ್ನು ಅವನ ಸ್ವಂತ ಅಕ್ರಮಗಳೇ ಹಿಡಿಯುವವು; ತನ್ನ ಪಾಪಗಳ ಪಾಶಗಳಿಂದಲೇ ಅವನು ಬಂಧಿಸಲ್ಪಡು ವನು. 23. ಶಿಕ್ಷಣವಿಲ್ಲದೆ ಅವನು ಸಾಯುವನು; ತನ್ನ ಮೂಢತ್ವದ ದೊಡ್ಡಸ್ತಿಕೆಯಲ್ಲಿ ತಪ್ಪಿಹೋಗುವನು.
Chapter 6
1. ನನ್ನ ಮಗನೇ, ನಿನ್ನ ಸ್ನೇಹಿತನಿಗಾಗಿ ನೀನು ಹೊಣೆಯಾಗಿದ್ದರೆ ಪರನೊಂದಿಗೆ ನಿನ್ನ ಕೈಯನ್ನು ಒಡ್ಡಿದ್ದರೆ 2. ನಿನ್ನ ಬಾಯಿ ಮಾತುಗಳಿಂದ ನೀನು ಸಿಕ್ಕಿಕೊಂಡಿದ್ದೀ. ನಿನ್ನ ಬಾಯಿ ಮಾತುಗಳಿಂದಲೇ ನೀನು ಹಿಡಿಯಲ್ಪಟ್ಟಿದ್ದೀ. 3. ನನ್ನ ಮಗನೇ, ನಿನ್ನ ಸ್ನೇಹಿತನ ಕೈಗೆ ಸಿಕ್ಕಿದಾಗ ತಪ್ಪಿಸಿಕೊಳ್ಳಲು ಇದನ್ನು ಮಾಡು. ಹೋಗಿ ನಿನ್ನನ್ನು ನೀನು ತಗ್ಗಿಸಿಕೊಂಡು ನಿನ್ನ ಸ್ನೇಹಿತನಿಗೆ ಹೊಣೆಯಾಗು. 4. ನಿನ್ನ ಕಣ್ಣುಗಳಿಗೆ ನಿದ್ರೆಯನ್ನೂ ರೆಪ್ಪೆಗಳಿಗೆ ತೂಕಡಿಕೆಯನ್ನೂ ಕೊಡಬೇಡ. 5. ಬೇಟೆ ಗಾರನ ಕೈಯಿಂದ ಜಿಂಕೆಯೂ ಪಕ್ಷಿಯೂ ತಪ್ಪಿಸಿಕೊಳ್ಳು ವಂತೆ ತಪ್ಪಿಸಿಕೋ. 6. ಸೋಮಾರಿಯೇ, ನೀನು ಇರುವೆಯ ಹತ್ತಿರ ಹೋಗಿ ಅದರ ಮಾರ್ಗಗಳನ್ನು ಆಲೋಚಿಸಿ ಜ್ಞಾನ ವಂತನಾಗಿರು. 7. ನಾಯಕನಾಗಲಿ ಮೇಲ್ವಿಚಾರಕನಾ ಗಲಿ ಅಧಿಕಾರಿಯಾಗಲಿ ಅದಕ್ಕೆ ಇಲ್ಲದೆ ಹೋದರೂ 8. ಬೇಸಿಗೆಯಲ್ಲಿ ಅದು ತನ್ನ ಅಹಾರವನ್ನು ಸಂಗ್ರಹಿಸಿ ಕೊಂಡು ಸುಗ್ಗಿಯಲ್ಲಿ ತನ್ನ ಆಹಾರವನ್ನು ಕೂಡಿಸಿ ಕೊಳ್ಳುವದು. 9. ಓ ಸೋಮಾರಿಯೇ, ಎಷ್ಟು ಹೊತ್ತು ನೀನು ನಿದ್ರೆಮಾಡುವದು? ನಿನ್ನ ನಿದ್ರೆಯಿಂದ ಯಾವಾ ಗ ಎಚ್ಚರಗೊಳ್ಳುವಿ? 10. ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ತೂಕಡಿಕೆ, ನಿದ್ರೆಗಾಗಿ ಇನ್ನೂ ಸ್ವಲ್ಪ ಕೈ ಮುದುರಿ ಕೊಳ್ಳುವಿ? 11. ಹೀಗೆ ದಾರಿದ್ರ್ಯವು ಪ್ರಯಾಣ ಮಾಡು ವವನ ಹಾಗೂ ನಿನ್ನ ಕೊರತೆಯು ಯುದ್ಧಸ್ಥರ ಹಾಗೂ ಬರುವದು. 12. ದುಷ್ಟನೂ ಕೆಡುಕನೂ ವಕ್ರಬಾಯಿಂದ ನಡೆದು ಕೊಳ್ಳುವನು. 13. ಅವನು ತನ್ನ ಕಣ್ಣುಗಳಿಂದ ಸನ್ನೆಮಾಡಿ ತನ್ನ ಕಾಲುಗಳಿಂದ ಮಾತಾಡುತ್ತಾ ತನ್ನ ಬೆರಳುಗಳಿಂದ ಬೋಧಿಸುತ್ತಾನೆ. 14. ಅವನ ಹೃದಯದಲ್ಲಿ ಮೂರ್ಖ ತನವಿದೆ. ಯಾವಾಗಲೂ ಅವನು ಕೇಡನ್ನು ಕಲ್ಪಿಸು ತ್ತಾನೆ. ಅವನು ವೈಷಮ್ಯವನ್ನು ಬಿತ್ತುತ್ತಾನೆ. 15. ಆದದ ರಿಂದ ಅವನಿಗೆ ತಕ್ಷಣವೇ ವಿಪತ್ತು ಬರುವದು; ತಕ್ಷ ಣವೇ ಯಾವ ಪರಿಹಾರವಿಲ್ಲದೆ ಅವನು ಮುರಿಯಲ್ಪ ಡುವನು. 16. ಈ ಆರು ವಿಷಯಗಳನ್ನು ಕರ್ತನು ಹಗೆಮಾಡುತ್ತಾನೆ; ಹೌದು, ಏಳು ಆತನಿಗೆ ಅಸಹ್ಯವಾಗಿವೆ; ಯಾವವಂದರೆ: 17. ಹೆಮ್ಮೆಯ ದೃಷ್ಟಿ, ಸುಳ್ಳಾ ಡುವ ನಾಲಿಗೆ, ನಿರ್ದೋಷ ರಕ್ತವನ್ನು ಸುರಿಸುವ ಕೈಗಳು, 18. ದುಷ್ಟ ಭಾವನೆಗಳನ್ನು ಕಲ್ಪಿಸುವ ಹೃದಯ, ಕೇಡಿಗೆ ಓಡಾಡುವದರಲ್ಲಿ ತ್ವರೆಪಡುವ ಕಾಲುಗಳು, 19. ಅಸತ್ಯಗಳನ್ನು ಆಡುವ ಸುಳ್ಳು ಸಾಕ್ಷಿ ಮತ್ತು ಸಹೋ ದರರಲ್ಲಿ ವೈಷಮ್ಯವನ್ನು ಬಿತ್ತುವವನು. 20. ನನ್ನ ಮಗನೇ, ನಿನ್ನ ತಂದೆಯ ಆಜ್ಞೆಯನ್ನು ಕೈಕೊಳ್ಳು, ತಾಯಿಯ ಕಟ್ಟಳೆಯನ್ನು ತ್ಯಜಿಸಬೇಡ. 21. ಅವುಗಳನ್ನು ಯಾವಾಗಲೂ ನಿನ್ನ ಹೃದಯಕ್ಕೆ ಬಂಧಿಸು. ನಿನ್ನ ಕಂಠಕ್ಕೆ ಕಟ್ಟಿಕೋ. 22. ನೀನು ಹೋಗು ವಾಗ ಅದು ನಿನ್ನನ್ನು ನಡಿಸುವದು; ಮಲಗುವಾಗ ನಿನ್ನನ್ನು ಕಾಯುವದು; ಎಚ್ಚರಗೊಂಡಾಗ ನಿನ್ನೊಂದಿಗೆ ಮಾತಾಡುವದು. 23. ಆಜ್ಞೆಯು ದೀಪವಾಗಿದೆ, ಕಟ್ಟ ಳೆಯು ಬೆಳಕಾಗಿದೆ; ಶಿಕ್ಷಣದ ಗದರಿಕೆಗಳು ಜೀವದ ಮಾರ್ಗವಾಗಿವೆ. 24. ಕೆಟ್ಟ ಹೆಂಗಸಿನಿಂದಲೂ ಪರ ಸ್ತ್ರೀಯ ನಾಲಿಗೆಯ ಮುಖಸ್ತುತಿಯಿಂದಲೂ ಅವು ನಿನ್ನನ್ನು ಕಾಪಾಡುವವು. 25. ನಿನ್ನ ಹೃದಯದಲ್ಲಿ ಅವಳ ಸೌಂದರ್ಯವನ್ನು ಮೋಹಿಸಬೇಡ; ಇದಲ್ಲದೆ ಅವಳ ಕಣ್ಣುರೆಪ್ಪೆಗಳಿಂದ ನಿನ್ನನ್ನು ಅವಳು ವಶಮಾಡಿಕೊಳ್ಳದೆ ಇರಲಿ. 26. ಒಬ್ಬ ವೇಶ್ಯೆಯ ಮೂಲಕ ಮನುಷ್ಯನು ರೊಟ್ಟಿಯ ತುಂಡಿಗೆ ಈಡಾಗುವನು; ವ್ಯಭಿಚಾರಿಣಿಯು ಅಮೂಲ್ಯವಾದ ಜೀವವನ್ನು ಬೇಟೆಯಾಡುವಳು. 27. ಒಬ್ಬನು ತನ್ನ ಮಡಿಲಲ್ಲಿ ಬೆಂಕಿಯನ್ನು ತೆಗೆದು ಕೊಂಡರೆ ಅವನ ವಸ್ತ್ರಗಳು ಸುಡುವದಿಲ್ಲವೋ? 28. ಒಬ್ಬನು ಧಗಧಗಿಸುವ ಕೆಂಡಗಳ ಮೇಲೆ ನಡೆದರೆ ಅವನ ಪಾದಗಳು ಸುಡುವದಿಲ್ಲವೋ? 29. ತನ್ನ ನೆರೆಯವನ ಹೆಂಡತಿಯನ್ನು ಕೂಡುವವನು ಹೀಗೆಯೇ ಇರುವನು; ಅವಳನ್ನು ಮುಟ್ಟುವ ಯಾವನೂ ನಿರಪ ರಾಧಿಯಾಗಿ ಇರನು. 30. ಹಸಿದಾಗ ಕಳ್ಳನು ತನ್ನ ಪ್ರಾಣವನ್ನು ತೃಪ್ತಿಪಡಿಸುವದಕ್ಕೆ ಕಳವು ಮಾಡಿದರೆ ಜನರು ಅವನನ್ನು ಹೀಯಾಳಿಸುವದಿಲ್ಲ. 31. ಅವನು ಸಿಕ್ಕಿಕೊಂಡರೆ ಏಳರಷ್ಟು ಹಿಂದಕ್ಕೆ ಕೊಡುವನು; ತನ್ನ ಮನೆಯ ಆಸ್ತಿಯನ್ನೆಲ್ಲಾ ಅವನು ಕೊಡುವನು. 32. ಒಬ್ಬ ಸ್ತ್ರೀಯೊಂದಿಗೆ ವ್ಯಭಿಚಾರ ಮಾಡುವವನು ವಿವೇಕವಿಲ್ಲದವನಾಗಿದ್ದಾನೆ. ಅದನ್ನು ಮಾಡುವವನು ತನ್ನ ಪ್ರಾಣವನ್ನೇ ನಾಶಪಡಿಸಿಕೊಳ್ಳುವನು. 33. ಅವ ನಿಗೆ ಗಾಯವೂ ಅವಮಾನವೂ ಆಗುವವು; ಅವನ ನಿಂದೆಯು ಎಂದಿಗೂ ಅಳಿಸಲ್ಪಡದು. 34. ಮನುಷ್ಯನ ಕ್ರೋಧವು ಮತ್ಸರವಾಗಿದೆ; ಆದದರಿಂದ ಮುಯ್ಯಿ ತೀರಿಸುವ ದಿನದಲ್ಲಿ ಅವನು ಕ್ಷಮೆತೋರುವದಿಲ್ಲ. 35. ಅವನು ಯಾವ ಈಡನ್ನು ಲಕ್ಷಿಸುವದಿಲ್ಲ; ಇದ ಲ್ಲದೆ ನೀನು ಎಷ್ಟು ಲಂಚಕೊಟ್ಟರೂ ಅವನು ಒಪ್ಪುವದಿಲ್ಲ.
Chapter 7
1. ನನ್ನ ಮಗನೇ, ನನ್ನ ಮಾತುಗಳನ್ನು ಅನುಸರಿಸಿ ನನ್ನ ಆಜ್ಞೆಗಳನ್ನು ನಿನ್ನಲ್ಲಿ ಇಟ್ಟುಕೋ. 2. ನನ್ನ ಅಜ್ಞೆಗಳನ್ನು ಅನುಸರಿಸಿ ಬಾಳು; ನಿನ್ನ ಕಣ್ಣು ಗುಡ್ಡೆಯಂತೆ ನನ್ನ ಕಟ್ಟಳೆಯನ್ನು ಕಾಪಾಡು. 3. ಅವುಗ ಳನ್ನು ನಿನ್ನ ಬೆರಳುಗಳಿಗೆ ಕಟ್ಟಿಕೋ, ನಿನ್ನ ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆ. 4. ಜ್ಞಾನಕ್ಕೆ--ನೀನು ನನ್ನ ಸಹೋದರಿ ಎಂದೂ ವಿವೇಕವು ನನ್ನ ಬಂಧು ಎಂದೂ ಹೇಳು; 5. ಪರಸ್ತ್ರೀಯಿಂದಲೂ ತನ್ನ ಮಾತು ಗಳಿಂದ ಮುಖಸ್ತುತಿ ಮಾಡುವ ಅನ್ಯಳಿಂದಲೂ ಅವು ನಿನ್ನನ್ನು ಕಾಪಾಡುವವು. 6. ನನ್ನ ಮನೆಯ ಕಿಟಿಕಿಯ ಜಾಲರಿಯಿಂದ ದೃಷ್ಟಿ ಸುವವನಾಗಿ ಜ್ಞಾನಹೀನರಾದವರಲ್ಲಿ ನೋಡಿದಾಗ 7. ಯುವಕರ ಮಧ್ಯದಲ್ಲಿ ತಿಳುವಳಿಕೆಯಿಲ್ಲದ ಒಬ್ಬ ಯೌವನಸ್ಥನನ್ನು ಕಂಡೆನು. 8. ಅವನು ಅವಳ ಮೂಲೆಯ ಬೀದಿಯಿಂದ ಹಾದುಹೋಗುತ್ತಾ 9. ಸಂಜೆಯ ಮೊಬ್ಬಿನಲ್ಲಿ ಗಾಡಾಂಧಕಾರದಲ್ಲಿ ಅವಳ ಮನೆಗೆ ಹೋದನು. 10. ಇಗೋ, ವೇಶ್ಯಳ ವಸ್ತ್ರವನ್ನು ಧರಿಸಿ ಕೊಂಡು ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರು ಗೊಂಡಳು. 11. (ಅವಳು ಕೂಗಾಡುವವಳು, ಹಠ ಮಾರಿ; ಅವಳ ಪಾದಗಳು ಮನೆಯಲ್ಲಿ ನಿಲ್ಲುವದಿಲ್ಲ. 12. ಒಂದು ಸಮಯದಲ್ಲಿ ಅವಳು ಹೊರಗೆ ಮತ್ತೊಂದು ಸಮಯದಲ್ಲಿ ಬೀದಿಗಳಲ್ಲಿ ಪ್ರತಿಯೊಂದು ಮೂಲೆ ಯಲ್ಲಿ ಹೊಂಚುಹಾಕುವಳು). 13. ಹೀಗೆ ಅವಳು ಅವ ನನ್ನು--ಹಿಡುಕೊಂಡು ಮುದ್ದಿಟ್ಟು 14. ನಾಚಿಕೆಯಿಲ್ಲದೆ --ನನ್ನಲ್ಲಿ ಸಮಾಧಾನ ಅರ್ಪಣೆಗಳು ಇವೆ; ಈ ದಿವಸ ನನ್ನ ಪ್ರಮಾಣಗಳನ್ನು ನಾನು ಸಲ್ಲಿಸಿದ್ದೇನೆ. 15. ಆದಕಾರಣ ನಾನು ನಿನ್ನನ್ನು ಎದುರುಗೊಳ್ಳುವದಕ್ಕೆ ಬಂದೆನು; ಅತ್ಯಾಶೆಯಿಂದ ನಿನ್ನನ್ನು ತ್ರೀವ್ರವಾಗಿ ಹುಡು ಕುವದಕ್ಕೆ ಬಂದು ನಿನ್ನನ್ನು ಕಂಡುಕೊಂಡಿದ್ದೇನೆ. 16. ಚಿತ್ರವಾಗಿ ನೇಯ್ದ ವಸ್ತುಗಳಿಂದಲೂ ವಿಚಿತ್ರ ವಸ್ತು ಗಳಿಂದಲೂ ಐಗುಪ್ತದ ನಯವಾದ ನಾರುಮಡಿ ಯಿಂದಲೂ ನನ್ನ ಹಾಸಿಗೆಯನ್ನು ಅಲಂಕರಿಸಿದ್ದೇನೆ. 17. ರಕ್ತಬೋಳ ಅಗರು ಲವಂಗ ಚೆಕ್ಕೆಗಳಿಂದ ನನ್ನ ಹಾಸಿಗೆಯನ್ನು ಸುವಾಸನೆ ಗೊಳಿಸಿದ್ದೇನೆ. 18. ಬಾ, ಬೆಳಗಿನ ವರೆಗೂ ತೃಪ್ತಿಯಾಗುವ ತನಕ ಪ್ರೀತಿಯ ವಶದಲ್ಲಿ ತುಂಬಿಕೊಳ್ಳುವ ಕಾಮ ವಿಲಾಸಗಳಿಂದ ನಮ್ಮನ್ನು ನಾವು ಆದರಿಸಿಕೊಳ್ಳೋಣ. 19. ಯಜಮಾ ನನು ಮನೆಯಲ್ಲಿ ಇಲ್ಲ; ಅವನು ದೀರ್ಘದ ಪ್ರಯಾಣ ಕೈಕೊಂಡಿದ್ದಾನೆ. 20. ಅವನು ತನ್ನೊಂದಿಗೆ ಹಣದ ಚೀಲವನ್ನು ತೆಗೆದುಕೊಂಡು ಹೋಗಿದ್ದಾನೆ; ನೇಮಕ ವಾದ ದಿನದಲ್ಲಿಯೇ ಅವನು ಈ ಮನೆಗೆ ಬರುವವನಾ ಗಿದ್ದಾನೆ ಎಂದು 21. ಬಹಳವಾದ ತನ್ನ ಸವಿಮಾತಿನಿಂದ ಅವಳು ಅವನನ್ನು ಒಪ್ಪಿಸಿ ತನ್ನ ತುಟಿಗಳ ಮುಖಸ್ತುತಿ ಯಿಂದ ಅವನನ್ನು ಬಲಾತ್ಕರಿಸಿದಳು. 22. ಎತ್ತು ವಧೆಯ ಸ್ಥಾನಕ್ಕೆ ಹೋಗುವಂತೆ ಇಲ್ಲವೆ ಮೂರ್ಖನು ಶಿಕ್ಷೆಯ ದಂಡನೆಗೆ ಹೋಗುವಂತೆ 23. ಒಂದು ಬಾಣವು ತನ್ನ ಕಾಳಿಜವನ್ನು ತಿವಿಯುವ ವರೆಗೆ ತನ್ನ ಪ್ರಾಣಕ್ಕಾಗಿ ಬಲೆಯನ್ನು ಒಡ್ಡಿದ್ದಾನೆಂದು ತಿಳಿಯದೆ ಪಕ್ಷಿಯು ಬಲೆಯ ಕಡೆಗೆ ಓಡುವ ಹಾಗೆ ಅವನು ತಟ್ಟನೆ ಅವಳ ಹಿಂದೆ ಹೋಗುತ್ತಾನೆ. 24. ಆದುದರಿಂದ ಓ ನನ್ನ ಮಕ್ಕಳಿರಾ, ನನ್ನ ಕಡೆಗೆ ಕಿವಿಗೊಡಿರಿ; ನನ್ನ ಬಾಯಿಯ ಮಾತುಗಳನ್ನು ಆಲಿಸಿರಿ. 25. ಅವಳ ಮಾರ್ಗಗಳಿಗೆ ನಿನ್ನ ಹೃದಯವು ತಿರುಗದೆ ಇರಲಿ. ಅವಳ ದಾರಿಗಳಲ್ಲಿ ತಪ್ಪಿಹೋಗದೆ ಇರಲಿ. 26. ಬಹು ಜನರನ್ನು ಅವಳು ಗಾಯಪಡಿಸಿ ಬೀಳಿಸಿ ದ್ದಾಳೆ; ಹೌದು, ಬಲಿಷ್ಠರಾದ ಅನೇಕ ಪುರುಷರು ಅವಳಿಂದ ಹತರಾಗಿದ್ದಾರೆ. 27. ಅವಳ ಮನೆಯು ಪಾತಾಳದ ದಾರಿ, ಅದು ಮೃತ್ಯುವಿನ ಕೊಠಡಿಗೆ ಇಳಿದುಹೋಗುತ್ತದೆ.
Chapter 8
1. ಜ್ಞಾನವು ಕೂಗುತ್ತದಲ್ಲವೋ? ಮತ್ತು ತಿಳುವಳಿಕೆಯು ತನ್ನ ಸ್ವರವನ್ನು ಕೇಳುವಂತೆ ಮಾಡುತ್ತದಲ್ಲವೋ? 2. ಉನ್ನತ ಸ್ಥಳಗಳ ತುದಿಯ ಲ್ಲಿಯೂ ಹಾದಿಗಳ ಸ್ಥಳಗಳಲ್ಲಿಯೂ ಮಾರ್ಗದ ಲ್ಲಿಯೂ ನಿಂತುಕೊಳ್ಳುತ್ತದೆ. 3. ದ್ವಾರಗಳ ಬಳಿಯ ಪಟ್ಟ ಣದ ಪ್ರವೇಶದಲ್ಲಿಯೂ ಒಳಗೆ ಬರುವ ಬಾಗಲು ಗಳಲ್ಲಿಯೂ ಆಕೆ ಕೂಗುವದೇನಂದರೆ-- 4. ಓ ಮನು ಷ್ಯರೇ, ನಿಮ್ಮನ್ನೇ ನಾನು ಕರೆಯುತ್ತೇನೆ; ಮನುಷ್ಯ ಪುತ್ರರಿಗೆ ನನ್ನ ಸ್ವರವು ಇರುತ್ತದೆ. 5. ಓ ಜ್ಞಾನಹೀನರೇ, ಜ್ಞಾನವನ್ನು ಗ್ರಹಿಸಿರಿ; ಬುದ್ಧಿಹೀನರೇ, ನೀವು ತಿಳು ವಳಿಕೆಯ ಹೃದಯದವರಾಗಿರ್ರಿ. 6. ಕೇಳಿರಿ, ಉತ್ಕ್ರಷ್ಟ ವಾದ ಸಂಗತಿಗಳನ್ನು ನಾನು ಮಾತಾಡುವೆನು; ನ್ಯಾಯ ವಾದ ಸಂಗತಿಗಳಿಗಾಗಿ ನನ್ನ ತುಟಿಗಳನ್ನು ತೆರೆಯು ವೆನು. 7. ನನ್ನ ಬಾಯಿಯು ಸತ್ಯವನ್ನು ಮಾತಾಡುವದು; ನನ್ನ ತುಟಿಗಳಿಗೆ ಕೆಟ್ಟತನವು ಅಸಹ್ಯವಾಗಿದೆ. 8. ನನ್ನ ಬಾಯಿಯ ಮಾತುಗಳೆಲ್ಲಾ ನೀತಿಯಲ್ಲಿವೆ; ಮೂರ್ಖ ತನವಾಗಲಿ ವಕ್ರತೆಯಾಗಲಿ ಅವುಗಳಲ್ಲಿ ಇಲ್ಲ. 9. ಗ್ರಹಿ ಸುವವನಿಗೆ ಅವು ಸ್ಪಷ್ಟವಾಗಿಯೂ ತಿಳುವಳಿಕೆಯನ್ನು ಕಂಡುಕೊಳ್ಳುವವನಿಗೆ ಅವು ನ್ಯಾಯವಾಗಿಯೂ ಇವೆ. 10. ಬೆಳ್ಳಿಯನ್ನಲ್ಲ, ನನ್ನ ಶಿಕ್ಷಣವನ್ನೂ ಆಯಲ್ಪಟ್ಟ ಬಂಗಾ ರಕ್ಕಿಂತ ತಿಳುವಳಿಕೆಯನ್ನೂ ಪಡೆದುಕೋ. 11. ಮಾಣಿಕ್ಯ ಗಳಿಗಿಂತ ಜ್ಞಾನವು ಉತ್ತಮ, ಅಪೇಕ್ಷಿಸಲ್ಪಡತಕ್ಕ ಎಲ್ಲಾ ವಸ್ತುಗಳು ಅದಕ್ಕೆ ಹೋಲಿಸುವದಕ್ಕಾಗದು. 12. ಜ್ಞಾನ ವೆಂಬ ನಾನು ವಿವೇಕದೊಂದಿಗೆ ವಾಸವಾಗಿದ್ದೇನೆ. ಯುಕ್ತಿಯುಳ್ಳ ಕಲ್ಪನಾ ಶಕ್ತಿಯ ತಿಳುವಳಿಕೆಯನ್ನು ನಾನು ಕಂಡುಕೊಳ್ಳುತ್ತೇನೆ. 13. ಕರ್ತನ ಭಯವು ದುಷ್ಟತ್ವವನ್ನು ಹಗೆಮಾಡುವದು; ಗರ್ವ ಅಹಂಭಾವ ಕೆಟ್ಟದಾರಿ ಮೂರ್ಖನಬಾಯಿ ಇವುಗಳನ್ನು ನಾನು ಹಗೆಮಾಡು ತ್ತೇನೆ. 14. ಆಲೋಚನೆಯೂ ಸುಜ್ಞಾನವೂ ನನ್ನವು; ವಿವೇಕವು ನಾನೇ. ನನಗೆ ಸಾಮರ್ಥ್ಯವಿದೆ. 15. ನನ್ನ ಮೂಲಕ ರಾಜರು ಆಳುವರು. ಪ್ರಧಾನರು ತೀರ್ಪು ಕೊಡುವರು. 16. ನನ್ನಿಂದ ಅಧಿಪತಿಗಳೂ ಕೀರ್ತಿವಂತರೂ ಭೂಮಿಯ ಎಲ್ಲಾ ನ್ಯಾಯಾಧಿಪತಿಗಳೂ ಆಳುವರು. 17. ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ. ಶೀಘ್ರವಾಗಿ ನನ್ನನ್ನು ಹುಡುಕುವವರು ನನ್ನನ್ನು ಕಂಡುಕೊಳ್ಳುವರು. 18. ಐಶ್ವರ್ಯವೂ ಘನತೆಯೂ ಹೌದು, ಶ್ರೇಷ್ಠ ಸಂಪತ್ತೂ ನೀತಿಯೂ ನನ್ನೊಂದಿಗಿವೆ. 19. ನನ್ನ ಫಲವು ಬಂಗಾರಕ್ಕಿಂತಲೂ ಹೌದು, ಚೊಕ್ಕ ಬಂಗಾರಕ್ಕಿಂತಲೂ ನನ್ನ ಆದಾಯವು ಆಯಲ್ಪಟ್ಟ ಬೆಳ್ಳಿಗಿಂತಲೂ ಶ್ರೇಷ್ಠವಾಗಿದೆ. 20. ನೀತಿಯ ಮಾರ್ಗದಲ್ಲಿ ನ್ಯಾಯದ ದಾರಿಗಳ ಮಧ್ಯದಲ್ಲಿ ನಾನು ನಡಿಸುತ್ತೇನೆ. 21. ನನ್ನನ್ನು ಪ್ರೀತಿಸುವವರು ಸಂಪತ್ತನ್ನು ಬಾಧ್ಯವಾಗಿ ಹೊಂದಿದಂತೆ ನಾನು ಅವರ ಬೊಕ್ಕಸ ಗಳನ್ನು ತುಂಬಿಸುವೆನು. 22. ತನ್ನ ಮಾರ್ಗದ ಹಾದಿಯಲ್ಲಿ ಆತನ ಪುರಾತನ ಕಾರ್ಯಗಳಿಗಿಂತ ಮೊದಲು ಕರ್ತನು ನನ್ನನ್ನು ಪಡೆದು ಕೊಂಡಿದ್ದನು. 23. ನಿತ್ಯತ್ವದಿಂದ ಇಲ್ಲವೆ ಆರಂಭದಿಂದ, ಭೂಮಿಯು ಇರುವದಕ್ಕೆ ಮುಂಚೆ ನಾನು ಸ್ಥಾಪಿಸಲ್ಪ ಟ್ಟೆನು. 24. ಅಗಾಧಗಳು ಇಲ್ಲದೆ ಇರುವಾಗ, ನೀರಿನಿಂದ ಸಮೃದ್ಧಿಯಾದ ಬುಗ್ಗೆಗಳು ಇಲ್ಲದೆ ಇರುವಾಗ ನಾನು ಉಂಟುಮಾಡಲ್ಪಟ್ಟೆನು. 25. ಬೆಟ್ಟಗುಡ್ಡಗಳು ಸ್ಥಾಪಿಸಲ್ಪ ಡುವದಕ್ಕಿಂತ ಮುಂಚೆ 26. ಭೂಮಿಯನ್ನೂ ಹೊಲ ಗಳನ್ನೂ ಲೋಕದ ಅತ್ಯಧಿಕ ಭಾಗದ ಧೂಳನ್ನೂ ಆತನು ಇನ್ನು ನಿರ್ಮಿಸದೆ ಇರುವಾಗಲೇ ನಾನು ಉಂಟು ಮಾಡಲ್ಪಟ್ಟೆನು. 27. ಆತನು ಆಕಾಶಗಳನ್ನು ಸಿದ್ಧಪಡಿಸಿದಾಗ ಅಗಾಧದ ಮೇಲೆ ಚಕ್ರವನ್ನು ಹಾಕಿ ದಾಗ 28. ಮೇಲೆ ಮೇಘಗಳನ್ನು ಆತನು ಸ್ಥಾಪಿಸಿದಾಗ ಅಗಾಧದ ಬುಗ್ಗೆಗಳನ್ನು ಆತನು ಬಲಪಡಿಸಿದಾಗ 29. ಪ್ರವಾಹಗಳು ತನ್ನ ಆಜ್ಞೆಯನ್ನು ವಿಾರದಂತೆ ಸಮು ದ್ರಕ್ಕೆ ಆತನು ನಿಯಮವನ್ನು ಕೊಟ್ಟಿದಾಗ ಭೂಮಿಯ ಅಸ್ತಿವಾರಗಳನ್ನು ಆತನು ನೇಮಿಸಿದಾಗ ನಾನು ಆತ ನೊಂದಿಗೆ ಇದ್ದೆನು. 30. ಆಗ ಆತನೊಂದಿಗೆ ಬೆಳೆದ ವನಂತೆ ಆತನ ಹತ್ತಿರ ಇದ್ದೆನು; ದಿನಾಲು ನಾನು ಆತನ ಆನಂದವಾಗಿ ಆತನ ಮುಂದೆ ಯಾವಾಗಲೂ ಸಂತೋಷಿಸುತ್ತಿದ್ದೆನು. 31. ಆತನ ಭೂಮಿಯ ವಾಸ ಸ್ಥಳದ ಭಾಗದಲ್ಲಿ ಸಂತೋಷಿಸುತ್ತಿದ್ದೆನು. ಮನುಷ್ಯರ ಕುಮಾರರೊಂದಿಗೆ ನನ್ನ ಆನಂದವಿದ್ದಿತು. 32. ಆದದರಿಂದ ಓ ಮಕ್ಕಳೇ, ಈಗ ನನ್ನ ಕಡೆಗೆ ಕಿವಿಗೊಡಿರಿ; ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರು. 33. ಶಿಕ್ಷಣವನ್ನು ಕೇಳಿ ಅದನ್ನು ತಿರಸ್ಕರಿಸದೇ ಜ್ಞಾನವಂತರಾಗಿರ್ರಿ. 34. ನನ್ನ ದ್ವಾರಗಳ ಬಳಿಯಲ್ಲಿ ಪ್ರತಿದಿನ ಕಾಯುತ್ತಾ ನನ್ನ ಬಾಗಲುಗಳ ನಿಲುವು ಗಳಲ್ಲಿ ನಿರೀಕ್ಷಿಸುತ್ತಾ ನನ್ನ ಮಾತುಗಳನ್ನು ಕೇಳುವವನು ಧನ್ಯನು. 35. ನನ್ನನ್ನು ಕಂಡುಕೊಳ್ಳುವವನು ಜೀವವನ್ನು ಕಂಡುಕೊಂಡು ಕರ್ತನ ದಯವನ್ನು ಹೊಂದುವನು. 36. ಆದರೆ ನನಗೆ ವಿರೋಧವಾಗಿ ಪಾಪಮಾಡುವವನು ತನ್ನ ಸ್ವಂತ ಪ್ರಾಣಕ್ಕೆ ಕೇಡುಮಾಡಿಕೊಳ್ಳುತ್ತಾನೆ. ನನ್ನನ್ನು ಹಗೆಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ.
Chapter 9
1. ಜ್ಞಾನವೆಂಬಾಕೆಯು ತನ್ನ ಮನೆಯನ್ನು ಕಟ್ಟಿ ಕೊಂಡಿದ್ದಾಳೆ; ಆಕೆಯು ತನ್ನ ಏಳು ಕಂಬ ಗಳನ್ನು ಕೆತ್ತಿಸಿದ್ದಾಳೆ. 2. ಆಕೆಯು ತನ್ನ ಪಶುಗಳನ್ನು ವಧಿಸಿ, ತನ್ನ ದ್ರಾಕ್ಷಾರಸವನ್ನು ಬೆರಸಿ, ತನ್ನ ಮೇಜನ್ನು ಸಹ ಸಿದ್ಧಪಡಿಸಿದಳು. 3. ಆಕೆಯು ತನ್ನ ಕನ್ನಿಕೆಯರನ್ನು ಕಳುಹಿಸುತ್ತಾಳೆ. ಆಕೆಯು ಪಟ್ಟಣದ ಅತಿ ಉನ್ನತ ಸ್ಥಳಗಳಲ್ಲಿ-- 4. ಮೂರ್ಖನು ಯಾವನೋ ಅವನು ಇಲ್ಲಿಗೆ ತಿರುಗಲಿ ಎಂದು ಕೂಗುತ್ತಾಳೆ. ತಿಳುವಳಿಕೆ ಇಲ್ಲದೆ ಇರುವವನಿಗೆ ಆಕೆಯು-- 5. ಬಾ, ನನ್ನ ರೊಟ್ಟಿಯನ್ನು ತಿಂದು ನಾನು ಬೆರಸಿದ ದ್ರಾಕ್ಷಾ ರಸವನ್ನು ಕುಡಿ ಎಂದೂ 6. ಮೂಢರನ್ನು ಬಿಟ್ಟು ಬಾಳು ಮತ್ತು ವಿವೇಕದ ಮಾರ್ಗದಲ್ಲಿ ಹೋಗು ಎಂದೂ ಕೂಗುತ್ತಾಳೆ. 7. ಪರಿಹಾಸ್ಯಮಾಡುವವನನ್ನು ಗದರಿಸುವವನು ತನಗೆ ತಾನೇ ಅವಮಾನಕ್ಕೆ ಗುರಿಮಾಡಿಕೊಳ್ಳುವನು; ದುಷ್ಟನನ್ನು ಗದರಿಸುವವನು ತನಗೆ ತಾನೇ ಕಳಂಕವನ್ನು ತಂದುಕೊಳ್ಳುವನು. 8. ಪರಿಹಾಸ್ಯಮಾಡುವವನು ನಿನ್ನನ್ನು ಹಗೆಮಾಡದಂತೆ ಅವನನ್ನು ಗದರಿಸಬೇಡ. ಜ್ಞಾನಿಯನ್ನು ಗದರಿಸಿದರೆ ಅವನು ನಿನ್ನನ್ನು ಪ್ರೀತಿ ಮಾಡುವನು. 9. ಜ್ಞಾನಿಗೆ ಶಿಕ್ಷಣ ಮಾಡಿದರೆ ಅವನು ಇನ್ನೂ ಹೆಚ್ಚಾಗಿ ಜ್ಞಾನವಂತನಾಗಿರುವನು; ನೀತಿವಂತ ನಿಗೆ ಬೋಧಿಸಿದರೆ ಅವನು ಜ್ಞಾನವನ್ನು ಹೆಚ್ಚಿಸಿ ಕೊಳ್ಳುವನು. ಕರ್ತನ ಭಯವೇ ಜ್ಞಾನಕ್ಕೆ ಮೂಲವು. 10. ಪರಿಶುದ್ಧರ ತಿಳುವಳಿಕೆಯೇ ವಿವೇಕವು. 11. ನನ್ನ ಮೂಲಕ ನಿನ್ನ ದಿನಗಳು ಹೆಚ್ಚುವವು; ನಿನ್ನ ಜೀವನದ ವರುಷಗಳು ವೃದ್ಧಿಯಾಗುವವು. 12. ನೀನು ಜ್ಞಾನಿಯಾ ಗಿದ್ದರೆ ನಿನ್ನಷ್ಟಕ್ಕೆ ನೀನೇ ಜ್ಞಾನಿಯಾಗಿರುವಿ; ನೀನು ನಿಂದಿಸುವವನಾದರೆ ನೀನೇ ಅದನ್ನು ಅನುಭವಿಸುವಿ. 13. ಬುದ್ಧಿಹೀನಳಾದ ಸ್ತ್ರೀಯು ಕೂಗಾಟದವಳು. ಅವಳು ಅಜ್ಞಾನಿ; ಏನೂ ತಿಳಿಯದವಳು. 14. ತನ್ನ ಮನೆಯ ಬಾಗಲಿನಲ್ಲಿ ಪಟ್ಟಣದ ಎತ್ತರವಾದ ಸ್ಥಳಗಳ ಪೀಠದ ಮೇಲೆ ಕೂತುಕೊಂಡಿರುತ್ತಾಳೆ. 15. ಮಾರ್ಗಕ್ಕನುಸಾರವಾಗಿ ಹೋಗುವ ಪ್ರಯಾಣಿಕ ರನ್ನು ಕರೆಯುತ್ತಾಳೆ. 16. ಯಾವನು ಮೂಢನೋ ಅವನು ಇಲ್ಲಿಗೆ ತಿರುಗಲಿ; ವಿವೇಕವಿಲ್ಲದವನಿಗೆ ಆಕೆಯು-- 17. ಕದಿಯಲ್ಪಟ್ಟ ನೀರುಗಳು ಸಿಹಿಯಾಗಿವೆ ರಹಸ್ಯ ದಲ್ಲಿ ತಿನ್ನುವ ರೊಟ್ಟಿಯು ರುಚಿಯಾಗಿದೆ ಎಂದು ಹೇಳುತ್ತಾಳೆ. 18. ಆದರೆ ಸತ್ತವರು ಅಲ್ಲಿದ್ದಾರೆಂದೂ ಪಾತಾಳದ ಅಗಾಧಗಳಲ್ಲಿ ಅವಳ ಅಥಿತಿಗಳು ಇದ್ದಾ ರೆಂದೂ ಅವನಿಗೆ ತಿಳಿಯದು.
Chapter 10
1. ಜ್ಞಾನಿಯಾದ ಮಗನು ತಂದೆಗೆ ಸಂತೋಷವನ್ನುಂಟು ಮಾಡುತ್ತಾನೆ; ಆಜ್ಞಾನಿ ಯಾದ ಮಗನಾದರೋ ತನ್ನ ತಾಯಿಗೆ ಭಾರವಾಗಿ ದ್ದಾನೆ. 2. ಕೆಟ್ಟತನದ ಸಂಪತ್ತುಗಳು ಪ್ರಯೋಜನವಿಲ್ಲ; ನೀತಿಯು ಮರಣದಿಂದ ಬಿಡಿಸುತ್ತದೆ. 3. ನೀತಿವಂತನ ಪ್ರಾಣವನ್ನು ಕರ್ತನು ಹಸಿವೆಗೊಳಿಸನು; ದುಷ್ಟರ ಆಸ್ತಿಯನ್ನು ಆತನು ತಳ್ಳಿಹಾಕುತ್ತಾನೆ. 4. ಬಿಗಿ ಇಲ್ಲದ ಕೈಯಿಂದ ವ್ಯಾಪಾರ ಮಾಡುವವನು ದರಿದ್ರನಾಗು ವನು; ಆದರೆ ಚುರುಕಾದ ಕೈ ಐಶ್ವರ್ಯವನ್ನುಂಟು ಮಾಡುತ್ತದೆ. 5. ಬೇಸಿಗೆಯಲ್ಲಿ ಕೂಡಿಸುವವನು ಬುದ್ಧಿ ವಂತನಾದ ಮಗನು ಸುಗ್ಗಿಯಲ್ಲಿ ನಿದ್ರೆಮಾಡುವವನು ನಾಚಿಕೆಪಡಿಸುವ ಮಗನು. 6. ನೀತಿವಂತರ ತಲೆಯ ಮೇಲೆ ಆಶೀರ್ವಾದಗಳು ಇವೆ; ಆದರೆ ದುಷ್ಟನ ಬಾಯಿಯನ್ನು ಬಲಾತ್ಕಾರವು ಮುಚ್ಚುತ್ತದೆ. 7. ನೀತಿ ವಂತರ ಸ್ಮರಣೆಯು ಧನ್ಯಕರವಾಗಿದೆ; ದುಷ್ಟರ ಹೆಸರು ಕೊಳೆಯುತ್ತದೆ. 8. ಜ್ಞಾನ ಹೃದಯದವರು ಆಜ್ಞೆಗಳನ್ನು ಸ್ವೀಕರಿಸುವರು. ಹರಟೆಯ ಮೂರ್ಖನು ಬೀಳುವನು. 9. ಯಥಾರ್ಥವಾಗಿ ನಡೆಯುತ್ತಿರುವವನು ದೃಢವಾಗಿ ನಡೆಯುತ್ತಾನೆ; ತನ್ನ ಮಾರ್ಗಗಳನ್ನು ಡೊಂಕು ಮಾಡು ತ್ತಿರುವವನು ಬಯಲಿಗೆ ಬರುವನು. 10. ಕಣ್ಣು ಮಿಟಕಿ ಸುವವನು ದುಃಖವನ್ನುಂಟುಮಾಡುತ್ತಾನೆ; ಹರಟೆಯ ಮೂರ್ಖನು ಬೀಳುವನು. 11. ನೀತಿವಂತನ ಬಾಯಿ ಯು ಜೀವಕರವಾದ ಬಾವಿ; ದುಷ್ಟನ ಬಾಯನ್ನು ಬಲಾತ್ಕಾರವು ಮುಚ್ಚುತ್ತದೆ. 12. ದ್ವೇಷವು ಜಗಳಗಳನ್ನು ಎಬ್ಬಿಸುತ್ತದೆ; ಪ್ರೀತಿಯು ಎಲ್ಲಾ ಪಾಪಗಳನ್ನು ಮುಚ್ಚು ತ್ತದೆ. 13. ವಿವೇಕವುಳ್ಳ ತುಟಿಗಳಲ್ಲಿ ಜ್ಞಾನವು ಸಿಕ್ಕು ತ್ತದೆ; ವಿವೇಕವಿಲ್ಲದವನ ಬೆನ್ನಿಗೆ ಬೆತ್ತವೇ ಸರಿ. 14. ಜ್ಞಾನಿ ಗಳು ತಿಳುವಳಿಕೆಯನ್ನು ಇಟ್ಟುಕೊಳ್ಳುತ್ತಾರೆ; ಆದರೆ ಮೂರ್ಖನ ಬಾಯಿ ನಾಶನಕ್ಕೆ ಸವಿಾಪವಾಗಿದೆ. 15. ಐಶ್ವರ್ಯವಂತನ ಸಂಪತ್ತು ಅವನ ಬಲವಾದ ಪಟ್ಟಣ; ಬಡವರ ನಾಶನವು ಅವರ ಬಡತನವೇ. 16. ನೀತಿವಂತರ ಪ್ರಯಾಸವು ಜೀವಕ್ಕಾಗಿಯೂ ದುಷ್ಟರ ಫಲವು ಪಾಪಕ್ಕಾಗಿಯೂ ಇವೆ. 17. ಶಿಕ್ಷಣವನ್ನು ಕೈಕೊಳ್ಳುವವನು ಜೀವನದ ಮಾರ್ಗದಲ್ಲಿ ಇದ್ದಾನೆ; ಗದರಿಕೆಯನ್ನು ತಿರಸ್ಕರಿಸುವವನು ತಪ್ಪುಮಾಡುತ್ತಾನೆ. 18. ಸುಳ್ಳಾಡುವ ತುಟಿಗಳಿಂದ ಹಗೆಯನ್ನಿಟ್ಟುಕೊಂಡ ವನೂ ಚಾಡಿಹೇಳುವವನೂ ಮೂರ್ಖನು. 19. ಹೆಚ್ಚು ಮಾತುಗಳಿಂದ ಪಾಪಕ್ಕೆ ಕೊರತೆ ಇರುವದಿಲ್ಲ. ತನ್ನ ತುಟಿಗಳನ್ನು ತಡೆಯುವವನು ಜ್ಞಾನವಂತನು. 20. ನೀತಿ ವಂತರ ನಾಲಿಗೆಯು ಚೊಕ್ಕ ಬೆಳ್ಳಿಯಂತಿದೆ; ದುಷ್ಟರ ಹೃದಯವು ಅಲ್ಪವಾದದ್ದು. 21. ನೀತಿವಂತರ ತುಟಿಗಳು ಅನೇಕರನ್ನು ಪೋಷಿಸುತ್ತವೆ. ಜ್ಞಾನದ ಕೊರತೆಯಿಂದ ಅವಿವೇಕಿಗಳು ಸಾಯುತ್ತಾರೆ. 22. ಕರ್ತನ ಆರ್ಶೀ ವಾದವು ಐಶ್ವರ್ಯವನ್ನುಂಟು ಮಾಡುವದು. ಅದ ರೊಂದಿಗೆ ಆತನು ಯಾವ ದುಃಖವನ್ನೂ ಸೇರಿಸುವ ದಿಲ್ಲ. 23. ಬುದ್ಧಿಹೀನನಿಗೆ ಕೇಡು ಮಾಡುವದು ಹಾಸ್ಯಾ ಸ್ಪದವಾಗಿದೆ; ಆದರೆ ಗ್ರಹಿಸುವವನಿಗೆ ಜ್ಞಾನವಿದೆ. 24. ದುಷ್ಟನ ಭಯವು ಅವನ ಮೇಲೆ ಬರುವದು; ನೀತಿವಂತರ ಇಷ್ಟವು ಸಫಲವಾಗುವದು. 25. ಹೇಗೆ ಬಿರುಗಾಳಿಯು ಬೀಸುವದೋ ಹಾಗೆಯೇ ದುಷ್ಟರು ಇಲ್ಲವಾಗುವರು. ನೀತಿವಂತನು ಶಾಶ್ವತವಾದ ಅಸ್ತಿವಾರ ವಾಗಿದ್ದಾನೆ. 26. ಹಲ್ಲುಗಳಿಗೆ ಹುಳಿಯೂ ಕಣ್ಣುಗಳಿಗೆ ಹೊಗೆಯೂ ಹೇಗೋ ಹಾಗೆಯೇ ತನ್ನನ್ನು ಕಳುಹಿಸು ವವರಿಗೆ ಸೋಮಾರಿಯೂ ಇರುವನು. 27. ಕರ್ತನ ಭಯವು ದಿನಗಳನ್ನು ಹೆಚ್ಚಿಸುತ್ತದೆ; ದುಷ್ಟರ ವರುಷ ಗಳು ಕಡಿಮೆ ಮಾಡಲ್ಪಡುವವು. 28. ನೀತಿವಂತರ ನಿರೀ ಕ್ಷೆಯು ಆನಂದಕರವಾಗಿರುವದು; ಆದರೆ ದುಷ್ಟರ ನಿರೀಕ್ಷೆಯು ನಾಶವಾಗುವದು. 29. ಯಥಾರ್ಥವಂತರಿಗೆ ಕರ್ತನ ಮಾರ್ಗವು ಬಲವಾಗಿದೆ; ಅಕ್ರಮ ಮಾಡುವ ವರಿಗೆ ಅದು ನಾಶನವಾಗಿರುವದು. 30. ನೀತಿವಂತರು ಎಂದಿಗೂ ಕದಲುವದೇ ಇಲ್ಲ; ದುಷ್ಟರು ಭೂಮಿಯಲ್ಲಿ ವಾಸಮಾಡುವದಿಲ್ಲ. 31. ನೀತಿವಂತರ ಬಾಯಿಯು ಜ್ಞಾನವನ್ನು ಫಲಿಸುತ್ತದೆ; ಮೂರ್ಖನ ನಾಲಿಗೆಯು ಕತ್ತರಿಸಲ್ಪಡುವದು. 32. ಯಾವದು ಅಂಗೀಕರಿಸ ತಕ್ಕದ್ದೋ ಅದು ನೀತಿವಂತರ ತುಟಿಗಳಿಗೆ ತಿಳಿಯು ವದು; ದುಷ್ಟರ ಬಾಯಿಯು ಮೂರ್ಖತನವನ್ನು ಹೊರಗೆಡುವುತ್ತದೆ.
Chapter 11
1. ಮೋಸದ ತಕ್ಕಡಿ ಕರ್ತನಿಗೆ ಅಸಹ್ಯವಾಗಿದೆ; ನ್ಯಾಯದ ತೂಕ ಆತನ ಆನಂದವು. 2. ಗರ್ವ ಬಂದಾಗ ನಾಚಿಕೆಯೂ ಬರುತ್ತದೆ; ದೀನರಲ್ಲಿ ಜ್ಞಾನವಿದೆ. 3. ಯಥಾರ್ಥವಂತರ ಪ್ರಾಮಾಣಿಕತೆ ಅವರನ್ನು ನಡಿಸುವದು; ಅಪರಾಧದ ಮೂರ್ಖತನವು ಅವರನ್ನು ನಾಶಪಡಿಸುವದು. 4. ಉಗ್ರತೆಯ ದಿನದಲ್ಲಿ ಐಶ್ವರ್ಯವು ಲಾಭಕರವಾಗುವದಿಲ್ಲ; ನೀತಿಯು ಮರಣ ದಿಂದ ಬಿಡಿಸುತ್ತದೆ. 5. ಸಂಪೂರ್ಣನ ನೀತಿಯು ಅವನ ಮಾರ್ಗವನ್ನು ಸರಾಗಮಾಡುವದು; ದುಷ್ಟನು ತನ್ನ ದುಷ್ಟತ್ವದಿಂದಲೇ ಬೀಳುವನು. 6. ಯಥಾರ್ಥವಂತರ ನೀತಿಯು ಅವರನ್ನು ಬಿಡಿಸುವದು; ತಮ್ಮ ಸ್ವಂತ ತುಂಟ ತನದಲ್ಲಿ ದೋಷಿಗಳು ಸಿಕ್ಕಿಬೀಳುವರು. 7. ದುಷ್ಟನು ಸಾಯುವಾಗ ಅವನ ನಿರೀಕ್ಷೆಗಳು ಹಾಳಾಗುವವು; ಅನೀತಿವಂತನ ನಿರೀಕ್ಷೆಯು ನಾಶವಾಗುವದು. 8. ನೀತಿವಂತನು ಇಕ್ಕಟ್ಟಿನಿಂದ ತಪ್ಪಿಸಿಕೊಳ್ಳುತ್ತಾನೆ; ಅವನ ಸ್ಥಳದಲ್ಲಿ ದುಷ್ಟನು ಬರುತ್ತಾನೆ. 9. ಒಬ್ಬ ಕಪಟಿಯು ಬಾಯಿಂದ ತನ್ನ ನೆರೆಯವನನ್ನು ಹಾಳುಮಾಡುತ್ತಾನೆ; ತಿಳುವಳಿಕೆಯ ಮೂಲಕ ನೀತಿವಂತನು ಬಿಡಿಸಲ್ಪ ಡುವನು. 10. ನೀತಿವಂತರು ಚೆನ್ನಾಗಿದ್ದರೆ ಪಟ್ಟಣವು ಉಲ್ಲಾಸಿಸುತ್ತದೆ; ದುಷ್ಟರು ನಾಶವಾದರೆ ಆರ್ಭಟವಿರು ತ್ತದೆ. 11. ಯಥಾರ್ಥವಂತರ ಆಶೀರ್ವಾದದಿಂದ ಪಟ್ಟ ಣವು ಹೆಚ್ಚಿಸಲ್ಪಡುತ್ತದೆ. ದುಷ್ಟರ ಬಾಯಿಂದ ಅದು ಕೆಡವಲ್ಪಡುತ್ತದೆ. 12. ಜ್ಞಾನವಿಲ್ಲದವನು ತನ್ನ ನೆರೆಯ ವನನ್ನು ಹೀನೈಸುತ್ತಾನೆ; ವಿವೇಕಿಯು ಮೌನವಾಗಿರು ತ್ತಾನೆ. 13. ಚಾಡಿಕೋರನು ರಹಸ್ಯಗಳನ್ನು ಬಹಿರಂಗ ಪಡಿಸುತ್ತಾನೆ. ನಂಬಿಕೆಯ ಆತ್ಮವುಳ್ಳವನು ಸಂಗತಿಯನ್ನು ಮುಚ್ಚುತ್ತಾನೆ. 14. ಆಲೋಚನೆ ಇಲ್ಲದಿರುವಲ್ಲಿ ಜನರು ಬೀಳುತ್ತಾರೆ; ಸಲಹೆಗಾರರ ಸಮೂಹದಲ್ಲಿ ಭದ್ರತೆ ಇದೆ. 15. ಅನ್ಯನಿಗೆ ಹೊಣೆಯಾಗುವವನು ಹಾನಿಗೆ ಗುರಿಯಾಗುತ್ತಾನೆ; ಹೊಣೆಗಾರತ್ವವನ್ನು ಹಗೆಮಾಡಿ ಕೊಳ್ಳುವವನು ಭದ್ರವಾಗಿರುವನು. 16. ಕೃಪೆಯುಳ್ಳ ಸ್ತ್ರೀಯು ತನ್ನ ಗೌರವವನ್ನು ಕಾಪಾಡಿಕೊಳ್ಳುತ್ತಾಳೆ. ಬಲಿಷ್ಠರು ಐಶ್ವರ್ಯವನ್ನು ಕಾಪಾಡಿಕೊಳ್ಳುತ್ತಾರೆ. 17. ಕರುಣೆಯುಳ್ಳವನು ತನ್ನ ಪ್ರಾಣಕ್ಕೆ ಒಳ್ಳೇದನ್ನು ಮಾಡಿಕೊಳ್ಳುತ್ತಾನೆ; ಕಠೋರಿಯು ತನ್ನ ಶರೀರವನ್ನು ಬಾಧಿಸಿಕೊಳ್ಳುತ್ತಾನೆ. 18. ದುಷ್ಟನು ಮೋಸದ ಕೃತ್ಯವನ್ನು ಮಾಡುತ್ತಾನೆ; ನೀತಿಯನ್ನು ಬಿತ್ತುವವನಿಗೆ ನಿಸ್ಸಂದೇಹ ವಾಗಿ ಬಹುಮಾನವಿರುವದು. 19. ನೀತಿಯು ಜೀವಕ್ಕೆ ಒಲಿಯುತ್ತದೆ; ಕೆಟ್ಟದ್ದನ್ನು ಹಿಂದಟ್ಟುವವನು ತನ್ನ ಮರ ಣಕ್ಕೆ ಹಿಂದಟ್ಟುತ್ತಾನೆ. 20. ಮೂರ್ಖ ಹೃದಯವುಳ್ಳವರು ಕರ್ತನಿಗೆ ಅಸಹ್ಯವಾದವರು; ತಮ್ಮ ಮಾರ್ಗದಲ್ಲಿ ಯಥಾರ್ಥವಾಗಿ ಇರುವವರು ಆತನ ಆನಂದವಾಗಿ ದ್ದಾರೆ. 21. ಕೈಗೆ ಕೈ ಕೊಟ್ಟರೂ ದುಷ್ಟನು ಶಿಕ್ಷಿಸಲ್ಪಡದೆ ಇರುವದಿಲ್ಲ; ನೀತಿವಂತರ ವಂಶವು ತಪ್ಪಿಸಿಕೊಳ್ಳುವದು. 22. ಹಂದಿಯ ಮೂಗಿನಲ್ಲಿರುವ ಬಂಗಾರದ ಒಡವೆಯು ಹೇಗೋ ಹಾಗೆಯೇ ವಿವೇಕವಿಲ್ಲದ ಸುಂದರವಾದ ಸ್ತ್ರೀಯು ಇರುವಳು. 23. ನೀತಿವಂತರು ಒಳ್ಳೇಯದನ್ನು ಮಾತ್ರ ಅಪೇಕ್ಷಿಸುತ್ತಾರೆ; ದುಷ್ಟರ ಅಪೇಕ್ಷೆಯು ಕೋಪ ವಾಗಿದೆ. 24. ಚದುರಿಸಿದಾಗ್ಯೂ ವೃದ್ಧಿಯಾಗುತ್ತದೆ; ಬೇಕಾದದ್ದಕ್ಕಿಂತ ಹೆಚ್ಚಿನದನ್ನು ಬಿಗಿಹಿಡಿಯುವಂಥದ್ದು ಬಡತನಕ್ಕೆ ನಡಿಸುತ್ತದೆ. 25. ಉದಾರಿಯು ಪುಷ್ಠನಾಗು ವನು; ನೀರು ಹಾಯಿಸುವವನಿಗೆ ನೀರು ದೊರೆಯು ವದು. 26. ಧಾನ್ಯವನ್ನು ಬಿಗಿಹಿಡಿಯುವವನನ್ನು ಜನರು ಶಪಿಸುವರು; ಅದನ್ನು ಮಾರುವವನ ತಲೆಯ ಮೇಲೆ ಆಶೀರ್ವಾದವು ನೆಲೆಯಾಗಿರುವದು. 27. ಒಳ್ಳೇದನ್ನು ಸೂಕ್ಷ್ಮವಾಗಿ ಹುಡುಕುವವನು ದಯೆಯನ್ನು ಹೊಂದು ತ್ತಾನೆ; ಆದರೆ ಕೇಡನ್ನು ಹುಡುಕುವವನಿಗೆ ಕೇಡೇ ಆಗುವದು. 28. ತನ್ನ ಐಶ್ವರ್ಯವನ್ನು ನಂಬಿದವನು ಬಿದ್ದುಹೋಗುವನು; ನೀತಿವಂತರು ಕೊಂಬೆಯ ಹಾಗೆ ಚಿಗುರುವರು. 29. ತನ್ನ ಮನೆಯವರನ್ನು ಬಾಧಿಸುವವನು ಗಾಳಿಯನ್ನು ಬಾಧ್ಯವಾಗಿ ಹೊಂದುವನು; ಜ್ಞಾನವುಳ್ಳ ಹೃದಯದವನಿಗೆ ಅವಿವೇಕಿಯು ಸೇವಕನಾಗಿರುವನು. 30. ನೀತಿವಂತರ ಫಲವು ಜೀವವೃಕ್ಷ; ಆತ್ಮಗಳನ್ನು ಗೆಲ್ಲು ವವನು ಜ್ಞಾನಿಯಾಗಿದ್ದಾನೆ. 31. ಇಗೋ, ಭೂಮಿಯ ಮೇಲೆ ನೀತಿವಂತರು ಪ್ರತಿಫಲವನ್ನು ಹೊಂದುವರು; ದುಷ್ಟನೂ ಪಾಪಿಯೂ ಎಷ್ಟೋ ಹೆಚ್ಚಾಗಿ ಪ್ರತಿಫಲ ವನ್ನು ಹೊಂದುತ್ತಾರೆ.
Chapter 12
1. ಶಿಕ್ಷಣವನ್ನು ಪ್ರೀತಿಸುವವನು ತಿಳುವಳಿಕೆಯನ್ನು ಪ್ರೀತಿಸುವವನಾಗಿದ್ದಾನೆ; ಗದರಿಕೆ ಯನ್ನು ಹಗೆಮಾಡುವವನು ಪಶುಪ್ರಾಯನು. 2. ಒಳ್ಳೆ ಯವನು ಕರ್ತನ ದಯೆಯನ್ನು ಹೊಂದುತ್ತಾನೆ; ಕುಯುಕ್ತಿ ಮಾಡುವವನನ್ನು ಆತನು ದುಷ್ಟನೆಂದು ಖಂಡಿಸುತ್ತಾನೆ. 3. ಯಾವನೂ ದುಷ್ಟತನದಿಂದ ಸ್ಥಿರವಾಗುವದಿಲ್ಲ; ನೀತಿವಂತರ ಬೇರು ಕದಲುವದಿಲ್ಲ. 4. ಗುಣವತಿಯಾದ ಸ್ತ್ರೀಯು ತನ್ನ ಪತಿಗೆ ಕಿರೀಟ; ನಾಚಿಕೆಪಡಿಸುವವಳು ಅವನ ಎಲುಬುಗಳಿಗೆ ಕೊಳೆ ಯುವಿಕೆಯಂತೆ ಇರುವಳು. 5. ನೀತಿವಂತರ ಆಲೋ ಚನೆಗಳು ನ್ಯಾಯವಾಗಿವೆ; ದುಷ್ಟರ ಆಲೋಚನೆಗಳು ಮೋಸ. 6. ದುಷ್ಟರ ಮಾತುಗಳು ರಕ್ತಕ್ಕಾಗಿ ಹೊಂಚು ಹಾಕುತ್ತವೆ; ಯಥಾರ್ಥವಂತರ ಬಾಯಿಯು ಅವರನ್ನು ಬಿಡಿಸುವದು. 7. ದುಷ್ಟರು ಕೆಡವಲ್ಪಟ್ಟು ಇಲ್ಲದೇ ಹೋಗುವರು; ನೀತಿವಂತರ ಮನೆಯು ನಿಲ್ಲುವದು. 8. ತನ್ನ ಜ್ಞಾನಕ್ಕನುಸಾರವಾಗಿ ಒಬ್ಬ ಮನುಷ್ಯನು ಹೊಗ ಳಲ್ಪಡುವನು; ವಕ್ರಹೃದಯವುಳ್ಳವನು ತಿರಸ್ಕರಿಸಲ್ಪಡು ವನು. 9. ರೊಟ್ಟಿಯ ಕೊರತೆ ಇದ್ದು ತನ್ನನ್ನು ತಾನೇ ಘನಪಡಿಸಿಕೊಳ್ಳುವವನಿಗಿಂತಲೂ ಸೇವಕನುಳ್ಳವನಾಗಿ ತಿರಸ್ಕರಿಸಲ್ಪಡುವವನೇ ಲೇಸು. 10. ನೀತಿವಂತನು ತನ್ನ ಪಶುವಿನ ಪ್ರಾಣವನ್ನು ರಕ್ಷಿಸುತ್ತಾನೆ. ಆದರೆ ದುಷ್ಟರ ಅಂತಃಕರುಣೆಯು ಕ್ರೂರತನವೇ. 11. ತನ್ನ ಹೊಲವನ್ನು ವ್ಯವಸಾಯ ಮಾಡುವವನು ರೊಟ್ಟಿಯಿಂದ ತೃಪ್ತಿ ಹೊಂದುವನು; ನಿಷ್ಪ್ರಯೋಜಕರನ್ನು ಹಿಂಬಾಲಿಸುವ ವನು ವಿವೇಕ ಶೂನ್ಯನು. 12. ದುಷ್ಟರು ಕೆಟ್ಟವರ ಬಲೆಯನ್ನು ಅಪೇಕ್ಷಿಸುತ್ತಾರೆ; ನೀತಿವಂತರ ಬೇರು ಫಲವನ್ನು ಕೊಡುತ್ತದೆ. 13. ತನ್ನ ತುಟಿಗಳ ದೋಷದಿಂದ ದುಷ್ಟನು ಉರ್ಲಿಗೆ ಬೀಳುವನು; ನೀತಿವಂತರು ಇಕ್ಕಟ್ಟಿ ನೊಳಗಿಂದ ತಪ್ಪಿಸಿಕೊಳ್ಳುವರು. 14. ತನ್ನ ಬಾಯಿಯ ಫಲದ ಮುಖಾಂತರ ಒಬ್ಬ ಮನುಷ್ಯನು ಒಳ್ಳೆಯದ ರಿಂದ ತೃಪ್ತನಾಗುವನು; ಅವನ ಕೈಗಳ ಪ್ರತಿಫಲವು ಅವನಿಗೆ ಕೊಡಲ್ಪಡುವದು. 15. ಅವಿವೇಕಿಯ ಮಾರ್ಗ ವು ತನ್ನ ಕಣ್ಣುಗಳಿಗೆ ನೆಟ್ಟಗಾಗಿದೆ; ಆಲೋಚನೆಗೆ ಕಿವಿಗೊಡುವವನು ಜ್ಞಾನಿಯಾಗಿದ್ದಾನೆ. 16. ಅವಿವೇ ಕಿಯ ಕೋಪವು ತಟ್ಟನೆ ರಟ್ಟಾಗುವದು; ಜಾಣನು ಅವಮಾನವನ್ನು ಮರೆಮಾಡುತ್ತಾನೆ. 17. ಸತ್ಯವನ್ನಾ ಡುವವನು ನ್ಯಾಯವನ್ನೂ ಸುಳ್ಳುಸಾಕ್ಷಿಯು ಮೋಸ ವನ್ನೂ ತೋರ್ಪಡಿಸುತ್ತಾನೆ. 18. ಕತ್ತಿಯ ಇರಿತದ ಹಾಗೆ ಮಾತನಾಡುವದು ಉಂಟು. ಜ್ಞಾನವಂತರ ನಾಲಿಗೆಯು ಆರೋಗ್ಯ. 19. ಸತ್ಯದ ತುಟಿಯು ಸದಾ ಸ್ಥಿರಗೊಳ್ಳು ವದು; ಸುಳ್ಳಾಡುವ ನಾಲಿಗೆಯು ಕ್ಷಣಿಕ. 20. ಕೇಡನ್ನು ಕಲ್ಪಿಸುವವರ ಹೃದಯದಲ್ಲಿ ಮೋಸ; ಸಮಾಧಾನದ ಆಲೋಚನೆಯನ್ನು ಹೇಳುವವರಿಗೆ ಸಂತೋಷ. 21. ನೀತಿವಂತನಿಗೆ ಯಾವ ಕೇಡೂ ಸಂಭವಿಸದು; ದುಷ್ಟರಾದರೋ ಕೇಡಿನಿಂದ ತುಂಬಿಕೊಳ್ಳುವರು. 22. ಸುಳ್ಳಾ ಡುವ ತುಟಿಗಳು ಕರ್ತನಿಗೆ ಅಸಹ್ಯವಾಗಿವೆ. ಸತ್ಯದಿಂದ ನಡೆದುಕೊಳ್ಳುವವರು ಆತನ ಆನಂದವಾಗಿದ್ದಾರೆ. 23. ಜಾಣನು ತಿಳಿದದ್ದನ್ನು ಗುಪ್ತಪಡಿಸುತ್ತಾನೆ. ಅವಿವೇಕಿ ಗಳ ಹೃದಯವು ಅವಿವೇಕತ್ವವನ್ನು ಪ್ರಕಟಿಸುತ್ತದೆ. 24. ಚುರುಕು ಕೈಯುಳ್ಳವನು ಆಳುವನು, ಸೋಮಾರಿ ಗಳು ಕಪ್ಪಕೊಡುವವರಾಗುವರು. 25. ಮನುಷ್ಯನ ಹೃದ ಯದಲ್ಲಿರುವ ಭಾರವು ಅದನ್ನು ಕುಗ್ಗಿಸುವದು; ಒಳ್ಳೆಯ ಮಾತು ಅದನ್ನು ಹಿಗ್ಗುವಂತೆ ಮಾಡುವದು. 26. ನೀತಿ ವಂತನು ತನ್ನ ನೆರೆಯವನಿಗಿಂತ ಶ್ರೇಷ್ಠನಾಗಿದ್ದಾನೆ; ದುಷ್ಟರ ಮಾರ್ಗವು ಅವರನ್ನು ತಪ್ಪು ದಾರಿಗೆ ಎಳೆ ಯುತ್ತದೆ. 27. ಸೋಮಾರಿಯು ಬೇಟೆಯಾಡಿದ್ದನ್ನು ಬೇಯಿಸುವದಿಲ್ಲ; ಆದರೆ ಶ್ರದ್ಧೆಯುಳ್ಳವನ ಆಸ್ತಿಯು ಅಮೂಲ್ಯವಾಗಿದೆ. 28. ನೀತಿಯ ಮಾರ್ಗದಲ್ಲಿ ಜೀವ ವಿದೆ; ಅದರ ದಾರಿಯಲ್ಲಿ ಮರಣವೇ ಇಲ್ಲ.
Chapter 13
1. ಜ್ಞಾನಿಯಾದ ಮಗನು ತನ್ನ ತಂದೆಯ ಬೋಧನೆಯನ್ನು ಕೇಳುತ್ತಾನೆ; ತಿರಸ್ಕರಿಸು ವವನು ಗದರಿಕೆಯನ್ನು ಕೇಳುವದಿಲ್ಲ. 2. ತನ್ನ ಬಾಯಿಯ ಫಲದಿಂದ ಒಬ್ಬ ಮನುಷ್ಯನು ಶ್ರೇಷ್ಠವಾದದ್ದನ್ನು ತಿನ್ನು ವನು; ದೋಷಿಗಳ ಪ್ರಾಣವು ಬಲಾತ್ಕಾರವನ್ನು ತಿನ್ನು ವದು. 3. ತನ್ನ ಬಾಯನ್ನು ಕಾಪಾಡುವವನು ಜೀವ ವನ್ನು ಕಾಯುತ್ತಾನೆ; ತನ್ನ ತುಟಿಗಳನ್ನು ಅಗಲವಾಗಿ ತೆರೆಯುವವನಿಗೆ ನಾಶನವಾಗುವದು. 4. ಸೋಮಾ ರಿಯ ಪ್ರಾಣವು ಅಪೇಕ್ಷಿಸಿದರೂ ಏನೂ ಹೊಂದುವ ದಿಲ್ಲ; ಜಾಗ್ರತೆಯುಳ್ಳವನ ಪ್ರಾಣವು ಪುಷ್ಟಿಯಾಗು ವದು. 5. ನೀತಿವಂತನು ಸುಳ್ಳನ್ನು ಹಗೆಮಾಡುತ್ತಾನೆ; ದುಷ್ಟನು ಹೇಸಿಗೆಯಾಗಿದ್ದು ಅವಮಾನಕ್ಕೆ ಗುರಿಯಾಗು ವನು. 6. ಯಥಾರ್ಥವಂತನನ್ನು ನೀತಿಯು ತನ್ನ ಮಾರ್ಗ ದಲ್ಲಿ ಕಾಪಾಡುತ್ತದೆ; ಕೆಟ್ಟತನವು ಪಾಪಿಯನ್ನು ಕೆಡವುವದು. 7. ತನ್ನನ್ನು ತಾನೇ ಐಶ್ವರ್ಯವಂತನಾಗಿ ಮಾಡಿಕೊಳ್ಳುವವನು ಇದ್ದಾನೆ; ಅವನಿಗೆ ಏನೂ ಇರು ವದಿಲ್ಲ. ತನ್ನನ್ನು ಬಡವನಾಗಿ ಮಾಡಿಕೊಳ್ಳುವವನಿ ದ್ದಾನೆ; ಅವನಿಗೆ ಎಷ್ಟೋ ಐಶ್ವರ್ಯವಿದೆ. 8. ಒಬ್ಬನ ಪ್ರಾಣದ ವಿಮೋಚನೆಯು ಅವನ ಐಶ್ವರ್ಯವೇ; ಬಡವನು ಗದರಿಕೆಯನ್ನು ಕೇಳುವದಿಲ್ಲ. 9. ನೀತಿವಂತರ ಬೆಳಕು ಸಂತೋಷಿಸುತ್ತದೆ; ದುಷ್ಟರ ದೀಪವು ಆರಿ ಹೋಗುವದು. 10. ಗರ್ವದಿಂದ ಕಲಹ ಮಾತ್ರ ಬರುತ್ತದೆ; ಒಳ್ಳೆಯ ಸಲಹೆ ಹೊಂದಿದವರಿಗೆ ಜ್ಞಾನವಿದೆ. 11. ವ್ಯರ್ಥತ್ವದಿಂದ ಹೊಂದಿದ ಐಶ್ವರ್ಯವು ಕಡಿಮೆ ಯಾಗುವದು; ಪ್ರಯಾಸದಿಂದ ಕೂಡಿಸುವವನು ವೃದ್ಧಿ ಗೊಳ್ಳುವನು. 12. ತಡವಾದ ನಿರೀಕ್ಷೆ ಹೃದಯವನ್ನು ಅಸ್ವಸ್ಥತೆ ಮಾಡುತ್ತದೆ; ಆಶೆಯು ಸಫಲವಾದರೆ ಅದು ಜೀವಕರವಾದ ವೃಕ್ಷವು. 13. ವಾಕ್ಯವನ್ನು ಉಲ್ಲಂಘಿಸುವ ವನು ನಾಶವಾಗುವನು; ಆಜ್ಞೆಗೆ ಭಯಪಡುವವನು ಪ್ರತಿಫಲ ಹೊಂದುವನು. 14. ಮರಣದ ಪಾಶಗ ಳಿಂದ ತಪ್ಪಿಸಿಕೊಳ್ಳುವದಕ್ಕೆ ಜ್ಞಾನವಂತರ ಕಟ್ಟಳೆಯು ಜೀವದ ಬುಗ್ಗೆಯಾಗಿದೆ. 15. ಸುವಿವೇಕವು ದಯಾ ಸ್ಪದವು; ದೋಷಕರ ಮಾರ್ಗವು ಕಠಿಣವಾಗಿದೆ. 16. ಪ್ರತಿ ಜಾಣನು ತಿಳುವಳಿಕೆಯಿಂದ ವರ್ತಿಸುತ್ತಾನೆ; ಅವಿವೇಕಿಯು ತನ್ನ ಮೂಢತ್ವವನ್ನು ಹೊರಗೆಡವು ತ್ತಾನೆ. 17. ದುಷ್ಟ ಸೇವಕನು ಕೇಡಿಗೆ ಬೀಳುತ್ತಾನೆ; ನಂಬಿಕೆಯಾದ ರಾಯಭಾರಿಯು ಆರೋಗ್ಯದಾಯಕ. 18. ಬೋಧನೆಯನ್ನು ತಿರಸ್ಕರಿಸುವವನಿಗೆ ಬಡತನವೂ ಅವಮಾನವೂ ಬರುವವು.; ಗದರಿಕೆಯನ್ನು ಗಮನಿಸು ವವನು ಸನ್ಮಾನಹೊಂದುವನು. 19. ಇಷ್ಟ ಸಿದ್ಧಿ ಪ್ರಾಣಕ್ಕೆ ಸಿಹಿಯಾಗಿದೆ; ಕೆಟ್ಟತನದಿಂದ ತೊಲಗುವದು ಅವಿವೇಕಿಗಳಿಗೆ ಅಸಹ್ಯವಾಗಿದೆ. 20. ಜ್ಞಾನವಂತರ ಜೊತೆಗೆ ನಡೆಯುವವನು ಜ್ಞಾನಿಯಾಗಿರುವನು. ಬುದ್ಧಿ ಹೀನರ ಜೊತೆಗಾರನು ನಾಶವಾಗುವನು. 21. ದುಷ್ಟತ್ವವು ಪಾಪಿಗಳನ್ನು ಹಿಂದಟ್ಟುತ್ತದೆ; ನೀತಿ ವಂತರಿಗೆ ಒಳ್ಳೇದು ಪ್ರತಿಫಲವಾಗುವದು. 22. ಒಳ್ಳೆಯವನು ಮೊಮ್ಮಕ್ಕಳಿಗೆ ಆಸ್ತಿಯನ್ನು ಬಿಡುವನು; ಪಾಪಿಯ ಸೊತ್ತು ನೀತಿ ವಂತರಿಗೆ ಇಡಲ್ಪಟ್ಟಿದೆ. 23. ಬಡವರಿಗೆ ಭೂಮಿಯ ಸಾಗುವಳಿಯಲ್ಲಿ ಬಹಳ ಆಹಾರವು ಸಿಕ್ಕುತ್ತದೆ; ನ್ಯಾಯ ತೀರ್ಪಿನ ಕೊರತೆಯಿಂದ ಹಾಳಾಗುವದು ಉಂಟು. 24. ಬೆತ್ತವನ್ನು ಹಿಡಿಯದವನು ತನ್ನ ಮಗನನ್ನು ಹಗೆ ಮಾಡುತ್ತಾನೆ; ಮುಂಚಿತವಾಗಿ ಶಿಕ್ಷಿಸುವವನು ಅವನನ್ನು ಪ್ರೀತಿಸುತ್ತಾನೆ. 25. ತನಗೆ ತೃಪ್ತಿಯಾಗುವ ವರೆಗೆ ನೀತಿವಂತನು ತಿನ್ನುತ್ತಾನೆ; ದುಷ್ಟರ ಹೊಟ್ಟೆಗೆ ಕೊರತೆಯಾಗುವದು.
Chapter 14
1. ಜ್ಞಾನಿಯಾದ ಪ್ರತಿ ಸ್ತ್ರೀಯು ತನ್ನ ಮನೆಯನ್ನು ಕಟ್ಟುತ್ತಾಳೆ; ಬುದ್ಧಿಹೀನಳೋ ತನ್ನ ಕೈಗಳಿಂದಲೇ ಅದನ್ನು ಕಿತ್ತುಹಾಕುತ್ತಾಳೆ. 2. ತನ್ನ ಯಥಾರ್ಥತೆಯಲ್ಲಿ ನಡೆಯುವವನು ಕರ್ತನಿಗೆ ಭಯಪಡುತ್ತಾನೆ; ತನ್ನ ಮಾರ್ಗಗಳಲ್ಲಿ ವಕ್ರತೆಯುಳ್ಳವನು ಆತನನ್ನು ಅಸಡ್ಡೆಮಾಡುತ್ತಾನೆ. 3. ಬುದ್ಧಿಹೀನನ ಬಾಯಿ ಯಲ್ಲಿ ಗರ್ವದ ಅಂಕುರವಿದೆ; ಜ್ಞಾನವಂತರ ತುಟಿಗಳು ಅವುಗಳನ್ನು ಕಾಯುವವು. 4. ಎತ್ತುಗಳು ಇಲ್ಲದೆ ಇರು ವಲ್ಲಿ ಗೋದಲಿಯು ಶುದ್ಧಿಯಾಗಿದೆ; ಎತ್ತಿನ ಬಲದಿಂದ ಬಹಳ ವೃದ್ಧಿಯು ಉಂಟಾಗುತ್ತದೆ. 5. ನಂಬತಕ್ಕ ಸಾಕ್ಷಿಯು ಸುಳ್ಳಾಡನು; ಅಬದ್ದಸಾಕ್ಷಿಯು ಸುಳ್ಳುಗಳನ್ನೇ ಉಚ್ಚರಿ ಸುತ್ತಾನೆ. 6. ಹಾಸ್ಯ ಮಾಡುವವನು ಜ್ಞಾನವನ್ನು ಹುಡು ಕಿದರೂ ಅದನ್ನು ಕಂಡುಕೊಳ್ಳುವದಿಲ್ಲ; ವಿವೇಚಿಸುವವನಿಗೆ ತಿಳುವಳಿಕೆಯು ಸುಲಭವಾಗಿದೆ. 7. ನೀನು ಬುದ್ಧಿಹೀನನಲ್ಲಿ ತಿಳುವಳಿಕೆಯ ತುಟಿಗಳನ್ನು ಕಾಣದೆ ಹೋದರೆ ಅವನ ಬಳಿಯಿಂದ ನೀನು ಹೋಗು. 8. ಜಾಣನ ಜ್ಞಾನವು ತನ್ನ ಮಾರ್ಗವನ್ನು ಗ್ರಹಿಸುವಂತ ದ್ದಾಗಿದೆ; ಮೂಢರ ಬುದ್ಧಿಹೀನತೆಯು ಮೋಸಕರ. 9. ಬುದ್ಧಿಹೀನರು ಪಾಪಕ್ಕೆ ಹಾಸ್ಯಮಾಡುತ್ತಾರೆ; ನೀತಿ ವಂತರಲ್ಲಿ ದಯೆ ಇದೆ. 10. ಹೃದಯಕ್ಕೆ ತನ್ನ ವ್ಯಾಕುಲ ತೆಯು ತಿಳಿಯುತ್ತದೆ; ಪರನು ತನ್ನ ಸಂತೋಷದಲ್ಲಿ ಸೇರುವದಿಲ್ಲ. 11. ದುಷ್ಟರ ಮನೆಯು ಕೆಡವಲ್ಪಡುವದು; ಯಥಾರ್ಥವಂತರ ಗುಡಾರವು ಏಳಿಗೆಯಾಗುವದು. 12. ಒಬ್ಬ ಮನುಷ್ಯನಿಗೆ ಸರಿಯೆಂದು ತೋರುವ ಮಾರ್ಗ ವಿದೆ. ಅದರ ಅಂತ್ಯವು ಮರಣದ ಮಾರ್ಗಗಳೇ. 13. ನಗೆಯಲ್ಲಿಯೂ ಹೃದಯವು ದುಃಖದಿಂದ ಇರು ವದು; ಅದರ ಉಲ್ಲಾಸದ ಅಂತ್ಯವು ವ್ಯಾಕುಲವೇ. 14. ಹೃದಯದಲ್ಲಿ ಹಿಂಜರಿಯುವವನು ತನ್ನ ಸ್ವಂತ ಮಾರ್ಗಗಳಿಂದ ತುಂಬಿಕೊಳ್ಳುವನು; ಒಳ್ಳೆಯವನು ತನ್ನಲ್ಲಿ ತಾನೇ ತೃಪ್ತಿಹೊಂದುವನು. 15. ಮೂಢರು ಪ್ರತಿಯೊಂದು ಮಾತನ್ನು ನಂಬುತ್ತಾರೆ; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು. 16. ಜ್ಞಾನಿ ಯು ಭಯಪಟ್ಟು ಕೆಟ್ಟತನದಿಂದ ಹೊರಟುಹೋಗು ವನು; ಬುದ್ಧಿಹೀನನು ಕೋಪಿಸಿಕೊಂಡು ಧೈರ್ಯದಿಂದ ಇರುತ್ತಾನೆ. 17. ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುತ್ತಾನೆ; ಕುಯುಕ್ತಿಯುಳ್ಳವನು ಹಗೆಮಾಡು ತ್ತಾನೆ. 18. ಮೂಢರು ಮೂರ್ಖತನಕ್ಕೆ ಬಾಧ್ಯರಾಗು ತ್ತಾರೆ; ಜಾಣರು ತಿಳುವಳಿಕೆಯ ಕಿರೀಟವನ್ನು ಪಡೆದು ಕೊಳ್ಳುತ್ತಾರೆ. 19. ಒಳ್ಳೆಯವರಿಗೆ ದುಷ್ಟರು ಬಾಗುತ್ತಾರೆ; ದುಷ್ಟರು ನೀತಿವಂತರ ದ್ವಾರಗಳಲ್ಲಿ ಬಗ್ಗಿಕೊಳ್ಳುತ್ತಾರೆ. 20. ಬಡವನು ತನ್ನ ನೆರೆಯವನಿಂದ ಹಗೆಮಾಡಲ್ಪಡುವನು; ಐಶ್ವರ್ಯವಂತನಿಗೆ ಬಹು ಜನ ಮಿತ್ರರು. 21. ತನ್ನ ನೆರೆಯವನನ್ನು ಅವಮಾನ ಮಾಡುವವನು ಪಾಪ ಮಾಡುತ್ತಾನೆ; ಬಡವರ ಮೇಲೆ ಕನಿಕರ ತೋರಿ ಸುವವನು ಧನ್ಯನು. 22. ಕೆಟ್ಟದ್ದನ್ನು ಕಲ್ಪಿಸುವವರು ತಪ್ಪು ಮಾಡುತ್ತಾರಲ್ಲವೇ? ಒಳ್ಳೆಯದನ್ನು ಕಲ್ಪಿಸುವವರಿಗೆ ಕರುಣೆಯೂ ಸತ್ಯವೂ ಇರುವವು. 23. ಎಲ್ಲಾ ಪ್ರಯಾಸ ದಲ್ಲಿ ಲಾಭವಿದೆ; ತುಟಿಗಳ ಮಾತು ಬಡತನಕ್ಕೆ ಮಾತ್ರ ದಾರಿ. 24. ಜ್ಞಾನವಂತರ ಕಿರೀಟವು ಅದರ ಐಶ್ವ ರ್ಯವೇ; ಬುದ್ಧಿಹೀನರ ಬುದ್ಧಿಹೀನತೆಯು ಅವರ ಮೂರ್ಖತನವೇ. 25. ಸತ್ಯ ಸಾಕ್ಷಿಯು ಪ್ರಾಣಗಳನ್ನು ತಪ್ಪಿಸುತ್ತಾನೆ; ಮೋಸದ ಸಾಕ್ಷಿಯು ಸುಳ್ಳುಗಳನ್ನು ಆಡು ತ್ತಾನೆ. 26. ಕರ್ತನ ಭಯವೇ ಬಲವಾದ ಭರವಸವು; ಆತನ ಮಕ್ಕಳಿಗೆ ಆಶ್ರಯ ಸ್ಥಳವು ಇರುವದು. 27. ಮರಣದ ಪಾಶಗಳಿಂದ ತೊಲಗುವದಕ್ಕೆ ಕರ್ತನ ಭಯವು ಜೀವದ ಬುಗ್ಗೆ. 28. ಜನ ಸಮೂಹದಲ್ಲಿ ಅರಸನ ಘನತೆ ಇದೆ; ಜನರ ಕೊರತೆಯಲ್ಲಿ ರಾಜಪುತ್ರನ ನಾಶ. 29. ಕೋಪಕ್ಕೆ ನಿಧಾನಿಸು. ದೀರ್ಘಶಾಂತನು ದೊಡ್ಡವಿವೇಕಿ; ಆತ್ಮದಲ್ಲಿ ಆತುರಪಡುವವನು ಮೂಢ ತೆಯನ್ನು ವೃದ್ಧಿಮಾಡುವನು. 30. ಸ್ವಸ್ಥವಾದ ಹೃದಯವು ದೇಹಕ್ಕೆ ಜೀವ; ಮತ್ಸರವು ಎಲುಬುಗಳಿಗೆ ಕ್ಷಯವು. 31. ಬಡವರನ್ನು ಹಿಂಸಿಸುವವನು ತನ್ನ ಸೃಷ್ಟಿಕರ್ತನನ್ನು ಹೀನೈಸುವನು; ಆತನನ್ನು ಸನ್ಮಾನಿಸುವವನು ಬಡವರನ್ನು ಕನಿಕರಿಸುತ್ತಾನೆ. 32. ದುಷ್ಟನು ತನ್ನ ದುಷ್ಟತನದಲ್ಲಿ ನೂಕ ಲ್ಪಡುತ್ತಾನೆ; ಮರಣದಲ್ಲಿ ನೀತಿವಂತನಿಗೆ ನಿರೀಕ್ಷೆ ಇದೆ. 33. ತಿಳುವಳಿಕೆಯುಳ್ಳವನ ಹೃದಯದಲ್ಲಿ ಜ್ಞಾನವು ನೆಲೆ ಯಾಗಿದೆ; ಬುದ್ಧಿಹೀನರಲ್ಲಿರುವದು ಪ್ರಕಟವಾಗುತ್ತದೆ. 34. ನೀತಿಯು ಜನಾಂಗವನ್ನು ವೃದ್ಧಿಮಾಡುತ್ತದೆ; ಯಾವ ಪ್ರಜೆಗಾದರೂ ಪಾಪವು ಅವಮಾನವಾಗಿದೆ. 35. ಜ್ಞಾನ ವುಳ್ಳ ಸೇವಕನ ಕಡೆಗೆ ಅರಸನ ದಯೆ ಇದೆ; ನಾಚಿಕೆ ಪಡಿಸುವವನ ಕಡೆಗೆ ಅವನ ರೌದ್ರವಿದೆ.
Chapter 15
1. ಮೃದುವಾದ ಪ್ರತ್ಯುತ್ತರವು ಕೋಪವನ್ನು ತಿರುಗಿಸಿಬಿಡುತ್ತದೆ; ತೀಕ್ಷ್ಣವಾದ ಮಾತು ಗಳು ಕೋಪವನ್ನು ಎಬ್ಬಿಸುತ್ತವೆ. 2. ಜ್ಞಾನಿಯ ನಾಲಿ ಗೆಯು ತಿಳುವಳಿಕೆಯನ್ನು ಸರಿಯಾಗಿ ಉಪಯೋಗಿ ಸುತ್ತದೆ. ಬುದ್ಧಿಹೀನರ ಬಾಯಿಯು ಬುದ್ಧಿಹೀನತೆಯನ್ನು ಹೊರಗೆಡುವುತ್ತದೆ. 3. ಕೆಟ್ಟವರನ್ನು ಒಳ್ಳೆಯವರನ್ನು ನೋಡುತ್ತಾ ಕರ್ತನ ಕಣ್ಣುಗಳು ಪ್ರತಿಯೊಂದು ಸ್ಥಳ ದಲ್ಲಿವೆ. 4. ಹಿತವಾದ ನಾಲಿಗೆಯು ಜೀವವೃಕ್ಷ; ಅದರಲ್ಲಿ ಮೂರ್ಖತ್ವವು ಆತ್ಮಕ್ಕೆ ಒಡಕು. 5. ತನ್ನ ತಂದೆಯ ಬೋಧನೆಯನ್ನು ಬುದ್ಧಿಹೀನನು ತಿರಸ್ಕರಿಸುತ್ತಾನೆ. ವಿವೇಕಿಯು ಗದರಿಕೆಯನ್ನು ಲಕ್ಷಿಸುವನು; 6. ನೀತಿವಂತನ ಮನೆಯಲ್ಲಿ ಬಹಳ ಸಂಪತ್ತು; ದುಷ್ಟನ ಆದಾಯಗಳಲ್ಲಿ ತೊಂದರೆ ಇರುವದು. 7. ಜ್ಞಾನಿಗಳ ತುಟಿಗಳು ತಿಳುವ ಳಿಕೆಯನ್ನು ಚೆಲ್ಲುತ್ತವೆ; ಬುದ್ಧಿಹೀನರ ಹೃದಯವು ಹಾಗೆ ಮಾಡುವದೇ ಇಲ್ಲ. 8. ದುಷ್ಟರ ಯಜ್ಞವು ಕರ್ತನಿಗೆ ಅಸಹ್ಯ; ಯಥಾರ್ಥವಂತರ ಪ್ರಾರ್ಥನೆಯು ಆತನ ಆನಂದವು. 9. ದುಷ್ಟರ ಮಾರ್ಗವು ಕರ್ತನಿಗೆ ಅಸಹ್ಯ; ನೀತಿಯನ್ನು ಹಿಂಬಾಲಿಸುವವನನ್ನು ಆತನು ಪ್ರೀತಿಸು ತ್ತಾನೆ. 10. ಮಾರ್ಗವನ್ನು ತೊರೆದುಬಿಟ್ಟವನಿಗೆ ಶಿಕ್ಷೆಯು ಕಠಿಣವಾಗಿದೆ; ಗದರಿಕೆಯನ್ನು ಹಗೆಮಾಡುವವನು ಸಾಯುವನು. 11. ಪಾತಾಳವೂ ನಾಶನವೂ ಕರ್ತನ ಎದುರಿನಲ್ಲಿವೆ; ಹಾಗಾದರೆ ಮನುಷ್ಯರ ಹೃದಯಗಳು ಇನ್ನೂ ಎಷ್ಟೋ ಹೆಚ್ಚಾಗಿ ಆತನ ಮುಂದೆ ಇವೆಯಲ್ಲವೇ. 12. ತನ್ನನ್ನು ಗದರಿಸುವವನು ಪರಿಹಾಸ್ಯಕರನನ್ನು ಪ್ರೀತಿ ಮಾಡುವದಿಲ್ಲ, ಇಲ್ಲವೆ ಅವನು ಜ್ಞಾನಿಗಳ ಕಡೆಗೆ ಹೋಗುವದು ಇಲ್ಲ. 13. ಸಂತೋಷಪಡುವ ಹೃದ ಯವು ಕಾಂತಿಯುಳ್ಳ ಮುಖಭಾವ ತೋರುವದು; ಹೃದಯ ವೇದನೆಯಿಂದ ಆತ್ಮವು ಕುಂದಿಹೋಗುತ್ತದೆ. 14. ವಿವೇಕವುಳ್ಳವನ ಹೃದಯವು ತಿಳುವಳಿಕೆಯನ್ನು ಹುಡುಕುತ್ತದೆ; ಬುದ್ಧಿಹೀನರ ಬಾಯಿಯು ಬುದ್ಧಿಹೀನತೆ ಯನ್ನೇ ತಿನ್ನುತ್ತದೆ. 15. ಬಾಧಿತರ ದಿನಗಳೆಲ್ಲವೂ ಕೆಟ್ಟ ವುಗಳೇ. ಸಂತೋಷ ಹೃದಯವುಳ್ಳವನಿಗೆ ನಿತ್ಯವೂ ಔತಣ. 16. ಕಳವಳದಿಂದ ಕೂಡಿದ ದೊಡ್ಡ ಸಂಪತ್ತಿ ಗಿಂತ ಕರ್ತನ ಭಯದಿಂದ ಕೂಡಿದ ಸ್ವಲ್ಪವೇ ಉತ್ತಮ ವಾಗಿದೆ. 17. ದ್ವೇಷವಿರುವಲ್ಲಿ ಕೊಬ್ಬಿದ ಎತ್ತಿನ ಮಾಂಸ ಕ್ಕಿಂತ ಪ್ರೀತಿ ಇರುವಲ್ಲಿ ಸಸ್ಯಹಾರವು ಉತ್ತಮ. 18. ಕೋಪಿಷ್ಠನು ವಿವಾದವನ್ನು ಎಬ್ಬಿಸುವನು; ದೀರ್ಘ ಶಾಂತನು ವಿವಾದವನ್ನು ಶಮನಪಡಿಸುತ್ತಾನೆ. 19. ಸೋಮಾರಿಯ ಮಾರ್ಗವು ಮುಳ್ಳಿನ ಬೇಲಿಯಂತೆ ಇದೆ; ನೀತಿವಂತನ ಮಾರ್ಗವು ಸರಾಗವಾಗಿದೆ. 20. ಜ್ಞಾನಿಯಾದ ಮಗನು ತಂದೆಯನ್ನು ಉಲ್ಲಾಸ ಗೊಳಿಸುತ್ತಾನೆ; ಬುದ್ಧಿಹೀನನಾದರೋ ತನ್ನ ತಾಯಿ ಯನ್ನು ತಿರಸ್ಕರಿಸುತ್ತಾನೆ. 21. ಜ್ಞಾನಹೀನನಿಗೆ ಮೂರ್ಖ ತನವು ಆನಂದವಾಗಿದೆ; ವಿವೇಕಿಯಾದರೋ ಯಥಾ ರ್ಥವಾಗಿ ನಡೆಯುತ್ತಾನೆ. 22. ಆಲೋಚನೆಯಿಲ್ಲದೆ ಉದ್ದೇಶಗಳು ಸಫಲವಾಗುವದಿಲ್ಲ; ಬಹುಮಂದಿ ಸಲಹೆಗಾರರಿರುವಲ್ಲಿ ಅವು ಸ್ಥಿರಗೊಳ್ಳುತ್ತವೆ. 23. ತನ್ನ ಬಾಯಿಯ ಪ್ರತ್ಯುತ್ತರದಿಂದ ಮನುಷ್ಯನಿಗೆ ಆನಂದವಾ ಗುತ್ತದೆ; ತಕ್ಕಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೇದು! 24. ಕೆಳಗಿನ ಪಾತಾಳವನ್ನು ತಪ್ಪಿಸಿಕೊಳ್ಳುವ ದಕ್ಕಾಗಿ ಜ್ಞಾನಿಗಳಿಗೆ ಜೀವದ ಮಾರ್ಗವು ಎತ್ತರದಲ್ಲಿದೆ. 25. ಕರ್ತನು ಗರ್ವಿಷ್ಟರ ಮನೆಯನ್ನು ಹಾಳುಮಾಡು ವನು; ವಿಧವೆಯರ ಮೇರೆಯನ್ನು ಆತನು ನೆಲೆಗೊಳಿಸು ವನು. 26. ದುಷ್ಟರ ಆಲೋಚನೆಯು ಕರ್ತನಿಗೆ ಅಸಹ್ಯವಾಗಿದೆ; ಶುದ್ಧನ ಮಾತುಗಳು ಸಂತೋಷಕರ ವಾದ ಮಾತುಗಳೇ. 27. ದುರ್ಲಾಭಾಪೇಕ್ಷಕನು ತನ್ನ ಮನೆಯನ್ನು ಬಾಧಿಸುತ್ತಾನೆ; ಲಂಚವನ್ನು ಹಗೆಮಾಡುವ ವನು ಬದುಕುವನು. 28. ನೀತಿವಂತರ ಹೃದಯವು ಉತ್ತರಕೊಡುವದಕ್ಕೆ ಅಭ್ಯಾಸಿಸುತ್ತದೆ; ದುಷ್ಟರ ಬಾಯಿ ಯು ಕೆಟ್ಟವುಗಳನ್ನು ಹೊರಗೆಡವುತ್ತದೆ. 29. ಕರ್ತನು ದುಷ್ಟರಿಗೆ ದೂರ; ನೀತಿವಂತರ ಪ್ರಾರ್ಥನೆಯನ್ನು ಆತನು ಕೇಳುತ್ತಾನೆ. 30. ಕಣ್ಣುಗಳ ಬೆಳಕು ಹೃದಯವನ್ನು ಸಂತೋಷಪಡಿಸುತ್ತದೆ; ಒಳ್ಳೆಯ ವಾರ್ತೆಯು ಎಲುಬು ಗಳನ್ನು ಪುಷ್ಟಿಮಾಡುತ್ತದೆ. 31. ಜೀವದ ಗದರಿಕೆಗೆ ಕಿವಿ ಗೊಡುವವನು ಜ್ಞಾನಿಗಳ ನಡುವೆ ವಾಸವಾಗಿದ್ದಾನೆ. 32. ಶಿಕ್ಷಣವನ್ನು ನಿರಾಕರಿಸುವವನು ತನ್ನ ಪ್ರಾಣವನ್ನೇ ತಿರಸ್ಕರಿಸುತ್ತಾನೆ; ಗದರಿಕೆಗೆ ಕಿವಿಗೊಡುವವನು ವಿವೇಕ ವನ್ನು ಪಡೆಯುತ್ತಾನೆ. 33. ಕರ್ತನ ಭಯವು ಜ್ಞಾನೋ ಪದೇಶ; ಗೌರವಕ್ಕೆ ಮೊದಲು ವಿನಯ.
Chapter 16
1. ಮನುಷ್ಯನಲ್ಲಿ ಹೃದಯದ ಸಿದ್ಧತೆಗಳೂ ಬಾಯಿಯ ಪ್ರತ್ಯುತ್ತರವೂ ಕರ್ತನಿಂದಲೇ ಆಗುವವು. 2. ಮನುಷ್ಯನ ಮಾರ್ಗಗಳೆಲ್ಲಾ ತನ್ನ ಕಣ್ಣುಗಳ ಮುಂದೆ ಶುದ್ಧವಾಗಿವೆ; ಕರ್ತನು ಆತ್ಮಗಳನ್ನು ತೂಗಿಸುತ್ತಾನೆ. 3. ನಿನ್ನ ಕಾರ್ಯಗಳನ್ನು ಕರ್ತನಿಗೆ ಒಪ್ಪಿಸಿದರೆ ನಿನ್ನ ಆಲೋಚನೆಗಳು ಸ್ಥಿರವಾಗುವವು. 4. ಎಲ್ಲವುಗಳನ್ನು ಕರ್ತನು ತನಗಾಗಿ ಮಾಡಿದ್ದಾನೆ; ಹೌದು, ಕೇಡಿನ ದಿನಕ್ಕಾಗಿಯೂ ಕೆಡುಕರನ್ನು ಮಾಡಿ ದ್ದಾನೆ. 5. ಹೃದಯದಲ್ಲಿ ಗರ್ವಿಷ್ಠನಾದ ಪ್ರತಿಯೊಬ್ಬನೂ ಕರ್ತನಿಗೆ ಅಸಹ್ಯ. ಕೈಗೆ ಕೈ ಕೊಟ್ಟರೂ ದುಷ್ಟನು ಶಿಕ್ಷಿಸಲ್ಪಡದೆ ಇರುವದಿಲ್ಲ. 6. ಕನಿಕರ ಮತ್ತು ಸತ್ಯದಿಂದ ಅಕ್ರಮವು ಶುದ್ಧೀಕರಿಸಲ್ಪಡುತ್ತದೆ; ಕರ್ತನ ಭಯದ ಮೂಲಕ ಮನುಷ್ಯರು ಕೆಟ್ಟದ್ದರಿಂದ ತೊಲಗುತ್ತಾರೆ. 7. ಮನುಷ್ಯನ ಮಾರ್ಗಗಳು ಕರ್ತನನ್ನು ಮೆಚ್ಚಿಸಿದಾಗ ಅವನ ಶತ್ರುಗಳನ್ನು ಸಹ ಅವನೊಂದಿಗೆ ಸಮಾಧಾನ ದಲ್ಲಿರುವಂತೆ ಆತನು ಮಾಡುತ್ತಾನೆ. 8. ಅನ್ಯಾಯದ ಬಹು ಆದಾಯಕ್ಕಿಂತಲೂ ನೀತಿಯೊಂದಿಗಿರುವ ಸ್ವಲ್ಪವೇ ಉತ್ತಮ. 9. ಒಬ್ಬ ಮನುಷ್ಯನ ಹೃದಯವು ಅವನ ಮಾರ್ಗವನ್ನು ಕಲ್ಪಿಸುತ್ತದೆ; ಆದರೆ ಕರ್ತನು ಅವನ ಹೆಜ್ಜೆಗಳನ್ನು ನಡಿಸುತ್ತಾನೆ. 10. ಅರಸನ ತುಟಿ ಗಳಲ್ಲಿ ದೈವೋಕ್ತಿ; ನ್ಯಾಯತೀರ್ಪಿನಲ್ಲಿ ಅವನ ಬಾಯಿ ಯು ದೋಷಮಾಡುವದಿಲ್ಲ. 11. ನ್ಯಾಯದ ತೂಕವೂ ತಕ್ಕಡಿಯೂ ಕರ್ತನವು; ಚೀಲದ ತೂಕಗಳು ಆತನ ಕೈಕೆಲಸವೇ. 12. ಕೆಟ್ಟದ್ದನ್ನು ಮಾಡುವವರು ರಾಜರಿಗೆ ಅಸಹ್ಯರು; ನೀತಿಯಿಂದ ಸಿಂಹಾಸನವು ಸ್ಥಾಪಿಸಲ್ಪಡು ತ್ತದೆ. 13. ನೀತಿಯ ತುಟಿಗಳು ಅರಸರ ಆನಂದ. ನ್ಯಾಯ ವಾದದ್ದನ್ನು ಮಾತನಾಡುವವನನ್ನು ಅವರು ಪ್ರೀತಿಸು ತ್ತಾರೆ. 14. ಅರಸನ ಕೋಪವು ಮೃತ್ಯುವಿನ ದೂತರಂತೆ ಇರುತ್ತದೆ; ಜ್ಞಾನಿಯು ಅದನ್ನು ಶಮನಪಡಿಸುವನು. 15. ಅರಸನ ಮುಖದ ಬೆಳಕಿನಲ್ಲಿ ಜೀವ; ಅವನ ದಯೆಯು ಹಿಂಗಾರು ಮಳೆಯ ಮೇಘದಂತಿದೆ. 16. ಬಂಗಾರಕ್ಕಿಂತ ಜ್ಞಾನವನ್ನು ಪಡೆಯುವದು ಎಷ್ಟೋ ಮೇಲು! ಬೆಳ್ಳಿಗಿಂತ ವಿವೇಕವನ್ನು ಆರಿಸಿಕೊಳ್ಳುವದು ಎಷ್ಟೋ ಉತ್ತಮ. 17. ಯಥಾರ್ಥವಂತರ ಹೆದ್ದಾರಿಯು ಕೆಟ್ಟತನದಿಂದ ತೊಲಗುವಂಥದ್ದಾಗಿದೆ. ತನ್ನ ಮಾರ್ಗ ವನ್ನು ಕಾಯುವವನು ತನ್ನ ಪ್ರಾಣವನ್ನು ಕಾಪಾಡಿ ಕೊಳ್ಳುತ್ತಾನೆ. 18. ನಾಶನಕ್ಕೆ ಮುಂದಾಗಿ ಗರ್ವ ಹೋಗು ತ್ತದೆ; ಬೀಳುವಿಕೆಯ ಮುಂಚೆ ಜಂಬದ ಮನಸ್ಸು. 19. ಅಹಂಕಾರಿಗಳೊಂದಿಗೆ ಕೊಳ್ಳೆಯನ್ನು ಹಂಚಿಕೊಳ್ಳು ವದಕ್ಕಿಂತ ದೀನರೊಂದಿಗೆ ವಿನಯ ಮನಸ್ಸುಳ್ಳವರಾಗಿ ಇರುವದು ಉತ್ತಮ. 20. ಕಾರ್ಯವನ್ನು ಜ್ಞಾನದಿಂದ ನಡಿಸುವವನು ಒಳ್ಳೇದನ್ನು ಪಡೆಯುವನು; ಕರ್ತನಲ್ಲಿ ಭರವಸವಿಡುವವನು ಧನ್ಯನು. 21. ಹೃದಯದಲ್ಲಿ ಜ್ಞಾನ ವಂತರು ಜಾಣರೆಂದು ಕರೆಯಲ್ಪಡುವರು; ತುಟಿಗಳ ಮಧುರವು ಜ್ಞಾನವನ್ನು ಹೆಚ್ಚಿಸುತ್ತದೆ. 22. ವಿವೇಕಿಗೆ ವಿವೇಕವೇ ಜೀವದ ಬುಗ್ಗೆ. ಬುದ್ಧಿಹೀನರ ಬೋಧ ನೆಯು ಮೂರ್ಖತನ. 23. ಜ್ಞಾನಿಯ ಹೃದಯವು ಬಾಯಿಗೆ ಬೋಧಿಸಿ ತನ್ನ ತುಟಿಗಳಿಗೆ ಜ್ಞಾನವನ್ನು ಹೆಚ್ಚಿಸುತ್ತದೆ. 24. ಮನೋಹರವಾದ ಮಾತುಗಳು ಜೇನು ತುಪ್ಪದಂತೆ ಪ್ರಾಣಕ್ಕೆ ಮಧುರವೂ ಎಲುಬು ಗಳಿಗೆ ಕ್ಷೇಮವೂ ಆಗಿವೆ. 25. ಮನುಷ್ಯರಿಗೆ ಸರಿಯಾಗಿ ತೋರುವ ಒಂದು ಮಾರ್ಗ ಉಂಟು; ಅದರ ಅಂತ್ಯವು ಮರಣದ ಮಾರ್ಗವೇ. 26. ದುಡಿಯುವವನು ತನ ಗಾಗಿಯೇ ದುಡಿಯುತ್ತಾನೆ; ಅವನ ಬಾಯಿಯು ಅದ ಕ್ಕಾಗಿ ಹಂಬಲಿಸುತ್ತದೆ. 27. ಭಕ್ತಿಹೀನನು ದುಷ್ಟತ್ವವನ್ನು ಅಗೆಯುತ್ತಾನೆ; ಅವನ ತುಟಿಗಳು ಉರಿಯುವ ಬೆಂಕಿ ಯಂತಿವೆ. 28. ಮೂರ್ಖನು ಜಗಳವನ್ನು ಬಿತ್ತುತ್ತಾನೆ; ಪಿಸುಗುಟ್ಟುವವನು ಪ್ರಮುಖ ಸ್ನೇಹಿತರನ್ನು ಅಗಲಿಸು ತ್ತಾನೆ. 29. ಬಲಾತ್ಕಾರಿಯು ನೆರೆಯವನನ್ನು ಮರುಳು ಗೊಳಿಸಿ ದುರ್ಮಾರ್ಗಕ್ಕೆ ನಡಿಸುತ್ತಾನೆ. 30. ವಕ್ರ ಬುದ್ಧಿಯ ಒಳಸಂಚುಗಳಿಗೆ ಅವನು ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾನೆ; ತನ್ನ ತುಟಿಗಳನ್ನು ಕದಲಿಸುತ್ತಾ ಕೆಟ್ಟದ್ದು ಸಂಭವಿಸುವಂತೆ ಮಾಡುತ್ತಾನೆ. 31. ನೀತಿಯ ಮಾರ್ಗದಲ್ಲಿ ಕಾಣಿಸಲ್ಪಟ್ಟರೆ ನರೆತಲೆಯು ಸುಂದರ ಕಿರೀಟವಾಗಿವೆ. 32. ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠನು, ತನ್ನ ಮನಸ್ಸನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಉತ್ತಮನು. 33. ಉಡಿಲಲ್ಲಿ ಚೀಟು ಹಾಕಬಹುದು; ಅದನ್ನು ಸ್ಥಿತಿಗೆ ತರುವಂತದ್ದು ಕರ್ತನದೇ.
Chapter 17
1. ವಿವಾದದೊಂದಿಗೆ ಬಲಿಗಳಿಂದ ತುಂಬಿದ ಮನೆಗಿಂತ ಸಮಾಧಾನದ ಒಣತುತ್ತೇ ಮೇಲು. 2. ನಾಚಿಕೆಪಡಿಸುವ ಮಗನ ಮೇಲೆ ಜ್ಞಾನಿ ಯಾದ ಸೇವಕನು ಆಳುವವನಾಗಿ ಸಹೋದರರಲ್ಲಿ ಬಾಧ್ಯತೆಗೆ ಪಾಲುಗಾರನಾಗುವನು. 3. ಬೆಳ್ಳಿ ಬಂಗಾರ ಗಳನ್ನು ಪುಟ ಕುಲುಮೆಗಳು ಶೋಧಿಸುವವು, ಕರ್ತನು ಹೃದಯಗಳನ್ನು ಶೋಧಿಸುತ್ತಾನೆ. 4. ಕೇಡು ಮಾಡುವ ವನು ಕೆಟ್ಟ ತುಟಿಗಳಿಗೆ ಕಿವಿಗೊಡುತ್ತಾನೆ; ಸುಳ್ಳುಗಾರನು ನೀಚವಾದ ನಾಲಿಗೆಗೆ ಕಿವಿಗೊಡುವನು; 5. ಬಡವರನ್ನು ಹಾಸ್ಯಮಾಡುವವನು ತನ್ನ ಸೃಷ್ಟಿ ಕರ್ತ ನನ್ನೇ ನಿಂದಿಸುತ್ತಾನೆ; ವಿಪತ್ತುಗಳಿಗೆ ಸಂತೋಷಿಸು ವವನು ಶಿಕ್ಷೆಯನ್ನು ಹೊಂದಲೇಬೇಕು. 6. ಮಕ್ಕಳ ಮಕ್ಕಳು ವೃದ್ಧರಿಗೆ ಕಿರೀಟ; ಮಕ್ಕಳ ಭೂಷಣವು ಅವರ ತಂದೆ ಗಳೇ. 7. ಬುದ್ಧಿಹೀನನಿಗೆ ಉತ್ತಮವಾದ ನುಡಿಯುಕ್ತ ವಲ್ಲ; ರಾಜಪುತ್ರನಿಗೆ ಸುಳ್ಳಾಡುವ ತುಟಿಗಳು ಇನ್ನೂ ಎಷ್ಟೋ ಹೆಚ್ಚಾಗಿ ಯುಕ್ತವಲ್ಲ. 8. ತಕ್ಕೊಳ್ಳುವವನ ಕಣ್ಣುಗಳಿಗೆ ಲಂಚವು ಬೆಲೆಯುಳ್ಳ ಕಲ್ಲಿನಂತಿದೆ; ಅದನ್ನು ಹೇಗೆ ತಿರುಗಿಸಿದರೂ ಅಭಿವೃದ್ಧಿಯಾಗುತ್ತದೆ. 9. ದೋಷ ವನ್ನು ಮುಚ್ಚುವವನು ಪ್ರೀತಿಯನ್ನು ಹುಡುಕುತ್ತಾನೆ, ಸಂಗತಿಯನ್ನು ಎತ್ತಿ ಆಡುವವನು ಸ್ನೇಹಿತರನ್ನು ಪ್ರತ್ಯೇ ಕಿಸುತ್ತಾನೆ. 10. ಬುದ್ಧಿಹೀನನಿಗೆ ನೂರು ಪೆಟ್ಟುಗಳಿಗಿಂತ ಜ್ಞಾನಿಗೆ ಒಂದು ಗದರಿಕೆಯ ಮಾತು ಹೆಚ್ಚಾಗಿ ನಾಟು ತ್ತದೆ. 11. ಕೆಟ್ಟವನು ದಂಗೆಯನ್ನೇ ಹುಡುಕುತ್ತಾನೆ; ಆದ ಕಾರಣ ಕ್ರೂರ ಸೇವಕನು ಅವನಿಗೆ ವಿರೋಧವಾಗಿ ಕಳುಹಿಸಲ್ಪಡುವನು. 12. ಮೂರ್ಖತನದಲ್ಲಿ ಮುಳುಗಿ ರುವ ಮೂಢನಿಗೆ ಎದುರಾಗುವದಕ್ಕಿಂತಲೂ ಮರಿಗ ಳನ್ನು ಕಳೆದುಕೊಂಡ ಕರಡಿಗೆ ಎದುರಾಗುವದು ಲೇಸು. 13. ಉಪಕಾರಕ್ಕೆ ಅಪಕಾರವನ್ನು ಮಾಡುವವನ ಮನೆ ಯಿಂದ ಕೇಡು ತೊಲಗುವದೇ ಇಲ್ಲ. 14. ಒಬ್ಬನು ನೀರನ್ನು ಹೊರಬಿಡುವಂತೆ ಕಲಹದ ಪ್ರಾರಂಭವು ಇರುವದು. ಆದಕಾರಣ ಆ ಕಲಹಕ್ಕೆ ಕೈ ಹಾಕುವದಕ್ಕಿಂತ ಮುಂಚೆ ಅದನ್ನು ಬಿಟ್ಟುಬಿಡು. 15. ದುಷ್ಟರನ್ನು ನೀತಿ ವಂತರೆಂದು ನಿರ್ಣಯಿಸುವವನೂ ನೀತಿವಂತನನ್ನು ದಂಡನೆಗೆ ಗುರಿಮಾಡುವವನೂ ಇವರಿಬ್ಬರೂ ಕರ್ತ ನಿಗೆ ಅಸಹ್ಯರು. 16. ಬುದ್ಧಿಹೀನನಿಗೆ ಮನಸ್ಸಿಲ್ಲದೆ ಇರು ವದರಿಂದ ಜ್ಞಾನವನ್ನು ಸಂಪಾದಿಸುವದಕ್ಕೆ ಅವನ ಕೈಯಲ್ಲಿ ಕ್ರಯ ಯಾಕೆ? 17. ಸ್ನೇಹಿತನು ಎಲ್ಲಾ ಸಮ ಯಗಳಲ್ಲಿ ಪ್ರೀತಿಸುತ್ತಾನೆ; ಇಕ್ಕಟ್ಟಿಗೋಸ್ಕರ ಸಹೋ ದರನು ಹುಟ್ಟಿದ್ದಾನೆ. 18. ವಿವೇಕವಿಲ್ಲದವನು ಕೈ ಮೇಲೆ ಹೊಡೆದು ತನ್ನ ಸ್ನೇಹಿತನ ಎದುರಿನಲ್ಲಿ ಹೊಣೆ ಯಾಗುತ್ತಾನೆ. 19. ಕಲಹವನ್ನು ಪ್ರೀತಿಮಾಡುವವನು ದೋಷವನ್ನು ಪ್ರೀತಿಮಾಡುತ್ತಾನೆ; ತನ್ನ ದ್ವಾರವನ್ನು ಹೆಚ್ಚಿಸಿಕೊಳ್ಳುವವನು ನಾಶನವನ್ನು ಹುಡುಕುತ್ತಾನೆ. 20. ಮೂರ್ಖ ಹೃದಯವುಳ್ಳವನು ಒಳ್ಳೇದನ್ನು ಪಡೆ ಯನು; ಕೆಟ್ಟನಾಲಿಗೆಯುಳ್ಳವನು ಹಾನಿಗೆ ಬೀಳುವನು. 21. ಬುದ್ಧಿಹೀನನನ್ನು ಹೆತ್ತವನಿಗೆ ವ್ಯಥೆ; ಬುದ್ಧಿಹೀನನ ತಂದೆಗೆ ಸಂತೋಷವಿರುವದಿಲ್ಲ. 22. ಹರ್ಷ ಹೃದಯನು ಔಷಧದಂತೆ ಒಳ್ಳೇದು ಮಾಡುತ್ತಾನೆ; ಕುಗ್ಗಿದ ಮನಸ್ಸು ಎಲುಬುಗಳನ್ನು ಒಣಗಿಸುತ್ತದೆ. 23. ನ್ಯಾಯದ ಮಾರ್ಗ ಗಳನ್ನು ತಿರುಗಿಸಿಬಿಡುವದಕ್ಕೆ ದುಷ್ಟನು ಎದೆಯಿಂದ ಲಂಚವನ್ನು ತೆಗೆದುಕೊಳ್ಳುತ್ತಾನೆ. 24. ವಿವೇಕಿಯ ಮುಂದೆ ಜ್ಞಾನವಿದೆ; ಬುದ್ಧಿಹೀನನ ಕಣ್ಣುಗಳು ಭೂಮಿಯ ಅಂತ್ಯಗಳಲ್ಲಿ ಇರುವವು. 25. ಬುದ್ಧಿಹೀನ ನಾದ ಮಗನು ತನ್ನ ತಂದೆಗೆ ದುಃಖವೂ ತನ್ನನ್ನು ಹೆತ್ತವಳಿಗೆ ಕಹಿಯೂ ಆಗಿದ್ದಾನೆ. 26. ನೀತಿವಂತನನ್ನು ಶಿಕ್ಷಿಸುವದು ಇಲ್ಲವೆ ಅಕ್ರಮಕ್ಕಾಗಿ ರಾಜಪುತ್ರರನ್ನು ಹೊಡೆಯುವದು ಯುಕ್ತವಲ್ಲ. 27. ತಿಳುವಳಿಕೆಯುಳ್ಳ ವನು ಮಿತವಾಗಿ ಮಾತನಾಡುತ್ತಾನೆ; ವಿವೇಕಿಯು ಶ್ರೇಷ್ಠವಾದ ಆತ್ಮವುಳ್ಳವನಾಗಿದ್ದಾನೆ. 28. ಬುದ್ಧಿಹೀನನು ಮೌನವಾಗಿದ್ದರೆ ಜ್ಞಾನಿಯೆಂದು ಎಣಿಸಲ್ಪಡುವನು; ತನ್ನ ತುಟಿಗಳನ್ನು ಬಿಗಿ ಹಿಡಿಯುವವನು ವಿವೇಕಿಯೆಂದು ಅನ್ನಿಸಿಕೊಳ್ಳುವನು.
Chapter 18
1. ಅಭಿಲಾಷೆಯಿಂದ ಮನುಷ್ಯನು ತನ್ನನ್ನು ಪ್ರತ್ಯೇಕಿಸಿಕೊಂಡವನಾಗಿ ಎಲ್ಲಾ ಜ್ಞಾನ ಕ್ಕಾಗಿ ಹುಡುಕುತ್ತಾ ಕೈಹಾಕುತ್ತಾನೆ. 2. ವಿವೇಕದಲ್ಲಿ ಬುದ್ಧಿಹೀನನಿಗೆ ಸಂತೋಷವಿಲ್ಲ; ತನ್ನ ಹೃದಯವನ್ನು ಹೊರಪಡಿಸಿಕೊಳ್ಳುವದೇ ಅವನಿಗೆ ಸಂತೋಷ. 3. ದುಷ್ಟನು ಬಂದಾಗ ತಾತ್ಸಾರವೂ ಅವಮಾನದೊಂದಿಗೆ ನಿಂದೆಯೂ ಬರುತ್ತವೆ. 4. ಮನುಷ್ಯನ ಬಾಯಿಯ ಮಾತುಗಳು ಆಳವಾದ ನೀರಿನಂತೆಯೂ ಜ್ಞಾನದ ಬುಗ್ಗೆಯು ಹರಿಯುವ ತೊರೆಯಂತೆಯೂ ಇವೆ. 5. ನನ್ನ ನ್ಯಾಯತೀರ್ಪಿನಲ್ಲಿ ನೀತಿವಂತರನ್ನು ಕೆಡವುವಂತೆ ದುಷ್ಟ ರನ್ನು ಸ್ವೀಕರಿಸುವದು ಯುಕ್ತವಲ್ಲ. 6. ಅವಿವೇಕಿಯ ತುಟಿಗಳು ಕಲಹದಲ್ಲಿ ಸೇರುವದರಿಂದ ಏಟುಗಳನ್ನು ತಿನ್ನುವದಕ್ಕೆ ಅವನ ಬಾಯಿಯು ಕೂಗಿಕೊಳ್ಳುತ್ತದೆ. 7. ಬುದ್ಧಿಹೀನನ ಬಾಯಿಯು ಅವನ ನಾಶನ ಮತ್ತು ಅವನ ತುಟಿಗಳು ಪ್ರಾಣಕ್ಕೆ ಪಾಶ. 8. ಚಾಡಿಕೋರನ ಮಾತುಗಳು ಗಾಯಗಳಂತೆ ಇದ್ದು ಹೊಟ್ಟೆಯೊಳಗೆ ಇಳಿದುಹೋಗುವವು. 9. ಸೋಮಾರಿಯು ತನ್ನ ಕೆಲಸ ದಲ್ಲಿ ಬಹಳವಾಗಿ ಹಾಳುಮಾಡುವವನಿಗೆ ಸಹೋದ ರನು ಆಗಿದ್ದಾನೆ. 10. ಕರ್ತನ ನಾಮವು ಬಲವಾದ ಬುರುಜು; ನೀತಿವಂತನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುತ್ತಾನೆ. 11. ಧನವಂತನ ಐಶ್ವರ್ಯವು ಅವನಿಗೆ ಬಲವಾದ ಪಟ್ಟಣವೂ ತನ್ನ ಅಭಿಪ್ರಾಯ ದಲ್ಲಿ ಎತ್ತರವಾದ ಗೋಡೆಯೂ ಆಗಿದೆ. 12. ನಾಶನಕ್ಕೆ ಮುಂದೆ ಮನುಷ್ಯನ ಹೃದಯವು ಗರ್ವವಾಗಿದೆ; ಸನ್ಮಾನಕ್ಕೆ ಮುಂಚೆ ವಿನಯವಾಗಿದೆ. 13. ಸಂಗತಿಯನ್ನು ಕೇಳುವದಕ್ಕೆ ಮುಂಚೆ ಉತ್ತರ ಕೊಡುವವರಿಗೆ ಅದು ಅವನಿಗೆ ಮೂರ್ಖತನವೂ ಅವಮಾನವೂ ಆಗಿದೆ. 14. ತನ್ನ ಬಲಹೀನತೆಯನ್ನು ಮನುಷ್ಯನ ಆತ್ಮವು ಸಹಿಸುವದು; ಗಾಯಪಟ್ಟ ಆತ್ಮವನ್ನು ಸಹಿಸುವವರು ಯಾರು? 15. ವಿವೇಕಿಯ ಹೃದಯವು ತಿಳುವಳಿಕೆಯನ್ನು ಸಂಪಾದಿಸುತ್ತದೆ; ಮತ್ತು ಜ್ಞಾನಿಯ ಕಿವಿಯು ತಿಳುವಳಿಕೆ ಯನ್ನು ಹುಡುಕುತ್ತದೆ. 16. ಮನುಷ್ಯನ ದಾನವು ತನಗೆ ಅನುಕೂಲವಾಗಿದ್ದು ದೊಡ್ಡವರ ಸನ್ನಿಧಾನಕ್ಕೆ ಅವನನ್ನು ಕರಕೊಂಡು ಹೋಗುತ್ತದೆ. 17. ತನ್ನ ಸಮರ್ಥನೆಯಲ್ಲಿ ಮೊದಲನೆಯವನು ನ್ಯಾಯವಾಗಿದ್ದಾನೆಂದು ತೋರು ತ್ತಾನೆ; ತನ್ನ ನೆರೆಯವನು ಬಂದು ಅವನನ್ನು ಶೋಧಿಸು ತ್ತಾನೆ. 18. ಚೀಟು ಕಲಹಗಳನ್ನು ನಿಲ್ಲಿಸಿ ಬಲಿಷ್ಠರನ್ನು ಅಗಲಿಸುತ್ತದೆ; 19. ಬಲವಾದ ಪಟ್ಟಣಕ್ಕಿಂತ ಅನ್ಯಾಯ ಹೊಂದಿದ ಸಹೋದರನನ್ನು ಸಂಪಾದಿಸುವದು ಕಷ್ಟ ಕರ. ಅವರ ಕಲಹಗಳು ಅರಮನೆಯ ಸಲಾಕಿಗಳಂತೆ ಇವೆ. 20. ತನ್ನ ಬಾಯಿಯ ಫಲದಿಂದ ಮನುಷ್ಯನ ಹೊಟ್ಟೆಯು ತೃಪ್ತಿಹೊಂದುವದು; ತನ್ನ ತುಟಿಗಳ ಆದಾ ಯದಿಂದ ಅವನು ತೃಪ್ತಿಹೊಂದುವನು. 21. ನಾಲಿಗೆಯ ವಶದಲ್ಲಿ ಮರಣವೂ ಜೀವವೂ ಇವೆ; ಅದನ್ನು ಪ್ರೀತಿಸುವವರು ಅದರ ಫಲವನ್ನು ತಿನ್ನುವರು. 22. ಪತ್ನಿ ಯನ್ನು ದೊರಕಿಸಿಕೊಂಡವನು ಒಳ್ಳೇದನ್ನು ಸಂಪಾದಿಸಿ ದವನಾಗಿ ಕರ್ತನ ದಯೆಯನ್ನು ಹೊಂದುತ್ತಾನೆ. 23. ಬಡವನು ವಿಜ್ಞಾಪನೆಗಳನ್ನು ಮಾಡುತ್ತಾನೆ; ಧನಿಕರು ಕಠಿಣವಾಗಿ ಉತ್ತರಕೊಡು ತ್ತಾರೆ. 24. ಸ್ನೇಹಿತರಿದ್ದವನು ಸ್ನೇಹವಾಗಿ ನಡೆದುಕೊಳ್ಳಬೇಕು. ಸಹೋದರನಿಗಿಂತ ಹತ್ತಿರ ಹೊಂದಿಕೊಳ್ಳುವ ಸ್ನೇಹಿತನಿದ್ದಾನೆ.
Chapter 19
1. ತನ್ನ ನಿರ್ದೋಷತ್ವದಲ್ಲಿ ನಡೆಯುವ ಬಡವನು ತನ್ನ ತುಟಿಗಳಲ್ಲಿ ವಕ್ರತೆಯುಳ್ಳ ಬುದ್ಧಿಹೀನನಿಗಿಂತಲೂ ಉತ್ತಮ. 2. ತಿಳುವಳಿಕೆಯಿಲ್ಲದ ಪ್ರಾಣವು ಯುಕ್ತವಲ್ಲ; ತನ್ನ ಪಾದಗಳಿಂದ ದುಡುಕುವ ವನು ಪಾಪಮಾಡುತ್ತಾನೆ. 3. ಮನುಷ್ಯನ ಬುದ್ಧಿಹೀನತೆ ತನ್ನ ದಾರಿಯನ್ನು ತಪ್ಪಿಸುತ್ತದೆ; ಅವನ ಹೃದಯವು ಕರ್ತನಿಗೆ ವಿರೋಧವಾಗಿ ಉರಿಗೊಳ್ಳುತ್ತದೆ. 4. ಐಶ್ವ ರ್ಯವು ಅನೇಕ ಮಂದಿ ಸ್ನೇಹಿತರನ್ನು ಮಾಡಿಕೊಳ್ಳು ತ್ತದೆ; ಬಡವನು ತನ್ನ ನೆರೆಯವನಿಂದ ಪ್ರತ್ಯೇಕಿಸಲ್ಪ ಡುತ್ತಾನೆ. 5. ಸುಳ್ಳುಸಾಕ್ಷಿಯು ಶಿಕ್ಷಿಸಲ್ಪಡದೆ ಇರುವದಿಲ್ಲ; ಸುಳ್ಳಾಡುವವನು ತಪ್ಪಿಸಿಕೊಳ್ಳದೆ ಇರನು. 6. ಅಧಿಪ ತಿಯ ದಯೆಗಾಗಿ ಅನೇಕರು ಬಿನ್ನವಿಸುವರು; ದಾನಗ ಳನ್ನು ಕೊಡುವವನಿಗೆ ಪ್ರತಿಯೊಬ್ಬನೂ ಸ್ನೇಹಿತನೇ. 7. ಬಡವನ ಸಹೋದರರೆಲ್ಲಾ ಅವನನ್ನು ಹಗೆಮಾಡು ತ್ತಾರೆ. ತನ್ನ ಸ್ನೇಹಿತರು ತನ್ನಿಂದ ಎಷ್ಟೋ ಹೆಚ್ಚಾಗಿ ದೂರ ಹೋಗುತ್ತಾರಲ್ಲವೇ? ಮಾತುಗಳಿಂದ ಅವನು ಹಿಂಬಾಲಿಸಿದರೂ ಅವು ಅವನಿಗೆ ಸಾಲುವದಿಲ್ಲ. 8. ಜ್ಞಾನವನ್ನು ಸಂಪಾದಿಸಿಕೊಳ್ಳುವವನು ತನ್ನ ಪ್ರಾಣ ವನ್ನು ಪ್ರೀತಿಸುತ್ತಾನೆ; ವಿವೇಕವನ್ನು ಕೈಕೊಳ್ಳುವವನು ಒಳ್ಳೇದನ್ನು ಕಂಡುಕೊಳ್ಳುವನು. 9. ಸುಳ್ಳು ಸಾಕ್ಷಿಯು ಶಿಕ್ಷಿಸಲ್ಪಡದೆ ಇರುವದಿಲ್ಲ; ಸುಳ್ಳಾಡುವವನು ನಾಶವಾ ಗುವನು. 10. ಬುದ್ಧಿಹೀನನಿಗೆ ಆನಂದವು ಯುಕ್ತವಲ್ಲ; ಅಧಿಪತಿಗಳ ಮೇಲೆ ದೊರೆತನ ಮಾಡುವದು ಸೇವಕ ನಿಗೆ ಯುಕ್ತವೇ ಅಲ್ಲ. 11. ಮನುಷ್ಯನ ವಿವೇಕವು ಅವನ ಕೋಪವನ್ನು ಅಡ್ಡಿಮಾಡುತ್ತದೆ. ದೋಷವನ್ನು ಲಕ್ಷಿ ಸದೆ ಇರುವದು ಅವನಿಗೆ ಘನತೆಯಾಗಿದೆ. 12. ಅರಸನ ಕೋಪವು ಸಿಂಹದ ಘರ್ಜನೆಯಂತಿದೆ; ಅವನ ದಯೆಯು ಹುಲ್ಲಿನ ಮೇಲಿರುವ ಇಬ್ಬನಿಯಂತಿದೆ. 13. ಬುದ್ಧಿಹೀನನಾದ ಮಗನು ತನ್ನ ತಂದೆಗೆ ಹಾನಿಕ ರನು; ಹೆಂಡತಿಯ ಕಲಹಗಳು ಯಾವಾಗಲೂ ತೊಟ್ಟಿ ಕ್ಕುವ ಹನಿಗಳು. 14. ಮನೆಯೂ ಐಶ್ವರ್ಯವೂ ಪಿತೃಗಳ ಸ್ವಾಸ್ಥ್ಯವು; ವಿವೇಕಿಯಾದ ಹೆಂಡತಿಯು ಕರ್ತ ನಿಂದಲೇ. 15. ಮೈಗಳ್ಳತನವು ಗಾಢ ನಿದ್ರೆಯಲ್ಲಿ ಮುಳು ಗಿಸುತ್ತದೆ; ಸೋಮಾರಿಯ ಪ್ರಾಣವು ಹಸಿವೆಗೊಳ್ಳು ವದು. 16. ಆಜ್ಞೆಯನ್ನು ಪಾಲಿಸುವವನು ತನ್ನ ಆತ್ಮವನ್ನು ಪಾಲಿಸುತ್ತಾನೆ; ತನ್ನ ಮಾರ್ಗಗಳನ್ನು ಅಸಡ್ಡೆಮಾಡು ವವನು ಸಾಯುವನು. 17. ಬಡವರಿಗೆ ದಯೆತೋರಿಸು ವವನು. ಕರ್ತನಿಗೆ ಸಾಲ ಕೊಡುತ್ತಾನೆ; ಅವನು ಕೊಟ್ಟದ್ದನ್ನು ಆತನು ತಿರುಗಿ ಅವನಿಗೆ ಕೊಡುತ್ತಾನೆ. 18. ಇನ್ನೂ ನಿರೀಕ್ಷೆ ಇರುವಾಗಲೇ ನಿನ್ನ ಮಗನನ್ನು ಶಿಕ್ಷಿಸು; ಅವನ ಅಳುವಿಕೆಗೆ ನೀನು ಕನಿಕರಿಸದೆ ಇರು. 19. ಮಹಾಕೋಪಿಷ್ಠನು ಶಿಕ್ಷೆಯನ್ನು ಅನುಭವಿಸುವನು; ಅವನನ್ನು ನೀನು ಬಿಡಿಸಿದರೆ ತಿರುಗಿ ನೀನು ಅದನ್ನು ಮಾಡಬೇಕಾಗುತ್ತದೆ. 20. ಆಲೋಚನೆಯನ್ನು ಕೇಳಿ ಶಿಕ್ಷಣವನ್ನು ಅಂಗೀಕರಿಸು. ಕಡೆಯಲ್ಲಿ ನೀನು ಜ್ಞಾನಿ ಯಾಗುವಿ. 21. ಮನುಷ್ಯನ ಹೃದಯದಲ್ಲಿ ಅನೇಕ ಕಲ್ಪನೆಗಳಿವೆ; ಆದರೂ ಕರ್ತನ ಸಂಕಲ್ಪವೇ ಈಡೇರು ವದು. 22. ಮನುಷ್ಯನ ಆಕಾಂಕ್ಷೆಯು ಆತನ ದಯೆಯೇ; ಬಡವನು ಸುಳ್ಳುಗಾರನಿಗಿಂತ ಒಳ್ಳೆಯವನು. 23. ಕರ್ತನ ಭಯವು ಜೀವಕ್ಕೆ ಒಲಿಯುತ್ತದೆ; ಅದನ್ನು ಹೊಂದಿದ ವನು ತೃಪ್ತನಾಗಿ ನೆಲೆಗೊಳ್ಳುವನು; ಅವನಿಗೆ ಕೇಡು ಸಂಭವಿಸುವದಿಲ್ಲ. 24. ಸೋಮಾರಿಯು ತನ್ನ ಕೈಯನ್ನು ಎದೆಯಲ್ಲಿ ಬಚ್ಚಿಟ್ಟು ತನ್ನ ಬಾಯಿಗೆ ಸಹ ಅದನ್ನು ಎತ್ತುವದಿಲ್ಲ. 25. ಪರಿಹಾಸ್ಯಗಾರರನ್ನು ಹೊಡೆದರೆ ಮೂಢರು ಎಚ್ಚರಗೊಳ್ಳುವರು; ವಿವೇಕಿಯನ್ನು ಗದರಿಸಿ ದರೆ ಅವನು ತಿಳುವಳಿಕೆಯನ್ನು ಗ್ರಹಿಸುವನು. 26. ತಂದೆಯನ್ನು ನಷ್ಟಪಡಿಸಿ ತಾಯಿಯನ್ನು ಓಡಿಸುವವನು ನಾಚಿಕೆಯನ್ನುಂಟು ಮಾಡಿ ನಿಂದೆಯನ್ನು ತರುತ್ತಾನೆ. 27. ನನ್ನ ಮಗನೇ, ತಿಳುವಳಿಕೆಯ ಮಾತುಗಳಿಂದ ದಾರಿ ತಪ್ಪಿಸುವ ಬೋಧನೆಯನ್ನು ಕೇಳದಿರು. 28. ಭಕ್ತಿಹೀ ನನ ಸಾಕ್ಷಿಯು ನ್ಯಾಯತೀರ್ಪನ್ನು ಗೇಲಿಮಾಡುತ್ತವೆ. ದುಷ್ಟನ ಬಾಯಿಯು ದ್ರೋಹವನ್ನು ನುಂಗುವದು. 29. ಪರಿಹಾಸ್ಯಗಾರರಿಗೆ ನ್ಯಾಯತೀರ್ಪುಗಳೂ ಬುದ್ಧಿ ಹೀನರ ಬೆನ್ನಿಗೆ ಪೆಟ್ಟುಗಳೂ ಸಿದ್ಧವಾಗಿವೆ.
Chapter 20
1. ದ್ರಾಕ್ಷಾರಸವು ಪರಿಹಾಸ್ಯಕರವಾಗಿದೆ; ಮಾದಕ ಮದ್ಯವು ಉದ್ರೇಕಿಸುತ್ತದೆ. ಇದ ರಿಂದ ಮೋಸಹೋದವನು ಜ್ಞಾನಿಯಲ್ಲ. 2. ಅರಸನ ಭಯವು ಸಿಂಹದ ಗರ್ಜನೆಯಂತಿದೆ; ಅವನಿಗೆ ಕೋಪ ವನ್ನೆಬ್ಬಿಸುವವನು ತನ್ನ ಪ್ರಾಣಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ. 3. ಕಲಹವನ್ನು ತಡೆಯುವವನು ಮಾನಕ್ಕೆ ಯೋಗ್ಯನು; ಪ್ರತಿಯೊಬ್ಬ ಬುದ್ಧಿಹೀನನು ತಲೆಹಾಕು ತ್ತಾನೆ. 4. ಮೈಗಳ್ಳನು ಚಳಿಯ ನಿಮಿತ್ತವಾಗಿ ಉಳುವದಿಲ್ಲ; ಆದಕಾರಣ ಸುಗ್ಗಿಯಲ್ಲಿ ಅವನು ಬೇಡಿಕೊಂಡರೂ ಏನೂ ಸಿಕ್ಕುವದಿಲ್ಲ. 5. ಮನುಷ್ಯನ ಹೃದಯದ ಆಲೋ ಚನೆಯು ಆಳವಾದ (ಬಾವಿಯ) ನೀರಿನಂತಿದೆ; ವಿವೇ ಕಿಯು ಅದನ್ನು ಸೇದುವನು. 6. ಅನೇಕರಲ್ಲಿ ಪ್ರತಿಯೊ ಬ್ಬನು ತಮ್ಮ ಸ್ವಂತ ಸೌಜನ್ಯವನ್ನು ಸಾರುವನು; ನಂಬಿ ಗಸ್ತನಾದ ಮನುಷ್ಯನನ್ನು ಯಾರು ಕಂಡುಕೊಳ್ಳಬಲ್ಲರು? 7. ನೀತಿವಂತನು ತನ್ನ ಯಥಾರ್ಥತೆಯಲ್ಲಿ ನಡೆಯುತ್ತಾನೆ; ಅವನು ಗತಿಸಿದ ಮೇಲೆ ಅವನ ಮಕ್ಕಳು ಆಶೀರ್ವದಿ ಸಲ್ಪಡುವರು. 8. ನ್ಯಾಯತೀರ್ಪಿನ ಸಿಂಹಾಸನದ ಮೇಲೆ ಕೂತಿರುವ ಅರಸನು ತನ್ನ ಕಣ್ಣು ದೃಷ್ಟಿಯಿಂದ ಸಕಲ ಕೆಟ್ಟತನವನ್ನು ಚದರಿಸುವನು. 9. ನನ್ನ ಹೃದಯವನ್ನು ಶುದ್ಧಿಮಾಡಿಕೊಂಡಿದ್ದೇನೆ, ನನ್ನ ಪಾಪದಿಂದ ನಾನು ಶುದ್ಧನು ಎಂದು ಯಾರು ಹೇಳಬಲ್ಲರು? 10. ವಿಧ ವಿಧವಾದ ತೂಕಗಳೂ ತರತರವಾದ ಅಳತೆಗಳೂ ಇವೆರಡೂ ಸಮವಾಗಿಯೇ ಕರ್ತನಿಗೆ ಅಸಹ್ಯ. 11. ತನ್ನ ಕೆಲಸವು ಶುದ್ಧವೋ ಇಲ್ಲವೆ ನ್ಯಾಯವೋ ಎಂಬದು ತನ್ನ ಕ್ರಿಯೆಗಳಿಂದಲೇ ಹುಡುಗನು ತೋರ್ಪಡಿಸಿ ಕೊಳ್ಳುತ್ತಾನೆ. 12. ಕೇಳುವ ಕಿವಿ ನೋಡುವ ಕಣ್ಣು, ಇವೆರಡನ್ನು ಕರ್ತನು ಮಾಡಿದ್ದಾನೆ. 13. ನೀನು ಬಡ ತನಕ್ಕೆ ಬಾರದಂತೆ ನಿದ್ರೆಯಲ್ಲಿ ಆಸಕ್ತಿಯುಳ್ಳವನಾಗಿರ ಬೇಡ; ನಿನ್ನ ಕಣ್ಣುಗಳನ್ನು ತೆರೆದರೆ ನೀನು ರೊಟ್ಟಿ ಯಿಂದ ತೃಪ್ತನಾಗುವಿ. 14. ಇದು ನಿಷ್ಪ್ರಯೋಜಕವಾದದ್ದು, ಇದು ನಿಷ್ಪ್ರಯೋಜಕವಾದದ್ದು ಎಂದು ಕೊಳ್ಳು ವವನು ಹೇಳುತ್ತಾನೆ. ಅವನು ಹೋದ ಮೇಲೆ ಹೊಗ ಳುತ್ತಾನೆ. 15. ಬಂಗಾರವೂ ಮಾಣಿಕ್ಯಗಳ ರಾಶಿಯೂ ಇವೆ. ತಿಳುವಳಿಕೆಯ ತುಟಿಗಳು ಅಮೂಲ್ಯವಾದ ರತ್ನ ವಾಗಿವೆ. 16. ಪರರ ಹೊಣೆಯಾಗಿರುವ ಬಟ್ಟೆಯನ್ನು ತೆಗೆದುಕೋ; ಪರಸ್ತ್ರೀಗೋಸ್ಕರ ಅವನಿಂದ ಒತ್ತೆ ತೆಗೆ ದುಕೋ. 17. ಮೋಸದಿಂದ ಸಿಕ್ಕಿದ ರೊಟ್ಟಿಯು ಮನು ಷ್ಯನಿಗೆ ರುಚಿ; ಆಮೇಲೆ ಅವನ ಬಾಯಿಯು ಮರಳಿ ನಿಂದ ತುಂಬುವದು. 18. ಪ್ರತಿಯೊಂದು ಉದ್ದೇಶವು ಆಲೋಚನೆಯಿಂದ ಸಫಲವಾಗುವದು; ಹಿತವಾದ ಸಲಹೆಯಿಂದ ಯುದ್ಧಮಾಡು. 19. ತಿರುಗುವ ಚಾಡಿ ಕೋರನು ಗುಟ್ಟುಗಳನ್ನು ರಟ್ಟುಮಾಡುತ್ತಾನೆ. ಆದ ಕಾರಣ ತನ್ನ ತುಟಿಗಳಿಂದ ಮುಖಸ್ತುತಿ ಮಾಡುವವನ ಗೊಡವೆಗೆ ಹೋಗಬೇಡ. 20. ತನ್ನ ತಂದೆ ತಾಯಿಯನ್ನಾ ಗಲಿ ಶಪಿಸುವವನ ದೀಪವು ಮಂಕಾದ ಕತ್ತಲೆಯಲ್ಲಿ ಆರಿಹೋಗುವದು. 21. ಮೊದಲು ಸ್ವಾಸ್ತ್ಯವನ್ನೂ ತ್ವರೆ ಯಾಗಿ ಹೊಂದಬಹುದು; ಅದರ ಕೊನೆಯು ಆಶೀ ರ್ವದಿಸಲ್ಪಡುವದಿಲ್ಲ. 22. ನೀನು--ಕೇಡಿಗೆ ಮುಯ್ಯಿ ತೀರಿಸುವೆನು ಅನ್ನಬೇಡ; ಕರ್ತನನ್ನು ನಿರೀಕ್ಷಿಸು; ಆಗ ಆತನು ನಿನ್ನನ್ನು ರಕ್ಷಿಸುವನು. 23. ವಿಧವಿಧವಾದ ತೂಕ ಗಳು ಕರ್ತನಿಗೆ ಅಸಹ್ಯವಾಗಿವೆ; ಮೋಸದ ತಕ್ಕಡಿಯು ಒಳ್ಳೇದಲ್ಲ. 24. ಮನುಷ್ಯನ ನಡೆಗಳು ಕರ್ತನಿಂದಲೇ; ಹಾಗಾದರೆ ಒಬ್ಬ ಮನುಷ್ಯನು ತನ್ನ ಮಾರ್ಗವನ್ನು ಹೇಗೆ ತಿಳುಕೊಳ್ಳಬಲ್ಲನು? 25. ಪರಿಶುದ್ಧವಾದದ್ದನ್ನು ನುಂಗಿದವನಾಗಿ ತರುವಾಯ ವಿಚಾರಿಸುವದಕ್ಕಾಗಿ ಆಣೆಯಿಟ್ಟು ಕೊಳ್ಳುವದು ಒಬ್ಬ ಮನುಷ್ಯನಿಗೆ ಉರ್ಲಾ ಗಿದೆ. 26. ಜ್ಞಾನಿಯಾದ ಅರಸನು ದುಷ್ಟರನ್ನು ಚದರಿಸಿ ಅವರ ಮೇಲೆ ಚಕ್ರವನ್ನು ಎಳೆಯುತ್ತಾನೆ. 27. ಮನುಷ್ಯನ ಆತ್ಮವು ಹೊಟ್ಟೆಯ ಒಳಭಾಗಗಳನ್ನು ಶೋಧಿಸುವಂಥ ಕರ್ತನ ದೀಪವಾಗಿವೆ. 28. ಕರುಣೆಯೂ ಸತ್ಯವೂ ಅರಸನನ್ನು ಕಾಯುತ್ತದೆ; ಕರುಣೆಯಿಂದಲೇ ಅವನ ಸಿಂಹಾಸನವು ಸ್ಥಿರಗೊಳ್ಳುತ್ತದೆ. 29. ಯೌವನಸ್ಥರ ಘನತೆಯು ಅವರ ಬಲವೇ; ಮುದುಕರ ಅಲಂಕಾರವು ನರೆತ ತಲೆಯೇ. 30. ನೀಲಿಯಾದ ಗಾಯವು ದುಷ್ಟ ತ್ವವನ್ನು ತೊಳೆಯುತ್ತದೆ; ಹಾಗೆಯೇ ಏಟುಗಳು ಹೊಟ್ಟೆಯ ಒಳಭಾಗಗಳನ್ನು ಶುದ್ಧಮಾಡುತ್ತವೆ.
Chapter 21
1. ನೀರಿನ ನದಿಗಳಂತೆ ಅರಸನ ಹೃದಯವು ಕರ್ತನ ಕೈಯಲ್ಲಿದೆ; ತನಗೆ ಇಷ್ಟವಾದ ಕಡೆಗೆ ಆತನು ಅದನ್ನು ತಿರುಗಿಸುತ್ತಾನೆ. 2. ತನ್ನ ದೃಷ್ಟಿ ಯಲ್ಲಿ ಮನುಷ್ಯನ ಪ್ರತಿಯೊಂದು ಮಾರ್ಗವು ಸರಿ ಯಾಗಿದೆ; ಕರ್ತನು ಹೃದಯಗಳನ್ನು ಪರೀಕ್ಷಿಸುತ್ತಾನೆ. 3. ಯಜ್ಞಕ್ಕಿಂತ ನೀತಿನ್ಯಾಯಗಳನ್ನು ನಡಿಸುವದು ಕರ್ತ ನಿಗೆ ಎಷ್ಟೋ ಮೆಚ್ಚಿಕೆಯಾಗಿದೆ. 4. ಹೆಮ್ಮೆಯ ದೃಷ್ಟಿ, ಗರ್ವದ ಹೃದಯ, ದುಷ್ಟರ ಉಳುವಿಕೆ ಪಾಪವೇ. 5. ಶ್ರದ್ಧೆಯುಳ್ಳ ಯೋಚನೆಗಳು ಸಮ್ಮದ್ಧಿಗೆ ಒಲಿಯುತ್ತವೆ; ಆತುರಪಡುವ ಪ್ರತಿಯೊಬ್ಬನ ಯೋಚನೆಗಳು ಕೊರ ತೆಗೆ ಉಳಿಯುತ್ತವೆ. 6. ಸುಳ್ಳಿನ ನಾಲಿಗೆಯಿಂದ ಸಂಪಾ ದಿಸುವ ಸಂಪತ್ತು ಮೃತ್ಯುವನ್ನು ಹುಡುಕುವವರಿಂದ ಬಡಿಯಲ್ಪಟ್ಟ ವ್ಯರ್ಥತ್ವವಾಗಿದೆ. 7. ದುಷ್ಟರ ಸೂರೆಯು ಅವರನ್ನು ನಾಶಪಡಿಸುವದು; ನ್ಯಾಯವಾದದ್ದನ್ನು ಮಾಡುವದನ್ನು ಅವರು ನಿರಾಕರಿಸುತ್ತಾರೆ. 8. ಮನುಷ್ಯನ ಮಾರ್ಗವು ಡೊಂಕು ಮತ್ತು ಅಪರಿಚಿತ; ಪವಿತ್ರನಿ ಗಾದರೋ ಅವನ ಕ್ರಿಯೆಯು ಸರಳ. 9. ವಿಶಾಲವಾದ ಮನೆಯಲ್ಲಿ ಜಗಳಗಂಟಿಯೊಂದಿಗೆ ಇರುವದಕ್ಕಿಂತ ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವದು ಲೇಸು. 10. ದುಷ್ಟರ ಮನಸ್ಸು ಕೇಡನ್ನು ಅಪೇಕ್ಷಿಸುತ್ತದೆ; ಅವನ ದೃಷ್ಟಿಯಲ್ಲಿ ತನ್ನ ನೆರೆಯವನು ಯಾವ ದಯೆ ಯನ್ನು ಕಂಡುಕೊಳ್ಳುವದಿಲ್ಲ. 11. ಪರಿಹಾಸ್ಯಕರನ್ನು ಶಿಕ್ಷಿಸಿ ದರೆ ಬುದ್ಧಿಹೀನರು ಜ್ಞಾನವಂತರಾಗುವರು; ಜ್ಞಾನಿಯು ಶಿಕ್ಷಣ ಹೊಂದಿದರೆ ಅವನು ತಿಳುವಳಿಕೆಯನ್ನು ಹೊಂದು ತ್ತಾನೆ. 12. ನೀತಿವಂತನು ದುಷ್ಟನ ಮನೆಯನ್ನು ಬುದ್ಧಿ ಯಿಂದ ಲಕ್ಷಿಸುತ್ತಾನೆ; ಅವರ ದುಷ್ಟತನಕ್ಕಾಗಿ ದೇವರು ಅವರನ್ನು ಕೆಡವುತ್ತಾನೆ. 13. ಬಡವರ ಕೂಗಿಗೆ ತನ್ನ ಕಿವಿಗಳನ್ನು ಮುಚ್ಚಿಕೊಳ್ಳುವವನು ತಾನು ಕೂಗಿದಾಗ ಯಾರೂ ಅವನಿಗೆ ಉತ್ತರಕೊಡುವದಿಲ್ಲ. 14. ಗುಪ್ತ ಲಂಚವು ಕೋಪವನ್ನು ಅಡಗಿಸುವದು; ಎದೆಯಲ್ಲಿ ಕೊಟ್ಟ ಬಹುಮಾನವು ರೌದ್ರವನ್ನು ಆರಿಸುತ್ತದೆ. 15. ನ್ಯಾಯತೀರಿಸುವದು ನೀತಿವಂತರಿಗೆ ಸಂತೋಷವಾ ಗಿದೆ; ಅಕ್ರಮವನ್ನು ಮಾಡುವವರಿಗೆ ನಾಶನ. 16. ವಿವೇ ಕದ ಮಾರ್ಗವನ್ನು ಬಿಟ್ಟು, ತಿರುಗುವವನು ಸತ್ತವರ ಕೂಟದಲ್ಲಿ ಇರುವಂಥವನಾಗಿದ್ದಾನೆ. 17. ಭೋಗಾಸ ಕ್ತನು ಕೊರತೆಪಡುವನು; ದ್ರಾಕ್ಷಾರಸವನ್ನೂ ತೈಲವನ್ನೂ ಅಪೇಕ್ಷಿಸುವವನು ನಿರ್ಭಾಗ್ಯನಾಗುವನು. 18. ನೀತಿ ವಂತರಿಗಾಗಿ ದುಷ್ಟರೂ ಯಥಾರ್ಥವಂತರಿಗಾಗಿ ದೋಷಕರೂ ಈಡಾಗುವರು. 19. ಕಾಡುವ ಕೋಪವುಳ್ಳ ಸ್ತ್ರೀಯೊಂದಿಗೆ ವಾಸಮಾಡುವದಕ್ಕಿಂತ ಅಡವಿಯಲ್ಲಿ ವಾಸಿಸುವದು ಲೇಸು. 20. ಜ್ಞಾನವಂತರ ನಿವಾಸದಲ್ಲಿ ಅಪೇಕ್ಷಿಸತಕ್ಕ ಐಶ್ವರ್ಯವೂ ಎಣ್ಣೆಯೂ ಇರುತ್ತವೆ; ಬುದ್ಧಿಹೀನನು ಇದ್ದದ್ದನ್ನು ಖರ್ಚು ಮಾಡುತ್ತಾನೆ. 21. ನೀತಿಯನ್ನೂ ಕರುಣೆಯನ್ನೂ ಹಿಂಬಾಲಿಸುವವನು; ಜೀವವನ್ನೂ ನೀತಿಯನ್ನೂ ಕೀರ್ತಿಯನ್ನೂ ಕಂಡು ಕೊಳ್ಳುತ್ತಾನೆ. 22. ಜ್ಞಾನಿಯು ಬಲಿಷ್ಠರ ಪಟ್ಟಣವನ್ನು ಹತ್ತಿ ಅದರಲ್ಲಿ ಭರವಸವಿಟ್ಟು ಬಲವನ್ನು ಕೆಡವಿ ಹಾಕು ತ್ತಾನೆ. 23. ತನ್ನ ಬಾಯಿಯನ್ನು ನಾಲಿಗೆಯನ್ನು ಕಾಯುವ ವನು ಇಕ್ಕಟ್ಟುಗಳಿಂದ ತನ್ನ ಪ್ರಾಣವನ್ನು ಕಾಪಾಡಿ ಕೊಳ್ಳುತ್ತಾನೆ. 24. ಸೊಕ್ಕೇರಿದ ಗರ್ವದಲ್ಲಿ ವರ್ತಿಸುವ ವನ ಹೆಸರು ಅಹಂಕಾರಿ ಮತ್ತು ಪರಿಹಾಸ್ಯಕನು. 25. ಸೋಮಾರಿಯ ಆಶೆಯು ಅವನನ್ನು ಕೊಲ್ಲುತ್ತವೆ. ಅವನ ಕೈಗಳು ದುಡಿಯುವದಕ್ಕೆ ನಿರಾಕರಿಸುತ್ತವೆ. 26. ದಿನವೆಲ್ಲಾ ಅವನು ದುರಾಶೆಯಿಂದ ಆಶಿಸುತ್ತಾನೆ; ಆದರೆ ನೀತಿವಂತನು ಹಿಂತೆಗೆಯದೇ ಕೊಡುತ್ತಾನೆ. 27. ದುಷ್ಟರ ಯಜ್ಞವು ಅಸಹ್ಯ; ಹೀಗಾದರೆ ದುರ್ಬುದ್ಧಿ ಯಿಂದ ಅದನ್ನು ಅರ್ಪಿಸಿದರೆ ಇನ್ನೂ ಎಷ್ಟೋ ಅಸಹ್ಯ ಕರವಾಗಿದೆ. 28. ಸುಳ್ಳುಸಾಕ್ಷಿಯವನು ನಾಶವಾಗುವನು; ಕೇಳುವವನು ಬಿಡದೆ ಮಾತಾಡುವನು. 29. ದುಷ್ಟನು ತನ್ನ ಮುಖವನ್ನು ಕಠಿಣಮಾಡಿಕೊಳ್ಳುತ್ತಾನೆ; ಯಥಾ ರ್ಥವಂತನಾದರೋ ತನ್ನ ಮಾರ್ಗವನ್ನು ಸರಿಪಡಿಸಿ ಕೊಳ್ಳುತ್ತಾನೆ. 30. ಕರ್ತನಿಗೆ ವಿರೋಧವಾಗಿ ಯಾವ ಜ್ಞಾನವೂ ವಿವೇಕವೂ ಆಲೋಚನೆಯೂ ಇಲ್ಲ. 31. ಯುದ್ಧದ ದಿನಕ್ಕಾಗಿ ಕುದುರೆಯು ಸಿದ್ಧವಾಗಿರುತ್ತದೆ; ಭದ್ರತೆಯು ಕರ್ತನಿಂದಲೇ.
Chapter 22
1. ಬಹು ಐಶ್ವರ್ಯಕ್ಕಿಂತಲೂ ಒಳ್ಳೆಯ ಹೆಸರನ್ನೂ ಬೆಳ್ಳಿ ಬಂಗಾರಕ್ಕಿಂತ ಪ್ರೀತಿಯ ದಯವನ್ನೂ ಆರಿಸಿಕೊಳ್ಳುವದು ಉತ್ತಮ. 2. ಧನಿಕರು, ಬಡವರು ಒಟ್ಟಾಗಿ ಸಂಧಿಸುತ್ತಾರೆ; ಅವರೆಲ್ಲರನ್ನು ಸೃಷ್ಟಿಸಿದಾತನು ಕರ್ತನೇ. 3. ಜಾಣನು ಕೇಡನ್ನು ಮುಂದಾಗಿ ನೋಡಿ ಅಡಗಿಕೊಳ್ಳುತ್ತಾನೆ; ಬುದ್ಧಿಹೀನರು ಮುಂದೆ ಹೋಗಿ ಶಿಕ್ಷೆಯನ್ನು ಹೊಂದುತ್ತಾರೆ. 4. ಐಶ್ವ ರ್ಯವೂ ಮಾನವೂ ಜೀವವೂ ವಿನಯ ಕರ್ತನ ಭಯದಿಂದಲೇ. 5. ಮೂಢರ ದಾರಿಯಲ್ಲಿ ಮುಳ್ಳು ಗಳೂ ಉರುಲುಗಳೂ ಇವೆ; ತನ್ನ ಪ್ರಾಣವನ್ನು ಕಾಪಾ ಡಿಕೊಳ್ಳುವವನು ಅವುಗಳಿಂದ ದೂರವಾಗಿರುವನು. 6. ನಡೆಯಬೇಕಾದ ಮಾರ್ಗದಲ್ಲಿರುವಂತೆ ಹುಡುಗನಿಗೆ ಶಿಕ್ಷಣಕೊಡು; ಆಗ ಮುಪ್ಪಿನಲ್ಲಿಯೂ ಅವನು ಅದ ರಿಂದ ಹೊರಟು ಹೋಗುವದಿಲ್ಲ. 7. ಐಶ್ವರ್ಯವಂತನು ಬಡವನ ಮೇಲೆ ಆಳುತ್ತಾನೆ. ಸಾಲಗಾರನು ಸಾಲಕೊಟ್ಟ ವನಿಗೆ ಸೇವಕನು. 8. ಕೆಟ್ಟತನವನ್ನು ಬಿತ್ತುವವನು ವ್ಯರ್ಥ ವನ್ನು ಕೊಯ್ಯುವನು; ಅವನ ಕೋಪದ ದಂಡವು ಬಿದ್ದುಹೋಗುವದು. 9. ದಯಾದೃಷ್ಟಿಯುಳ್ಳವನು ಆಶೀ ರ್ವಾದವನ್ನು ಹೊಂದುವನು; ತನಗಿದ್ದ ಆಹಾರದಲ್ಲಿ ಬಡವರಿಗೆ ಕೊಡುತ್ತಾನೆ. 10. ಪರಿಹಾಸ್ಯ ಮಾಡುವವ ನನ್ನು ಹೊರಗೆ ತಳ್ಳಿಬಿಟ್ಟರೆ ಕಲಹವು ನಿಲ್ಲುವದು; ಹೌದು, ವಿವಾದವೂ ನಿಂದೆಯೂ ನಿಂತುಹೋಗು ವವು. 11. ಹೃದಯ ಶುದ್ಧಿಯನ್ನು ಪ್ರೀತಿಸುವವನಿಗೆ ತನ್ನ ತುಟಿಗಳ ಕೃಪೆಗಾಗಿ ಅರಸನು ಅವನಿಗೆ ಸ್ನೇಹಿತ ನಾಗಿರುವನು. 12. ಕರ್ತನ ಕಣ್ಣುಗಳು ತಿಳುವಳಿಕೆಯನ್ನು ಕಾಪಾಡುತ್ತವೆ; ಆತನು ದೋಷಿಯ ಮಾತುಗಳನ್ನು ಕೆಡವಿಹಾಕುತ್ತಾನೆ. 13. ಸೋಮಾರಿಯು--ಹೊರಗೆ ಸಿಂಹವಿದೆ; ಅದು ನನ್ನನ್ನು ಬೀದಿಗಳಲ್ಲಿ ಕೊಂದು ಹಾಕುತ್ತದೆ ಎಂದು ಹೇಳುತ್ತಾನೆ. 14. ಪರಸ್ತ್ರೀಯ ಬಾಯಿ ಆಳವಾದ ಕುಣಿ; ಕರ್ತನಿಗೆ ಅಸಹ್ಯವಾದವನು ಅದರಲ್ಲಿ ಬೀಳುವನು. 15. ಮೂರ್ಖತನವು ಹುಡುಗನ ಹೃದಯದಲ್ಲಿ ಕಟ್ಟಲ್ಪಟ್ಟಿದೆ. ಶಿಕ್ಷೆಯ ಬೆತ್ತವು ಅದನ್ನು ಅವನಿಂದ ದೂರವಾಗಿ ಓಡಿಸಿಬಿಡುವದು. 16. ತನ್ನ ಐಶ್ವರ್ಯವನ್ನು ವೃದ್ಧಿಗೊಳಿಸುವದಕ್ಕಾಗಿ ಬಡವರನ್ನು ಹಿಂಸಿಸುವವನೂ ಐಶ್ವರ್ಯವಂತರಿಗೆ ಕೊಡುವವನೂ ನಿಶ್ಚಯವಾಗಿ ಕೊರತೆಪಡುವನು. 17. ಕಿವಿಗೊಟ್ಟು ಜ್ಞಾನಿ ಗಳ ಮಾತನ್ನು ಕೇಳು; ನನ್ನ ತಿಳುವಳಿಕೆಗೆ ನಿನ್ನ ಹೃದಯ ವನ್ನು ಪ್ರಯೋಗಿಸು. 18. ಅವುಗಳನ್ನು ನಿನ್ನೊಳಗೆ ಕಾಪಾಡಿದರೆ ಅದು ರಮ್ಯವಾಗಿದೆ; ಅವು ನಿನ್ನ ತುಟಿ ಗಳಲ್ಲಿ ಹೊಂದಿಕೊಂಡಿರುವವು. 19. ನಿನ್ನ ಭರವಸವು ಕರ್ತನಲ್ಲಿ ಇರುವಂತೆ ನಿನಗೆ ಈ ದಿವಸ ತಿಳಿಯ ಪಡಿಸಿದ್ದೇನೆ. 20. ಸತ್ಯದ ಮಾತುಗಳ ಸ್ಥಿರತೆಯನ್ನು ನಾನು ನಿನಗೆ ತಿಳಿಯಪಡಿಸುವಂತೆಯೂ ನಿನ್ನ ಕಡೆಗೆ ಕಳುಹಿ ಸಿದವರಿಗೆ 21. ನೀನು ಸತ್ಯದ ಮಾತುಗಳನ್ನು ಉತ್ತರಿ ಸುವಂತೆಯೂ ಆಲೋಚನೆಗಳ ತಿಳುವಳಿಕೆಯಲ್ಲಿ ಶ್ರೇಷ್ಠವಾದ ಸಂಗತಿಗಳನ್ನು ನಿನಗೆ ಬರೆಯಲಿಲ್ಲವೋ? 22. ಅವನು ಬಡವನೆಂದು ಬಡವನನ್ನು ಸೂರೆಮಾಡ ಬೇಡ; ಮಾತ್ರವಲ್ಲದೆ ದ್ವಾರದಲ್ಲಿ ದರಿದ್ರರನ್ನು ಹಿಂಸಿಸ ಬೇಡ. 23. ಕರ್ತನು ಅವರ ವ್ಯಾಜ್ಯವನ್ನು ನಡಿಸಿ ಸೂರೆ ಮಾಡಿದವರ ಪ್ರಾಣವನ್ನು ಸೂರೆಮಾಡುವನು. 24. ಸಿಟ್ಟುಗಾರನೊಂದಿಗೆ ಸ್ನೇಹಮಾಡಬೇಡ; ಕೋಪಿ ಷ್ಠನ ಸಂಗಡ ನೀನು ಹೋಗಬೇಡ. 25. ಹಾಗೆ ಮಾಡಿ ದರೆ ನೀನು ಅವನ ನಡತೆಗಳನ್ನು ಕಲಿತು ನಿನ್ನ ಪ್ರಾಣಕ್ಕೆ ಉರ್ಲನ್ನು ಸಿಕ್ಕಿಸಿಕೊಳ್ಳುವಿ. 26. ಕೈ ಕೊಡುವವರಲ್ಲಿ ಇಲ್ಲವೆ ಸಾಲಕ್ಕೆ ಹೊಣೆಯಾಗುವವರಲ್ಲಿ ನೀನು ಒಬ್ಬ ನಾಗಬೇಡ. 27. ಸಲ್ಲಿಸುವದಕ್ಕೆ ನಿನಗೆ ಏನೂ ಇಲ್ಲದೆ ಹೋದರೆ ನಿನ್ನ ಕೆಳಗಿನ ಹಾಸಿಗೆಯನ್ನು ಅವನು ತೆಗೆದು ಕೊಂಡು ಹೋಗುವದು ಯಾಕೆ? 28. ನಿನ್ನ ಪಿತೃಗಳು ಹಾಕಿದ ಪೂರ್ವಕಾಲದ ಮೇರೆಯನ್ನು ತೆಗೆಯಬೇಡ. 29. ತನ್ನ ಕೆಲಸದಲ್ಲಿ ಶ್ರದ್ಧೆಯುಳ್ಳವನನ್ನು ನೀನು ನೋಡಿ ದ್ದೀಯಾ? ಅವನು ನೀಚರ ಮುಂದೆ ಅಲ್ಲ, ಅರಸರ ಮುಂದೆಯೇ ನಿಲ್ಲುವನು.
Chapter 23
1. ಆಳುವವನ ಸಂಗಡ ನೀನು ಊಟಕ್ಕೆ ಕೂತಿರುವಾಗ ನಿನ್ನ ಎದುರಿನಲ್ಲಿ ಯಾವದು ಇದೆ ಎಂದು ಶ್ರದ್ಧೆಯಿಂದ ಆಲೋಚಿಸು; 2. ನೀನು ಹೊಟ್ಟೆ ಬಾಕನಾಗಿದ್ದರೆ ನಿನ್ನ ಕುತ್ತಿಗೆಗೆ ಕತ್ತಿಯನ್ನು ಇಟ್ಟುಕೋ. 3. ಅವನ ರುಚಿ ಪದಾರ್ಥಗಳನ್ನು ಅಪೇಕ್ಷಿ ಸಬೇಡ; ಅದು ಮೋಸದ ಆಹಾರವು. 4. ಐಶ್ವರ್ಯ ವಂತನಾಗುವದಕ್ಕೆ ಪ್ರಯಾಸಪಡಬೇಡ; ನಿನ್ನ ಸ್ವಂತ ಜ್ಞಾನವನ್ನು ಬಿಟ್ಟುಬಿಡು. 5. ಇಲ್ಲದಿರುವದರ ಮೇಲೆ ನಿನ್ನ ದೃಷ್ಟಿಯನ್ನು ಇಡುವಿಯಾ? ಐಶ್ವರ್ಯವು ನಿಸ್ಸಂದೇಹವಾಗಿ ರೆಕ್ಕೆಗಳನ್ನು ಕಟ್ಟಿಕೊಂಡು ಹದ್ದಿನಂತೆ ಆಕಾಶದ ಕಡೆಗೆ ಹಾರಿಹೋಗುತ್ತದೆ. 6. ಕೆಟ್ಟದೃಷ್ಟಿ ಯುಳ್ಳವನ ರೊಟ್ಟಿಯನ್ನು ತಿನ್ನಬೇಡ; ಇಲ್ಲವೆ ಅವನ ರುಚಿ ಪದಾರ್ಥಗಳನ್ನು ಆಶಿಸಬೇಡ; 7. ಅವನು ತನ್ನ ಹೃದಯದಲ್ಲಿ ಯೋಚಿಸುವಂತೆಯೇ ಇದ್ದಾನೆ; ಅವನು --ತಿನ್ನು, ಕುಡಿ ಎಂದು ಹೇಳುತ್ತಾನೆ; ಅವನ ಹೃದಯವು ನಿನ್ನೊಂದಿಗಿಲ್ಲ. 8. ನೀನು ತಿಂದ ತುತ್ತನ್ನು ಕಕ್ಕಿಬಿಟ್ಟು ನಿನ್ನ ಸವಿಮಾತುಗಳನ್ನು ಕಳೆದುಕೊಳ್ಳುವಿ. 9. ಬುದ್ಧಿ ಹೀನನ ಸಂಗಡ ಮಾತಾಡಬೇಡ; ನಿನ್ನ ಮಾತುಗಳ ಜ್ಞಾನವನ್ನು ಅವನು ತಿರಸ್ಕರಿಸುವನು. 10. ಪೂರ್ವಕಾ ಲದ ಮೇರೆಯನ್ನು ತೆಗೆಯಬೇಡ; ಅನಾಥರ ಹೊಲ ಗಳಲ್ಲಿ ಪ್ರವೇಶಿಸದಿರು; 11. ಅವರ ವಿಮೋಚಕನು ಬಲಶಾಲಿಯಾಗಿದ್ದಾನೆ; ಅವರ ವ್ಯಾಜ್ಯಕ್ಕಾಗಿ ಆತನು ವಾದಿಸುವನು. 12. ಶಿಕ್ಷಣಕ್ಕೆ ನಿನ್ನ ಹೃದಯವನ್ನೂ ವಿವೇ ಕದ ಮಾತುಗಳಿಗೆ ನಿನ್ನ ಕಿವಿಗಳನ್ನೂ ಕೊಡು. 13. ಹುಡು ಗನ ಶಿಕ್ಷೆಗೆ ಹಿಂತೆಗೆಯಬೇಡ; ಅವನನ್ನು ಬೆತ್ತದಿಂದ ಹೊಡೆದರೆ ಅವನು ಸಾಯುವದಿಲ್ಲ. 14. ಅವನನ್ನು ಬೆತ್ತದಿಂದ ಹೊಡೆದು ಪಾತಾಳದಿಂದ ಅವನ ಆತ್ಮವನ್ನು ತಪ್ಪಿಸುವಿ; 15. ನನ್ನ ಮಗನೇ, ನಿನ್ನ ಹೃದಯವು ಜ್ಞಾನ ವುಳ್ಳದ್ದಾಗಿದ್ದರೆ ನನ್ನ ಹೃದಯವು ಹೌದು, ನನ್ನದೇ ಹರ್ಷಿಸುವದು. 16. ಹೌದು, ನಿನ್ನ ತುಟಿಗಳು ಯಥಾ ರ್ಥವಾದವುಗಳನ್ನು ಮಾತಾಡಿದರೆ ನನ್ನ ಅಂತರಾತ್ಮವು ಸಂತೋಷಿಸುವದು. 17. ಪಾಪಿಗಳಿಗಾಗಿ ನಿನ್ನ ಹೃದಯವು ಅಸೂಯೆಪಡದಿರಲಿ; ನೀನು ದಿನವೆಲ್ಲಾ ಕರ್ತನ ಭಯ ದಲ್ಲಿ ಇರು. 18. ಖಂಡಿತವಾಗಿಯೂ ಅಂತ್ಯವು ಬರು ತ್ತದೆ; ನಿನ್ನ ನಿರೀಕ್ಷೆಯು ನಿರರ್ಥಕವಾಗದು. 19. ನನ್ನ ಮಗನೇ, ಕೇಳಿ ಜ್ಞಾನವಂತನಾಗು; ನ್ಯಾಯಮಾರ್ಗ ದಲ್ಲಿ ನಿನ್ನ ಹೃದಯವನ್ನು ನಡಿಸು. 20. ಮದ್ಯಪಾನ ಮಾಡುವವರಲ್ಲಿಯೂ ಅತಿಮಾಂಸ ಭಕ್ಷಕರಲ್ಲಿಯೂ ಇರಬೇಡ. 21. ಕುಡುಕರೂ ಹೊಟ್ಟೇಬಾಕರೂ ದುರ್ಗ ತಿಗೆ ಬರುವರು; ತೂಕಡಿಕೆಯು ಒಬ್ಬನಿಗೆ ಹಳೇ ಬಟ್ಟೆ ಗಳನ್ನು ಹೊದಿಸುವದು. 22. ನಿನ್ನನ್ನು ಪಡೆದ ತಂದೆಯ ಮಾತಿಗೆ ಕಿವಿಗೊಡು; ನಿನ್ನ ತಾಯಿ ಮುಪ್ಪಿನವಳಾದಾಗ ಆಕೆಯನ್ನು ಅಸಡ್ಡೆಮಾಡಬೇಡ. 23. ಸತ್ಯವನ್ನೂ ಜ್ಞಾನ ವನ್ನೂ ಶಿಕ್ಷೆಯನ್ನೂ ವಿವೇಕವನ್ನೂ ಕೊಂಡು ಅವುಗ ಳನ್ನು ಮಾರಬೇಡ. 24. ನೀತಿವಂತನ ತಂದೆಯು ಬಹಳ ವಾಗಿ ಸಂತೋಷಪಡುವನು; ಜ್ಞಾನಿಯಾದ ಮಗನನ್ನು ಪಡೆದವನಿಗೆ ಅವನಿಂದ ಆನಂದವಾಗುವದು. 25. ನಿನ್ನ ತಂದೆ ತಾಯಿಗಳು ಸಂತೋಷಿಸುವರು; ನಿನ್ನನ್ನು ಹೆತ್ತ ವರು ಆನಂದಿಸುವರು. 26. ನನ್ನ ಮಗನೇ, ನಿನ್ನ ಹೃದಯ ವನ್ನು ನನಗೆ ಕೊಡು; ನನ್ನ ಮಾರ್ಗಗಳನ್ನು ನಿನ್ನ ಕಣ್ಣುಗಳು ದೃಷ್ಟಿಯಿಟ್ಟು ನೋಡಲಿ. 27. ಸೂಳೆಯು ಆಳವಾದ ಕುಣಿ; ಪರಸ್ತ್ರೀಯು ಇಕ್ಕಟ್ಟಾದ ಗುಂಡಿ. 28. ಪ್ರಾಣಿಗಾಗಿಯೋ ಎಂಬಂತೆ ಅವಳು ಹೊಂಚು ಹಾಕಿ ಮನುಷ್ಯರಲ್ಲಿ ದೋಷಗಳನ್ನು ಹೆಚ್ಚಿಸುತ್ತಾಳೆ. 29. ಯಾರಿಗೆ ಅಯ್ಯೋ? ಯಾರಿಗೆ ದುಃಖ? ಯಾರಿಗೆ ಕಲಹಗಳು? ಯಾರು ಗೋಳಾಡುತ್ತಾರೆ? ಯಾರು ಸುಮ್ಮಸುಮ್ಮನೆ ಗಾಯ ಪಡುತ್ತಾರೆ? ಯಾರಿಗೆ ಕೆಂಪೇ ರಿದ ಕಣ್ಣುಗಳು? 30. ದ್ರಾಕ್ಷಾರಸಕ್ಕಾಗಿ ಕಾದಿರುವಂಥ ವರು ಮಿಶ್ರಿತ ದ್ರಾಕ್ಷಾರಸವನ್ನು ಹುಡುಕುವವರಾಗಿ ಇರುತ್ತಾರೆ. 31. ದ್ರಾಕ್ಷಾರಸವು ಕೆಂಪಾಗಿದ್ದು ಪಾತ್ರೆಯಲ್ಲಿ ಥಳಥಳಿಸುತ್ತಾ ಚಲಿಸಿದರೆ ಅದನ್ನು ನೋಡಬೇಡ. 32. ಕೊನೆಗೆ ಅದು ಹಾವಿನಂತೆ ಮತ್ತು ವಿಷಸರ್ಪದಂತೆ ಕಚ್ಚುತ್ತದೆ. 33. ನಿನ್ನ ಕಣ್ಣುಗಳು ಪರಸ್ತ್ರೀಯರನ್ನು ನೋಡಿ ದರೆ ನಿನ್ನ ಹೃದಯವು ವಕ್ರವಾದ ಭಾಷೆಯನ್ನು ಉಚ್ಚರಿ ಸುವದು. 34. ಹೌದು, ಸಮುದ್ರದ ಮಧ್ಯದಲ್ಲಿ ಮಲಗಿ ರುವವನಂತೆ ಇಲ್ಲವೆ ಹಡಗಿನ ಕಂಬದ ತುದಿಯಲ್ಲಿ ಇದ್ದವನಂತೆ ನೀನು ಇರುವಿ. 35. ನೀನು--ಜನರು ನನ್ನನ್ನು ಹೊಡೆದರೂ ನಾನು ಅಸ್ವಸ್ಥನಾಗಲಿಲ್ಲ; ಅವರು ನನ್ನನ್ನು ಹೊಡೆದರೂ ನನಗೆ ನೋವಾಗಲಿಲ್ಲ; ಯಾವಾಗ ಎಚ್ಚತ್ತೇನು? ಪುನಃ ನಾನು ಅದನ್ನು ತಿರುಗಿ ಹುಡುಕೇನು ಎಂದು ಹೇಳುತ್ತೀ.
Chapter 24
1. ಕೆಟ್ಟವರಿಗೆ ವಿರೋಧವಾಗಿ ನೀನು ಅಸೂಯೆಪಡದಿರು; ಇಲ್ಲವೆ ಅವರ ಸಂಗಡ ಇರುವದಕ್ಕೆ ಅಪೇಕ್ಷಿಸಬೇಡ; 2. ಅವರ ಹೃದಯವು ನಾಶನವನ್ನು ಅಭ್ಯಾಸಿಸುತ್ತದೆ; ಅವರ ತುಟಿಗಳು ಹಾನಿ ಯನ್ನು ಪ್ರಸ್ತಾಪಿಸುತ್ತವೆ. 3. ಜ್ಞಾನದಿಂದ ಮನೆಯು ಕಟ್ಟಲ್ಪಡುತ್ತದೆ; ವಿವೇಕದಿಂದ ಅದು ಸ್ಥಿರಗೊಳ್ಳುತ್ತದೆ; 4. ತಿಳುವಳಿಕೆಯಿಂದ ಎಲ್ಲಾ ಅಮೂಲ್ಯವಾದ ಮತ್ತು ಇಷ್ಟ ಸಂಪತ್ತಿನಿಂದ ಕೋಣೆಗಳು ತುಂಬಲ್ಪಡುವವು. 5. ಜ್ಞಾನಿಯು ಬಲವುಳ್ಳವನು; ಹೌದು, ತಿಳುವಳಿಕೆಯು ಳ್ಳವನು ಬಲವನ್ನು ಹೆಚ್ಚಿಸಿಕೊಳ್ಳುತ್ತಾನೆ. 6. ಜ್ಞಾನಯುಕ್ತ ವಾದ ಆಲೋಚನೆಯಿಂದ ನಿನ್ನ ಯುದ್ಧವನ್ನು ನಡಿ ಸುತ್ತೀ; ಬಹುಮಂದಿ ಸಲಹೆಗಾರರು ಇರುವಲ್ಲಿ ಸುರ ಕ್ಷಣೆ ಇರುತ್ತದೆ. 7. ಜ್ಞಾನವು ಬುದ್ಧಿಹೀನನಿಗೆ ನಿಲುಕದ್ದಾ ಗಿದೆ. ದ್ವಾರದಲ್ಲಿ ಅವನು ತನ್ನ ಬಾಯಿಯನ್ನು ತೆರೆಯು ವದಿಲ್ಲ. 8. ಕೇಡನ್ನು ಕಲ್ಪಿಸುವವನು ಕುಚೋದ್ಯಗಾರ ನೆಂದು ಕರೆಯಲ್ಪಡುವನು. 9. ಬುದ್ಧಿಹೀನನ ಆಲೋ ಚನೆಯು ಪಾಪ; ಪರಿಹಾಸ್ಯಗಾರನು ಮನುಷ್ಯರಿಗೆ ಅಸಹ್ಯ. 10. ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವು ಕೊಂಚವಾಗಿದೆ. 11. ಮರಣಕ್ಕೆ ಸೆಳೆಯ ಲ್ಪಟ್ಟವನನ್ನು ಬಿಡಿಸುವದಕ್ಕೂ ವಧಿಸಲ್ಪಡುವದಕ್ಕೆ ಸಿದ್ಧವಾದವರನ್ನು ನೀನು ರಕ್ಷಿಸಲೂ ಹಿಂದೆಗೆದರೆ 12. ನೀನು--ಇಗೋ, ಅದು ನನಗೆ ಗೊತ್ತಿಲ್ಲ ಎಂದು ಹೇಳಿದರೆ ಹೃದಯವನ್ನು ಪರಿಶೋಧಿಸುವಾತನು ಅದನ್ನು ಯೋಚಿಸುವದಿಲ್ಲವೋ? ನಿನ್ನ ಆತ್ಮವನ್ನು ಕಾಯುವಾತನು ಅದನ್ನು ತಿಳಿಯುವದಿಲ್ಲವೋ? ಪ್ರತಿ ಯೊಬ್ಬನಿಗೆ ತನ್ನ ಕಾರ್ಯಗಳಿಗನುಸಾರವಾಗಿ ಆತನು ಪ್ರತಿಫಲವನ್ನು ಕೊಡದೆ ಇರುವನೇ? 13. ನನ್ನ ಮಗನೇ, ಜೇನು ಚೆನ್ನಾಗಿರುವದರಿಂದಲೂ ನಿನ್ನ ಬಾಯಿಗೆ ಜೇನು ತುಪ್ಪವು ಸಿಹಿಯಾಗಿರುವದರಿಂದಲೂ ಅದನ್ನು ತಿನ್ನು; 14. ಹೀಗೆ ನಿನ್ನ ಪ್ರಾಣಕ್ಕೆ ಜ್ಞಾನದ ತಿಳುವಳಿಕೆಯು ಇರುವದು; ಅದು ಸಿಕ್ಕಿದಾಗ ಬಹುಮಾನವಿರುವದು; ನಿನ್ನ ನಿರೀಕ್ಷೆಯು ನಿರರ್ಥಕವಾಗುವದಿಲ್ಲ. 15. ದುಷ್ಟನೇ, ನೀತಿವಂತನ ನಿವಾಸಕ್ಕೆ ಹೊಂಚುಹಾಕಬೇಡ; ಅವನ ವಿಶ್ರಾಂತಿಯ ಸ್ಥಳವನ್ನು ಸೂರೆಮಾಡಬೇಡ; 16. ನೀತಿ ವಂತನು ಏಳು ಸಾರಿ ಬಿದ್ದರೂ ಮತ್ತೆ ಏಳುತ್ತಾನೆ; ಆದರೆ ದುಷ್ಟನು ಕೇಡಿಗೆ ಬೀಳುವನು. 17. ನಿನ್ನ ಶತ್ರು ಬಿದ್ದರೆ ಸಂತೋಷಿಸಬೇಡ; ಅವನು ಎಡವಿದರೆ ನಿನ್ನ ಹೃದಯವು ಹರ್ಷಿಸದಿರಲಿ; 18. ಕರ್ತನು ಅದನ್ನು ನೋಡಿದಾಗ ಅದು ಆತನಿಗೆ ಇಷ್ಟವಿಲ್ಲದ್ದರಿಂದ ಆತನು ಅವನ ಕಡೆಯಿಂದ ತನ್ನ ಕೋಪವನ್ನು ತಿರುಗಿಸಾನು. 19. ಕೆಟ್ಟವರ ಮೇಲೆ ಉರಿಗೊಳ್ಳಬೇಡ; ಇಲ್ಲವೆ ದುಷ್ಟ ರಿಗಾಗಿ ಅಸೂಯೆಪಡಬೇಡ; 20. ಕೆಡುಕನಿಗೆ ಪ್ರತಿ ಫಲವು ಇರುವದಿಲ್ಲ; ದುಷ್ಟರ ದೀಪವು ಆರಿಹೋಗು ವದು. 21. ನನ್ನ ಮಗನೇ, ಕರ್ತನಿಗೂ ಅರಸನಿಗೂ ಭಯಪಡು; ಭಯಪಡದವರ ಗೊಡವೆಗೆ ಹೋಗ ಬೇಡ. 22. ಅವರ ವಿಪತ್ತು ಫಕ್ಕನೆ ಸಂಭವಿಸುವದು; ಅವರಿಬ್ಬರ ನಾಶನವು ಯಾರಿಗೆ ತಿಳಿದೀತು? 23. ಇವು ಸಹ ಜ್ಞಾನಿಗಳಿಗೆ ಸಂಬಂಧಪಟ್ಟಿವೆ. ನ್ಯಾಯವಿಚಾರಣೆ ಯಲ್ಲಿ ಪಕ್ಷಪಾತವು ಸರಿಯಲ್ಲ. 24. ದುಷ್ಟನಿಗೆ--ನೀನು ನೀತಿವಂತನು ಎಂದು ಹೇಳುವವನನ್ನು ಜನರು ಶಪಿಸು ವರು, ಜನಾಂಗಗಳು ಅವನನ್ನು ಹೇಸಿಕೊಳ್ಳುವರು. 25. ಗದರಿಸುವವರಿಗೆ ಆನಂದವಾಗುವದು; ಅವರ ಮೇಲೆ ಶುಭದಾಯಕ ಆಶೀರ್ವಾದವು ಬರುವದು. 26. ಸರಿಯಾಗಿ ಉತ್ತರಿಸುವವನ ತುಟಿಗಳನ್ನು ಪ್ರತಿ ಯೊಬ್ಬನು ಮುದ್ದಿಡುವನು. 27. ಹೊರಗೆ ನಿನ್ನ ಕೆಲಸ ವನ್ನು ಸಿದ್ಧಪಡಿಸಿಕೊ; ಅದು ಹೊಲದಲ್ಲಿ ನಿನಗೋಸ್ಕರ ಸರಿಯಾಗುವಂತೆ ಮಾಡಿಕೊ; ತರುವಾಯ ನಿನ್ನ ಮನೆಯನ್ನು ಕಟ್ಟಿಕೋ. 28. ಕಾರಣವಿಲ್ಲದೆ ನೆರೆಯವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಬೇಡ; ನಿನ್ನ ತುಟಿಗಳಿಂದ ಮೋಸಮಾಡಬೇಡ. 29. ನನಗೆ ಅವನು ಮಾಡಿದಂತೆ ನಾನೂ ಅವನಿಗೆ ಮಾಡುವೆನು; ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿ ತೀರಿಸುವೆನು ಎಂದು ಹೇಳಬೇಡ. 30. ಸೋಮಾರಿಯ ಹೊಲದ ಪಕ್ಕದಲ್ಲಿಯೂ ಬುದ್ಧಿ ಹೀನನ ದ್ರಾಕ್ಷೇ ತೋಟದ ಕಡೆಯಲ್ಲಿಯೂ ನಾನು ಹಾದು ಹೋದೆನು; 31. ಆಗ ಇಗೋ, ಹೊಲವೆಲ್ಲವೂ ಮುಳ್ಳು ಗಿಡಗಳಿಂದ ಬೆಳೆದು ಕಳೆಗಳು ಅವುಗಳನ್ನು ಮುಚ್ಚಿ ಅದರ ಕಲ್ಲಿನ ಗೋಡೆಯು ಬಿದ್ದುಹೋಯಿತು. 32. ಆಗ ನಾನು ನೋಡಿ ಮನಸ್ಸಿಟ್ಟೆನು; ದೃಷ್ಟಿಸಿ ಶಿಕ್ಷಿತನಾದೆನು. 33. ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ತೂಕಡಿಕೆ, ನಿದ್ರೆಗಾಗಿ ಇನ್ನು ಕೊಂಚ ಕೈ ಮುದುರಿ ಕೊಳ್ಳುವದು; 34. ಹೀಗೆ ನಿನ್ನ ಬಡತನವು ಪ್ರಯಾಣಿಕನ ಹಾಗೆಯೂ ನಿನ್ನ ಕೊರತೆಯು ಆಯುಧದಾರ ನಂತೆಯೂ ಬರುವವು.
Chapter 25
1. ಯೆಹೂದದ ಅರಸನಾದ ಹಿಜ್ಕೀಯನ ಲೇಖಕರು ಬರೆದಿರುವ ಇವು ಕೂಡ ಸೊಲೊಮೋನನ ಸಾಮತಿಗಳೇ. 2. ವಿಷಯವನ್ನು ರಹಸ್ಯ ಮಾಡುವದು ದೇವರ ಮಹಿಮೆ; ಅರಸರ ಘನತೆಯು ವಿಷಯವನ್ನು ಶೋಧಿಸುವದು. 3. ಆಕಾ ಶವು, ಉನ್ನತ ಭೂಮಿಯು ಅಗಾಧ ಮತ್ತು ಅರಸರ ಹೃದಯವು ಅಗೋಚರ. 4. ಬೆಳ್ಳಿಯಿಂದ ಕಲ್ಮಶವನ್ನು ತೆಗೆದುಹಾಕಿದರೆ ಅಕ್ಕಸಾಲಿಗನಿಗೆ ಬೇಕಾದ ಪಾತ್ರೆಯು ಬರುವದು. 5. ಅರಸನ ಸಮ್ಮುಖದಿಂದ ದುಷ್ಟರನ್ನು ತೆಗೆದುಹಾಕಿದರೆ ಅವನ ಸಿಂಹಾಸನವು ನೀತಿಯಲ್ಲಿ ಸ್ಥಿರವಾಗುವದು. 6. ಅರಸನ ಸನ್ನಿಧಿಯಲ್ಲಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ; ದೊಡ್ಡವರ ಸ್ಥಾನದಲ್ಲಿ ನಿಲ್ಲಬೇಡ; 7. ಮೇಲಕ್ಕೆ ಬಾ ಎಂದು ನೀನು ಕರೆಯಿಸಿಕೊಳ್ಳುವದು, ನಿನ್ನ ಕಣ್ಣುಗಳು ನೋಡಿದ ರಾಜನ ಸನ್ನಿಧಿಯಲ್ಲಿ ನೀನು ಕೆಳಗಿನ ಸ್ಥಾನಕ್ಕೆ ತಗ್ಗಿಸಲ್ಪಡುವದಕ್ಕಿಂತ ಲೇಸು. 8. ನಿನ್ನ ನೆರೆಯವನು ನಿನ್ನನ್ನು ಅವಮಾನಕ್ಕೆ ಗುರಿಮಾಡಿದಾಗ ಕಡೆಯಲ್ಲಿ ಏನು ಮಾಡಬೇಕೆಂಬದು ನೀನು ತಿಳಿಯ ದಂತೆ ದುಡುಕಿನಿಂದ ಕಲಹಮಾಡುವದಕ್ಕಾಗಿ ಹೋಗ ಬೇಡ. 9. ನಿನ್ನ ನೆರೆಯವನೊಂದಿಗೆ ನಿನ್ನ ವ್ಯಾಜ್ಯವನ್ನು ಚರ್ಚಿಸು; ಗುಟ್ಟನ್ನು ಬೇರೊಬ್ಬನಿಗೆ ಹೊರಪಡಿಸಬೇಡ; 10. ಅದನ್ನು ಕೇಳುವವನು ನಿನ್ನನ್ನು ಅವಮಾನಕ್ಕೆ ಗುರಿಪಡಿಸಿಯಾನು, ನಿನ್ನ ಅಪಕೀರ್ತಿಯು ಹೋಗದೆ ಇದ್ದೀತು. 11. ಸಮಯೋಚಿತವಾದ ಮಾತು ಬೆಳ್ಳಿಯ ಚಿತ್ರಗಳಲ್ಲಿ ಬಂಗಾರದ ಸೇಬಿನಂತಿದೆ. 12. ಕೇಳುವ ಕಿವಿಗೆ ಜ್ಞಾನಿಯ ಗದರಿಕೆಯು ಹೇಗೋ ಹಾಗೇ ಬಂಗಾ ರದ ಕಿವಿಯ ಓಲೆಯು ಚೊಕ್ಕಬಂಗಾರದ ಆಭರಣ ದಂತಿದೆ. 13. ಸುಗ್ಗಿಯ ಕಾಲದಲ್ಲಿ ಹಿಮಶೀತದ ಹಾಗೆ ತನ್ನನ್ನು ಕಳುಹಿಸುವವರಿಗೆ ನಂಬಿಗಸ್ಥನಾದ ಸೇವಕನಿ ದ್ದಾನೆ. ತನ್ನ ಯಜಮಾನರ ಪ್ರಾಣವನ್ನು ಅವನು ನವಚೈತನ್ಯಗೊಳಿಸುತ್ತಾನೆ. 14. ಸುಳ್ಳಾದ ದಾನದ ವಿಷ ಯವಾಗಿ ಹೊಗಳಿಕೊಳ್ಳುವವನು ಮಳೆ ಇಲ್ಲದ ಮೋಡ ಗಳ ಮತ್ತು ಗಾಳಿಯ ಹಾಗೆ ಇದ್ದಾನೆ. 15. ದೀರ್ಘ ಶಾಂತಿಯಿಂದ ಪ್ರಭುವನ್ನು ಸಮ್ಮತಿಪಡಿಸಬಹುದು. ಮೃದುವಾದ ನಾಲಿಗೆಯು ಎಲುಬನ್ನು ಮುರಿಯುತ್ತದೆ. 16. ಜೇನನ್ನು ಕಂಡುಕೊಂಡಿದ್ದೀಯಾ? ಅದನ್ನು ನಿನಗೆ ತೃಪ್ತಿಯಾಗುವಷ್ಟು ತಿನ್ನು; ಹೊಟ್ಟೆತುಂಬ ತಿಂದರೆ ಕಾರ ಬೇಕಾದೀತು. 17. ನೆರೆಯವನು ಬೇಸರಗೊಂಡು ಹಗೆ ಮಾಡದ ಹಾಗೆ ಅವನ ಮನೆಯಲ್ಲಿ ಅಪರೂಪವಾಗಿ ಹೆಜ್ಜೆಯಿಡು. 18. ತನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳುವವನು ಚಮಟಿಗೆ, ಕತ್ತಿ, ಮತ್ತು ಹರಿತವಾದ ಬಾಣವಾಗಿದ್ದಾನೆ. 19. ಕಷ್ಟ ಕಾಲದಲ್ಲಿ ಅಪನಂಬಿಗಸ್ಥನಾದ ಮನುಷ್ಯನಲ್ಲಿಯ ಭರವಸವು ಮುರಿದ ಹಲ್ಲು, ಕೀಲು ತಪ್ಪಿದ ಪಾದವು. 20. ಚಳಿಯಲ್ಲಿ ಬಟ್ಟೆಯನ್ನು ತೆಗೆದುಹಾಕುವವನು ಸೋಡಾಉಪ್ಪಿನ ಹುಳಿಯ ಹಾಗೆಯೇ ಮನಗುಂದಿದವನಿಗೆ ಸಂಗೀತಗ ಳನ್ನು ಹಾಡುವನು. 21. ನಿನ್ನ ಶತ್ರು ಹಸಿದಿದ್ದರೆ ತಿನ್ನುವ ದಕ್ಕೆ ಅವನಿಗೆ ರೊಟ್ಟಿ ಕೊಡು; ಅವನು ಬಾಯಾರಿದ್ದರೆ ಕುಡಿಯುವದಕ್ಕೆ ನೀರು ಕೊಡು. 22. ಅವನ ತಲೆಯ ಮೇಲೆ ಬೆಂಕಿಯ ಕೆಂಡಗಳನ್ನು ಹಾಕುವಿ; ಕರ್ತನು ನಿನಗೆ ಪ್ರತಿಫಲ ಕೊಡುವನು. 23. ಉತ್ತರದ ಗಾಳಿಯು ಮಳೆಯನ್ನು ನೂಕುತ್ತದೆ; ಅದರಂತೆಯೇ ಚಾಡಿಯ ನಾಲಿಗೆ ಕೋಪದ ಮುಖ ಮಾಡುವದೆ. 24. ವಿಶಾಲ ವಾದ ಮನೆಯಲ್ಲಿ ಜಗಳಗಂಟಿಯೊಂದಿಗೆ ಇರುವದ ಕ್ಕಿಂತ ಮಾಳಿಗೆಯ ಮೂಲೆಯಲ್ಲಿ ವಾಸಿಸುವದು ಲೇಸು. 25. ಬಾಯಾರಿದವನಿಗೆ ತಣ್ಣೀರು ಹೇಗೋ ದೂರ ದೇಶ ದಿಂದ ಬಂದ ಒಳ್ಳೆಯ ಸಮಾಚಾರವು ಹಾಗೆಯೇ. 26. ದುಷ್ಟರ ಮುಂದೆ ನೀತಿವಂತನು ಬೀಳುವದು, ಕದಲಿ ಸಲ್ಪಟ್ಟ ಬುಗ್ಗೆ, ಕೊಳಕಾದ ಒರತೆ ಇದ್ದಂತೆ. 27. ಜೇನನ್ನು ಹೆಚ್ಚಾಗಿ ತಿನ್ನುವದು ಹಿತವಲ್ಲ; ಹಾಗೆಯೇ ಮನುಷ್ಯರು ಸ್ವಂತ ಗೌರವವನ್ನು ಹುಡುಕುವದು ಗೌರವವಲ್ಲ. 28. ತನ್ನ ಸ್ವಂತ ಮನಸ್ಸನ್ನು ಆಳದಿರುವವನು ಮುರಿ ಯಲ್ಪಟ್ಟು ಬಿದ್ದುಹೋಗಿ, ಗೋಡೆಗಳಿಲ್ಲದ ಪಟ್ಟಣಕ್ಕೆ ಸಮಾನ.
Chapter 26
1. ಬೇಸಿಗೆಯಲ್ಲಿ ಹಿಮದಂತೆಯೂ ಸುಗ್ಗಿಯಲ್ಲಿ ಮಳೆಯಂತೆಯೂ ಬುದ್ಧಿಹೀನನಿಗೆ ಮಾನ ವು ಸರಿಯಲ್ಲ. 2. ಅಲೆದಾಡುವ ಪಕ್ಷಿಯಂತೆಯೂ ಹಾರಾ ಡುವ ಬಾನಕ್ಕಿಯಂತೆಯೂ ಕಾರಣವಿಲ್ಲದ ನಾಶವು ಬರುವದಿಲ್ಲ. 3. ಕುದುರೆಗೆ ಬಾರುಗೋಲು, ಕತ್ತೆಗೆ ಕಡಿ ವಾಣ, ಮೂಢನ ಬೆನ್ನಿಗೆ ಬೆತ್ತ. 4. ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಿಸಬೇಡ; ಇಲ್ಲವಾದರೆ ನೀನು ಅವನಿಗೆ ಸಮಾನನಾದೀಯೇ. 5. ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಕೊಡು; ಇಲ್ಲವಾದರೆ ತನ್ನ ದೃಷ್ಟಿ ಯಲ್ಲಿ ಅವನು ಜ್ಞಾನಿಯಾದಾನು. 6. ಬುದ್ಧಿಹೀನನ ಮೂಲಕ ವರ್ತಮಾನ ಕಳುಹಿಸುವವನು ಪಾದಗಳನ್ನು ಕಡಿದು ಕೇಡನ್ನು ಕುಡಿಯುತ್ತಾನೆ. 7. ಕುಂಟನ ಕಾಲು ಗಳು ಸಮವಲ್ಲ; ಹಾಗೆಯೇ ಬುದ್ಧಿಹೀನರ ಬಾಯಲ್ಲಿ ಸಾಮ್ಯವು ಇರುತ್ತದೆ. 8. ಕವಣಿಯಲ್ಲಿ ಕಲ್ಲನ್ನು ಕಟ್ಟುವವನ ಹಾಗೆಯೇ ಮೂಢನಿಗೆ ಮಾನಕೊಡುವವನು ಇರು ವನು. 9. ಕುಡುಕನ ಕೈಯಲ್ಲಿ ಮುಳ್ಳು ಹೊಕ್ಕಂತೆ ಬುದ್ಧಿ ಹೀನರ ಬಾಯಲ್ಲಿ ಸಾಮ್ಯವು ಇರುವದು. 10. ಎಲ್ಲವು ಗಳನ್ನು ನಿರ್ಮಿಸಿದ ಮಹಾ ದೇವರು ತಾನೇ ಮೂಢ ನಿಗೂ ಅಪರಾಧಿಗಳಿಗೂ ಪ್ರತಿಫಲ ಕೊಡುತ್ತಾನೆ. 11. ತಾನು ಕಕ್ಕಿದ್ದಕ್ಕೆ ನಾಯಿಯು ತಿರುಗುವಂತೆ ಮೂಢನು ತನ್ನ ಮೂಢತನಕ್ಕೆ ಹಿಂದಿರುಗುತ್ತಾನೆ. 12. ತನ್ನ ಸ್ವಂತ ಅಭಿಪ್ರಾಯದಲ್ಲಿ ಜ್ಞಾನಿಯಾದವನನ್ನು ನೀನು ನೋಡಿ ದ್ದೀಯೋ? ಅವನಿಗಿಂತ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯು ಇರುತ್ತದೆ, 13. ಸೋಮಾರಿಯು --ದಾರಿಯಲ್ಲಿ ಸಿಂಹವಿದೆ, ಬೀದಿಗಳಲ್ಲಿ ಸಿಂಹ ಇದೆ ಎಂದು ಹೇಳುತ್ತಾನೆ. 14. ಬಾಗಲು ತಿರುಗುಣಿಗಳ ಮೇಲೆ ಹೇಗೆ ತಿರುಗುತ್ತದೋ ಹಾಗೆಯೇ ಸೋಮಾರಿಯು ತನ್ನ ಹಾಸಿಗೆಯ ಮೇಲೆ ತಿರುಗುತ್ತಾನೆ. 15. ಸೋಮಾ ರಿಯು ಎದೆಯಲ್ಲಿ ತನ್ನ ಕೈಯನ್ನು ಮುಚ್ಚಿಕೊಳ್ಳುತ್ತಾನೆ; ತಿರುಗಿ ಅದನ್ನು ತನ್ನ ಬಾಯಿಯ ಹತ್ತಿರ ತರುವದಕ್ಕೆ ಕೊರಗುತ್ತಾನೆ. 16. ತನ್ನ ಸ್ವಂತ ಅಭಿಪ್ರಾಯವುಳ್ಳ ಸೋಮಾರಿಯು ನೆವ ಹೇಳುವ ಏಳು ಮಂದಿಗಿಂತ ಜಾಣನಾಗಿದ್ದಾನೆ. 17. ಹಾದು ಹೋಗುತ್ತಾ ತನ್ನದಾಗ ದಿರುವ ವ್ಯಾಜ್ಯದಲ್ಲಿ ತಲೆಹಾಕುವವನು ಕಿವಿಹಿಡಿದು ನಾಯಿಯನ್ನು ತೆಗೆದುಕೊಂಡು ಹೋಗುವವನಂತೆ ಇದ್ದಾನೆ. 18. ನೆರೆಯವನನ್ನು ಮೋಸಗೊಳಿಸಿ ತಮಾಷೆ ಗೋಸ್ಕರ ಮಾಡಿದೆನಲ್ಲಾ ಎನ್ನುವವನು-- 19. ಕೊಳ್ಳಿ ಗಳನ್ನೂ ಅಂಬುಗಳನ್ನೂ ಸಾವನ್ನೂ ಬೀರುವ ದೊಡ್ಡ ಹುಚ್ಚನ ಹಾಗೆ. 20. ಕಟ್ಟಿಗೆ ಇಲ್ಲದಿರುವಲ್ಲಿ ಬೆಂಕಿಯು ಆರಿ ಹೋಗುತ್ತದೆ--ಹಾಗಯೇ ಚಾಡಿಕೋರನು ಇಲ್ಲ ದಿರುವಲ್ಲಿ ಜಗಳ ಶಮನವಾಗುವದು. 21. ಕೆಂಡಗಳಿಗೆ ಇದ್ದಲು, ಬೆಂಕಿಗೆ ಕಟ್ಟಿಗೆ; ಹಾಗೆಯೇ ಜಗಳವನ್ನು ಕೆರಳಿಸುವಂತೆ ಕಲಹಮಾಡುವವನು ಇರುವನು. 22. ಚಾಡಿಕೋರನ ಮಾತುಗಳು ಗಾಯಗಳ ಹಾಗೆ ಹೊಟ್ಟೆಯೊಳಕ್ಕೆ ಇಳಿಯುತ್ತವೆ. 23. ಉರಿಯುವ ತುಟಿ ಗಳೂ ಕೆಟ್ಟಹೃದಯವೂ ಬೆಳ್ಳಿಯ ಕಿಟ್ಟದಿಂದ ಮುಚ್ಚ ಲ್ಪಟ್ಟ ಬೋಕಿಯಂತೆ ಇದೆ. 24. ಹಗೆಮಾಡುವವನು ತನ್ನ ತುಟಿಗಳಿಂದ ಮೋಸವನ್ನು ನಟಿಸುತ್ತಾನೆ, ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾನೆ. 25. ಸವಿ ಮಾತನ್ನಾಡಿದರೆ ಅವನನ್ನು ನಂಬಬೇಡ; ಅವನ ಹೃದಯದಲ್ಲಿ ಏಳು ಅಸಹ್ಯಗಳಿವೆ. 26. ಯಾವನ ಹಗೆ ತನವು ಮೋಸದಿಂದ ಮುಚ್ಚಲ್ಪಟ್ಟಿದೆಯೋ ಅವನ ಕೆಟ್ಟತನವು ಸಭೆಯಲ್ಲಿ ಬಯಲಾಗುವದು. 27. ಗುಂಡಿ ಯನ್ನು ತೋಡುವವನು ತಾನೇ ಅದರಲ್ಲಿ ಬೀಳುತ್ತಾನೆ; ಕಲ್ಲು ಹೊರಳಿಸುವವನ ಮೇಲೆಯೇ ಅದು ತಿರಿಗಿ ಹೊರಳುವದು. 28. ಸುಳ್ಳು ನಾಲಿಗೆಯಿಂದ ಬಾಧಿಸಲ್ಪ ಟ್ಟವರನ್ನೇ ಅದು ಹಗೆಮಾಡುವದು; ಮುಖಸ್ತುತಿ ಮಾಡುವ ಬಾಯಿಯು ನಾಶನವನ್ನುಂಟುಮಾಡುತ್ತದೆ.
Chapter 27
1. ನಾಳೆಯ ವಿಷಯವಾಗಿ ಕೊಚ್ಚಿಕೊಳ್ಳಬೇಡ; ಒಂದು ದಿನವು ಯಾವದನ್ನು ಸಂಭವಿಸುವಂತೆ ಮಾಡುತ್ತದೋ ಅದು ನಿನಗೆ ತಿಳಿ ಯದು. 2. ನಿನ್ನ ಸ್ವಂತ ಬಾಯಲ್ಲ, ಮತ್ತೊಬ್ಬನು ನಿನ್ನನ್ನು ಹೊಗಳಲಿ; ನಿನ್ನ ಸ್ವಂತ ತುಟಿಗಳಲ್ಲ, ಪರನೇ ನಿನ್ನನ್ನು ಹೊಗಳಲಿ. 3. ಕಲ್ಲು ಭಾರ, ಮರಳು ಭಾರ; ಇವೆರಡ ಕ್ಕಿಂತ ಮೂಢನ ಕೋಪವು ಬಹಳ ಭಾರ. 4. ಕ್ರೋಧವು ಕ್ರೂರ. ಕೋಪವು ಘೋರ; ಮತ್ಸರದ ಮುಂದೆ ಯಾವನು ನಿಂತಾನು? 5. ರಹಸ್ಯವಾದ ಪ್ರೀತಿಗಿಂತಲೂ ಬಹಿರಂಗವಾದ ಗದರಿಕೆಯೇ ಲೇಸು. 6. ಸ್ನೇಹಿತನು ಮಾಡುವ ಗಾಯಗಳು ನಂಬಿಕೆಯುಳ್ಳವುಗಳಾಗಿವೆ; ಶತ್ರುವಿನ ಮುದ್ದುಗಳು ಮೋಸಕರವಾಗಿವೆ. 7. ತೃಪ್ತಿ ಹೊಂದಿದವನು ಜೇನು ತುಪ್ಪವನ್ನೂ ಅಸಹ್ಯಿಸಿಕೊಳ್ಳು ತ್ತಾನೆ; ಹಸಿದವನಿಗೆ ಕಹಿಯಾದ ಪ್ರತಿಯೊಂದು ವಸ್ತುವು ಸಿಹಿಯಾಗಿದೆ. 8. ತನ್ನ ಸ್ಥಳವನ್ನು ಬಿಟ್ಟು ಅಲೆಯುವ ಮನುಷ್ಯನು ತನ್ನ ಗೂಡನ್ನು ಬಿಟ್ಟು ಅಲೆಯುವ ಪಕ್ಷಿ ಯಂತೆ ಇದ್ದಾನೆ. 9. ತೈಲವೂ ಸುಗಂಧ ದ್ರವ್ಯವೂ ಹೃದಯವನ್ನು ಸಂತೋಷಪಡಿಸುತ್ತದೆ, ಹಾಗೆಯೇ ಆದರಣೆಯ ಸಲಹೆಯಿಂದ ಸ್ನೇಹಿತನ ಮಧುರತ್ವವು ಇರುತ್ತದೆ. 10. ನಿನ್ನ ಸ್ನೇಹಿತನನ್ನೂ ನಿನ್ನ ತಂದೆಯ ಸ್ನೇಹಿತನನ್ನೂ ತ್ಯಜಿಸಬೇಡ; ಅಲ್ಲದೆ ನಿನ್ನ ಇಕ್ಕಟ್ಟಿನ ದಿನದಲ್ಲಿ ನಿನ್ನ ಸಹೋದರನ ಮನೆಗೆ ಹೋಗಬೇಡ; ದೂರವಾಗಿರುವ ಸಹೋದರನಿಗಿಂತ ಹತ್ತಿರವಾಗಿರುವ ನೆರೆಯವನೇ ಲೇಸು. 11. ನಿನ್ನನ್ನು ನಿಂದಿಸುವವರಿಗೆ ಉತ್ತರಿಸುವಂತೆ ನಿನ್ನ ಹೃದಯವನ್ನು ಸಂತೋಷಪಡಿಸುವ ಹಾಗೆ ನನ್ನ ಮಗನೇ, ಜ್ಞಾನಿಯಾಗಿರು. 12. ಜಾಣನು ಕೇಡನ್ನು ಮುಂದಾಗಿ ನೋಡಿ ಅಡಗಿಕೊಳ್ಳುತ್ತಾನೆ; ಬುದ್ಧಿಹೀನನು ಮುಂದೆ ಹೋಗಿ ಶಿಕ್ಷಿಸಲ್ಪಡುತ್ತಾನೆ. 13. ಪರನಿಗಾಗಿ ಹೊಣೆಯಾದವನ ವಸ್ತ್ರವನ್ನು ತೆಗೆದು ಕೊಂಡು ಮತ್ತೊಬ್ಬನಿಗಾಗಿ ಅವನಿಂದ ಒತ್ತೆಯನ್ನು ತೆಗೆದುಕೋ. 14. ಮುಂಜಾನೆ ಎದ್ದು ತನ್ನ ಸ್ನೇಹಿತನನ್ನು ದೊಡ್ಡ ಕೂಗಿನಿಂದ ಆಶೀರ್ವದಿಸುವವನಿಗೆ ಅದು ಶಾಪವೆಂದು ಎಣಿಸಲ್ಪಡುವದು. 15. ದೊಡ್ಡ ಮಳೆಯ ದಿವಸದಲ್ಲಿ ಬಿಡದೆ ತೊಟ್ಟಿಕ್ಕುವಂತದ್ದೂ ಕಲಹ ಮಾಡುವ ಸ್ತ್ರೀಯೂ ಸಮಾನ. 16. ಅವಳನ್ನು ಅಡಗಿಸು ವವನು ಗಾಳಿಯನ್ನೂ ತನ್ನನ್ನು ರಟ್ಟುಮಾಡುವ ಅವನ ಬಲಗೈಯ ತೈಲವನ್ನೂ ಅಡಗಿಸುತ್ತಾನೆ. 17. ಕಬ್ಬಿಣವು ಕಬ್ಬಿಣವನ್ನು ಹದಮಾಡುತ್ತದೆ; ಹಾಗೆಯೇ ಒಬ್ಬನು ತನ್ನ ಸ್ನೇಹಿತನ ಬುದ್ಧಿಯನ್ನು ಚುರುಕು ಮಾಡುತ್ತಾನೆ. 18. ಅಂಜೂರದ ಮರವನ್ನು ಕಾಯುವವನು ಅದರ ಫಲವನ್ನು ತಿನ್ನುವನು; ಹಾಗೆಯೇ ತನ್ನ ಯಜಮಾನ ನಿಗಾಗಿ ಕಾಯುವವನು ಸನ್ಮಾನ ಹೊಂದುವನು. 19. ನೀರಿನಲ್ಲಿ ಮುಖವು ಪ್ರತಿಬಿಂಬಿಸುವಂತೆ ಮನುಷ್ಯನ ಹೃದಯವು ಮಾಡುತ್ತದೆ. 20. ಪಾತಾಳಕ್ಕೂ ನಾಶನಕ್ಕೂ ತೃಪ್ತಿ ಇಲ್ಲವೇ ಇಲ್ಲ; ಹಾಗೆಯೇ ಮನುಷ್ಯ ಕಣ್ಣುಗಳು ಎಂದಿಗೂ ತೃಪ್ತಿಹೊಂದುವದಿಲ್ಲ. 21. ಬೆಳ್ಳಿ ಬಂಗಾರ ಗಳ ಪುಟಕ್ಕೆ ಕುಲುಮೆ ಹೇಗೆಯೋ ಹಾಗೆಯೇ ತನ್ನ ಹೊಗಳಿಕೆಗೆ ಮನುಷ್ಯನಿದ್ದಾನೆ. 22. ಬುದ್ಧಿಹೀನನನ್ನು ಒರಳಿನಲ್ಲಿ ಗೋಧಿಯೊಂದಿಗೆ ಒನಕೆಯಿಂದ ಕುಟ್ಟಿ ದರೂ ಅವನಿಂದ ಮೂರ್ಖತನವು ತೊಲಗುವದಿಲ್ಲ. 23. ನಿನ್ನ ಹಿಂಡುಗಳ ಸ್ಥಿತಿಯನ್ನು ತಿಳಿದುಕೊಳ್ಳುವಂತೆ ಶ್ರದ್ಧೆವಹಿಸು; ನಿನ್ನ ಮಂದೆಗಳನ್ನು ಚೆನ್ನಾಗಿ ನೋಡಿಕೋ. 24. ಐಶ್ವರ್ಯವು ಶಾಶ್ವತವಲ್ಲ; ಕಿರೀಟವು ಪ್ರತಿಯೊಂದು ವಂಶಾವಳಿಗೆ ಇರುತ್ತದೋ? 25. ಹುಲ್ಲು ಕಾಣುತ್ತದೆ; ಹಸಿ ಹುಲ್ಲು ತನ್ನನ್ನೇ ತೋರುತ್ತದೆ, ಬೆಟ್ಟಗಳ ಸೊಪ್ಪು ಕೂಡಿಸಲ್ಪಡುತ್ತದೆ. 26. ನಿನ್ನ ವಸ್ತ್ರಕ್ಕಾಗಿ ಕುರಿಮರಿಗಳು ಮತ್ತು ಹೊಲದ ಕ್ರಯಕ್ಕಾಗಿ ನಿನ್ನ ಆಡುಗಳು ಇವೆ. 27. ನಿನ್ನ ಊಟಕ್ಕಾಗಿಯೂ ನಿನ್ನ ಮನೆಯವರ ಆಹಾರ ಕ್ಕಾಗಿಯೂ ನಿನ್ನ ದಾಸಿಯರ ಜೀವನಕ್ಕಾಗಿಯೂ ಆಡುಗಳ ಹಾಲು ಸಾಕಾಗುತ್ತದೆ.
Chapter 28
1. ಹಿಂದಟ್ಟುವವನು ಇಲ್ಲದಿದ್ದರೂ ದುಷ್ಟರು ಓಡಿಹೋಗುತ್ತಾರೆ; ಸಿಂಹದ ಹಾಗೆ ನೀತಿವಂತರು ಧೈರ್ಯದಿಂದ ಇರುತ್ತಾರೆ. 2. ದೇಶದ ದೋಷಕ್ಕಾಗಿ ಅನೇಕ ಪ್ರಭುಗಳು ಇರುತ್ತಾರೆ; ಆದರೆ ಮನುಷ್ಯನ ವಿವೇಕದಿಂದಲೂ ತಿಳುವಳಿಕೆಯಿಂದಲೂ ಅದರ ಸ್ಥಿತಿಯು ವಿಸ್ತರಿಸುತ್ತದೆ. 3. ಬಡವರನ್ನು ಹಿಂಸಿಸುವ ದರಿದ್ರನು ಆಹಾರವನ್ನು ಉಳಿಸದಂತೆ ಸುರಿಯುವ ಮಳೆಯಂತಿದ್ದಾನೆ. 4. ಕಟ್ಟಳೆಯನ್ನು ತ್ಯಜಿಸುವವನು ದುಷ್ಟರನ್ನು ಹೊಗಳುತ್ತಾನೆ; ಕಟ್ಟಳೆಯನ್ನು ಕೈಕೊಳ್ಳು ವವರು ಅವರೊಂದಿಗೆ ಹೋರಾಡುತ್ತಾರೆ. 5. ನ್ಯಾಯ ತೀರ್ಪನ್ನು ದುಷ್ಟರು ಗ್ರಹಿಸುವದಿಲ್ಲ; ಕರ್ತನನ್ನು ಹುಡುಕುವವರು ಎಲ್ಲವುಗಳನ್ನು ಗ್ರಹಿಸುತ್ತಾರೆ. 6. ಐಶ್ವರ್ಯವಂತನಾಗಿದ್ದರೂ ತನ್ನ ಮಾರ್ಗದಲ್ಲಿ ವಕ್ರ ವಾಗಿರುವವನಿಗಿಂತ ತನ್ನ ಯಥಾರ್ಥತೆಯಲ್ಲಿ ನಡೆ ಯುವ ದರಿದ್ರನು ಶ್ರೇಷ್ಠನು. 7. ಕಟ್ಟಳೆಯನ್ನು ಕೈಕೊಳ್ಳು ವವನು ಜ್ಞಾನಿಯಾದ ಮಗನು; ದುಂದುಗಾರ ಸಂಗ ಡಿಗನು ತನ್ನ ತಂದೆಯನ್ನು ಅವಮಾನಪಡಿಸುತ್ತಾನೆ. 8. ಬಡ್ಡಿಯಿಂದಲೂ ಅನ್ಯಾಯದ ಲಾಭದಿಂದಲೂ ತನ್ನ ಆಸ್ತಿಯನ್ನು ವೃದ್ಧಿಗೊಳಿಸುವವನು ಬಡವರ ಮೇಲೆ ದಯೆತೋರಿಸುವವನಿಗೆ ಅದನ್ನು ಕೂಡಿಸುವನು. 9. ನ್ಯಾಯಪ್ರಮಾಣವನ್ನು ಕೇಳದೆ ತನ್ನ ಕಿವಿಯನ್ನು ತಿರುಗಿಸಿಕೊಳ್ಳುವವನ ಪ್ರಾರ್ಥನೆಯು ಅಸಹ್ಯ. 10. ದುರ್ಮಾರ್ಗದಲ್ಲಿ ನೀತಿವಂತರನ್ನು ದಾರಿತಪ್ಪಿಸು ವವನು ತಾನೇ ತನ್ನ ಸ್ವಂತ ಕುಣಿಯೊಳಕ್ಕೆ ಬೀಳುವನು; ಯಥಾರ್ಥವಂತರಿಗಾದರೋ ಒಳ್ಳೆಯವುಗಳು ಸೊತ್ತಾ ಗುವವು. 11. ತನ್ನ ಸ್ವಂತ ಅಭಿಪ್ರಾಯದಲ್ಲಿ ಐಶ್ವರ್ಯ ವಂತನು ಜ್ಞಾನಿಯಾಗಿದ್ದಾನೆ; ವಿವೇಕಿಯಾದ ಬಡವನು ಅವನನ್ನು ಪರೀಕ್ಷಿಸುತ್ತಾನೆ. 12. ನೀತಿವಂತರು ಉಲ್ಲಾಸಿಸಿ ದರೆ ದೊಡ್ಡ ಘನತೆ ಇರುವದು; ದುಷ್ಟರಿಗೆ ಏಳಿಗೆ ಯಾದರೆ ಮನುಷ್ಯನು ಅಡಗಿಕೊಳ್ಳುತ್ತಾನೆ. 13. ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನು ವೃದ್ಧಿಯಾಗನು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನು ಕರುಣೆ ಹೊಂದುವನು. 14. ಯಾವಾಗಲೂ ಭಯದಿಂದ ಇರು ವವನು ಧನ್ಯನು; ತನ್ನ ಹೃದಯವನ್ನು ಕಠಿಣಪಡಿಸಿ ಕೊಳ್ಳುವವನು ಕೇಡಿಗೆ ಸಿಕ್ಕಿಬೀಳುವನು. 15. ಗರ್ಜಿಸುವ ಸಿಂಹದಂತೆಯೂ ಅಲೆದಾಡುವ ಕರಡಿಯಂತೆಯೂ ಬಡವರಾದ ಜನರನ್ನು ಆಳುವ ದುಷ್ಟನು ಇರುತ್ತಾನೆ. 16. ವಿವೇಕ ಶೂನ್ಯನಾದ ಒಡೆಯನು ಮಹಾಹಿಂಸಕನು; ಲೋಭತನವನ್ನು ಹಗೆಮಾಡುವವನು ತನ್ನ ದಿನಗಳನ್ನು ದೀರ್ಘಮಾಡುತ್ತಾನೆ. 17. ಒಬ್ಬ ಮನುಷ್ಯನ ರಕ್ತಕ್ಕೆ ಬಲಾತ್ಕಾರ ಮಾಡುವವನು ಕುಣಿಗೆ ಹಾರುವನು; ಅವನನ್ನು ಯಾವನೂ ತಡೆಯದಿರಲಿ. 18. ಯಥಾರ್ಥ ವಾಗಿ ನಡೆಯುವವನು ರಕ್ಷಿಸಲ್ಪಡುವನು; ತನ್ನ ಮಾರ್ಗ ಗಳಲ್ಲಿ ವಕ್ರವಾಗಿ ನಡೆದುಕೊಳ್ಳುವವನು ತಟ್ಟನೆ ಬೀಳು ವನು. 19. ತನ್ನ ಭೂಮಿಯನ್ನು ವ್ಯವಸಾಯ ಮಾಡುವ ವನಿಗೆ ಸಮೃದ್ಧಿಯಾದ ರೊಟ್ಟಿ ಇರುವದು; ಆದರೆ ವ್ಯರ್ಥ ಜನರನ್ನು ಹಿಂಬಾಲಿಸುವವನಿಗೆ ಸಾಕಾದಷ್ಟು ಬಡತನವು ಇರುವದು. 20. ನಂಬಿಗಸ್ತನಾದ ಮನು ಷ್ಯನು ಆಶೀರ್ವಾದಗಳಲ್ಲಿ ತುಂಬಿತುಳುಕುವನು; ಆದರೆ ಧನವಂತನಾಗಲು ಆತುರಪಡುವವನು ನಿರ್ದೋಷಿ ಯಾಗಿರುವದಿಲ್ಲ. 21. ಪಕ್ಷಪಾತವು ಸರಿಯಲ್ಲ; ತುತ್ತು ರೊಟ್ಟಿಗಾಗಿ ಒಬ್ಬನು ದ್ರೋಹಮಾಡುವನು. 22. ಧನ ವಂತನಾಗಲು ಆತುರಪಡುವವನು ಕೆಟ್ಟ ಕಣ್ಣುಳ್ಳವ ನಾಗಿದ್ದಾನೆ; ತನಗೆ ಬಡತನವು ಬರುವದನ್ನು ಅವನು ಯೋಚಿಸುವದಿಲ್ಲ. 23. ತನ್ನ ನಾಲಿಗೆಯಿಂದ ಮುಖಸ್ತುತಿ ಮಾಡುವವನಿಗಿಂತ ಒಬ್ಬನನ್ನು ಗದರಿಸುವವನು ತರುವಾಯ ಹೆಚ್ಚು ದಯಾಪಾತ್ರನಾಗುವನು. 24. ತನ್ನ ತಂದೆ ತಾಯಿಯನ್ನಾಗಲಿ ದೋಚಿಕೊಂಡು--ಇದು ದೋಷವಲ್ಲ ಎಂದು ಹೇಳುವವನು ಕೆಡುಕನಿಗೆ ಜೊತೆಗಾರನು. 25. ಗರ್ವದ ಹೃದಯವುಳ್ಳವನು ಕಲಹ ವನ್ನೆಬ್ಬಿಸುವನು; ಕರ್ತನಲ್ಲಿ ಭರವಸವಿಡುವವನು ಪುಷ್ಟ ನಾಗುವನು. 26. ತನ್ನ ಹೃದಯದಲ್ಲಿಯೇ ಭರವಸವಿ ಡುವವನು ಬುದ್ಧಿಹೀನನು; ಜ್ಞಾನದಿಂದ ನಡೆಯುವ ವನು ತಪ್ಪಿಸಿಕೊಳ್ಳುವನು. 27. ಬಡವರಿಗೆ ದಾನಮಾಡು ವವರು ಕೊರತೆಪಡುವದಿಲ್ಲ; ತನ್ನ ಕಣ್ಣುಗಳನ್ನು ಮುಚ್ಚಿ ಕೊಳ್ಳುವವನಿಗೆ ಅನೇಕ ಶಾಪಗಳು. 28. ದುಷ್ಟರು ಎದ್ದರೆ ಜನರು ಅಡಗಿಕೊಳ್ಳುತ್ತಾರೆ. ಅವರು ನಾಶ ವಾದರೆ ನೀತಿವಂತರು ವೃದ್ಧಿಯಾಗುತ್ತಾರೆ.
Chapter 29
1. ಅನೇಕ ಸಲ ಗದರಿಸಲ್ಪಟ್ಟರೂ ಬಗ್ಗದಕುತ್ತಿಗೆಯವನು ಏಳದ ಹಾಗೆ ಫಕ್ಕನೆ ಮುರಿದು ಬೀಳುವನು. 2. ನೀತಿವಂತರು ಅಧಿಕಾರದಲ್ಲಿ ದ್ದಾಗ ಜನರು ಹರ್ಷಿಸುತ್ತಾರೆ; ದುಷ್ಟನು ಆಳಿದರೆ ಜನರು ಶೋಕಿಸುತ್ತಾರೆ. 3. ಜ್ಞಾನವನ್ನು ಪ್ರೀತಿಸುವವನು ತನ್ನ ತಂದೆಯನ್ನು ಹರ್ಷಗೊಳಿಸುತ್ತಾನೆ; ವೇಶ್ಯೆಯ ರೊಂದಿಗೆ ಸಹವಾಸ ಮಾಡುವವನು ತನ್ನ ಆಸ್ತಿಯನ್ನು ವೆಚ್ಚಮಾಡುತ್ತಾನೆ. 4. ನ್ಯಾಯತೀರ್ಪಿನಿಂದ ಅರಸನು ದೇಶವನ್ನು ಸ್ಥಿರಗೊಳಿಸುತ್ತಾನೆ; ಲಂಚಗಳನ್ನು ಸ್ವೀಕರಿಸು ವವನು ಅದನ್ನು ಕೆಡವಿಹಾಕುತ್ತಾನೆ. 5. ತನ್ನ ನೆರೆಯವ ನನ್ನು ಮುಖಸ್ತುತಿ ಮಾಡುವವನು ಅವನ ಪಾದಗಳಿಗೆ ಬಲೆಯನ್ನು ಒಡ್ಡುತ್ತಾನೆ. 6. ಕೆಟ್ಟವನ ದೋಷದಲ್ಲಿ ಉರ್ಲು ಇದೆ; ನೀತಿವಂತನು ಹಾಡಿ ಹರ್ಷಿಸುತ್ತಾನೆ. 7. ಬಡವರ ನಿಮಿತ್ತ ನೀತಿವಂತನು ಯೋಚಿಸುತ್ತಾನೆ; ದುಷ್ಟನು ಅದನ್ನು ತಿಳುಕೊಳ್ಳುವಂತೆ ಲಕ್ಷ್ಯಕ್ಕೆ ತರುವ ದಿಲ್ಲ. 8. ಪರಿಹಾಸ್ಯಗಾರರು ಪಟ್ಟಣಕ್ಕೆ ಉರ್ಲನ್ನು ಒಡ್ಡು ತ್ತಾರೆ; ಜ್ಞಾನಿಗಳು ಕೋಪವನ್ನು ತಿರುಗಿಸುವರು. 9. ಜ್ಞಾನಿಯು ಬುದ್ಧಿಹೀನನೊಂದಿಗೆ ವ್ಯಾಜ್ಯ ಮಾಡಿ ದರೆ ಅವನು ರೇಗಿದರೂ ನಕ್ಕರೂ ಶಮನವಾಗುವು ದಿಲ್ಲ. 10. ಕೊಲೆಪಾತಕರು ನೀತಿವಂತರನ್ನು ದ್ವೇಷಿಸು ತ್ತಾರೆ; ಯಥಾರ್ಥವಂತರು ಅವನ ಪ್ರಾಣವನ್ನು ಹುಡು ಕುತ್ತಾರೆ. 11. ಮೂಢನು ತನ್ನ ಮನಸ್ಸನ್ನೆಲ್ಲಾ ಹೊರ ಪಡಿಸುತ್ತಾನೆ; ಜ್ಞಾನಿಯು ಅದನ್ನು ಕಾಯುತ್ತಾನೆ. 12. ಸುಳ್ಳಿಗೆ ಕಿವಿಗೊಡುವ ಅಧಿಕಾರಿಗೆ ಕಿವಿಗೊಟ್ಟರೆ ಅವನ ಸೇವಕರೆಲ್ಲರೂ ದುಷ್ಟರೇ. 13. ಬಡವರೂ ಮೋಸಗಾರರೂ ಒಟ್ಟಾಗಿ ಸಂಧಿಸುತ್ತಾರೆ; ಕರ್ತನು ಅವರಿಬ್ಬರ ಕಣ್ಣುಗಳನ್ನು ಬೆಳಗಿಸುತ್ತಾನೆ. 14. ಬಡವರಿಗೆ ನಂಬಿಕೆಯಿಂದ ನ್ಯಾಯತೀರಿಸುವ ಅರಸನ ಸಿಂಹಾ ಸನವು ಎಂದೆಂದಿಗೂ ಸ್ಥಿರಗೊಳ್ಳುವದು. 15. ಬೆತ್ತ ಬೆದ ರಿಕೆಗಳು ಜ್ಞಾನವನ್ನುಂಟುಮಾಡುತ್ತವೆ; ಶಿಕ್ಷಿಸದೆ ಬಿಟ್ಟ ಹುಡುಗನು ತನ್ನ ತಾಯಿಗೆ ಅವಮಾನವನ್ನು ತರುತ್ತಾನೆ. 16. ದುಷ್ಟರು ವೃದ್ಧಿಯಾದಾಗ ದೋಷವು ಹೆಚ್ಚುತ್ತದೆ; ನೀತಿವಂತರು ಅವರ ಬೀಳುವಿಕೆಯನ್ನು ಕಣ್ಣಾರೆ ನೋಡುವರು. 17. ನಿನ್ನ ಮಗನನ್ನು ಶಿಕ್ಷಿಸಿದರೆ ಅವ ನಿಂದ ನಿನಗೆ ನೆಮ್ಮದಿಯಾಗುವದು; ಹೌದು, ಅವನು ನಿನ್ನ ಪ್ರಾಣಕ್ಕೆ ಆನಂದವನ್ನುಂಟು ಮಾಡುವನು. 18. ದರ್ಶನವಿಲ್ಲದಿರುವಲ್ಲಿ ಜನರು ನಾಶವಾಗುತ್ತಾರೆ; ನ್ಯಾಯಪ್ರಮಾಣವನ್ನು ಕೈಕೊಳ್ಳುವವನು ಧನ್ಯನು. 19. ಮಾತುಗಳಿಂದ ಸೇವಕನು ಶಿಕ್ಷಿಸಲ್ಪಡುವದಿಲ್ಲ; ಅವನು ತಿಳಿದುಕೊಂಡರೂ ಉತ್ತರಿಸುವದಿಲ್ಲ. 20. ತನ್ನ ಮಾತುಗಳಲ್ಲಿ ದುಡುಕುವವನನ್ನು ನೀನು ನೋಡಿದ್ದೀಯೋ? ಅವನಿಗಿಂತಲೂ ಬುದ್ದಿಹೀನನ ವಿಷಯ ದಲ್ಲಿ ಹೆಚ್ಚು ನಿರೀಕ್ಷೆ ಇದೆ. 21. ಬಾಲ್ಯದಿಂದ ತನ್ನ ಸೇವಕನನ್ನು ಕೋಮಲವಾಗಿ ಸಾಕುವವನು ತರುವಾಯ ತನಗೆ ಮಗನಂತೆ ಆಗುವನು. 22. ಕೋಪಿಷ್ಠನು ಜಗಳ ವನ್ನೆಬ್ಬಿಸುತ್ತಾನೆ; ರೋಷಗೊಂಡವನು ದೋಷದಲ್ಲಿ ತುಂಬಿರುತ್ತಾನೆ. 23. ಮನುಷ್ಯನ ಗರ್ವವು ತನ್ನನ್ನು ಹೀನಸ್ಥಿತಿಗೆ ತರುವದು; ಆತ್ಮದಲ್ಲಿ ದೀನರಾಗಿರುವವರು ಸನ್ಮಾನಹೊಂದುವರು. 24. ಕಳ್ಳರೊಂದಿಗೆ ಪಾಲು ಗಾರನು ತನ್ನನ್ನು ತಾನೇ ಹಗೆಮಾಡುತ್ತಾನೆ; ಅವನು ಶಾಪವನ್ನು ಕೇಳಿತಿಳಿಸುವದಿಲ್ಲ. 25. ಮನುಷ್ಯನ ಭಯವು ಉರುಲನ್ನು ತರುತ್ತದೆ; ಕರ್ತನಲ್ಲಿ ಭರವಸ ವಿಡುವವನು ಕ್ಷೇಮದಿಂದಿರುವನು. 26. ಅನೇಕರು ಅಧಿ ಪತಿಯ ದಯೆಯನ್ನು ಹುಡುಕುತ್ತಾರೆ; ಕರ್ತನಿಂದಲೇ ಪ್ರತಿಯೊಬ್ಬನ ನ್ಯಾಯತೀರ್ಪು ಬರುತ್ತದೆ. 27. ಅನೀತಿ ವಂತನು ನೀತಿವಂತರಿಗೆ ಅಸಹ್ಯ; ತನ್ನ ಮಾರ್ಗದಲ್ಲಿ ಯಥಾರ್ಥವಾಗಿರುವವನು ದುಷ್ಟರಿಗೆ ಅಸಹ್ಯ.
Chapter 30
1. ಯಾಕೆ ಎಂಬವನ ಮಗನಾದ ಆಗೂರನ ಪ್ರವಾದನೆಯ ಮಾತುಗಳು; ಇವನು ಇಥಿಯೇಲನಿಗೆ ಹೌದು, ಇಥಿಯೇಲನಿಗೂ ಉಕ್ಕಾಲ ನಿಗೂ ಹೀಗೆ ಹೇಳಿದನು. 2. ಖಂಡಿತವಾಗಿಯೂ ಪ್ರತಿಯೊಬ್ಬ ಮನುಷ್ಯನಿಗಿಂತ ನಾನು ಪಶುಪ್ರಾಯನು; ಮನುಷ್ಯನ ವಿವೇಕವು ನನಗೆ ಇಲ್ಲ. 3. ನಾನು ಜ್ಞಾನವನ್ನು ಪಡೆದುಕೊಂಡಿಲ್ಲ; ಅಲ್ಲದೆ ಪರಿಶುದ್ಧನ ವಿಷಯವಾದ ತಿಳುವಳಿಕೆಯು ನನಗಿಲ್ಲ. 4. ಆಕಾಶಕ್ಕೆ ಏರಿದವನು ಇಲ್ಲವೆ ಇಳಿದವನು ಯಾರು? ತನ್ನ ಮುಷ್ಟಿಗಳಲ್ಲಿ ಗಾಳಿಯನ್ನು ಕೂಡಿಸಿದವನಾರು? ವಸ್ತ್ರದಲ್ಲಿ ನೀರನ್ನು ಕಟ್ಟಿದವ ನಾರು? ಭೂಮಿಯ ಕೊನೆಗಳನ್ನೆಲ್ಲಾ ಸ್ಥಾಪಿಸಿದವ ನಾರು? ನೀನು ಹೇಳುವದಾದರೆ ಆತನ ಹೆಸರೇನು? ಆತನ ಮಗನ ಹೆಸರೇನು? 5. ದೇವರ ಪ್ರತಿಯೊಂದು ಮಾತು ಶುದ್ಧವಾಗಿದೆ; ಆತನಲ್ಲಿ ಭರವಸವಿಡುವವನಿಗೆ ಆತನು ಗುರಾಣಿಯಾಗಿದ್ದಾನೆ. 6. ಆತನು ನಿನ್ನನ್ನು ಗದರಿಸುವಂತೆಯೂ ನೀನು ಸುಳ್ಳುಗಾರನೆಂದು ತೋರು ವಂತೆಯೂ ಆತನ ಮಾತುಗಳಿಗೆ ಯಾವದನ್ನು ಸೇರಿಸ ಬೇಡ. 7. ನಿನ್ನಿಂದ ಎರಡನ್ನು ಕೇಳಿಕೊಂಡಿದ್ದೇನೆ; ನಾನು ಸಾಯುವದಕ್ಕಿಂತ ಮುಂಚೆ ಅವುಗಳನ್ನು ಕೊಡುವದಕ್ಕೆ ಹಿಂತೆಗೆಯಬೇಡ; 8. ವ್ಯರ್ಥತ್ವವನ್ನೂ ಸುಳ್ಳುಗಳನ್ನೂ ನನ್ನಿಂದ ದೂರವಾಗಿ ತೆಗೆದುಹಾಕು. ಬಡತನವಾಗಲಿ ಐಶ್ವರ್ಯವಾಗಲಿ ನನಗೆ ಕೊಡಬೇಡ; ನನಗೆ ತಕ್ಕಷ್ಟು ಆಹಾರವನ್ನು ಭೋಜನ ಮಾಡಿಸು; 9. ಇಲ್ಲವಾದರೆ ನಾನು ಸಂತೃಪ್ತನಾಗಿ ನಿನ್ನನ್ನು ನಿರಾಕರಿಸಿ--ಕರ್ತನು ಯಾರು ಎಂದು ಹೇಳಿಯೇನು? ಇಲ್ಲವೆ ನಾನು ಬಡವನಾಗಿ ಕದ್ದುಕೊಂಡು ದೇವರ ನಾಮವನ್ನು ಅಯೋಗ್ಯವಾಗಿ ಎತ್ತೇನು. 10. ಅವನ ಯಜಮಾನನಿಗೆ ಸೇವಕನ ವಿಷಯವಾಗಿ ದೂರು ಹೇಳಬೇಡ; ಇದ ರಿಂದ ಅವನು ಶಪಿಸಾನು; ಆಗ ನೀನು ದೋಷಿ ಯಾಗುವಿ. 11. ತಮ್ಮ ತಂದೆಯನ್ನು ಶಪಿಸಿ ತಮ್ಮ ತಾಯಿಗೆ ಶುಭವನ್ನು ಕೋರದೆ ಇರುವ ವಂಶಾವಳಿ ಇದೆ. 12. ತಮ್ಮ ಮಲಿನತ್ವದಿಂದ ಇನ್ನು ತೊಳೆಯಲ್ಪಡದೆ ತಮ್ಮ ದೃಷ್ಟಿಯಲ್ಲಿ ಶುದ್ಧವಾಗಿರುವ ಒಂದು ವಂಶಾವಳಿಯು ಇದೆ. 13. ಒಂದು ವಂಶಾ ವಳಿಯು ಇದೆ: ಅದರ ಕಣ್ಣುಗಳು ಎಷ್ಟೋ ಉನ್ನತ ವಾಗಿವೆ! ಅದರ ಕಣ್ಣು ರೆಪ್ಪೆಗಳು ಎತ್ತಲ್ಪಟ್ಟಿವೆ. 14. ಭೂಮಿಯೊಳಗಿಂದ ಬಡವರನ್ನೂ ಮನುಷ್ಯ ರೊಳಗಿಂದ ದಿಕ್ಕಿಲ್ಲದವರನ್ನೂ ನುಂಗುವಂತೆ ತಮ್ಮ ಹಲ್ಲುಗಳು ಖಡ್ಗಗಳಂತೆಯೂ ತಮ್ಮ ದವಡೆಯ ಹಲ್ಲು ಗಳು ಕತ್ತಿಗಳಂತೆಯೂ ಇರುವ ಒಂದು ವಂಶಾವಳಿಯು ಇದೆ. 15. ಕೊಡು, ಕೊಡು ಎಂದು ಕೂಗುವ ಇಬ್ಬರು ಹೆಣ್ಣುಮಕ್ಕಳು ಜಿಗಣೆಗೆ ಇವೆ. ಎಂದಿಗೂ ತೃಪ್ತಿಪಡದ ಮೂರು ಸಂಗತಿಗಳು ಇವೆ; ಹೌದು, ಸಾಕು ಎಂದು ಹೇಳದಿರುವ ನಾಲ್ಕು ಸಂಗತಿಗಳಿವೆ. 16. ಯಾವವಂದರೆ: ಸಮಾಧಿ, ಬಂಜೆಯಾದ ಗರ್ಭ, ನೀರಿನಿಂದ ತುಂಬ ದಿದ್ದ ಭೂಮಿ, ಸಾಕೆಂದು ಹೇಳದೆ ಇರುವ ಬೆಂಕಿ. 17. ತನ್ನ ತಂದೆಯನ್ನು ಹಾಸ್ಯಮಾಡಿ ತನ್ನ ತಾಯಿಯನ್ನು ಧಿಕ್ಕರಿಸುವವನ ಕಣ್ಣನ್ನು ಕಣಿವೆಯ ಕಾಗೆಗಳು ಕಿತ್ತು ಹಾಕುವವು, ಪ್ರಾಯದ ಹದ್ದುಗಳು ಅದನ್ನು ತಿನ್ನು ವವು. 18. ನನಗೆ ಆಶ್ಚರ್ಯವಾದ ಮೂರು ಸಂಗತಿಗ ಳಿವೆ. ಹೌದು, ನಾನು ಅರಿಯದಿರುವ ನಾಲ್ಕು ಸಂಗ ತಿಗಳಿವೆ-- 19. ಆಕಾಶದಲ್ಲಿ ಹದ್ದಿನ ಹಾದಿ, ಬಂಡೆಯ ಮೇಲೆ ಸರ್ಪದ ಸರಣಿ; ಸಮುದ್ರದಲ್ಲಿ ಹಡಗಿನ ಮಾರ್ಗ, ಕನ್ಯೆಯೊಂದಿಗೆ ಮನುಷ್ಯನ ಮಾರ್ಗ. 20. ಜಾರಸ್ತ್ರೀಯ ನಡತೆಯು ಹಾಗೆಯೇ ಇದೆ; ಅವಳು ತಿಂದು ತನ್ನ ಬಾಯನ್ನು ಒರಸಿಕೊಂಡು--ನಾನು ಯಾವ ಕೆಟ್ಟದ್ದನ್ನೂ ಮಾಡಲಿಲ್ಲ ಎಂದು ಹೇಳುತ್ತಾಳೆ. 21. ಭೂಮಿಯು ಮೂರರಿಂದ ಕಳವಳಗೊಳ್ಳುತ್ತದೆ; ನಾಲ್ವರನ್ನು ಅದು ತಾಳಲಾರದು 22. ಆಳುವ ದಾಸನು, ಹೊಟ್ಟೆತುಂಬಿದ ನೀಚನು, 23. ಮದುವೆಯಾದ ಚಂಡಿಯು, ತನ್ನ ಯಜಮಾನಳಿಗೆ ಬಾಧ್ಯಸ್ಥಳಾದ ದಾಸಿಯು. 24. ಭೂಮಿಯ ಮೇಲೆ ಅಧಿಕ ಜ್ಞಾನವು ಳ್ಳವುಗಳಾದ ನಾಲ್ಕು ಸಣ್ಣ ಪ್ರಾಣಿಗಳು ಇವೆ. 25. ಇರುವೆಗಳು ದುರ್ಬಲ ಜಾತಿಯಾಗಿದ್ದರೂ ಬೇಸಿಗೆ ಯಲ್ಲಿ ತಮ್ಮ ಆಹಾರವನ್ನು ಸಿದ್ಧಮಾಡಿಕೊಳ್ಳುತ್ತವೆ. 26. ಮೊಲಗಳು ಬಲಹೀನವಾದ ಜಾತಿಯಾಗಿದ್ದರೂ ಅವು ಬಂಡೆಗಳಲ್ಲಿ ತಮ್ಮ ಮನೆಗಳನ್ನು ಮಾಡಿಕೊಳ್ಳು ತ್ತವೆ. 27. ಮಿಡತೆಗಳಿಗೆ ಅರಸನಿಲ್ಲ; ಆದರೂ ಅವೆಲ್ಲಾ ದಂಡುದಂಡಾಗಿ ಹೋಗುತ್ತವೆ. 28. ಜೇಡರ ಹುಳು ತನ್ನ ಕೈಗಳಿಂದ ಹಿಡಿದುಕೊಳ್ಳುತ್ತದೆ; ಅದು ಅರಮನೆ ಗಳಲ್ಲಿ ಇರುತ್ತದೆ. 29. ಗಂಭೀರ ಗಮನದ ಮೂರು ಪ್ರಾಣಿಗಳಿವೆ; ಹೌದು, ನಡತೆಯಲ್ಲಿ ಅಂದವಾಗಿರುವ ನಾಲ್ಕು ಪ್ರಾಣಿಗಳಿವೆ. 30. ಮೃಗಗಳಲ್ಲಿ ಬಲಿಷ್ಠವಾಗಿ ರುವ ಸಿಂಹವು ಯಾವದಕ್ಕೂ ಹೆದರುವುದಿಲ್ಲ. 31. ಬೇಟೆಯ ನಾಯಿ; ಹೋತವು ಸಹ; ಸೈನ್ಯಸಮೇತ ನಾದ ಅರಸನು. 32. ನೀನು ಉಬ್ಬಿಕೊಂಡು ಮೂರ್ಖ ನಾಗಿ ನಡೆದಿದ್ದರೆ ಇಲ್ಲವೆ ಕೆಟ್ಟದ್ದಾಗಿ ಆಲೋಚಿಸಿದ್ದರೆ ನಿನ್ನ ಬಾಯಿಯ ಮೇಲೆ ಕೈಯಿಟ್ಟುಕೋ. 33. ಹಾಲು ಕರೆಯುವದರಿಂದ ನಿಜವಾಗಿಯೂ ಬೆಣ್ಣೆ ಬರುತ್ತದೆ; ಮೂಗು ಹಿಂಡುವದರಿಂದ ರಕ್ತ ಬರುತ್ತದೆ; ಹಾಗೆಯೇ ಕೋಪವನ್ನೆಬ್ಬಿಸುವದರಿಂದ ಜಗಳ ಬರುತ್ತದೆ.
Chapter 31
1. ಅರಸನಾದ ಲೆಮೂವೇಲನ ಮಾತುಗಳು, ಅಂದರೆ ಅವನ ತಾಯಿಯು ಅವನಿಗೆ ಉಪದೇಶಿಸಿದ ಪ್ರವಾದನೆಯು. 2. ನನ್ನ ಮಗನೇ ಏನು? ನನ್ನ ಗರ್ಭಪುತ್ರನೇ ಏನು? ನನ್ನ ಪ್ರತಿಜ್ಞೆಯ ಮಗನೇ ಏನು? 3. ನಿನ್ನ ತ್ರಾಣವನ್ನು ಸ್ತ್ರೀಯರಲ್ಲಿ ಒಪ್ಪಿಸದಿರು, ಇಲ್ಲವೆ ಅರಸರನ್ನು ನಾಶಪಡಿಸುವ ದಾರಿಗಳಿಗೆ ತಿರುಗಬೇಡ. 4. ದ್ರಾಕ್ಷಾರಸವನ್ನು ಕುಡಿ ಯುವದು ರಾಜರಿಗೆ ಯೋಗ್ಯವಲ್ಲ; ಓ ಲೆಮೂ ವೇಲನೇ, ಅದು ಅರಸರಿಗೆ ಬೇಡ; ಇಲ್ಲವೆ ಪ್ರಭುಗ ಳಿಗೆ ಕುಡಿಯುವದು ಹಿತವಲ್ಲ; 5. ಕುಡಿದರೆ ಅವರು ಕಟ್ಟಿಳೆಯನ್ನು ಮರೆತು ಬಾಧಿತರಲ್ಲಿ ಯಾವನಿಗಾದರೂ ನ್ಯಾಯತೀರ್ಪನ್ನು ವ್ಯತ್ಯಾಸಮಾಡುತ್ತಾರೆ. 6. ನಾಶ ವಾಗುವದಕ್ಕೆ ಸಿದ್ಧವಾಗಿರುವವನಿಗೆ ಮದ್ಯವನ್ನೂ ಮನೋವ್ಯಥೆಪಡುವವರಿಗೆ ದ್ರಾಕ್ಷಾರಸವನ್ನೂ ಕೊಡು. 7. ಅವನು ಕುಡಿದು ತನ್ನ ಬಡತನವನ್ನು ಮರೆತುಬಿಡಲಿ; ತನ್ನ ಶ್ರೆಮೆಯನ್ನು ಇನ್ನು ಜ್ಞಾಪಕಕ್ಕೆ ತಾರದಿರಲಿ; 8. ಮೂಕರಿಗಾಗಿಯೂ ನಾಶವಾಗುವದಕ್ಕೆ ನೇಮಿಸಲ್ಪಟ್ಟ ವರೆಲ್ಲರಿಗಾಗಿಯೂ ನಿನ್ನ ಬಾಯನ್ನು ತೆರೆ. 9. ನಿನ್ನ ಬಾಯಿ ತೆರೆದು ನೀತಿಯಿಂದ ನ್ಯಾಯತೀರಿಸು; ದರಿದ್ರ ರಿಗಾಗಿಯೂ ದಿಕ್ಕಿಲ್ಲದವರಿಗಾಗಿಯೂ ವ್ಯಾಜ್ಯಮಾಡು. 10. ಗುಣವತಿಯಾದ ಸ್ತ್ರೀಯನ್ನು ಯಾವನು ಕಂಡು ಕೊಂಡಾನು? ಅವಳ ಕ್ರಯ ಹವಳಕ್ಕಿಂತಲೂ ಅಮೂ ಲ್ಯವೇ. 11. ತನಗೆ ಯಾವ ನಷ್ಟವೂ ಇರದಂತೆ ಅವಳ ಪತಿಯ ಹೃದಯವು ತನ್ನಲ್ಲಿ ನಿರ್ಭಯವಾಗಿ ಭರವಸೆ ಇಡುತ್ತದೆ. 12. ತನ್ನ ಜೀವಮಾನದಲ್ಲೆಲ್ಲಾ ಆಕೆಯು ಅವನಿಗೆ ಕೆಟ್ಟದ್ದನ್ನಲ್ಲ, ಒಳ್ಳೇದನ್ನೇ ಮಾಡುವಳು. 13. ಆಕೆಯು ಉಣ್ಣೆಯನ್ನೂ ಸಣಬನ್ನೂ ಹುಡುಕು ವವಳಾಗಿ ತನ್ನ ಕೈಗಳಿಂದ ಮನಃಪೂರ್ವಕವಾಗಿ ಕೆಲಸ ಮಾಡುತ್ತಾಳೆ. 14. ಆಕೆಯು ವರ್ತಕರ ಹಡಗುಗಳಂತೆ ಇದ್ದಾಳೆ; ಆಕೆಯು ದೂರದಿಂದ ತನ್ನ ಆಹಾರವನ್ನು ತರುತ್ತಾಳೆ. 15. ಆಕೆಯು ಇನ್ನೂ ಕತ್ತಲಿರುವಾಗಲೇ ಎದ್ದು ತನ್ನ ಮನೆಯವರಿಗೆ ಆಹಾರವನ್ನು ಕೊಟ್ಟು ತನ್ನ ದಾಸಿಯರಿಗೆ ಭತ್ಯವನ್ನು ಹಂಚುತ್ತಾಳೆ. 16. ಆಕೆಯು ಯೋಚಿಸಿ ಹೊಲವನ್ನು ಕೊಂಡುಕೊಳ್ಳುತ್ತಾಳೆ; ತನ್ನ ಕೈಕೆಲಸದ ಫಲದಿಂದ ಆಕೆಯು ದ್ರಾಕ್ಷಾಲತೆಗಳನ್ನು ನೆಡುತ್ತಾಳೆ. 17. ಆಕೆಯು ತನ್ನ ಬಲದಿಂದ ನಡುವನ್ನು ಕಟ್ಟಿಕೊಂಡು ತನ್ನ ತೋಳುಗಳನ್ನು ಶಕ್ತಿಗೊಳಿಸುತ್ತಾಳೆ. 18. ತನ್ನ ವ್ಯಾಪಾರದ ಸರಕು ಒಳ್ಳೇದೆಂದು ಆಕೆಯು ತಿಳು ಕೊಳ್ಳುತ್ತಾಳೆ; ಆಕೆಯ ದೀಪವು ರಾತ್ರಿಯಲ್ಲೆಲ್ಲಾ ಆರದು. 19. ರಾಟೆಯ ಮೇಲೆ ಕೈಹಾಕಿ ತನ್ನ ಕೈಗಳು ಕದರನ್ನು ಹಿಡಿಯುತ್ತವೆ. 20. ಆಕೆಯು ಬಡವರಿಗಾಗಿ ಕೈ ಬಿಚ್ಚುತ್ತಾಳೆ; ಹೌದು, ದಿಕ್ಕಿಲ್ಲದವರಿಗೆ ಆಕೆಯು ಕೈ ನೀಡುತ್ತಾಳೆ. 21. ತನ್ನ ಮನೆಯವರಿಗಾಗಿ ಆಕೆಯು ಹಿಮಕ್ಕೆ ಭಯಪಡುವದಿಲ್ಲ; ಆಕೆಯ ಮನೆಯವ ರೆಲ್ಲರೂ ರಕ್ತಾಂಭರಗಳಿಂದ ಹೊದಿಸಲ್ಪಟ್ಟಿದ್ದಾರೆ. 22. ಆಕೆಯು ತನಗಾಗಿ ರತ್ನ ಕಂಬಳಿಗಳನ್ನು ಮಾಡು ತ್ತಾಳೆ; ಆಕೆಯ ಉಡುಪೋ ರೇಷ್ಮೆ ರಕ್ತಾಂಭರ. 23. ದೇಶದ ಹಿರಿಯರ ಮಧ್ಯದಲ್ಲಿ ತನ್ನ ಪತಿಯು ಕೂತಿ ರುವಾಗ ಅವನು ದ್ವಾರಗಳಲ್ಲಿ ಪ್ರಸಿದ್ಧನಾಗಿರುವನು. 24. ಆಕೆಯು ನಯವಾದ ನಾರುಮಡಿಯನ್ನು ನೇಯ್ದು ಮಾರಾಟ ಮಾಡುತ್ತಾಳೆ; ಆಕೆಯು ವರ್ತಕನಿಗೆ ನಡುಕಟ್ಟುಗಳನ್ನು ಒಪ್ಪಿಸುತ್ತಾಳೆ. 25. ಆಕೆಯ ಉಡುಪು ಬಲವೂ ಘನತೆಯೂ ಆಗಿವೆ; ಭವಿಷ್ಯತ್ತಿ ನಲ್ಲಿ ಆಕೆಯು ಸಂತೋಷಿಸುವಳು. 26. ಆಕೆಯು ಜ್ಞಾನದಿಂದ ತನ್ನ ಬಾಯಿ ತೆರೆಯುತ್ತಾಳೆ; ತನ್ನ ನಾಲಿಗೆಯಲ್ಲಿ ದಯೆಯ ಉಪದೇಶವಿರುವದು. 27. ಆಕೆಯು ತನ್ನ ಗೃಹಕೃತ್ಯಗಳ ನ್ನೆಲ್ಲಾ ಚೆನ್ನಾಗಿ ನೋಡಿಕೊಂಡವಳಾಗಿ ಸೋಮಾರಿ ತನದ ರೊಟ್ಟಿಯನ್ನು ತಿನ್ನುವದಿಲ್ಲ. 28. ಆಕೆಯ ಮಕ್ಕಳು ಎದ್ದು ಆಕೆಯನ್ನು ಧನ್ಯಳೆಂದು ಕರೆಯುತ್ತಾರೆ; ಆಕೆಯ ಪತಿಯು ಸಹ ಹೊಗಳುತ್ತಾನೆ. 29. ಅವನು--ಬಹು ಮಂದಿ ಕುಮಾರ್ತೆಯರು ಗುಣವತಿಯಾಗಿ ನಡೆದಿ ದ್ದಾರೆ; ಆದರೆ ನೀನು ಅವರೆಲ್ಲರಿಗಿಂತಲೂ ಶ್ರೇಷ್ಠಳು ಎಂದು ತನ್ನ ಪತಿಯು ಹೊಗಳುತ್ತಾನೆ. 30. ಸೌಂದ ರ್ಯವು ಮೋಸಕರ; ಲಾವಣ್ಯವು ವ್ಯರ್ಥ; ಕರ್ತನಿಗೆ ಭಯಪಡುವವಳು ಹೊಗಳಲ್ಪಡುವಳು. 31. ಆಕೆಯ ಕೈಕೆಲಸದ ಪ್ರತಿಫಲವನ್ನು ಸಲ್ಲಿಸಿರಿ; ದ್ವಾರಗಳಲ್ಲಿ ಆಕೆಯ ಕಾರ್ಯಗಳು ಆಕೆಯನ್ನು ಹೊಗಳಲಿ.
(April28th2012)
|