Home Churches About
 

Chapter 1

1. ನಿನೆವೆಯ ಭಾರವು. ಎಲ್ಕೋಷಿನವನಾದ ನಹೂಮನ ದರ್ಶನದ ಪುಸ್ತಕವು.
2. ಕರ್ತನು ರೋಷವುಳ್ಳಂಥ, ಮುಯ್ಯಿಗೆಮುಯ್ಯಿ ಕೊಡುವಂಥ ದೇವರು; ಕರ್ತನು ಮುಯ್ಯಿಗೆ ಮುಯ್ಯಿ ಕೊಡುವಂಥ ಉಗ್ರವುಳ್ಳಾತನು, ಕರ್ತನು ತನ್ನ ವೈರಿ ಗಳಿಗೆ ಮುಯ್ಯಿಗೆಮುಯ್ಯಿ ತೀರಿಸಿ ತನ್ನ ಶತ್ರುಗಳ ಮೇಲೆ ಕೋಪವನ್ನು ಇಟ್ಟುಕೊಳ್ಳುತ್ತಾನೆ.
3. ಕರ್ತನು ಕೋಪಿಸುವದರಲ್ಲಿ ನಿಧಾನ ಮಾಡುವವನಾದರೂ ಶಕ್ತಿಯಲ್ಲಿ ಮಹತ್ತಾದವನು; ದುರ್ಮಾರ್ಗದವರನ್ನು ಎಷ್ಟು ಮಾತ್ರಕ್ಕೂ ನಿರ್ಮಲರೆಂದು ತೀರ್ಮಾನಿಸ ದವನು; ಕರ್ತನ ಮಾರ್ಗವು ಸುಳಿಗಾಳಿಯಲ್ಲಿಯೂ ಬಿರುಗಾಳಿಯಲ್ಲಿಯೂ ಉಂಟು; ಮೇಘಗಳು ಆತನ ಕಾಲುಗಳ ಧೂಳೇ.
4. ಆತನು ಸಮುದ್ರವನ್ನು ಗದರಿಸಿ ಅದನ್ನು ಒಣಗುವಂತೆ ಮಾಡುತ್ತಾನೆ; ನದಿಗಳನ್ನೆಲ್ಲಾ ಬತ್ತಿಹೋಗುವಂತೆ ಮಾಡುತ್ತಾನೆ; ಬಾಷಾನೂ ಕರ್ಮೆಲೂ ಬಾಡಿಹೋಗುತ್ತವೆ, ಲೆಬನೋನಿನ ಹೂವು ಬಾಡಿಹೋಗುತ್ತದೆ.
5. ಬೆಟ್ಟಗಳು ಆತನ ಮುಂದೆ ಕಂಪಿಸುತ್ತವೆ; ಗುಡ್ಡಗಳು ಕರಗುತ್ತವೆ; ಭೂಮಿಯೂ ಹೌದು, ಲೋಕವೂ ಅದರಲ್ಲಿ ವಾಸಿಸು ವವರೆಲ್ಲರೂ ಆತನ ಮುಂದೆ ಸುಟ್ಟು ಹೋಗುವರು.
6. ಆತನ ರೌದ್ರದ ಎದುರಿಗೆ ಯಾರು ನಿಲ್ಲುವರು? ಆತನ ರೋಷಾಗ್ನಿಗೆ ಯಾರು ನಿಂತುಕೊಳ್ಳುವರು? ಆತನ ಉಗ್ರವು ಬೆಂಕಿಯ ಹಾಗೆ ಸುರಿಸಲ್ಪಟ್ಟಿದೆ; ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.
7. ಕರ್ತನು ಒಳ್ಳೆಯವನು; ಇಕ್ಕಟ್ಟಿನ ದಿನದಲ್ಲಿ ಬಲವಾದ ಕೋಟೆಯಾಗಿದ್ದಾನೆ; ತನ್ನಲ್ಲಿ ನಂಬಿಕೆಯಿಡು ವವರನ್ನು ಬಲ್ಲನು.
8. ಆದರೆ ಮೇರೆ ವಿಾರುವ ಪ್ರಳಯ ದಿಂದ ಅದರ ಸ್ಥಳವನ್ನು ಮುಗಿಸಿಬಿಡುವನು; ಕತ್ತಲೆ ಆತನ ಶತ್ರುಗಳನ್ನು ಹಿಂದಟ್ಟುವದು.
9. ಕರ್ತನಿಗೆ ವಿರೋಧವಾಗಿ ಏನು ಯೋಚಿಸುತ್ತೀರಿ? ಆತನು ಸಂಪೂರ್ಣವಾಗಿ ಮುಗಿಸಿಬಿಡುತ್ತಾನೆ; ಇಕ್ಕಟ್ಟು ಎರ ಡನೇ ಸಾರಿ ಏಳದು.
10. ಅವರು ಮುಳ್ಳುಗಳ ಹಾಗೆ ಹೊಂದಿಕೊಂಡಿದ್ದರೂ ತಮ್ಮ ದ್ರಾಕ್ಷಾರಸದಿಂದ ಮತ್ತ ರಾಗಿದ್ದರೂ ಪೂರ್ಣವಾಗಿ ಒಣಗಿದ ಕೊಳೆಯಂತೆ ನಾಶವಾಗುವರು.
11. ಕರ್ತನಿಗೆ ವಿರೋಧವಾಗಿ ದುರಾ ಲೋಚನೆ ಮಾಡಿ ಕೇಡನ್ನು ಯೋಚಿಸುವವನು ನಿನ್ನೊಳ ಗಿಂದ ಹೊರಟಿದ್ದಾನೆ.
12. ಕರ್ತನು ಹೀಗೆ ಹೇಳು ತ್ತಾನೆ--ಅವರು ಸುಖವುಳ್ಳವರಾಗಿಯೂ ಬಹು ಮಂದಿ ಯಾಗಿಯೂ ಇದ್ದರೂ ಆತನು ಹಾದುಹೋಗುವಾಗ ಹೀಗೆ ಕಡಿಯಲ್ಪಡುವರು; ನಾನು ನಿನ್ನನ್ನು ಕಷ್ಟಪಡಿಸಿ ದಾಗ್ಯೂ ಇನ್ನು ಮೇಲೆ ಕಷ್ಟಪಡಿಸೆನು.
13. ಆದರೆ ನಾನು ಈಗ ನಿನ್ನ ಮೇಲಿಂದ ಆತನ ನೊಗವನ್ನು ಮುರಿದು ನಿನ್ನ ಬಂಧನಗಳನ್ನು ಹರಿದುಬಿಡುವೆನು.
14. ನಿನ್ನ ವಿಷಯವಾಗಿ ಕರ್ತನು ಆಜ್ಞಾಪಿಸುವದೇ ನಂದರೆ--ನಿನ್ನ ಹೆಸರುಳ್ಳವರು ಇನ್ನು ಬಿತ್ತಲ್ಪಡರು; ನಿನ್ನ ದೇವರುಗಳ ಮನೆಯೊಳಗಿಂದ ಕೆತ್ತಿದ ವಿಗ್ರಹ ವನ್ನೂ ಎರಕ ಹೊಯಿದದ್ದನ್ನೂ ಕಡಿದುಬಿಡುವೆನು; ನೀನು ತುಚ್ಛನಾದದ್ದರಿಂದ ನಿನಗೆ ಸಮಾಧಿಯನ್ನು ಸಿದ್ಧಮಾಡುವೆನು.
15. ಇಗೋ, ಬೆಟ್ಟಗಳ ಮೇಲೆ ಶುಭಸಮಾಚಾರವನ್ನು ತಂದು ಸಮಾಧಾನವನ್ನು ತಿಳಿಸುವವನ ಪಾದಗಳನ್ನು ನೋಡು. ಯೆಹೂದವೇ, ನಿನ್ನ ಪರಿಶುದ್ಧ ಹಬ್ಬಗಳನ್ನು ನಡೆಸು, ನಿನ್ನ ಪ್ರಮಾಣ ಗಳನ್ನು ಸಲ್ಲಿಸು; ಯಾಕಂದರೆ ಇನ್ನು ಮೇಲೆ ದುಷ್ಟನು ನಿನ್ನನ್ನು ಹಾದುಹೋಗನು; ಅವನು ಸಂಪೂರ್ಣವಾಗಿ ಕಡಿದು ಬಿಡಲ್ಪಟ್ಟಿದ್ದಾನೆ.

Chapter 2

1. ಚೂರುಚೂರಾಗಿ ಒಡೆದು ಬಿಡುವವನು ನಿನ್ನ ಎದುರಿಗೆ ಬಂದಿದ್ದಾನೆ; ಆಯುಧ ಗಳನ್ನು ಭದ್ರಪಡಿಸು; ದಾರಿಯನ್ನು ಕಾಯಿ; ನಡುವನ್ನು ಬಲಪಡಿಸಿಕೋ, ನಿನ್ನ ಶಕ್ತಿಯನ್ನು ಬಲವಾಗಿ ಗಟ್ಟಿ ಮಾಡಿಕೋ.
2. ಕರ್ತನು ಯಾಕೋಬನ ಹೆಚ್ಚಳವನ್ನು ಇಸ್ರಾಯೇಲಿನ ಹೆಚ್ಚಳದ ಹಾಗೆಯೇ ತಿರುಗಿಸಿಬಿಟ್ಟಿ ದ್ದಾನೆ; ಬರಿದು ಮಾಡುವವರು ಅವರನ್ನು ಬರಿದು ಮಾಡಿ ಅವರ ದ್ರಾಕ್ಷೇ ಬಳ್ಳಿಗಳನ್ನು ಕೆಡಿಸಿದ್ದಾರೆ.
3. ಆತನ ಬಲಾಢ್ಯದ ಡಾಲು ಕೆಂಪಾಗಿದೆ; ಶೂರರು ರಕ್ತವರ್ಣದವರಾಗಿದ್ದಾರೆ; ಆತನು ಸಿದ್ಧಮಾಡುವ ದಿನ ದಲ್ಲಿ ರಥಗಳು ಹೊಳೆಯುವ ದೀವಟಿಗೆಗಳ ಹಾಗೆ ಇರುವವು; ಸೈಪ್ರಸ್‌ ಮರಗಳು ಭಯಂಕರವಾಗಿ ಅಲ್ಲಾ ಡಿಸಲ್ಪಡುವವು.
4. ರಥಗಳು ಬೀದಿಗಳಲ್ಲಿ ರಭಸವಾಗಿ ಓಡಾಡುವವು. ಹೆದ್ದಾರಿಗಳಲ್ಲಿ ಒಂದಕ್ಕೊಂದು ತಗಲು ವವು; ದೀವಟಿಗೆಗಳ ಹಾಗೆ ತೋರುವವು, ಮಿಂಚುಗಳ ಹಾಗೆ ಓಡುವವು.
5. ಆತನು ತನಗೆ ಯೋಗ್ಯವಾದವ ರನ್ನು ಗಮನಿಸುವನು. ಅವರು ತಮ್ಮ ನಡೆಯಲ್ಲಿ ಎಡವುವರು; ಅದರ ಗೋಡೆಯ ಬಳಿಗೆ ತ್ವರೆಯಾಗಿ ಬರುವರು; ರಕ್ಷಣೆಯು ಸಿದ್ಧಮಾಡಲ್ಪಡುವದು.
6. ನದಿಗಳ ಬಾಗಲುಗಳು ತೆರೆಯಲ್ಪಡುವವು; ಅರಮನೆ ಕರಗಿಹೋಗುವದು.
7. ಸ್ಥಿರವಾಗಿದ್ದವಳು ಸೆರೆಗೆ ಒಯ್ಯಲ್ಪಡುವಳು, ಮೇಲಕ್ಕೆ ತರಲ್ಪಡುವಳು; ಅವಳ ದಾಸಿಯರು ಪಾರಿವಾಳಗಳ ಶಬ್ದದಂತೆ ಮೂಲ್ಗುತ್ತ ಎದೆಬಡುಕೊಳ್ಳುವರು.
8. ನಿನೆವೆ ಹುಟ್ಟಿದಂದಿನಿಂದ ನೀರಿನ ಕೆರೆಯ ಹಾಗಿತ್ತು; ಆದರೂ ಅವರು ಓಡಿಹೋಗುತ್ತಾರೆ; ನಿಲ್ಲಿರಿ, ನಿಲ್ಲಿರಿ ಅಂದರೂ ಒಬ್ಬನೂ ಹಿಂದಕ್ಕೆ ನೋಡುವದಿಲ್ಲ.
9. ಬೆಳ್ಳಿಯನ್ನು ಸುಲುಕೊಳ್ಳಿರಿ; ಬಂಗಾರವನ್ನು ಸುಲುಕೊಳ್ಳಿರಿ; ಕೂಡಿಸಿಟ್ಟ ಧನಕ್ಕೂ ಸಕಲ ವಿಧವಾದ ಶ್ರೇಷ್ಠ ವಸ್ತುಗಳ ನಿಧಿಗೂ ಪಾರವೇ ಇಲ್ಲ.
10. ಅದು ಬರಿದಾಗಿಯೂ, ಬೈಲಾಗಿಯೂ, ಹಾಳಾ ಗಿಯೂ ಇತ್ತು; ಹೃದಯ ಕರಗುತ್ತದೆ; ಮೊಣಕಾಲುಗಳು ಒಟ್ಟಾಗಿ ಬಡಿದುಕೊಳ್ಳುತ್ತವೆ. ಎಲ್ಲಾ ನಡುವುಗಳಲ್ಲಿ ಹೆಚ್ಚು ಸಂಕಟ ಉಂಟು; ಎಲ್ಲಾ ಮುಖಗಳು ಕಳೆ ಗುಂದುತ್ತವೆ.
11. ಸಿಂಹದ ಗವಿಯೂ ಎಳೇ ಸಿಂಹಗಳು ಮೇಯುವ ಸ್ಥಳವು ಎಲ್ಲಿ? ಅಲ್ಲಿ ಮುದಿಸಿಂಹ, ಸಿಂಹಿಣಿ ಸಿಂಹದ ಮರಿಗಳು ನಡೆದಾಡಿದರೂ ಯಾರೂ ಹೆದರಿ ಸಲಿಲ್ಲವಲ್ಲಾ?
12. ಸಿಂಹವು ತನ್ನ ಮರಿಗಳಿಗೆ ಸಾಕಾ ಗುವಷ್ಟು ಸೀಳಿ ತನ್ನ ಸಿಂಹಿಣಿಗಳಿಗೋಸ್ಕರ ಕೊರಳು ಹಿಸುಕಿ ಕೊಳ್ಳೆಯಿಂದ ತನ್ನ ಗವಿಗಳನ್ನೂ ಸುಲಿಗೆಯಿಂದ ತನ್ನ ಗುಹೆಗಳನ್ನೂ ತುಂಬಿಸುತ್ತಿತ್ತು.
13. ಸೈನ್ಯಗಳ ಕರ್ತನು ಹೇಳುವದೇನಂದರೆ -- ಇಗೋ, ನಾನು ನಿನಗೆ ವಿರೋಧವಾಗಿದ್ದೇನೆ; ಅದರ ರಥಗಳನ್ನು ಹೊಗೆಯಾ ಗಲು ಸುಡುತ್ತೇನೆ; ಕತ್ತಿಯು ನಿನ್ನ ಎಳೇ ಸಿಂಹಗಳನ್ನು ನುಂಗಿಬಿಡುವದು; ನಿನ್ನ ಕೊಳ್ಳೆಯನ್ನು ಭೂಮಿಯ ಮೇಲಿನಿಂದ ಕಡಿದುಬಿಡುತ್ತೇನೆ; ನಿನ್ನ ಸೇವಕರ ಶಬ್ದವು ಇನ್ನು ಕೇಳಲ್ಪಡುವದಿಲ್ಲ.

Chapter 3

1. ರಕ್ತವುಳ್ಳ ಪಟ್ಟಣಕ್ಕೆ ಅಯ್ಯೋ! ಅದೆಲ್ಲಾ ಸುಳ್ಳಿನಿಂದಲೂ ಕಳ್ಳತನದಿಂದಲೂ ತುಂಬಿ ಯದೆ; ಕೊಳ್ಳೆಯನ್ನು ಬಿಡುವದಿಲ್ಲ.
2. ಚಾವಟಿಗೆ ಚಬುಕಿನ ಶಬ್ದವೂ ಚಕ್ರಗಳ ಧಡಧಡನೆಯ ಶಬ್ದವೂ ಕುದುರೆಗಳ ಕುಣಿದಾಟವೂ ರಥಗಳ ಹಾರಾಟವೂ ಉಂಟು.
3. ಸವಾರನು ಹತ್ತುತ್ತಾನೆ, ಕತ್ತಿಗಳು ಮಿಂಚು ತ್ತವೆ. ಈಟಿಗಳು ಥಳಥಳಿಸುತ್ತವೆ, ಹತವಾದವರು ಬಹಳ; ಹೆಣಗಳು ಬಹಳ; ಶವಗಳಿಗೆ ಅಂತ್ಯವೇ ಇಲ್ಲ; ಅವರು ಶವಗಳ ಮೇಲೆ ಎಡವುತ್ತಾರೆ.
4. ಸೌಂದರ್ಯವುಳ್ಳ ಮಾಟಗಾರ್ತಿಯಾದ ಸೂಳೆಯ ಸೂಳೆತನಗಳು ಬಹಳ; ಅವಳು ತನ್ನ ಸೂಳೆತನಗಳಿಂದ ಜನಾಂಗಗಳನ್ನೂ ತನ್ನ ಮಾಟಗಳಿಂದ ಗೋತ್ರಗಳನ್ನೂ ಮಾರಿದಳಲ್ಲಾ?
5. ಸೈನ್ಯಗಳ ಕರ್ತನು ಹೇಳುವದೇ ನಂದರೆ--ಇಗೋ, ನಾನು ನಿನಗೆ ವಿರೋಧವಾಗಿ ದ್ದೇನೆ; ನಿನ್ನ ಸೆರಗುಗಳನ್ನು ನಿನ್ನ ಮುಖದ ಮೇಲೆ ಎತ್ತಿ ಜನಾಂಗಗಳಿಗೆ ನಿನ್ನ ನಾಚಿಕೆಯನ್ನೂ ರಾಜ್ಯಗಳಿಗೆ ನಿನ್ನ ನಿಂದೆಯ ಬೆತ್ತಲೆತನವನ್ನೂ ತೋರಿಸುತ್ತೇನೆ.
6. ಅಸಹ್ಯವಾದವುಗಳನ್ನು ನಿನ್ನ ಮೇಲೆ ಹಾಕಿ ನಿನ್ನನ್ನು ನೀಚಳನ್ನಾಗಿ ಮಾಡಿ ನಿನ್ನನ್ನು ನೋಟಕ್ಕೆ ಇಡುತ್ತೇನೆ.
7. ಆಗ ಆಗುವದೇನಂದರೆ, ನಿನ್ನನ್ನು ನೋಡುವವ ರೆಲ್ಲರೂ ನಿನ್ನಿಂದ ಓಡಿಹೋಗಿ ನಿನೆವೆ ಹಾಳಾಯಿತು; ಅದಕ್ಕೆ ಯಾರು ಚಿಂತೆಪಡುವರು, ನಿನಗಾಗಿ ಆದರಿ ಸುವವರನ್ನು ನಾನು ಎಲ್ಲಿಂದ ಹುಡುಕಲಿ ಎಂದು ಹೇಳುವರು.
8. ನದಿಗಳ ಬಳಿ ನೆಲೆಯಾಗಿದ್ದ ಅಮೋನಿಗಿಂತ ನೀನು ಒಳ್ಳೆಯವಳೋ? ಅದರ ಸುತ್ತಲೂ ನೀರಿತ್ತು; ಅದರ ಬಲವು ಸಮುದ್ರವೇ; ಸಮುದ್ರವು ಅದಕ್ಕೆ ಗೋಡೆ ಯಾಗಿತ್ತು.
9. ಕೂಷೂ ಐಗುಪ್ತವೂ ಅದರ ಬಲ ವಾಗಿದ್ದವು; ಮತ್ತು ಲೆಕ್ಕವಿಲ್ಲದ್ದಾಗಿತ್ತು; ಪೂಟರೂ ಲೂಬ್ಯರೂ ನಿನ್ನ ಸಹಾಯಕರಾಗಿದ್ದರು.
10. ಆದರೆ ಅದು ಸೆರೆಯಾಗಿ ದೇಶಾಂತರಕ್ಕೆ ಹೋಯಿತು; ಅದರ ಕೂಸುಗಳು ಸಹ ಎಲ್ಲಾ ಬೀದಿಗಳ ತುದಿಗಳಲ್ಲಿ ಜಜ್ಜ ಲ್ಪಟ್ಟವು; ಅದರ ಘನವುಳ್ಳವರಿಗೋಸ್ಕರ ಚೀಟು ಹಾಕಿದರು; ಅದರ ಮಹನೀಯರೆಲ್ಲರೂ ಸಂಕೋಲೆ ಗಳಿಂದ ಕಟ್ಟಲ್ಪಟ್ಟರು.
11. ನೀನು ಸಹ ಅಮಲೇರಿದ್ದೀ, ಅಡಗಿಕೊಳ್ಳುವಿ; ನೀನು ಸಹ ಶತ್ರುವಿನ ನಿಮಿತ್ತ ತ್ರಾಣ ವನ್ನು ಹುಡುಕುವಿ.
12. ನಿನ್ನ ಕೋಟೆಗಳೆಲ್ಲಾ ಮೊದಲನೇ ಹಣ್ಣುಗಳುಳ್ಳ ಅಂಜೂರದ ಗಿಡಗಳ ಹಾಗಿರುವವು; ಅಲ್ಲಾಡಿಸಲ್ಪಟ್ಟರೆ ತಿನ್ನುವವನ ಬಾಯಲ್ಲಿಯೇ ಬೀಳುವವು.
13. ಇಗೋ, ನಿನ್ನ ಮಧ್ಯದಲ್ಲಿರುವ ನಿನ್ನ ಜನರು ಹೆಂಗಸರ ಹಾಗಿದ್ದಾರೆ; ನಿನ್ನ ದೇಶದ ಬಾಗಲುಗಳು ನಿನ್ನ ಶತ್ರುಗಳಿಗೆ ಅಗಲವಾಗಿ ತೆರೆಯಲ್ಪಡುವವು; ಬೆಂಕಿ ನಿನ್ನ ಅಗುಳಿಗಳನ್ನು ತಿಂದುಬಿಡುವದು.
14. ಮುತ್ತಿಗೆಗೋಸ್ಕರ ನೀರನ್ನು ಸೇದು ನಿನ್ನ ಬಲವಾದ ಕೋಟೆಗಳನ್ನು ಭದ್ರ ಮಾಡು; ಕೆಸರಿನಲ್ಲಿ ಸೇರು ಮಣ್ಣನ್ನು ತುಳಿ, ಇಟ್ಟಿಗೆ ಗೂಡನ್ನು ಬಲಪಡಿಸು.
15. ಅಲ್ಲೇ ಬೆಂಕಿ ನಿನ್ನನ್ನು ನುಂಗುವದು; ಕತ್ತಿಯು ನಿನ್ನನ್ನು ಕಡಿದುಬಿಡುವದು; ನಾಶಕ ಹುಳದಂತೆ ಅದು ನಿನ್ನನ್ನು ತಿಂದುಬಿಡುವದು; ನಾಶಕ ಹುಳದಂತೆ ಬಹು ಮಂದಿಯಾಗು; ಮಿಡತೆಗಳಂತೆ ಬಹು ಮಂದಿಯಾಗು.
16. ನಿನ್ನ ವರ್ತಕರನ್ನು ಆಕಾಶದ ನಕ್ಷತ್ರಗಳಿಗಿಂತ ಹೆಚ್ಚಿ ಸಿದ್ದೀ; ನಾಶಕ ಹುಳವು ನಾಶಮಾಡಿ ಹಾರಿಹೋಗು ತ್ತದೆ.
17. ನಿನ್ನ ಕಿರೀಟಧಾರಿಗಳು ಮಿಡತೆಗಳ ಹಾಗೆಯೂ ನಿನ್ನ ಅಧಿಪತಿಗಳು ತಂಪಾದ ದಿನದಲ್ಲಿ ಬೇಲಿಗಳೊಳಗೆ ಇಳುಕೊಳ್ಳುವ ದೊಡ್ಡ ಮಿಡತೆಗಳ ಹಾಗೆಯೂ ಇದ್ದಾರೆ; ಸೂರ್ಯನು ಹುಟ್ಟುವಾಗ ಹಾರಿಹೋಗು ತ್ತವೆ; ಆಗ ಅವು ಎಲ್ಲಿರುವವೆಂದು ಅವುಗಳ ಸ್ಥಳವು ತಿಳಿಯುವದಿಲ್ಲ;
18. ಅಶ್ಶೂರ್ಯದ ಅರಸನೇ, ನಿನ್ನ ಕುರುಬರು ತೂಕಡಿಸುತ್ತಾರೆ, ನಿನ್ನ ಶ್ರೇಷ್ಠರು ಧೂಳಿನಲ್ಲಿ ಬಿದ್ದಿದ್ದಾರೆ; ನಿನ್ನ ಜನರು ಬೆಟ್ಟಗಳಲ್ಲಿ ಚದರಿ ಹೋಗಿ ದ್ದಾರೆ; ಕೂಡಿಸುವವರು ಯಾರೂ ಇಲ್ಲ.
19. ನಿನ್ನ ಗಾಯವು ಗುಣಹೊಂದದು; ನಿನ್ನ ಗಾಯ ಕಠಿಣ ವಾದದ್ದು; ನಿನ್ನ ಸುದ್ದಿಯನ್ನು ಕೇಳುವವರೆಲ್ಲರು ನಿನಗೆ ಚಪ್ಪಾಳೆ ಹೊಡೆಯುವರು; ನಿನ್ನ ಕೆಟ್ಟತನವು ನಿತ್ಯವಾಗಿ ಯಾರ ಮೇಲೆ ಹಾದುಹೋಗದೆ ಇತ್ತು?


Free counters!   Site Meter(April28th2012)