Home Churches About
 

Chapter 1

1. ದೇವಕುಮಾರನಾದ ಯೇಸು ಕ್ರಿಸ್ತನ ವಿಷಯವಾಗಿರುವ ಸುವಾರ್ತೆಯ ಪ್ರಾರಂಭವು.
2. ಪ್ರವಾದನೆಗಳಲ್ಲಿ ಬರೆಯಲ್ಪಟ್ಟ ಪ್ರಕಾರ--ಇಗೋ, ನಿನ್ನ ಮಾರ್ಗವನ್ನು ಸಿದ್ಧಮಾಡುವ ನನ್ನ ದೂತನನ್ನು ನಿನ್ನ ಮುಂದೆ ನಾನು ಕಳುಹಿಸುತ್ತೇನೆ.
3. ಕರ್ತನ ಮಾರ್ಗವನ್ನು ನೀವು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆಮಾಡಿರಿ ಎಂದು ಅಡವಿಯಲ್ಲಿ ಕೂಗುವ ಒಬ್ಬನ ಶಬ್ದವದೆ ಎಂಬದು.
4. ಯೋಹಾನನು ಅಡವಿಯಲ್ಲಿ ಬಾಪ್ತಿಸ್ಮ ಮಾಡಿಸುತ್ತಾ ಪಾಪಗಳ ಪರಿ ಹಾರಕ್ಕಾಗಿ ಮಾನಸಾಂತರದ ಬಾಪ್ತಿಸ್ಮವನ್ನು ಸಾರಿದನು.
5. ಆಗ ಯೂದಾಯ ದೇಶವೆಲ್ಲವೂ ಯೆರೂಸಲೇಮಿ ನವರೂ ಅವನ ಬಳಿಗೆ ಹೊರಟು ಹೋಗಿ ತಮ್ಮ ಪಾಪಗಳನ್ನು ಅರಿಕೆ ಮಾಡುತ್ತಾ ಯೊರ್ದನ್‌ ನದಿಯಲ್ಲಿ ಎಲ್ಲರೂ ಅವನಿಂದ ಬಾಪ್ತಿಸ್ಮ ಮಾಡಿಸಿ ಕೊಂಡರು.
6. ಯೋಹಾನನು ಒಂಟೇ ಕೂದಲಿನ ಉಡುಪನ್ನು ಧರಿಸಿಕೊಂಡು ತನ್ನ ನಡುವಿಗೆ ಚರ್ಮದ ನಡುಕಟ್ಟನ್ನು ಕಟ್ಟಿಕೊಂಡವನಾಗಿದ್ದು ಮಿಡಿತೆಗಳನ್ನೂ ಕಾಡುಜೇನನ್ನೂ ತಿನ್ನುತ್ತಿದ್ದನು.
7. ಮತ್ತು ಅವನು--ನನಗಿಂತ ಶಕ್ತನಾಗಿರುವಾತನು ನನ್ನ ಹಿಂದೆ ಬರುತ್ತಾನೆ; ನಾನು ಬೊಗ್ಗಿಕೊಂಡು ಆತನ ಕೆರಗಳ ಬಾರನ್ನು ಬಿಚ್ಚುವದಕ್ಕೂ ಯೋಗ್ಯನಲ್ಲ;
8. ನಾನು ನಿಮಗೆ ನೀರಿನಿಂದ ಬಾಪ್ತಿಸ್ಮ ಮಾಡಿಸಿದ್ದು ನಿಜವೇ. ಆತನಾ ದರೋ ನಿಮಗೆ ಪವಿತ್ರಾತ್ಮನಿಂದ ಬಾಪ್ತಿಸ್ಮ ಮಾಡಿಸು ವನು ಎಂದು ಸಾರಿ ಹೇಳುತ್ತಿದ್ದನು.
9. ಆ ದಿವಸಗಳಲ್ಲಿ ಆದದ್ದೇನಂದರೆ, ಯೇಸು ಗಲಿಲಾಯದ ನಜರೇತಿನಿಂದ ಬಂದು ಯೊರ್ದನಿನಲ್ಲಿ ಯೋಹಾನನಿಂದ ಬಾಪ್ತಿಸ್ಮಮಾಡಿಸಿಕೊಂಡನು.
10. ಆತನು ನೀರಿನೊಳಗಿಂದ ಮೇಲಕ್ಕೆ ಬಂದ ಕೂಡಲೆ ಆಕಾಶಗಳು ತೆರೆದಿರುವದನ್ನೂ ಆತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿದು ಬರುವದನ್ನೂ ಯೋಹಾನನು ಕಂಡನು.
11. ಆಗ--ನಾನು ಬಹಳವಾಗಿ ಮೆಚ್ಚಿಕೊಂಡಿರುವ ಪ್ರಿಯನಾದ ನನ್ನ ಮಗನು ನೀನೇ ಎಂಬ ಧ್ವನಿಯು ಪರಲೋಕ ದಿಂದ ಬಂದಿತು.
12. ತಕ್ಷಣವೇ ಆತ್ಮನು ಆತನನ್ನು ಅಡವಿಯೊಳಕ್ಕೆ ನಡಿಸಿದನು.
13. ಆತನು ನಾಲ್ವತ್ತು ದಿವಸ ಅಡವಿ ಯಲ್ಲಿ ಸೈತಾನನಿಂದ ಶೋಧಿಸಲ್ಪಡುತ್ತಾ ಕಾಡು ಮೃಗ ಗಳೊಂದಿಗೆ ಇದ್ದನು; ಮತ್ತು ದೂತರು ಆತನನ್ನು ಉಪಚರಿಸಿದರು.
14. ಯೋಹಾನನು ಸೆರೆಯಲ್ಲಿ ಹಾಕಲ್ಪಟ್ಟ ತರು ವಾಯ ಯೇಸು ಗಲಿಲಾಯಕ್ಕೆ ಬಂದು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ--
15. ಕಾಲವು ಪರಿಪೂರ್ಣವಾಯಿತು. ದೇವರ ರಾಜ್ಯವು ಸವಿಾಪ ವಾಗಿದೆ; ನೀವು ಮಾನಸಾಂತರಪಟ್ಟು ಸುವಾರ್ತೆ ಯನ್ನು ನಂಬಿರಿ ಅಂದನು.
16. ಆತನು ಗಲಿಲಾಯ ಸಮುದ್ರದ ಬಳಿಯಲ್ಲಿ ತಿರುಗಾಡುತ್ತಿರುವಾಗ ಸೀಮೋನನೂ ಅವನ ಸಹೋ ದರನಾದ ಅಂದ್ರೆಯನೂ ಸಮುದ್ರದಲ್ಲಿ ಬಲೆ ಬೀಸುತ್ತಿರುವದನ್ನು ಆತನು ಕಂಡನು; ಯಾಕಂದರೆ ಅವರು ಬೆಸ್ತರಾಗಿದ್ದರು.
17. ಯೇಸು ಅವರಿಗೆ--ನೀವು ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರಾಗುವಂತೆ ನಾನು ನಿಮ್ಮನ್ನು ಮಾಡುವೆನು ಅಂದನು.
18. ತಕ್ಷಣವೇ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದ್ದರು.
19. ಆತನು ಅಲ್ಲಿಂದ ಸ್ವಲ್ಪ ಮುಂದಕ್ಕೆ ಹೋದಾಗ ಜೆಬೆದಾಯನ ಮಗನಾದ ಯಾಕೋಬನೂ ಅವನ ಸಹೋದರನಾದ ಯೋಹಾನನೂ ದೋಣಿಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದದ್ದನ್ನು ಕಂಡನು.
20. ಕೂಡಲೆ ಆತನು ಅವರನ್ನು ಕರೆದನು; ಅವರು ತಮ್ಮ ತಂದೆಯಾದ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿ ಯಲ್ಲಿ ಬಿಟ್ಟು ಆತನ ಹಿಂದೆ ಹೋದರು.
21. ಆಗ ಅವರು ಕಪೆರ್ನೌಮಿಗೆ ಹೋದರು; ಕೂಡಲೆ ಆತನು ಸಬ್ಬತ್‌ ದಿನದಲ್ಲಿ ಸಭಾಮಂದಿರ ದೊಳಗೆ ಪ್ರವೇಶಿಸಿ ಬೋಧಿಸಿದನು.
22. ಅವರು ಆತನ ಬೋಧನೆಗೆ ಆಶ್ಚರ್ಯಪಟ್ಟರು; ಯಾಕಂದರೆ ಆತನು ಶಾಸ್ತ್ರಿಗಳಂತೆ ಅಲ್ಲ, ಅಧಿಕಾರವಿದ್ದವನಂತೆ ಅವರಿಗೆ ಬೋಧಿಸಿದನು.
23. ಆಗ ಅವರ ಸಭಾಮಂದಿ ರದಲ್ಲಿ ಅಶುದ್ಧಾತ್ಮವಿದ್ದ ಒಬ್ಬ ಮನುಷ್ಯನಿದ್ದನು.
24. ಅವನು--ನಮ್ಮನ್ನು ಬಿಟ್ಟುಬಿಡು; ನಜರೇತಿನ ಯೇಸುವೇ, ನಮ್ಮಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡುವದಕ್ಕಾಗಿ ನೀನು ಬಂದೆಯಾ? ನೀನು ಯಾರೆಂದು ನಾನು ಬಲ್ಲೆನು; ನೀನು ದೇವರ ಪರಿಶುದ್ಧನೇ ಎಂದು ಕೂಗಿ ಹೇಳಿದನು.
25. ಆಗ ಯೇಸು ಅವನನ್ನು ಗದರಿಸಿ--ಸುಮ್ಮನಿರು, ಅವನೊಳ ಗಿಂದ ಹೊರಗೆ ಬಾ ಅಂದನು.
26. ಆಗ ಅಶುದ್ಧಾತ್ಮವು ಅವನನ್ನು ಒದ್ದಾಡಿಸಿದ ಮೇಲೆ ಮಹಾಶಬ್ದದಿಂದ ಕೂಗಿ ಅವನೊಳಗಿಂದ ಹೊರಗೆ ಬಂದಿತು.
27. ಅದಕ್ಕೆ ಅವರೆಲ್ಲರೂ--ಇದು ಏನಾಗಿರಬಹುದು? ಈ ಹೊಸ ಬೋಧನೆ ಯಾವದು? ಯಾಕಂದರೆ ಆತನು ಅಶುದ್ಧಾತ್ಮಗಳಿಗೂ ಅಧಿಕಾರದಿಂದ ಅಪ್ಪಣೆಕೊಡು ತ್ತಾನೆ; ಅವು ಆತನಿಗೆ ವಿಧೇಯವಾಗುತ್ತವಲ್ಲಾ ಎಂದು ತಮ್ಮಲ್ಲಿ ತಾವೇ ಪ್ರಶ್ನಿಸಿಕೊಳ್ಳುವಷ್ಟು ವಿಸ್ಮಯಗೊಂಡರು.
28. ಕೂಡಲೆ ಆತನ ಕೀರ್ತಿಯು ಗಲಿಲಾಯದ ಸುತ್ತಮುತ್ತಲಿನ ಎಲ್ಲಾ ಪ್ರದೇಶದಲ್ಲಿ ಹಬ್ಬಿತು.
29. ಅವನು ಸಭಾಮಂದಿರದಿಂದ ಹೊರಗೆ ಬಂದ ಕೂಡಲೆ ಯಾಕೋಬ ಯೋಹಾನರ ಸಂಗಡ ಸೀಮೋನ ಅಂದ್ರೆಯರ ಮನೆಯೊಳಕ್ಕೆ ಅವರು ಪ್ರವೇಶಿಸಿದರು.
30. ಆದರೆ ಸೀಮೋನನ ಹೆಂಡತಿಯ ತಾಯಿಯು ಜ್ವರದಿಂದ ಮಲಗಿಕೊಂಡಿದ್ದಳು; ಕೂಡಲೆ ಅವರು ಆಕೆಯ ವಿಷಯವಾಗಿ ಆತನಿಗೆ ತಿಳಿಸಿದರು.
31. ಆತನು ಬಂದು ಆಕೆಯ ಕೈಯನ್ನು ಹಿಡಿದು ಅವಳನ್ನು ಮೇಲಕ್ಕೆ ಎತ್ತಿದನು; ಕೂಡಲೆ ಜ್ವರವು ಆಕೆಯನ್ನು ಬಿಟ್ಟು ಹೋಯಿತು; ಆಕೆಯು ಅವರಿಗೆ ಉಪಚಾರ ಮಾಡಿದಳು.
32. ಸಂಜೆಯಲ್ಲಿ ಸೂರ್ಯನು ಮುಣುಗಿದ್ದಾಗ ಅವರು ಅಸ್ವಸ್ಥತೆಯುಳ್ಳವರೆಲ್ಲರನ್ನೂ ದೆವ್ವ ಹಿಡಿದವರನ್ನೂ ಆತನ ಬಳಿಗೆ ತಂದರು.
33. ಆಗ ಪಟ್ಟಣವೆಲ್ಲಾ ಬಾಗಲ ಬಳಿಯಲ್ಲಿ ಒಟ್ಟಾಗಿ ಕೂಡಿಬಂದಿತು.
34. ಇದಲ್ಲದೆ ವಿಧವಿಧವಾದ ರೋಗ ಗಳಿಂದ ಅಸ್ವಸ್ಥರಾಗಿದ್ದ ಅನೇಕರನ್ನು ಆತನು ಸ್ವಸ್ಥಮಾಡಿ ಬಹಳ ದೆವ್ವಗಳನ್ನು ಬಿಡಿಸಿದನು; ಮತ್ತು ದೆವ್ವಗಳು ಆತನನ್ನು ಅರಿತಿದ್ದದರಿಂದ ಆತನು ಅವುಗಳಿಗೆ ಮಾತನಾಡಗೊಡಿಸಲಿಲ್ಲ.
35. ಮುಂಜಾನೆ ಹೊತ್ತು ಮೂಡುವದಕ್ಕಿಂತ ಬಹಳ ಮುಂಚಿತವಾಗಿ ಆತನು ಎದ್ದು ಹೊರಗೆ ನಿರ್ಜನ ವಾದ ಸ್ಥಳಕ್ಕೆ ಹೊರಟುಹೋಗಿ ಅಲ್ಲಿ ಪ್ರಾರ್ಥನೆ ಮಾಡಿದನು.
36. ಸೀಮೋನನೂ ಅವನ ಸಂಗಡ ಇದ್ದವರೂ ಆತನ ಹಿಂದೆ ಹೋದರು.
37. ಅವರು ಆತನನ್ನು ಕಂಡುಕೊಂಡಾಗ ಆತನಿಗೆ--ಎಲ್ಲರೂ ನಿನ್ನನ್ನು ಹುಡುಕುತ್ತಾರೆ ಅಂದದ್ದಕ್ಕೆ
38. ಆತನು ಅವರಿಗೆ--ನಾವು ಮುಂದಿನ ಊರುಗಳಿಗೆ ಹೋಗೋಣ; ಯಾಕಂದರೆ ನಾನು ಅಲ್ಲಿಯೂ ಸಾರಬೇಕಾಗಿದೆ; ಇದಕ್ಕಾಗಿಯೇ ನಾನು ಹೊರಟು ಬಂದಿದ್ದೇನೆ ಎಂದು ಹೇಳಿದನು.
39. ಮತ್ತು ಆತನು ಗಲಿಲಾಯದಲ್ಲೆಲ್ಲಾ ಅವರ ಸಭಾಮಂದಿರಗಳಲ್ಲಿ ಸಾರಿ ದೆವ್ವಗಳನ್ನು ಬಿಡಿಸಿದನು.
40. ಆಗ ಒಬ್ಬ ಕುಷ್ಠರೋಗಿಯು ಆತನ ಬಳಿಗೆ ಬಂದು ಆತನ ಮುಂದೆ ಮೊಣಕಾಲೂರಿ ಆತನಿಗೆ -- ನಿನಗೆ ಮನಸ್ಸಿದ್ದರೆ ನೀನು ನನ್ನನ್ನು ಶುದ್ಧ ಮಾಡಬಲ್ಲೆ ಎಂದು ಬೇಡಿಕೊಂಡನು.
41. ಆಗ ಯೇಸು ಕನಿಕರಪಟ್ಟು ತನ್ನ ಕೈನೀಡಿ ಅವನನ್ನು ಮುಟ್ಟಿ ಅವನಿಗೆ--ನನಗೆ ಮನಸ್ಸುಂಟು; ನೀನು ಶುದ್ಧನಾಗು ಎಂದು ಹೇಳಿದನು.
42. ಹೀಗೆ ಆತನು ಹೇಳಿದ ಕೂಡಲೆ ಆ ಕುಷ್ಠವು ತಕ್ಷಣವೇ ಅವನಿಂದ ಹೊರಟುಹೋಗಿ ಅವನು ಶುದ್ಧನಾದನು.
43. ಆತನು ಅವನಿಗೆ ನೇರವಾಗಿ ಆಜ್ಞಾಪಿಸಿ ಕೂಡಲೆ ಕಳುಹಿಸಿದನು;
44. ಅವನಿಗೆ ಹೇಳಿದ್ದೇನಂದರೆ--ಯಾವ ಮನುಷ್ಯನಿಗೂ ಏನೂ ಹೇಳಬೇಡ ನೋಡು; ಆದರೆ ನೀನು ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ಅವರಿಗೆ ಸಾಕ್ಷಿಯಾಗಿರುವಂತೆ ನಿನ್ನ ಶುದ್ಧಿಗಾಗಿ ಮೋಶೆಯು ಆಜ್ಞಾಪಿಸಿದವುಗಳನ್ನು ಅರ್ಪಿಸು ಅಂದನು.
45. ಆದರೆ ಅವನು ಹೊರಟು ಹೋಗಿ ಅದನ್ನು ಬಹಳವಾಗಿ ಪ್ರಕಟಿಸಿ ಎಲ್ಲಾ ಕಡೆಗೂ ಆ ವಿಷಯವನ್ನು ಹಬ್ಬಿಸುವದಕ್ಕೆ ಪ್ರಾರಂಭಿಸಿದ್ದರಿಂದ ಯೇಸು ಇನ್ನು ಬಹಿರಂಗವಾಗಿ ಪಟ್ಟಣದೊಳಕ್ಕೆ ಪ್ರವೇಶಿಸಲಾರದೆ ಆತನು ಹೊರಗೆ ಅಡವಿಯ ಸ್ಥಳಗಳಲ್ಲಿ ಇದ್ದನು; ಆಗ ಪ್ರತಿಯೊಂದು ಕಡೆಯಿ ಂದಲೂ ಜನರು ಆತನ ಬಳಿಗೆ ಬ

Chapter 2

1. ಕೆಲವು ದಿವಸಗಳಾದ ಮೇಲೆ ಆತನು ತಿರಿಗಿ ಕಪೆರ್ನೌಮಿಗೆ ಬಂದನು; ಆಗ ಆತನು ಮನೆಯಲ್ಲಿದ್ದ ಸುದ್ದಿಯು ಹರಡಿತು.
2. ಕೂಡಲೆ ಅನೇಕರು ಕೂಡಿಬಂದದ್ದರಿಂದ ಅವರನ್ನು ಸೇರಿಸಿಕೊಳ್ಳುವದಕ್ಕೆ ಬಾಗಲಿನ ಬಳಿಯಲ್ಲಾದರೂ ಸ್ಥಳವಿರಲಿಲ್ಲ; ಆತನು ಅವರಿಗೆ ವಾಕ್ಯವನ್ನು ಸಾರು ತ್ತಿದ್ದನು;
3. ಆಗ ಒಬ್ಬ ಪಾರ್ಶ್ವವಾಯು ರೋಗಿಯನ್ನು ನಾಲ್ವರು ಹೊತ್ತುಕೊಂಡು ಆತನ ಬಳಿಗೆ ಬಂದರು.
4. ಜನಸಂದಣಿಯ ನಿಮಿತ್ತ ಅವರು ಆತನ ಹತ್ತಿರಕ್ಕೆ ಬರಲಾರದೆ ಆತನಿದ್ದ ಮನೆಯ ಮೇಲ್ಚಾವಣಿಯನ್ನು ಬಿಚ್ಚಿ ಅದನ್ನು ಮುರಿದು ಪಾರ್ಶ್ವವಾಯು ರೋಗಿಯು ಮಲಗಿದ್ದ ಹಾಸಿಗೆಯನ್ನು ಕೆಳಗೆ ಇಳಿಸಿದರು.
5. ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ--ಮಗನೇ, ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಎಂದು ಹೇಳಿದನು.
6. ಆದರೆ ಅಲ್ಲಿ ಕೂತುಕೊಂಡಿದ್ದ ಶಾಸ್ತ್ರಿಗಳಲ್ಲಿ ಕೆಲವರು--
7. ಈ ಮನುಷ್ಯನು ಯಾಕೆ ಹೀಗೆ ದೇವದೂಷಣೆಗಳನ್ನು ಮಾಡುತ್ತಾನೆ? ದೇವರೊಬ್ಬನೇ ಹೊರತು ಮತ್ತಾರು ಪಾಪಗಳನ್ನು ಕ್ಷಮಿಸಬಲ್ಲರು ಎಂದು ತಮ್ಮ ಹೃದಯ ಗಳಲ್ಲಿ ಅಂದುಕೊಂಡರು.
8. ಹೀಗೆ ಅವರು ತಮ್ಮೊಳಗೆ ಅಂದುಕೊಂಡದ್ದನ್ನು ಯೇಸು ಕೂಡಲೆ ತನ್ನ ಆತ್ಮದಲ್ಲಿ ತಿಳಿದುಕೊಂಡು ಅವರಿಗೆ--ನೀವು ನಿಮ್ಮ ಹೃದಯ ಗಳಲ್ಲಿ ಯಾಕೆ ಇವುಗಳನ್ನು ಆಲೋಚಿಸುತ್ತೀರಿ ಎಂದು ಹೇಳಿ
9. ಪಾರ್ಶ್ವವಾಯು ರೋಗಿಗೆ--ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಅನ್ನುವದೋ? ಇಲ್ಲವೆ--ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಅನ್ನುವದೋ? ಯಾವದು ಸುಲಭ?
10. ಆದರೆ ಪಾಪಗಳನ್ನು ಕ್ಷಮಿಸಿಬಿಡುವದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬದು ನಿಮಗೆ ತಿಳಿಯಬೇಕು ಎಂದು ಹೇಳಿ (ಪಾರ್ಶ್ವವಾಯು ರೋಗಿಗೆ)--
11. ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ ಅಂದನು.
12. ಕೂಡಲೆ ಅವನು ಎದ್ದು ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟುಹೋದನು. ಅದಕ್ಕೆ ಎಲ್ಲರೂ ಬೆರಗಾಗಿ--ನಾವು ಇಂಥದನ್ನು ಎಂದಿಗೂ ನೋಡಲಿಲ್ಲ ಎಂದು ಹೇಳುತ್ತಾ ದೇವರನ್ನು ಮಹಿಮೆಪಡಿಸಿದರು.
13. ಆತನು ತಿರಿಗಿ ಸಮುದ್ರದ ಕಡೆಗೆ ಹೊರಟು ಹೋದನು; ಆಗ ಜನಸಮೂಹವೆಲ್ಲಾ ಆತನ ಬಳಿಗೆ ಬಂದಾಗ ಆತನು ಅವರಿಗೆ ಬೋಧಿಸಿದನು.
14. ಆತನು ಹಾದುಹೋಗುತ್ತಿದ್ದಾಗ ಸುಂಕದ ಕಟ್ಟೆಯಲ್ಲಿ ಕೂತಿದ್ದ ಅಲ್ಫಾಯನ ಮಗನಾದ ಲೇವಿಯನ್ನು ಕಂಡು ಅವನಿಗೆ--ನನ್ನನ್ನು ಹಿಂಬಾಲಿಸು ಅಂದನು. ಆಗ ಅವನು ಎದ್ದು ಆತನನ್ನು ಹಿಂಬಾಲಿಸಿದನು.
15. ಇದಾದ ಮೇಲೆ ಯೇಸು ಅವನ ಮನೆಯಲ್ಲಿ ಊಟಕ್ಕೆ ಕೂತಿದ್ದಾಗ ಅನೇಕ ಸುಂಕದವರೂ ಪಾಪಿಗಳೂ ಯೇಸುವಿನ ಮತ್ತು ಆತನ ಶಿಷ್ಯರ ಸಂಗಡ ಕೂತುಕೊಂಡರು; ಯಾಕಂದರೆ ಅಲ್ಲಿದ್ದ ಅನೇಕರು ಆತನನ್ನು ಹಿಂಬಾಲಿಸುತ್ತಿದ್ದರು.
16. ಆತನು ಸುಂಕದವರ ಮತ್ತು ಪಾಪಿಗಳ ಜೊತೆಯಲ್ಲಿ ಊಟ ಮಾಡುತ್ತಿರು ವದನ್ನು ಶಾಸ್ತ್ರಿಗಳು ಮತ್ತು ಫರಿಸಾಯರು ನೋಡಿ ಆತನ ಶಿಷ್ಯರಿಗೆ--ಈತನು ಸುಂಕದವರ ಮತ್ತು ಪಾಪಿಗಳ ಸಂಗಡ ತಿನ್ನುವದು ಮತ್ತು ಕುಡಿಯುವದು ಹೇಗೆ ಅಂದರು.
17. ಯೇಸು ಅದನ್ನು ಕೇಳಿ--ಕ್ಷೇಮದಿಂದಿರುವವರಿಗೆ ಅಲ್ಲ, ಕ್ಷೇಮವಿಲ್ಲದವರಿಗೆ ವೈದ್ಯನುಬೇಕು; ನಾನು ನೀತಿವಂತರನ್ನಲ್ಲ, ಆದರೆ ಪಾಪಿಗಳನ್ನು ಮಾನಸಾಂತರಕ್ಕಾಗಿ ಕರೆಯುವದಕ್ಕೆ ಬಂದೆನು ಎಂದು ಅವರಿಗೆ ಹೇಳಿದನು.
18. ಪದ್ಧತಿಯ ಪ್ರಕಾರ ಉಪವಾಸ ಮಾಡುತ್ತಿದ್ದ ಯೋಹಾನನ ಮತ್ತು ಫರಿಸಾಯರ ಶಿಷ್ಯರು ಆತನ ಬಳಿಗೆ ಬಂದು ಆತನಿಗೆ--ಯೋಹಾನನ ಮತ್ತು ಫರಿಸಾಯರ ಶಿಷ್ಯರು ಉಪವಾಸಮಾಡುತ್ತಾರೆ; ಆದರೆ ನಿನ್ನ ಶಿಷ್ಯರು ಯಾಕೆ ಉಪವಾಸ ಮಾಡುವದಿಲ್ಲ ಎಂದು ಕೇಳಿದರು.
19. ಅದಕ್ಕೆ ಯೇಸು ಅವರಿಗೆ--ಮದಲಿಂಗನು ಅವರ ಸಂಗಡ ಇರುವಾಗ ಮದಲಗಿ ತ್ತಿಯ ಮನೇಮಕ್ಕಳು ಉಪವಾಸ ಮಾಡುವರೋ? ಮದಲಿಂಗನು ಅವರ ಸಂಗಡ ಇರುವ ತನಕ ಅವರು ಉಪವಾಸ ಮಾಡುವದಿಲ್ಲ.
20. ಆದರೆ ಮದಲಿಂಗನು ಅವರ ಬಳಿಯಿಂದ ತೆಗೆಯಲ್ಪಡುವ ದಿವಸಗಳು ಬರುತ್ತವೆ; ಆಗ ಅವರು ಆ ದಿವಸಗಳಲ್ಲಿ ಉಪವಾಸ ಮಾಡುವರು.
21. ಇದಲ್ಲದೆ ಹೊಸಬಟ್ಟೆಯ ತುಂಡನ್ನು ಹಳೆಯ ಉಡುಪಿಗೆ ಯಾರೂ ಹಚ್ಚುವದಿಲ್ಲ;ಹಚ್ಚಿದರೆ ಹೊಸ ತುಂಡು ಹಳೆಯ ಉಡುಪನ್ನು ಹಿಂಜುವದರಿಂದ ಹರಕು ಹೆಚ್ಚಾಗುವದು.
22. ಹಳೆಯ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಯಾರೂ ಹಾಕುವದಿಲ್ಲ; ಹಾಕಿದರೆ ಹೊಸ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ಹಾಕುವದರಿಂದ ದ್ರಾಕ್ಷಾರಸವು ಚೆಲ್ಲಿಹೋಗುವದು ಮತ್ತು ಬುದ್ದಲಿಗಳು ಕೆಟ್ಟುಹೋಗು ವವು. ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿಯೇ ಹಾಕಿಡತಕ್ಕದ
23. ಇದಾದ ಮೇಲೆ ಆತನು ಸಬ್ಬತ್‌ ದಿನದಲ್ಲಿ ಪೈರಿನ ಹೊಲಗಳನ್ನು ಹಾದುಹೋಗುತ್ತಿದ್ದಾಗ ಆತನ ಶಿಷ್ಯರು ಕಾಳಿನ ತೆನೆಗಳನ್ನು ಕೀಳಲಾರಂಭಿಸಿದರು.
24. ಅದಕ್ಕೆ ಫರಿಸಾಯರು ಆತನಿಗೆ--ಇಗೋ, ಅವರು ಸಬ್ಬತ್‌ ದಿನದಲ್ಲಿ ಮಾಡಬಾರದ್ದನ್ನು ಯಾಕೆ ಮಾಡು ತ್ತಾರೆ ಎಂದು ಕೇಳಿದರು.
25. ಆತನು ಅವರಿಗೆ--ದಾವೀದನು ಕೊರತೆಯುಳ್ಳವನಾಗಿ ಹಸಿದಾಗ ಅವನೂ ಅವನ ಸಂಗಡ ಇದ್ದವರೂ ಏನು ಮಾಡಿ ದರು?
26. ಮಹಾಯಾಜಕನಾದ ಅಬಿಯಾತರನ ದಿವಸಗಳಲ್ಲಿ ಅವನು ದೇವರ ಮನೆಯೊಳಕ್ಕೆ ಹೋಗಿ ಯಾಜಕರ ಹೊರತು ಬೇರೆಯವರು ತಿನ್ನುವದು ನ್ಯಾಯವಲ್ಲದ ಸಮ್ಮುಖದ ರೊಟ್ಟಿಯನ್ನು ಹೇಗೆ ತಿಂದು ತನ್ನ ಜೊತೆಯಲ್ಲಿ ಇದ್ದವರಿಗೂ ಕೊಟ್ಟನೆಂಬದನ್ನು ನೀವು ಎಂದಾದರೂ ಓದಲಿಲ್ಲವೋ ಎಂದು ಹೇಳಿ ದನು.
27. ಆತನು ಅವರಿಗೆ--ಸಬ್ಬತ್ತು ಮನುಷ್ಯರಿ ಗೋಸ್ಕರ ಮಾಡಲ್ಪಟ್ಟಿತು; ಆದರೆ ಮನುಷ್ಯನು ಸಬ್ಬತ್ತಿಗೋಸ್ಕರ ಅಲ್ಲ;
28. ಆದದರಿಂದ ಮನುಷ್ಯಕುಮಾ ರನು ಸಬ್ಬತ್ತಿಗೆ ಸಹ ಒಡೆಯನಾಗಿದ್ದಾನೆ ಅಂದನು.

Chapter 3

1. ಆತನು ತಿರಿಗಿ ಸಭಾಮಂದಿರದಲ್ಲಿ ಪ್ರವೇಶಿಸಿದಾಗ ಅಲ್ಲಿ ಕೈ ಬತ್ತಿದವನಾದ ಒಬ್ಬ ಮನುಷ್ಯನಿದ್ದನು.
2. ಅವರು ಆತನ ಮೇಲೆ ತಪ್ಪು ಹೊರಿಸಬೇಕೆಂದು ಸಬ್ಬತ್‌ ದಿನದಲ್ಲಿ ಆತನು ಅವನನ್ನು ಸ್ವಸ್ಥ ಮಾಡುವನೇನೋ ಎಂದು ಕಾಯು ತ್ತಿದ್ದರು.
3. ಆತನು ಕೈಬತ್ತಿದ ಮನುಷ್ಯನಿಗೆ--ಎದ್ದು ನಿಂತುಕೋ ಎಂದು ಹೇಳಿದನು.
4. ಆತನು ಅವರಿಗೆ --ಸಬ್ಬತ್‌ ದಿವಸಗಳಲ್ಲಿ ಒಳ್ಳೇದನ್ನು ಮಾಡುವದು ನ್ಯಾಯವೋ ಇಲ್ಲವೆ ಕೆಟ್ಟದ್ದನ್ನು ಮಾಡುವದು ನ್ಯಾಯವೋ? ಪ್ರಾಣವನ್ನು ಉಳಿಸುವದೋ ಇಲ್ಲವೆ ಕೊಲ್ಲುವದೋ ಎಂದು ಕೇಳಿದನು; ಆದರೆ ಅವರು ಸುಮ್ಮನಿದ್ದರು.
5. ಆಗ ಆತನು ಅವರ ಹೃದಯಗಳ ಕಾಠಿಣ್ಯತೆಗಾಗಿ ದುಃಖಪಟ್ಟು ಸುತ್ತಲೂ ಕೋಪದಿಂದ ಅವರನ್ನು ನೋಡಿ ಆ ಮನುಷ್ಯನಿಗೆ--ನಿನ್ನ ಕೈಚಾಚು ಎಂದು ಹೇಳಿದನು. ಅವನು ಚಾಚಿದಾಗ ಅವನ ಕೈಗುಣವಾಗಿ ಮತ್ತೊಂದರ ಹಾಗಾಯಿತು.
6. ಫರಿಸಾ ಯರು ಹೊರಟುಹೋಗಿ ಕೂಡಲೆ ತಾವು ಆತನನ್ನು ಹೇಗೆ ಕೊಲ್ಲಬೇಕೆಂದು ಆತನಿಗೆ ವಿರೋಧ ವಾಗಿ ಹೆರೋದ್ಯರೊಂದಿಗೆ ಆಲೋಚನೆ ಮಾಡಿಕೊಂಡರು.
7. ಆದರೆ ಯೇಸು ತನ್ನ ಶಿಷ್ಯರೊಂದಿಗೆ ಸಮುದ್ರದ ಕಡೆಗೆ ಹಿಂದಿರುಗಿದನು; ಆಗ ಗಲಿಲಾಯದಿಂದಲೂ ಯೂದಾಯದಿಂದಲೂ
8. ಯೆರೂಸಲೇಮಿನಿಂದಲೂ ಇದೂಮಾಯದಿಂದಲೂ ಯೊರ್ದನಿನ ಆಚೆಯಿಂ ದಲೂ ಜನರು ದೊಡ್ಡ ಸಮೂಹವಾಗಿ ಆತನನ್ನು ಹಿಂಬಾಲಿಸಿದರು. ಆತನು ಮಾಡಿದ ಮಹತ್ಕಾರ್ಯ ಗಳನ್ನು ಕೇಳಿ ತೂರ್‌ ಸೀದೋನ್‌ ಸುತ್ತಲಿನ ಜನರು ದೊಡ್ಡ ಸಮೂಹವಾಗಿ ಆತನ ಬಳಿಗೆ ಬಂದರು.
9. ಸಮೂಹವು ತನ್ನನ್ನು ನೂಕದಂತೆ ತನಗೋಸ್ಕರ ಒಂದು ಚಿಕ್ಕ ದೋಣಿಯು ಸಿದ್ಧವಿರ ಬೇಕೆಂದು ಆತನು ತನ್ನ ಶಿಷ್ಯರಿಗೆ ಹೇಳಿದನು.
10. ಯಾಕಂದರೆ ಆತನು ಅನೇಕರನ್ನು ಸ್ವಸ್ಥಮಾಡಿದ್ದರಿಂದ ರೋಗಪೀಡಿತರಾಗಿದ್ದವರೆಲ್ಲರು ಆತನನ್ನು ಮುಟ್ಟಬೇ ಕೆಂದು ಆತನ ಮೇಲೆ ಬೀಳುತ್ತಿದ್ದರು.
11. ಅಶುದ್ಧಾತ್ಮಗಳು ಆತನನ್ನು ಕಂಡಾಗ ಆತನ ಮುಂದೆ ಬಿದ್ದು--ನೀನು ದೇವಕುಮಾರನು ಎಂದು ಕೂಗಿ ಹೇಳಿದವು.
12. ಆದರೆ ಆತನು ತನ್ನನ್ನು ಯಾರಿಗೂ ತಿಳಿಯಪಡಿಸಬಾರದೆಂದು ಅವರಿಗೆ ನೇರವಾಗಿ ಆಜ್ಞಾಪಿಸಿದನು.
13. ತರುವಾಯ ಆತನು ಬೆಟ್ಟದ ಮೇಲೆ ಹೋಗಿ ತನಗೆ ಬೇಕಾದವರನ್ನು ಕರೆಯಲು ಅವರು ಆತನ ಬಳಿಗೆ ಬಂದರು.
14. ಆತನು ಹನ್ನೆರಡು ಮಂದಿಯನ್ನು ತನ್ನೊಂದಿಗೆ ಇರುವದಕ್ಕೂ (ಸುವಾರ್ತೆ) ಸಾರುವದ ಕ್ಕಾಗಿ ತಾನು ಅವರನ್ನು ಕಳುಹಿಸುವದಕ್ಕೂ
15. ವ್ಯಾಧಿ ಗಳನ್ನು ಸ್ವಸ್ಥಮಾಡುವದಕ್ಕೂ ದೆವ್ವಗಳನ್ನು ಬಿಡಿಸು ವದಕ್ಕೂ ನೇಮಿಸಿ ಅವರಿಗೆ ಅಧಿಕಾರ ಕೊಟ್ಟನು.
16. ಆತನು ಸೀಮೋನನಿಗೆ ಪೇತ್ರನೆಂದು ಹೆಸರಿಟ್ಟನು.
17. ಮತ್ತು ಜೆಬೆದಾಯನ ಮಗನಾದ ಯಾಕೋಬ ನಿಗೂ ಯಾಕೋಬನ ಸಹೋದರನಾದ ಯೋಹಾನ ನಿಗೂ ಬೊವನೆರ್ಗೆಸ್‌ ಎಂದು ಹೆಸರಿಟ್ಟನು ಅಂದರೆ ಗುಡುಗಿನ ಪುತ್ರರು ಎಂದರ್ಥ.
18. ಮತ್ತು ಅಂದ್ರೆಯ, ಫಿಲಿಪ್ಪ, ಬಾರ್ತೂಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ತದ್ದಾಯ, ಕಾನಾನ್ಯನಾದ ಸೀಮೋನ,
19. ಆತನನ್ನು ಹಿಡು ಕೊಡಲಿಕ್ಕಿದ್ದ ಯೂದ ಇಸ್ಕರಿ ಯೋತ್‌ ಎಂಬವರೇ. ಮತ್ತು ಅವರು ಒಂದು ಮನೆಯೊಳಕ್ಕೆ ಹೋದರು.
20. ಜನಸಮೂಹವು ಅಲ್ಲಿ ತಿರಿಗಿ ಕೂಡಿಬಂದದ್ದ ರಿಂದ ಅವರು ರೊಟ್ಟಿ ತಿನ್ನುವದಕ್ಕೂ ಆಗದೆ ಹೋಯಿತು.
21. ಆತನ ಸ್ನೇಹಿತರು ಇದನ್ನು ಕೇಳಿ ದಾಗ ಆತನನ್ನು ಹಿಡಿಯುವದಕ್ಕಾಗಿ ಹೊರಟರು. ಯಾಕಂದರೆ ಅವರು--ಈತನಿಗೆ ಹುಚ್ಚು ಹಿಡಿದದೆ ಎಂದು ಅಂದರು.
22. ಇದಲ್ಲದೆ ಯೆರೂಸಲೇಮಿ ನಿಂದ ಬಂದ ಶಾಸ್ತ್ರಿಗಳು--ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ ಮತ್ತು ಇವನು ದೆವ್ವಗಳ ಅಧಿಪತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ ಅಂದರು.
23. ಆತನು ಅವರನ್ನು ತನ್ನ ಹತ್ತಿರಕ್ಕೆ ಕರೆದು ಸಾಮ್ಯಗಳಲ್ಲಿ ಅವರಿಗೆ--ಸೈತಾನನು ಸೈತಾನನನ್ನು ಹೊರಗೆ ಹಾಕು ವದು ಹೇಗೆ?
24. ಒಂದು ರಾಜ್ಯವು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ರಾಜ್ಯವು ನಿಲ್ಲಲಾರದು.
25. ಇದ ಲ್ಲದೆ ಒಂದು ಮನೆಯು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಆ ಮನೆಯು ನಿಲ್ಲಲಾರದು.
26. ಸೈತಾನನು ತನಗೆ ತಾನೇ ವಿರೋಧವಾಗಿ ಎದ್ದು ವಿಭಾಗಿಸಲ್ಪಟ್ಟರೆ ಅವನು ನಿಲ್ಲಲಾರದೆ ಅಂತ್ಯಗೊಳ್ಳುವನು.
27. ಇದಲ್ಲದೆ ಒಬ್ಬ ಮನುಷ್ಯನು ಮೊದಲು ಬಲಿಷ್ಠನನ್ನು ಕಟ್ಟದ ಹೊರತು ಅವನ ಮನೆಯೊಳಕ್ಕೆ ಪ್ರವೇಶಿಸಿ ಅವನ ಸೊತ್ತನ್ನು ಸುಲುಕೊಳ್ಳಲಾರನು; ಕಟ್ಟಿದ ಮೇಲೆ ಅವನ ಮನೆಯನ್ನು ಸುಲುಕೊಳ್ಳುವನು ಅಂದನು.
28. ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ಎಲ್ಲಾ ಪಾಪಗಳೂ ದೇವದೂಷಣೆಗಳೂ ಮನುಷ್ಯ ಪುತ್ರರಿಗೆ ಕ್ಷಮಿಸಲ್ಪ ಡುವವು;
29. ಆದರೆ ಯಾವನು ಪವಿತ್ರಾತ್ಮನಿಗೆ ವಿರೋಧವಾಗಿ ದೂಷಣೆ ಮಾಡುವನೋ ಅವನಿಗೆ ಎಂದಿಗೂ ಕ್ಷಮಾಪಣೆ ಇಲ್ಲ; ಆದರೆ ಅವನು ನಿತ್ಯವಾದ ದಂಡನೆಯ ಅಪಾಯಕ್ಕೆ ಒಳಗಾಗುವನು ಅಂದನು.
30. ಯಾಕಂದರೆ ಅವರು--ಇವನಿಗೆ ಅಶುದ್ಧಾತ್ಮವಿದೆ ಎಂದು ಹೇಳಿದರು.
31. ತರುವಾಯ ಆತನ ಸಹೋದರರೂ ತಾಯಿಯೂ ಅಲ್ಲಿಗೆ ಬಂದು ಹೊರಗೆ ನಿಂತುಕೊಂಡು ಆತನನ್ನು ಕರೇಕಳುಹಿಸಿದರು.
32. ಜನಸಮೂಹವು ಆತನ ಸುತ್ತಲೂ ಕೂತುಕೊಂಡು ಆತನಿಗೆ--ಇಗೋ, ಹೊರಗೆ ನಿನ್ನ ತಾಯಿಯೂ ನಿನ್ನ ಸಹೋದರರೂ ನಿನ್ನನ್ನು ಹುಡುಕುತ್ತಿದ್ದಾರೆ ಎಂದು ಹೇಳಿದರು.
33. ಆತನು ಪ್ರತ್ಯುತ್ತರವಾಗಿ ಅವರಿಗೆ--ನನ್ನ ತಾಯಿ ಇಲ್ಲವೆ ನನ್ನ ಸಹೋದರರು ಯಾರು ಎಂದು ಹೇಳಿ
34. ತನ್ನ ಸುತ್ತಲೂ ಕೂತಿದ್ದವರನ್ನು ನೋಡಿ--ಇಗೋ, ನನ್ನ ತಾಯಿ ಮತ್ತು ನನ್ನ ಸಹೋದರರು!
35. ಯಾಕಂದರೆ ಯಾವನು ದೇವರ ಚಿತ್ತದಂತೆ ಮಾಡುವನೋ ಅವನೇ ನನ್ನ ಸಹೋದರನೂ ನನ್ನ ಸಹೋದರಿಯೂ ನನ್ನ ತಾಯಿಯೂ ಆಗಿದ್ದಾರೆ ಅಂದನು.

Chapter 4

1. ಆತನು ತಿರಿಗಿ ಸಮುದ್ರದ ಬಳಿಯಲ್ಲಿ ಬೋಧಿಸಲಾರಂಭಿಸಿದನು; ಮತ್ತು ಜನರ ದೊಡ್ಡ ಸಮೂಹವು ಆತನ ಬಳಿಗೆ ಕೂಡಿಬಂದದ್ದ ರಿಂದ ಆತನು ಸಮುದ್ರದಲ್ಲಿದ್ದ ಒಂದು ದೋಣಿ ಯನ್ನು ಹತ್ತಿ ಕೂತುಕೊಂಡನು; ಆಗ ಜನ ಸಮೂಹವೆಲ್ಲಾ ಸಮುದ್ರದ ಬಳಿಯಲ್ಲಿ ನೆಲದ ಮೇಲೆ ಇದ್ದರು.
2. ಆತನು ಸಾಮ್ಯಗಳಲ್ಲಿ ಅವರಿಗೆ ಅನೇಕ ವಿಷಯಗಳನ್ನು ಕಲಿಸಿ ತನ್ನ ಬೋಧನೆ ಯಲ್ಲಿ ಅವರಿಗೆ ಹೇಳಿದ್ದೇನಂದರೆ--
3. ಕೇಳಿರಿ, ಇಗೋ, ಬಿತ್ತುವವನು ಬಿತ್ತುವದಕ್ಕೆ ಹೊರಟುಹೋದನು.
4. ಅವನು ಬಿತ್ತಿದಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು. ಆಗ ಆಕಾಶದ ಪಕ್ಷಿಗಳು ಬಂದು ಅವುಗಳನ್ನು ನುಂಗಿಬಿಟ್ಟವು.
5. ಇನ್ನು ಕೆಲವು ಹೆಚ್ಚು ಮಣ್ಣಿಲ್ಲದ ಬಂಡೆಯ ನೆಲದ ಮೇಲೆ ಬಿದ್ದವು; ಅದಕ್ಕೆ ಆಳವಾದ ಮಣ್ಣು ಇಲ್ಲದ್ದರಿಂದ ಅವು ಕೂಡಲೆ ಮೊಳೆತವು;
6. ಆದರೆ ಸೂರ್ಯನು ಮೇಲಕ್ಕೆ ಬಂದಾಗ ಅವು ಬಾಡಿಹೋಗಿ ಬೇರಿಲ್ಲದ ಕಾರಣ ಒಣಗಿಹೋದವು;
7. ಮತ್ತೆ ಕೆಲವು ಮುಳ್ಳು ಗಳಲ್ಲಿ ಬಿದ್ದವು; ಆ ಮುಳ್ಳುಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟದ್ದರಿಂದ ಅವು ಫಲಕೊಡಲಿಲ್ಲ.
8. ಕೆಲವು ಒಳ್ಳೇ ನೆಲದ ಮೇಲೆ ಬಿದ್ದು ಮೊಳೆತು ಬೆಳೆಯುತಾ ಕೆಲವು ಮೂವತ್ತರಷ್ಟು, ಅರವತ್ತರಷ್ಟು, ಕೆಲವು ನೂರರಷ್ಟು ಫಲವನ್ನು ಕೊಟ್ಟವು.
9. ಆತನು ಅವರಿಗೆ ಹೇಳಿದ್ದೇನಂದರೆ--ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ ಅಂದನು.
10. ಆತನು ಒಬ್ಬನೇ ಇದ್ದಾಗ ಆತನ ಸುತ್ತಲೂ ಇದ್ದವರು ಹನ್ನೆರಡು ಮಂದಿಯೊಂದಿಗೆ ಆ ಸಾಮ್ಯದ ವಿಷಯವಾಗಿ ಆತನನ್ನು ಕೇಳಿದರು.
11. ಅದಕ್ಕೆ ಆತನು ಅವರಿಗೆ--ದೇವರ ರಾಜ್ಯದ ಮರ್ಮವನ್ನು ತಿಳಿದುಕೊಳ್ಳಲು ನಿಮಗೆ ಕೊಡಲ್ಪಟ್ಟಿದೆ. ಆದರೆ ಹೊರಗಿನವರಿಗೆ ಇವೆಲ್ಲವುಗಳು ಸಾಮ್ಯಗಳಿಂದ ಹೇಳಲ್ಪಡುತ್ತವೆ.
12. ಯಾಕಂದರೆ ಅವರು ದೃಷ್ಟಿಯಿ ದ್ದರೂ ನೋಡಿ ತಿಳುಕೊಳ್ಳದಂತೆ ಕೇಳಿದರೂ ಕೇಳಿ ಗ್ರಹಿಸದಂತೆ ಮತ್ತು ಅವರು ತಿರುಗಿಕೊಂಡು ತಮ್ಮ ಪಾಪಗಳಿಂದ ಕ್ಷಮಿಸಲ್ಪಡದಂತೆ ಆಗುವದು.
13. ಮತ್ತು ಆತನು ಅವರಿಗೆ--ಈ ಸಾಮ್ಯವು ನಿಮಗೆ ತಿಳಿಯ ಲಿಲ್ಲವೋ? ಹಾಗಾದರೆ ಎಲ್ಲಾ ಸಾಮ್ಯಗಳನ್ನು ನೀವು ಹೇಗೆ ತಿಳಿದುಕೊಳ್ಳುವಿರಿ?
14. ಬಿತ್ತುವವನು ವಾಕ್ಯವನ್ನು ಬಿತ್ತುತ್ತಾನೆ.
15. ದಾರಿಯ ಮಗ್ಗುಲಲ್ಲಿ ವಾಕ್ಯವು ಬಿತ್ತಲ್ಪಟ್ಟವರು ಇವರೇ; ಆದರೆ ಇವರು ಕೇಳಿದಾಗ ಸೈತಾನನು ಕೂಡಲೆ ಬಂದು ಅವರ ಹೃದಯಗಳಲ್ಲಿ ಬಿತ್ತಲ್ಪಟ್ಟಿದ್ದ ವಾಕ್ಯವನ್ನು ತೆಗೆದು ಬಿಡುತ್ತಾನೆ.
16. ಅದೇ ಪ್ರಕಾರ ಬಂಡೆಯ ನೆಲದ ಮೇಲೆ ಬಿತ್ತಲ್ಪಟ್ಟವರು ವಾಕ್ಯವನ್ನು ಕೇಳಿದಾಗ ಕೂಡಲೆ ಅದನ್ನು ಸಂತೋಷದಿಂದ ಅಂಗೀಕರಿಸಿ
17. ತಮ್ಮಲ್ಲಿ ಬೇರು ಇಲ್ಲದ ಕಾರಣ ಸ್ವಲ್ಪ ಕಾಲ ಮಾತ್ರ ಇರುವಂಥವರಾಗಿದ್ದಾರೆ; ತರುವಾಯ ವಾಕ್ಯದ ನಿಮಿತ್ತ ಉಪದ್ರವವಾಗಲೀ ಹಿಂಸೆಯಾಗಲೀ ಬಂದಾಗ ಕೂಡಲೆ ಅವರು ಅಭ್ಯಂತರಪಡುತ್ತಾರೆ.
18. ಮುಳ್ಳು ಗಿಡಗಳಲ್ಲಿ ಬಿತ್ತಲ್ಪಟ್ಟವರು ಇವರೇ; ಇಂಥವರು ವಾಕ್ಯವನ್ನು ಕೇಳಿದಾಗ
19. ಈ ಲೋಕದ ಚಿಂತೆಗಳೂ ಐಶ್ವರ್ಯದ ಮೋಸವೂ ಇತರ ವಿಷಯಗಳ ಆಶೆಗಳೂ ಒಳಗೆ ಸೇರಿ ವಾಕ್ಯವನ್ನು ಅಡಗಿಸುವದರಿಂದ ಅದು ನಿಷ್ಫಲವಾಗುವದು.
20. ಒಳ್ಳೆಯ ಭೂಮಿಯ ಮೇಲೆ ಬಿತ್ತಲ್ಪಟ್ಟವರು ಇವರೇ; ಇಂಥವರು ವಾಕ್ಯವನ್ನು ಕೇಳಿ ಅಂಗೀಕರಿಸಿದ ಮೇಲೆ ಕೆಲವರು ಮೂವತ್ತರಷ್ಟು, ಕೆಲವರು ಅರವತ್ತರಷ್ಟು, ಕೆಲವರು ನೂರರಷ್ಟು ಫಲಕೊಡುತ್ತಾರೆ ಅಂದನು.
21. ಆತನು ಅವರಿಗೆ--ದೀಪವನ್ನು ಕೊಳಗದೊಳ ಗಾಗಲೀ ಮಂಚದ ಕೇಳಗಾಗಲೀ ಇಡುವದಕ್ಕೆ ತರುವದುಂಟೋ? ದೀಪಸ್ತಂಭದ ಮೇಲೆ ಇಡುವದಕ್ಕೆ ಅಲ್ಲವೋ?
22. ಯಾಕಂದರೆ ಪ್ರಕಟವಾಗದಂತೆ ಅಡಗಿಸಲ್ಪಟ್ಟದ್ದು ಯಾವದೂ ಇಲ್ಲ; ಇಲ್ಲವೆ ರಹಸ್ಯವಾಗಿ ಇಡಲ್ಪಟ್ಟದ್ದು ಯಾವದೂ ಬಹಿರಂಗವಾಗಿ ಇರಲಾರದು.
23. ಯಾವನಿಗಾದರೂ ಕೇಳುವದಕ್ಕೆ ಕಿವಿಗಳಿದ್ದರೆ ಅವನು ಕೇಳಲಿ ಅಂದನು.
24. ಆತನು ಅವರಿಗೆ--ನೀವು ಕೇಳುವದರಲ್ಲಿ ಎಚ್ಚರವಾಗಿರ್ರಿ; ನೀವು ಯಾವ ಅಳತೆಯಿಂದ ಅಳೆಯುತ್ತೀರೋ ಅದು ನಿಮಗೂ ಅಳೆಯಲ್ಪಡುವದು; ಮತ್ತು ಕೇಳುವವ ರಾದ ನಿಮಗೆ ಹೆಚ್ಚಾಗಿ ಕೊಡಲ್ಪಡುವದು.
25. ಯಾಕಂ ದರೆ ಯಾವನಿಗೆ ಇದೆಯೋ ಅವನಿಗೆ ಕೊಡಲ್ಪಡುವದು; ಯಾವನಿಗೆ ಇಲ್ಲವೋ ಅವನಿಗೆ ಇದ್ದದ್ದೂ ಅವನಿಂದ ತೆಗೆಯಲ್ಪಡುವದು ಎಂದು ಹೇಳಿದನು.
26. ಆತನು ಹೇಳಿದ್ದೇನಂದರೆ--ಒಬ್ಬ ಮನುಷ್ಯನು ಬೀಜವನ್ನು ಭೂಮಿಯಲ್ಲಿ ಹಾಕಿದಂತೆಯೇ ದೇವರ ರಾಜ್ಯವು ಇದೆ.
27. ಅವನು ರಾತ್ರಿ ಮಲಗುತ್ತಾ ಹಗಲು ಏಳುತ್ತಾ ಇರುವಾಗ ಹೇಗೆ ಆ ಬೀಜವು ಮೊಳೆತು ಬೆಳೆಯುವದೆಂದು ಅವನಿಗೆ ಗೊತ್ತಾಗುವದಿಲ್ಲವೋ ಹಾಗೆಯೇ ಇರುವದು.
28. ಯಾಕಂದರೆ ಭೂಮಿಯು ಮೊದಲು ಮೊಳಕೆಯನ್ನು ಆಮೇಲೆ ತೆನೆಯನ್ನು ಇದಾದ ಮೇಲೆ ತೆನೆಯಲ್ಲಿ ಪೂರ್ಣಕಾಳನ್ನು ತನ್ನಷ್ಟಕ್ಕೆ ತಾನೇ ಫಲಿಸುತ್ತದೆ.
29. ಆದರೆ ಫಲವು ಫಲಿಸಿದಾಗ ಸುಗ್ಗಿಯು ಬಂದದರಿಂದ ಅವನು ಕೂಡಲೆ ಕುಡು ಗೋಲು ಹಾಕಿ ಕೊಯ್ಯುತ್ತಾನೆ.
30. ಆತನು--ದೇವರ ರಾಜ್ಯವನ್ನು ನಾವು ಯಾವ ದಕ್ಕೆ ಹೋಲಿಸೋಣ? ಇಲ್ಲವೆ ಯಾವ ಹೋಲಿಕೆಗೆ ಅದನ್ನು ಹೋಲಿಸೋಣ?
31. ಭೂಮಿಯಲ್ಲಿರುವ ಎಲ್ಲಾ ಬೀಜಗಳಿಗಿಂತ ಚಿಕ್ಕದಾಗಿರುವ ಸಾಸಿವೆ ಕಾಳು ಭೂಮಿಯಲ್ಲಿ ಬಿತ್ತಲ್ಪಟ್ಟದ್ದಕ್ಕೆ ಅದು ಹೋಲಿಕೆ ಯಾಗಿದೆ.
32. ಆದರೆ ಅದು ಬಿತ್ತಲ್ಪಟ್ಟ ಮೇಲೆ ಬೆಳೆದು ಆಕಾಶದ ಪಕ್ಷಿಗಳು ಅದರ ನೆರಳಿನಲ್ಲಿ ವಾಸ ಮಾಡು ವಷ್ಟು ಎಲ್ಲಾ ಸಸ್ಯಗಳಿಗಿಂತ ದೊಡ್ಡದಾಗಿ ದೊಡ್ಡ ಕೊಂಬೆಗಳನ್ನು ಬಿಡುತ್ತದೆ ಎಂದು ಹೇಳಿದನು.
33. ಅವರು ಕೇಳಿಸಿಕೊಳ್ಳಲು ಸಾಧ್ಯವಾಗುವಷ್ಟು ಇಂಥ ಅನೇಕ ಸಾಮ್ಯಗಳಿಂದ ಆತನು ಅವರಿಗೆ ವಾಕ್ಯವನ್ನು ಹೇಳಿದನು.
34. ಸಾಮ್ಯವಿಲ್ಲದೆ ಅವರೊಂ ದಿಗೆ ಮಾತನಾಡಲಿಲ್ಲ; ಆದರೆ ಅವರು ಏಕಾಂತದ ಲ್ಲಿದ್ದಾಗ ಆತನು ಎಲ್ಲಾ ವಿಷಯಗಳನ್ನು ತನ್ನ ಶಿಷ್ಯರಿಗೆ ವಿವರಿಸಿದನು.
35. ಅದೇ ದಿವಸ ಸಾಯಂಕಾಲವಾದಾಗ ಆತನು ಅವರಿಗೆ--ನಾವು ಆಚೇದಡಕ್ಕೆ ಹೋಗೋಣ ಅಂದನು.
36. ಅವರು ಆ ಜನಸಮೂಹವನ್ನು ಕಳುಹಿ ಸಿದ ಮೇಲೆ ಆತನು ದೋಣಿಯಲ್ಲಿ ಇದ್ದ ಹಾಗೆಯೇ ಅವರು ಆತನನ್ನು ಕರೆದುಕೊಂಡು ಹೋದರು; ಆತನೊಂದಿಗೆ ಬೇರೆ ಚಿಕ್ಕದೋಣಿಗಳೂ ಇದ್ದವು.
37. ಆಗ ಅಲ್ಲಿ ದೊಡ್ಡ ಬಿರುಗಾಳಿಯಿಂದ ತುಫಾನು ಎದ್ದು ತೆರೆಗಳು ದೋಣಿಯೊಳಕ್ಕೆ ಬಡಿದದ್ದರಿಂದ ಅದು ತುಂಬಿಕೊಂಡಿತು.
38. ಆದರೆ ಆತನು ದೋಣಿಯ ಹಿಂಭಾಗದಲ್ಲಿ ತಲೆದಿಂಬಿನ ಮೇಲೆ ನಿದ್ರಿಸುತ್ತಿದ್ದನು. ಆಗ ಅವರು ಆತನನ್ನು ಎಬ್ಬಿಸಿ ಆತನಿಗೆ--ಒಡೆಯನೇ, ನಾವು ನಾಶವಾಗುತ್ತೇವೆಂದು ನಿನಗೆ ಚಿಂತೆಯಿಲ್ಲವೋ ಅಂದರು.
39. ಆಗ ಆತನು ಎದ್ದು ಗಾಳಿಯನ್ನು ಗದರಿಸಿ ಸಮುದ್ರಕ್ಕೆ--ಶಾಂತವಾಗಿ ಮೌನವಾಗಿರು ಎಂದು ಹೇಳಿದನು. ಆಗ ಗಾಳಿಯು ನಿಂತು ಅಲ್ಲಿ ದೊಡ್ಡ ಶಾಂತತೆ ಉಂಟಾಯಿತು.
40. ಮತ್ತು ಆತನು ಅವರಿಗೆ--ಯಾಕೆ ನೀವು ಇಷ್ಟೊಂದು ಭಯಭರಿತರಾಗಿದ್ದೀರಿ? ನಿಮಗೆ ನಂಬಿಕೆ ಇಲ್ಲದಿರುವದು ಹೇಗೆ ಅಂದನು.
41. ಆಗ ಅವರು ಇನ್ನಷ್ಟು ಭಯಪಟ್ಟವರಾಗಿ--ಈತನು ಎಂಥ ಮನುಷ್ಯನಾಗಿರಬಹುದು? ಗಾಳಿಯೂ ಸಮುದ್ರವೂ ಈತನಿಗೆ ವಿಧೇಯವಾಗುತ್ತವಲ್ಲಾ ! ಎಂದು ಒಬ್ಬರಿ ಗೊಬ್ಬರು ಮಾತನಾಡಿಕೊಂಡರು.

Chapter 5

1. ತರುವಾಯ ಅವರು ಸಮುದ್ರದ ಆಚೆಗೆ ಗದರೇನರ ಸೀಮೆಗೆ ಬಂದರು.
2. ಆತನು ದೋಣಿಯಿಂದ ಹೊರಗೆ ಬಂದಾಗ ಅಶುದ್ಧಾತ್ಮವಿದ್ದ ಒಬ್ಬ ಮನುಷ್ಯನು ಕೂಡಲೆ ಸಮಾಧಿಗಳೊಳಗಿಂದ ಬಂದು ಆತನನ್ನು ಸಂಧಿಸಿದನು.
3. ಇವನು ಸಮಾಧಿ ಗಳಲ್ಲಿ ವಾಸಿಸುತ್ತಿದ್ದನು. ಇವನನ್ನು ಯಾವ ಮನುಷ್ಯನೂ ಸಂಕೋಲೆಗಳಿಂದಲಾದರೂ ಕಟ್ಟಲಾರದೆ ಹೋದನು.
4. ಯಾಕಂದರೆ ಅನೇಕ ಸಾರಿ ಅವನನ್ನು ಬೇಡಿಗಳಿಂದ ಮತ್ತು ಸರಪಣಿಗಳಿಂದ ಕಟ್ಟಿದ್ದರೂ ಅವನು ಸರಪಣಿ ಗಳನ್ನು ಕಿತ್ತುಹಾಕಿ ಬೇಡಿಗಳನ್ನು ಮುರಿದು ತುಂಡು ಮಾಡುತ್ತಿದ್ದದ್ದರಿಂದ ಯಾವ ಮನುಷ್ಯನೂ ಅವನನ್ನು ಹತೋಟಿಗೆ ತರಲಾರದೆ ಇದ್ದನು.
5. ಅವನು ರಾತ್ರಿ ಹಗಲು ಯಾವಾಗಲೂ ಬೆಟ್ಟಗಳಲ್ಲಿಯೂ ಸಮಾಧಿಗಳ ಲ್ಲಿಯೂ ಕೂಗುತ್ತಾ ಕಲ್ಲುಗಳಿಂದ ತನ್ನನ್ನು ತಾನೇ ಕೊಯ್ದುಕೊಳ್ಳುತ್ತಿದ್ದನು.
6. ಆದರೆ ಅವನು ದೂರದಿಂದ ಯೇಸುವನ್ನು ನೋಡಿದಾಗ ಓಡಿಬಂದು ಆತನನ್ನು ಆರಾಧಿಸಿ --
7. ಮಹೋನ್ನತನಾದ ದೇವಕುಮಾರನಾಗಿ ರುವ ಯೇಸುವೇ, ನನ್ನ ಗೊಡವೆ ನಿನಗೆ ಯಾಕೆ? ನನ್ನನ್ನು ಯಾತನೆಪಡಿಸಬೇಡವೆಂದು ನಾನು ನಿನಗೆ ದೇವರಾಣೆ ಇಡುತ್ತೇನೆ ಎಂದು ಮಹಾ ಶಬ್ದದಿಂದ ಕೂಗಿ ಹೇಳಿದನು.
8. ಯಾಕಂದರೆ ಆತನು ಅವ ನಿಗೆ--ಅಶುದ್ಧಾತ್ಮವೇ, ಆ ಮನುಷ್ಯನೊಳಗಿನಿಂದ ಹೊರಗೆ ಬಾ ಎಂದು ಹೇಳಿದ್ದನು.
9. ಆತನು ಅವನಿಗೆ--ನಿನ್ನ ಹೇಸರೇನು ಎಂದು ಕೇಳಲು ಅವನು ಪ್ರತ್ಯುತ್ತರವಾಗಿ--ನನ್ನ ಹೆಸರು ಲೀಜೆನ್‌ (ದಂಡು); ಯಾಕಂದರೆ ನಾವು ಅನೇಕರಿದ್ದೇವೆ ಅಂದನು.
10. ತಮ್ಮನ್ನು ಆ ದೇಶದೊಳಗಿಂದ ಹೊರಗೆ ಕಳುಹಿಸದಂತೆ ಅವನು ಆತನನ್ನು ಬಹಳವಾಗಿ ಬೇಡಿ ಕೊಂಡನು.
11. ಆಗ ಅಲ್ಲಿ ಬೆಟ್ಟಗಳ ಸವಿಾಪದಲ್ಲಿ ಹಂದಿಗಳ ದೊಡ್ಡ ಗುಂಪು ಮೇಯುತ್ತಿತ್ತು.
12. ಎಲ್ಲಾ ದೆವ್ವಗಳು ಆತನಿಗೆ--ನಾವು ಆ ಹಂದಿಗಳೊಳಗೆ ಸೇರಿಕೊಳ್ಳುವಂತೆ ನಮ್ಮನ್ನು ಕಳುಹಿಸು ಎಂದು ಬೇಡಿಕೊಂಡವು.
13. ಕೂಡಲೆ ಯೇಸು ಅವುಗಳಿಗೆ ಅಪ್ಪಣೆಕೊಟ್ಟನು. ಆಗ ಅಶುದ್ಧಾತ್ಮಗಳು ಹೊರಗೆ ಹೋಗಿ ಆ ಹಂದಿಗಳೊಳಗೆ ಸೇರಿಕೊಂಡವು; ಮತ್ತು ಆ ಗುಂಪು ಉಗ್ರತೆಯಿಂದ ಓಡಿ ಇಳಿಜಾರಿನಿಂದ ಸಮುದ್ರದೊಳಗೆ ಬಿದ್ದು ಉಸುರುಗಟ್ಟಿ ಸತ್ತವು. (ಅವು ಸುಮಾರು ಎರಡು ಸಾವಿರ ಇದ್ದವು.)
14. ಆಗ ಹಂದಿಗಳನ್ನು ಮೇಯಿಸುತ್ತಿದ್ದವರು ಓಡಿ ಹೋಗಿ ಪಟ್ಟಣದಲ್ಲಿಯೂ ಸೀಮೆಯಲ್ಲಿಯೂ ತಿಳಿಸಿ ದರು; ಅವರು ನಡೆದ ಸಂಗತಿ ಏನೆಂದು ನೋಡುವದಕ್ಕೆ ಹೊರಟರು.
15. ಅವರು ಯೇಸುವಿನ ಬಳಿಗೆ ಬಂದು ಆ ದೆವ್ವಗಳ ದಂಡು ಹಿಡಿದವನು ಬಟ್ಟೆಗಳನ್ನು ಧರಿಸಿಕೊಂಡು ಸ್ವಸ್ಥಚಿತ್ತದಿಂದ ಕೂತು ಕೊಂಡಿರುವದನ್ನು ನೋಡಿ ಭಯಪಟ್ಟರು.
16. ಅದನ್ನು ನೋಡಿದವರು ದೆವ್ವ ಹಿಡಿದಿದ್ದವನಿಗೆ ಆದದ್ದನ್ನೂ ಹಂದಿಗಳ ವಿಷಯವಾಗಿಯೂ ಅವರಿಗೆ ಹೇಳಿದರು.
17. ಆಗ ಅವರು ತಮ್ಮ ಮೇರೆಗಳನ್ನು ಬಿಟ್ಟುಹೋಗ ಬೇಕೆಂದು ಆತನನ್ನು ಬೇಡಿಕೊಳ್ಳಲಾರಂಭಿಸಿದರು.
18. ಆತನು ದೋಣಿಯೊಳಗೆ ಬಂದಾಗ ಆ ದೆವ್ವ ಹಿಡಿದಿದ್ದವನು ತಾನು ಆತನ ಜೊತೆಯಲ್ಲಿಯೇ ಇರುತ್ತೇನೆಂದು ಆತನನ್ನು ಬೇಡಿಕೊಂಡನು.
19. ಆದಾಗ್ಯೂ ಯೇಸು ಅವನನ್ನು ಇರಗೊಡದೆ ಅವನಿಗೆ--ನಿನ್ನ ಮನೆಗೂ ಸ್ನೇಹಿತರ ಬಳಿಗೂ ಹೋಗಿ ಕರ್ತನು ನಿನ್ನ ಮೇಲೆ ಕರುಣೆಯಿಟ್ಟು ಎಂಥಾ ಮಹತ್ಕಾರ್ಯಗಳನ್ನು ಮಾಡಿ ದ್ದಾನೆಂದು ಅವರಿಗೆ ಹೇಳು ಅಂದನು.
20. ಅವನು ಹೊರಟು ಹೋಗಿ ಯೇಸು ತನಗೆ ಎಂಥೆಂಥಾ ಮಹತ್ಕಾರ್ಯಗಳನ್ನು ಮಾಡಿದನೆಂಬದನ್ನು ದೆಕಪೊಲಿ ಯದಲ್ಲಿ ಪ್ರಕಟಿಸಲಾರಂಭಿಸಿದನು. ಆಗ ಎಲ್ಲರೂ ಆಶ್ಚರ್ಯಪಟ್ಟರು.
21. ಯೇಸು ತಿರಿಗಿ ದೋಣಿಯಲ್ಲಿ ಆಚೇದಡಕ್ಕೆ ಹೋದಾಗ ಬಹಳ ಜನರು ಆತನ ಬಳಿಗೆ ಕೂಡಿಬಂದರು; ಆಗ ಆತನು ಸಮುದ್ರದ ಸವಿಾಪದ ಲ್ಲಿದ್ದನು.
22. ಆಗ ಇಗೋ, ಸಭಾಮಂದಿರದ ಅಧಿಕಾರಿ ಗಳಲ್ಲಿ ಯಾಯಿರನೆಂದು ಹೆಸರಿದ್ದ ಒಬ್ಬನು ಬಂದು ಆತನನ್ನು ಕಂಡು ಆತನ ಪಾದಗಳಿಗೆ ಬಿದ್ದು--
23. ನನ್ನ ಚಿಕ್ಕಮಗಳು ಸಾಯುವ ಸ್ಥಿತಿಯಲ್ಲಿ ಮಲಗಿದ್ದಾಳೆ, ಅವಳು ಸ್ವಸ್ಥಳಾಗುವಂತೆ ನೀನು ಬಂದು ನಿನ್ನ ಕೈಗಳನ್ನು ಅವಳ ಮೇಲೆ ಇಡು; ಆಗ ಅವಳು ಬದುಕುವಳು ಎಂದು ಆತನನ್ನು ಬಹಳವಾಗಿ ಬೇಡಿಕೊಂಡನು.
24. ಆಗ ಯೇಸು ಅವನ ಸಂಗಡ ಹೋದನು; ಮತ್ತು ಬಹಳ ಜನರು ನೂಕಾಡುತ್ತಾ ಆತನ ಹಿಂದೆ ಹೋದರು.
25. ಆಗ ಹನ್ನೆರಡು ವರುಷಗಳಿಂದ ರಕ್ತಸ್ರಾವವಿದ್ದ ಒಬ್ಬ ಸ್ತ್ರೀಯು
26. ಅನೇಕ ವೈದ್ಯರಿಂದ ಬಹು ಕಷ್ಟಗಳನ್ನು ಅನುಭವಿಸಿ ತನಗಿದ್ದದ್ದನ್ನೆಲ್ಲಾ ವೆಚ್ಚ ಮಾಡಿದ್ದಾಗ್ಯೂ ರೋಗವು ಹೆಚ್ಚಾಯಿತೇ ಹೊರತು ಗುಣವಾಗಲಿಲ್ಲ.
27. ಆಗ ಆಕೆಯು ಯೇಸುವಿನ ವಿಷಯ ಕೇಳಿ ಜನರ ಗುಂಪಿನ ಹಿಂದೆ ಬಂದು ಆತನ ಉಡುಪನ್ನು ಮುಟ್ಟಿ ದಳು.
28. ಯಾಕಂದರೆ ಆಕೆಯು--ನಾನು ಆತನ ಉಡುಪುಗಳನ್ನು ಮುಟ್ಟಿದರೆ ಸಾಕು, ಗುಣವಾಗುವೆನು ಎಂದು ಅಂದುಕೊಂಡಿದ್ದಳು.
29. ಕೂಡಲೆ ಆಕೆಗೆ ರಕ್ತ ಹರಿಯುವದು ನಿಂತುಹೋಯಿತು; ಆಗ ಆ ಜಾಡ್ಯ ದಿಂದ ತನಗೆ ಗುಣವಾಯಿತೆಂದು ಆಕೆಯ ಶರೀರದಲ್ಲಿ ಆಕೆಗೆ ಅನ್ನಿಸಿತು.
30. ತಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳುಕೊಂಡು ಗುಂಪಿ ನಲ್ಲಿ ಹಿಂತಿರುಗಿ--ನನ್ನ ಉಡುಪುಗಳನ್ನು ಮುಟ್ಟಿದವರು ಯಾರು ಎಂದು ಕೇಳಲು
31. ಆತನ ಶಿಷ್ಯರು ಆತನಿಗೆ --ಜನಸಮೂಹವು ನಿನ್ನನ್ನು ನೂಕುವದನ್ನು ನೋಡಿ ಯೂ--ನನ್ನನ್ನು ಯಾರು ಮುಟ್ಟಿದರೆಂದು ನೀನು ಹೇಳುತ್ತೀಯಲ್ಲಾ ಅಂದರು.
32. ಆದರೆ ಆತನು ಇದನ್ನು ಮಾಡಿದವಳನ್ನು ಕಾಣಬೇಕೆಂದು ಸುತ್ತಲೂ ನೋಡಿದನು.
33. ಆದರೆ ಆ ಸ್ತ್ರೀಯು ತನ್ನಲ್ಲಿ ಆದದ್ದನ್ನು ತಿಳುಕೊಂಡು ಭಯದಿಂದ ನಡುಗುತ್ತಾ ಬಂದು ಆತನ ಮುಂದೆ ಅಡ್ಡಬಿದ್ದು ಸತ್ಯವನ್ನೆಲ್ಲಾ ಆತನಿಗೆ ತಿಳಿಸಿದಳು.
34. ಆಗ ಆತನು ಆಕೆಗೆ--ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥ ಮಾಡಿತು; ಸಮಾಧಾನದಿಂದ ಹೋಗು; ನಿನ್ನ ಜಾಡ್ಯದಿಂದ ನೀನು ಸ್ವಸ್ಥಳಾಗು ಅಂದನು.
35. ಆತನು ಇನ್ನೂ ಮಾತನಾಡುತ್ತಿರುವಾಗ ಸಭಾ ಮಂದಿರದ ಅಧಿಕಾರಿಯ ಮನೆಯಿಂದ ಕೆಲವರು ಅಲ್ಲಿಗೆ ಬಂದು--ನಿನ್ನ ಮಗಳು ಸತ್ತಿದ್ದಾಳೆ; ಬೋಧಕ ನಿಗೆ ಇನ್ನು ನೀನು ತೊಂದರೆಪಡಿಸುವದು ಯಾಕೆ? ಅಂದರು.
36. ಹಾಗೆ ಹೇಳಿದ್ದನ್ನು ಯೇಸು ಕೇಳಿದ ಕೂಡಲೆ ಆ ಸಭಾಮಂದಿರದ ಅಧಿಕಾರಿಗೆ--ಭಯ ಪಡಬೇಡ, ನಂಬಿಕೆ ಮಾತ್ರ ಇರಲಿ ಅಂದನು.
37. ಆತನು ಪೇತ್ರ, ಯಾಕೋಬ, ಯಾಕೋಬನ ಸಹೋದರನಾದ ಯೋಹಾನ ಇವರನ್ನೇ ಹೊರತು ಬೇರೆ ಯಾರನ್ನೂ ತನ್ನ ಹಿಂದೆ ಬರಗೊಡಲಿಲ್ಲ.
38. ಆತನು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದು ಗೊಂದಲವನ್ನೂ ಬಹಳವಾಗಿ ಗೋಳಾಡುತ್ತಾ ಅಳುತ್ತಿರುವವರನ್ನೂ ಕಂಡನು.
39. ಆತನು ಒಳಕ್ಕೆ ಬಂದಾಗ ಅವರಿಗೆ--ನೀವು ಈ ಗೊಂದಲ ಮಾಡು ವದೂ ಅಳುವದೂ ಯಾಕೆ? ಹುಡುಗಿಯು ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ ಅಂದನು.
40. ಆಗ ಅವರು ಆತನಿಗೆ ಹಾಸ್ಯಮಾಡಿ ನಕ್ಕರು. ಆದರೆ ಆತನು ಅವರೆಲ್ಲರನ್ನು ಹೊರಗೆ ಹಾಕಿ ಹುಡುಗಿಯ ತಂದೆ ತಾಯಿಗಳನ್ನು ಮತ್ತು ತನ್ನ ಜೊತೆಯಲ್ಲಿದ್ದವರನ್ನು ಕರೆದುಕೊಂಡು ಒಳಕ್ಕೆ ಹುಡುಗಿಯು ಮಲಗಿದ್ದಲ್ಲಿಗೆ ಹೋದನು.
41. ಮತ್ತು ಆತನು ಆ ಹುಡುಗಿಯ ಕೈ ಹಿಡಿದು ಆಕೆಗೆ --ತಲಿಥಾ ಕೂಮ್‌ ಅಂದನು. ಹುಡುಗಿಯೇ, ಎದ್ದೇಳು ಎಂದು ನಾನು ನಿನಗೆ ಹೇಳುತ್ತೇನೆ ಎಂದರ್ಥ.
42. ಕೂಡಲೆ ಆ ಹನ್ನೆರಡು ವರುಷದ ಹುಡುಗಿಯು ಎದ್ದು ನಡೆದಾಡಿದಳು; ಆಗ ಅವರು ಅತ್ಯಾಶ್ಚರ್ಯ ದಿಂದ ಬೆರಗಾದರು.
43. ಇದು ಯಾವ ಮನುಷ್ಯ ನಿಗೂ ತಿಳಿಯಬಾರದೆಂದು ಆತನು ಅವರಿಗೆ ಖಂಡಿತ ವಾಗಿ ಹೇಳಿ ಅವಳಿಗೆ ತಿನ್ನುವದಕ್ಕೆ ಏನಾದರೂ ಕೊಡಬೇಕೆಂದು ಅಪ್ಪಣೆಕೊಟ್ಟನು.

Chapter 6

1. ಆತನು ಅಲ್ಲಿಂದ ಹೊರಟು ತನ್ನ ಸ್ವಂತ ಸ್ಥಳಕ್ಕೆ ಬಂದನು; ಆತನ ಶಿಷ್ಯರು ಆತನನ್ನು ಹಿಂಬಾಲಿಸಿದರು.
2. ಸಬ್ಬತ್‌ ದಿನ ಬಂದಾಗ ಆತನು ಸಭಾಮಂದಿರದಲ್ಲಿ ಬೋಧಿಸುವದಕ್ಕೆ ಪ್ರಾರಂಭಿ ಸಿದನು; ಇದನ್ನು ಅನೇಕರು ಕೇಳುತ್ತಾ ಆಶ್ಚರ್ಯ ಪಟ್ಟು--ಇವುಗಳು ಈತನಿಗೆ ಎಲ್ಲಿಂದ ಬಂದಿದ್ದಾವು? ಮತ್ತು ಈತನ ಕೈಗಳಿಂದ ಇಂಥ ಮಹತ್ಕಾರ್ಯಗಳು ಸಹ ಆಗುವಂತೆ ಈತನಿಗೆ ಕೊಡಲ್ಪಟ್ಟ ಜ್ಞಾನವು ಎಂಥದ್ದು?
3. ಮರಿಯಳ ಮಗನೂ ಯಾಕೋಬ, ಯೋಸೆ ಯೂದ ಸೀಮೋನ ಇವರ ಸಹೋದರನೂ ಆದ ಈತನು ಬಡಗಿಯಲ್ಲವೇ? ಈತನ ಸಹೋದರಿ ಯರು ಇಲ್ಲಿಯೇ ನಮ್ಮ ಜೊತೆಯಲ್ಲಿ ಇದ್ದಾರಲ್ಲವೇ ಎಂದು ಹೇಳಿ ಆತನ ವಿಷಯದಲ್ಲಿ ಅಭ್ಯಂತರಪಟ್ಟರು.
4. ಅದಕ್ಕೆ ಯೇಸು ಅವರಿಗೆ--ಪ್ರವಾದಿಗೆ ಬೇರೆ ಎಲ್ಲಿ ಯಾದರೂ ಮರ್ಯಾದೆ ಉಂಟು; ಆದರೆ ಸ್ವದೇಶದಲ್ಲಿಯೂ ಸ್ವಂತ ಜನರಲ್ಲಿಯೂ ಸ್ವಂತ ಮನೆಯಲ್ಲಿಯೂ ಇಲ್ಲ ಎಂದು ಹೇಳಿದನು.
5. ಆತನು ಅಲ್ಲಿ ಕೆಲವು ರೋಗಿಗಳ ಮೇಲೆ ತನ್ನ ಕೈಗಳನ್ನಿಟ್ಟು ಸ್ವಸ್ಥಪಡಿಸಿದನೇ ಹೊರತು ಬೇರೆ ಯಾವ ಮಹತ್ಕಾರ್ಯವನ್ನೂ ಮಾಡುವದಕ್ಕಾಗಲಿಲ್ಲ.
6. ಆತನು ಅವರ ಅಪನಂಬಿಕೆ ಯ ದೆಸೆಯಿಂದ ಆಶ್ಚರ್ಯಪಟ್ಟನು; ಮತ್ತು ಸುತ್ತಲಿನ ಹಳ್ಳಿಗಳಿಗೆ ಹೋಗಿ ಬೋಧಿಸುತ್ತಾ ಇದ್ದನು.
7. ಆತನು ಹನ್ನೆರಡು ಮಂದಿಯನ್ನು ತನ್ನ ಬಳಿಗೆ ಕರೆದು ಅವರಿಗೆ ಅಶುದ್ಧಾತ್ಮಗಳ ಮೇಲೆ ಅಧಿಕಾರ ಕೊಟ್ಟು ಇಬ್ಬಿಬ್ಬರನ್ನು ಕಳುಹಿಸಲಾರಂಭಿಸಿದನು.
8. ಅವರು ತಮ್ಮ ಪ್ರಯಾಣಕ್ಕಾಗಿ ಒಂದು ಕೋಲಿನ ಹೊರತು ಚೀಲವನ್ನಾಗಲೀ ರೊಟ್ಟಿಯನ್ನಾಗಲೀ ಹವ್ಮೆಾಣಿಯಲ್ಲಿ ಹಣವನ್ನಾಗಲೀ ತಕ್ಕೊಳ್ಳಬಾರ ದೆಂತಲೂ
9. ಕೆರಗಳನ್ನು ಮೆಟ್ಟಿಕೊಂಡಿರಬೇಕೆಂದೂ ಎರಡು ಅಂಗಿಗಳನ್ನು ಹಾಕಿಕೊಳ್ಳಬಾರದೆಂದೂ ಆಜ್ಞಾ ಪಿಸಿದನು.
10. ಇದಲ್ಲದೆ ಆತನು ಅವರಿಗೆ--ಯಾವ ಸ್ಥಳದಲ್ಲಿಯಾದರೂ ಒಂದು ಮನೆಯೊಳಕ್ಕೆ ನೀವು ಪ್ರವೇಶಿಸಿದರೆ ಆ ಸ್ಥಳದಿಂದ ನೀವು ಹೊರಡುವ ತನಕ ಅಲ್ಲೇ ಇಳುಕೊಳ್ಳಿರಿ.
11. ಯಾರಾದರೂ ನಿಮ್ಮನ್ನು ಅಂಗೀಕರಿಸದೆಯೂ ಇಲ್ಲವೆ ನಿಮ್ಮ ಮಾತನ್ನು ಕೇಳ ದೆಯೂ ಇದ್ದರೆ ನೀವು ಅಲ್ಲಿಂದ ಹೊರಡುವಾಗ ಅವರಿಗೆ ವಿರೋಧವಾಗಿ ಸಾಕ್ಷಿಯಾಗಿರುವಂತೆ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಢಿಸಿಬಿಡಿರಿ. ಮತ್ತು ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ನ್ಯಾಯತೀರ್ಪಿನ ದಿನದಲ್ಲಿ ಆ ಪಟ
12. ಅವರು ಹೊರಟು ಹೋಗಿ ಜನರು ಮಾನಸಾಂತರಪಡಬೇಕೆಂದು ಸಾರಿದರು.
13. ಅವರು ಅನೇಕ ದೆವ್ವಗಳನ್ನು ಬಿಡಿಸಿ ಬಹಳ ರೋಗಿಗಳಿಗೆ ಎಣ್ಣೆ ಹಚ್ಚಿ ಅವರನ್ನು ಸ್ವಸ್ಥಪಡಿಸಿದರು.
14. ಅರಸನಾದ ಹೆರೋದನು ಆತನ ವಿಷಯವಾಗಿ ಕೇಳಿದನು. (ಯಾಕಂದರೆ ಆತನ ಹೆಸರು ಎಲ್ಲಾ ಕಡೆಗೂ ಹರಡಿತು); ಮತ್ತು ಅವನು--ಬಾಪ್ತಿಸ್ಮ ಮಾಡಿಸುವ ಯೋಹಾನನು ಸತ್ತವರೊಳಗಿಂದ ಎದ್ದು ಬಂದಿದ್ದಾನೆ; ಆದದರಿಂದ ಮಹತ್ಕಾರ್ಯಗಳು ಅವನಲ್ಲಿ ತೋರಿ ಬರುತ್ತವೆ ಅಂದನು.
15. ಬೇರೆಯವರು--ಈತನು ಎಲೀಯನು ಅಂದರು; ಇನ್ನು ಕೆಲವರು--ಈತನು ಒಬ್ಬ ಪ್ರವಾದಿಯಾಗಿದ್ದಾನೆ ಇಲ್ಲವೆ ಪ್ರವಾದಿಗಳಲ್ಲಿ ಒಬ್ಬ ನಂತೆ ಇದ್ದಾನೆ ಅಂದರು.
16. ಹೆರೋದನಾದರೋ ಆತನ ವಿಷಯವಾಗಿ ಕೇಳಿದಾಗ -- ನಾನು ತಲೆ ಹೊಯಿಸಿದ ಯೋಹಾನನು ಇವನೇ; ಇವನು ಸತ್ತವ ರೊಳಗಿಂದ ಎದ್ದು ಬಂದಿದ್ದಾನೆ ಅಂದನು.
17. ಯಾಕಂ ದರೆ ತನ್ನ ಸಹೋದರನಾದ ಫಿಲಿಪ್ಪನ ಹೆಂಡತಿಯಾದ ಹೆರೋದ್ಯಳ ನಿಮಿತ್ತವಾಗಿ ಹೆರೋದನು ತಾನೇ ಯೋಹಾನನನ್ನು ಕರೇ ಕಳುಹಿಸಿ ಹಿಡಿದು ಕಟ್ಟಿ ಅವನನ್ನು ಸೆರೆಯಲ್ಲಿ ಹಾಕಿದ್ದನು; ಯಾಕಂದರೆ ಅವನು ಅವಳನ್ನು ವಿವಾಹ ಮಾಡಿಕೊಂಡಿದ್ದನು.
18. ಆದರೆ ಯೋಹಾ ನನು ಹೆರೋದನಿಗೆ--ನಿನ್ನ ಸಹೋದರನ ಹೆಂಡತಿ ಯನ್ನು ಇಟ್ಟುಕೊಂಡಿರುವದು ನ್ಯಾಯವಲ್ಲವೆಂದು ಹೇಳಿ ದ್ದನು.
19. ಆದಕಾರಣ ಹೆರೋದ್ಯಳು ಅವನಿಗೆ ವಿರೋ ಧವಾಗಿ ಹಗೆ ಇಟ್ಟುಕೊಂಡು ಅವನನ್ನು ಕೊಲ್ಲಿಸಬೇ ಕೆಂದಿದ್ದಳು; ಆದರೆ ಅವಳಿಗೆ ಆಗಲಿಲ್ಲ.
20. ಯಾಕಂದರೆ ಯೋಹಾನನು ನೀತಿವಂತನೂ ಪರಿಶುದ್ಧನೂ ಆದ ಮನುಷ್ಯನೆಂದು ಹೆರೋದನು ತಿಳಿದವನಾಗಿ ಅವನಿಗೆ ಭಯಪಟ್ಟು ಅವನನ್ನು ಕಾಪಾಡುತ್ತಿದ್ದನು; ಮತ್ತು ಅವನು ಹೇಳಿದ್ದನ್ನು ಕೇಳಿ ಆನೇಕ ಕಾರ್ಯಗಳನ್ನು ಮಾಡಿದ್ದಲ್ಲದೆ ಅವನು ಹೇಳುವದನ್ನು ಸಂತೋಷದಿಂದ ಕೇಳಿದನು.
21. ಹೀಗಿರಲಾಗಿ ಅನುಕೂಲವಾದ ಒಂದು ದಿನವು ಅಂದರೆ ಹೆರೋದನ ಹುಟ್ಟಿದ ದಿನದಲ್ಲಿ ಅವನು ತನ್ನ ಪ್ರಭುಗಳಿಗೂ ಸೈನ್ಯಾಧಿಪತಿಗಳಿಗೂ ಗಲಿಲಾಯದ ಪ್ರಮುಖರಿಗೂ ಔತಣವನ್ನು ಮಾಡಿಸಿದನು;
22. ಆಗ ಆ ಹೆರೋದ್ಯಳ ಮಗಳು ಒಳಗೆ ಬಂದು ನಾಟ್ಯವಾಡಿ ಹೆರೋದನನ್ನೂ ಅವನ ಸಂಗಡ ಕೂತಿದ್ದವರನ್ನೂ ಮೆಚ್ಚಿಸಿದ್ದರಿಂದ ಅರಸನು ಆ ಹುಡುಗಿಗೆ--ನಿನಗೆ ಬೇಕಾದದ್ದನ್ನು ನನ್ನಿಂದ ಕೇಳಿಕೋ; ನಾನು ಅದನ್ನು ನಿನಗೆ ಕೊಡುತ್ತೇನೆ ಎಂದು ಹೇಳಿದನು.
23. ಅವನು--ನೀನು ನನ್ನಿಂದ ಯಾವದನ್ನು ಕೇಳಿಕೊಂಡರೂ ಅಂದರೆ ಅದು ನನ್ನ ರಾಜ್ಯದಲ್ಲಿ ಅರ್ಧವಾಗಿದ್ದರೂ ನಾನು ನಿನಗೆ ಕೊಡುತ್ತೇನೆ ಎಂದು ಅವಳಿಗೆ ಆಣೆಯಿಟ್ಟು ಹೇಳಿದನು.
24. ಆಗ ಅವಳು ಹೊರಟುಹೋಗಿ ತನ್ನ ತಾಯಿಗೆ--ನಾನು ಏನು ಕೇಳಿಕೊಳ್ಳಲಿ ಎಂದು ಕೇಳಲು ಅವಳು --ಬಾಪ್ತಿಸ್ಮ ಮಾಡಿಸುವ ಯೋಹಾನನ ತಲೆಯನ್ನು ಕೇಳಿಕೋ ಅಂದಳು.
25. ಕೂಡಲೆ ಅವಳು ಅರಸನ ಬಳಿಗೆ ಅವಸರದಿಂದ ಬಂದು-- ಬಾಪ್ತಿಸ್ಮಮಾಡಿಸುವ ಯೊಹಾನನ ತಲೆಯನ್ನು ನೀನು ಕೂಡಲೆ ಪರಾತಿನಲ್ಲಿ ನನಗೆ ಕೊಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ ಅಂದಳು.
26. ಆಗ ಅರಸನು ಬಹಳವಾಗಿ ದುಃಖಪಟ್ಟನು; ಆದಾಗ್ಯೂ ತನ್ನ ಆಣೆಯ ನಿಮಿತ್ತವಾಗಿಯೂ ತನ್ನೊಂದಿಗೆ ಕೂತಿದ್ದವರ ನಿಮಿತ್ತವಾಗಿಯೂ ಅವಳನ್ನು ತಿರಸ್ಕರಿಸುವದಕ್ಕೆ ಮನಸ್ಸಿಲ್ಲದವನಾದನು.
27. ಕೂಡಲೆ ಅವನ ತಲೆಯನ್ನು ತರುವದಕ್ಕಾಗಿ ಅರಸನು ಒಬ್ಬ ಕೊಲೆ ಯಾಳಿಗೆ ಅಪ್ಪಣೆಕೊಟ್ಟು ಕಳುಹಿಸಿದನು; ಅವನು ಹೋಗಿ ಸೆರೆಮನೆಯಲ್ಲಿ ಅವನ ತಲೆಯನ್ನು ಹೊಯು
28. ಕೂಡಲೆ ಅವನ ತಲೆಯನ್ನು ತರುವದಕ್ಕಾಗಿ ಅರಸನು ಒಬ್ಬ ಕೊಲೆ ಯಾಳಿಗೆ ಅಪ್ಪಣೆಕೊಟ್ಟು ಕಳುಹಿಸಿದನು; ಅವನು ಹೋಗಿ ಸೆರೆಮನೆಯಲ್ಲಿ ಅವನ ತಲೆಯನ್ನು ಹೊಯು
29. ಅವನ ಶಿಷ್ಯರು ಅದನ್ನು ಕೇಳಿದಾಗ ಬಂದು ಅವನ ಶವವನ್ನು ತಕ್ಕೊಂಡು ಸಮಾಧಿಯಲ್ಲಿ ಇಟ್ಟರು.
30. ಅಪೊಸ್ತಲರು ಯೇಸುವಿನ ಬಳಿಗೆ ಒಟ್ಟಾಗಿ ಕೂಡಿಬಂದು ತಾವು ಮಾಡಿದ್ದ ಮತ್ತು ಬೋಧಿಸಿದ್ದೆಲ್ಲ ವುಗಳನ್ನು ಆತನಿಗೆ ತಿಳಿಸಿದರು.
31. ಆಗ ಆತನು ಅವರಿಗೆ--ನೀವು ಮಾತ್ರ ವಿಂಗಡವಾಗಿ ಅರಣ್ಯ ಸ್ಥಳಕ್ಕೆ ಬಂದು ಸ್ವಲ್ಪ ಸಮಯ ವಿಶ್ರಮಿಸಿಕೊಳ್ಳಿರಿ ಅಂದನು. ಯಾಕಂದರೆ ಅಲ್ಲಿ ಅನೇಕರು ಬರುತ್ತಾ ಹೋಗುತ್ತಾ ಇದ್ದದರಿಂದ ಊಟಮಾಡುವದಕ್ಕೂ ಅವರಿಗೆ ಸಮಯವಿರಲಿಲ್ಲ.
32. ಆಗ ಅವರು ದೋಣಿ ಯಲ್ಲಿ ಏಕಾಂತವಾಗಿ ಅರಣ್ಯಸ್ಥಳಕ್ಕೆ ಹೊರಟು ಹೋದರು.
33. ಅವರು ಹೊರಡುವದನ್ನು ಜನರು ನೋಡಿ ಅನೇಕರು ಆತನ ಗುರುತು ಹಿಡಿದು ಎಲ್ಲಾ ಪಟ್ಟಣಗಳಿಂದ ಕಾಲುನಡಿಗೆಯಾಗಿ ಅಲ್ಲಿಗೆ ಓಡುತ್ತಾ ಅವರಿಗಿಂತಲೂ ಮುಂದಾಗಿ ಆತನ ಬಳಿಗೆ ಸೇರಿಬಂದರು.
34. ಯೇಸು ಹೊರಗೆ ಬಂದು ಬಹು ಜನರನ್ನು ನೋಡಿ ಅವರ ಮೇಲೆ ಕನಿಕರ ಪಟ್ಟನು; ಅವರು ಕುರುಬನಿಲ್ಲದ ಕುರಿಗಳಂತೆ ಇದ್ದರು; ಆತನು ಅವರಿಗೆ ಅನೇಕ ವಿಷಯಗಳನ್ನು ಬೋಧಿಸಲಾರಂಭಿಸಿದನು.
35. ಆಗಲೇ ಹಗಲು ಬಹಳ ಮಟ್ಟಿಗೆ ಕಳೆದದ್ದರಿಂದ ಆತನ ಶಿಷ್ಯರು ಆತನ ಬಳಿಗೆ ಬಂದು--ಇದು ಅರಣ್ಯ ಸ್ಥಳ ಮತ್ತು ಈಗ ಸಮಯವು ಬಹಳವಾಗಿ ದಾಟಿದೆ;
36. ಇವರು ಸುತ್ತ ಲಿನ ಸೀಮೆಗೂ ಹಳ್ಳಿಗಳಿಗೂ ಹೋಗಿ ತಮಗೋಸ್ಕರ ರೊಟ್ಟಿಯನ್ನು ಕೊಂಡುಕೊಳ್ಳುವಂತೆ ಅವರನ್ನು ಕಳುಹಿಸಿ ಬಿಡು; ಯಾಕಂದರೆ ಅವರಿಗೆ ತಿನ್ನುವದಕ್ಕೆ ಏನೂ ಇಲ್ಲ ಅಂದರು.
37. ಆತನು ಪ್ರತ್ಯುತ್ತರವಾಗಿ ಅವ ರಿಗೆ--ನೀವೇ ಅವರಿಗೆ ತಿನ್ನುವದಕ್ಕೆ ಕೊಡಿರಿ ಅಂದನು. ಅದಕ್ಕೆ ಅವರು ಆತನಿಗೆ--ನಾವು ಹೋಗಿ ಎರಡು ನೂರು ಹಣದ (ಪೆನ್ನಿ: ಇಂಗ್ಲೀಷ್‌ಹಣ) ರೊಟಿಯನ್ನು ಕೊಂಡುಕೊಂಡು ಅವರಿಗೆ ತಿನ್ನುವದಕ್ಕೆ ಕೊಡೋಣವೋ ಅಂದರು.
38. ಆತನು ಅವರಿಗೆ--ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿರಿ ಅನ್ನಲು ಅವರು ತಿಳಿದುಕೊಂಡು--ಐದು ರೊಟ್ಟಿ ಮತ್ತು ಎರಡು ವಿಾನುಗಳು ಇವೆ ಎಂದು ಹೇಳಿದರು.
39. ಆಗ ಎಲ್ಲರೂ ಹಸುರು ಹುಲ್ಲಿನ ಮೇಲೆ ಪಂಕ್ತಿ ಪಂಕ್ತಿಗಳಾಗಿ ಕೂತುಕೊಳ್ಳುವಂತೆ ಆತನು ಅವರಿಗೆ ಅಪ್ಪಣೆಕೊಟ್ಟನು.
40. ಅವರು ನೂರರಂತೆ ಐವತ್ತರಂತೆ ಸಾಲುಸಾಲಾಗಿ ಕೂತುಕೊಂಡರು.
41. ಆಗ ಆತನು ಐದು ರೊಟ್ಟಿ ಎರಡು ವಿಾನುಗಳನ್ನು ತಕ್ಕೊಂಡು ಪರಲೋಕದ ಕಡೆಗೆ ನೋಡಿ ಆಶೀರ್ವದಿಸಿ ಆ ರೊಟ್ಟಿಗಳನ್ನು ಮುರಿದು, ಅವರಿಗೆ ಹಂಚುವದಕ್ಕಾಗಿ ತನ್ನ ಶಿಷ್ಯರಿಗೆ ಕೊಟ್ಟನು; ಮತ್ತು ಎರಡು ವಿಾನುಗಳನ್ನು ಆತನು ಅವರೆಲ್ಲರಿಗೂ ಹಂಚಿದನು.
42. ಅವರೆಲ್ಲರೂ ತಿಂದು ತೃಪ್ತರಾದರು.
43. ಆಗ ಅವರು ಹನ್ನೆರಡು ಪುಟ್ಟಿಗಳಲ್ಲಿ ರೊಟ್ಟಿ ಮತ್ತು ವಿಾನಿನ ತುಂಡುಗಳನ್ನು ತುಂಬಿದರು.
44. ಆ ರೊಟ್ಟಿಗಳನ್ನು ತಿಂದವರು ಸುಮಾರು ಐದು ಸಾವಿರ ಗಂಡಸರು.
45. ಆತನು ಜನರನ್ನು ಕಳುಹಿಸುವಷ್ಟರಲ್ಲಿ ತನ್ನ ಶಿಷ್ಯರು ಕೂಡಲೆ ದೋಣಿಯನ್ನು ಹತ್ತಿ ಮುಂದಾಗಿ ಆಚೇ ಕಡೆಯ ಬೇತ್ಸಾಯಿದಕ್ಕೆ ಹೋಗುವಂತೆ ಅವರನ್ನು ಬಲವಂತ ಮಾಡಿದನು.
46. ಆತನು ಅವರನ್ನು ಕಳುಹಿಸಿದ ನಂತರ ಪ್ರಾರ್ಥನೆ ಮಾಡುವದಕ್ಕಾಗಿ ಬೆಟ್ಟಕ್ಕೆ ಹೊರಟು ಹೋದನು.
47. ಸಾಯಂಕಾಲವಾದಾಗ ದೋಣಿಯು ಸಮುದ್ರದ ಮಧ್ಯದಲ್ಲಿತ್ತು; ಆದರೆ ಆತನೊಬ್ಬನೇ ದಡದಲ್ಲಿದ್ದನು.
48. ಗಾಳಿಯು ಅವರಿಗೆ ಎದುರಾಗಿ ಇದ್ದದರಿಂದ ಅವರು ಕಷ್ಟಪಟ್ಟು ಹುಟ್ಟು ಹಾಕುತ್ತಿರು ವದನ್ನು ಆತನು ನೋಡಿ ಸುಮಾರು ರಾತ್ರಿಯ ನಾಲ್ಕನೇ ಜಾವದಲ್ಲಿ ಸಮುದ್ರದ ಮೇಲೆ ನಡೆಯುತ್ತಾ ಅವರ ಬಳಿಗೆ ಬಂದು ಅವರನ್ನು ದಾಟಿ ಹೋಗಬೇಕೆಂದಿದ್ದನು.
49. ಆದರೆ ಆತನು ಸಮುದ್ರದ ಮೇಲೆ ನಡೆಯುತ್ತಿರು ವದನ್ನು ಅವರು ನೋಡಿದಾಗ ಅದೊಂದು ಭೂತ ವೆಂದು ಭಾವಿಸಿ ಕೂಗಿಕೊಂಡರು.
50. ಯಾಕಂದರೆ ಅವರೆಲ್ಲರು ಆತನನ್ನು ನೋಡಿ ಕಳವಳಗೊಂಡರು. ಆತನು ಕೂಡಲೆ ಅವರ ಕೂಡ ಮಾತನಾಡಿ ಅವರಿಗೆ --ಧೈರ್ಯವಾಗಿರ್ರಿ, ನಾನೇ; ಅಂಜಬೇಡಿರಿ ಅಂದನು.
51. ಆತನು ದೋಣಿಯನ್ನು ಹತ್ತಿ ಅವರ ಬಳಿಗೆ ಬಂದನು; ಆಗ ಗಾಳಿಯು ನಿಂತಿತು; ಅವರು ಅತ್ಯಧಿಕವಾಗಿ ತಮ್ಮೊಳಗೆ ದಿಗ್ಭ್ರಮೆಯುಳ್ಳವರಾಗಿ ಆಶ್ಚರ್ಯಪಟ್ಟರು.
52. ಅವರ ಹೃದಯವು ಕಠಿಣವಾಗಿ ದ್ದದರಿಂದ ಅವರು ರೊಟ್ಟಿಗಳ ಅದ್ಭುತವನ್ನು ಗ್ರಹಿಸ ಲಿಲ್ಲ.
53. ಅವರು ದಾಟಿ ಗೆನೆಜರೇತ್‌ ದೇಶದ ದಡಕ್ಕೆ ಸೇರಿ ದರು.
54. ಅವರು ದೋಣಿಯಿಂದ ಇಳಿದು ಬಂದ ಕೂಡಲೆ ಜನರು ಆತನನ್ನು ಗುರುತಿಸಿ
55. ಸುತ್ತಲಿನ ಸೀಮೆಯಲ್ಲೆಲ್ಲಾ ಓಡಾಡಿ ಆತನು ಎಲ್ಲಿದ್ದಾನೆಂದು ಕೇಳಿ ಇದ್ದಲ್ಲಿಗೆ ಅಸ್ವಸ್ಥತೆಯುಳ್ಳವರನ್ನು ಹಾಸಿಗೆಗಳೊಂದಿಗೆ ಎತ್ತಿಕೊಂಡು ಹೋಗಲಾರಂಭಿಸಿದರು.
56. ತರುವಾಯ ಆತನು ಯಾವ ಯಾವ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ, ಸೀಮೆಯಲ್ಲಿ ಪ್ರವೇಶಿಸಿದನೋ ಅಲ್ಲೆಲ್ಲಾ ಅವರು ಅಸ್ವಸ್ಥ ವಾದವರನ್ನು ಬೀದಿಗಳಲ್ಲಿ ಮಲಗಿಸಿ ಆತನ ಉಡುಪಿನ ಅಂಚನ್ನಾದರೂ ಅವರು ಮುಟ್ಟಗೊಡಿಸಬೇಕೆಂದು ಆತನನ್ನು ಬೇಡಿಕೊಂಡರು; ಯಾರಾರು ಆತನನ್ನು ಮುಟ್ಟಿದರೋ ಅವರು ಸ್ವಸ

Chapter 7

1. ತರುವಾಯ ಫರಿಸಾಯರೂ ಶಾಸ್ತ್ರಿಗಳಲ್ಲಿ ಕೆಲವರೂ ಯೆರೂಸಲೇಮಿನಿಂದ ಆತನ ಬಳಿಗೆ ಕೂಡಿಬಂದರು.
2. ಆಗ ಆತನ ಶಿಷ್ಯರಲ್ಲಿ ಕೆಲವರು ಅಶುದ್ಧವಾದ ಅಂದರೆ ತೊಳೆಯದಿರುವ ಕೈಗಳಿಂದ ರೊಟ್ಟಿ ತಿನ್ನುವದನ್ನು ಅವರು ನೋಡಿ ತಪ್ಪು ಕಂಡು ಹಿಡಿದರು.
3. ಯಾಕಂದರೆ ಫರಿಸಾಯರು ಮತ್ತು ಯೆಹೂದ್ಯರೆಲ್ಲರು ಹಿರಿಯರ ಸಂಪ್ರದಾಯವನ್ನು ಅನುಸರಿಸುವವರಾಗಿ ತಮ್ಮ ಕೈಗಳನ್ನು ಅನೇಕ ಸಾರಿ ತೊಳೆದುಕೊಳ್ಳದ ಹೊರತು ಊಟಮಾಡುವದಿಲ್ಲ.
4. ಅವರು ಪೇಟೆಯಿಂದ ಬಂದಾಗ ಸ್ನಾನ ಮಾಡದೆ ಊಟಮಾಡುವದಿಲ್ಲ; ಮತ್ತು ಅವರು ಬಟ್ಟಲುಗಳನ್ನು ಪಾತ್ರೆಗಳನ್ನು ಹಿತ್ತಾಳೆಯ ಪಾತ್ರೆಗಳನ್ನು ಮೇಜುಗಳನ್ನು ತೊಳೆಯುವಂಥ ಅನೇಕ ಆಚಾರಗಳನ್ನು ಮಾಡಿಕೊಂಡಿ ದ್ದರು.
5. ತರುವಾಯ ಫರಿಸಾಯರೂ ಶಾಸ್ತ್ರಿಗಳೂ ಆತನಿಗೆ--ನಿನ್ನ ಶಿಷ್ಯರು ಹಿರಿಯರ ಸಂಪ್ರದಾಯದ ಪ್ರಕಾರ ಕೈತೊಳಕೊಳ್ಳದೆ ಯಾಕೆ ರೊಟ್ಟಿ ತಿನ್ನುತ್ತಾರೆ ಎಂದು ಕೇಳಿದರು.
6. ಆತನು ಪ್ರತ್ಯುತ್ತರವಾಗಿ ಅವರಿಗೆ --ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸು ತ್ತಾರೆ; ಆದರೆ ಅವರ ಹೃದಯವು ನನ್ನಿಂದ ದೂರ ವಾಗಿದೆ;
7. ಮನುಷ್ಯರ ಕಟ್ಟಳೆಗಳನ್ನು ಬೋಧನೆ ಗಳನ್ನಾಗಿ ಮಾಡಿ ಕಲಿಸುವದರಿಂದ ಅವರು ನನ್ನನ್ನು ಆರಾಧಿಸುವದು ವ್ಯರ್ಥವಾಗಿದೆ ಎಂದು ಬರೆಯಲ್ಪಟ್ಟ ಪ್ರಕಾರ ಕಪಟಿಗಳಾದ ನಿಮ್ಮ ವಿಷಯದಲ್ಲಿ ಯೆಶಾಯನು ವಿಹಿತವಾಗಿ ಪ್ರವಾದಿಸಿದ್ದಾನೆ.
8. ನೀವು ದೈವಾಜ್ಞೆ ಯನ್ನು ಬದಿಗೆ ಇಡುವದಕ್ಕಾಗಿ ಪಾತ್ರೆಗಳನ್ನು ಮತ್ತು ಬಟ್ಟಲುಗಳನ್ನು ತೊಳೆಯುವ ಮನುಷ್ಯರ ಅನೇಕ ಸಂಪ್ರದಾಯಗಳನ್ನು ಹಿಡಿದು ಅನುಸರಿಸುತ್ತೀರಿ ಅಂದನು.
9. ಆತನು ಅವರಿಗೆ--ನೀವು ನಿಮ್ಮ ಸಂಪ್ರ ದಾಯವನ್ನು ಕೈಕೊಳ್ಳುವಂತೆ ದೈವಾಜ್ಞೆಯನ್ನು ಸಂಪೂರ್ಣವಾಗಿ ಅಸಡ್ಡೆ ಮಾಡುತ್ತೀರಿ.
10. ಯಾಕಂದರೆ ಮೋಶೆಯು--ನಿನ್ನ ತಂದೆಯನ್ನು ನಿನ್ನ ತಾಯಿಯನ್ನು ಸನ್ಮಾನಿಸಬೇಕೆಂತಲೂ ಮತ್ತು--ತಂದೆಯನ್ನಾಗಲೀ ತಾಯಿಯನ್ನಾಗಲೀ ಶಪಿಸುವವನು ಸಾಯಲೇ ಬೇಕೆಂತಲೂ ಹೇಳಿದ್ದಾನೆ.
11. ಆದರೆ ನೀವು--ಒಬ್ಬ ಮನುಷ್ಯನು ತನ್ನ ತಂದೆಗಾಗಲೀ ಅಥವಾ ತಾಯಿ ಗಾಗಲೀ--ನೀನು ನನ್ನಿಂದ ಹೊಂದಲಿಕ್ಕಿರುವ ಪ್ರಯೋಜನವು ಕೊರ್ಬಾನ್‌ (ಅಂದರೆ ಒಂದು ದಾನ) ಆಗಿದೆ ಎಂದು ಹೇಳಿದರೆ ಅವನು ಸ್ವತಂತ್ರ ನಾಗುವನು ಎಂದು ಅನ್ನುತ್ತೀರಿ;
12. ಅವನು ತನ್ನ ತಂದೆಗಾದರೂ ತಾಯಿಗಾದರೂ ಏನನ್ನೂ ನೀವು ಮಾಡಗೊಡಿಸದೆ
13. ನೀವು ಕಲಿಸಿರುವ ನಿಮ್ಮ ಸಂಪ್ರದಾಯದ ಮೂಲಕ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ, ಇಂಥ ಅನೇಕವಾದವುಗಳನ್ನು ನೀವು ಮಾಡುತ್ತೀರಿ ಅಂದನು.
14. ಆಮೇಲೆ ಆತನು ಜನರನ್ನೆಲ್ಲಾ ತನ್ನ ಬಳಿಗೆ ಕರೆದು ಅವರಿಗೆ--ನಿಮ್ಮಲ್ಲಿ ಪ್ರತಿಯೊಬ್ಬನು ನಾನು ಹೇಳುವದನ್ನು ಕೇಳಿ ಗ್ರಹಿಸಿರಿ;
15. ಹೊರಗಿನಿಂದ ಮನುಷ್ಯನೊಳಗೆ ಸೇರಿ ಅವನನ್ನು ಹೊಲೆಮಾಡು ವಂಥದ್ದು ಯಾವದೂ ಇಲ್ಲ. ಆದರೆ ಅವನೊಳಗಿಂದ ಹೊರಗೆ ಬರುವಂಥವುಗಳೇ ಮನುಷ್ಯನನ್ನು ಹೊಲೆ ಮಾಡುವವುಗಳಾಗಿವೆ.
16. ಯಾವನಿಗಾದರೂ ಕೇಳು ವದಕ್ಕೆ ಕಿವಿಗಳಿದ್ದರೆ ಅವನು ಕೇಳಲಿ ಅಂದನು.
17. ಆತನು ಜನರನ್ನು ಬಿಟ್ಟು ಮನೆಯೊಳಗೆ ಬಂದ ಮೇಲೆ ಆತನ ಶಿಷ್ಯರು ಆ ಸಾಮ್ಯದ ವಿಷಯವಾಗಿ ಆತನನ್ನು ಕೇಳಿದರು.
18. ಆಗ ಆತನು ಅವರಿಗೆ-- ನೀವು ಸಹ ಗ್ರಹಿಕೆ ಇಲ್ಲದವರಾಗಿದ್ದೀರಾ? ಹೊರಗಿ ನಿಂದ ಮನುಷ್ಯನೊಳಗೆ ಸೇರುವಂಥದ್ದು ಯಾವದೂ ಅವನನ್ನು ಹೊಲೆಮಾಡಲಾರದು ಎಂದು ನೀವು ತಿಳಿದುಕೊಳ್ಳುವದಿಲ್ಲವೋ?
19. ಯಾಕಂದರೆ ಅದು ಅವನ ಹೃದಯದೊಳಗೆ ಸೇರದೆ ಹೊಟ್ಟೆಯೊಳಗೆ ಸೇರಿ ಎಲ್ಲಾ ಆಹಾರ ಪದಾರ್ಥಗಳನ್ನು ಶುದ್ಧಮಾಡುತ್ತಾ ಬಹಿರ್ಭೂಮಿಗೆ ಹೋಗುತ್ತದೆ ಅಂದನು.
20. ಮತ್ತು ಆತನು--ಮನುಷ್ಯನೊಳಗಿಂದ ಹೊರಡುವಂಥದ್ದೇ ಮನುಷ್ಯನನ್ನು ಹೊಲೆಮಾಡುತ್ತದೆ.
21. ಯಾಕಂದರೆ ಮನುಷ್ಯರ ಹೃದಯದೊಳಗಿಂದ ಹೊರಡುವಂಥದ್ದು ಅಂದರೆ ಕೆಟ್ಟಆಲೋಚನೆಗಳು ವ್ಯಭಿಚಾರಗಳು ಹಾದರಗಳು ಕೊಲೆಗಳು
22. ಕಳ್ಳತನಗಳು ದುರಾಶೆ ಕೆಟ್ಟತನ ಮೋಸ ಕಾಮಾಭಿಲಾಷೆ ಕೆಟ್ಟದೃಷಿ ದೇವದೂಷಣೆ ಗರ್ವ ಬುದ್ಧಿಗೇಡಿತನ
23. ಈ ಎಲ್ಲಾ ಕೆಟ್ಟವುಗಳು ಒಳಗಿನಿಂದ ಬಂದು ಮನುಷ್ಯನನ್ನು ಹೊಲೆ ಮಾಡುತ್ತವೆ ಅಂದನು.
24. ಅಲ್ಲಿಂದ ಆತನು ಎದ್ದು ತೂರ್‌ ಸೀದೋನ್‌ ಮೇರೆಗಳಿಗೆ ಹೋಗಿ ಒಂದು ಮನೆಯೊಳಗೆ ಬಂದನು. ಮತ್ತು ಅದು ಯಾರಿಗೂ ಗೊತ್ತಾಗಬಾರದೆಂದು ಆತನು ಇಷ್ಟಪಟ್ಟನು; ಆದರೆ ಆತನು ಮರೆಯಾಗಿರಲಾರದೆ ಹೋದನು.
25. ಯಾಕಂದರೆ ಒಬ್ಬ ಸ್ತ್ರೀಯು ಆತನ ವಿಷಯವಾಗಿ ಕೇಳಿ ಅಲ್ಲಿಗೆ ಬಂದು ಆತನ ಪಾದಗಳಿಗೆ ಬಿದ್ದಳು. ಯಾಕಂದರೆ ಆಕೆಯ ಮಗಳಿಗೆ ಅಶುದ್ಧಾತ್ಮ ಹಿಡಿದಿತ್ತು.
26. ಆ ಸ್ತ್ರೀಯು ಸುರೋಪೊಯಿನಿಕ ಜನಾಂ ಗದವಳಾದ ಒಬ್ಬ ಗ್ರೀಕಳು. ಆಕೆಯು ತನ್ನ ಮಗಳನ್ನು ಹಿಡಿದ ದೆವ್ವವನ್ನು ಬಿಡಿಸಬೇಕೆಂದು ಆತನನ್ನು ಬೇಡಿ ಕೊಂಡಳು.
27. ಆದರೆ ಯೇಸು ಆಕೆಗೆ--ಮಕ್ಕಳಿಗೆ ಮೊದಲು ತೃಪ್ತಿಯಾಗಲಿ; ಯಾಕಂದರೆ ಮಕ್ಕಳ ರೊಟ್ಟಿ ಯನ್ನು ತೆಗೆದುಕೊಂಡು ನಾಯಿಗಳಿಗೆ ಹಾಕುವದು ಸರಿಯಲ್ಲ ಎಂದು ಹೇಳಿದನು.
28. ಆಕೆಯು ಪ್ರತ್ಯುತ್ತರ ವಾಗಿ ಆತನಿಗೆ--ಹೌದು, ಕರ್ತನೇ; ಆದರೂ ಮೇಜಿನ ಕೆಳಗೆ ಮಕ್ಕಳ ರೊಟ್ಟಿಯ ತುಂಡುಗಳನ್ನು ನಾಯಿಗಳು ತಿನ್ನುತ್ತವೆ ಅಂದಳು.
29. ಆತನು ಅವಳಿಗೆ --ಈ ಮಾತಿನ ದೆಸೆಯಿಂದ ದೆವ್ವವು ನಿನ್ನ ಮಗಳನ್ನು ಬಿಟ್ಟು ಹೋಗಿದೆ, ನೀನು ಹೋಗು ಅಂದನು.
30. ಆಕೆಯು ತನ್ನ ಮನೆಗೆ ಬಂದಾಗ ದೆವ್ವವು ಹೊರಟು ಹೋದದ್ದನ್ನೂ ತನ್ನ ಮಗಳು ಹಾಸಿಗೆಯ ಮೇಲೆ ಮಲಗಿದ್ದನ್ನೂ ಕಂಡಳು.
31. ತಿರಿಗಿ ಆತನು ತೂರ್‌ ಸೀದೋನ್‌ ತೀರಗಳಿಂದ ಹೊರಟು ದೆಕಪೊಲಿಯ ತೀರಗಳ ಮಧ್ಯದಿಂದ ಗಲಿ ಲಾಯ ಸಮುದ್ರಕ್ಕೆ ಬಂದನು.
32. ಆಗ ಅವರು ತೊದಲು ಮಾತನಾಡುವ ಒಬ್ಬ ಕಿವುಡನನ್ನು ಆತನ ಬಳಿಗೆ ತಂದು ಆತನು ತನ್ನ ಕೈಯನ್ನು ಅವನ ಮೇಲೆ ಇಡಬೇಕೆಂದು ಆತನನ್ನು ಬೇಡಿಕೊಂಡರು.
33. ಆತನು ಅವನನ್ನು ಜನಸಮೂಹದಿಂದ ಆಚೆಗೆ ಕರಕೊಂಡು ಹೋಗಿ ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿಟ್ಟು ಉಗುಳಿ ಅವನ ನಾಲಿಗೆಯನ್ನು ಮುಟ್ಟಿದನು;
34. ಮತ್ತು ಆತನು ಪರಲೋಕದ ಕಡೆಗೆ ನೋಡುತ್ತಾ ನಿಟ್ಟುಸಿರುಬಿಟ್ಟು ಅವನಿಗೆ--ಎಪ್ಫಥಾ ಅಂದನು. ಅಂದರೆ ತೆರೆಯಲ್ಪಡಲಿ ಎಂದರ್ಥ.
35. ಕೂಡಲೆ ಅವನ ಕಿವಿಗಳು ತೆರೆಯಲ್ಪಟ್ಟವು; ಅವನ ನಾಲಿಗೆಯ ನರವು ಸಡಿಲ ವಾಯಿತು; ಮತ್ತು ಅವನು ಸ್ಪಷ್ಟವಾಗಿ ಮಾತನಾಡಿ ದನು.
36. ಯಾವ ಮನುಷ್ಯನಿಗೂ ಇದನ್ನು ಹೇಳಬಾರ ದೆಂದು ಆತನು ಅವರಿಗೆ ಖಂಡಿತವಾಗಿ ಹೇಳಿದನು; ಆದರೆ ಎಷ್ಟು ಖಂಡಿತವಾಗಿ ಹೇಳಿದರೂ ಅವರು ಅದನ್ನು ಮತ್ತಷ್ಟು ಹೆಚ್ಚಾಗಿ ಪ್ರಚಾರ ಮಾಡಿದರು.
37. ಜನರು ಅತ್ಯಂತಾಶ್ಚರ್ಯಪಟ್ಟು-- ಆತನು ಎಲ್ಲವುಗಳನ್ನು ಚೆನ್ನಾಗಿ ಮಾಡಿದ್ದಾನೆ; ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡಿದ್ದಾನೆ ಎಂದು ಅಂದುಕೊಂಡರು.

Chapter 8

1. ಆ ದಿವಸಗಳಲ್ಲಿ (ಯೇಸುವನ್ನು ಹಿಂಬಾಲಿಸುತ್ತಿದ್ದ) ದೊಡ್ಡ ಜನಸಮೂಹಕ್ಕೆ ಊಟಕ್ಕೇನೂ ಇರಲಿಲ್ಲ. ಆಗ ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ--
2. ಜನ ಸಮೂಹವನ್ನು ನಾನು ಕನಿಕರಿಸುತ್ತೇನೆ; ಯಾಕಂದರೆ ಮೂರು ದಿನ ಗಳಿಂದ ಇವರು ನನ್ನೊಂದಿಗಿದ್ದಾರೆ ಮತ್ತು ಅವರಿಗೆ ಊಟಕ್ಕೇನೂ ಇಲ್ಲ.
3. ನಾನು ಅವರನ್ನು ಉಪವಾಸ ವಾಗಿ ಅವರ ಮನೆಗಳಿಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಹೋಗುವರು; ಯಾಕಂದರೆ ಅವರಲ್ಲಿ ಕೆಲ ವರು ದೂರದಿಂದ ಬಂದಿದ್ದಾರೆ ಅಂದನು.
4. ಅದಕ್ಕೆ ಆತನ ಶಿಷ್ಯರು ಪ್ರತ್ಯುತ್ತರವಾಗಿ ಆತನಿಗೆ-- ಒಬ್ಬನು ಈ ಅಡವಿಯಲ್ಲಿ ರೊಟ್ಟಿಯಿಂದ ಈ ಜನರನ್ನು ಎಲ್ಲಿಂದ ತೃಪ್ತಿಪಡಿಸಾನು ಅಂದರು.
5. ಆತನು ಅವರಿಗೆ--ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ ಎಂದು ಕೇಳಿದ್ದಕ್ಕೆ ಅವರು --ಏಳು ರೊಟ್ಟಿಗಳು ಇವೆ ಅಂದರು.
6. ಆಗ ಜನರು ನೆಲದ ಮೇಲೆ ಕೂತುಕೊಳ್ಳುವಂತೆ ಆತನು ಅಪ್ಪಣೆ ಕೊಟ್ಟು ಆ ಏಳು ರೊಟ್ಟಿಗಳನ್ನು ತಕ್ಕೊಂಡು ಸ್ತೋತ್ರ ಮಾಡಿ ಮುರಿದು ಜನರಿಗೆ ಹಂಚುವದಕ್ಕಾಗಿ ತನ್ನ ಶಿಷ್ಯರಿಗೆ ಕೊಟ್ಟನು; ಅವರು ಜನರಿಗೆ ಹಂಚಿದರು.
7. ಇದಲ್ಲದೆ ಅವರಲ್ಲಿ ಕೆಲವು ಸಣ್ಣ ವಿಾನುಗಳಿದ್ದವು; ಆತನು ಅವುಗಳನ್ನೂ ಆಶೀರ್ವದಿಸಿ ಅವರಿಗೆ ಹಂಚು ವಂತೆ ಆಜ್ಞಾಪಿಸಿದನು.
8. ಅವರೆಲ್ಲರೂ ತಿಂದು ತೃಪ್ತರಾ ದರು; ಮುರಿದ ಮಿಕ್ಕತುಂಡುಗಳನ್ನು ಅವರು ಏಳು ಪುಟ್ಟಿ ತುಂಬಿದರು.
9. ಊಟಮಾಡಿದವರು ಸುಮಾರು ನಾಲ್ಕು ಸಾವಿರ ಮಂದಿ; ಆತನು ಅವರನ್ನು ಕಳುಹಿಸಿ ಬಿಟ್ಟನು.
10. ಕೂಡಲೆ ಆತನು ತನ್ನ ಶಿಷ್ಯರೊಂದಿಗೆ ಒಂದು ದೋಣಿಯನ್ನು ಹತ್ತಿದಲ್ಮನೂಥ ಭಾಗಗಳಿಗೆ ಬಂದನು.
11. ಆಗ ಫರಿಸಾಯರು ಬಂದು ಆತನನ್ನು ಶೋಧಿಸು ವದಕ್ಕಾಗಿ ಆಕಾಶದಲ್ಲಿ ತಮಗೆ ಒಂದು ಸೂಚಕ ಕಾರ್ಯವನ್ನು ಮಾಡಬೇಕೆಂದು ಕೇಳಿ ಆತನೊಂದಿಗೆ ತರ್ಕಿಸುವದಕ್ಕೆ ಆರಂಭಿಸಿದರು.
12. ಆತನು ತನ್ನ ಆತ್ಮದಲ್ಲಿ ದೀರ್ಘವಾಗಿ ನಿಟ್ಟುಸಿರುಬಿಟ್ಟು--ಈ ಸಂತ ತಿಯು ಸೂಚಕಕಾರ್ಯವನ್ನು ಹುಡುಕುವದು ಯಾಕೆ? ಈ ಸಂತತಿಗೆ ಯಾವ ಸೂಚಕಕಾರ್ಯವೂ ಕೊಡಲ್ಪಡು ವದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
13. ಆತನು ಅವರನ್ನು ಬಿಟ್ಟು ತಿರಿಗಿ ದೋಣಿಯನ್ನು ಹತ್ತಿ ಆಚೇದಡಕ್ಕೆ ಹೊರಟು ಹೋದನು.
14. ಆಗ ಶಿಷ್ಯರು ರೊಟ್ಟಿಯನ್ನು ತಕ್ಕೊಳ್ಳುವದಕ್ಕೆ ಮರೆತಿದ್ದರು; ಇದಲ್ಲದೆ ದೋಣಿಯಲ್ಲಿ ಅವರಿಗೆ ಒಂದು ರೊಟ್ಟಿಗಿಂತ ಹೆಚ್ಚೇನೂ ಇರಲಿಲ್ಲ.
15. ಆತನು ಅವರಿಗೆ--ಫರಿಸಾಯರ ಹುಳಿಯ ವಿಷಯ ದಲ್ಲಿಯೂ ಹೆರೋದನ ಹುಳಿಯ ವಿಷಯದಲ್ಲಿಯೂ ನೀವು ಎಚ್ಚರಿಕೆಯಿಂದ ಇರ್ರಿ ಎಂದು ಖಂಡಿತವಾಗಿ ಹೇಳಿದನು.
16. ಆಗ ಅವರು ತಮ್ಮೊಳಗೆ--ನಮಗೆ ರೊಟ್ಟಿ ಇಲ್ಲದಿರುವದರಿಂದಲೇ ಹೀಗೆ ಹೇಳುತ್ತಾನೆಂದು ಅವರು ತರ್ಕಿಸಿಕೊಂಡರು.
17. ಯೇಸು ಅದನ್ನು ತಿಳಿದುಕೊಂಡು ಅವರಿಗೆ ಹೇಳಿದ್ದೇನಂದರೆನಿಮ್ಮಲ್ಲಿ ರೊಟ್ಟಿ ಇಲ್ಲವೆಂದು ಯಾಕೆ ತರ್ಕಿಸಿಕೊಳ್ಳುತ್ತೀರಿ? ನೀವು ಇನ್ನೂ ಗ್ರಹಿಸದೆಯೂ ತಿಳಿದುಕೊಳ್ಳದೆಯೂ ಇದ್ದೀರೋ? ನೀವು ನಿಮ್ಮ ಹೃದಯವನ್ನು ಇನ್ನೂ ಕಠಿಣಮಾಡಿಕೊಂಡಿದ್ದಿರೋ?
18. ಕಣ್ಣುಗಳಿದ್ದೂ ನೀವು ನೋಡುವದಿಲ್ಲವೋ? ಕಿವಿಗಳಿದ್ದೂ ನೀವು ಕೆಳುವ ದಿಲ್ಲವೋ? ಮತ್ತು ನೀವು ಜ್ಞಾಪಕಮಾಡಿಕೊಳ್ಳುವದಿ ಲ್ಲವೋ?
19. ನಾನು ಆ ಐದು ರೊಟ್ಟಿಗಳನ್ನು ಐದು ಸಾವಿರ ಜನರ ಮಧ್ಯದಲ್ಲಿ ಮುರಿದಾಗ ಎಷ್ಟು ಪುಟ್ಟಿಗಳ ತುಂಬ ರೊಟ್ಟಿಯ ತುಂಡುಗಳನ್ನು ಎತ್ತಿದಿರಿ ಎಂದು ಕೇಳಲು ಅವರು ಆತನಿಗೆ--ಹನ್ನೆರಡು ಅಂದರು.
20. ಮತ್ತು ಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರ ಮಧ್ಯದಲ್ಲಿ ಮುರಿದಾಗ ಎಷ್ಟು ಪುಟ್ಟಿಗಳ ತುಂಬ ತುಂಡುಗಳನ್ನು ಎತ್ತಿದಿರಿ ಎಂದು ಕೇಳಲು ಅವರು--ಏಳು ಅಂದರು.
21. ಯೇಸು ಅವರಿಗೆ--ಹಾಗಾದರೆ ನೀವು ಗ್ರಹಿಸದೆ ಇರುವದು ಹೇಗೆ ಎಂದು ಹೇಳಿದನು.
22. ತರುವಾಯ ಆತನು ಬೇತ್ಸಾಯಿದಕ್ಕೆ ಬಂದಾಗ ಅವರು ಒಬ್ಬ ಕುರುಡನನ್ನು ಆತನ ಬಳಿಗೆ ತಂದು ಅವನನ್ನು ಮುಟ್ಟಬೇಕೆಂದು ಆತನನ್ನು ಬೇಡಿಕೊಂಡರು.
23. ಆತನು ಆ ಕುರುಡನ ಕೈಹಿಡಿದು ಊರಿನ ಹೊರಗೆ ಕರಕೊಂಡು ಹೋಗಿ ಅವನ ಕಣ್ಣುಗಳ ಮೇಲೆ ಉಗುಳಿ ತನ್ನ ಕೈಗಳನ್ನು ಅವನ ಮೇಲೆ ಇಟ್ಟು ಏನಾದರೂ ಕಾಣುತ್ತದೋ ಎಂದು ಅವನನ್ನು ಕೇಳಿದನು.
24. ಅವನು ಮೇಲಕ್ಕೆ ನೋಡಿ--ಮನುಷ್ಯರು ಮರಗಳ ಹಾಗೆ ನಡೆದಾಡುವದನ್ನು ನೋಡುತ್ತೇನೆ ಅಂದನು.
25. ತರುವಾಯ ಆತನು ತಿರಿಗಿ ಅವನ ಕಣ್ಣುಗಳ ಮೇಲೆ ತನ್ನ ಕೈಗಳನ್ನಿಟ್ಟು ಅವನು ಮೇಲಕ್ಕೆ ನೋಡುವಂತೆ ಮಾಡಿದನು; ಆಗ ಅವನು ಗುಣಹೊಂದಿದವನಾಗಿ ಪ್ರತಿ ಮನುಷ್ಯನನ್ನು ಸ್ಪಷ್ಟವಾಗಿ ನೋಡಿದನು.
26. ತರುವಾಯ ಆತನು ಅವನಿಗೆ--ನೀನು ಊರೊಳಕ್ಕೆ ಹೋಗಬೇಡ ಇಲ್ಲವೆ ಊರಲ್ಲಿ ಯಾರಿಗೂ ಹೇಳಬೇಡ ಎಂದು ಹೇಳಿ ಅವನನ್ನು ಅವನ ಮನೆಗೆ ಕಳುಹಿಸಿ ಬಿಟ್ಟನು.
27. ತರುವಾಯ ಯೇಸುವೂ ಆತನ ಶಿಷ್ಯರೂ ಕೈಸ ರೈಯ ಫಿಲಿಪ್ಪಿ ಊರುಗಳಿಗೆ ಹೋದರು. ಆತನು ದಾರಿ ಯಲ್ಲಿ ತನ್ನ ಶಿಷ್ಯರಿಗೆ--ನಾನು ಯಾರೆಂದು ಜನರು ಅನ್ನುತ್ತಾರೆ ಎಂದು ಕೇಳಿದನು.
28. ಅವರು ಪ್ರತ್ಯುತ್ತರ ವಾಗಿ--ಬಾಪ್ತಿಸ್ಮ ಮಾಡಿಸುವ ಯೋಹಾನನು; ಮತ್ತೆ ಕೆಲವರು--ಎಲೀಯನು; ಇನ್ನು ಕೆಲವರು--ಪ್ರವಾದಿ ಗಳಲ್ಲಿ ಒಬ್ಬನು ಅನ್ನುತ್ತಾರೆ ಎಂದು ಹೇಳಿದರು.
29. ಅದಕ್ಕೆ ಆತನು ಅವರಿಗೆ -- ಆದರೆ ನಾನು ಯಾರೆಂದು ನೀವು ಅನ್ನುತ್ತೀರಿ ಎಂದು ಕೇಳಲು ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ--ನೀನು ಕ್ರಿಸ್ತನೇ ಅಂದನು.
30. ತನ್ನ ವಿಷಯ ವಾಗಿ ಅವರು ಯಾರಿಗೂ ಹೇಳಬಾರದೆಂದು ಆತನು ಅವರಿಗೆ ಖಂಡಿತವಾಗಿ ಹೇಳಿದನು.
31. ಮನುಷ್ಯ ಕುಮಾರನು ಅನೇಕ ಶ್ರಮೆಗಳನ್ನು ಅನುಭವಿಸಿ ಹಿರಿಯ ರಿಂದಲೂ ಪ್ರಧಾನ ಯಾಜಕರಿಂದಲೂ ಶಾಸ್ತ್ರಿಗಳಿಂ ದಲೂ ತಿರಸ್ಕರಿಸಲ್ಪಟ್ಟವನಾಗಿ ಕೊಲ್ಲಲ್ಪಟ್ಟು ಮೂರು ದಿವಸಗಳಾದ ಮೇಲೆ ಏಳುವದು ಅವಶ್ಯವೆಂದು ಅವ ರಿಗೆ ಬೋಧಿಸಲಾರಂಭಿಸಿದನು.
32. ಆತನು ಆ ಮಾತನ್ನು ಸ್ಪಷ್ಟವಾಗಿ ಹೇಳಿದ್ದರಿಂದ ಪೇತ್ರನು ಆತನ ಕೈ ಹಿಡಿದು ಆತನನ್ನು ಗದರಿಸಲಾರಂಭಿಸಿದನು.
33. ಆದರೆ ಆತನು ತಿರುಗಿಕೊಂಡು ತನ್ನ ಶಿಷ್ಯರ ಕಡೆಗೆ ನೋಡಿ ಪೇತ್ರನನ್ನು ಗದರಿಸಿ--ಸೈತಾನನೇ ನನ್ನ ಹಿಂದೆ ಹೋಗು; ಯಾಕಂದರೆ ನೀನು ಯೋಚಿಸುವಂಥದ್ದು ದೇವರವುಗಳಲ್ಲ, ಆದರೆ ಮನುಷ್ಯರವುಗಳೇ ಎಂದು ಹೇಳಿದನು.
34. ಆತನು ಜನರನ್ನು ತನ್ನ ಶಿಷ್ಯರ ಕೂಡ ತನ್ನ ಬಳಿಗೆ ಕರೆದು ಅವರಿಗೆ--ಯಾವನಾದರೂ ನನ್ನ ಹಿಂದೆ ಬರುವದಾದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿ ಸಲಿ.
35. ಯಾಕಂದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳ ಬೇಕೆಂದಿರುವ ಯಾವನಾದರೂ ಅದನ್ನು ಕಳಕೊಳ್ಳು ವನು; ಆದರೆ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಯಾವನು ತನ್ನ ಪ್ರಾಣವನ್ನು ಕಳ ಕೊಳ್ಳುವನೋ ಅವನು ಅದನ್ನು ಉಳಿಸಿಕೊಳ್ಳುವನು.
36. ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿ ಕೊಂಡರೂ ತನ್ನ ಸ್ವಂತ ಆತ್ಮವನ್ನು ನಷ್ಟಪಡಿಸಿಕೊಂಡರೆ ಅವನಿಗೆ ಲಾಭವೇನು?
37. ಇಲ್ಲವೆ ಒಬ್ಬನು ತನ್ನ ಆತ್ಮಕ್ಕೆ ಬದಲಾಗಿ ಏನು ಕೊಡುವನು?
38. ಆದದರಿಂದ ಯಾವನಾದರೂ ವ್ಯಭಿಚಾರಿಣಿಯಾದ ಈ ಪಾಪಿಷ್ಠ ಸಂತತಿಯಲ್ಲಿ ನನ್ನ ಮತ್ತು ನನ್ನ ಮಾತುಗಳ ವಿಷಯ ವಾಗಿ ನಾಚಿಕೊಳ್ಳುವನೋ ಅವನ ವಿಷಯದಲ್ಲಿ ಮನುಷ್ಯಕುಮಾರನು ಸಹ ತನ್ನ ತಂದೆಯ ಮಹಿಮೆ ಯಲ್ಲಿ ಪರಿಶುದ್ಧ ದೂತರೊಡನೆ ಬರುವಾಗ ನಾಚಿ ಕೊಳ್ಳುವನು ಎಂದು ಹೇಳಿದನು.

Chapter 9

1. ಆತನು ಅವರಿಗೆ--ಇಲ್ಲಿ ನಿಂತವರಲ್ಲಿ ಕೆಲವರು ದೇವರ ರಾಜ್ಯವು ಬಲದೊಂದಿಗೆ ಬರುವದನ್ನು ನೋಡುವವರೆಗೆ ಮರಣದ ರುಚಿಯನ್ನು ನೋಡುವದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
2. ಯೇಸು ಆರು ದಿವಸಗಳಾದ ಮೇಲೆ ಪೇತ್ರ ಯಾಕೋಬ ಮತ್ತು ಯೋಹಾನರನ್ನು ತನ್ನೊಂದಿಗೆ ಕರೆದುಕೊಂಡು ಏಕಾಂತವಾಗಿ ಒಂದು ಎತ್ತರವಾದ ಬೆಟ್ಟಕ್ಕೆ ಹೋದನು; ಆಗ ಆತನು ಅವರ ಮುಂದೆ ರೂಪಾಂತರಗೊಂಡನು.
3. ಮತ್ತು ಆತನ ಉಡುಪು ಭೂಮಿಯ ಮೇಲಿರುವ ಯಾವ ಅಗಸನೂ ಬಿಳುಪು ಮಾಡಲಾರದಷು ಹಿಮದಂತೆ ಹೆಚ್ಚು ಬೆಳ್ಳಗಾಗಿ ಹೊಳೆಯುತ್ತಿತ್ತು.
4. ಆಗ ಅಲ್ಲಿ ಎಲೀಯನು ಮೋಶೆ ಯೊಂದಿಗೆ ಅವರಿಗೆ ಕಾಣಿಸಿಕೊಂಡು ಯೇಸುವಿನೊ ಂದಿಗೆ ಮಾತನಾಡುತ್ತಿದ್ದರು.
5. ಆಗ ಪೇತ್ರನು ಯೇಸು ವಿಗೆ-- ಬೋಧಕನೇ, ನಾವು ಇಲ್ಲೆ ಇರುವದು ನಮಗೆ ಒಳ್ಳೇದು; ನಿನಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದು ಮೂರು ಗುಡಾರಗಳನ್ನು ನಾವು ಕಟ್ಟುವೆವು ಎಂದು ಹೇಳಿದನು.
6. ಅವನು ಏನು ಮಾತನಾಡಬೇಕೋ ಅವನಿಗೆ ತಿಳಿದಿರಲಿಲ್ಲ; ಯಾಕಂ ದರೆ ಅವರು ಬಹಳವಾಗಿ ಹೆದರಿದ್ದರು.
7. ಆಗ ಅಲ್ಲಿ ಮೋಡವು ಅವರ ಮೇಲೆ ಕವಿದುಕೊಂಡಿತು; ಮತ್ತು --ಈತನು ಪ್ರಿಯನಾಗಿರುವ ನನ್ನ ಮಗನು; ಈತನ ಮಾತನ್ನು ಕೇಳಿರಿ ಎಂದು ಹೇಳಿದ ಧ್ವನಿಯು ಮೋಡದೊಳಗಿಂದ ಬಂತು.
8. ಕೂಡಲೆ ಅವರು ಸುತ್ತಲೂ ನೋಡಲಾಗಿ ತಮ್ಮೊಂದಿಗೆ ಯೇಸುವನ್ನು ಹೊರತು ಇನ್ನಾರನ್ನೂ ನೋಡಲಿಲ್ಲ.
9. ಅವರು ಬೆಟ್ಟದಿಂದಿಳಿದು ಬರುವಾಗ ಮನುಷ್ಯ ಕುಮಾರನು ಸತ್ತವರೊಳಗಿಂದ ಎದ್ದು ಬರುವ ವರೆಗೆ ತಾವು ಕಂಡವುಗಳನ್ನು ಯಾರಿಗೂ ಹೇಳಬಾರದೆಂದು ಆತನು ಅವರಿಗೆ ಖಂಡಿತವಾಗಿ ಹೇಳಿದನು.
10. ಮತ್ತು ಸತ್ತವರೊಳಗಿಂದ ಎದ್ದು ಬರುವದರ ಅರ್ಥವೇನೆಂದು ಅವರು ಒಬ್ಬರಿಗೊಬ್ಬರು ಪ್ರಶ್ನಿಸಿಕೊಳ್ಳುತ್ತಾ ಆ ಮಾತನ್ನು ತಮ್ಮೊಳಗೆ ಇಟ್ಟುಕೊಂಡರು.
11. ಇದಲ್ಲದೆ ಅವರು ಆತನಿಗೆ--ಎಲೀಯನು ಮೊದಲು ಬರುವದು ಅಗತ್ಯವೆಂದು ಶಾಸ್ತ್ರಿಗಳು ಯಾಕೆ ಹೇಳುತ್ತಾರೆ ಎಂದು ಕೇಳಿದರು.
12. ಆತನು ಅವರಿಗೆ ಪ್ರತ್ಯುತ್ತರವಾಗಿ-- ನಿಜವಾಗಿಯೂ ಎಲೀಯನು ಮೊದಲು ಬಂದು ಎಲ್ಲವುಗಳನ್ನು ಯಥಾಸ್ಥಾನಪಡಿಸುತ್ತಾನೆ; ಆದರೆ ಮನುಷ್ಯಕುಮಾರನು ಬಹಳ ಶ್ರಮೆಗಳನ್ನನುಭವಿ ಸುವದು ಮತ್ತು ತಿರಸ್ಕರಿಸಲ್ಪಡುವದು ಅಗತ್ಯವೆಂದು ಆತನ ವಿಷಯವಾಗಿ ಬರೆದಿರುವದು ಹೇಗೆ?
13. ಆದರೆ ನಾನು ನಿಮಗೆ ಹೇಳುವದೇನಂದರೆ-- ಎಲೀಯನು ನಿಜವಾಗಿಯೂ ಬಂದನು. ಅವನ ವಿಷಯವಾಗಿ ಬರೆದಿರುವಂತೆ ಅವರು ತಮ್ಮ ಮನಸ್ಸಿಗೆ ಬಂದ ಹಾಗೆ ಅವನಿಗೆ ಮಾಡಿದರು ಅಂದನು.
14. ಆತನು ತನ್ನ ಶಿಷ್ಯರ ಬಳಿಗೆ ಬಂದಾಗ ಅವರ ಸುತ್ತಲೂ ದೊಡ್ಡ ಸಮೂಹವನ್ನೂ ಶಾಸ್ತ್ರಿಗಳು ಅವರೊಂದಿಗೆ ತರ್ಕಿಸುತ್ತಿರುವದನ್ನೂ ಕಂಡನು.
15. ಕೂಡಲೆ ಜನರೆಲ್ಲರೂ ಆತನನ್ನು ನೋಡಿ ಬಹು ಆಶ್ಚರ್ಯಪಟ್ಟು ಓಡುತ್ತಾ ಬಂದು ಆತನನ್ನು ವಂದಿಸಿ ದರು.
16. ಆಗ ಆತನು ಶಾಸ್ತ್ರಿಗಳಿಗೆ-- ಅವರೊಂದಿಗೆ ನೀವು ಏನು ತರ್ಕಮಾಡುತ್ತೀರಿ ಎಂದು ಕೇಳಿದನು.
17. ಆಗ ಸಮೂಹದಲ್ಲಿ ಒಬ್ಬನು ಪ್ರತ್ಯುತ್ತರವಾಗಿ--ಬೋಧಕನೇ, ಮೂಕದೆವ್ವ ಹಿಡಿದ ನನ್ನ ಮಗನನ್ನು ನಿನ್ನ ಬಳಿಗೆ ತಕ್ಕೊಂಡು ಬಂದೆನು.
18. ಅದು ಅವನನ್ನು ತೆಗೆದುಕೊಂಡು ಹೋದಲ್ಲೆಲ್ಲಾ ಅವನನ್ನು ಒದ್ದಾಡಿಸುತ್ತದೆ; ಮತ್ತು ಅವನು ನೊರೆ ಸುರಿಸುತ್ತಾ ತನ್ನ ಹಲ್ಲು ಕಡಿಯುತ್ತಾ ಕುಂದಿ ಹೋಗುತ್ತಾನೆ; ಅದನ್ನು (ದೆವ್ವವನ್ನು) ಬಿಡಿಸಬೇಕೆಂದು ನಾನು ನಿನ ಶಿಷ್ಯರಿಗೆ ಹೇಳಿದೆನು; ಆದರೆ ಅವರಿಂದ ಆಗಲಿಲ್ಲ ಎಂದು ಹೇಳಿದನು.
19. ಅದಕ್ಕಾತನು--ಓ ನಂಬಿಕೆ ಯಿಲ್ಲದ ಸಂತಾನವೇ, ಎಷ್ಟು ಕಾಲ ನಾನು ನಿಮ್ಮೊಂ ದಿಗೆ ಇರಲಿ? ಎಷ್ಟು ಕಾಲ ನಾನು ನಿಮ್ಮನ್ನು ಸಹಿಸಲಿ? ಅವನನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಎಂದು ಹೇಳಿದನು.
20. ಆಗ ಅವರು ಅವನನ್ನು ಆತನ ಬಳಿಗೆ ತಂದರು; ಅವನು ಆತನನ್ನು ನೋಡಿದ ತಕ್ಷಣವೇ ಆ ಆತ್ಮವು ಅವನನ್ನು ಒದ್ದಾಡಿಸಿದ್ದರಿಂದ ಅವನು ನೆಲಕ್ಕೆ ಬಿದ್ದು ನೊರೆ ಸುರಿಸುತ್ತಾ ಹೊರಳಾಡಿದನು.
21. ಆತನು ಅವನ ತಂದೆಗೆ--ಇದು ಅವನನ್ನು ಹಿಡಿದು ಎಷ್ಟು ಕಾಲವಾಯಿತು ಎಂದು ಕೇಳಲು ಅವನು-- ಬಾಲ್ಯದಿಂದಲೇ;
22. ಅದು ಅವನನ್ನು ನಾಶಪಡಿಸಲು ಅನೇಕ ಸಾರಿ ಬೆಂಕಿಯೊಳಗೂ ನೀರಿನೊಳಗೂ ಹಾಕಿತು; ಆದರೆ ನೀನು ಏನಾದರೂ ಮಾಡಲು ಸಾಧ್ಯ ವಿದ್ದರೆ ನಮ್ಮ ಮೇಲೆ ಕರುಣೆಯಿಟ್ಟು ನಮಗೆ ಸಹಾಯ ಮಾಡು ಅಂದನು.
23. ಆಗ ಯೇಸು ಅವನಿಗೆ--ನೀನು ನಂಬುವದಾದರೆ ಆಗುವದು; ನಂಬುವವನಿಗೆ ಎಲ್ಲವು ಸಾಧ್ಯವೇ ಎಂದು ಹೇಳಿದನು.
24. ತಕ್ಷಣವೇ ಮಗುವಿನ ತಂದೆಯು--ಕರ್ತನೇ, ನಾನು ನಂಬು ತ್ತೇನೆ; ನನಗೆ ಅಪನಂಬಿಕೆ ಇಲ್ಲದಂತೆ ನೀನು ಸಹಾಯ ಮಾಡು ಎಂದು ಕಣ್ಣೀರಿನಿಂದ ಕೂಗಿ ಹೇಳಿದನು.
25. ಆಗ ಜನರು ಕೂಡಿಕೊಂಡು ಓಡಿ ಬರುವದನ್ನು ಯೇಸು ನೋಡಿ ಆ ಅಶುದ್ಧಾತ್ಮವನ್ನು ಗದರಿಸಿ ಅದಕ್ಕೆ --ಮೂಕ ಮತ್ತು ಕಿವುಡಾದ ಆತ್ಮವೇ, ನೀನು ಅವನೊಳಗಿಂದ ಹೊರಗೆ ಬಾ; ಇನ್ನೆಂದಿಗೂ ಅವ ನೊಳಗೆ ಸೇರದಿರು ಎಂದು ನಾನು ನಿನಗೆ ಖಂಡಿತವಾಗಿ ಹೇಳುತ್ತೇನೆ ಅಂದನು.
26. ಆಗ ಅದು ಕೂಗಿ ಅವನನ್ನು ಬಹಳವಾಗಿ ಒದ್ದಾಡಿಸಿ ಅವನೊಳಗಿಂದ ಹೊರಗೆ ಬಂತು; ಮತ್ತು ಅವನು ಸತ್ತವನ ಹಾಗೆ ಬಿದ್ದದರಿಂದ ಅನೇಕರು--ಅವನು ಸತ್ತಿದ್ದಾನೆ ಅಂದರು.
27. ಆದರೆ ಯೇಸು ಕೈ ಹಿಡಿದು ಅವನನ್ನು ಮೇಲಕ್ಕೆತ್ತಲು ಅವನು ಎದ್ದನು.
28. ಆತನು ಮನೆಯೊಳಕ್ಕೆ ಬಂದಾಗ ಆತನ ಶಿಷ್ಯರು ಆತನಿಗೆ ಪ್ರತ್ಯೇಕವಾಗಿ--ಆ ಅಶುದ್ಧಾತ್ಮವನ್ನು ಹೊರಗೆ ಹಾಕುವದಕ್ಕೆ ನಮ್ಮಿಂದ ಯಾಕೆ ಆಗಲಿಲ್ಲ ಎಂದು ಕೇಳಿದರು.
29. ಆತನು ಅವರಿಗೆ--ಈ ತರವಾ ದದ್ದು ಪ್ರಾರ್ಥನೆ ಉಪವಾಸಗಳಿಂದ ಹೊರತು ಬೇರೆ ಯಾವದರಿಂದಲೂ ಹೊರಗೆ ಬರಲಾರದು ಅಂದನು.
30. ಅವರು ಅಲ್ಲಿಂದ ಹೊರಟು ಗಲಿಲಾಯವನ್ನು ಹಾದುಹೋಗುತ್ತಿದ್ದರು. ಇದು ಯಾರಿಗೂ ತಿಳಿಯಬಾರದೆಂದು ಆತನಿಗೆ ಮನಸ್ಸಿತ್ತು.
31. ಯಾಕಂದರೆ ಆತನು ತನ್ನ ಶಿಷ್ಯರಿಗೆ ಬೋಧಿಸುತ್ತಾ-- ಮನುಷ್ಯ ಕುಮಾರನು ಮನುಷ್ಯರ ಕೈಗಳಿಗೆ ಒಪ್ಪಿಸಲ್ಪಡುತ್ತಾನೆ; ಅವರು ಆತನನ್ನು ಕೊಲ್ಲುವರು; ಆತನು ಕೊಲ್ಲಲ್ಪಟ್ಟ ತರುವಾಯ ಮೂರನೆಯ ದಿನದಲ್ಲಿ ಏಳುವನು ಅಂದನು.
32. ಆದರೆ ಅವರು ಆ ಮಾತನ್ನು ಗ್ರಹಿಸ ಲಿಲ್ಲ, ಮತ್ತು ಆತನನ್ನು ಕೇಳುವದಕ್ಕೂ ಭಯಪಟ್ಟರು.
33. ಆತನು ಕಪೆರ್ನೌಮಿಗೆ ಬಂದು ಮನೆಯಲ್ಲಿದ್ದಾಗ ಅವರಿಗೆ--ದಾರಿಯಲ್ಲಿ ನಿಮ್ಮೊಳಗೆ ನೀವು ಏನು ವಾಗ್ವಾದ ಮಾಡಿದಿರಿ ಎಂದು ಕೇಳಿದನು.
34. ಆದರೆ ಅವರು ಸುಮ್ಮನಿದ್ದರು; ಯಾಕಂದರೆ ಅವರು ತಮ್ಮೊಳಗೆ ಯಾವನು ಅತಿ ದೊಡ್ಡವನಾಗಿರಬೇಕೆಂದು ದಾರಿ ಯಲ್ಲಿ ವಾಗ್ವಾದ ಮಾಡಿದ್ದರು.
35. ಆಗ ಆತನು ಕೂತುಕೊಂಡು ಹನ್ನೆರಡು ಮಂದಿಯನ್ನು ಕರೆದು ಅವರಿಗೆ--ಯಾವನಾದರೂ ಮೊದಲಿನವನಾಗಬೇ ಕೆಂದು ಇಷ್ಟಪಟ್ಟರೆ ಅವನು ಎಲ್ಲರಿಗಿಂತ ಕಡೆಯ ವನೂ ಎಲ್ಲರ ಸೇವಕನೂ ಆಗಿರಬೇಕು ಅಂದನು.
36. ಆತನು ಒಂದು ಮಗುವನ್ನು ತಕ್ಕೊಂಡು ಅದನ್ನು ಅವರ ಮಧ್ಯದಲ್ಲಿ ನಿಲ್ಲಿಸಿ ತನ್ನ ಕೈಗಳಲ್ಲಿ ಅದನ್ನು ಎತ್ತಿಕೊಂಡು ಅವರಿಗೆ--
37. ಯಾವನಾದರೂ ಇಂಥ ಮಕ್ಕಳಲ್ಲಿ ಒಂದನ್ನು ನನ್ನ ಹೆಸರಿನಲ್ಲಿ ಅಂಗೀಕರಿಸಿದರೆ ನನ್ನನ್ನು ಅಂಗೀಕರಿಸುತ್ತಾನೆ; ಮತ್ತು ಯಾವನು ನನ್ನನ್ನು ಅಂಗೀಕರಿಸುವನೋ ಅವನು ನನ್ನನ್ನಲ್ಲದೆ ನನ್ನನ್ನು ಕಳುಹಿಸಿದಾತನನ್ನೇ ಅಂಗೀಕರಿಸುತ್ತಾನೆ ಅಂದನು.
38. ಯೋಹಾನನು ಆತನಿಗೆ -- ಬೋಧಕನೇ, ನಮ್ಮನ್ನು ಹಿಂಬಾಲಿಸದವನೊಬ್ಬನು ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವದನ್ನು ನಾವು ನೋಡಿ ಅವನು ನಮ್ಮನ್ನು ಹಿಂಬಾಲಿಸುವವನಲ್ಲವಾದ್ದರಿಂದ ನಾವು ಅವನಿಗೆ ಅಡ್ಡಿಮಾಡಿದೆವು ಎಂದು ಹೇಳಿದನು.
39. ಆದರೆ ಯೇಸು--ಅವನಿಗೆ ಅಡ್ಡಿಮಾಡಬೇಡಿರಿ; ಯಾಕಂದರೆ ನನ್ನ ಹೆಸರಿನಲ್ಲಿ ಅದ್ಭುತಕಾರ್ಯವನ್ನು ಮಾಡಿ ನನ್ನ ವಿಷಯದಲ್ಲಿ ಹಗುರಾಗಿ ಕೆಟ್ಟದ್ದನ್ನು ಮಾತನಾಡುವ ಒಬ್ಬನಾದರೂ ಇಲ್ಲ.
40. ಯಾಕಂದರೆ ನಮಗೆ ವಿರೋಧಿಯಾಗಿರದವನು ನಮ್ಮ ಪಕ್ಷದವ ನಾಗಿದ್ದಾನೆ.
41. ಇದಲ್ಲದೆ ನೀವು ಕ್ರಿಸ್ತನಿಗೆ ಸೇರಿದವ ರಾದದರಿಂದ ಯಾವನಾದರೂ ನನ್ನ ಹೆಸರಿನಲ್ಲಿ ನಿಮಗೆ ಒಂದು ತಂಬಿಗೆ ನೀರನ್ನು ಕೊಟ್ಟರೆ ಅವನು ತನ್ನ ಪ್ರತಿ ಫಲವನ್ನು ಕಳಕೊಳ್ಳುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
42. ನನ್ನನ್ನು ನಂಬುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಅಡ್ಡಿಯಾದರೆ ಅವನ ಕೊರಳಿಗೆ ಬೀಸುವ ಕಲ್ಲನ್ನು ತೂಗಹಾಕಿ ಅವ ನನ್ನು ಸಮುದ್ರದಲ್ಲಿ ಬಿಸಾಡಿಬಿಡುವದು ಅವನಿಗೆ ಒಳ್ಳೇದು.
43. ನಿನ್ನ ಕೈ ನಿನಗೆ ಅಭ್ಯಂತರ ಮಾಡಿದರೆ ಅದನ್ನು ಕಡಿದುಹಾಕು; ಯಾಕಂದರೆ ಎರಡು ಕೈಗಳು ಳ್ಳವನಾಗಿ ಎಂದಿಗೂ ಆರದ ಬೆಂಕಿಯ ನರಕದೊಳಗೆ ಹೋಗುವದಕ್ಕಿಂತ ಅಂಗಹೀನನಾಗಿ ಜೀವದಲ್ಲಿ ಸೇರು ವದು ನಿನಗೆ ಒಳ್ಳೇದು;
44. ಅಲ್ಲಿ ಅವರ ಹುಳವು ಸಾಯುವದಿಲ್ಲ ಮತ್ತು ಬೆಂಕಿಯು ಆರುವದಿಲ್ಲ.
45. ನಿನ್ನ ಕಾಲು ನಿನಗೆ ಅಭ್ಯಂತರ ಮಾಡಿದರೆ ಅದನ್ನು ಕಡಿದು ಹಾಕು; ಯಾಕಂದರೆ ನೀನು ಎರಡು ಕಾಲುಗಳುಳ್ಳವ ನಾಗಿ ಎಂದಿಗೂ ಆರದ ಬೆಂಕಿಯ ನರಕದೊಳಗೆ ಹಾಕ ಲ್ಪಡುವದಕ್ಕಿಂತ ಕುಂಟನಾಗಿ ಜೀವದಲ್ಲಿ ಸೇರುವದು ನಿನಗೆ ಒಳ್ಳೇದು.
46. ಅಲ್ಲಿ ಅವರ ಹುಳವು ಸಾಯುವ ದಿಲ್ಲ ಮತ್ತು ಬೆಂಕಿಯು ಆರುವದಿಲ್ಲ.
47. ನಿನ್ನ ಕಣ್ಣು ನಿನಗೆ ಅಭ್ಯಂತರ ಮಾಡಿದರೆ ಅದನ್ನು ಕಿತ್ತುಬಿಡು; ಎರಡು ಕಣ್ಣುಗಳುಳ್ಳವನಾಗಿ ನರಕದ ಬೆಂಕಿಯಲ್ಲಿ ಹಾಕ ಲ್ಪಡುವದಕ್ಕಿಂತ ಒಂದು ಕಣ್ಣುಳ್ಳವನಾಗಿ ದೇವರ ರಾಜ್ಯ ದಲ್ಲಿ ಸೇರುವದು ನಿನಗೆ ಒಳ್ಳೇದು.
48. ಅಲ್ಲಿ ಅವರ ಹುಳವು ಸಾಯುವದಿಲ್ಲ ಮತ್ತು ಬೆಂಕಿಯು ಆರುವದಿಲ್ಲ.
49. ಯಾಕಂದರೆ ಪ್ರತಿಯೊಬ್ಬನಿಗೂ ಬೆಂಕಿಯಿಂದ ಸಾರವಾಗಬೇಕು; ಮತ್ತು ಪ್ರತಿಯೊಂದು ಯಜ್ಞಕ್ಕೆ ಉಪ್ಪಿ ನಿಂದ ಸಾರವಾಗಬೇಕು.
50. ಉಪ್ಪು ಒಳ್ಳೆಯದು; ಆದರೆ ಉಪ್ಪು ತನ್ನ ಸಾರವನ್ನು ಕಳೆದುಕೊಂಡರೆ ಇನ್ನಾತರಿಂದ ನೀವು ಅದನ್ನು ರುಚಿಗೊಳಿಸುವಿರಿ? ನಿಮ್ಮೊಳಗೆ ಉಪ್ಪು ಇರಲಿ; ಮತ್ತು ಒಬ್ಬರ ಸಂಗಡಲೊಬ್ಬರು ಸಮಾಧಾನ ವಾಗಿರ್ರಿ ಅಂದನು.

Chapter 10

1. ಅಲ್ಲಿಂದ ಆತನು ಎದ್ದು ಯೊರ್ದನಿಗೆ ಆಚೆ ಕಡೆಗಿರುವ ಯೂದಾಯದ ಮೇರೆ ಗಳಿಗೆ ಬಂದನು; ಜನರು ತಿರಿಗಿ ಆತನ ಬಳಿಗೆ ಕೂಡಿ ಬರಲು ಆತನು ತನ್ನ ವಾಡಿಕೆಯಂತೆ ಅವರಿಗೆ ಮತ್ತೆ ಬೋಧಿಸಿದನು.
2. ಆಗ ಫರಿಸಾಯರು ಆತನ ಬಳಿಗೆ ಬಂದು ಆತನನ್ನು ಶೋಧಿಸುವದಕ್ಕಾಗಿ ಆತನಿಗೆ--ಒಬ್ಬ ಮನುಷ್ಯನು ತನ್ನ ಹೆಂಡತಿಯನ್ನು ಬಿಟ್ಟು ಬಿಡುವದು ನ್ಯಾಯವೋ ಎಂದು ಕೇಳಿದರು.
3. ಆತನು ಪ್ರತ್ಯುತ್ತರವಾಗಿ ಅವರಿಗೆ--ಮೋಶೆಯು ನಿಮಗೆ ಏನು ಅಪ್ಪಣೆ ಕೊಟ್ಟನು ಎಂದು ಕೇಳಿದನು.
4. ಅದಕ್ಕೆ ಅವರು--ತ್ಯಾಗಪತ್ರವನ್ನು ಬರೆದುಕೊಟ್ಟು ಆಕೆಯನ್ನು ಬಿಟ್ಟುಬಿಡಬೇಕೆಂದು ಮೋಶೆಯು ಅಪ್ಪಣೆಕೊಟ್ಟನು ಅಂದರು.
5. ಯೇಸು ಪ್ರತ್ಯುತ್ತರವಾಗಿ ಅವರಿಗೆ--ಅವನು ನಿಮ್ಮ ಹೃದಯದ ಕಾಠಿಣ್ಯದ ನಿಮಿತ್ತವಾಗಿ ನಿಮಗೆ ಈ ಆಜ್ಞೆಯನ್ನು ಬರೆದನು.
6. ಆದರೆ ಸೃಷ್ಟಿಯ ಪ್ರಾರಂಭದಿಂದಲೇ ದೇವರು ಅವರನ್ನು ಗಂಡು ಹೆಣ್ಣಾಗಿ ಮಾಡಿದನು.
7. ಈ ಕಾರಣದಿಂದ ಒಬ್ಬ ಮನುಷ್ಯನು ತನ್ನ ತಂದೆಯನ್ನೂ ತಾಯಿಯನ್ನೂ ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು.
8. ಅವರಿಬ್ಬರು ಒಂದೇ ಶರೀರವಾಗಿರುವರು; ಹೀಗೆ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ.
9. ಆದದರಿಂದ ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸದಿರಲಿ ಅಂದನು.
10. ಆತನ ಶಿಷ್ಯರು ಮನೆಯಲ್ಲಿ ಅದೇ ವಿಷಯವನ್ನು ಆತನಿಗೆ ತಿರಿಗಿ ಕೇಳಿದರು.
11. ಅದಕ್ಕೆ ಆತನು ಅವರಿಗೆ-- ಯಾವನಾದರೂ ತನ್ನ ಹೆಂಡತಿ ಯನ್ನು ಬಿಟ್ಟು ಬಿಟ್ಟು ಇನ್ನೊಬ್ಬಳನ್ನು ಮದುವೆಯಾದರೆ ಅವಳಿಗೆ ವಿರೋಧವಾಗಿ ವ್ಯಭಿಚಾರ ಮಾಡುವವನಾಗಿ ದ್ದಾನೆ.
12. ಇದಲ್ಲದೆ ಒಬ್ಬ ಸ್ತ್ರೀಯು ತನ್ನ ಗಂಡನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾದರೆ ಅವಳು ವ್ಯಭಿಚಾರ ಮಾಡುವವಳಾಗಿದ್ದಾಳೆ ಅಂದನು.
13. ಆಗ ಕೆಲವರು ಚಿಕ್ಕ ಮಕ್ಕಳನ್ನು ಆತನು ಮುಟ್ಟಬೇಕೆಂದು ಆತನ ಬಳಿಗೆ ಅವುಗಳನ್ನು ತಂದರು; ಆದರೆ ಆತನ ಶಿಷ್ಯರು ತಂದವರನ್ನು ಗದರಿಸಿದರು.
14. ಆದರೆ ಯೇಸು ಅದನ್ನು ನೋಡಿದಾಗ ಬಹಳವಾಗಿ ಕೋಪಗೊಂಡು ಅವರಿಗೆ--ಚಿಕ್ಕಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡ ಬೇಡಿರಿ; ಯಾಕಂದರೆ ದೇವರ ರಾಜ್ಯವು ಇಂಥವರದೇ ಅಂದನು.
15. ನಾನು ನಿಮಗೆ ನಿಜವಾಗಿ ಹೇಳುವದೇ ನಂದರೆ--ಯಾವನಾದರೂ ಚಿಕ್ಕ ಮಗುವಿನಂತೆ ದೇವರ ರಾಜ್ಯವನ್ನು ಅಂಗೀಕರಿಸದಿದ್ದರೆ ಅವನು ಅದರೊಳಗೆ ಪ್ರವೇಶಿಸುವದಿಲ್ಲ.
16. ಇದಲ್ಲದೆ ಆತನು ಆ ಮಕ್ಕಳನ್ನು ಎತ್ತಿಕೊಂಡು ತನ್ನ ಕೈಗಳನ್ನು ಅವುಗಳ ಮೇಲೆ ಇಟ್ಟು ಆಶೀರ್ವದಿಸಿದನು.
17. ಆತನು ದಾರಿಯಲ್ಲಿ ಮುಂದಕ್ಕೆ ಹೋದಾಗ ಒಬ್ಬನು ಓಡುತ್ತಾ ಬಂದು ಆತನ ಮುಂದೆ ಮೊಣಕಾಲೂರಿ--ಒಳ್ಳೇ ಬೋಧಕನೇ, ನಾನು ನಿತ್ಯಜೀವ ವನ್ನು ಬಾಧ್ಯವಾಗಿ ಹೊಂದುವಂತೆ ಏನು ಮಾಡಬೇಕು ಎಂದು ಆತನನ್ನು ಕೇಳಿದನು.
18. ಯೇಸು ಅವನಿಗೆ --ನೀನು ನನ್ನನ್ನು ಒಳ್ಳೆಯವನೆಂದು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವ ನಲ್ಲ.
19. ವ್ಯಭಿಚಾರ ಮಾಡಬಾರದು, ಕೊಲ್ಲಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ಮೋಸ ಮಾಡಬಾರದು, ನಿನ್ನ ತಂದೆಯನ್ನೂ ತಾಯಿಯನ್ನೂ ಸನ್ಮಾನಿಸಬೇಕು ಎಂಬ ಈ ಆಜ್ಞೆಗಳು ನಿನಗೆ ಗೊತ್ತಿವೆ ಯಲ್ಲಾ ಅಂದನು.
20. ಆಗ ಅವನು ಪ್ರತ್ಯುತ್ತರವಾಗಿ ಆತನಿಗೆ--ಬೋಧಕನೇ, ನಾನು ಇವೆಲ್ಲವುಗಳನ್ನು ನನ್ನ ಬಾಲ್ಯದಿಂದಲೇ ಅನುಸರಿಸಿದ್ದೇನೆ ಅಂದನು.
21. ಆಗ ಯೇಸು ಅವನನ್ನು ದೃಷ್ಟಿಸಿ ನೋಡುತ್ತಾ ಅವನನ್ನು ಪ್ರೀತಿಸಿ ಅವನಿಗೆ--ನಿನಗೆ ಒಂದು ಕಡಿಮೆ ಇದೆ; ನೀನು ಹೊರಟುಹೋಗಿ ನಿನಗಿರುವದನ್ನೆಲ್ಲಾ ಮಾರಿ ಬಡವರಿಗೆ ಕೊಡು; ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ಮತ್ತು ನೀನು ಬಂದು ಶಿಲುಬೆಯನ್ನು ತಕ್ಕೊಂಡು ನನ್ನನ್ನು ಹಿಂಬಾಲಿಸು ಅಂದ
22. ಆ ಮಾತಿಗೆ ಅವನು ವ್ಯಸನಗೊಂಡು ದುಃಖದಿಂದ ಹೊರಟುಹೋದನು; ಯಾಕಂದರೆ ಅವನಿಗೆ ಬಹಳ ಆಸ್ತಿಯಿತ್ತು.
23. ಆಗ ಯೇಸು ಸುತ್ತಲೂ ನೋಡಿ ತನ್ನ ಶಿಷರಿಗೆ --ಐಶ್ವರ್ಯವುಳ್ಳವರು ದೇವರ ರಾಜ್ಯದಲ್ಲಿ ಸೇರುವದು ಎಷ್ಟೋ ಕಷ್ಟ ಅಂದನು.
24. ಆಗ ಶಿಷ್ಯರು ಆತನ ಮಾತುಗಳಿಗೆ ಬೆರಗಾದರು; ಆದರೆ ಯೇಸು ತಿರಿಗಿ ಉತ್ತರಕೊಟ್ಟು ಅವರಿಗೆ-- ಮಕ್ಕಳಿರಾ, ಐಶ್ವರ್ಯದಲ್ಲಿ ನಂಬಿಕೆ ಇಟ್ಟವರು ದೇವರ ರಾಜ್ಯದಲ್ಲಿ ಪ್ರವೇಶಿಸುವದು ಎಷ್ಟೋ ಕಷ್ಟ.
25. ಒಬ್ಬ ಐಶ್ವರ್ಯವಂತನು ದೇವರ ರಾಜ್ಯದೊಳಗೆ ಸೇರುವದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವದು ಸುಲಭ ಅಂದನು.
26. ಅದಕ್ಕೆ ಅವರು ಮಿತಿವಿಾರಿ ಆಶ್ಚರ್ಯಪಟ್ಟು ತಮ್ಮೊಳಗೆ--ಹಾಗಾದರೆ ರಕ್ಷಿಸಲ್ಪಡುವದು ಯಾರಿಗೆ ಸಾಧ್ಯ ಎಂದು ಅಂದು ಕೊಂಡರು.
27. ಆಗ ಯೇಸು ಅವರನ್ನು ದೃಷ್ಟಿಸುತ್ತಾ--ಮನುಷ್ಯರಿಗೆ ಇದು ಅಸಾಧ್ಯವಾಗಿದೆ; ಆದರೆ ದೇವರಿಗೆ ಅಲ್ಲ; ಯಾಕಂದರೆ ದೇವರಿಗೆ ಎಲ್ಲವೂ ಸಾಧ್ಯವಾಗಿವೆ ಅಂದನು.
28. ತರುವಾಯ ಪೇತ್ರನು ಆತನಿಗೆ-- ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ ಎಂದು ಹೇಳಲಾರಂಭಿಸಿದನು.
29. ಅದಕ್ಕೆ ಯೇಸು ಪ್ರತ್ಯುತ್ತರವಾಗಿ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ; ಯಾವನಾದರೂ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಮನೆಯನ್ನಾಗಲೀ ಸಹೋದರರನ್ನಾಗಲೀ ಸಹೋದರಿಯರನ್ನಾಗಲೀ ತಂದೆಯನ್ನಾಗಲೀ ತಾಯಿಯನ್ನಾಗಲೀ ಹೆಂಡತಿಯನ್ನಾಗಲೀ ಮಕ್ಕಳನ್ನಾಗಲೀ ಭೂಮಿಯ ನ್ನಾಗಲೀ ಬಿಟು
30. ಅವನು ಈಗಿನ ಕಾಲದಲ್ಲಿ ಹಿಂಸೆಗಳ ಸಹಿತವಾಗಿ ನೂರರಷ್ಟು ಮನೆಗಳನ್ನೂ ಸಹೋದರರನ್ನೂ ಸಹೋದರಿಯರನ್ನೂ ತಾಯಂದಿ ರನ್ನೂ ಮಕ್ಕಳನ್ನೂ ಭೂಮಿಯನ್ನೂ ಹೊಂದುವದಲ್ಲದೆ ಬರುವ ಲೋಕದಲ್ಲಿ ನಿತ್ಯ ಜೀವವನ್ನು ಹೊಂದುವನು.
31. ಆದರೆ ಮೊದಲಿನವರಾದ ಅನೇಕರು ಕಡೆಯವ ರಾಗುವರು ಮತ್ತು ಕಡೆಯವರಾದವರು ಮೊದಲಿನ ವರಾಗುವರು ಅಂದನು.
32. ಆಗ ಅವರು ಯೆರೂಸಲೇಮಿಗೆ ಹೋಗುವ ದಾರಿಯಲ್ಲಿದ್ದರು; ಮತ್ತು ಯೇಸು ಅವರ ಮುಂದಾಗಿ ಹೋದದ್ದರಿಂದ ಅವರು ಆಶ್ಚರ್ಯಪಟ್ಟರು; ಮತ್ತು ಆತನನ್ನು ಹಿಂಬಾಲಿಸುತ್ತಿದ್ದಾಗ ಭಯಪಟ್ಟರು. ಆತನು ತನ್ನ ಹನ್ನೆರಡು ಮಂದಿಯನ್ನು ತಿರಿಗಿ ಕರೆದು ತನಗೆ ಸಂಭವಿಸುವವುಗಳು ಯಾವವೆಂದು ಅವರಿ
33. ಇಗೋ, ನಾವು ಯೆರೂಸಲೇ ಮಿಗೆ ಹೋಗುತ್ತೇವೆ; ಮತ್ತು ಮನುಷ್ಯಕುಮಾರನು ಪ್ರಧಾನಯಾಜಕರಿಗೂ ಶಾಸ್ತ್ರಿಗಳಿಗೂ ಒಪ್ಪಿಸಲ್ಪಡು ವನು; ಅವರು ಆತನಿಗೆ ಮರಣದಂಡನೆಯನ್ನು ವಿಧಿಸಿ ಆತನನ್ನು ಅನ್ಯಜನಗಳಿಗೆ ಒಪ್ಪಿಸುವರು.
34. ಮತ್ತು ಅವರು ಆತನನ್ನು ಹಾಸ್ಯ ಮಾಡಿ ಕೊರಡೆಯಿಂದ ಹೊಡೆದು ಆತನ ಮೇಲೆ ಉಗುಳಿ ಆತನನ್ನು ಕೊಲ್ಲುವರು; ಮತ್ತು ಮೂರನೇ ದಿನದಲ್ಲಿ ಆತನು ತಿರಿಗಿ ಏಳುವನು ಅಂದನು.
35. ಆಗ ಜೆಬೆದಾಯನ ಮಕ್ಕಳಾದ ಯಾಕೋಬ ಯೋಹಾನರು ಆತನ ಬಳಿಗೆ ಬಂದು--ಬೋಧಕನೇ, ನಾವು ಅಪೇಕ್ಷಿಸುವದನ್ನು ನೀನು ನಮಗೋಸ್ಕರ ಮಾಡಬೇಕೆಂದು ನಾವು ಬಯಸುತ್ತೇವೆ ಅಂದರು.
36. ಅದಕ್ಕೆ ಆತನು ಅವರಿಗೆ--ನಾನು ನಿಮಗೆ ಏನು ಮಾಡಬೇಕೆಂದು ಅಪೇಕ್ಷಿಸುತ್ತೀರಿ ಎಂದು ಕೇಳಲು
37. ಅವರು ಆತನಿಗೆ--ನಾವು ನಿನ್ನ ಮಹಿಮೆಯಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕೂತುಕೊಳ್ಳುವಂತೆ ನಮಗೆ ಅನುಗ್ರಹಿಸು ಅಂದರು.
38. ಆದರೆ ಯೇಸು ಅವರಿಗೆ -- ನೀವು ಏನು ಬೇಡಿಕೊಳ್ಳುತ್ತೀರೋ ನಿಮಗೆ ತಿಳಿಯದು; ನಾನು ಕುಡಿಯುವ ಪಾತ್ರೆಯಲ್ಲಿ ನೀವು ಕುಡಿಯುವಿರೋ? ಮತ್ತು ನಾನು ಹೊಂದುವ ಬಾಪ್ತಿಸ್ಮವನ್ನು ನೀವು ಹೊಂದುವಿರೋ ಅಂದನು.
39. ಅದಕ್ಕೆ ಅವರು ಆತನಿಗೆ--ನಮ್ಮಿಂದಾಗುವದು ಅಂದರು. ಆದರೆ ಯೇಸು ಅವರಿಗೆ--ನಾನು ಕುಡಿ ಯುವ ಪಾತ್ರೆಯಲ್ಲಿ ನೀವು ನಿಜವಾಗಿಯೂ ಕುಡಿಯು ವಿರಿ; ಮತ್ತು ನಾನು ಹೊಂದುವ ಬಾಪ್ತಿಸ್ಮದಿಂದ ನೀವು ಬಾಪ್ತಿಸ್ಮ ಹೊಂದುವಿರಿ.
40. ಆದರೆ ನನ್ನ ಬಲಗಡೆಯಲ್ಲಿ ಮತ್ತು ನನ್ನ ಎಡಗಡೆಯಲ್ಲಿ ಕೂತು ಕೊಳ್ಳುವಂತೆ ಅನುಗ್ರಹ ಮಾಡುವದು ನನ್ನದಲ್ಲ; ಅದು ಯಾರಿ ಗೋಸ್ಕರ ಸಿದ್ಧಮಾಡಲ್ಪಟ್ಟಿದೆಯೋ ಅವರಿಗೆ ಕೊಡ ಲ್ಪಡುವದು ಅಂದನು.
41. ಆ ಹತ್ತು ಮಂದಿಯು ಅದನ್ನು ಕೇಳಿದಾಗ ಯಾಕೋಬ ಯೋಹಾನರ ಮೇಲೆ ಅವರು ಬಹಳವಾಗಿ ಕೋಪಗೊಳ್ಳಲಾರಂಭಿಸಿದರು.
42. ಆದರೆ ಯೇಸು ಅವರನ್ನು ತನ್ನ ಹತ್ತಿರಕ್ಕೆ ಕರೆದು ಅವರಿಗೆ--ಅನ್ಯಜನಗಳನ್ನು ಆಳುವದಕ್ಕೆ ನೇಮಿಸಲ್ಪ ಟ್ಟವರು ಅವರ ಮೇಲೆ ದೊರೆತನ ಮಾಡುತ್ತಾರೆ; ಮತ್ತು ಅವರಲ್ಲಿ ದೊಡ್ಡ ವರು ಅವರ ಮೇಲೆ ಅಧಿಕಾರ ಮಾಡುತ್ತಾರೆಂದು ನೀವು ಬಲ್ಲಿರಿ.
43. ಆದರೆ ನಿಮ್ಮೊಳಗೆ ಹಾಗಿರಬಾರದು; ಮತ್ತು ನಿಮ್ಮೊಳಗೆ ದೊಡ್ಡವನಾಗಿರ ಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು.
44. ನಿಮ್ಮಲ್ಲಿ ಮುಖ್ಯಸ್ಥನಾಗಬೇಕೆಂದಿರುವವನು ಎಲ್ಲರಿಗೆ ಸೇವಕನಾಗಿರಬೇಕು.
45. ಯಾಕಂದರೆ ಮನುಷ್ಯಕು ಮಾರನು ಸಹ ಸೇವೆ ಮಾಡಿಸಿಕೊಳ್ಳುವದಕ್ಕಾಗಿ ಅಲ್ಲ, ಆದರೆ ಸೇವೆ ಮಾಡುವದಕ್ಕೂ ತನ್ನ ಪ್ರಾಣವನ್ನು ಅನೇಕರಿಗೋಸ್ಕರ ಈಡುಕೊಡುವದಕ್ಕೂ ಬಂದನು ಎಂದು ಹೇಳಿದನು.
46. ತರುವಾಯ ಅವರು ಯೆರಿಕೋವಿಗೆ ಬಂದರು; ಆತನು ತನ್ನ ಶಿಷ್ಯರೊಡನೆಯೂ ಬಹುಸಂಖ್ಯೆಯ ಜನರೊಡನೆಯೂ ಯೆರಿಕೋವಿನಿಂದ ಹೊರಟಾಗ ತಿಮಾಯನ ಮಗನಾದ ಕುರುಡ ಬಾರ್ತಿಮಾಯನು ಹೆದ್ದಾರಿಯ ಬದಿಯಲ್ಲಿ ಕೂತುಕೊಂಡು ಭಿಕ್ಷೆಬೇಡು ತ್ತಿದ್ದನು.
47. ಆತನು ನಜರೇತಿನ ಯೇಸು ಎಂದು ಅವನು ಕೇಳಿದಾಗ ಕೂಗಲಾರಂಭಿಸಿ--ಯೇಸುವೇ, ದಾವೀದನಕುಮಾರನೇ, ನನ್ನನ್ನು ಕರುಣಿಸು ಅಂದನು.
48. ಅವನು ಸುಮ್ಮನಿರುವಂತೆ ಅನೇಕರು ಅವನಿಗೆ ಖಂಡಿತವಾಗಿ ಹೇಳಿದರು; ಆದರೆ ಅವನು ಇನ್ನೂ ಹೆಚ್ಚಾಗಿ--ದಾವೀದನಕುಮಾರನೇ, ನನ್ನನ್ನು ಕರುಣಿಸು ಎಂದು ಕೂಗಿದನು.
49. ಆಗ ಯೇಸು ನಿಂತುಕೊಂಡು ಅವನನ್ನು ಕರೆಯಬೇಕೆಂದು ಆಜ್ಞಾಪಿಸಲು ಅವರು ಆ ಕುರುಡನನ್ನು ಕರೆದು--ಸಮಾಧಾನವಾಗಿರು; ಏಳು, ಆತನು ನಿನ್ನನ್ನು ಕರೆಯುತ್ತಾನೆ ಎಂದು ಅವನಿಗೆ ಹೇಳಿದರು.
50. ಅವನು ತನ್ನ ಉಡುಪನ್ನು ತೆಗೆದುಹಾಕಿ ಎದ್ದು ಯೇಸುವಿನ ಬಳಿಗೆ ಬಂದನು.
51. ಯೇಸು ಅವನಿಗೆ--ನಾನು ನಿನಗೆ ಏನು ಮಾಡಬೇಕೆಂದು ನೀನು ಕೋರುತ್ತೀ ಎಂದು ಕೇಳಲು ಆ ಕುರುಡನು ಆತನಿಗೆ--ಕರ್ತನೇ, ನಾನು ನನ್ನ ದೃಷ್ಟಿಯನ್ನು ಹೊಂದುವಂತೆ ಮಾಡಬೇಕು ಅಂದನು.
52. ಅದಕ್ಕೆ ಯೇಸು ಅವನಿಗೆ--ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಪಡಿಸಿದೆ ಅಂದನು. ಕೂಡಲೆ ಅವನು ತನ್ನ ದೃಷ್ಟಿಯನ್ನು ಹೊಂದಿ ಆ ಮಾರ್ಗದಲ್ಲಿ ಯೇಸು ವನ್ನು ಹಿಂಬಾಲಿಸಿದನು.

Chapter 11

1. ಅವರು ಯೆರೂಸಲೇಮಿಗೆ ಸವಿಾಪವಾಗಿ ಎಣ್ಣೀಮರಗಳ ಗುಡ್ಡದ ಕಡೆಗೆ ಇರುವ ಬೇತ್ಫಗೆಗೂ ಬೇಥಾನ್ಯಕ್ಕೂ ಬಂದಾಗ ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಅವರಿಗೆ--
2. ನಿಮ್ಮ ಎದುರಾಗಿರುವ ಹಳ್ಳಿಗೆ ಹೋಗಿರಿ; ನೀವು ಅದರೊಳಗೆ ಪ್ರವೇಶಿಸುತ್ತಲೇ ಯಾರು ಎಂದಿಗೂ ಅದರ ಮೇಲೆ ಕೂತುಕೊಳ್ಳದಿರುವ ಒಂದು ಕತ್ತೇಮರಿಯನ್ನು ಅಲ್ಲಿ ಕಾಣುವಿರಿ; ಅದನ್ನು ಬಿಚ್ಚಿ ತಕ್ಕೊಂಡು ಬನ್ನಿರಿ.
3. ಯಾವ ನಾದರೂ ನಿಮಗೆ-- ನೀವು ಯಾಕೆ ಇದನ್ನು ಮಾಡು ತ್ತೀರಿ ಎಂದು ಕೇಳಿದರೆ ಇದು ಕರ್ತನಿಗೆ ಬೇಕಾಗಿದೆ ಎಂದು ಹೇಳಿರಿ; ಆಗ ಅವನು ಕೂಡಲೆ ಅದನ್ನು ಇಲ್ಲಿಗೆ ಕಳುಹಿಸುವನು ಎಂದು ಹೇಳಿದನು.
4. ಆಗ ಅವರು ಹೊರಟು ಹೋಗಿ ಎರಡು ದಾರಿಗಳು ಕೂಡುವ ಸ್ಥಳದಲ್ಲಿ ಹೊರಗೆ ಬಾಗಲಿನ ಬಳಿಯಲ್ಲಿ ಕಟ್ಟಿದ್ದ ಕತ್ತೇಮರಿಯನ್ನು ಬಿಚ್ಚುತ್ತಿರುವಾಗ
5. ಅಲ್ಲಿ ನಿಂತವರಲ್ಲಿ ಕೆಲವರು ಅವರಿಗೆ--ಆ ಕತ್ತೇಮರಿಯನ್ನು ಏನು ಮಾಡುತ್ತೀರಿ ಎಂದು ಕೇಳಿದರು.
6. ಅದಕ್ಕೆ ಅವರು ಯೇಸು ಅಪ್ಪಣೆ ಕೊಟ್ಟಂತೆಯೇ ಹೇಳಿದರು. ಆಗ ಅವರು ಅವರಿಗೆ ಹೋಗಗೊಡಿಸಿದರು.
7. ಅವರು ಕತ್ತೇ ಮರಿಯನ್ನು ಯೇಸುವಿನ ಬಳಿಗೆ ತಂದು ಅದರ ಮೇಲೆ ತಮ್ಮ ವಸ್ತ್ರಗಳನ್ನು ಹಾಕಿದಾಗ ಆತನು ಅದರ ಮೇಲೆ ಕೂತುಕೊಂಡನು.
8. ಅನೇಕರು ತಮ್ಮ ವಸ್ತ್ರ ಗಳನ್ನು ದಾರಿಯಲ್ಲಿ ಹಾಸಿದರು; ಇತರರು ಮರಗಳಿಂದ ಕೊಂಬೆಗಳನ್ನು ಕಡಿದು ದಾರಿಯಲ್ಲಿ ಹಾಕಿದರು.
9. ಆಗ ಮುಂದೆಯೂ ಹಿಂದೆಯೂ ಹೋಗುತ್ತಿದ್ದವರು ಕೂಗು ತ್ತಾ-- ಹೊಸನ್ನ; ಕರ್ತನ ಹೆಸರಿನಲ್ಲಿ ಬರುವಾತನು ಧನ್ಯನು;
10. ಕರ್ತನ ಹೆಸರಿನಲ್ಲಿ ಬರುವ ನಮ್ಮ ತಂದೆ ಯಾದ ದಾವೀದನ ರಾಜ್ಯವು ಆಶೀರ್ವದಿಸಲ್ಪಡಲಿ; ಉನ್ನತದಲ್ಲಿ ಹೊಸನ್ನ ಎಂದು ಹೇಳಿದರು.
11. ಯೇಸು ಯೆರೂಸಲೇಮಿಗೆ ಹೋಗಿ ದೇವಾಲ ಯದಲ್ಲಿ ಪ್ರವೇಶಿಸಿದಾಗ ಎಲ್ಲವುಗಳನ್ನು ಸುತ್ತಲೂ ನೋಡಿದನು; ಮತ್ತು ಸಂಜೆಯಾದಾಗ ಆ ಹನ್ನೆರಡು ಮಂದಿಯೊಂದಿಗೆ ಬೇಥಾನ್ಯಕ್ಕೆ ಹೋದನು.
12. ಮರುದಿವಸ ಅವರು ಬೇಥಾನ್ಯದಿಂದ ಬರುತ್ತಿ ದ್ದಾಗ ಆತನು ಹಸಿದಿದ್ದನು;
13. ಆತನು ಎಲೆಗಳಿದ್ದ ಒಂದು ಅಂಜೂರದ ಮರವನ್ನು ದೂರದಿಂದ ನೋಡಿ ಒಂದು ವೇಳೆ ತನಗೆ ಅದರಲ್ಲಿ ಏನಾದರೂ ಸಿಕ್ಕೀತೆಂದು ಬಂದನು; ಆದರೆ ಆತನು ಅದರ ಬಳಿಗೆ ಬಂದಾಗ ಎಲೆಗಳನ್ನೇ ಹೊರತು ಮತ್ತೇನೂ ಕಾಣಲಿಲ್ಲ; ಯಾಕಂ ದರೆ ಅದು ಅಂಜೂರ ಫಲದ ಕಾಲವಾಗಿರಲಿಲ್ಲ.
14. ಯೇಸು ಅದಕ್ಕೆ--ಇನ್ನೆಂದಿಗೂ ಯಾವನೂ ನಿನ್ನಿಂದ ಹಣ್ಣನ್ನು ತಿನ್ನದಿರಲಿ ಅಂದನು. ಅದನ್ನು ಆತನ ಶಿಷ್ಯರು ಕೇಳಿಸಿಕೊಂಡರು.
15. ಆಗ ಅವರು ಯೆರೂಸಲೇಮಿಗೆ ಬಂದರು; ಮತ್ತು ಯೇಸು ದೇವಾಲಯದೊಳಕ್ಕೆ ಹೋಗಿ ಅಲ್ಲಿ ಮಾರುತ್ತಿದ್ದವರನ್ನೂ ಕೊಂಡು ಕೊಳ್ಳುತ್ತಿದ್ದವರನ್ನೂ ಹೊರಗೆ ಹಾಕಲಾರಂಭಿಸಿ ಹಣ ಬದಲಾಯಿಸುವವರ ಮೇಜುಗಳನ್ನೂ ಪಾರಿವಾಳಗಳನ್ನು ಮಾರುತ್ತಿದ್ದವರ ಪೀಠಗಳನ್ನೂ ಕೆಡವಿಹಾಕಿದನು.
16. ಯಾವನೂ ದೇವಾಲಯದ ಮಾರ್ಗದಿಂದ ಯಾವ ಪಾತ್ರೆಯ ನ್ನಾದರೂ ತಕ್ಕೊಂಡು ಹೋಗಗೊಡಿಸಲಿಲ್ಲ.
17. ಆತನು ಅವರಿಗೆ ಬೋಧಿಸುತ್ತಾ--ನನ್ನ ಮನೆಯು ಎಲ್ಲಾ ಜನಾಂಗಗಳವರಿಂದ ಪ್ರಾರ್ಥನೆಯ ಮನೆ ಎಂದು ಕರೆಯಲ್ಪಡುವದೆಂದು ಬರೆದಿಲ್ಲವೇ? ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ ಎಂದು ಹೇಳಿದನು.
18. ಆಗ ಶಾಸ್ತ್ರಿಗಳೂ ಪ್ರಧಾನಯಾಜಕರೂ ಅದನ್ನು ಕೇಳಿ ಆತನನ್ನು ಹೇಗೆ ಕೊಲ್ಲಬೇಕೆಂದು ಆಲೋಚಿಸಿದರು. ಆದರೆ ಜನರೆಲ್ಲರೂ ಆತನ ಬೋಧನೆಗೆ ಅತ್ಯಾಶ್ಚರ್ಯಪಟ್ಟದ್ದರಿಂದ ಅವರು ಆತನಿಗೆ ಭಯಪಟ್ಟರು.
19. ಸಂಜೆಯಾದಾಗ ಆತನು ಪಟ್ಟಣದ ಹೊರಗೆ ಹೋದನು.
20. ಬೆಳಿಗ್ಗೆ ಅವರು ದಾರಿಯಲ್ಲಿ ಹೋಗುತ್ತಿದ್ದಾಗ ಆ ಅಂಜೂರದ ಮರವು ಬೇರು ಸಹಿತವಾಗಿ ಒಣಗಿರು ವದನ್ನು ಕಂಡರು.
21. ಆಗ ಪೇತ್ರನು ಜ್ಞಾಪಕ ಮಾಡಿ ಕೊಂಡು ಆತನಿಗೆ--ಗುರುವೇ, ಇಗೋ, ನೀನು ಶಪಿ ಸಿದ ಅಂಜೂರದ ಮರವು ಒಣಗಿಹೋಗಿದೆ ಅಂದನು.
22. ಯೇಸು ಪ್ರತ್ಯುತ್ತರವಾಗಿ ಅವರಿಗೆ ಹೇಳಿದ್ದೇನಂದರೆ --ದೇವರಲ್ಲಿ ನಂಬಿಕೆ ಇಡಿರಿ.
23. ಯಾಕಂದರೆ ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಯಾವನಾದರೂ ಈ ಬೆಟ್ಟಕ್ಕೆ--ನೀನು ಕಿತ್ತುಕೊಂಡು ಹೋಗಿ ಸಮುದ್ರ ದಲ್ಲಿ ಬೀಳು ಎಂದು ಹೇಳಿ ತನ್ನ ಹೃದಯದಲ್ಲಿ ಸಂಶಯ ಪಡದೆ ತಾನು ಹೇಳಿದವುಗಳು ಆಗುವವೆಂದು ನಂಬಿ ದರೆ ಅವನು ಹೇಳಿದಂತೆಯೇ ಆಗುವದು.
24. ಆದ ಕಾರಣ ನಾನು ನಿಮಗೆ ಹೇಳುವದೇನಂದರೆ--ನೀವು ಪ್ರಾರ್ಥನೆ ಮಾಡುವಾಗ ಯಾವವುಗಳನ್ನು ಆಶಿಸು ತ್ತೀರೋ ಅವು ನಿಮಗೆ ಸಿಕ್ಕುವವೆಂದು ನಂಬಿರಿ; ಮತ್ತು ಅವುಗಳನ್ನು ನೀವು ಹೊಂದುವಿರಿ.
25. ನೀವು ನಿಂತು ಕೊಂಡು ಪ್ರಾರ್ಥಿಸುವಾಗ ಯಾವನಿಗಾದರೂ ವಿರೋ ಧವಾದದ್ದು ನಿಮ್ಮಲ್ಲಿದ್ದರೆ ಕ್ಷಮಿಸಿರಿ; ಆಗ ಪರಲೋಕ ದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ಅಪರಾಧಗಳನ್ನು ನಿಮಗೆ ಕ್ಷಮಿಸುವನು.
26. ನೀವು ಕ್ಷಮಿಸದಿದ್ದರೆ ಪರ ಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ಅಪರಾಧ ಗಳನ್ನು ಕ್ಷಮಿಸುವದಿಲ್ಲ.
27. ಅವರು ತಿರಿಗಿ ಯೆರೂಸಲೇಮಿಗೆ ಬಂದರು; ಮತ್ತು ಆತನು ದೇವಾಲಯದಲ್ಲಿ ತಿರುಗಾಡುತ್ತಿರುವಾಗ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಹಿರಿಯರೂ ಆತನ ಬಳಿಗೆ ಬಂದು
28. ಆತನಿಗೆ--ನೀನು ಯಾವ ಅಧಿಕಾರ ದಿಂದ ಇವುಗಳನ್ನು ಮಾಡುತ್ತೀ? ಮತ್ತು ಇವುಗಳನ್ನು ಮಾಡುವದಕ್ಕೆ ನಿನಗೆ ಅಧಿಕಾರ ಕೊಟ್ಟ ವರು ಯಾರು ಎಂದು ಕೇಳಿದರು.
29. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನಾನು ಸಹ ಒಂದು ಪ್ರಶ್ನೆಯನ್ನು ನಿಮ್ಮಿಂದ ಕೇಳುತ್ತೇನೆ, ನನಗೆ ಉತ್ತರಕೊಡಿರಿ; ಆಗ ನಾನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ.
30. ಯೋಹಾನನ ಬಾಪ್ತಿಸ್ಮವು ಪರಲೋಕದಿಂದಲೋ ಇಲ್ಲವೆ ಮನುಷ್ಯರಿಂದಲೋ, ನನಗೆ ಉತ್ತರಕೊಡಿರಿ ಅಂದನು.
31. ಆಗ ಅವರು --ಪರಲೋಕದಿಂದ ಎಂದು ನಾವು ಹೇಳಿದರೆ--ನೀವು ಯಾಕೆ ಅವನನ್ನು ನಂಬಲಿಲ್ಲ ಎಂದು ಕೇಳಿ ಯಾನು;
32. ಆದರೆ ನಾವು--ಮನುಷ್ಯರಿಂದ ಎಂದು ಹೇಳುವದಾದರೆ ನಮಗೆ ಜನರ ಭಯವಿದೆ; ಯಾಕಂದರೆ ಯೋಹಾನನು ನಿಜವಾಗಿಯೂ ಪ್ರವಾದಿಯೆಂದು ಎಲ್ಲರೂ ಎಣಿಸಿಕೊಂಡಿರುವರು ಎಂದು ಅವರು ತಮ್ಮಲ್ಲಿ ತರ್ಕಿಸಿಕೊಂಡರು.
33. ಅವರು ಪ್ರತ್ಯುತ್ತರವಾಗಿ ಯೇಸುವಿಗೆ--ನಾವು ಹೇಳಲಾರೆವು ಎಂದು ಉತ್ತರ ಕೊಟ್ಟರು. ಅದಕ್ಕೆ ಯೇಸು--ನಾನು ಯಾವ ಅಧಿಕಾರ ದಿಂದ ಇವುಗಳನ್ನು ಮಾಡುತ್ತೇನೆಂದು ನಾನೂ ನಿಮಗೆ ಹೇಳುವದಿಲ್ಲ ಎಂದು ಅವರಿಗೆ ಉತ್ತರ ಕೊಟ್ಟನು.

Chapter 12

1. ಇದಾದ ಮೇಲೆ ಆತನು ಸಾಮ್ಯಗಳಿಂದ ಮಾತನಾಡಲು ಪ್ರಾರಂಭಿಸಿದನು. ಒಬ್ಬಾ ನೊಬ್ಬ ಮನುಷ್ಯನು ಒಂದು ದ್ರಾಕ್ಷೇತೋಟವನ್ನು ಮಾಡಿ ಸುತ್ತಲೂ ಬೇಲಿಹಾಕಿ ದ್ರಾಕ್ಷೆಯ ಅಲೆಗಾಗಿ ಅಗೆದು ಗೋಪುರ ಕಟ್ಟಿ ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ದೂರದೇಶಕ್ಕೆ ಹೊರಟುಹೋದನು.
2. ಫಲದ ಕಾಲ ದಲ್ಲಿ ಅವನು ದ್ರಾಕ್ಷೇ ತೋಟದ ಫಲವನ್ನು ಒಕ್ಕಲಿಗ ರಿಂದ ಪಡೆಯುವದಕ್ಕಾಗಿ ಅವರ ಬಳಿಗೆ ಒಬ್ಬ ಸೇವಕ ನನ್ನು ಕಳುಹಿಸಿದನು.
3. ಆದರೆ ಅವರು ಅವನನ್ನು ಹಿಡಿದು ಹೊಡೆದು ಬರಿದಾಗಿ ಕಳುಹಿಸಿಬಿಟ್ಟರು.
4. ತಿರಿಗಿ ಅವನು ಮತ್ತೊಬ್ಬ ಸೇವಕನನ್ನು ಅವರ ಬಳಿಗೆ ಕಳುಹಿಸಿದಾಗ ಅವರು ಅವನ ಮೇಲೆ ಕಲ್ಲುಗಳನ್ನು ಎಸೆದು ತಲೆಯನ್ನು ಗಾಯಪಡಿಸಿ ಅವಮಾನದಿಂದ ವರ್ತಿಸಿ ಅವನನ್ನು ಕಳುಹಿಸಿಬಿಟ್ಟರು.
5. ಅವನು ಮತ್ತೆ ಇನ್ನೊಬ್ಬನನ್ನು ಕಳುಹಿಸಿದಾಗ ಅವನನ್ನೂ ಕೊಂದರು. ಇನ್ನೂ ಆನೇಕರನ್ನು ಕಳುಹಿಸಿದನು. ಅವರಲ್ಲಿ ಕೆಲವ ರನ್ನು ಹೊಡೆದರು; ಕೆಲವರನ್ನು ಕೊಂದು ಹಾಕಿದರು.
6. ಕಡೆಯದಾಗಿ ತನಗೆ ಇನ್ನು ಅತಿ ಪ್ರಿಯನಾಗಿದ್ದ ಒಬ್ಬನೇ ಮಗನಿರಲಾಗಿ--ಅವರು ನನ್ನ ಮಗನಿಗಾದರೂ ಗೌರವ ಸಲ್ಲಿಸಾರು ಎಂದು ಅಂದುಕೊಂಡು ಅವನನ್ನು ಸಹ ಅವರ ಬಳಿಗೆ ಕಳುಹಿಸಿದನು.
7. ಆದರೆ ಆ ಒಕ್ಕಲಿಗರು--ಇವನೇ ಬಾದ್ಯಸ್ಥನು; ಬನ್ನಿರಿ, ಇವನನ್ನು ನಾವು ಕೊಂದುಹಾಕೋಣ; ಆಗ ಸ್ವಾಸ್ಥ್ಯವು ನಮ್ಮದಾ ಗುವದು ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡರು.
8. ಅವರು ಅವನನ್ನು ಹಿಡಿದು ಕೊಂದು ಹಾಕಿ ದ್ರಾಕ್ಷೇತೋಟದ ಹೊರಗೆ ಬಿಸಾಡಿದರು.
9. ಹಾಗಾದರೆ ದ್ರಾಕ್ಷೇತೋಟದ ದಣಿಯು ಏನು ಮಾಡಿಯಾನು? ಅವನು ಬಂದು ಆ ಒಕ್ಕಲಿಗರನ್ನು ಸಂಹಾರಮಾಡಿ ದ್ರಾಕ್ಷೇತೋಟವನ್ನು ಬೇರೆಯವರಿಗೆ ಕೊಡುವನು.
10. ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.
11. ಇದು ಕರ್ತನ ಕೆಲಸವೇ ಆಗಿತ್ತು. ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಗಿದೆಯಲ್ಲಾ ಎಂಬ ಈ ಬರಹವನ್ನು ನೀವು ಓದಲಿಲ್ಲವೋ ಎಂದು ಹೇಳಿದನು.
12. ಆಗ ಆತನು ತಮಗೆ ವಿರೋಧವಾಗಿ ಈ ಸಾಮ್ಯವನ್ನು ಹೇಳಿದನೆಂದು ಅವರು ತಿಳಿದು ಆತನನ್ನು ಹಿಡಿಯುವದಕ್ಕೆ ಸಂದರ್ಭ ನೋಡಿದರು. ಆದರೆ ಅವರು ಜನರಿಗೆ ಹೆದರಿದರು. ಅವರು ಆತನನ್ನು ಬಿಟ್ಟು ಹೊರಟು ಹೋದರು.
13. ಅವರು ಆತನನ್ನು ಆತನ ಮಾತುಗಳಲ್ಲಿ ಹಿಡಿಯಬೇಕೆಂದು ಫರಿಸಾಯರಲ್ಲಿಯೂ ಹೆರೋದ್ಯ ರಲ್ಲಿಯೂ ಕೆಲವರನ್ನು ಆತನ ಬಳಿಗೆ ಕಳುಹಿಸಿದರು.
14. ಅವರು ಬಂದು ಆತನಿಗೆ--ಬೋಧಕನೇ, ನೀನು ಸತ್ಯವಂತನೂ ಯಾವ ಮನುಷ್ಯನನ್ನು ಲಕ್ಷಿಸದವನೂ ಎಂದು ನಮಗೆ ತಿಳಿದದೆ; ಯಾಕಂದರೆ ನೀನು ಮನುಷ್ಯರ ಮುಖದಾಕ್ಷಿಣ್ಯ ಮಾಡದೆ ದೇವರ ಮಾರ್ಗವನ್ನು ಸತ್ಯದಲ್ಲಿ ಬೋಧಿಸುತ್ತೀ; ಕೈಸರನಿಗೆ ಕಪ್ಪಕೊಡುವದು ನ್ಯಾಯವೋ, ನ್ಯಾಯವಲ್ಲವೋ?
15. ನಾವು ಕೊಡಬೇಕೋ ಇಲ್ಲವೆ ಕೊಡಬಾರದೋ ಎಂದು ಕೇಳಿದರು. ಆದರೆ ಆತನು ಅವರ ಕಪಟವನ್ನು ತಿಳಿದು ಅವರಿಗೆ--ನೀವು ನನ್ನನ್ನು ಯಾಕೆ ಶೋಧಿ ಸುತ್ತೀರಿ? ಒಂದು ನಾಣ್ಯವನ್ನು ತಂದು ನನಗೆ ತೋರಿಸಿರಿ ಎಂದು ಹೇಳಿದನು.
16. ಅವರು ಅದನ್ನು ತಂದಾಗ ಆತನು ಅವರಿಗೆ--ಇದರ ರೂಪವು ಮತ್ತು ಮೇಲ್ಬರಹವು ಯಾರದು ಎಂದು ಕೇಳಿದ್ದಕ್ಕೆ ಅವರು ಆತನಿಗೆ--ಕೈಸರನದು ಎಂದು ಉತ್ತರ ಕೊಟ್ಟರು.
17. ಆಗ ಯೇಸು ಪ್ರತ್ಯುತ್ತರವಾಗಿ ಅವ ರಿಗೆ--ಕೈಸರನಿಗೆ ಸಂಬಂಧಪಟ್ಟವುಗಳನ್ನು ಕೈಸರನಿಗೂ ದೇವರಿಗೆ ಸಂಬಂಧಪಟ್ಟವುಗಳನ್ನು ದೇವರಿಗೂ ಸಲ್ಲಿಸಿರಿ ಎಂದು ಹೇಳಿದನು. ಇದಕ್ಕೆ ಅವರು ಆತನ ವಿಷಯದಲ್ಲಿ ಆಶ್ಚರ್ಯಪಟ್ಟರು.
18. ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಆತನ ಬಳಿಗೆ ಬಂದು ಆತನನ್ನು ಕೇಳಿದ್ದೇನಂದರೆ--
19. ಬೋಧಕನೇ, ಒಬ್ಬ ಮನುಷ್ಯನ ಸಹೋದರನು ಮಕ್ಕಳಿಲ್ಲದೆ ಹೆಂಡತಿಯನ್ನು ಬಿಟ್ಟು ಸತ್ತರೆ ಅವನ ಸಹೋದರನು ಅವನ ಹೆಂಡತಿಯನ್ನು ತಕ್ಕೊಂಡು ತನ್ನ ಸಹೋದರನಿಗಾಗಿ ಸಂತಾನವನ್ನು ಪಡೆಯಬೇಕು ಎಂದು ಮೋಶೆಯು ನಮಗೆ ಬರೆದಿರು ತ್ತಾನಷ್ಟೆ.
20. ಈಗ ಏಳು ಮಂದಿ ಸಹೋದರರಿದ್ದರು; ಮೊದಲನೆಯವನು ಮದುವೆಯಾಗಿ ಸಂತಾನವಿಲ್ಲದೆ ಸತ್ತನು.
21. ಮತ್ತು ಎರಡನೆಯವನೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದೆ ಸತ್ತನು; ಅದರಂತೆಯೇ ಮೂರನೆಯವನೂ ಆದನು.
22. ಹೀಗೆ ಏಳು ಮಂದಿಯೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದವ ರಾದರು; ಕೊನೆಯಲ್ಲಿ ಆ ಸ್ತ್ರೀಯೂ ಸತ್ತಳು.
23. ಆದದ ರಿಂದ ಪುನರುತ್ಥಾನದಲ್ಲಿ ಅವರು ಎದ್ದಾಗ ಅವರಲ್ಲಿ ಆಕೆಯು ಯಾರ ಹೆಂಡತಿಯಾಗಿರುವಳು? ಆ ಏಳು ಮಂದಿಗೂ ಆಕೆಯು ಹೆಂಡತಿಯಾಗಿದ್ದಳಲ್ಲಾ ಅಂದರು.
24. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನೀವು ಬರಹಗಳನ್ನಾದರೂ ದೇವರಶಕ್ತಿಯನ್ನಾದರೂ ತಿಳಿಯದೆ ಇರುವದರಿಂದ ತಪ್ಪು ಮಾಡುತ್ತೀರಲ್ಲವೋ?
25. ಯಾಕಂ ದರೆ ಅವರು ಸತ್ತವರೊಳಗಿಂದ ಎದ್ದ ಮೇಲೆ ಮದುವೆ ಮಾಡಿಕೊಳ್ಳುವದೂ ಇಲ್ಲ, ಮದುವೆ ಮಾಡಿಕೊಡು ವದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೂತರಂತೆ ಇರುತ್ತಾರೆ.
26. ಸತ್ತವರು ಎದ್ದು ಬರುವದರ ವಿಷಯವಾಗಿ--ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಆಗಿದ್ದೇನೆ ಎಂದು ಪೊದೆಯಲ್ಲಿ ದೇವರು ಮೋಶೆಯ ಸಂಗಡ ಹೇಗೆ ಮಾತನಾಡಿದನೆಂದು ಮೋಶೆಯ ಗ್ರಂಥದಲ್ಲಿ ನೀವು ಓದಲಿಲ್ಲವೋ?
27. ಯಾಕಂದರೆ ಆತನು ಸತ್ತವರಿಗಲ್ಲ, ಆದರೆ ಜೀವಿತರಿಗೆ ದೇವರಾಗಿದ್ದಾನೆ; ಆದದರಿಂದ ಈ ವಿಷಯದಲ್ಲಿ ನೀವು ಬಹಳವಾಗಿ ತಪ್ಪು ಮಾಡುತ್ತೀರಿ ಎಂದು ಹೇಳಿದನು.
28. ಆಗ ಶಾಸ್ತ್ರಿಗಳಲ್ಲಿ ಒಬ್ಬನು ಬಂದು ಅವರು ಕೂಡಿ ಕೊಂಡು ತರ್ಕಿಸುತ್ತಿರುವದನ್ನು ಕೇಳಿ ಆತನು ಅವರಿಗೆ ಸರಿಯಾಗಿ ಉತ್ತರವನ್ನು ಕೊಟ್ಟನೆಂದು ತಿಳಿದು ಆತನಿಗೆ --ಎಲ್ಲಾ ದೈವಾಜ್ಞೆಗಳಲ್ಲಿ ಮೊದಲನೆಯದು ಯಾವದು ಎಂದು ಕೇಳಿದನು.
29. ಯೇಸು ಪ್ರತ್ಯುತ್ತರವಾಗಿ ಅವನಿಗೆ--ಎಲ್ಲಾ ದೈವಾಜ್ಞೆಗಳಲ್ಲಿ ಮೊದಲನೆಯದು -- ಓ ಇಸ್ರಾಯೇಲೇ, ಕೇಳು; ನಮ್ಮ ದೇವರಾದ ಕರ್ತನು ಒಬ್ಬನೇ ಕರ್ತನಾಗಿದ್ದಾನೆ.
30. ನೀನು ನಿನ್ನ ದೇವರಾದ ಕರ್ತನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಮನಸ್ಸಿನಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು; ಇದು ಮೊದ ಲನೆಯ ದೈವಾಜ್ಞೆಯಾಗಿದೆ.
31. ನೀನು ನಿನ್ನ ನೆರೆಯ ವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದು ಅದರಂ ತೆಯೇ ಇರುವ ಎರಡನೆಯ ಆಜ್ಞೆಯಾಗಿದೆ. ಇವುಗಳಿ ಗಿಂತ ಹೆಚ್ಚಿನ ದೈವಾಜ್ಞೆಯು ಮತ್ತೊಂದಿಲ್ಲ ಎಂದು ಹೇಳಿದನು.
32. ಅದಕ್ಕೆ ಆ ಶಾಸ್ತ್ರಿಯು ಆತನಿಗೆ --ಬೋಧಕನೇ, ಒಳ್ಳೇದು. ನೀನು ಸತ್ಯವನ್ನೇ ಹೇಳಿದ್ದೀ; ಯಾಕಂದರೆ ದೇವರು ಒಬ್ಬನೇ; ಆತನ ಹೊರತು ಬೇರೊಬ್ಬನು ಇಲ್ಲವೇ ಇಲ್ಲ.
33. ಆತನನ್ನು ಪೂರ್ಣ ಹೃದಯದಿಂದಲೂ ಪೂರ್ಣಗ್ರಹಿಕೆಯಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಿ ತನ್ನ ನೆರೆಯವನನ್ನು ತನ್ನಂತೆಯೇ ಪ್ರೀತಿಸು ವದು ಸಕಲ ದಹನ ಬಲಿಗಳಿಗಿಂತಲೂ ಯಜ್ಞಗಳಿಗಿಂತ ಲೂ ಹೆಚ್ಚಿನದಾಗಿದೆ ಅಂದನು.
34. ಅವನು ಬುದ್ಧಿ ಯಿಂದ ಉತ್ತರಕೊಟ್ಟದ್ದನ್ನು ಯೇಸು ಕಂಡು ಅವನಿಗೆ --ನೀನು ದೇವರ ರಾಜ್ಯಕ್ಕೆ ದೂರವಾದವನಲ್ಲ ಅಂದನು. ಅಂದಿನಿಂದ ಆತನನ್ನು ಪ್ರಶ್ನೆ ಮಾಡುವದಕ್ಕೆ ಯಾವ ಮನುಷ್ಯನಿಗಾದರೂ ಧೈರ್ಯವಿರಲಿಲ್ಲ.
35. ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ-- ಕ್ರಿಸ್ತನು ದಾವೀದನಕುಮಾರನು ಎಂದು ಶಾಸ್ತ್ರಿಗಳು ಹೇಳುವದು ಹೇಗೆ?
36. ಯಾಕಂದರೆ ದಾವೀದನು ತಾನೇ ಪರಿಶುದ್ಧಾತ್ಮನಿಂದ -- ನಾನು ನಿನ್ನ ವಿರೋಧಿ ಗಳನ್ನು ನಿನ್ನ ಪಾದಪೀಠವಾಗಿ ಮಾಡುವತನಕ ನೀನು ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ಕರ್ತನು ನನ್ನ ಕರ್ತನಿಗೆ ಹೇಳಿದನಲ್ಲಾ ಎಂದು ನುಡಿದಿದ್ದಾನೆ.
37. ಆದದರಿಂದ ದಾವೀದನು ತಾನೇ ಆತನನ್ನು ಕರ್ತ ನೆಂದು ಕರೆಯುವಾಗ ಆತನು ಅವನ ಮಗನಾಗುವದು ಹೇಗೆ ಎಂದು ಹೇಳಿದನು. ಸಾಮಾನ್ಯ ಜನರು ಸಂತೋ ಷದಿಂದ ಆತನ ಮಾತುಗಳನ್ನು ಕೇಳಿದರು.
38. ತರುವಾಯ ಆತನು ಬೋಧನೆಯಲ್ಲಿ ಅವರಿಗೆ --ಉದ್ದವಾದ ಅಂಗಿಯನ್ನು ತೊಟ್ಟುಕೊಂಡು ಸಂತೆಯ ಸ್ಥಳಗಳಲ್ಲಿ ವಂದನೆಗಳನ್ನೂ
39. ಸಭಾಮಂದಿರಗಳಲ್ಲಿ ಮುಖ್ಯಪೀಠಗಳನ್ನೂ ಔತಣಗಳಲ್ಲಿ ಅತ್ಯುನ್ನತವಾದ ಸ್ಥಳಗಳನ್ನೂ ಪ್ರೀತಿಸುವವರಾದ ಶಾಸ್ತ್ರಿಗಳ ವಿಷಯವಾಗಿ ಎಚ್ಚರವಾಗಿರ್ರಿ;
40. ಇವರು ವಿಧವೆಯರ ಮನೆಗಳನ್ನು ನುಂಗಿ ನಟನೆಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ; ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು ಅಂದನು.
41. ಯೇಸು ಬೊಕ್ಕಸದ ಎದುರಾಗಿ ಕೂತುಕೊಂಡು ಜನರು ಹೇಗೆ ಬೊಕ್ಕಸದಲ್ಲಿ ಹಣ ಹಾಕುತ್ತಿದ್ದಾ ರೆಂಬದನ್ನು ನೋಡುತ್ತಿದ್ದನು; ಅನೇಕ ಐಶ್ವರ್ಯವಂತರು ಹೆಚ್ಚೆಚ್ಚಾಗಿ ಹಾಕಿದರು.
42. ಆಗ ಅಲ್ಲಿ ಒಬ್ಬ ಬಡ ವಿಧವೆಯು ಬಂದು ಒಂದು ಫಾರ್ದಿಂಗದಷ್ಟು ಎರಡು ನಾಣ್ಯಗಳನ್ನು ಹಾಕಿದಳು.
43. ಆಗ ಆತನು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ-- ಈ ಬೊಕ್ಕಸದಲ್ಲಿ ಹಾಕಿದವರೆಲ್ಲರಿಗಿಂತ ಈ ಬಡ ವಿಧವೆಯು ಹೆಚ್ಚಾಗಿ ಹಾಕಿದ್ದಾಳೆ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
44. ಯಾಕಂದರೆ ಎಲ್ಲರೂ ತಮ್ಮ ಸಮೃದ್ಧಿಯಲ್ಲಿ ಹಾಕಿದರು; ಆದರೆ ಈಕೆಯು ತನ್ನ ಕೊರತೆಯಲ್ಲಿ ತನಗಿದ್ದದ್ದನ್ನೆಲ್ಲಾ ಅಂದರೆ ತನ್ನ ಜೀವನವನ್ನೆಲ್ಲಾ ಹಾಕಿದ್ದಾಳೆ ಅಂದನು.

Chapter 13

1. ಆತನು ದೇವಾಲಯದೊಳಗಿಂದ ಹೋಗುತ್ತಿದ್ದಾಗ ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ--ಬೋಧಕನೇ, ಇಲ್ಲಿ ಎಂಥಾ ತರವಾದ ಕಲ್ಲುಗಳು ಮತ್ತು ಎಂಥಾ ಕಟ್ಟಡಗಳು ಇವೆ ನೋಡು ಅಂದನು.
2. ಯೇಸು ಅವನಿಗೆ ಪ್ರತ್ಯುತ್ತರವಾಗಿ-- ನೀನು ಈ ದೊಡ್ಡ ಕಟ್ಟಡಗಳನ್ನು ನೋಡುತ್ತೀಯೋ? ಕೆಳಗೆ ಕೆಡವಲ್ಪಡದೆ ಒಂದರ ಮೇಲೊಂದು ಕಲ್ಲು ಇಲ್ಲಿ ಬಿಡಲ್ಪಡುವದಿಲ್ಲ ಅಂದನು.
3. ಆತನು ಎಣ್ಣೇ ಮರಗಳ ಗುಡ್ಡದ ಮೇಲೆ ದೇವಾಲಯಕ್ಕೆ ಎದುರಾಗಿ ಕೂತುಕೊಂಡಿದ್ದಾಗ ಪೇತ್ರ ಯಾಕೋಬ ಯೋಹಾನ ಅಂದ್ರೆಯ ಇವರು ಪ್ರತ್ಯೇಕ ವಾಗಿ ಆತನಿಗೆ--
4. ಇವೆಲ್ಲಾ ಯಾವಾಗ ಆಗುವವು? ಮತ್ತು ಇವೆಲ್ಲವುಗಳು ನೆರವೇರುವದಕ್ಕೆ ಯಾವ ಸೂಚನೆ ಇರುವದು? ನಮಗೆ ಹೇಳು ಎಂದು ಕೇಳಿ ದರು.
5. ಯೇಸು ಪ್ರತ್ಯುತ್ತರವಾಗಿ ಅವರಿಗೆ ಹೇಳಲಾ ರಂಭಿಸಿ-- ಯಾವನಾದರೂ ನಿಮ್ಮನ್ನು ಮೋಸಗೊಳಿಸ ದಂತೆ ಎಚ್ಚರಿಕೆ ತೆಗೆದು ಕೊಳ್ಳಿರಿ;
6. ಯಾಕಂದರೆ ಅನೇ ಕರು ನನ್ನ ಹೆಸರಿನಲ್ಲಿ ಬಂದು--ನಾನು ಕ್ರಿಸ್ತನು ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು.
7. ಇದಲ್ಲದೆ ಯುದ್ಧಗಳ ವಿಷಯವಾಗಿಯೂ ಯುದ್ಧಗಳ ಸುದ್ಧಿಯ ವಿಷಯವಾಗಿಯೂ ನೀವು ಕೇಳುವಾಗ ಕಳವಳಪಡ ಬೇಡಿರಿ; ಯಾಕಂದರೆ ಅವುಗಳು ಆಗುವದು ಅಗತ್ಯ; ಆದರೆ ಇನ್ನೂ ಅದು ಅಂತ್ಯವಲ್ಲ.
8. ಯಾಕಂದರೆ ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ನಾನಾ ಕಡೆಗಳಲ್ಲಿ ಭೂಕಂಪಗಳಾಗುವವು. ಇದಲ್ಲದೆ ಬರ ಗಾಲಗಳು ಕಳವಳಗಳು ಉಂಟಾಗುವವು; ಇವು ಸಂಕಟಗಳ ಪ್ರಾರಂಭವಾಗಿವೆ.
9. ಆದರೆ ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆ ತೆಗೆದುಕೊಳ್ಳಿರಿ; ಯಾಕಂದರೆ ಅವರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಒಪ್ಪಿಸುವರು; ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು; ಅವರಿಗೆ ವಿರೋಧವಾಗಿ ನನ್ನ ನಿಮಿತ್ತ ಅಧಿಕಾರಿಗಳ ಮತ್ತು ಅರಸುಗಳ ಮುಂದೆ ನೀವು ತರಲ್ಪಡುವಿರಿ.
10. ಸುವಾರ್ತೆಯು ಮೊದಲು ಎಲ್ಲಾ ಜನಾಂಗಗಳಲ್ಲಿ ಸಾರಲ್ಪಡುವದು ಅಗತ್ಯವಾಗಿದೆ.
11. ಆದರೆ ಅವರು ನಿಮ್ಮನ್ನು ಒಪ್ಪಿಸುವದಕ್ಕಾಗಿ ತಕ್ಕೊಂಡು ಹೋಗುವಾಗ ನೀವು ಏನು ಮಾತನಾಡಬೇಕೆಂಬದನ್ನು ಮುಂಚಿತವಾಗಿ ಚಿಂತಿಸಬೇಡಿರಿ, ಆಲೋಚಿಸಲೂ ಬೇಡಿರಿ; ಆದರೆ ಆ ಗಳಿಗೆಯಲ್ಲಿ ನಿಮಗೆ ಯಾವದು ಕೊಡಲ್ಪಡುವದೋ ಅದನ್ನೇ ಮಾತನಾಡಿರಿ; ಯಾಕಂ ದರೆ ಮಾತನಾಡುವವರು ನೀವಲ್ಲ, ಆದರೆ ಪರಿಶು
12. ಆಗ ಸಹೋದರನು ಸಹೋದರನನ್ನೂ ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು; ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವ ರನ್ನು ಕೊಲ್ಲಿಸುವದಕ್ಕೆ ಕಾರಣರಾಗುವರು.
13. ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ಹಗೆ ಮಾಡು ವರು. ಆದರೆ ಕಡೇವರೆಗೂ ತಾಳುವವನೇ ರಕ್ಷಣೆ ಹೊಂದುವನು.
14. ಇದಲ್ಲದೆ ಪ್ರವಾದಿಯಾದ ದಾನಿಯೇಲನು ಹೇಳಿದಂತೆ ಹಾಳುಮಾಡುವ ಅಸಹ್ಯವು ನಿಲ್ಲಬಾರದ ಸ್ಥಳದಲ್ಲಿ ನಿಂತಿರುವದನ್ನು ನೀವು ನೋಡುವಾಗ (ಓದು ವವನು ತಿಳುಕೊಳ್ಳಲಿ) ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ.
15. ಮನೇಮಾಳಿಗೆಯ ಮೇಲಿದ್ದವನು ಕೆಳಗೆ ಇಳಿದು ಮನೆಯೊಳಕ್ಕೆ ಹೋಗದೆ ಯೂ ಇಲ್ಲವೆ ತನ್ನ ಮನೆಯೊಳಗೆ ಪ್ರವೇಶಿಸಿ ಅದರೊ ಳಗಿಂದ ಏನನ್ನೂ ತಕ್ಕೊಳ್ಳದೆಯೂ ಇರಲಿ.
16. ಹೊಲ ದಲ್ಲಿರುವವನು ಮತ್ತೆ ತನ್ನ ಉಡುಪನ್ನು ತಕ್ಕೊಳ್ಳುವದಕ್ಕೆ ಹಿಂದಿರುಗದಿರಲಿ.
17. ಆದರೆ ಆ ದಿವಸಗಳಲ್ಲಿ ಗರ್ಭಿಣಿ ಯರಿಗೂ ಮೊಲೆಕುಡಿಸುವವರಿಗೂ ಅಯ್ಯೋ!
18. ನಿಮ್ಮ ಪಲಾಯನವು ಚಳಿಗಾಲದಲ್ಲಿ ಆಗದಂತೆ ನೀವು ಪ್ರಾರ್ಥಿಸಿರಿ.
19. ಯಾಕಂದರೆ ಆ ದಿವಸಗಳಲ್ಲಿ ಸಂಕಟವಿರುವದು; ಅಂಥದ್ದು ದೇವರು ಸೃಷ್ಟಿಸಿದ ಸೃಷ್ಟಿ ಮೊದಲುಗೊಂಡು ಈ ಸಮಯದವರೆಗೂ ಆಗಲಿಲ್ಲ ಇಲ್ಲವೆ ಆಗುವದೂ ಇಲ್ಲ.
20. ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಯಾವನೂ ರಕ್ಷಣೆ ಹೊಂದುವ ದಿಲ್ಲ. ಆದರೆ ಆಯಲ್ಪಟ್ಟವರಿಗಾಗಿ ಅಂದರೆ ತಾನು ಆರಿಸಿಕೊಂಡವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಿ ದ್ದಾನೆ.
21. ಆಗ ಯಾವನಾದರೂ ನಿಮಗೆ--ಇಗೋ, ಕ್ರಿಸ್ತನು ಇಲ್ಲಿದ್ದಾನೆ; ಇಲ್ಲವೆ ಅಗೋ, ಆತನು ಅಲ್ಲಿ ದ್ದಾನೆ ಎಂದು ಹೇಳಿದರೆ ಅವನನ್ನು ನಂಬಬೇಡಿರಿ;
22. ಯಾಕಂದರೆ ಸುಳ್ಳು ಕ್ರಿಸ್ತರೂ ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ಆರಿಸಿಕೊಂಡವರನ್ನೂ ಮೋಸ ಗೊಳಿಸುವದಕ್ಕೊಸ್ಕರ ಸೂಚಕಕಾರ್ಯಗಳನ್ನು ಅದ್ಭುತ ಕಾರ್ಯಗಳನ್ನು ಮಾಡಿ ತೋರಿಸುವರು.
23. ಆದರೆ ನೀವು ಎಚ್ಚರಿಕೆ ತೆಗೆದುಕೊಳ್ಳಿರಿ; ಇಗೋ, ನಾನು ನಿಮಗೆ ಎಲ್ಲವುಗಳನ್ನು ಮುಂದಾಗಿ ಹೇಳಿದ್ದೇನೆ.
24. ಇದಲ್ಲದೆ ಆ ದಿವಸಗಳಲ್ಲಿ ಸಂಕಟವು ತೀರಿದ ನಂತರ ಸೂರ್ಯನು ಕತ್ತಲಾಗುವನು; ಚಂದ್ರನು ತನ್ನ ಬೆಳಕನ್ನು ಕೊಡದೆ ಇರುವನು.
25. ಆಕಾಶದ ನಕ್ಷತ್ರಗಳು ಬೀಳುವವು ಮತ್ತು ಆಕಾಶದಲ್ಲಿರುವ ಶಕ್ತಿಗಳು ಕದಲುವವು.
26. ಆಗ ಮನುಷ್ಯಕುಮಾರನು ಬಹು ಬಲದಿಂದಲೂ ಮಹಿಮೆಯಿಂದಲೂ ಮೇಘ ಗಳಲ್ಲಿ ಬರುವದನ್ನು ಅವರು ನೋಡುವರು.
27. ಆತನು ತನ್ನ ದೂತರನ್ನು ಕಳುಹಿಸಿ ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯ ವರೆಗೆ ತಾನು ಆರಿಸಿಕೊಂಡ ವರನ್ನು ನಾಲ್ಕು ದಿಕ್ಕುಗಳಿಂದಲೂ ಒಟ್ಟುಗೂಡಿಸುವನು.
28. ಇದಲ್ಲದೆ ಅಂಜೂರ ಮರದ ಸಾಮ್ಯವನ್ನು ಕಲಿ ತುಕೊಳ್ಳಿರಿ; ಅದರ ಕೊಂಬೆ ಇನ್ನೂ ಎಳೇದಾಗಿದ್ದು ಎಲೆಗಳನ್ನು ಬಿಡುವಾಗ ಬೇಸಿಗೆಯು ಹತ್ತಿರವಾಯಿ ತೆಂದು ನೀವು ತಿಳುಕೊಳ್ಳುತ್ತೀರಿ;
29. ಅದೇ ಪ್ರಕಾರ ಇವುಗಳು ಆಗುವದನ್ನು ನೀವು ನೋಡುವಾಗ ಅದು ಹತ್ತಿರದಲ್ಲಿ ಅಂದರೆ ಬಾಗಲುಗಳಲ್ಲಿಯೇ ಅದೆ ಎಂದು ತಿಳುಕೊಳ್ಳಿರಿ.
30. ಇವೆಲ್ಲವುಗಳು ನೆರವೇರುವವರೆಗೆ ಈ ಸಂತತಿಯು ಅಳಿದು ಹೋಗುವದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
31. ಆಕಾಶವೂ ಭೂಮಿಯೂ ಅಳಿದು ಹೋಗುವವು; ಆದರೆ ನನ್ನ ಮಾತುಗಳು ಅಳಿದು ಹೋಗುವದೇ ಇಲ್ಲ.
32. ಆದರೆ ಆ ದಿನದ ಮತ್ತು ಆ ಗಳಿಗೆಯ ವಿಷಯ ವಾಗಿ ತಂದೆಗೇ ಹೊರತು ಯಾವ ಮನುಷ್ಯನಿಗೂ ಪರಲೋಕದಲ್ಲಿರುವ ದೂತರಿಗೂ ಮಗನಿಗೂ ತಿಳಿ ಯದು.
33. ನೀವು ಎಚ್ಚರವಾಗಿರ್ರಿ, ಜಾಗರೂಕರಾಗಿರ್ರಿ, ಪ್ರಾರ್ಥಿಸಿರಿ. ಯಾಕಂದರೆ ಸಮಯವು ಯಾವಾಗ ಎಂದು ನಿಮಗೆ ತಿಳಿಯದು.
34. ಮನುಷ್ಯಕುಮಾರನು ದೂರದ ಪ್ರಯಾಣವನ್ನು ಕೈಕೊಂಡು ತನ್ನ ಮನೆಯನ್ನು ಬಿಟ್ಟು ತನ್ನ ಸೇವಕರಿಗೆ ಅಧಿಕಾರವನ್ನು ಮತ್ತು ಪ್ರತಿಯೊ ಬ್ಬನಿಗೆ ಅವನವನ ಕೆಲಸವನ್ನು ಕೊಟ್ಟು ಬಾಗಲು ಕಾಯು ವವನಿಗೆ ಜಾಗರೂಕನಾಗಿರಬೇಕೆಂದು ಆಜ್ಞಾಪಿಸಿದವನ ಹಾಗೆ ಇದ್ದಾನೆ.
35. ಆದದರಿಂದ ಜಾಗರೂಕರಾಗಿರ್ರಿ. ಯಾಕಂದರೆ ಮನೇ ಯಜಮಾನನು ಸಂಜೆಯಲ್ಲಿಯೋ ಸರಿಹೊತ್ತಿನಲ್ಲಿಯೋ ಇಲ್ಲವೆ ಹುಂಜ ಕೂಗುವಾ ಗಲೋ ಇಲ್ಲವೆ ಮುಂಜಾನೆಯಲ್ಲಿಯೋ ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲ.
36. ಆತನು ಫಕ್ಕನೆ ಬಂದು ನೀವು ನಿದ್ರೆ ಮಾಡುವದನ್ನು ಕಂಡಾನು.
37. ನಿಮಗೆ ಹೇಳುವದನ್ನು ನಾನು ಎಲ್ಲರಿಗೂ ಹೇಳು ತ್ತೇನೆ--ಎಚ್ಚರವಾಗಿರ್ರಿ ಅಂದನು.

Chapter 14

1. ಪಸ್ಕದ ಮತ್ತು ಹುಳಿಯಿಲ್ಲದ ರೊಟ್ಟಿಯ ಹಬ್ಬ ಬರುವದಕ್ಕೆ ಇನ್ನೂ ಎರಡು ದಿವಸ ಗಳಿದ್ದಾಗ ಪ್ರಧಾನಯಾಜಕರೂ ಶಾಸ್ತ್ರಿಗಳೂ ಉಪಾಯ ದಿಂದ ಆತನನ್ನು ಹೇಗೆ ಹಿಡಿದು ಕೊಲ್ಲಬೇಕೆಂದು ಹವಣಿಸುತ್ತಿದ್ದರು.
2. ಆದರೆ ಅವರು--ಜನರು ದಂಗೆ ಏಳದಂತೆ ಹಬ್ಬದಲ್ಲಿ ಬೇಡ ಎಂದು ಅಂದುಕೊಂಡರು.
3. ಬೇಥಾನ್ಯದಲ್ಲಿದ್ದ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿ ಆತನು ಊಟಕ್ಕೆ ಕೂತಿದ್ದಾಗ ಒಬ್ಬ ಸ್ತ್ರೀಯು ಅತಿ ಶ್ರೇಷ್ಠವಾದ ಸುಗಂಧ ತೈಲದ ಭರಣಿ ಯನ್ನು ತೆಗೆದುಕೊಂಡು ಬಂದು ಅದನ್ನು ಒಡೆದು ಆತನ ತಲೆಯ ಮೇಲೆ ಹೊಯಿದಳು.
4. ಆದರೆ ಅಲ್ಲಿದ್ದ ಕೆಲವರು ತಮ್ಮೊಳಗೆ ಕೋಪಗೊಂಡು--ಈ ತೈಲವನ್ನು ನಷ್ಟ ಮಾಡಿದ್ದೇಕೆ?
5. ಇದನ್ನು ಮುನ್ನೂರು (ಪೆನ್ಸ್‌) ಹಣಕ್ಕಿಂತ ಹೆಚ್ಚಿನ ಬೆಲೆಗೆ ಮಾರಿ ಬಡವರಿಗೆ ಕೊಡ ಬಹುದಾಗಿತ್ತಲ್ಲಾ ಎಂದು ಅಂದುಕೊಂಡು ಆಕೆಗೆ ವಿರೋಧವಾಗಿ ಗುಣುಗುಟ್ಟಿದರು.
6. ಆದರೆ ಯೇಸು --ಈಕೆಯನ್ನು ಬಿಟ್ಟುಬಿಡಿರಿ; ಈಕೆಗೆ ನೀವು ಯಾಕೆ ತೊಂದರೆ ಕೊಡುತ್ತೀರಿ? ಈಕೆಯು ನನಗೆ ಒಳ್ಳೇ ಕಾರ್ಯವನ್ನು ಮಾಡಿದ್ದಾಳೆ.
7. ಯಾಕಂದರೆ ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ; ನಿಮಗೆ ಮನಸ್ಸಿದ್ದರೆ ನೀವು ಅವರಿಗೆ ಯಾವಾಗಲಾದರೂ ಉಪಕಾರ ಮಾಡಬಹುದು; ಆದರೆ ನಾನು ಯಾವಾ ಗಲೂ ನಿಮ್ಮ ಬಳಿಯಲ್ಲಿ ಇರುವದಿಲ್ಲ.
8. ಈಕೆಯು ತನ್ನಿಂದಾದಷ್ಟು ಮಾಡಿದ್ದಾಳೆ; ನನ್ನ ಶರೀರವನ್ನು ಹೂಣಿಡುವದಕ್ಕೆ ಅದನ್ನು ಅಭಿಷೇಕಿಸುವದಕ್ಕಾಗಿ ಈಕೆಯು ಮುಂದಾಗಿ ಮಾಡಿದ್ದಾಳೆ.
9. ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ಈ ಸುವಾರ್ತೆಯು ಸರ್ವ ಲೋಕದಲ್ಲಿ ಎಲ್ಲೆಲ್ಲಿ ಸಾರಲ್ಪಡುವದೋ ಅಲ್ಲೆಲ್ಲಾ ಈಕೆಯು ಮಾಡಿದ್ದು ಸಹ ಈಕೆಯ ಜ್ಞಾಪಕಾರ್ಥವಾಗಿ ಹೇಳುವರು ಅಂದನು.
10. ಆಗ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದ ಇಸ್ಕರಿಯೋತನು ಯೇಸುವನ್ನು ಪ್ರಧಾನ ಯಾಜಕರಿಗೆ ಹಿಡುಕೊಡುವಂತೆ ಅವರ ಬಳಿಗೆ ಹೋದನು.
11. ಅವರು ಅದನ್ನು ಕೇಳಿ ಸಂತೋಷಪಟ್ಟು ಅವನಿಗೆ ಹಣ ಕೊಡುತ್ತೇವೆಂದು ಮಾತುಕೊಟ್ಟರು. ಅವನು ಆತನನ್ನು ಅನುಕೂಲವಾಗಿ ಹಿಡುಕೊಡುವದು ಹೇಗೆಂದು ಹುಡುಕುತ್ತಿದ್ದನು.
12. ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿವಸ ಪಸ್ಕದ ಕುರಿಯನ್ನು ಅವರು ಕೊಯ್ದಾಗ ಆತನ ಶಿಷ್ಯರು ಆತನಿಗೆ--ನೀನು ಪಸ್ಕದ ಊಟಮಾಡು ವಂತೆ ನಾವು ಎಲ್ಲಿಗೆ ಹೋಗಿ ಸಿದ್ಧಮಾಡಬೇಕನ್ನುತ್ತೀ ಎಂದು ಕೇಳಿದರು.
13. ಆಗ ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಅವರಿಗೆ--ನೀವು ಪಟ್ಟಣದೊಳಕ್ಕೆ ಹೋಗಿರಿ; ಅಲ್ಲಿ ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನು ನಿಮ್ಮನ್ನು ಸಂಧಿಸುವನು; ಅವನನ್ನು ಹಿಂಬಾಲಿಸಿರಿ.
14. ಅವನು ಯಾವ ಮನೆ ಯೊಳಗೆ ಹೋಗುತ್ತಾನೋ ಆ ಮನೆಯ ಯಜಮಾನ ನಿಗೆ--ನಾನು ನನ್ನ ಶಿಷ್ಯರೊಂದಿಗೆ ಪಸ್ಕದ ಊಟ ಮಾಡಲು ಅತಿಥಿಯ ಕೊಠಡಿ ಎಲ್ಲಿದೆ ಎಂದು ಬೋಧ ಕನು ಕೇಳುತ್ತಾನೆ ಎಂದು ಹೇಳಿರಿ.
15. ಅವನು ಸಜ್ಜು ಗೊಳಿಸಿ ಸಿದ್ಧಮಾಡಿದ ಮೇಲಂತಸ್ತಿನ ವಿಶಾಲವಾದ ಕೊಠಡಿಯನ್ನು ನಿಮಗೆ ತೋರಿಸುವನು; ಅಲ್ಲಿ ನಮಗೆ ಸಿದ್ಧಮಾಡಿರಿ ಅಂದನು.
16. ಆಗ ಆತನ ಶಿಷ್ಯರು ಹೊರಟುಹೋಗಿ ಪಟ್ಟಣದೊಳಕ್ಕೆ ಬಂದು ಆತನು ತಮಗೆ ಹೇಳಿದಂತೆ ಕಂಡುಕೊಂಡು ಪಸ್ಕವನ್ನು ಸಿದ್ಧಮಾಡಿದರು.
17. ಸಂಜೆಯಾದಾಗ ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಬಂದನು.
18. ಅವರು ಕೂತುಕೊಂಡು ಊಟಮಾಡುತ್ತಿದ್ದಾಗ ಯೇಸು ಅವರಿಗೆ--ನನ್ನೊಂದಿಗೆ ಊಟ ಮಾಡುತ್ತಿರುವ ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡುಕೊಡುವನು ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
19. ಆಗ ಅವರು ದುಃಖಿಸ ಲಾರಂಭಿಸಿ ಒಬ್ಬೊಬ್ಬರಾಗಿ ಆತನಿಗೆ--ಅದು ನಾನೋ? ಮತ್ತು ಇನ್ನೊಬ್ಬನು--ಅದು ನಾನೋ? ಎಂದು ಆತನನ್ನು ಕೇಳಿದರು.
20. ಅದಕ್ಕಾತನು ಪ್ರತ್ಯುತ್ತರವಾಗಿ ಅವರಿಗೆ--ಅವನು ಹನ್ನೆರಡು ಮಂದಿಯಲ್ಲಿ ಒಬ್ಬನು, ಅಂದರೆ ನನ್ನ ಸಂಗಡ ಪಾತ್ರೆಯಲ್ಲಿ ಅದ್ದುವವನೇ.
21. ತನ್ನ ವಿಷಯವಾಗಿ ಬರೆದಿರುವ ಪ್ರಕಾರ ಮನುಷ್ಯ ಕುಮಾರನು ನಿಜವಾಗಿಯೂ ಹೋಗುತ್ತಾನೆ; ಆದರೆ ಯಾವನಿಂದ ಮನುಷ್ಯಕುಮಾರನು ಹಿಡುಕೊಡಲ್ಪಡು ತ್ತಾನೋ ಆ ಮನುಷ್ಯನಿಗೆ ಅಯ್ಯೋ! ಆ ಮನುಷ್ಯನು ಹುಟ್ಟದೆಹೋಗಿದ್ದರೆ ಅವನಿಗೆ ಒಳ್ಳೇದಾಗುತ್ತಿತ್ತು ಎಂದು ಹೇಳಿದನು.
22. ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ಆಶೀರ್ವದಿಸಿ ಮುರಿದು ಅವರಿಗೆ ಕೊಟ್ಟು--ತಕ್ಕೊಳ್ಳಿರಿ, ತಿನ್ನಿರಿ; ಇದು ನನ್ನ ದೇಹ ಅಂದನು.
23. ತರುವಾಯ ಆತನು ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅವರಿಗೆ ಕೊಟ್ಟನು; ಅವರೆಲ್ಲರೂ ಅದರಲ್ಲಿ ಕುಡಿದರು.
24. ಆಗ ಆತನು ಅವರಿಗೆ--ಇದು ಬಹು ಜನರಿಗೋಸ್ಕರ ಸುರಿಸಲ್ಪಡುವ ಹೊಸಒಡಂಬಡಿಕೆಯ ನನ್ನ ರಕ್ತ.
25. ಇದಲ್ಲದೆ ನಾನು ದೇವರ ರಾಜ್ಯದಲ್ಲಿ ಇದನ್ನು ಹೊಸದಾಗಿ ಕುಡಿಯುವ ಆ ದಿನದ ವರೆಗೆ ಇನ್ನು ಮೇಲೆ ದ್ರಾಕ್ಷಾರಸವನ್ನು ನಾನು ಕುಡಿಯುವದೇ ಇಲ್ಲವೆಂದು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
26. ಬಳಿಕ ಅವರು ಒಂದು ಸಂಗೀತ ಹಾಡಿ ಎಣ್ಣೇ ಮರಗಳ ಗುಡ್ಡಕ್ಕೆ ಹೊರಟುಹೋದರು.
27. ಆಗ ಯೇಸು ಅವರಿಗೆ--ಈ ರಾತ್ರಿ ನೀವೆಲ್ಲರೂ ನನ್ನ ದೆಸೆಯಿಂದ ಅಭ್ಯಂತರಪಡುವಿರಿ; ಯಾಕಂದರೆನಾನು ಕುರುಬನನ್ನು ಹೊಡೆಯುವೆನು, ಕುರಿಗಳು ಚದರಿಸಲ್ಪ ಡುವವು ಎಂದು ಬರೆದದೆ.
28. ಆದರೆ ನಾನು ಎದ್ದ ಮೇಲೆ ನಿಮಗಿಂತ ಮುಂದಾಗಿ ಗಲಿಲಾಯಕ್ಕೆ ಹೋಗು ವೆನು ಎಂದು ಹೇಳಿದನು.
29. ಆದರೆ ಪೇತ್ರನು ಆತ ನಿಗೆ ಎಲ್ಲರೂ ಅಭ್ಯಂತರಪಟ್ಟಾಗ್ಯೂ ನಾನು ಅಭ್ಯಂತರ ಪಡುವದಿಲ್ಲ ಎಂದು ಹೇಳಿದನು.
30. ಆದರೆ ಯೇಸು ಅವನಿಗೆ--ಈ ದಿವಸ ಈ ರಾತ್ರಿಯೇ ಎರಡು ಸಾರಿ ಹುಂಜ ಕೂಗುವದಕ್ಕಿಂತ ಮೊದಲು ಮೂರು ಸಾರಿ ನೀನು ನನ್ನನ್ನು ಅಲ್ಲಗಳೆಯುವಿ ಎಂದು ನಾನು ನಿನಗೆ ನಿಜವಾಗಿ ಹೇಳುತ್ತೇನೆ ಅಂದನು.
31. ಆದರೆ ಅವನು--ನಾನು ನಿನ್ನ ಸಂಗಡ ಸಾಯಬೇಕಾದರೂ ನಿನ್ನನ್ನು ಅಲ್ಲಗಳೆಯುವದಿಲ್ಲ ಎಂದು ಬಹು ಆವೇಶದಿಂದ ಹೇಳಿದನು. ಅದರಂತೆಯೇ ಅವರೆಲ್ಲರೂ ಹೇಳಿದರು.
32. ಆಗ ಅವರು ಗೆತ್ಸೇಮನೆ ಎಂಬ ಸ್ಥಳಕ್ಕೆ ಬಂದಾಗ ಆತನು ತನ್ನ ಶಿಷ್ಯರಿಗೆ--ನಾನು ಪ್ರಾರ್ಥನೆ ಮಾಡು ವಾಗ ನೀವು ಇಲ್ಲಿ ಕೂತುಕೊಂಡಿರ್ರಿ ಅಂದನು.
33. ಆತನು ಪೇತ್ರ ಯಾಕೋಬ ಯೋಹಾನರನ್ನು ತನ್ನೊಂದಿಗೆ ಕರಕೊಂಡು ಹೋಗಿ ಅತಿವಿಸ್ಮಯಗೊಂಡು ಬಹಳ ಮನಗುಂದಿದವನಾಗಿ--
34. ನನ್ನ ಪ್ರಾಣವು ಸಾಯುವಷ್ಟು ಅತ್ಯಧಿಕವಾದ ದುಃಖಕ್ಕೆ ಒಳಗಾಗಿದೆ; ನೀವು ಇಲ್ಲಿಯೇ ಕಾದುಕೊಂಡಿದ್ದು ಎಚ್ಚರವಾಗಿರ್ರಿ ಅಂದನು.
35. ಆತನು ಸ್ವಲ್ಪ ಮುಂದೆ ಹೋಗಿ ನೆಲದ ಮೇಲೆ ಬಿದ್ದು ಸಾಧ್ಯವಾದರೆ ಆ ಗಳಿಗೆಯು ತನ್ನಿಂದ ದಾಟಿ ಹೋಗುವಂತೆ ಪ್ರಾರ್ಥಿಸಿದನು.
36. ಆತನು --ಅಪ್ಪಾ, ತಂದೆಯೇ, ಎಲ್ಲವುಗಳು ನಿನಗೆ ಸಾಧ್ಯವಾಗಿವೆ; ಈ ಪಾತ್ರೆಯನ್ನು ನನ್ನಿಂದ ತೆಗೆದುಬಿಡು; ಆದರೂ ನನ್ನ ಚಿತ್ತದಂತಲ್ಲ, ನಿನ್ನ ಚಿತ್ತದಂತೆಯೇ ಆಗಲಿ ಎಂದು ಹೇಳಿದನು.
37. ತರುವಾಯ ಆತನು ಬಂದು ಅವರು ನಿದ್ರೆಮಾಡುವದನ್ನು ಕಂಡು ಪೇತ್ರನಿಗೆ--ಸೀಮೋನನೇ, ನೀನು ನಿದ್ರೆಮಾಡು ತ್ತೀಯಾ? ಒಂದು ಗಳಿಗೆಯಾದರೂ ಎಚ್ಚರವಾಗಿ ರಲಾರೆಯಾ?
38. ನೀವು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಆತ್ಮವು ನಿಜವಾಗಿಯೂ ಸಿದ್ಧವಾಗಿದೆ; ಆದರೆ ಶರೀರವು ಬಲಹೀನವಾಗಿದೆ ಎಂದು ಹೇಳಿದನು.
39. ಆತನು ತಿರಿಗಿ ಹೊರಟು ಹೋಗಿ ಅದೇ ಮಾತುಗಳನ್ನು ಹೇಳುತ್ತಾ ಪ್ರಾರ್ಥಿಸಿ ದನು.
40. ಆತನು ಹಿಂತಿರುಗಿದಾಗ ಅವರು ತಿರಿಗಿ ನಿದ್ರೆ ಮಾಡುವದನ್ನು ಕಂಡನು; (ಯಾಕಂದರೆ ಅವರ ಕಣ್ಣುಗಳು ಭಾರವಾಗಿದ್ದವು;) ಆತನಿಗೆ ಅವರು ಏನು ಉತ್ತರ ಕೊಡಬೇಕೋ ತಿಳಿಯಲಿಲ್ಲ.
41. ಆತನು ಮೂರನೆಯ ಸಾರಿ ಬಂದು ಅವರಿಗೆ-- ಈಗ ನಿದ್ರೆ ಮಾಡಿ ನಿಮ್ಮ ವಿಶ್ರಾಂತಿಯನ್ನು ತೆಗೆದುಕೊಳ್ಳಿರಿ; ಇನ್ನು ಸಾಕು; ಗಳಿಗೆ ಬಂದಿದೆ; ಇಗೋ, ಮನುಷ್ಯ ಕುಮಾರನು ಪಾಪಿಗಳ ಕೈಗಳಿಗೆ ಹಿಡುಕೊಡಲ್ಪಡುತ್ತಾನೆ;
42. ಏಳಿರಿ, ನಾವು ಹೋಗೋಣ; ಇಗೋ ನನ್ನನ್ನು ಹಿಡುಕೊಡುವವನು ಸವಿಾಪದಲ್ಲಿದ್ದಾನೆ ಎಂದು ಹೇಳಿದನು.
43. ಆತನು ಇನ್ನೂ ಮಾತನಾಡುತ್ತಿರುವಾಗಲೇ ಹನ್ನೆ ರಡು ಮಂದಿಯಲ್ಲಿ ಒಬ್ಬನಾದ ಯೂದನು ಬಂದನು; ಪ್ರಧಾನ ಯಾಜಕರ ಶಾಸ್ತ್ರಿಗಳ ಮತ್ತು ಹಿರಿಯರ ಕಡೆ ಯಿಂದ ಬಂದಿದ್ದ ಜನರ ದೊಡ್ಡ ಸಮೂಹವು ಕತ್ತಿ ದೊಣ್ಣೆಗಳನ್ನು ಹಿಡಿದುಕೊಂಡು ಅವನ ಕೂಡ ಬಂದರು.
44. ಇದಲ್ಲದೆ ಆತನನ್ನು ಹಿಡುಕೊಡುವವನು ಅವರಿಗೆ--ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು; ಆತನನ್ನು ಹಿಡಿದು ಭದ್ರವಾಗಿ ತೆಗೆದುಕೊಂಡು ಹೋಗಿರಿ ಎಂದು ಗುರುತು ಹೇಳಿಕೊಟ್ಟಿದ್ದನು.
45. ಅವನು ಬಂದ ಕೂಡಲೆ ನೇರವಾಗಿ ಆತನ ಕಡೆಗೆ ಹೋಗಿ-- ಗುರುವೇ, ಗುರುವೇ ಎಂದು ಹೇಳಿ ಆತನಿಗೆ ಮುದ್ದಿಟ್ಟನು.
46. ಆಗ ಅವರು ಆತನ ಮೇಲೆ ಕೈ ಹಾಕಿ ಆತನನ್ನು ಹಿಡಿದರು.
47. ಆದರೆ ಹತ್ತಿರ ನಿಂತಿದ್ದ ವರಲ್ಲಿ ಒಬ್ಬನು ಕತ್ತಿಯನ್ನು ಹಿರಿದು ಪ್ರಧಾನ ಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕಡಿದುಹಾಕಿ ದನು.
48. ಯೇಸು ಅವರಿಗೆ-- ಕತ್ತಿಗಳನ್ನು ಮತ್ತು ದೊಣ್ಣೆಗಳನ್ನು ತಕ್ಕೊಂಡು ಕಳ್ಳನಿಗೆ ವಿರೋಧವಾಗಿ ಬರುವಂತೆ ನನ್ನನ್ನು ಹಿಡಿಯುವದಕ್ಕಾಗಿ ಬಂದಿರಾ?
49. ನಾನು ಪ್ರತಿ ದಿನವೂ ದೇವಾಲಯದಲ್ಲಿ ಬೋಧಿ ಸುತ್ತಾ ನಿಮ್ಮ ಸಂಗಡ ಇದ್ದೆನು; ಆಗ ನೀವು ನನ್ನನು ಹಿಡಿಯಲಿಲ್ಲ; ಆದರೆ ಬರಹಗಳು ನೆರವೇರಲೇಬೇಕು ಅಂದನು.
50. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.
51. ಅಲ್ಲಿ ಒಬ್ಬಾನೊಬ್ಬ ಯೌವನಸ್ಥನು ಬರೀ ಮೈಮೇಲೆ ನಾರು ಬಟ್ಟೆಯನ್ನು ಹಾಕಿಕೊಂಡವನಾಗಿ ಆತನನ್ನು ಹಿಂಬಾಲಿಸುತ್ತಿರಲು ಯೌವನಸ್ಥರು ಅವನನ್ನು ಹಿಡಿದರು.
52. ಆಗ ಅವನು ಆ ನಾರುಮಡಿಯನ್ನು ಬಿಟ್ಟು ಬರೀ ಮೈಯಲ್ಲಿ ಓಡಿಹೋದನು.
53. ಇದಾದ ಮೇಲೆ ಅವರು ಯೇಸುವನ್ನು ಮಹಾ ಯಾಜಕನ ಬಳಿಗೆ ತೆಗೆದುಕೊಂಡು ಹೋದರು; ಆತನ ಸಂಗಡ ಪ್ರಧಾನ ಯಾಜಕರೆಲ್ಲರೂ ಹಿರಿಯರೂ ಶಾಸ್ತ್ರಿಗಳೂ ಅವನ ಬಳಿಗೆ ಕೂಡಿ ಬಂದರು.
54. ಆದರೆ ಪೇತ್ರನು ಮಹಾಯಾಜಕನ ಭವನದವರೆಗೂ ದೂರ ದಿಂದ ಆತನನ್ನು ಹಿಂಬಾಲಿಸಿ ಆಳುಗಳ ಸಂಗಡ ಕೂತುಕೊಂಡು ಬೆಂಕಿಯ ಹತ್ತಿರ ಚಳಿ ಕಾಯಿಸಿಕೊಳ್ಳು ತ್ತಿದ್ದನು.
55. ಪ್ರಧಾನಯಾಜಕರೂ ನ್ಯಾಯಸಭೆಯವ ರೆಲ್ಲರೂ ಯೇಸುವನ್ನು ಕೊಲ್ಲಿಸಬೇಕೆಂದು ಆತನಿಗೆ ವಿರೋಧವಾಗಿ ಸಾಕ್ಷಿಯನ್ನು ಹುಡುಕಿ ಏನೂ ಕಂಡು ಕೊಳ್ಳಲಿಲ್ಲ.
56. ಅನೇಕರು ಆತನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳಿದರೂ ಅವರ ಸಾಕ್ಷಿಯು ಒಂದ ಕ್ಕೊಂದು ಒಪ್ಪಲಿಲ್ಲ.
57. ತರುವಾಯ ಕೆಲವರು ಎದ್ದು ಆತನಿಗೆ ವಿರೋಧವಾಗಿ ಸಾಕ್ಷಿ ಹೇಳುತ್ತಾ--
58. ಕೈಯಿಂದ ಕಟ್ಟಿರುವ ಈ ದೇವಾಲಯವನ್ನು ನಾನು ಕೆಡವಿಬಿಟ್ಟು ಕೈಯಿಂದ ಕಟ್ಟದಿರುವ ಮತ್ತೊಂದನ್ನು ಮೂರು ದಿನಗಳಲ್ಲಿ ಕಟ್ಟುವೆನು ಎಂದು ಈತನು ಹೇಳಿದ್ದನ್ನು ನಾವು ಕೇಳಿಸಿಕೊಂಡಿದ್ದೇವೆ ಅಂದರು.
59. ಹೀಗಿದ್ದರೂ ಅವರ ಸಾಕ್ಷಿ ಒಂದಕ್ಕೊಂದು ಒಪ್ಪಿಗೆಯಾಗಲಿಲ್ಲ.
60. ಆಗ ಮಹಾಯಾಜಕನು ಎದ್ದು ನಡುವೆ ನಿಂತು ಯೇಸುವಿಗೆ--ನೀನು ಏನೂ ಉತ್ತರಕೊಡುವದಿ ಲ್ಲವೋ? ಇವರು ನಿನಗೆ ವಿರೋಧವಾಗಿ ಹೇಳುವ ಈ ಸಾಕ್ಷಿ ಏನು ಎಂದು ಕೇಳಿದನು.
61. ಆದರೆ ಆತನು ಏನೂ ಉತ್ತರ ಕೊಡದೆ ಮೌನವಾಗಿದ್ದನು; ತಿರಿಗಿ ಮಹಾಯಾಜಕನು--ನೀನು ಆ ಕ್ರಿಸ್ತನೋ? ಸ್ತುತಿಹೊಂದುವಾತನ ಕುಮಾರನೋ ಎಂದು ಆತನನ್ನು ಕೇಳಿದನು.
62. ಅದಕ್ಕೆ ಯೇಸು--ನಾನೇ, ಇದಲ್ಲದೆ ಮನುಷ್ಯಕುಮಾರನು ಸರ್ವಶಕ್ತನ ಬಲಪಾರ್ಶ್ವದಲ್ಲಿ ಆಸೀನನಾಗಿರುವದನ್ನೂ ಆಕಾಶದ ಮೇಘಗಳಲ್ಲಿ ಬರುವದನ್ನೂ ನೀವು ನೋಡುವಿರಿ ಅಂದನು.
63. ಅದಕ್ಕೆ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು--ನಮಗೆ ಇನ್ನು ಹೆಚ್ಚು ಸಾಕ್ಷಿಗಳ ಅವಶ್ಯಕತೆ ಏನಿದೆ?
64. ನೀವು ಈ ದೇವದೂಷಣೆಯನ್ನು ಕೇಳಿದ್ದೀರಲ್ಲಾ; ನಿಮಗೆ ಹೇಗೆ ತೋರುತ್ತದೆ ಎಂದು ಕೇಳಲು ಅವರೆಲ್ಲರೂ ಅವನು ಮರಣದಂಡನೆ ಹೊಂದತಕ್ಕವನು ಎಂದು ತೀರ್ಪುಮಾಡಿದರು
65. ತರು ವಾಯ ಕೆಲವರು ಆತನ ಮೇಲೆ ಉಗುಳಿ ಆತನ ಮುಖವನ್ನು ಮುಚ್ಚಿ ಆತನನ್ನು ಗುದ್ದುವದಕ್ಕೆ ಆರಂಭಿಸಿ ಆತನಿಗೆ--ಪ್ರವಾದನೆ ಹೇಳು ಅಂದರು. ಆಳು ಗಳು ಆತನನ್ನು ಹೊಡೆದರು.
66. ಇದಲ್ಲದೆ ಪೇತ್ರನು ಭವನದ ಕೆಳಭಾಗದಲ್ಲಿದ್ದಾಗ ಮಹಾಯಾಜಕನ ದಾಸಿಯರಲ್ಲಿ ಒಬ್ಬಳು ಅಲ್ಲಿಗೆ ಬಂದಳು.
67. ಪೇತ್ರನು ಚಳಿಕಾಯಿಸಿಕೊಳ್ಳುತ್ತಿರು ವದನ್ನು ಆಕೆಯು ಕಂಡು ಅವನನ್ನು ದೃಷ್ಟಿಸಿ ನೋಡಿ--ನೀನು ಸಹ ಆ ನಜರೇತಿನ ಯೇಸುವಿ ನೊಂದಿಗೆ ಇದ್ದವನು ಅಂದಳು.
68. ಆದರೆ ಅವನು ಅಲ್ಲಗಳೆದು--ನನಗೆ ಗೊತ್ತಿಲ್ಲ, ನೀನು ಏನು ಹೇಳುತ್ತೀಯೋ ನನಗೆ ತಿಳಿಯುವದಿಲ್ಲ ಎಂದು ಹೇಳಿ ಅಲ್ಲಗಳೆದು ಹೊರಗೆ ದ್ವಾರಾಂಗಳದೊಳಗೆ ಹೋದನು; ಆಗ ಹುಂಜ ಕೂಗಿತು.
69. ಆ ದಾಸಿಯು ಅವನನ್ನು ತಿರಿಗಿ ನೋಡಿ ಪಕ್ಕದಲ್ಲಿ ನಿಂತಿದ್ದವರಿಗೆ--ಇವನು ಅವರಲ್ಲಿ ಒಬ್ಬನು ಎಂದು ಹೇಳಲಾರಂಭಿಸಿದಳು.
70. ಆಗ ಅವನು ಮತ್ತೆ ಅಲ್ಲಗಳೆದನು. ತುಸು ಹೊತ್ತಾದ ಮೇಲೆ ಪಕ್ಕದಲ್ಲಿ ನಿಂತಿದ್ದವರು ತಿರಿಗಿ ಪೇತ್ರನಿಗೆ--ನಿಶ್ಚಯವಾಗಿಯೂ ನೀನು ಅವರಲ್ಲಿ ಒಬ್ಬನು; ಯಾಕಂದರೆ ನೀನು ಗಲಿಲಾಯದವನು ಮತ್ತು ನಿನ್ನ ಭಾಷೆ ಅದಕ್ಕೆ ಒಪ್ಪುತ್ತದೆ ಅಂದರು.
71. ಆದರೆ ಅವನು ಶಪಿಸಿ ಕೊಳ್ಳುವದಕ್ಕೂ ಆಣೆಯಿಟ್ಟುಕೊಳ್ಳುವದಕ್ಕೂ ಆರಂ ಭಿಸಿ--ನೀವು ಮಾತನಾಡುತ್ತಿರುವ ಈ ಮನುಷ್ಯನನ್ನು ನಾನರಿಯೆ ಅಂದನು.
72. ಆಗ ಎರಡನೇ ಸಾರಿ ಹುಂಜ ಕೂಗಿತು. ಹೀಗೆ--ಎರಡು ಸಾರಿ ಹುಂಜ ಕೂಗುವದಕ್ಕಿಂತ ಮುಂಚಿತವಾಗಿ ನೀನು ನನ್ನನ್ನು ಮೂರು ಸಾರಿ ಅಲ್ಲಗಳೆಯುವಿ ಎಂದು ಯೇಸು ತನಗೆ ಹೇಳಿದ ಮಾತನ್ನು ಪೇತ್ರನು ಜ್ಞಾಪಕಮಾಡಿಕೊಂಡು ಅದನ್ನು ಯೋಚಿಸಿ ಅತ್ತನು.

Chapter 15

1. ಬೆಳಗಾದ ಕೂಡಲೆ ಪ್ರಧಾನ ಯಾಜಕರು ಹಿರಿಯರ ಶಾಸ್ತ್ರಿಗಳ ಮತ್ತು ಸಭೆಯವ ರೆಲ್ಲರೊಂದಿಗೆ ಆಲೋಚನೆ ಮಾಡಿಕೊಂಡು ಯೇಸು ವನ್ನು ಕಟ್ಟಿತೆಗೆದುಕೊಂಡು ಹೋಗಿ ಪಿಲಾತನಿಗೆ ಒಪ್ಪಿಸಿ ದರು.
2. ಆಗ ಪಿಲಾತನು ಆತನಿಗೆ--ನೀನು ಯೆಹೂದ್ಯರ ಅರಸನೋ ಎಂದು ಕೇಳಲು ಆತನು ಪ್ರತ್ಯುತ್ತರ ವಾಗಿ--ನೀನೇ ಅದನ್ನು ಹೇಳಿದ್ದೀ ಅಂದನು.
3. ಇದ ಲ್ಲದೆ ಪ್ರಧಾನಯಾಜಕರು ಆತನ ಮೇಲೆ ಅನೇಕ ದೂರುಗಳನ್ನು ಹೇಳಿದರು; ಆದರೆ ಆತನು ಏನೂ ಉತ್ತರ ಕೊಡಲಿಲ್ಲ.
4. ಆಗ ಪಿಲಾತನು ತಿರಿಗಿ ಆತ ನಿಗೆ--ನೀನು ಏನೂ ಉತ್ತರಕೊಡುವದಿಲ್ಲವೋ? ಇವರು ನಿನಗೆ ವಿರೋಧವಾಗಿ ಎಷ್ಟು ದೂರುಗಳನ್ನು ಹೇಳುತ್ತಾರೆ ನೋಡು ಎಂದು ಕೇಳಿದನು.
5. ಆದರೂ ಯೇಸು ಉತ್ತರಕೊಡದೆ ಇರಲಾಗಿ ಪಿಲಾತನು ಆಶ್ಚರ್ಯಪಟ್ಟನು.
6. ಆ ಹಬ್ಬದಲ್ಲಿ ಜನರು ಬೇಡಿ ಕೊಂಡ ಒಬ್ಬ ಸೆರೆಯವನನ್ನು ಅವರಿಗೆ ಬಿಟ್ಟುಕೊಡುವ ಪದ್ಧತಿಯಿತ್ತು.
7. ಆಗ ದಂಗೆ ಮಾಡಿದವರೊಂದಿಗೆ ಬಂಧಿಸಲ್ಪಟ್ಟು ಆ ದಂಗೆಯಲ್ಲಿ ಕೊಲೆ ಮಾಡಿದ ಬರಬ್ಬ ನೆಂಬ ಹೆಸರುಳ್ಳವನೊಬ್ಬನು ಅಲ್ಲಿ ಇದ್ದನು.
8. ಆಗ ಜನಸಮೂಹವು ಗಟ್ಟಿಯಾಗಿ ಕೂಗುತ್ತಾ ಅವನು ತಮಗೆ ಯಾವಾಗಲೂ ಮಾಡಿದ ಪ್ರಕಾರ ಮಾಡ ಬೇಕೆಂದು ಬೇಡಿಕೊಳ್ಳಲಾರಂಭಿ ಸಿದರು.
9. ಆದರೆ ಪಿಲಾತನು ಪ್ರತ್ಯುತ್ತರವಾಗಿ ಅವರಿಗೆ--ಯೆಹೂದ್ಯರ ಅರಸನನ್ನು ನಿಮಗಾಗಿ ನಾನು ಬಿಡಿಸಬೇಕೋ ಎಂದು ಕೇಳಿದನು.
10. ಯಾಕಂದರೆ ಪ್ರಧಾನಯಾಜಕರು ಹೊಟ್ಟೇಕಿಚ್ಚಿನಿಂದ ಆತನನ್ನು ಒಪ್ಪಿಸಿಕೊಟ್ಟಿದ್ದರೆಂದು ಅವನಿಗೆ ತಿಳಿದಿತ್ತು.
11. ಆದರೆ ಪ್ರಧಾನಯಾಜಕರು ತಮಗೆ ಬರಬ್ಬನನ್ನೇ ಬಿಟ್ಟುಕೊಡ ಬೇಕೆಂದು ಜನರನ್ನು ಪ್ರೇರೇಪಿಸಿದರು.
12. ಆಗ ಪಿಲಾತನು ಪ್ರತ್ಯುತ್ತರವಾಗಿ ಅವರಿಗೆ--ಹಾಗಾದರೆ ನೀವು ಯೆಹೂದ್ಯರ ಅರಸ ನೆಂದು ಕರೆಯುವ ಈತನಿಗೆ ನಾನೇನು ಮಾಡಬೇಕ ನ್ನುತ್ತೀರಿ ಎಂದು ತಿರಿಗಿ ಕೇಳಿದ್ದಕ್ಕೆ--
13. ಆತನನ್ನು ಶಿಲುಬೆಗೆ ಹಾಕಿಸು ಎಂದು ತಿರಿಗಿ ಅವರು ಕೂಗಿ ಕೊಂಡರು.
14. ಆಗ ಪಿಲಾತನು ಅವರಿಗೆ--ಯಾಕೆ? ಆತನು ಕೆಟ್ಟದ್ದೇನು ಮಾಡಿದನು ಎಂದು ಹೇಳಲು ಅವರು--ಆತನನ್ನು ಶಿಲುಬೆಗೆ ಹಾಕಿಸು ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡರು.
15. ಹೀಗೆ ಪಿಲಾತನು ಜನರನ್ನು ತೃಪ್ತಿಪಡಿಸಲು ಮನಸ್ಸುಳ್ಳವನಾಗಿ ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಯಿಂದ ಹೊಡಿಸಿ ಶಿಲುಬೆಗೆ ಹಾಕುವದಕ್ಕೆ ಒಪ್ಪಿಸಿದನು.
16. ತರುವಾಯ ಸೈನಿಕರು ಆತನನ್ನು ಪ್ರೇತೋ ರಿಯಂ ಎಂಬ ಮಂದಿರದೊಳಕ್ಕೆ ತೆಗೆದುಕೊಂಡು ಬಂದು ಸೈನಿಕರನ್ನೆಲ್ಲಾ ಒಟ್ಟಾಗಿ ಕರೆದರು.
17. ಅವರು ಆತನಿಗೆ ಊದಾ ಬಣ್ಣದ ವಸ್ತ್ರವನ್ನು ಹೊದಿಸಿ ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟು
18. ಆತನನ್ನು ವಂದಿಸುವದಕ್ಕೆ ಆರಂಭಿಸಿ--ಯೆಹೂ ದ್ಯರ ಅರಸನೇ, ನಿನಗೆ ವಂದನೆ ಅಂದರು.
19. ಅವರು ಬೆತ್ತದಿಂದ ಆತನ ತಲೆಯ ಮೇಲೆ ಹೊಡೆದು ಆತನ ಮೇಲೆ ಉಗುಳಿ ತಮ್ಮ ಮೊಣಕಾಲೂರಿ ಆತನಿಗೆ ನಮಸ್ಕರಿಸಿದರು.
20. ಹೀಗೆ ಅವರು ಆತನನ್ನು ಪರಿ ಹಾಸ್ಯಮಾಡಿದ ಮೇಲೆ ಊದಾ ಬಣ್ಣದ ಬಟ್ಟೆಯನ್ನು ಆತನಿಂದ ತೆಗೆದುಹಾಕಿ ಆತನ ಸ್ವಂತ ಬಟ್ಟೆಗಳನ್ನು ಆತನ ಮೇಲೆ ಹೊದಿಸಿ ಶಿಲುಬೆಗೆ ಹಾಕುವದಕ್ಕಾಗಿ ತಕ್ಕೊಂಡುಹೋದರು.
21. ಅಲೆಕ್ಸಾಂದ್ರ ಮತ್ತು ರೂಫ ಎಂಬವರ ತಂದೆಯಾದ ಕುರೇನ್ಯದ ಸೀಮೋನ ಎಂಬವನು ಗ್ರಾಮದಿಂದ ಬಂದು ಹಾದುಹೋಗುತ್ತಿರುವಾಗ ಆತನ ಶಿಲುಬೆಯನ್ನು ಹೊರುವಂತೆ ಅವರು ಅವನನ್ನು ಬಲವಂತ ಮಾಡಿದರು.
22. ಕಪಾಲ ಸ್ಥಳ ಎಂದರ್ಥವುಳ್ಳ ಗೊಲ್ಗೊಥಾ ಎಂಬ ಸ್ಥಳಕ್ಕೆ ಅವರು ಆತನನ್ನು ತೆಗೆದು ಕೊಂಡು ಬಂದರು.
23. ಅವರು ಆತನಿಗೆ ರಕ್ತಬೋಳ ಬೆರಸಿದ ದ್ರಾಕ್ಷಾರಸವನ್ನು ಕುಡಿಯಲುಕೊಟ್ಟರು. ಆದರೆ ಆತನು ಅದನ್ನು ತೆಗೆದುಕೊಳ್ಳಲಿಲ್ಲ.
24. ಅವರು ಆತನನ್ನು ಶಿಲುಬೆಗೆ ಹಾಕಿದ ಮೇಲೆ ಆತನ ಬಟ್ಟೆಗಳಿ ಗಾಗಿ ಚೀಟು ಹಾಕಿ ಪ್ರತಿಯೊಬ್ಬನು ಏನು ತಕ್ಕೊಳ್ಳ ಬೇಕೆಂದು ಅವುಗಳನ್ನು ಪಾಲುಮಾಡಿಕೊಂಡರು.
25. ಆತನನ್ನು ಶಿಲುಬೆಗೆ ಹಾಕಿದಾಗ ಮೂರನೆಯ ತಾಸಾಗಿತ್ತು.
26. ಯೆಹೂದ್ಯರ ಅರಸನು--ಎಂದು ಆತನ ಮೇಲೆ ಹೊರಿಸಿದ ಅಪರಾಧದ ಮೇಲ್ಬರಹವು ಬರೆಯಲ್ಪಟ್ಟಿತ್ತು.
27. ಇಬ್ಬರು ಕಳ್ಳರನ್ನು, ಒಬ್ಬನನ್ನು ಆತನ ಬಲಗಡೆಗೂ ಮತ್ತೊಬ್ಬನನ್ನು ಆತನ ಎಡ ಗಡೆಗೂ ಆತನೊಂದಿಗೆ ಅವರು ಶಿಲುಬೆಗೆ ಹಾಕಿ ದರು.
28. ಆಗ--ಆತನು ಅಪರಾಧಿಗಳೊಂದಿಗೆ ಎಣಿಸಲ್ಪಟ್ಟನು ಎಂಬ ಬರಹವು ನೆರವೇರಿತು.
29. ಇದ ಲ್ಲದೆ ಹಾದುಹೋಗುತ್ತಿದ್ದವರು ತಮ್ಮ ತಲೆಗಳನ್ನು ಅಲ್ಲಾಡಿಸಿ-ಹಾ! ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ,
30. ನಿನ್ನನ್ನು ರಕ್ಷಿಸಿಕೊಂಡು ಶಿಲುಬೆಯಿಂದ ಕೆಳಗಿಳಿದುಬಾ ಎಂದು ಹೇಳಿ ಆತನನು ದೂಷಿಸಿದರು.
31. ಅದೇ ಪ್ರಕಾರ ಪ್ರಧಾನ ಯಾಜಕರು ಸಹ ಶಾಸ್ತ್ರಿಗಳೊಂದಿಗೆ ಆತನನ್ನು ಹಾಸ್ಯಮಾಡಿ--ಇವನು ಇತರರನ್ನು ರಕ್ಷಿಸಿದನು; ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು.
32. ಇಸ್ರಾಯೇ ಲ್ಯರ ಅರಸನಾದ ಕ್ರಿಸ್ತನು ಈಗ ಶಿಲುಬೆಯಿಂದ ಇಳಿದು ಬರಲಿ; ಆಗ ನಾವು ನೋಡಿ ನಂಬುವೆವು ಎಂದು ತಮ್ಮಲ್ಲಿ ಅಂದುಕೊಂಡರು; ಆತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟವರೂ ಆತನನ್ನು ದೂಷಿಸಿದರು.
33. ಆರನೇ ತಾಸಿನಿಂದ ಒಂಭತ್ತನೇ ತಾಸಿನವರೆಗೆ ದೇಶದ ಮೇಲೆಲ್ಲಾ ಕತ್ತಲೆ ಇತ್ತು.
34. ಒಂಭತ್ತ ನೆಯ ತಾಸಿನಲ್ಲಿ ಯೇಸು--ಎಲೋಹಿ, ಎಲೋಹಿ, ಲಮಾ ಸಬಕ್ತಾನೀ? ಅಂದರೆ ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ ಎಂದು ಮಹಾಧ್ವನಿಯಿಂದ ಕೂಗಿದನು.
35. ಹತ್ತಿರದಲ್ಲಿ ನಿಂತಿದ್ದ ಕೆಲವರು ಅದನ್ನು ಕೇಳಿ--ಇಗೋ, ಈತನು ಎಲೀಯ ನನ್ನು ಕರೆಯುತ್ತಾನೆ ಅಂದರು.
36. ಆಗ ಒಬ್ಬನು ಓಡಿ ಹೋಗಿ ಸ್ಪಂಜನ್ನು ಹುಳಿರಸದಿಂದ ತುಂಬಿಸಿ ಒಂದು ಕೋಲಿಗೆ ಸಿಕ್ಕಿಸಿ ಆತನಿಗೆ ಕುಡಿಯುವದಕ್ಕೆ ಕೊಟ್ಟು-- ಬಿಡಿರಿ, ಎಲೀಯನ ಇವನನ್ನು ಕೆಳಗೆ ಇಳಿಸುವದಕ್ಕೆ ಬರುವನೋ ನೋಡೋಣ ಅಂದನು.
37. ಆದರೆ ಯೇಸು ಮಹಾಧ್ವನಿಯಿಂದ ಕೂಗಿ ಪ್ರಾಣಬಿಟ್ಟನು.
38. ಆಗ ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೂ ಹರಿದು ಎರಡು ಭಾಗವಾಯಿತು.
39. ಆತನು ಹೀಗೆ ಕೂಗಿ ಪ್ರಾಣ ಬಿಟ್ಟದ್ದನ್ನು ಆತನ ಎದುರಿಗೆ ನಿಂತಿದ್ದ ಶತಾಧಿಪತಿಯು ನೋಡಿ-- ನಿಜವಾಗಿಯೂ ಈ ಮನುಷ್ಯನು ದೇವಕುಮಾರನಾಗಿ ದ್ದನು ಅಂದನು.
40. ಅಲ್ಲಿ ಸ್ತ್ರೀಯರು ಸಹ ದೂರದಿಂದ ನೋಡುತ್ತಿದ್ದರು. ಅವರಲ್ಲಿ ಮಗ್ದಲದ ಮರಿಯಳು, ಚಿಕ್ಕ ಯಾಕೋಬನ ಮತ್ತು ಯೋಸೆಯ ತಾಯಿಯಾದ ಮರಿಯಳು, ಸಲೋಮೆಯು ಇದ್ದರು.
41. (ಇದಲ್ಲದೆ ಆತನು ಗಲಿಲಾಯದಲ್ಲಿದ್ದಾಗ ಈ ಸ್ತ್ರೀಯರು ಸಹ ಆತನನ್ನು ಹಿಂಬಾಲಿಸಿ ಆತನಿಗೆ ಉಪಚರಿಸಿ ದವರು;) ಮತ್ತು ಆತನೊಂದಿಗೆ ಯೆರೂಸಲೇಮಿಗೆ ಬಂದಿದ್ದ ಇನ್ನೂ ಬೇರೆ ಅನೇಕ ಸ್ತ್ರೀಯರು ಇದ್ದರು.
42. ಆಗ ಸಂಜೆಯಾಗಿತ್ತು; ಅದು ಸಬ್ಬತ್ತಿನ ಮುಂಚಿನ ಸಿದ್ಧತೆಯ ದಿವಸವಾಗಿತ್ತು.
43. ಆ ಸಮಯದಲ್ಲಿ ಗೌರವವುಳ್ಳವನೂ ಆಲೋಚನಾ ಸಭೆಯವನೂ ದೇವರ ರಾಜ್ಯಕ್ಕಾಗಿ ಕಾಯುತ್ತಿದ್ದವನೂ ಆದ ಅರಿ ಮಥಾಯದ ಯೋಸೇಫನು ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹಕ್ಕಾಗಿ ಬೇಡಿ ಕೊಂಡನು.
44. ಆದರೆ ಆತನು ಆಗಲೇ ಸತ್ತನೋ ಎಂದು ಪಿಲಾತನು ಆಶ್ಚರ್ಯಪಟ್ಟು ಶತಾಧಿಪತಿಯನ್ನು ತನ್ನ ಬಳಿಗೆ ಕರೆದು--ಆತನು ಸತ್ತು ಎಷ್ಟು ಸಮಯ ವಾಯಿತು ಎಂದು ಅವನನ್ನು ಕೇಳಿದನು.
45. ಅವನು ಶತಾಧಿಪತಿಯಿಂದ ಅದನ್ನು ತಿಳಿದುಕೊಂಡ ಮೇಲೆ ಆ ದೇಹವನ್ನು ಯೊಸೇಫನಿಗೆ ಕೊಟ್ಟನು.
46. ಆಗ ಅವನು ಶುಭ್ರವಾದ ನಾರು ಮಡಿಯನ್ನು ಕೊಂಡು ಕೊಂಡು ಆತನನ್ನು (ಶಿಲುಬೆಯಿಂದ) ಇಳಿಸಿ ಆ ನಾರುಮಡಿಯಲ್ಲಿ ಆತನನ್ನು ಸುತ್ತಿ ಬಂಡೆಯಲ್ಲಿ ತೋಡಿಸಿದ್ದ ಸಮಾಧಿಯಲ್ಲಿಟ್ಟು ಸಮಾಧಿಯ ಬಾಗಲಿಗೆ ಒಂದು ಕಲ್ಲನ್ನು ಉರುಳಿಸಿದನು.
47. ಮಗ್ದಲದ ಮರಿಯಳೂ ಯೋಸೆಯ ತಾಯಿಯಾದ ಮರಿಯಳೂ ಆತನನ್ನು ಇಟ್ಟಿದ್ದ ಸ್ಥಳವನ್ನು ನೋಡಿದರು.

Chapter 16

1. ಸಬ್ಬತ್ತು ಕಳೆದ ಮೇಲೆ ಮಗ್ದಲದ ಮರಿಯಳೂ ಯಾಕೋಬನ ತಾಯಿ ಯಾದ ಮರಿಯಳೂ ಮತ್ತು ಸಲೋಮೆಯೂ ಆತನಿಗೆ ಹಚ್ಚುವದಕ್ಕಾಗಿ ಸುಗಂಧದ್ರವ್ಯಗಳನ್ನು ಕೊಂಡು ಕೊಂಡು ಬಂದರು.
2. ವಾರದ ಮೊದಲನೆಯ ದಿನ ನಸುಕಿನಲ್ಲಿ ಸೂರ್ಯನು ಉದಯಿಸುವಾಗ ಅವರು ಸಮಾಧಿಯ ಬಳಿಗೆ ಬಂದರು,
3. ಅವರು--ಸಮಾಧಿಯ ಬಾಗಲಿನಿಂದ ಆ ಕಲ್ಲನ್ನು ನಮಗೋಸ್ಕರ ಯಾರು ಉರುಳಿಸುವರು ಎಂದು ತಮ್ಮತಮ್ಮೊಳಗೆ ಮಾತನಾಡಿ ಕೊಂಡರು.
4. ಯಾಕಂದರೆ ಅದು ಬಹಳ ದೊಡ್ಡದಾ ಗಿತ್ತು. ಆದರೆ ಅವರು ನೋಡಿ ಆ ಕಲ್ಲು ಉರುಳಿಸ ಲ್ಪಟ್ಟದ್ದನ್ನು ಕಂಡರು.
5. ಅವರು ಸಮಾಧಿಯೊಳಕ್ಕೆ ಪ್ರವೇಶಿಸಿದವರಾಗಿ ಉದ್ದವಾದ ಬಿಳಿ ಉಡುಪನ್ನು ತೊಟ್ಟುಕೊಂಡಿದ್ದ ಒಬ್ಬ ಯೌವನಸ್ಥನು ಬಲಗಡೆಯಲ್ಲಿ ಕೂತಿರುವದನ್ನು ಕಂಡು ಭಯಭ್ರಾಂತರಾದರು.
6. ಆದರೆ ಅವನು ಅವರಿಗೆ--ಭಯಪಡಬೇಡಿರಿ, ಶಿಲುಬೆಗೆ ಹಾಕಲ್ಪಟ್ಟ ನಜರೇತಿನ ಯೇಸುವನ್ನು ಹುಡುಕುತ್ತಿದ್ದೀರಿ; ಆತನು ಎದ್ದಿದ್ದಾನೆ; ಇಲ್ಲಿ ಇಲ್ಲ, ಆತನನ್ನು ಇಟ್ಟಿದ್ದ ಸ್ಥಳವನ್ನು ನೋಡಿರಿ;
7. ಆದರೆ ನೀವು ಹೊರಟುಹೋಗಿ ಆತನು ನಿಮಗೆ ಹೇಳಿದಂತೆ ನಿಮ್ಮ ಮುಂದೆ ಗಲಿಲಾಯಕ್ಕೆ ಹೋಗುತ್ತಾನೆ; ಅಲ್ಲಿ ನೀವು ಆತನನ್ನು ಕಾಣುವಿರಿ ಎಂದು ಆತನ ಶಿಷ್ಯರಿಗೆ ಮತ್ತು ಪೇತ್ರನಿಗೆ ಹೇಳಿರಿ ಅಂದನು.
8. ಆಗ ಅವರು ಬೇಗನೆ ಹೊರಟು ಸಮಾಧಿಯ ಬಳಿಯಿಂದ ಓಡಿಹೋದರು; ಯಾಕಂದರೆ ಅವರು ಆಶ್ಚರ್ಯದಿಂದ ನಡುಗುತ್ತಿದ್ದರು; ಇದಲ್ಲದೆ ಅವರು ಹೆದರಿದವರಾದದರಿಂದ ಯಾರಿಗೂ ಏನೂ ಹೇಳಲಿಲ್ಲ.
9. ಹೀಗಿರಲಾಗಿ ವಾರದ ಮೊದಲನೆಯ ದಿನದ ಬೆಳಿಗ್ಗೆ ಯೇಸು ಎದ್ದಮೇಲೆ ಆತನು ಮೊದಲು ತಾನು ಏಳು ದೆವ್ವಗಳನ್ನು ಬಿಡಿಸಿದ್ದ ಮಗ್ದಲದ ಮರಿಯಳಿಗೆ ಕಾಣಿಸಿಕೊಂಡನು.
10. ಆತನ ಸಂಗಡ ಇದ್ದವರು ಶೋಕಿಸಿ ಅಳುತ್ತಿರುವಾಗ ಆಕೆಯು ಹೋಗಿ ಅವರಿಗೆ ಹೇಳಿದಳು.
11. ಆದರೆ ಆತನು ಬದುಕಿದ್ದಾನೆಂದೂ ಆಕೆಯು ಆತನನ್ನು ನೋಡಿದ್ದಾಳೆಂದೂ ಅವರು ಕೇಳಿದರು; ಆದರೂ ನಂಬಲಿಲ್ಲ.
12. ಇದಾದ ಮೇಲೆ ಅವರಲ್ಲಿ ಇಬ್ಬರು ಒಂದು ಗ್ರಾಮಕ್ಕೆ ನಡೆದು ಹೋಗುತ್ತಿದ್ದಾಗ ಆತನು ಅವರಿಗೆ ಬೇರೊಂದು ರೂಪದಲ್ಲಿ ಕಾಣಿಸಿಕೊಂಡನು.
13. ಅವರು ಹೋಗಿ ಉಳಿದವರಿಗೆ ತಿಳಿಸಿದರು; ಆದರೆ ಅವರನ್ನೂ ಅವರು ನಂಬಲಿಲ್ಲ.
14. ತರುವಾಯ ಊಟಕ್ಕೆ ಕೂತಿದ್ದ ಹನ್ನೊಂದು ಮಂದಿಗೆ ಆತನು ಕಾಣಿಸಿಕೊಂಡು ತಾನು ಎದ್ದು ಬಂದಮೇಲೆ ತನ್ನನ್ನು ನೋಡಿದವರನ್ನು ನಂಬಲಿಲ್ಲ ವಾದ ಕಾರಣ ಅವರ ಅಪನಂಬಿಕೆಗೂ ಹೃದಯದ ಕಾಠಿಣ್ಯಕ್ಕೂ ಆತನು ಅವರನ್ನು ಗದರಿಸಿದನು.
15. ಆತನು ಅವರಿಗೆ--ನೀವು ಸಮಸ್ತ ಲೋಕಕ್ಕೆ ಹೋಗಿ ಎಲ್ಲಾ ಸೃಷ್ಟಿಗೆ ಸುವಾರ್ತೆಯನ್ನು ಸಾರಿರಿ.
16. ನಂಬಿ ಬಾಪ್ತಿಸ್ಮ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು. ಆದರೆ ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು.
17. ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಅವರು ಹೊಸ ಭಾಷೆಗಳಲ್ಲಿ ಮಾತನಾಡುವರು;
18. ಅವರು ಸರ್ಪಗಳನ್ನು ಎತ್ತುವರು; ಮರಣಕರವಾದದ್ದೇ ನಾದರೂ ಕುಡಿದರೆ ಅದು ಅವರಿಗೆ ಯಾವ ಕೇಡನ್ನೂ ಮಾಡುವದಿಲ್ಲ; ಅವರು ರೋಗಿಗಳ ಮೇಲೆ ಕೈಗಳನ್ನಿಡು ವಾಗ ಅವರು ಸ್ವಸ್ಥರಾಗುವರು ಎಂದು ಹೇಳಿದನು.
19. ಹೀಗೆ ಕರ್ತನು ಅವರೊಂದಿಗೆ ಮಾತನಾಡಿದ ನಂತರ ಆತನು ಮೇಲಕ್ಕೆ ಪರಲೋಕದಲ್ಲಿ ಸ್ವೀಕರಿ ಸಲ್ಪಟ್ಟು ದೇವರ ಬಲಪಾರ್ಶ್ವದಲ್ಲಿ ಕೂತುಕೊಂಡನು.
20. ಮತ್ತು ಅವರು ಹೊರಟುಹೋಗಿ ಎಲ್ಲಾ ಕಡೆಯಲ್ಲಿ ಸಾರಿದರು. ಇದಲ್ಲದೆ ಕರ್ತನು ಅವರ ಜೊತೆಯಲ್ಲಿ ಕೆಲಸಮಾಡುತ್ತಾ ನಡೆದ ಸೂಚಕ ಕಾರ್ಯಗಳಿಂದ ವಾಕ್ಯವನ್ನು ಸ್ಥಿರಪಡಿಸುತ್ತಾ ಇದ್ದನು. ಆಮೆನ್‌.


Free counters!   Site Meter(April28th2012)