Home Churches About
 

Chapter 1

1. ಇಸ್ರಾಯೇಲಿಗೆ ಮಲಾಕಿಯಿಂದ ಉಂಟಾದ ಕರ್ತನ ವಾಕ್ಯದ ದೈವೋಕ್ತಿ.
2. ನಿಮ್ಮನ್ನು ಪ್ರೀತಿಮಾಡಿದ್ದೇನೆಂದು ಕರ್ತನು ಹೇಳುತ್ತಾನೆ; ಆದಾಗ್ಯೂ ನೀವು--ಯಾವದರಲ್ಲಿ ನೀನು ನಮ್ಮನ್ನು ಪ್ರೀತಿಮಾಡಿದ್ದೀ ಎಂದು ಹೇಳುತ್ತೀರಿ. ಕರ್ತನು ಅನು ್ನತ್ತಾನೆ--ಏಸಾವನು ಯಾಕೋಬನಿಗೆ ಅಣ್ಣನಲ್ಲವೋ? ಆದಾಗ್ಯೂ ನಾನು ಯಾಕೋಬನನ್ನು ಪ್ರೀತಿ ಮಾಡಿ ದೆನು.
3. ಆದರೆ ಏಸಾವನನ್ನು ಹಗೆ ಮಾಡಿದೆನು; ಅವನ ಬೆಟ್ಟಗಳನ್ನು ಹಾಳುಮಾಡಿ ಅವನ ಸ್ವಾಸ್ತ್ಯವನ್ನು ಅಡವಿಯ ಸರ್ಪಗಳಿಗೆ ಕೊಟ್ಟೆನು.
4. ಎದೋಮು--ನಾವು ಬಡಕಲಾದೆವು, ಆದರೆ ನಾವು ತಿರಿಗಿಕೊಂಡು ಹಾಳಾದ ಸ್ಥಳಗಳನ್ನು ಕಟ್ಟುವೆವೆಂದು ಹೇಳಿದರೂ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಅವರು ಕಟ್ಟಬಹುದು, ಆದರೆ ನಾನು ಕೆಡವಿಬಿಡುವೆನು; ಅದಕ್ಕ ವರು--ದುಷ್ಟತನದ ಮೇರೆಯೂ ಕರ್ತನ ನಿತ್ಯ ಕೋಪದ ಜನಾಂಗವೆಂದೂ ಕರೆಯುವರು.
5. ನಿಮ್ಮ ಕಣ್ಣುಗಳು ನೋಡುವವು; ಇಸ್ರಾಯೇಲಿನ ಮೇರೆ ಯಿಂದ ಕರ್ತನು ಘನಹೊಂದುವನು ಎಂದು ನೀವು ಹೇಳುವಿರಿ.
6. ಮಗನು ತಂದೆಯನ್ನು ದಾಸನು ಯಜಮಾನನನ್ನು ಸನ್ಮಾನಿಸುತ್ತಾನೆ; ನಾನು ತಂದೆಯಾಗಿದ್ದರೆ ನನ್ನ ಸನ್ಮಾನ ವೆಲ್ಲಿ? ನಾನು ಯಜಮಾನನಾಗಿದ್ದರೆ ನನ್ನ ಭಯವು ಎಲ್ಲಿ ಎಂದು ನನ್ನ ಹೆಸರನ್ನು ಅಸಡ್ಡೆ ಮಾಡುವ ಯಾಜಕರಾದ ನಿಮಗೆ ಸೈನ್ಯಗಳ ಕರ್ತನು ಹೇಳುತ್ತಾನೆ. ಆದರೆ ನೀವು--ನಿನ್ನ ಹೆಸರನ್ನು ಯಾವದರಲ್ಲಿ ನಾವು ಅಸಡ್ಡೆ ಮಾಡಿದ್ದೇವೆಂದು ಹೇಳುತ್ತೀರಿ.
7. ನನ್ನ ಬಲಿಪೀಠದ ಮೇಲೆ ಅಪವಿತ್ರವಾದ ರೊಟ್ಟಿಯನ್ನು ಅರ್ಪಿಸಿ--ಯಾವದರಲ್ಲಿ ನಿನ್ನನ್ನು ನಾವು ಅಪವಿತ್ರ ಮಾಡಿದ್ದೇವೆಂದು ಹೇಳುತ್ತೀರಿ. ಕರ್ತನ ಮೇಜು ಹೀನವಾದದ್ದೆಂದು ನೀವು ಹೇಳುವದರಿಂದಲೇ.
8. ಇದ ಲ್ಲದೆ ನೀವು ಕುರುಡಾದದ್ದನ್ನು ಬಲಿಗಾಗಿ ಅರ್ಪಿಸಿ ದರೆ ಅದು ಕೆಟ್ಟದ್ದಲ್ಲವೋ? ಕುಂಟಾದದ್ದನ್ನೂ ರೋಗ ವುಳ್ಳದ್ದನ್ನೂ ಅರ್ಪಿಸಿದರೆ ಅದು ಕೆಟ್ಟದ್ದಲ್ಲವೋ? ಸೈನ್ಯ ಗಳ ಕರ್ತನು--ಅದನ್ನು ನಿನ್ನ ದೊರೆಗೆ ಅರ್ಪಿಸು, ಅವನು ನಿನಗೆ ಮೆಚ್ಚುವನೋ? ಇಲ್ಲವೆ ನಿನಗೆ ಮುಖ ದಾಕ್ಷಿಣ್ಯ ತೋರಿಸುವನೋ?
9. ಹಾಗಾದರೆ ಈಗ ದೇವರು ನಮ್ಮನ್ನು ಕನಿಕರಿಸುವ ಹಾಗೆ ಆತನನ್ನು ಬೇಡಿಕೊಳ್ಳಿರಿ ಎಂದು ಹೇಳುತ್ತಾನೆ. ಸೈನ್ಯಗಳ ಕರ್ತನು --ಇದು ನಿಮ್ಮಿಂದಲೇ ಆಯಿತು; ನಿಮಗೆ ಆತನು ಮುಖದಾಕ್ಷಿಣ್ಯ ತೋರಿಸುವನೋ?
10. ಉಚಿತವಾಗಿ ಬಾಗಲು ಗಳನ್ನಾದರೂ ಮುಚ್ಚವವನೂ ಇಲ್ಲವೆ ನನ್ನ ಬಲಿಪೀಠದಲ್ಲಿ ಉಚಿತವಾಗಿ ಬೆಂಕಿ ಹಚ್ಚುವವನೂ ನಿಮ್ಮಲ್ಲಿ ಯಾರು ಎಂದು ಹೇಳುತ್ತಾನೆ. ಸೈನ್ಯಗಳ ಕರ್ತನು--ನಿಮ್ಮಲ್ಲಿ ನನಗೆ ಇಷ್ಟವಿಲ್ಲ ಮತ್ತು ನಿಮ್ಮ ಕೈಯಿಂದ ನಾನು ಕಾಣಿಕೆಯನ್ನು ಅಂಗೀಕರಿಸುವದಿಲ್ಲ.
11. ಸೂರ್ಯೋದಯವು ಮೊದಲುಗೊಂಡು ಅದರ ಅಸ್ತಮಾನದ ವರೆಗೂ ನನ್ನ ಹೆಸರು ಅನ್ಯಜನಾಂಗ ಗಳಲ್ಲಿ ಘನವಾಗಿರುವದು; ಸಕಲ ಸ್ಥಳಗಳಲ್ಲಿ ನನ್ನ ಹೆಸರಿಗೆ ಧೂಪವೂ ಶುದ್ಧಕಾಣಿಕೆಯೂ ಅರ್ಪಿಸ ಲ್ಪಡುವದು; ನನ್ನ ಹೆಸರು ಅನ್ಯಜನಾಂಗಗಳಲ್ಲಿ ಘನ ವಾಗಿ ರುವದೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
12. ಆದರೆ ನೀವು--ಕರ್ತನ ಮೇಜು ಅಶುದ್ಧವಾ ದದ್ದೆಂದೂ ಅದರ ಫಲವೂ ಅದರ ಊಟವೂ ಹೀನ ವಾದದ್ದೆಂದೂ ಹೇಳಿ ಅದನ್ನು ಅಪವಿತ್ರಮಾಡಿದ್ದೀರಿ.
13. ಇದಲ್ಲದೆ ನೀವು--ಇಗೋ, ಎಂಥಾ ಪ್ರಯಾಸ ಎಂದು ಹೇಳಿ ಅದರ ಮೇಲೆ ಊದಿಬಿಟ್ಟಿರಿ ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ. ಹರಿಯಲ್ಪಟ್ಟದ್ದನ್ನೂ ಕುಂಟಾದದ್ದನ್ನೂ ರೋಗವುಳ್ಳದ್ದನ್ನೂ ಕಾಣಿಕೆಯಾಗಿ ತಂದಿರಿ; ಇಂಥದ್ದನ್ನು ನಾನು ನಿಮ್ಮ ಕೈಯಿಂದ ಅಂಗೀ ಕರಿಸಬಹುದೋ ಎಂದು ಕರ್ತನು ಹೇಳುತ್ತಾನೆ.
14. ಆದರೆ ತನ್ನ ಮಂದೆಯಲ್ಲಿ ಗಂಡು ಇರಲಾಗಿ ಪ್ರಮಾಣ ಮಾಡಿ ಕರ್ತನಿಗೆ ಕೆಟ್ಟು ಹೋದದ್ದನ್ನು ಅರ್ಪಿಸುವ ಮೋಸಗಾರನಿಗೆ ಶಾಪ; ನಾನು ಮಹಾ ಅರಸನು, ನನ್ನ ಹೆಸರು ಅನ್ಯಜನಾಂಗಗಳಲ್ಲಿ ಭಯಂಕರ ವಾದದ್ದು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.

Chapter 2

1. ಈಗ ಓ ಯಾಜಕರೇ, ಈ ಆಜ್ಞೆ ನಿಮಗಾಗಿ ಅದೆ.
2. ಸೈನ್ಯಗಳ ಕರ್ತನು ಹೇಳುವದೇ ನಂದರೆ ನೀವು ಕೇಳದೆ, ಹೃದಯದಲ್ಲಿ ಇಟ್ಟುಕೊಳ್ಳದೆ, ನನ್ನ ಹೆಸರಿಗೆ ಮಹಿಮೆಯನ್ನು ಕೊಡದೆ ಹೋದರೆ ನಿಮ್ಮ ಮೇಲೆ ಶಾಪವನ್ನು ಕಳುಹಿಸುವೆನು, ನಿಮ್ಮ ಆಶೀರ್ವಾದಗಳನ್ನು ಶಪಿಸುವೆನು; ಹೌದು, ಅವು ಗಳನ್ನು ಆಗಲೇ ಶಪಿಸಿದ್ದಾಯಿತು; ನೀವು ಅವುಗಳನ್ನು ಹೃದಯದಲ್ಲಿ ಇಟ್ಟುಕೊಳ್ಳುವದಿಲ್ಲ.
3. ಇಗೋ, ನಾನು ನಿಮ್ಮ ಸಂತತಿಯನ್ನು ಕೆಡಿಸಿ, ನಿಮ್ಮ ಮುಖಗಳ ಮೇಲೆ ಕಸವನ್ನು ಚೆಲ್ಲುತ್ತೇನೆ; ನಿಮ್ಮ ಪವಿತ್ರ ಹಬ್ಬಗಳನ್ನು ಸಹ ಕಸವೆಂದು ಚೆಲ್ಲುತ್ತೇನೆ. ಆಗ ಒಬ್ಬನು ನಿಮ್ಮನ್ನು ಅದರೊಂದಿಗೆ ತೆಗೆದುಬಿಡುವನು.
4. ಸೈನ್ಯಗಳ ಕರ್ತನು ಹೇಳುವದೇನಂದರೆ--ನನ್ನ ಒಡಂಬಡಿಕೆ ಲೇವಿಯ ಸಂಗಡ ಇರುವ ಹಾಗೆ ಈ ಆಜ್ಞೆಯನ್ನು ನಿಮಗೆ ಕಳುಹಿಸಿದ್ದೇನೆಂದು ತಿಳುಕೊಳ್ಳುವಿರಿ.
5. ನನ್ನ ಜೀವದ ಮತ್ತು ಸಮಾಧಾನದ ನನ್ನ ಒಡಂಬಡಿಕೆಯು ಅವನ ಸಂಗಡ ಇತ್ತು; ಅವುಗಳನ್ನು ಅವನಿಗೆ ಕೊಟ್ಟೆನು; ಅವನು ನನಗೆ ಭಯಪಟ್ಟು ನನ್ನ ಹೆಸರಿಗೆ ಅಂಜಿ ಕೊಂಡನು.
6. ಸತ್ಯದ ನ್ಯಾಯಪ್ರಮಾಣವು ಅವನ ಬಾಯಲ್ಲಿ ಇತ್ತು; ಅಕ್ರಮವು ಅವನ ತುಟಿಗಳಲ್ಲಿ ಸಿಕ್ಕಲಿಲ್ಲ. ಅವನು ಸಮಾಧಾನದಿಂದಲೂ ನ್ಯಾಯ ದಿಂದಲೂ ನನ್ನ ಸಂಗಡ ನಡೆದುಕೊಂಡು ಅನೇಕರನ್ನು ಅಕ್ರಮದಿಂದ ತಿರುಗಿಸಿದನು.
7. ಯಾಜಕನ ತುಟಿಗಳು ತಿಳುವಳಿಕೆಯನ್ನು ಕಾಪಾಡತಕ್ಕದ್ದು, ನ್ಯಾಯಪ್ರಮಾಣ ವನ್ನು ಅವನ ಬಾಯಲ್ಲಿ ಹುಡುಕತಕ್ಕದ್ದು; ಯಾಕಂದರೆ ಅವನು ಸೈನ್ಯಗಳ ಕರ್ತನ ಸೇವಕನೇ.
8. ಆದರೆ ನೀವು ಮಾರ್ಗವನ್ನು ಬಿಟ್ಟುಹೋಗಿದ್ದೀರಿ; ಅನೇಕರನ್ನು ನ್ಯಾಯಪ್ರಮಾಣಕ್ಕೆ ಎಡವುವಂತೆ ಮಾಡಿದ್ದೀರಿ; ಲೇವಿಯ ಒಡಂಬಡಿಕೆಯನ್ನು ಕೆಡಿಸಿದ್ದೀರೆಂದು ಸೈನ್ಯ ಗಳ ಕರ್ತನು ಹೇಳುತ್ತಾನೆ.
9. ಆದದರಿಂದ ನೀವು ನನ್ನ ಮಾರ್ಗಗಳನ್ನು ಕೈಕೊಳ್ಳದೆ, ನನ್ನ ನ್ಯಾಯ ಪ್ರಮಾಣದ ವಿಷಯವಾಗಿ ಮುಖದಾಕ್ಷಿಣ್ಯ ತೋರಿಸಿದ ಪ್ರಕಾರವೇ ನಾನು ನಿಮ್ಮನ್ನು ಜನರೆಲ್ಲರ ಮುಂದೆ ಅಸಡ್ಡೆ ಮಾಡಲ್ಪಟ್ಟ ವರನ್ನಾಗಿಯೂ ನೀಚರನ್ನಾಗಿಯೂ ಮಾಡಿದ್ದೇನೆ.
10. ನಮ್ಮೆಲ್ಲರಿಗೆ ಒಬ್ಬನೇ ತಂದೆಯಲ್ಲವೋ? ನಮ್ಮನ್ನು ಒಬ್ಬನೇ ದೇವರು ಸೃಷ್ಟಿಸಿದನಲ್ಲವೋ? ಯಾಕೆ ಪ್ರತಿ ಯೊಬ್ಬನು ತನ್ನ ಸಹೋದರನಿಗೆ ವಿರೋಧವಾಗಿ ವಂಚನೆಯಿಂದ ನಡೆದು ನಮ್ಮ ತಂದೆಗಳ ಒಡಂಬಡಿಕೆ ಯನ್ನು ಅಪವಿತ್ರ ಮಾಡುತ್ತೇವೆ?
11. ಯೆಹೂದವು ವಂಚನೆಯಾಗಿ ನಡೆದುಕೊಂಡಿದೆ; ಇಸ್ರಾಯೇಲಿನ ಲ್ಲಿಯೂ ಯೆರೂಸಲೇಮಿನಲ್ಲಿಯೂ ಅಸಹ್ಯವಾದದ್ದನ್ನು ಮಾಡಿದೆ. ಕರ್ತನು ಪ್ರೀತಿ ಮಾಡಿದ ಪರಿಶುದ್ಧವಾ ದದ್ದನ್ನು ಯೆಹೂದವು ಅಪವಿತ್ರಮಾಡಿ ಅನ್ಯ ದೇವರ ಮಗಳನ್ನು ಮದುವೆ ಮಾಡಿಕೊಂಡಿದೆ.
12. ಇದನ್ನು ಮಾಡುವ ಮನುಷ್ಯನನ್ನು ಅಂದರೆ, ಯಜಮಾನನನ್ನು ಜ್ಞಾನಿಯನ್ನು ಸೈನ್ಯಗಳ ಕರ್ತನಿಗೆ ಕಾಣಿಕೆ ಅರ್ಪಿಸುವ ವನನ್ನು ಕರ್ತನು ಯಾಕೋಬಿನ ಗುಡಾರಗಳೊಳಗಿಂದ ತೆಗೆದುಬಿಡುವನು.
13. ನೀವು ತಿರಿಗಿ ಇದನ್ನು ಮಾಡಿ ದ್ದೀರಿ, ಕರ್ತನ ಬಲಿಪೀಠಗಳನ್ನು ಕಣ್ಣೀರುಗಳಿಂದಲೂ ಅಳುವಿಕೆಯಿಂದಲೂ ಕೂಗುವಿಕೆಯಿಂದಲೂ ಮುಚ್ಚಿ ದ್ದೀರಿ; ಆದದರಿಂದ ಆತನು ಕಾಣಿಕೆಯನ್ನು ಇನ್ನು ಮೇಲೆ ಲಕ್ಷ್ಯ ಮಾಡದೆ ಅದನ್ನು ಮೆಚ್ಚಿಕೆಯಾದದ್ದೆಂದು ನಿಮ್ಮ ಕೈಯಿಂದ ಅಂಗೀಕರಿಸುವದಿಲ್ಲ.
14. ಆದಾಗ್ಯೂ ನೀವು--ಯಾತಕ್ಕೆ ಅನ್ನುತ್ತೀರಿ? ಕರ್ತನು ನಿನಗೂ ನೀನು ವಂಚಿಸಿದ ನಿನ್ನ ಯೌವನದ ಹೆಂಡತಿಗೂ ಸಾಕ್ಷಿಯಾಗಿ ದ್ದನು; ಆದಾಗ್ಯೂ ಅವಳು ನಿನ್ನ ಜತೆಯವಳೂ ನಿನ್ನ ಒಡಂಬಡಿಕೆಯ ಹೆಂಡತಿಯೂ ಆಗಿದ್ದಾಳೆ.
15. ಅವನಲ್ಲಿ ಆತ್ಮ ಉಳಿದಿದ್ದರೂ ಆತನು ಅವಳನ್ನು ಒಂಟಿಗಳಾಗಿ ಮಾಡಲಿಲ್ಲವೋ? ಮತ್ತು ಒಬ್ಬಳನ್ನು ಯಾಕೆ? ಅವನು ದೇವಭಕ್ತಿಯುಳ್ಳ ಸಂತಾನವನ್ನು ಹುಡುಕುವದಕ್ಕಾ ಗಿಯೇ; ಆದದರಿಂದ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ; ಒಬ್ಬನಾದರೂ ತನ್ನ ಯೌವನದ ಹೆಂಡತಿಯನ್ನು ವಂಚಿಸದೆ ಇರಲಿ,
16. ಇಸ್ರಾಯೇಲಿನ ದೇವರಾದ ಕರ್ತನು--ನಾನು ತಳ್ಳಿಬಿಡುವದನ್ನೂ ಒಬ್ಬನು ತನ್ನ ವಸ್ತ್ರವನ್ನು ಬಲಾತ್ಕಾರದಿಂದ ಮುಚ್ಚುವದನ್ನೂ ಹಗೆಮಾಡುತ್ತೇನೆಂದು ಸೈನ್ಯಗಳ ಕರ್ತನು ಹೇಳು ತ್ತಾನೆ; ಹೀಗಿರುವದರಿಂದ ನೀವು ವಂಚಿಸದ ಹಾಗೆ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ.
17. ನಿಮ್ಮ ಮಾತುಗಳಿಂದ ಕರ್ತನಿಗೆ ಬೇಸರಮಾಡಿ ದ್ದೀರಿ; ಆದಾಗ್ಯೂ--ನಾವು ಯಾವದರಲ್ಲಿ ಆತನಿಗೆ ಬೇಸರಮಾಡಿದ್ದೇವೆ ಎಂದು ಅನ್ನುತ್ತೀರಿ; ಕೆಟ್ಟದ್ದನ್ನು ಮಾಡುವವರೆಲ್ಲರೂ ಕರ್ತನ ದೃಷ್ಟಿಯಲ್ಲಿ ಒಳ್ಳೆಯವರು, ಅವರಲ್ಲಿ ಆತನು ಮೆಚ್ಚುತ್ತಾನೆಂದೂ ನ್ಯಾಯದ ದೇವರು ಎಲ್ಲಿ ಎಂದೂ ನೀವು ಹೇಳುವದರಿಂದಲೇ.

Chapter 3

1. ಇಗೋ, ನನ್ನ ದೂತನನ್ನು ನಾನು ಕಳುಹಿಸುತ್ತೇನೆ; ಅವನು ನನ್ನ ಮುಂದೆ ಮಾರ್ಗವನ್ನು ಸಿದ್ಧಮಾಡುವನು; ನೀವು ಹುಡುಕುವ ಕರ್ತನು ಫಕ್ಕನೆ ತನ್ನ ಆಲಯಕ್ಕೆ ಬರುವನು; ನೀವು ಸಂತೋಷಪಡುವ ಒಡಂಬಡಿಕೆಯ ದೂತನೇ, ಇಗೋ, ಬರುತ್ತಾನೆಂದು ಸೈನ್ಯಗಳ ಕರ್ತನು ಹೇಳು ತ್ತಾನೆ.
2. ಆದರೆ ಆತನ ಬರುವಿಕೆಯ ದಿವಸದಲ್ಲಿ ಯಾರು ಉಳಿದಾರು? ಆತನು ಪ್ರತ್ಯಕ್ಷವಾಗುವಾಗ ಯಾರು ನಿಲ್ಲುವರು? ಆತನು ಅಕ್ಕಸಾಲಿಗನ ಬೆಂಕಿಯ ಹಾಗೆಯೂ ಅಗಸನ ಚೌಳಿನ ಹಾಗೆಯೂ ಇದ್ದಾನೆ.
3. ಆತನು ಬೆಳ್ಳಿಯನ್ನು ಕರಗಿಸಿ ಶುದ್ಧಮಾಡುವವನ ಹಾಗೆ ಕುಳಿತು ಲೇವಿಯ ಕುಮಾರರನ್ನು ಶುದ್ಧಮಾಡಿ ಬಂಗಾರದ ಹಾಗೆಯೂ ಬೆಳ್ಳಿಯ ಹಾಗೆಯೂ ಅವ ರನ್ನು ಶುದ್ಧಮಾಡುವನು.
4. ಆಗ ಅವರು ಕರ್ತನಿಗೆ ನೀತಿಯಲ್ಲಿ ಕಾಣಿಕೆಯನ್ನು ಅರ್ಪಿಸುವದಕ್ಕಾಗಿಯೇ ಶುದ್ಧ ಮಾಡುವನು. ಯೆಹೂದದ ಮತ್ತು ಯೆರೂಸಲೇಮಿನ ಕಾಣಿಕೆಯು ಕರ್ತನಿಗೆ ಪೂರ್ವದ ದಿವಸಗಳಲ್ಲಿಯೂ ಮುಂಚಿನ ವರುಷಗಳಲ್ಲಿಯೂ ಆದ ಹಾಗೆ ಮೆಚ್ಚಿಕೆಯಾ ಗಿರುವದು.
5. ನ್ಯಾಯಕ್ಕೋಸ್ಕರ ನಿಮ್ಮನ್ನು ನಾನು ಸವಿಾಪಿ ಸುತ್ತೇನೆ; ಆಗ ಕಣಿಹೇಳುವವರಿಗೂ ವ್ಯಭಿಚಾರಿ ಗಳಿಗೂ ಸುಳ್ಳು ಪ್ರಮಾಣಮಾಡುವವರಿಗೂ ಸಂಬಳ ದಲ್ಲಿ ಕೂಲಿಯವನಿಗೂ ವಿಧವೆಗೂ ದಿಕ್ಕಿಲ್ಲದವನಿಗೂ ಬಲಾತ್ಕಾರ ಮಾಡುವವರಿಗೂ ಅನ್ಯನ ನ್ಯಾಯವನ್ನು ತಿರಿಗಿಸಿ ಬಿಡುವವರಿಗೂ ನನಗೆ ಭಯಪಡದವರಿಗೂ ವಿರೋಧವಾಗಿ ಶೀಘ್ರವಾದ ಸಾಕ್ಷಿಗಾರನಾಗಿರು ವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
6. ನಾನು ಕರ್ತನು, ನಾನು ಬದಲಾಗುವದಿಲ್ಲ; ಆದದರಿಂದ ಓ ಯಾಕೋಬಿನ ಕುಮಾರರೇ, ನೀವು ನಾಶವಾಗಲಿಲ್ಲ.
7. ನಿಮ್ಮ ತಂದೆಗಳ ದಿವಸಗಳಿಂದಲೇ ನನ್ನ ನಿಯಮ ಗಳನ್ನು ಬಿಟ್ಟುಹೋಗಿದ್ದೀರಿ. ಅವುಗಳನ್ನು ಕೈಕೊಳ್ಳಲಿಲ್ಲ; ನನ್ನ ಬಳಿಗೆ ತಿರುಗಿಕೊಳ್ಳಿರಿ; ಆಗ ನಾನು ನಿಮ್ಮ ಬಳಿಗೆ ತಿರುಗಿಕೊಳ್ಳುವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ; ಆದರೆ ನೀವು--ಯಾವದರಲ್ಲಿ ತಿರುಗಿಕೊಳ್ಳೋಣ ಎಂದು ಹೇಳುತ್ತೀರಿ.
8. ಮನುಷ್ಯನು ದೇವರದನ್ನು ಕಳ್ಳತನ ಮಾಡುವನೋ? ಆದರೆ ನೀವು ನನ್ನದನ್ನು ಕಳ್ಳತನ ಮಾಡಿದ್ದೀರಿ; ಆದರೆ ನೀವು--ಯಾವದರಲ್ಲಿ ನಿನ್ನದನ್ನು, ಕಳ್ಳತನ ಮಾಡಿದ್ದೇವೆಂದು ಅನ್ನುತ್ತೀರಿ? ದಶಮಭಾಗ ಮತ್ತು ಅರ್ಪಣೆಗಳನ್ನೇ.
9. ಇದರ ಮೂಲಕ ಶಪಿಸಲ್ಪಟ್ಟಿ; ನೀವು, ಹೌದು, ಈ ಸಮಸ್ತ ಜನಾಂಗವೇ ನನ್ನದನ್ನು ಕಳ್ಳತನ ಮಾಡಿದ್ದೀರಿ.
10. ನನ್ನ ಆಲಯದಲ್ಲಿ ಆಹಾರವಿರುವ ಹಾಗೆ ಹತ್ತನೇ ಪಾಲು ಗಳನ್ನೆಲ್ಲಾ ಬೊಕ್ಕಸದ ಮನೆಯಲ್ಲಿ ತನ್ನಿರಿ; ಇದರಿಂದ ನನ್ನನ್ನು ಪರೀಕ್ಷಿಸಿರಿ; ನಾನು ನಿಮಗೆ ಆಕಾಶದ ಕಿಟಕಿ ಗಳನ್ನು ತೆರೆದು ಸಾಕಾಗುವಷ್ಟಕ್ಕಿಂತ ಹೆಚ್ಚಾಗುವಷ್ಟು ಆಶೀರ್ವಾದ ನಿಮಗೆ ಸುರಿಸದಿರುವೆನೇ? ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
11. ಇದಲ್ಲದೆ ನಾನು ನಿಮ್ಮ ನಿಮಿತ್ತ ನುಂಗಿ ಬಿಡುವವನನ್ನು ಗದರಿಸುವೆನು; ಅವನು ನಿಮ್ಮ ಭೂಮಿಯ ಫಲವನ್ನು ಕೆಡಿಸನು; ಇಲ್ಲವೆ ನಿಮ್ಮ ದ್ರಾಕ್ಷೇಬಳ್ಳಿ ಹೊಲದಲ್ಲಿ ತನ್ನ ಫಲ ವನ್ನು ಕಾಲಕ್ಕೆ ಮುಂಚೆ ಉದುರಿಸಿಬಿಡುವದಿಲ್ಲವೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
12. ಜನಾಂಗಗಳೆಲ್ಲಾ ನಿಮ್ಮನ್ನು ಧನ್ಯರು ಎಂದು ಕರೆಯುವರು; ಯಾಕಂದರೆ ನೀವು ರಮ್ಯವಾದ ದೇಶವಾಗುವಿರೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
13. ನಿಮ್ಮ ಮಾತುಗಳು ನನಗೆ ವಿರೋಧವಾಗಿ ಬಲವಾಗಿದ್ದವೆಂದು ಕರ್ತನು ಹೇಳುತ್ತಾನೆ; ಆದಾಗ್ಯೂ, ನೀವು--ನಿನಗೆ ವಿರೋಧವಾಗಿ ಇಷ್ಟೊಂದು ನಾವು ಏನು ಮಾತಾಡಿದ್ದೇವೆ ಅನ್ನುತ್ತೀರಿ.
14. ನೀವು--ದೇವರನ್ನು ಸೇವಿಸುವದು ವ್ಯರ್ಥವೆಂದೂ ನಾವು ಆತನ ನಿಯಮಗಳನ್ನು ಕೈಕೊಂಡು ಸೈನ್ಯಗಳ ಕರ್ತನ ಮುಂದೆ ದುಃಖವಾಗಿ ನಡೆದದ್ದರಿಂದ ಏನು ಪ್ರಯೋ ಜನವೆಂದೂ ಹೇಳಿದಿರಿ.
15. ಈಗ ನಾವು ಗರ್ವಿಷ್ಠ ರನ್ನು ಭಾಗ್ಯವಂತರೆಂದನ್ನುತ್ತೇವೆ; ಹೌದು, ದುಷ್ಟತ್ವ ಮಾಡುವವರು ಅಭಿವೃದ್ಧಿಯಾಗುತ್ತಾರೆ; ಹೌದು, ದೇವರನ್ನು ಪರೀಕ್ಷಿಸುವವರೇ ರಕ್ಷಿಸಲ್ಪಟ್ಟಿದ್ದಾರೆ ಎಂದು ಹೇಳಿದ್ದೀರಿ.
16. ಆಗ ಕರ್ತನಿಗೆ ಭಯಪಡುವವರು ಒಬ್ಬರ ಸಂಗಡಲೊಬ್ಬರು ಆಗಾಗ್ಗೆ ಮಾತಾಡಿಕೊಂಡರು; ಕರ್ತನು ಕಿವಿಗೊಟ್ಟು ಅದನ್ನು ಕೇಳಿದನು; ಇದಲ್ಲದೆ ಕರ್ತನಿಗೆ ಭಯಪಡುವವರಿಗೋಸ್ಕರವೂ ಆತನ ಹೆಸರನ್ನು ನೆನಸುವವರಿಗೋಸ್ಕರವೂ ಆತನ ಮುಂದೆ ಜ್ಞಾಪಕದ ಪುಸ್ತಕವು ಬರೆಯಲ್ಪಟ್ಟಿತು.
17. ನಾನು ನನ್ನ ಆಭರಣಗಳನ್ನು ಕೂಡಿಸಿಕೊಳ್ಳುವ ಆ ದಿನದಲ್ಲಿ ಅವರು ನನ್ನವರಾಗಿರುವರೆಂದೂ ಒಬ್ಬನು ತನಗೆ ಸೇವೆ ಮಾಡುವ ತನ್ನ ಮಗನನ್ನು ಕನಿಕರಿಸುವ ಪ್ರಕಾರ ಅವರನ್ನು ಕನಿಕರಿಸುವೆನೆಂದೂ ಸೈನ್ಯಗಳ ಕರ್ತನು ಹೇಳುತ್ತಾನೆ.
18. ಆಗ ನೀವು ತಿಳುಕೊಂಡು ನೀತಿವಂತ ನಿಗೂ ದುಷ್ಟನಿಗೂ ದೇವರ ಸೇವೆಮಾಡುವವನಿಗೂ ಮಾಡದವನಿಗೂ ಇರುವ ಹೆಚ್ಚುಕಡಿಮೆಯನ್ನು ತಿಳುಕೊಳ್ಳುವಿರಿ.

Chapter 4

1. ಇಗೋ, ಆ ದಿನವು ಬರುತ್ತದೆ; ಅದು ಒಲೆಯ ಹಾಗೆ ಉರಿಯುವದು; ಆಗ ಗರ್ವಿಷ್ಠರೆಲ್ಲರೂ ಹೌದು, ಕೆಟ್ಟದ್ದನ್ನು ಮಾಡುವವ ರೆಲ್ಲರೂ ಹುಲ್ಲಿನಂತಿರುವರು; ಬರುವ ಆ ದಿನವು ಅವರನ್ನು ಸುಟ್ಟುಬಿಡುವದು; ಬೇರನ್ನಾದರೂ ಕೊಂಬೆ ಯನ್ನಾದರೂ ಅವರಿಗೆ ಬಿಡದು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
2. ಆದರೆ ನನ್ನ ಹೆಸರಿಗೆ ಭಯಪಡುವವರಾದ ನಿಮಗೆ ನೀತಿಯ ಸೂರ್ಯನು ತನ್ನ ರೆಕ್ಕೆಗಳಲ್ಲಿ ಸ್ವಸ್ಥತೆಯನ್ನುಂಟು ಮಾಡುವವನಾಗಿ ಉದಯಿಸುವನು; ನೀವು ಹೊರಟು ಕೊಟ್ಟಿಗೆಯಿಂದ ಬಿಟ್ಟ ಕರುಗಳ ಹಾಗೆ ಕುಣಿದಾಡುವಿರಿ.
3. ದುಷ್ಟರನ್ನು ತುಳಿದುಬಿಡುವಿರಿ; ಯಾಕಂದರೆ ನಾನು ಕಾರ್ಯ ಸಾಧಿಸುವ ದಿನದಲ್ಲಿ ಅವರು ನಿಮ್ಮ ಪಾದಗಳ ಕೆಳಗೆ ಬೂದಿಯಾಗಿರುವರೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
4. ನನ್ನ ಸೇವಕನಾದ ಮೋಶೆಯ ನ್ಯಾಯಪ್ರಮಾಣ ವನ್ನೂ ನಾನು ಅವನಿಗೆ ಹೋರೇಬಿನಲ್ಲಿ ಸಮಸ್ತ ಇಸ್ರಾಯೇಲಿಗೋಸ್ಕರ ಆಜ್ಞಾಪಿಸಿದ್ದನ್ನೂ ನಿಯಮ ಗಳನ್ನೂ ನ್ಯಾಯಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.
5. ಇಗೋ, ಕರ್ತನ ದೊಡ್ಡ ಭಯಂಕರವಾದ ದಿನವು ಬರುವದಕ್ಕಿಂತ ಮುಂಚೆ ನಿಮಗೆ ಪ್ರವಾದಿಯಾದ ಎಲೀಯನನ್ನು ಕಳುಹಿಸುತ್ತೇನೆ.
6. ನಾನು ಬಂದು ಭೂಮಿಯನ್ನು ಶಾಪದಿಂದ ಹೊಡೆಯದ ಹಾಗೆ ಅವನು ತಂದೆಗಳ ಹೃದಯವನ್ನು ಮಕ್ಕಳ ಕಡೆಗೂ ಮಕ್ಕಳ ಹೃದಯವನ್ನು ತಮ್ಮ ತಂದೆಗಳ ಕಡೆಗೂ ತಿರುಗಿಸುವನು.


Free counters!   Site Meter(April28th2012)