Home Churches About
 

Chapter 1

1. ಪ್ರವಾದಿಯಾದ ಹಬಕ್ಕೂಕನು ನೋಡಿದ ದೈವೋಕ್ತಿ.
2. ಓ ಕರ್ತನೇ, ನಾನು ನಿನಗೆ ಮೊರೆಯಿಟ್ಟರೂ ಎಷ್ಟರ ವರೆಗೆ ನೀನು ಕೇಳದೇ ಇರುವಿ? ಹಿಂಸೆ ಹಿಂಸೆ ಎಂದು ನಿನಗೆ ಕೂಗುತ್ತೇನೆ; ಆದರೆ ನೀನು ರಕ್ಷಿಸುವದಿಲ್ಲ.
3. ಯಾಕೆ ನನಗೆ ಅಪರಾಧವನ್ನು ತೋರಿಸಿ ಕಷ್ಟವನ್ನು ನೋಡಮಾಡುತ್ತೀ? ಸೂರೆಯೂ ಹಿಂಸೆಯೂ ನನ್ನ ಮುಂದೆ ಅವೆ; ಜಗಳವನ್ನೂ ತರ್ಕವನ್ನೂ ಎಬ್ಬಿಸುವವರು ಇದ್ದಾರೆ.
4. ಆದದರಿಂದ ನ್ಯಾಯಪ್ರಮಾಣವು ಸಡಿಲವಾಗುತ್ತದೆ; ನ್ಯಾಯತೀರ್ಪು ಎಂದಿಗೂ ಹೊರಡುವದಿಲ್ಲ; ದುಷ್ಟರು ನೀತಿ ವಂತರನ್ನು ಸುತ್ತಿಕೊಂಡಿದ್ದಾರೆ; ಆದದರಿಂದ ತಪ್ಪಾಗಿ ನ್ಯಾಯತೀರ್ಪು ಹೊರಡುತ್ತದೆ.
5. ಅನ್ಯಜನಾಂಗಗಳಲ್ಲಿ ನೋಡಿ ಲಕ್ಷ್ಯಗೊಟ್ಟು ಬಹಳ ವಾಗಿ ಆಶ್ಚರ್ಯಪಡಿರಿ; ತಿಳಿಸಿದರೂ ನೀವು ನಂಬದಂಥ ಕ್ರಿಯೆಯನ್ನು ನಿಮ್ಮ ದಿವಸಗಳಲ್ಲಿ ನಾನು ಮಾಡುತ್ತೇನೆ.
6. ಇಗೋ, ನಾನು ಕಸ್ದೀಯರನ್ನು ಎಬ್ಬಿಸುತ್ತೇನೆ; ಅದು ಕಹಿಯಾದ ತೀವ್ರವಾದ ಜನಾಂಗವು; ತಮ್ಮದಲ್ಲದ ನಿವಾಸಗಳನ್ನು ವಶಮಾಡಿ ಕೊಳ್ಳುವದಕ್ಕೆ ವಿಶಾಲ ವಾದ ದೇಶದಲ್ಲಿ ಹಾದುಹೋಗುವದು.
7. ಅವರು ಭಯಂಕರವಾದವರು ಮತ್ತು ಕ್ರೂರವಾದವರು; ಅವರ ನ್ಯಾಯವೂ ಘನತೆಯೂ ಅವರಿಂದಲೇ ಹೊರಡುತ್ತವೆ.
8. ಅವರ ಕುದುರೆಗಳು ಸಹ ಚಿರತೆಗಳಿಗಿಂತ ವೇಗ ವಾಗಿಯೂ ಸಂಜೆಯ ತೋಳಗಳಿಗಿಂತ ಚುರುಕಾ ಗಿಯೂ ಅವೆ; ಅವರ ಕುದುರೆ ಸವಾರರು ತಾವೇ ಹರಡಿಕೊಳ್ಳುವರು; ಅವರ ಸವಾರರು ದೂರದಿಂದ ಬರುವರು; ತಿನ್ನುವದಕ್ಕೆ ತ್ವರೆಪಡುವ ಹದ್ದಿನಂತೆ ಹಾರಿಬರುವರು.
9. ಅವರೆಲ್ಲರು ಹಿಂಸಿಸುವದಕ್ಕೆ ಬರುವರು; ಅವರ ಮುಖಗಳು ಮೂಡಣ ಗಾಳಿ ಯಂತೆಯೇ ತಿಂದುಬಿಡುವವು; ಸೆರೆಯವರನ್ನು ಮರ ಳಿನ ಹಾಗೆ ಕೂಡಿಸುವರು.
10. ಅವರು ಅರಸರನ್ನು ಧಿಕ್ಕರಿಸುವರು; ಪ್ರಧಾನರು ಅವರಿಗೆ ಪರಿಹಾಸ್ಯ ಮಾಡುವರು. ಕೋಟೆಗಳಿಗೆಲ್ಲಾ ಕುಚೋದ್ಯ ಮಾಡು ವರು. ಮಣ್ಣನ್ನು ಕುಪ್ಪೆಮಾಡಿ ಅದನ್ನು ಹಿಡಿಯುವರು.
11. ಆಗ ಮನಸ್ಸನ್ನು ಬದಲು ಮಾಡಿ, ಹಾದುಹೋಗಿ ಅಪರಾಧಮಾಡುವರು; ಅವರ ದೇವರಿಂದಾಗುವ ಶಕ್ತಿ ಇದೆ ಅನ್ನುವರು.
12. ನನ್ನ ದೇವರಾದ ಕರ್ತನೇ, ನನ್ನ ಪರಿಶುದ್ಧನೇ, ನೀನು ಅನಾದಿಯಿಂದ ಇರುತ್ತೀಯಲ್ಲವೋ? ನಾವು ಸಾಯುವದಿಲ್ಲ. ಓ ಕರ್ತನೇ, ನ್ಯಾಯತೀರ್ಪಿಗೆ ಅವ ರನ್ನು ನೇಮಿಸಿದ್ದೀ; ಓ ಪರಾಕ್ರಮಿಯಾದ ದೇವರೇ, ಶಿಕ್ಷೆಗೆ ಅವರನ್ನು ಸ್ಥಾಪಿಸಿದ್ದೀ.
13. ನೀನು ಕೆಟ್ಟದ್ದನ್ನು ನೋಡಕೂಡದ ಹಾಗೆ ಶುದ್ಧ ಕಣ್ಣುಗಳುಳ್ಳವನು; ನೀನು ಅನ್ಯಾಯವನ್ನು ದೃಷ್ಟಿಸಲಾರಿ; ವಂಚಿಸುವವರನ್ನು ಯಾಕೆ ದೃಷ್ಟಿಸುತ್ತೀ? ದುಷ್ಟನು ತನಗಿಂತ ನೀತಿವಂತ ನನ್ನು ನುಂಗಿಬಿಡುವ ವೇಳೆಯಲ್ಲಿ ಯಾಕೆ ಸುಮ್ಮನಿ ರುತ್ತೀ?
14. ಮನುಷ್ಯರನ್ನು ಸಮುದ್ರದ ವಿಾನುಗ ಳಂತೆಯೂ ಆಳುವವನಿಲ್ಲದ ಕ್ರಿಮಿಗಳಂತೆಯೂ ಯಾಕೆ ಮಾಡುತ್ತೀ?
15. ಅವರನ್ನೆಲ್ಲಾ ಗಾಳದಿಂದ ಎತ್ತಿ ತಮ್ಮ ಬಲೆಯಿಂದ ಅವರನ್ನು ಹಿಡಿದು ತಮ್ಮ ಜಾಲದಿಂದ ಅವರನ್ನು ಕೂಡಿಸುತ್ತಾರೆ; ಆದದರಿಂದ ಸಂತೋಷಿಸಿ ಉಲ್ಲಾಸ ಪಡುತ್ತಾರೆ.
16. ತಮ್ಮ ಬಲೆಗೆ ಬಲಿ ಅರ್ಪಿಸಿ ತಮ್ಮ ಜಾಲಕ್ಕೆ ಧೂಪವನ್ನು ಸುಡುತ್ತಾರೆ; ಇವುಗಳಿಂದ ಅವರ ಪಾಲು ಕೊಬ್ಬಾಗಿಯೂ ಅವರ ಆಹಾರ ಪುಷ್ಟಿ ಯುಳ್ಳದ್ದಾಗಿಯೂ ಇದೆ.
17. ಹೀಗಿರುವದರಿಂದ ಅವರು ತಮ್ಮ ಬಲೆಯನ್ನು ಬರಿದುಮಾಡಿ ನಿತ್ಯವಾಗಿ ಜನಾಂಗ ಗಳನ್ನು ಕರುಣಿಸದೆ ಸದಾ ಸಂಹರಿಸುತ್ತಿರಬೇಕೋ?

Chapter 2

1. ನನ್ನ ಕಾವಲಲ್ಲಿ ನಿಂತು ಗೋಪುರದ ಮೇಲೆ ನೆಲೆಯಾಗಿದ್ದು ಆತನು ನನಗೆ ಏನು ಹೇಳುವನೋ, ನನ್ನ ತರ್ಕದ ವಿಷಯ ಏನು ಉತ್ತರ ಕೊಡಬೇಕೋ ನೋಡುವದಕ್ಕೆ ಕಾದುಕೊಂಡಿರುವೆನು.
2. ಆಗ ಕರ್ತನು ನನಗೆ ಉತ್ತರಕೊಟ್ಟು ಹೇಳಿದ್ದೇ ನಂದರೆ--ದರ್ಶನವನ್ನು ಬರೆ; ಓದುವವನು ಶೀಘ್ರ ವಾಗಿ ಓದುವಂತೆ ಅದನ್ನು ಹಲಗೆಗಳ ಮೇಲೆ ಕೆತ್ತು.
3. ದರ್ಶನವು ಇನ್ನು ನೇಮಕವಾದ ಕಾಲಕ್ಕೆ ಉಂಟು; ಆದರೆ ಕಡೆಯಲ್ಲಿ ಅದು ಸುಳ್ಳಾಗದೆ ಮಾತನಾಡುವದು; ಅದು ತಡವಾ ದರೂ ಅದಕ್ಕೆ ಕಾದುಕೊಂಡಿರು; ಅದು ತಡಮಾಡದೆ ನಿಶ್ಚಯವಾಗಿ ಬರುವದು.
4. ಇಗೋ, ಹೆಚ್ಚಿಸಿಕೊಂಡವನ ಆತ್ಮವು ತನ್ನಲ್ಲಿ ಯಥಾರ್ಥವಲ್ಲ; ಆದರೆ ನೀತಿವಂತನು ತನ್ನ ವಿಶ್ವಾಸದಿಂದ ಬದುಕುವನು.
5. ಹೌದು, ಅವನು ದ್ರಾಕ್ಷಾರಸದಿಂದ ಉಲ್ಲಂಘಿಸು ತ್ತಾನೆ. ಅಹಂಕಾರದ ಮನುಷ್ಯನಾಗಿದ್ದಾನೆ; ಮನೆಯಲ್ಲಿ ಇರುವದಿಲ್ಲ; ಇವನು ಪಾತಾಳದ ಹಾಗೆ ತನ್ನ ಆಶೆಯನ್ನು ದೊಡ್ಡದಾಗಿ ಮಾಡಿಕೊಂಡು ಮರಣದ ಹಾಗಿದ್ದಾನೆ, ತೃಪ್ತಿಯಾಗುವದಿಲ್ಲ; ಎಲ್ಲಾ ಜನಾಂಗಗಳನ್ನು ತನಗಾಗಿ ಕೂಡಿಸುತ್ತಾನೆ; ಎಲ್ಲಾ ಜನಗಳನ್ನು ತನಗಾಗಿ ದೊಡ್ಡ ಗುಂಪನ್ನಾಗಿ ಮಾಡಿಕೊಳ್ಳುತ್ತಾನೆ.
6. ಇವರೆಲ್ಲರು ಅವನ ಮೇಲೆ ಸಾಮ್ಯವನ್ನೂ ಹಾಸ್ಯದ ಸಾಮತಿಯನ್ನೂ ಎತ್ತಿ--ತನಗಲ್ಲದ್ದನ್ನು ಹೆಚ್ಚಿಸಿಕೊಳ್ಳು ವವನಿಗೆ ಅಯ್ಯೋ! ಅದು ಎಷ್ಟರ ವರೆಗೆ? ತಾನಾಗಿ ತನ್ನ ಮೇಲೆ ಗಟ್ಟಿ ಮಣ್ಣನ್ನು ಹೊತ್ತುಕೊಳ್ಳುವವನಿಗೆ ಅಯ್ಯೋ ಎಂದು ಹೇಳರೋ?
7. ನಿನ್ನನ್ನು ಕಚ್ಚುವವರು ಕ್ಷಣಮಾತ್ರದಲ್ಲಿ ಏಳರೋ? ನಿನ್ನನ್ನು ಪೀಡಿಸುವವರು ಎಚ್ಚರವಾಗರೋ? ಆಗ ನೀನು ಅವರಿಗೆ ಸುಲಿಗೆ ಯಾಗುವಿ.
8. ನೀನು ಅನೇಕ ಜನಾಂಗಗಳನ್ನು ಸೂರೆ ಮಾಡಿದ್ದರಿಂದ ಜನರಲ್ಲಿ ಉಳಿದವರೆಲ್ಲಾ ನಿನ್ನನ್ನು ಸೂರೆ ಮಾಡುವರು; ಮನುಷ್ಯರ ರಕ್ತಕ್ಕಾಗಿ ದೇಶ, ಪಟ್ಟಣ, ಅದರ ಎಲ್ಲಾ ನಿವಾಸಿಗಳ ಬಲಾತ್ಕಾರದ ನಿಮಿತ್ತವೇ.
9. ತನ್ನ ಗೂಡನ್ನು ಉನ್ನತದಲ್ಲಿ ಇಡುವ ಹಾಗೆಯೂ ಕೇಡಿನ ಕೈಗೆ ತಪ್ಪಿಸಿಕೊಳ್ಳುವ ಹಾಗೆಯೂ ತನ್ನ ಮನೆ ಗೋಸ್ಕರ ದುರ್ಲಾಭವನ್ನು ಆಶಿಸುವವನಿಗೆ ಅಯ್ಯೋ!
10. ಅನೇಕ ಜನಗಳನ್ನು ಕಡಿದುಬಿಡುವದರಿಂದ ನಿನ್ನ ಮನೆಗೆ ನಾಚಿಕೆಯನ್ನು ಯೋಚಿಸಿದ್ದೀ; ಸ್ವಂತ ಪ್ರಾಣಕ್ಕೆ ವಿರೋಧವಾಗಿ ಪಾಪಮಾಡಿದ್ದೀ.
11. ಗೋಡೆಯೊಳ ಗಿಂದ ಕಲ್ಲು ಕೂಗುತ್ತದೆ. ಮರದ ತೊಲೆ ಅದಕ್ಕೆ ಉತ್ತರ ಕೊಡುತ್ತದೆ.
12. ಊರನ್ನು ರಕ್ತದಿಂದ ಕಟ್ಟಿ, ಪಟ್ಟಣವನ್ನು ಅನ್ಯಾಯ ದಿಂದ ಸ್ಥಾಪಿಸುವವನಿಗೆ ಅಯ್ಯೋ!
13. ಇಗೋ, ಇದು ಸೈನ್ಯಗಳ ಕರ್ತನಿಂದ ಅಲ್ಲವೋ? ಏನಂದರೆ, ಜನರು ಬೆಂಕಿಗೋಸ್ಕರ ಪರಿಶ್ರಮಪಟ್ಟ ವ್ಯರ್ಥಕ್ಕೋಸ್ಕರ ಆಯಾಸಪಡುವದೇ.
14. ನೀರುಗಳು ಸಮುದ್ರವನ್ನು ಮುಚ್ಚುವ ಪ್ರಕಾರ ಭೂಮಿಯು ಕರ್ತನ ಮಹಿಮೆಯ ತಿಳುವಳಿಕೆಯಿಂದ ತುಂಬಿರುವದು.
15. ತನ್ನ ನೆರೆಯವ ನಿಗೆ ಕುಡಿಯಕೊಟ್ಟು ನಿನ್ನ ಬುಟ್ಟಿಯನ್ನು ಹೊಯಿದು ಅವರ ಬೆತ್ತಲೆತನವನ್ನು ನೋಡುವ ಹಾಗೆ ಅಮಲೇರಿ ಸುವವನಿಗೆ ಅಯ್ಯೋ!
16. ಘನತೆಗೆ ಬದಲಾಗಿ ನಿಂದೆ ಯಿಂದ ತುಂಬಿದ್ದೀ; ನೀನು ಸಹ ಕುಡಿದು ನಿನ್ನ ಮುಂದೊಗಲು ಮುಚ್ಚಲ್ಪಡದಿರಲಿ. ಕರ್ತನ ಬಲಗೈಯ ಪಾತ್ರೆ ನಿನ್ನ ಕಡೆಗೆ ತಿರುಗುವದು. ನಿನ್ನ ಘನತೆಯ ಮೇಲೆ ಕಾರುವಿಕೆಯೂ ಲಜ್ಜೆಯೂ ಇರುವದು.
17. ಲೆಬನೋನಿನ ಹಿಂಸೆಯು ನಿನ್ನನ್ನು ಮುಚ್ಚುವದು; ಮೃಗಗಳ ಸೂರೆ ನಿನ್ನನ್ನು ಹೆದರಿಸುವದು; ಮನುಷ್ಯರ ರಕ್ತಕ್ಕಾಗಿ, ದೇಶ, ಪಟ್ಟಣ, ಅದರ ಎಲ್ಲಾ ನಿವಾಸಿಗಳ ಹಿಂಸೆಯು ನಿಮಿತ್ತವೇ.
18. ಅದನ್ನು ಕೆತ್ತಿ ರೂಪಿಸಿದವನ ಕೆತ್ತಿದ ವಿಗ್ರಹದಿಂದ ಪ್ರಯೋಜನವೇನು? ಸುಳ್ಳನ್ನು ಬೋಧಿಸುವಂಥ, ಅದನ್ನು ರೂಪಿಸಿದವನು ಮೂಕ ಬೊಂಬೆಗಳನ್ನು ಮಾಡಿ ಅದರಲ್ಲಿ ನಂಬಿಕೆಯಿಡು ವಂಥ, ಎರಕದ ವಿಗ್ರಹದಿಂದ ಪ್ರಯೋಜನವೇನು?
19. ಮರಕ್ಕೆ--ಎಚ್ಚರವಾಗು; ಮೂಕವಾದ ಕಲ್ಲಿಗೆ--ಎದ್ದು ಬೋಧಿಸಲಿ ಎಂದು ಹೇಳುವವನಿಗೆ ಅಯ್ಯೋ! ಇಗೋ, ಅದು ಬಂಗಾರದಿಂದಲೂ ಬೆಳ್ಳಿಯಿಂದಲೂ ಹೊದಿಸಲ್ಪಟ್ಟಿದೆ, ಆದರೆ ಅದರಲ್ಲಿ ಉಸಿರು ಎಷ್ಟು ಮಾತ್ರವೂ ಇಲ್ಲ.
20. ಆದರೆ ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿ ಇದ್ದಾನೆ; ಆತನ ಮುಂದೆ ಭೂಮಿಯೆಲ್ಲಾ ಮೌನವಾಗಿರಲಿ.

Chapter 3

1. ಶಿಗ್ಯೋನೋತನ ಮೇಲೆ ಪ್ರವಾದಿಯಾದ ಹಬಕ್ಕೂಕನ ಪ್ರಾರ್ಥನೆ. ಕರ್ತನೇ, ನಿನ್ನ ಮಾತನ್ನು ಕೇಳಿ ಭಯಪಟ್ಟಿದ್ದೇನೆ.
2. ಕರ್ತನೇ, ವರುಷ ಗಳ ಮಧ್ಯದಲ್ಲಿ ನಿನ್ನ ಕೆಲಸವನ್ನು ಉಜ್ಜೀವಿಸಮಾಡು. ವರುಷಗಳ ಮಧ್ಯದಲ್ಲಿ ತಿಳಿಯಮಾಡು, ರೌದ್ರದಲ್ಲಿ ಕರುಣೆಯನ್ನು ಜ್ಞಾಪಕಮಾಡು;
3. ದೇವರು ತೇಮಾನಿ ನಿಂದಲೂ ಪರಿಶುದ್ಧನು ಪಾರಾನ್‌ ಪರ್ವತದಿಂದಲೂ ಬಂದನು. ಸೆಲಾ. ಆತನ ಮಹಿಮೆ ಆಕಾಶಗಳನ್ನು ಮುಚ್ಚಿತು: ಆತನ ಸ್ತೋತ್ರವು ಭೂಮಿಯನ್ನು ತುಂಬಿ ಸಿತು.
4. ಆತನ ಪ್ರಕಾಶವು ಬೆಳಕಿನ ಹಾಗಿತ್ತು; ಆತನಿಗೆ ತನ್ನ ಕೈಯೊಳಗಿಂದ ಕೊಂಬುಗಳು ಬಂದವು; ಅಲ್ಲಿ ಆತನ ಅಧಿಕಾರವನ್ನು ಮರೆಮಾಡುವದಾಗಿತ್ತು.
5. ಆತನ ಮುಂದೆ ಜಾಡ್ಯವು ಹೋಯಿತು. ಆತನ ಕಾಲುಗಳಿಂದ ಉರಿ ಕೆಂಡಗಳು ಹೊರಟವು.
6. ಆತನು ನಿಂತುಕೊಂಡು ಭೂಮಿಯನ್ನು ಅಳೆದನು. ಆತನು ನೋಡಿ ಜನಾಂಗ ಗಳನ್ನು ಓಡಿಸಿಬಿಟ್ಟನು; ಶಾಶ್ವತವಾದ ಪರ್ವತಗಳು ಚದುರಿಸಲ್ಪಟ್ಟವು; ನಿತ್ಯವಾದ ಗುಡ್ಡಗಳು ನಡುಗಿ ದವು; ಆತನ ಮಾರ್ಗಗಳು ನಿತ್ಯವಾದವುಗಳೇ.
7. ಕೂಷಾನಿನ ಡೇರೆಗಳನ್ನು ಕಷ್ಟದೊಳಗೆ ನೋಡಿ ದೆನು; ಮಿದ್ಯಾನಿನ ದೇಶದ ತೆರೆಗಳು ನಡುಗಿದವು.
8. ಕರ್ತನು ನದಿಗಳ ಮೇಲೆ ಉರಿಗೊಂಡನೋ? ನದಿಗಳ ಮೇಲೆ ನಿನ್ನ ಕೋಪವಿತ್ತೋ? ಸಮುದ್ರದ ಮೇಲೆ ನಿನ್ನ ರೌದ್ರ ವಿತ್ತೋ? ಇದಕ್ಕಾಗಿ ನಿನ್ನ ಕುದುರೆ ಗಳ ಮೇಲೆ ಸವಾರಿ ಮಾಡಿ ನಿನ್ನ ರಕ್ಷಣೆಯ ರಥಗ ಳಲ್ಲಿ ಹತ್ತಿದಿಯೋ?
9. ನೀನು ಗೋತ್ರಗಳಿಗೆ ಆಣೆ ಯಿಟ್ಟ ವಾಕ್ಯದ ಪ್ರಕಾರ ನಿನ್ನ ಬಿಲ್ಲು ಪೂರ್ಣ ಬರಿದಾ ಯಿತು. ಸೆಲಾ. ಭೂಮಿಯನ್ನು ನದಿಗಳಿಂದ ಸೀಳಿದಿ.
10. ಬೆಟ್ಟಗಳು ನಿನ್ನನ್ನು ನೋಡಿ ನಡುಗಿದವು; ಜಲ ಪ್ರವಾಹವು ಹಾದು ಹೋಯಿತು; ಅಗಾಧವು ತನ್ನ ಶಬ್ದವನ್ನು ಕೊಟ್ಟಿತು; ತನ್ನ ಕೈಗಳನ್ನು ಮೇಲಕ್ಕೆ ಎತ್ತಿ ಕೊಂಡಿತು.
11. ಸೂರ್ಯ ಚಂದ್ರಗಳು ತಮ್ಮ ನಿವಾಸ ದಲ್ಲಿ ಕದಲದೆ ನಿಂತುಬಿಟ್ಟವು. ನಿನ್ನ ಬಾಣಗಳು ಬೆಳಕಿ ನಿಂದಲೂ ನಿನ್ನ ಈಟಿಯು ಮಿಂಚುವ ಪ್ರಕಾಶದಿಂದಲೂ ಹೊರಟವು.
12. ನೀನು ಸಿಟ್ಟಿನಿಂದ ದೇಶದ ಮೇಲೆ ನಡೆದುಹೋಗಿ ಕೋಪದಿಂದ ಅನ್ಯಜನಾಂಗಗಳನ್ನು ತುಳಿದುಹಾಕಿದ್ದೀ.
13. ನಿನ್ನ ಜನರ ರಕ್ಷಣೆಗೋಸ್ಕರವೂ ನಿನ್ನ ಅಭಿಷಿಕ್ತರ ರಕ್ಷಣೆಗೊಸ್ಕರವೂ ನೀನು ಹೊರಟು ಹೋಗಿ ಕುತ್ತಿಗೆಯ ವರೆಗೂ ಆಸ್ತಿವಾರವನ್ನು ಬರಿದು ಮಾಡಿದ ಹಾಗೆ ದುಷ್ಟರ ಮನೆಯ ತಲೆಯನ್ನು ಗಾಯ ಮಾಡಿಬಿಟ್ಟಿದ್ದೀ. ಸೆಲಾ.
14. ಅವನ ದೊಣ್ಣೆಗಳಿಂದಲೇ ತನ್ನ ಹಳ್ಳಿಗಳ ಮುಖ್ಯಸ್ಥನನ್ನು ಹೊಡೆದಿದ್ದೀ; ಅವರು ನನ್ನನ್ನು ಚದುರಿಸುವದಕ್ಕೆ ಬಿರುಗಾಳಿಯಂತೆ ಬಂದರು; ಬಡವರನ್ನು ಅಂತರಂಗದಲ್ಲಿ ನುಂಗಿಬಿಡುವ ಹಾಗೆ ಅವರಿಗೆ ಸಂತೋಷವು ಇರುವದು.
15. ನೀನು ನಿನ್ನ ಕುದುರೆಗಳ ಸಂಗಡ ಸಮುದ್ರದಲ್ಲಿಯೂ ಮಹಾಜಲ ಗಳ ಸಮೂಹದಲ್ಲಿಯೂ ನಡೆದುಹೋದಿ.
16. ನಾನು ಕೇಳಿದಾಗ ನನ್ನ ಹೊಟ್ಟೆಯು ತಳಮಳಗೊಂಡಿತು, ಆ ಶಬ್ದಕ್ಕೆ ನನ್ನ ತುಟಿಗಳು ಅದರಿದವು; ಇಕ್ಕಟ್ಟಿನ ದಿನದಲ್ಲಿ ನಾನು ವಿಶ್ರಾಂತಿಯನ್ನು ಹೊಂದುವ ಹಾಗೆ ಕೊಳೆಯುವಿಕೆಯು ನನ್ನ ಎಲುಬುಗಳಲ್ಲಿ ಸೇರಿತು, ನಾನು ನಿಂತ ಹಾಗೆಯೇ ನಡುಗಿದೆನು; ಆತನು ಜನರ ಬಳಿಗೆ ಬರುವಾಗ ತನ್ನ ಸೈನ್ಯಗಳ ಕೂಡ ಅವರ ಮೇಲೆ ದಾಳಿ ಮಾಡುವನು.
17. ಅಂಜೂರದ ಮರವು ಚಿಗುರ ದಿದ್ದರೂ ದ್ರಾಕ್ಷೇಬಳ್ಳಿಗಳಲ್ಲಿ ಹಣ್ಣು ಇಲ್ಲದಿದ್ದರೂ ಎಣ್ಣೇ ಮರಗಳ ಉತ್ಪತ್ತಿಯು ನಿಂತುಹೋದರೂ ಹೊಲಗಳು ಆಹಾರ ಕೊಡದಿದ್ದರೂ ಹಟ್ಟಿಯೊಳಗಿಂದ ಮಂದೆಗಳು ಕಡಿದು ಬಿಡಲ್ಪಟ್ಟಿದ್ದರೂ ಗೋದಲಿಗಳಲ್ಲಿ ಮಂದೆ ಇಲ್ಲದಿದ್ದರೂ
18. ನಾನು ಕರ್ತನಲ್ಲಿ ಸಂತೋಷಿ ಸುವೆನು, ನನ್ನ ರಕ್ಷಣೆಯ ದೇವರಲ್ಲಿ ಉಲ್ಲಾಸಪಡು ವೆನು.
19. ಕರ್ತನಾದ ದೇವರು ನನ್ನ ಬಲವಾಗಿದ್ದಾನೆ. ಆತನು ನನ್ನ ಕಾಲುಗಳನ್ನು ಜಿಂಕೆಯ ಕಾಲುಗಳ ಹಾಗೆ ಮಾಡಿ ನನ್ನ ಉನ್ನತ ಸ್ಥಳಗಳಲ್ಲಿ ನಾನು ನಡೆಯುವಂತೆ ಆತನು ಮಾಡುವನು. ಪ್ರಧಾನ ಗಾಯಕನ ಕೀರ್ತನ ಸಂಗ್ರಹದಿಂದ ತೆಗೆದದ್ದು: ನನ್ನ ತಂತಿವಾದ್ಯದೊಡನೆ ಹಾಡತಕ್ಕದ್ದು.


Free counters!   Site Meter(April28th2012)