Home Churches About
 

Chapter 1

1. ನಾನು ಸೆರೆಯವರ ಜೊತೆ ಕೆಬಾರ್‌ ನದಿಯ ಬಳಿಯಲ್ಲಿರುವಾಗ ಮೂವತ್ತ ನೆಯ ವರುಷದ ನಾಲ್ಕನೆಯ ತಿಂಗಳಿನ ಐದನೆಯ ದಿನದಲ್ಲಿ ಆದದ್ದೇನಂದರೆ, ಆಕಾಶಗಳು ತೆರೆಯಲ್ಪ ಟ್ಟವು; ನಾನು ದೇವರ ದರ್ಶನಗಳನ್ನು ಕಂಡೆನು.
2. ತಿಂಗಳಿನ ಐದನೆಯ ದಿನದಲ್ಲಿ ಅರಸನಾದ ಯೆಹೋಯಾಖೀನನ ಸೆರೆಯ ಐದನೆಯ ವರುಷದಲಿ
3. ಕರ್ತನ ವಾಕ್ಯವು ಕಸ್ದೀಯರ ದೇಶದ ಕೆಬಾರ್‌ ನದಿಯ ಬಳಿಯಲ್ಲಿ ಬೂಜಿಯ ಮಗನೂ ಯಾಜಕನೂ ಆಗಿರುವ ಯೆಹೆಜ್ಕೇಲನಿಗೆ ಸ್ಪಷ್ಟವಾಗಿ ಬಂದಿತು, ಕರ್ತನ ಕೈ ಅವನ ಮೇಲಿತ್ತು.
4. ನಾನು ನೋಡಲಾಗಿ ಇಗೋ, ಉತ್ತರದಿಂದ ಸುಳಿಗಾಳಿ ಬಂದಿತು. ಒಂದು ಮಹಾ ಮೇಘವೂ ಝಗಝಗಿಸುವ ಬೆಂಕಿಯೂ ಅದರ ಸುತ್ತಲು ಪ್ರಕಾಶವೂ ಇತ್ತು; ಬೆಂಕಿಯ ಮಧ್ಯದಲ್ಲಿ ಥಳಥಳಿಸುವಂಥದ್ದು ಹೊಂಬಣ್ಣದ ಹಾಗಿತ್ತು.
5. ಅದರ ಮಧ್ಯದೊಳಗಿಂದ ನಾಲ್ಕು ಜೀವಿಗಳ ರೂಪವು ಹೊರ ಟಿತು. ಅವುಗಳ ಆಕಾರವೇನಂದರೆ--ಅವುಗಳಿಗೆ ಮನುಷ್ಯನ ರೂಪವಿತ್ತು.
6. ಪ್ರತಿಯೊಂದಕ್ಕೂ ನಾಲ್ಕು ಮುಖಗಳು ನಾಲ್ಕು ರೆಕ್ಕೆಗಳು ಇದ್ದವು.
7. ಅವುಗಳ ಕಾಲುಗಳು ನೆಟ್ಟಗಿದ್ದವು; ಅವುಗಳ ಅಂಗಾಲು ಕರುವಿನ ಪಾದದ ಹಾಗಿದ್ದು ಹಿತ್ತಾಳೆಗೆ ಮೆರುಗು ಕೊಟ್ಟ ಬಣ್ಣದ ಹಾಗೆ ಅವು ಥಳಥಳಿಸುತ್ತಿದ್ದವು.
8. ಅವುಗಳಿಗೆ ರೆಕ್ಕೆಗಳ ಕೆಳಗೆ ಅವುಗಳ ನಾಲ್ಕು ಪಕ್ಕೆಗಳ ಮೇಲೆ ಮನುಷ್ಯನ ಕೈಗಳು ಇದ್ದವು; ಮತ್ತು ಆ ನಾಲ್ಕಕ್ಕೂ ಮುಖಗಳು, ರೆಕ್ಕೆಗಳು ಇದ್ದವು.
9. ಅವುಗಳ ರೆಕ್ಕೆಗಳು ಒಂದಕ್ಕೊಂದು ಜೋಡಿಸಲ್ಪಟ್ಟು ಅವು ಹೋಗುವಾಗ ತಿರುಗಿಕೊಳ್ಳದೆ ಪ್ರತಿಯೊಂದು ನೆಟ್ಟಗೆ ಮುಂದಕ್ಕೆ ಹೋದವು.
10. ಅವು ಗಳ ಮುಖಗಳ ರೂಪದ ಪ್ರಕಾರ ಅವು ನಾಲ್ಕು ಜೀವಿಗಳು ಮನುಷ್ಯನ ರೂಪದ ಮುಖವನ್ನು ಹೊಂದಿದ್ದವು; ಬಲಗಡೆಯಲ್ಲಿ ಸಿಂಹದ ಮುಖವೂ ಎಡಗಡೆ ಯಲ್ಲಿ ಎತ್ತಿನ ಮುಖವೂ ಆ ನಾಲ್ಕಕ್ಕೆ ಹದ್ದಿನ ಮುಖವೂ ಇತ್ತು.
11. ಅವುಗಳ ಮುಖಗಳು ಹೀಗಿದ್ದವು; ಅವುಗಳ ರೆಕ್ಕೆಗಳು ಮೇಲಕ್ಕೆ ಚಾಚಲ್ಪಟ್ಟು ಪ್ರತಿಯೊಂದಕ್ಕೂ ಎರಡು ರೆಕ್ಕೆಗಳಿದ್ದು ಒಂದಕ್ಕೊಂದು ಅಂಟಿಕೊಂಡಿದ್ದವು; ಮಿಕ್ಕ ಎರಡು ಅವುಗಳ ದೇಹವನ್ನು ಮುಚ್ಚಿಕೊಂಡಿದ್ದವು.
12. ಅವು ಪ್ರತಿಯೊಂದು ನೆಟ್ಟಗೆ ಮುಂದಕ್ಕೆ ಹೋದವು; ಆತ್ಮನು ಎಲ್ಲಿಗೆ ಹೋಗುವದಕ್ಕಿದ್ದನೋ ಅಲ್ಲಿಗೆ ಹೋದವು; ಹೋಗುವಾಗ ಅವು ತಿರುಗಿಕೊಳ್ಳಲಿಲ್ಲ.
13. ಅವುಗಳ ರೂಪವು ಜೀವಿಸುವ ಪ್ರಾಣಿಗಳ ಹಾಗಿದ್ದು ಅವುಗಳ ಆಕಾರವು ಉರಿಯುವ ಬೆಂಕಿಯ ಕೆಂಡ ಗಳಂತೆಯೂ ದೀಪಗಳ ಹಾಗೆಯೂ ಇದ್ದು ಅದು ಜೀವಿಗಳ ಮಧ್ಯದಲ್ಲಿ ಮೇಲೆಯೂ ಕೆಳಗೂ ಹೋಗು ತ್ತಿತ್ತು. ಆ ಬೆಂಕಿಯು ಪ್ರಕಾಶಮಾನವಾಗಿತ್ತು. ಆ ಬೆಂಕಿಯೊಳಗಿಂದ ಮಿಂಚುಗಳು ಹೊರಡುತ್ತಿದ್ದವು.
14. ಆ ಜೀವಿಗಳು ಮಿಂಚಿನ ಹಾಗೆ ಓಡುತ್ತಾ ತಿರುಗಾ ಡುತ್ತಾ ಇದ್ದವು.
15. ಆಗ ನಾನು ಆ ಜೀವಿಗಳನ್ನು ನೋಡಲಾಗಿ ಇಗೋ, ಜೀವಿಗಳಿಂದ ಭೂಮಿಯ ಮೇಲೆ ಒಂದು ಚಕ್ರವು ನಾಲ್ಕು ಮುಖಗಳುಳ್ಳದ್ದಾಗಿ ರುವದನ್ನು ನೋಡಿದೆನು.
16. ಆ ಚಕ್ರಗಳ ಆಕಾರವೂ ಅವುಗಳ ಕೆಲಸವೂ ಪೀತರತ್ನ ವರ್ಣದ ಹಾಗಿದೆ. ಆ ನಾಲ್ಕಕ್ಕೆ ಒಂದೇ ರೂಪವಿದ್ದು ಅವುಗಳ ಆಕಾರವೂ ಅವುಗಳ ಕೆಲಸವೂ ಚಕ್ರದ ಮಧ್ಯದೊಳಗೆ ಚಕ್ರವು ಇದ್ದ ಹಾಗಿತ್ತು.
17. ಅವು ಹೋಗುವಾಗ ತಮ್ಮ ನಾಲ್ಕು ಪಕ್ಕೆಗಳ ಮೇಲೆ ಹೋದವು, ಅವು ಹೋಗುವಾಗ ಹಿಂತಿರುಗಲಿಲ್ಲ.
18. ಅವುಗಳ ಚಕ್ರಗಳು ಎತ್ತರವಾ ಗಿಯೂ ಭಯಂಕರ ವಾಗಿಯೂ ಇದ್ದವು; ಆ ನಾಲ್ಕು ಚಕ್ರಗಳ ಸುತ್ತಲೂ ಕಣ್ಣುಗಳಿದ್ದವು.
19. ಆ ಜೀವಿಗಳು ಹೋಗುವಾಗ ಆ ಚಕ್ರಗಳು ಅವುಗಳ ಬಳಿಯಲ್ಲೇ ಹೋದವು; ಆ ಜೀವಿಗಳು ಭೂಮಿಯಿಂದ ಮೇಲಕ್ಕೆ ಎತ್ತಲ್ಪಡುವಾಗ ಚಕ್ರಗಳು ಮೇಲಕ್ಕೆ ಎತ್ತಲ್ಪಟ್ಟವು.
20. ಆತ್ಮನು ಎಲ್ಲಿಗೆ ಹೋಗುವದಕ್ಕಿದ್ದನೋ ಅಲ್ಲಿಗೆ ಅವುಗಳು ಹೋದವು; ಆ ಸ್ಥಳಕ್ಕೆ ಅವುಗಳ ಆತ್ಮವು ಹೋಗಬೇಕೆಂದಿತ್ತು; ಚಕ್ರಗಳು ಸಹ ಅವುಗಳಿಗೆದು ರಾಗಿ ಮೇಲಕ್ಕೆ ಎತ್ತಲ್ಪ ಟ್ಟವು; ಚಕ್ರಗಳಲ್ಲಿ ಆ ಜೀವಿಯ ಆತ್ಮವು ಇತ್ತು.
21. ಅವುಗಳು ಹೋಗುವಾಗ ಇವುಗಳೂ ಹೋದವು; ಅವುಗಳು ನಿಲ್ಲುವಾಗ ಇವುಗಳೂ ನಿಂತವು; ಭೂಮಿಯಿಂದ ಮೇಲಕ್ಕೆ ಎತ್ತಲ್ಪಡುವಾಗ ಚಕ್ರಗಳು ಅವುಗಳ ಸಂಗಡ ಎತ್ತಲ್ಪಟ್ಟವು; ಆ ಜೀವಿಯ ಆತ್ಮನು ಆ ಚಕ್ರಗಳಲ್ಲಿ ಇತ್ತು.
22. ಜೀವಿಯ ತಲೆಗಳ ಮೇಲೆ ಗಗನಮಂಡಲ ವಿಶಾಲ ರೂಪವು ಭೀಕರ ವಜ್ರದ ಬಣ್ಣದ್ದಾಗಿತ್ತು; ಅದು ಅವುಗಳ ತಲೆಗಳ ಮೇಲೆ ಹರ ಡಿತ್ತು (ಹಾಸಲ್ಪಟ್ಟಿತ್ತು).
23. ಆ ಗಗನಮಂಡಲದ (ರೂಪದ) ಕೆಳಗೆ ಅವುಗಳ ರೆಕ್ಕೆಗಳು ನೆಟ್ಟಗೆ (ನೇರ ವಾಗಿ) ಒಂದಕ್ಕೊಂದು ಸರಿಯಾಗಿದ್ದವು; ಅವುಗಳ ಶರೀರಗಳನ್ನು ಮುಚ್ಚಿಕೊಳ್ಳುವ ಎರಡೆರೆಡು ರೆಕ್ಕೆಗಳು ಎರಡು ಕಡೆಗಳಲ್ಲೂ ಇರುವ ಪ್ರತಿಯೊಂದನ್ನು ಮುಚ್ಚಿ ಕೊಂಡಿದ್ದವು.
24. ಅವು ಹೋದಾಗ ನಾನು ಅವುಗಳ ರೆಕ್ಕೆಗಳ ಶಬ್ದವನ್ನು ಕೇಳಿದೆನು; ಅದು ಜಲಪ್ರವಾಹದ ಶಬ್ದದಂತೆಯೂ ಸರ್ವಶಕ್ತನ ಶಬ್ದದ ಹಾಗೆಯೂ ಸಂದಣಿಯ ಶಬ್ದದಂತೆಯೂ ಸೈನ್ಯದ ಶಬ್ದದ ಹಾಗೆಯೂ ಇತ್ತು; ಅವು ನಿಲ್ಲುವಾಗ ತಮ್ಮ ರೆಕ್ಕೆಗಳನ್ನು ಕೆಳಗೆ ಇಳಿಸುತ್ತಿದ್ದವು.
25. ಅವುಗಳು ನಿಂತು ತಮ್ಮ ರೆಕ್ಕೆಗಳನ್ನು ಕೆಳಗೆ ಇಳಿಸಿದಾಗ ಅವುಗಳ ತಲೆಗಳ ಮೇಲಿರುವ ಗಗನಮಂಡಲದೊಳಗಿಂದ ಒಂದು ಶಬ್ದವಾಯಿತು.
26. ಅವುಗಳ ತಲೆಗಳ ಮೇಲಿರುವ ಗಗನಮಂಡಲದ ಮೇಲ್ಭಾಗದಲ್ಲಿ ಇಂದ್ರನೀಲಮಣಿಯ ಹಾಗೆ ಇರುವ ಒಂದು ಸಿಂಹಾಸನದ ರೂಪವಿತ್ತು. ಅದರ ಮೇಲೆ ಮನುಷ್ಯನ ಹಾಗೆ ಕಾಣಿಸುವ ಒಂದು ರೂಪವೂ ಇತ್ತು.
27. ಆತನ ನಡುವು ಕಾಣಿಸುವಂತೆ ಮೇಲೆಯೂ ಒಳಗೂ ಸುತ್ತಲೂ ಬೆಂಕಿಯಂತೆ ಇರುವ ಸುಂದರವಾದ ಒಂದು ಬಣ್ಣದ ರೂಪವು ಇರುವದನ್ನು ನಾನು ನೋಡಿದೆನು; ಆತನ ನಡುವು ಕಾಣಿಸುವಂತೆ ಕೆಳಗೆ ಬೆಂಕಿಯ ಹಾಗೆ ಅದರ ಸುತ್ತಲೂ ಪ್ರಕಾಶವಿರುವದನ್ನು ನೋಡಿದೆನು.
28. ಮಳೆ ಬೀಳುವ ದಿನದಲ್ಲಿ ಮೇಘ ದೊಳಗೆ ಬಿಲ್ಲು ಹೇಗೆ ಕಾಣಿಸಲ್ಪಡುವದೋ ಹಾಗೆಯೇ ಅದರ ಸುತ್ತ ಆ ಪ್ರಕಾಶವು ಕಾಣಿಸಿತು. ಇದೇ ಕರ್ತನ ಮಹಿಮೆಯ ರೂಪದ ದರ್ಶನವಾಗಿತ್ತು. ಅದನ್ನು ನಾನು ನೋಡಿದಾಗ ನನ್ನ ಮುಖವನ್ನು ಕೆಳಗೆಮಾಡಿ ಬಿದ್ದೆನು. ಆಗ ಮಾತನಾಡುವ ಒಬ್ಬನ ಸ್ವರವನ್ನು ಕೇಳಿದೆನು.

Chapter 2

1. ಆತನು ನನಗೆ ಹೇಳಿದ್ದೇನಂದರೆ--ಮನುಷ್ಯಪುತ್ರನೇ, ನಿನ್ನ ಪಾದದ ಮೇಲೆ ನಿಲ್ಲು; ನಿನ್ನೊಡನೆ ನಾನು ಮಾತನಾಡುವೆನು ಅಂದನು.
2. ಹೀಗೆ ಆತನು ನನ್ನ ಸಂಗಡ ಮಾತನಾಡಿದಾಗ ಆತ್ಮನು ನನ್ನೊಳಗೆ ಪ್ರವೇಶಿಸಿ ನನ್ನನ್ನು ನಿಂತುಕೊಳ್ಳುವಂತೆ ಮಾಡಿತು; ಈ ರೀತಿ ನನ್ನ ಸಂಗಡ ಮಾತನಾಡುವದನ್ನು ನಾನು ಕೇಳಿದೆನು.
3. ಆತನು ನನಗೆ ಹೇಳಿದ್ದೇನಂದರೆ--ಮನುಷ್ಯಪುತ್ರನೇ, ನನಗೆ ವಿರೋಧವಾಗಿ ತಿರುಗಿಬಿದ್ದಂಥ ಮತ್ತು ಬೀಳುವಂಥ ಜನಾಂಗದವರಾದ ಇಸ್ರಾಯೇಲ್ಯರ ಮಕ್ಕಳ ಬಳಿಗೆ ನಾನು ನಿನ್ನನ್ನು ಕಳುಹಿಸು ತ್ತೇನೆ; ಅವರೂ ಅವರ ಪಿತೃಗಳೂ ಇಂದಿನ ವರೆಗೂ ನನಗೆ ವಿರೋಧವಾಗಿ ದ್ರೋಹಮಾಡಿದ್ದಾರೆ.
4. ಅವರು ನಿರ್ಲಜ್ಜರಾದ ಒರಟು ಹೃದಯವುಳ್ಳ ಮಕ್ಕಳಾಗಿದ್ದಾರೆ. ನಾನು ನಿನ್ನನ್ನು ಅವರ ಬಳಿಗೆ ಕಳುಹಿಸುತ್ತೇನೆ ನೀನು ಅವರಿಗೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳಬೇಕು.
5. ಅವರು ಕೇಳಲಿ ಅಥವಾ ಕೇಳದಿರಲಿ (ಅವರು ತಿರುಗಿಬೀಳುವ ಮನೆಯವರು); ಆದರೆ ತಮ್ಮೊಳಗೆ ಒಬ್ಬ ಪ್ರವಾದಿ ಇರುವನೆಂದು ತಿಳಿದು ಕೊಂಡರೆ ಸಾಕು.
6. ಇದಲ್ಲದೆ ಮನುಷ್ಯಪುತ್ರನೇ, ನೀನು ಅವರಿಗಾ ಗಲೀ ಅವರ ಮಾತುಗಳಿಗಾಗಲೀ ಭಯಪಡಬೇಡ. ಮುಳ್ಳುಗಳೂ ದತ್ತೂರಿಗಳೂ ನಿನ್ನ ಸಂಗಡ ಇದ್ದರೂ ಚೇಳುಗಳ ನಡುವೆ ನೀನು ವಾಸಿಸಿದರೂ ಸರಿ; ನೀನು ಅವರ ಮಾತುಗಳಿಗೆ ಭಯಪಡಬೇಡ, ಅವರು ತಿರುಗಿ ಬೀಳುವ ಮನೆಯವರಾದರೂ ಅವರ ನೋಟಗಳಿಗೆ ಅಂಜಬೇಡ.
7. ಕೇಳಿದರೂ ಸರಿ, ಕೇಳದಿದ್ದರೂ ಸರಿ; ನೀನು ನನ್ನ ಮಾತುಗಳನ್ನು ಅವರಿಗೆ ಹೇಳಬೇಕು; ಅವರು ಖಂಡಿತವಾಗಿಯೂ ತಿರುಗಿಬೀಳುವವರೇ.
8. ಮನುಷ್ಯಪುತ್ರನೇ, ನೀನಾದರೋ ನಾನು ಹೇಳುವ ದನ್ನು ಕೇಳು; ಆ ತಿರುಗಿಬೀಳುವವರ ಮನೆಯ ಹಾಗೆ ನೀನೂ ತಿರುಗಿಬೀಳಬೇಡ; ನಿನ್ನ ಬಾಯನ್ನು ತೆರೆದು ನಾನು ನಿನಗೆ ಕೊಡುವದನ್ನು ತಿನ್ನು ಅಂದನು.
9. ನಾನು ನೋಡಿದಾಗ ಇಗೋ, ಅದರಲ್ಲಿ ಒಂದು ಪುಸ್ತಕದ ಸುರಳಿ ಇತ್ತು.
10. ಆತನು ಅದನ್ನು ನನ್ನ ಮುಂದೆ ಹರಡಿದನು; ಅದರ ಒಳಗಡೆಯೂ ಹೊರಗಡೆಯೂ ಬರಹವು ಇತ್ತು. ಆ ಬರಹವೇನಂದರೆ--ಗೋಳಾಟವೂ ಮೂಲುಗುವಿಕೆಯೂ ಸಂಕಟಗಳೂ ಇವೆ ಎಂಬದೇ.

Chapter 3

1. ಇದಾದ ಮೇಲೆ ಆತನು ನನಗೆ--ಮನುಷ್ಯ ಪುತ್ರನೇ, ನಿನಗೆ ಸಿಕ್ಕಿದ್ದನ್ನು ತಿನ್ನು; ಈ ಸುರಳಿಯನ್ನು ತಿಂದು, ಹೋಗಿ ಇಸ್ರಾಯೇಲಿನ ಮನೆತನದವರ ಸಂಗಡ ಮಾತನಾಡು ಅಂದನು.
2. ಆಗ ನಾನು ನನ್ನ ಬಾಯನ್ನು ತೆರೆದೆನು, ಆತನು ನನಗೆ ಆ ಸುರಳಿಯನ್ನು ತಿನ್ನಿಸಿದನು.
3. ಆಗ ಆತನು ನನಗೆ ಹೇಳಿದ್ದೇನಂದರೆ--ಮನುಷ್ಯ ಪುತ್ರನೇ, ನಾನು ಕೊಡುವ ಈ ಸುರಳಿಯನ್ನು ತಿಂದು ಹೊಟ್ಟೆಯ ಕರುಳುಗಳನ್ನು ತುಂಬಿಸಿಕೋ ಅಂದನು. ಆಗ ನಾನು ಅದನ್ನು ತಿನ್ನಲು ಅದು ನನ್ನ ಬಾಯಲ್ಲಿ ಜೇನಿನ ಹಾಗೆ ಸಿಹಿಯಾಗಿತ್ತು.
4. ನನಗೆ ಆತನು--ಮನುಷ್ಯಪುತ್ರನೇ, ಹೋಗು; ಇಸ್ರಾಯೇಲ್ಯರ ಮನೆಯವರ ಬಳಿಗೆ ಹೋಗಿ ಅವರ ಸಂಗಡ ನನ್ನ ಮಾತುಗಳನ್ನು ಮಾತನಾಡು.
5. ನೀನು ಕಠಿಣವಾದ ಭಾಷೆಯಲ್ಲಿ ಸೋಜಿಗದ ಮಾತುಗಳ ನ್ನಾಡುವ ಜನರ ಬಳಿಗೆ ಕಳುಹಿಸದೆ ಇಸ್ರಾಯೇಲಿನ ಮನೆಯವರ ಬಳಿಗೆ ಕಳುಹಿಸಲ್ಪಟ್ಟಿರುವಿ.
6. ನೀನು ಕಠಿಣ ಭಾಷೆಯಲ್ಲಿ ಸೋಜಿಗದ ಮಾತುಗಳನ್ನಾಡುವವರ ಬಳಿಗೆ ಕಳುಹಿಸಲ್ಪಟ್ಟವನಲ್ಲ; ಇಂಥವರ ಕಡೆಗೆ ನಾನು ನಿನ್ನನ್ನು ಕಳುಹಿಸಿದ್ದ ಪಕ್ಷದಲ್ಲಿ ನಿಶ್ಚಯವಾಗಿ ಅವರು ನಿನ್ನ ಮಾತಿಗೆ ಕಿವಿಗೊಡುತ್ತಿದ್ದರು.
7. ಆದರೆ ಇಸ್ರಾ ಯೇಲಿನ ಮನೆತನದವರು ನಿನಗೆ ಕಿವಿಗೊಡುವದಿಲ್ಲ; ಅವರು ನನಗೆ ಕಿವಿಗೊಟ್ಟಿಲ್ಲ. ಯಾಕಂದರೆ ಎಲ್ಲಾ ಇಸ್ರಾಯೇಲಿನ ಮನೆತನದವರು ಕಠಿಣ ಹೃದಯ ದವರೂ ನಿರ್ಲಜ್ಜರೂ (ನಾಚಿಕೆಗೆಟ್ಟವರೂ) ಆಗಿದ್ದಾರೆ.
8. ಇಗೋ, ನಾನು ನಿನ್ನ ಮುಖವನ್ನು ಅವರ ಮುಖಗಳ ಎದುರಿಗೆ ಕಠಿಣ ಮಾಡಿದ್ದೇನೆ; ಮತ್ತು ನಿನ್ನ ಹಣೆಯನ್ನು ಅವರ ಹಣೆಗಳ ಎದುರಾಗಿ ಬಲಪಡಿಸಿದ್ದೇನೆ.
9. ನಾನು ನಿನ್ನ ಹಣೆಯನ್ನು ಅಭೇದ್ಯವಾದ ಕಲ್ಲಿಗಿಂತ ಗಟ್ಟಿಯಾಗಿ ವಜ್ರದಂತೆ ಮಾಡಿದ್ದೇನೆ; ಇಲ್ಲವೆ ತಿರುಗಿ ಬೀಳುವ ಮನೆತನದವರಾದರೂ ನೀನು ಅವರಿಗೆ ಭಯಪಡ ಬೇಡ; ಮತ್ತು ಅವರ ನೋಟಕ್ಕೆ ನೀನು ಗಾಬರಿಯಾಗ ಬೇಡ.
10. ಇದಲ್ಲದೆ ಆತನು ನನಗೆ--ನರಪುತ್ರನೇ, ನಾನು ನಿನ್ನ ಸಂಗಡ ಆಡುವ ಈ ನನ್ನ ಮಾತುಗಳನ್ನೆಲಾ ನಿನ್ನ ಕಿವಿಗಳಿಂದ ಕೇಳಿ ಹೃದಯದಲ್ಲಿ ಅಂಗೀಕರಿಸಿಕೋ.
11. ಹೋಗು, ಸೆರೆಯಾಗಿರುವ ನಿನ್ನ ಜನರ ಮಕ್ಕಳ ಬಳಿಗೆ ಹೋಗಿ, ಅವರ ಸಂಗಡ ಮಾತನಾಡು, ಅವರು ಕೇಳಿದರೂ ಕೇಳದಿದ್ದರೂ ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಅವರಿಗೆ ಹೇಳು.
12. ಆಮೇಲೆ ಆತ್ಮನು ನನ್ನನ್ನು ಮೇಲೆ ತೆಗೆದುಕೊಂಡು ಹೋದನು. ನಾನು--ಕರ್ತನ ಮಹಿಮೆ ತನ್ನ ಸ್ಥಳ ದೊಳಗಿಂದ ಹರಸಲ್ಪಡಲೆಂದು ಘೋಷಿಸುವ ಒಂದು ಮಹಾಧ್ವನಿಯು ನನ್ನ ಹಿಂದೆ ನುಗ್ಗಿಕೊಂಡು ಬರುವ ದನ್ನು ನಾನು ಕೇಳಿಸಿಕೊಂಡೆನು.
13. ಇದಲ್ಲದೆ ನಾನು ಒಂದಕ್ಕೊಂದು ತಗಲುವ ಆ ಜೀವಿಗಳ ರೆಕ್ಕೆಗಳ ಶಬ್ದ ವನ್ನೂ ಅವುಗಳ ಬಳಿಯಲ್ಲಿದ್ದ ಚಕ್ರಗಳ ಶಬ್ದವನ್ನೂ ಮಹಾಘೋಷದ ಶಬ್ದವು ನುಗ್ಗಿ ಬರುತ್ತಿರುವದನ್ನೂ ಕೇಳಿದೆನು.
14. ಹೀಗೆ ಆತ್ಮನು ನನ್ನನ್ನು ಎತ್ತಿಕೊಂಡು ಹೋದನು; ನಾನು ಕಹಿಯಲ್ಲಿಯೂ ಆತ್ಮನ ಉರಿಯ ಲ್ಲಿಯೂ ಹೋದೆನು; ಅದರೆ ಕರ್ತನ ಕೈ ನನ್ನ ಮೇಲೆ ಬಲವಾಗಿತ್ತು.
15. ಆಮೇಲೆ ನಾನು ಕೆಬಾರ್‌ ನದಿಯ ದಡದಲ್ಲಿ ವಾಸಿಸುತ್ತಿದ್ದ ತೇಲ್‌ ಆಬೀಬಿನ ಸೆರೆಯವರ ಬಳಿಗೆ ಬಂದೆನು; ಅವರು ಕುಳಿತಿದ್ದ ಕಡೆಗೆ ನಾನು ಕುಳಿತು ಏಳು ದಿವಸಗಳು ಅವರ ಜೊತೆ ಆಶ್ಚರ್ಯವಾಗಿ ಉಳಿದೆನು.
16. ಏಳು ದಿವಸಗಳಾದ ಮೇಲೆ ಆದದ್ದೇನಂದರೆ, ಕರ್ತನ ವಾಕ್ಯವು ಹೀಗೆ ಹೇಳುತ್ತಾ ನನ್ನ ಕಡೆಗೆ ಬಂದು --
17. ಮನುಷ್ಯಪುತ್ರನೇ, ನಾನು ನಿನ್ನನ್ನು ಇಸ್ರಾಯೇ ಲಿನ ಮನೆಯನ್ನು ಕಾಯಲು ಕಾವಲುಗಾರನನ್ನಾಗಿ ಮಾಡಿದ್ದೇನೆ. ಆದದರಿಂದ ನನ್ನ ವಾಕ್ಯವನ್ನು ನನ್ನ ಬಾಯಿಂದ ಕೇಳಿ ನನ್ನಿಂದ ಅವರಿಗೆ ಎಚ್ಚರಿಕೆ ಕೊಡು.
18. ನಾನು ದುಷ್ಟನಿಗೆ--ನೀನು ನಿಶ್ಚಯವಾಗಿ ಸಾಯುವಿ ಯೆಂದು ಹೇಳುವಾಗ ನೀನು ಅವನನ್ನು ಎಚ್ಚರಿಸದೆ ಅವನನ್ನು ಬದುಕಿಸುವ ಹಾಗೆ ದುಷ್ಟನನ್ನು ಅವನ ದುಷ್ಟಮಾರ್ಗದ ವಿಷಯದಲ್ಲಿ ಎಚ್ಚರಿಸಿ ಮಾತನಾಡದೆ ಹೋದರೆ ಆ ದುಷ್ಟನು ತನ್ನ ಅಕ್ರಮದಲ್ಲೇ ಸಾಯು ವನು. ಆದರೆ ಅವನ ರಕ್ತವನ್ನು ನಿನ್ನ ಕೈಯಿಂದ ದುಷ್ಟತ್ವ ಕ್ಕಾಗಿ ನಾನು ವಿಚಾರಿಸುವೆನು.
19. ಆದರೆ ನೀನು ದುಷ್ಟ ನನ್ನು ಎಚ್ಚರಿಸಿದ ಮೇಲೆ ಅವನು ತನ್ನ ದುಷ್ಟತ್ವವನ್ನೂ ದುಷ್ಟಮಾರ್ಗವನ್ನೂ ಬಿಟ್ಟು ತಿರುಗದೆ ಹೋದರೆ ಅವನು ತನ್ನ ದುಷ್ಟತ್ವದಲ್ಲಿಯೇ ಸಾಯುವನು. ಆದರೆ ನೀನು ನಿನ್ನ ಪ್ರಾಣವನ್ನು ಉಳಿಸಿಕೊಂಡಿರುವಿ.
20. ಮತ್ತೆ ಯಾವಾಗ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡುವನೋ, ಆಗ ನಾನು ಅವನ ಮುಂದೆ ಅಡಚಣೆಯನ್ನು ಇಡುವೆನು, ಅವನು ಸಾಯು ವನು; ನೀನು ಅವನನ್ನು ಎಚ್ಚರಿಸದೆ ಇದ್ದದರಿಂದಲೇ ಅವನು ತನ್ನ ಪಾಪದಲ್ಲಿ ಸಾಯುವನು; ಅವನು ಮಾಡಿರುವ ಅವನ ನೀತಿಯು ಜ್ಞಾಪಕ ಮಾಡಲ್ಪಡು ವದಿಲ್ಲ; ಆದರೆ ಅವನ ರಕ್ತವನ್ನು ನಾನು ನಿನ್ನ ಕೈಯಿಂದ ವಿಚಾರಿಸುವೆನು;
21. ಆದಾಗ್ಯೂ ನೀತಿವಂತನು ಪಾಪ ಮಾಡದ ಹಾಗೆ ನೀನು ನೀತಿವಂತನನ್ನು ಎಚ್ಚರಿಸುವಾಗ ಅವನು ಪಾಪಮಾಡದೆ ಎಚ್ಚರಿಕೆಯಾದದರಿಂದ ನಿಶ್ಚಯವಾಗಿ ಬದುಕುವನು; ನೀನು ನಿನ್ನ ಪ್ರಾಣವನ್ನು ಸಹ ಉಳಿಸಿಕೊಂಡಿರುವಿ.
22. ಆಗ ಅಲ್ಲಿ ಕರ್ತನ ಹಸ್ತವು ನನ್ನ ಮೇಲಿತ್ತು; ನನಗೆ ಆತನು ಹೇಳಿದ್ದೇನಂದರೆ--ಎದ್ದೇಳು, ಬಯಲು ಸೀಮೆಗೆ ಹೋಗು ಅಲ್ಲಿ ನಾನು ನಿನ್ನ ಸಂಗಡ ಮಾತನಾಡುವೆನು ಅಂದನು.
23. ಆಮೇಲೆ ನಾನು ಎದ್ದು ಬಯಲು ಸೀಮೆಯ ಕಡೆಗೆ ಹೋದೆನು; ಇಗೋ, ಕರ್ತನ ಮಹಿಮೆಯ ಅಲ್ಲಿ ನಿಂತಿದೆ. ಅದು ಕೆಬಾರ್‌ ನದಿಯ ಹತ್ತಿರ ನಾನು ನೋಡಿದ ಮಹಿಮೆಯ ಪ್ರಕಾರವಾಗಿದೆ. ಆಗ ನಾನು ಮುಖ ಕೆಳಗಾಗಿ ಬಿದ್ದೆನು.
24. ಆಮೇಲೆ ಆತ್ಮನು ನನ್ನೊಳಗೆ ಪ್ರವೇಶಿಸಿ ನನ್ನನ್ನು ನನ್ನ ಪಾದದ ಮೇಲೆ ನಿಲ್ಲಿಸಿ ಮಾತಾಡಿ ನನಗೆ ಹೇಳಿದ್ದೇನೆಂದರೆ--ಹೋಗು, ನಿನ್ನ ಮನೆಯಲ್ಲಿ ನೀನು ಅಡಗಿಕೋ.
25. ನೀನಾದರೋ ಓ ಮನುಷ್ಯ ಪುತ್ರನೇ, ಇಗೋ, ಅವರು ನಿನ್ನ ಮೇಲೆ ಬಂಧನ ಗಳನ್ನಿಟ್ಟು ಅವುಗಳಿಂದ ನಿನ್ನನ್ನು ಕಟ್ಟುವರು; ನೀನು ಅವರಿಂದ ಹೊರಗೆ ಬರಲು ಆಗುವದಿಲ್ಲ.
26. ಇದಲ್ಲದೆ ನಾಲಿ ಗೆಯು ನಿನ್ನ ಅಂಗಳಕ್ಕೆ ಹತ್ತುವ ಹಾಗೆ ಮಾಡುವೆನು. ಆಗ ನೀನು ಮೂಕನಾಗಿ ಅವರನ್ನು ಗದರಿಸುವ ವನಾಗಲಾರೆ; ಯಾಕಂದರೆ ಅವರು ತಿರುಗಿ ಬೀಳುವ ಮನೆಯವರಾಗಿದ್ದಾರೆ.
27. ಆದರೆ ನಾನು ನಿನ್ನ ಸಂಗಡ ಮಾತನಾಡುವಾಗ ನಾನು ನಿನ್ನ ಬಾಯನ್ನು ತೆರೆ ಯುವೆನು. ಆಗ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಕೇಳುವವನು ಕೇಳಲಿ, ಕೇಳದವನು ಕೇಳದೇ ಇರಲಿ. ಅವರು ತಿರುಗಿ ಬೀಳುವ ಮನೆಯವರಾಗಿದ್ದಾರೆ.

Chapter 4

1. ಇದಲ್ಲದೆ ಮನುಷ್ಯಪುತ್ರನೇ, ನೀನು ಒಂದು ಹಂಚನ್ನು ತೆಗೆದುಕೊಂಡು ನಿನ್ನ ಮುಂದಿಟ್ಟು ಅದರ ಮೇಲೆ ಯೆರೂಸಲೇಮ್‌ ನಗರದ ನಕ್ಷೆಯನ್ನು ಬರೆ.
2. ಅದಕ್ಕೆ ಮುತ್ತಿಗೆ ಹಾಕಿ ಎದುರಾಗಿ ಒಂದು ಕೋಟೆಯನ್ನು ಕಟ್ಟು. ಇದಲ್ಲದೆ ಎದುರಾಗಿ ಒಂದು ದಿಬ್ಬವನ್ನು ಕಟ್ಟು; ಎದುರಾಗಿ ಒಂದು ದಂಡನ್ನು ಇರಿಸಿ ವಿರೋಧವಾಗಿ ಸುತ್ತಲೂ ಭಿತ್ತಿಭೇದಕ ಮಾಡು ವಂಥ ಆಯುಧಗಳನ್ನು ಇಡು.
3. ಇದಾದ ಮೇಲೆ ನೀನು ಒಂದು ಕಬ್ಬಿಣದ ತಟ್ಟೆಯನ್ನು ತೆಗೆದುಕೊಂಡು ಅದನ್ನು ಕಬ್ಬಿಣದ ಗೋಡೆಯೆಂದು ತಿಳಿದು ನಿನಗೂ ನಗರಕ್ಕೂ ಮಧ್ಯದಲ್ಲಿ ಇರಿಸು. ಆಮೇಲೆ ಅದಕ್ಕೆ ಎದುರಾಗಿ ನಿನ್ನ ಮುಖವನ್ನು ಇಡು. ಆಗ ಅದು ಮುತ್ತಲ್ಪಡುವದು; ನೀನು ಅದಕ್ಕೆ ಎದುರಾಗಿ ಮುತ್ತಿ ದಂತಾಗುವದು. ಇದು ಇಸ್ರಾಯೇಲ್‌ ಮನೆತನದ ಗುರುತಾಗಿರುವದು.
4. ನೀನು ನಿನ್ನ ಎಡಪಾರ್ಶ್ವದಲ್ಲಿ ಮಲಗಿ ಇಸ್ರಾ ಯೇಲ್‌ ವಂಶದವರ ಅಕ್ರಮಗಳನ್ನು ಅದರ ಮೇಲಿಡ ಬೇಕು; ನೀನು ಅದರ ಮೇಲೆ ಮಲಗುವ ದಿವಸಗಳ ಲೆಕ್ಕದ ಪ್ರಕಾರ ಅವರ ಅಕ್ರಮಗಳನ್ನು ಹೊತ್ತುಕೊಂಡಿ ರಬೇಕು.
5. ನಾನು ದಿವಸಗಳ ಲೆಕ್ಕದ ಪ್ರಕಾರ ಅವರ ಅಕ್ರಮದ ವರ್ಷಗಳನ್ನು ನಿನಗೆ ನೇಮಿಸಿದ್ದೇನೆ. ಅವು ಮುನ್ನೂರತೊಂಭತ್ತು ದಿವಸಗಳಾಗಿವೆ; ಹೀಗೆ ನೀನು ಇಸ್ರಾಯೇಲ್ಯರ ಮನೆತನದವರ ಅಕ್ರಮಗಳನ್ನು ಹೊರಬೇಕು.
6. ನೀನು ಇವುಗಳನ್ನು ಮಾಡಿದ ಮೇಲೆ ಇನ್ನೊಂದು ಸಾರಿ ಬಲಪಾರ್ಶ್ವದಲ್ಲಿ ಮಲಗಿ ಯೆಹೂ ದನ ಮನೆಯ ಅಕ್ರಮವನ್ನು ನಲವತ್ತು ದಿವಸ ಹೊರಬೇಕು; ನಾನು ನಿನಗೆ ಒಂದೊಂದು ದಿನವನ್ನು ಒಂದೊಂದು ವರ್ಷಕ್ಕೆ ನೇಮಿಸಿದ್ದೇನೆ.
7. ಆದದರಿಂದ ಯೆರೂಸಲೇಮಿನ ಮುತ್ತಿಗೆಯ ಕಡೆಗೆ ನಿನ್ನ ಮುಖವನ್ನು ಇಡಬೇಕು; ನಿನ್ನ ಭುಜವನ್ನು ನೀನು ಬರಿದುಮಾಡಿ ಕೊಂಡು ಅದಕ್ಕೆ ವಿರೋಧವಾಗಿ ಪ್ರವಾದಿಸಬೇಕು.
8. ಇಗೋ, ನಾನು ನಿನ್ನ ಮೇಲೆ ಬಂಧನಗಳನ್ನು ಇಡು ತ್ತೇನೆ. ನೀನು ನಿನ್ನ ಮುತ್ತಿಗೆಯ ದಿವಸಗಳು ಮುಗಿ ಯುವವರೆಗೂ ಒಂದು ಪಾರ್ಶ್ವದಿಂದ ಮತ್ತೊಂದು ಪಾರ್ಶ್ವಕ್ಕೆ ತಿರುಗಿಕೊಳ್ಳಬಾರದು.
9. ಇದಲ್ಲದೆ ನೀನು ಗೋಧಿ, ಬಾರ್ಲಿ, ಅವರೆ, ಅಲ ಸಂದಿ, ನವಣೆ, ಸಜ್ಜೆಗಳನ್ನು ತೆಗೆದುಕೊಂಡು ಅವುಗಳನ್ನು ಒಂದು ಮಡಿಕೆಯಲ್ಲಿಟ್ಟು ನೀನು ನಿನ್ನ ಪಾರ್ಶ್ವದಲ್ಲಿ ಮಲಗುವ ದಿವಸಗಳ ಲೆಕ್ಕದ ಪ್ರಕಾರ ನಿನಗಾಗಿ ರೊಟ್ಟಿಯನ್ನು ಮಾಡಿಕೊಂಡು ಮುನ್ನೂರ ತೊಂಭತ್ತು ದಿನಗಳು ಅದರಿಂದಲೇ ತಿನ್ನಬೇಕು.
10. ನೀನು ತಿನ್ನುವ ಆಹಾರದ ತೂಕದ ಪ್ರಕಾರ ಅದು ಒಂದು ದಿನಕ್ಕೆ ಇಪ್ಪತ್ತು ಶೇಕೆಲುಗಳಾಗಿರಬೇಕು. ಕಾಲಕಾಲಕ್ಕೆ ಸರಿಯಾಗಿ ಅದನ್ನು ತಿನ್ನಬೇಕು.
11. ನೀನು ನೀರನ್ನು ಸಹ ಅಳತೆಯ ಪ್ರಕಾರ ಕುಡಿಯಬೇಕು. ಹಿನ್ನಿನ ಆರನೆಯ ಪಾಲನ್ನು ಕಾಲಕಾಲಕ್ಕೆ ಸರಿಯಾಗಿ ಕುಡಿಯಬೇಕು.
12. ಇದಲ್ಲದೆ ನೀನು ಆಹಾರವನ್ನು ಬಾರ್ಲಿಯ ರೊಟ್ಟಿಗಳಂತೆ ತಿನ್ನಬೇಕು; ಮತ್ತು ಅದನ್ನು ಮನುಷ್ಯನೊಳಗಿಂದ ಬರುವ ಮಲದಿಂದ ಅವರ ಕಣ್ಣುಗಳ ಮುಂದೆ ಅಡಿಗೆಮಾಡಬೇಕು;
13. ಕರ್ತನು ಹೇಳಿದ್ದೇನಂದರೆ -- ಹೀಗೆಯೇ ಇಸ್ರಾಯೇಲ್ಯರ ಮಕ್ಕಳು ತಮ್ಮ ಅಶುದ್ಧವಾದ ರೊಟ್ಟಿಯನ್ನು ಅನ್ಯ ಜನಾಂಗಗಳೊಳಗೆ ತಿನ್ನುವರು. ಆಗ ನಾನು ಅವರನ್ನು ಓಡಿಸಿ ಬಿಡುತ್ತೇನೆ.
14. ಆಮೇಲೆ ನಾನು--ಹಾ! ದೇವ ರಾದ ಕರ್ತನೇ, ಇಗೋ, ನನ್ನ ಪ್ರಾಣವು ಅಶುದ್ಧವಾಗ ಲಿಲ್ಲ, ಯಾಕಂದರೆ ನಾನು ಚಿಕ್ಕಂದಿನಿಂದ ಇಷ್ಟರವರೆಗೂ ತನ್ನಷ್ಟಕ್ಕೆ ತಾನೇ ಸತ್ತಿರುವದನ್ನು ಅಥವಾ ಹರಿದು ಚೂರು ಚೂರಾಗಿರುವದನ್ನು ತಿನ್ನಲಿಲ್ಲ; ಇಲ್ಲವೆ ಅಸಹ್ಯ ವಾದ ಮಾಂಸವನ್ನಾದರೂ ನನ್ನ ಬಾಯಿಯ ಹತ್ತಿರ ತಂದಿಲ್ಲ ಎಂದೆನು.
15. ಆಗ ಆತನು ನನಗೆ--ಇಗೋ, ಮನುಷ್ಯನ ಮಲಕ್ಕೆ ಬದಲಾಗಿ ಹಸುವಿನ ಸಗಣಿಯನ್ನು ನಿನಗೆ ಕೊಟ್ಟಿದ್ದೇನೆ; ಅದರಿಂದ ನೀನು ರೊಟ್ಟಿಯನ್ನು ತಯಾರಿಸಬಹುದು ಅಂದನು.
16. ಇದಾದ ಮೇಲೆ ಆತನು ನನಗೆ ಮನುಷ್ಯ ಪುತ್ರನೇ, ಇಗೋ, ನಾನು ಯೆರೂಸಲೇಮಿನಲ್ಲಿ ಅನ್ನದಾನವನ್ನು ಮುರಿಯುವೆನು. ಅವರು ತೂಕದ ಪ್ರಕಾರ ಜಾಗರೂಕತೆಯಿಂದ ರೊಟ್ಟಿಯನ್ನು ತಿನ್ನುವರು. ನೀರನ್ನು ಅಳತೆಯ ಪ್ರಕಾರ ಆಶ್ಚರ್ಯದಿಂದ ಕುಡಿಯುವರು.
17. ಅವರಿಗೆ ರೊಟ್ಟಿ ಮತ್ತು ನೀರಿನ ಕೊರತೆಯಿಂದ ಆಶ್ಚರ್ಯಪಟ್ಟು ಒಬ್ಬರ ಸಂಗಡ ಒಬ್ಬರು ತಮ್ಮ ಅಕ್ರಮಗಳಿಗಾಗಿ ಕ್ಷಯಿಸಿ ಹೋಗುವರು.

Chapter 5

1. ಅವರಿಗೆ ರೊಟ್ಟಿ ಮತ್ತು ನೀರಿನ ಕೊರತೆಯಿಂದ ಆಶ್ಚರ್ಯಪಟ್ಟು ಒಬ್ಬರ ಸಂಗಡ ಒಬ್ಬರು ತಮ್ಮ ಅಕ್ರಮಗಳಿಗಾಗಿ ಕ್ಷಯಿಸಿ ಹೋಗುವರು.
2. ಅದರ ಮೂರನೆಯ ಪಾಲನ್ನು ನಗರದ ಮಧ್ಯದಲ್ಲಿ ಮುತ್ತಿಗೆಯ ದಿವಸಗಳು ಮುಗಿದ ಮೇಲೆ ಬೆಂಕಿಯಿಂದ ಸುಡಬೇಕು, ಮೂರನೆಯ ಪಾಲನ್ನು ತೆಗೆದುಕೊಂಡು ಖಡ್ಗದಿಂದ ಸುತ್ತಲೂ ಕಡಿಯಬೇಕು; ಉಳಿದ ಮೂರನೆಯ ಪಾಲನ್ನು ಗಾಳಿಗೆ ಚೆಲ್ಲಬೇಕು ಮತ್ತು ನಾನು ಅವುಗಳ ಹಿಂದೆ ಕತ್ತಿಯನ್ನು ಬೀಸುವೆನು
3. ನೀನು ಅವುಗಳೊಳಗಿಂದ ಕೆಲವನ್ನು ಲೆಕ್ಕದಲ್ಲಿ ತೆಗೆದು ನಿನ್ನ ಸೆರಗುಗಳಲ್ಲಿ ಕಟ್ಟು ಅಂದನು.
4. ತಿರುಗಿ ಅವುಗಳೊಳಗಿಂದ ತೆಗೆದು ಬೆಂಕಿಯ ಮಧ್ಯದಲ್ಲಿ ಹಾಕಿ ಅವುಗಳನ್ನು ಬೆಂಕಿಯಿಂದ ಸುಡು; ಇದರಿಂದ ಆ ಬೆಂಕಿಯು ಸಮಸ್ತ ಇಸ್ರಾಯೇಲಿನ ಮನೆತನದವರೆಗೂ ಹೋಗುವದು.
5. ದೇವರಾದ ಕರ್ತನು ಹೇಳುವದೇನಂದರೆ--ಇದೇ ಯೆರೂಸಲೇಮು; ನಾನು ಅದನ್ನು ಅದರ ಸುತ್ತಲೂ ಇರುವ ಜನಾಂಗಗಳ ದೇಶಗಳ ಮಧ್ಯೆ ಇಟ್ಟಿದ್ದೇನೆ.
6. ಆಕೆಯು (ಅದು) ಜನಾಂಗಗಳಿಗಿಂತ ಹೆಚ್ಚಾಗಿ ನನ್ನ ನ್ಯಾಯಗಳನ್ನೂ ಅದರ ಸುತ್ತಲಿರುವ ದೇಶಗಳಿಗಿಂತ ಹೆಚ್ಚಾಗಿ ನನ್ನ ನಿಯಮಗಳನ್ನೂ ದುಷ್ಟತ್ವಕ್ಕೆ ತಿರುಗಿಸಿ ಬಿಟ್ಟಳು. ಅವರು ನನ್ನ ನ್ಯಾಯಗಳನ್ನು ನಿಯಮಗಳನ್ನು ಅನುಸರಿಸದೆ ನಿರಾಕರಿಸಿದ್ದಾರೆ.
7. ಆದದರಿಂದ ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನೀವು, ನಿಮ್ಮ ಸುತ್ತಲಿರುವ ಜನಾಂಗಗಳಿಗಿಂತ ಅಧಿಕವಾದದ್ದರಿಂದ ನನ್ನ ನಿಯಮಗಳಲ್ಲಿ ನಡೆಯದೇ ಹೋದದ್ದರಿಂದಲೂ ನನ್ನ ನ್ಯಾಯಗಳನ್ನು ಪಾಲಿಸದೆ ಇದ್ದದರಿಂದಲೂ ನಿಮ ಸುತ್ತಲಿರುವ ಜನಾಂಗಗಳ ನ್ಯಾಯಗಳ ಪ್ರಕಾರ ಮಾಡಿದ್ದರಿಂದಲೂ
8. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು, ನಾನೇ, ನಿನಗೆ ವಿರೋಧವಾಗಿದ್ದೇನೆ; ಜನಾಂಗಗಳ ಕಣ್ಣುಗಳ ಮುಂದೆ ನಿನ್ನ ಮಧ್ಯದಲ್ಲಿ ನ್ಯಾಯತೀರ್ಪನ್ನು ಮಾಡುತ್ತೇನೆ.
9. ನಾನು ಮಾಡದೇ ಇದ್ದದ್ದನ್ನೂ ಇನ್ನು ಮೇಲೆ ಮಾಡದೇ ಇರುವಂಥದ್ದನ್ನೂ ನಿನ್ನ ಅಸಹ್ಯಗಳ ನಿಮಿತ್ತ ವಾಗಿ ನಿನ್ನಲ್ಲಿ ಮಾಡುತ್ತೇನೆ.
10. ಆದದರಿಂದ ನಿನ್ನ ಮಧ್ಯದಲ್ಲಿ ತಂದೆಗಳೇ ಮಕ್ಕಳನ್ನು ತಿನ್ನುವರು; ಮಕ್ಕಳು ಅವರ ತಂದೆಗಳನ್ನು ತಿನ್ನುವರು; ಹೀಗೆ ನಿನ್ನಲ್ಲಿ ನ್ಯಾಯ ತೀರ್ಪನ್ನು ನಡಿಸುವೆನು. ನಿನ್ನಲ್ಲಿ ಉಳಿದವರನ್ನೆಲ್ಲಾ ಗಾಳಿ ಬೀಸುವ ಎಲ್ಲಾ ದಿಕ್ಕಿಗೂ ಚದರಿಸುವೆನು.
11. ಆದಕಾರಣ ನನ್ನ ಜೀವದಾಣೆ, ದೇವರಾದ ಕರ್ತನು --ನಿಶ್ಚಯವಾಗಿ ನೀನು ನನ್ನ ಪರಿಶುದ್ಧ ಸ್ಥಳವನ್ನು ನಿನ್ನ ಎಲ್ಲಾ ಹೇಸಿಗೆಗಳಿಂದಲೂ ಅಸಹ್ಯಗಳಿಂದಲೂ ಅಪವಿತ್ರಪಡಿಸಿದ ಕಾರಣ ನಾನೂ ಸಹ ನಿನ್ನನ್ನು ಕುಂದಿಸುವೆನು ಮತ್ತು ನನ್ನ ಕಣ್ಣು ಕನಿಕರಿಸುವದಿಲ್ಲ, ಇಲ್ಲವೆ ಕಟಾಕ್ಷವನ್ನು ತೋರಿಸುವದಿಲ್ಲ.
12. ನಿನ್ನಲ್ಲಿಯ ಮೂರನೆಯ ಒಂದು ಪಾಲು ವ್ಯಾಧಿಗಳಿಂದ ಸಾಯು ವರು, ಕ್ಷಾಮದಿಂದ ನಿನ್ನಲ್ಲಿ ಅವರು ನಾಶವಾಗುವರು; ಮೂರನೆಯ ಒಂದು ಪಾಲು ನಿನ್ನ ಸುತ್ತಲೂ ಕತ್ತಿಯಿಂದ ಬೀಳುವರು; ಮೂರನೆಯ ಒಂದು ಪಾಲನ್ನು ಎಲ್ಲಾ ದಿಕ್ಕುಗಳಿಗೆ (ಗಾಳಿಗೆ ತೂರಿ) ಚದರಿಸಿ ಅವರ ಮೇಲೆ ಕತ್ತಿಯನ್ನು ಬೀಸುವೆನು.
13. ಈ ಪ್ರಕಾರ ನನ್ನ ಕೋಪವನ್ನು ತೀರಿಸಿಕೊಳ್ಳುವೆನು. ನನ್ನ ಉರಿಯನ್ನು ಅವರ ಮೇಲೆ ಶಾಂತಪಡಿಸಿ, ಸಮಾಧಾನ ಹೊಂದು ವೆನು; ಹೀಗೆ ನಾನು ನನ್ನ ಉರಿಯನ್ನು ಅವರ ಮೇಲೆ ತೀರಿಸಿದ ತರುವಾಯ ಕರ್ತನಾದ ನಾನು ನನ್ನ ಉದ್ದೇಶ ಪೂರ್ವಕವಾಗಿ ಮಾಡಿದ್ದೇನೆಂದು ಅವರಿಗೆ ಗೊತ್ತಾಗು ವದು.
14. ಇದಲ್ಲದೆ ನಾನು ಹಾದು ಹೋಗುವವರೆ ಲ್ಲರ ಕಣ್ಣುಗಳ ಮುಂದೆ ನಿನ್ನ ಸುತ್ತಲಿರುವ ಎಲ್ಲಾ ಜನಾಂಗಗಳ ನಿಂದೆಗೆ ಗುರಿಮಾಡಿ ನೀನು ಹಾಳಾಗುವ ಹಾಗೆ ಮಾಡುತ್ತೇನೆ.
15. ಹೀಗೆ ನಾನು ಕೋಪ ದಿಂದಲೂ ಉಗ್ರತ್ವದಿಂದಲೂ ಉಗ್ರತ್ವದ ಗದರಿಕೆಗ ಳಿಂದಲೂ ನಿನ್ನಲ್ಲಿ ನ್ಯಾಯತೀರ್ಪುಗಳನ್ನು ನಡಿಸು ವಾಗ ನಿನ್ನ ಸುತ್ತಲಿರುವ ಜನಾಂಗಗಳಿಗೆ ನಿಂದೆಯೂ ದೂಷಣೆಯೂ ಶಿಕ್ಷೆಯೂ ವಿಸ್ಮಯವೂ ಆಗುವದು, ಕರ್ತನಾದ ನಾನೇ ಇದನ್ನು ಹೇಳಿದ್ದೇನೆ.
16. ನಾನು ನಾಶಕ್ಕಾಗಿ ಇರುವ ಬರಗಾಲದ ಕೆಟ್ಟ ಬಾಣಗಳನ್ನು ಅವರ ಮೇಲೆ ಕಳುಹಿಸುವಾಗ ನಿಮ್ಮನ್ನು ನಾ ಮಾಡುವದಕ್ಕಾಗಿಯೇ ಅವುಗಳನ್ನು ಕಳುಹಿಸುವೆನು; ನಿಮ್ಮ ಮೇಲೆ ಬರಗಾಲವನ್ನು ಹೆಚ್ಚಿಸಿ ನಿಮ್ಮ ಜೀವನಾಧಾರವಾದ ರೊಟ್ಟಿಯನ್ನು ಮುರಿದು ಹಾಕು ತ್ತೇನೆ.
17. ಹೀಗೆ ನಾನು ಬರಗಾಲವನ್ನೂ ಮತ್ತು ಕೆಟ್ಟ ಮೃಗಗಳನ್ನೂ ನಿಮ್ಮ ಮೇಲೆ ಕಳುಹಿಸುತ್ತೇನೆ. ಅವು ನಿಮ್ಮನ್ನು ದಿಕ್ಕಿಲ್ಲದವರನ್ನಾಗಿ ಮಾಡುವವು. ವ್ಯಾಧಿಯೂ ರಕ್ತವೂ ನಿಮ್ಮಲ್ಲಿ ಹಾದು ಹೋಗುವದು; ನಿಮ್ಮ ಮೇಲೆ ಕತ್ತಿಯನ್ನು ಬೀಸುತ್ತೇನೆ. ಕರ್ತನಾದ ನಾನೇ ಇದನ್ನು ಮಾತನಾಡಿದ್ದೇನೆ.

Chapter 6

1. ಕರ್ತನ ವಾಕ್ಯವು ನನಗೆ ಉಂಟಾಯಿತು. ಏನಂದರೆ--
2. ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಪರ್ವತಗಳಿಗೆ ಅಭಿಮುಖನಾಗಿ ನಿಂತು ಅವುಗಳಿಗೆ ವಿರೋಧವಾಗಿ ಪ್ರವಾದಿಸಿ
3. ಇಸ್ರಾಯೇ ಲಿನ ಪರ್ವತಗಳೇ, ದೇವರಾದ ಕರ್ತನ ವಾಕ್ಯವನ್ನು ಕೇಳಿರಿ; ದೇವರಾದ ಕರ್ತನು ಪರ್ವತಗಳಿಗೂ ಗುಡ್ಡ ಗಳಿಗೂ ನದಿಗಳಿಗೂ ಕಣಿವೆಗಳಿಗೂ ಹೀಗೆ ಹೇಳು ತ್ತಾನೆ--ಇಗೋ, ನಾನು, ನಾನೇ ನಿಮ್ಮ ಮೇಲೆ ಕತ್ತಿ ಯನ್ನು ತಂದು ನಿಮ್ಮ ಎತ್ತರ ಸ್ಥಳಗಳನ್ನು (ಮೇಡುಗ ಳನ್ನು) ನಾಶಮಾಡುತ್ತೇನೆ.
4. ನಿಮ್ಮ ಯಜ್ಞವೇದಿಗಳು ಹಾಳಾಗುವವು; ನಿಮ್ಮ ಪ್ರತಿಮೆಗಳು ಮುರಿಯಲ್ಪಡು ವವು; ನಿಮ್ಮಲ್ಲಿ ಹತರಾದ ಮನುಷ್ಯರನ್ನು ನಿಮ್ಮ ವಿಗ್ರ ಹಗಳ ಮುಂದೆ ನಾನು ಬಿಸಾಡುವೆನು.
5. ಇಸ್ರಾ ಯೇಲನ ಮಕ್ಕಳ ಹೆಣಗಳನ್ನು ದೇವತಾ ವಿಗ್ರಹಗಳ ಮುಂದೆ ಹಾಕುವೆನು. ನಿಮ್ಮ ಯಜ್ಞವೇದಿಗಳ ಸುತ್ತಲೂ ನಿಮ್ಮ ಎಲುಬುಗಳನ್ನು ಎರಚಿಬಿಡುವೆನು.
6. ನಿಮ್ಮ ನಗರದಲ್ಲಿ ವಾಸಮಾಡುವ ನಿಮ್ಮ ಎಲ್ಲಾ ಸ್ಥಳಗಳು ಹಾಳುಮಾಡಲ್ಪಡುವವು; ಎತ್ತರವಾದ ಸ್ಥಳಗಳೂ ನಾಶ ಮಾಡಲ್ಪಡುವವು; ಹೀಗೆ ನಿಮ್ಮ ಯಜ್ಞವೇದಿಗಳು ನಾಶವಾಗಿಯೂ ಹಾಳಾಗಿಯೂ ಹೋಗುವವು. ನಿಮ್ಮ ವಿಗ್ರಹಗಳು ಒಡೆಯಲ್ಪಟ್ಟು ಇಲ್ಲದಂತಾಗುವವು. ನೀವು ರೂಪಿಸಿದ ಪ್ರತಿಮೆಗಳು ಕಡಿದುಹಾಕಲ್ಪಟ್ಟು ಅಳಿಸ ಲ್ಪಡುವವು.
7. ಹತವಾದವರು ನಿಮ್ಮ ಮಧ್ಯದಲ್ಲಿ ಬೀಳು ವರು, ಆಗ ನೀವು ನಾನೇ ಕರ್ತನೆಂದು ತಿಳಿಯುವಿರಿ.
8. ಆದಾಗ್ಯೂ ನೀವು ದೇಶಗಳಲ್ಲಿ ಚದರಿಹೋಗುವಾಗ ಜನಾಂಗಗಳೊಳಗೆ ಕತ್ತಿ ಬೀಸಿದಾಗ ತಪ್ಪಿಸಿಕೊಳ್ಳು ವವರು ನಿಮ್ಮಲ್ಲಿರುವ ಹಾಗೆ ಕೆಲವರನ್ನು ಉಳಿಸುತ್ತೇನೆ.
9. ನಿಮ್ಮಲ್ಲಿ ತಪ್ಪಿಸಿಕೊಂಡವರು ತಾವು ಸೆರೆಗೆ ಒಯ್ಯಲ್ಪ ಡುವ ಜನಾಂಗಗಳಲ್ಲಿ ನನ್ನನ್ನು ಜ್ಞಾಪಕಮಾಡಿಕೊಳ್ಳು ವರು, ಯಾಕಂದರೆ ನನ್ನನ್ನು ಬಿಟ್ಟುಬಿಡುವ ಅವರ ಜಾರಹೃದಯದಿಂದಲೂ ಅವರ ದೇವರ ವಿಗ್ರಹಗಳ ಹಿಂದೆ ಜಾರತ್ವ ಮಾಡುವವರ ಕಣ್ಣುಗಳಿಂದಲೂ ಮುರಿದುಹೋದೆನು; ಅವರು ತಮ್ಮ ಅಸಹ್ಯಗಳಲ್ಲಿ ಮಾಡುವ ಕೇಡುಗಳ ನಿಮಿತ್ತ ತಮಗೆ ತಾವೇ ಹೇಸಿ ಕೊಳ್ಳುವರು.
10. ನಾನೇ ಕರ್ತನೆಂದೂ ನಾನು ಈ ಕೇಡನ್ನು ಮಾಡುತ್ತಿರುವೆನೆಂದೂ ನಾನು ವ್ಯರ್ಥವಾಗಿ ಹೇಳುವದಿಲ್ಲವೆಂದೂ ತಿಳಿದುಕೊಳ್ಳುವರು.
11. ದೇವರಾದ ಕರ್ತನು ಹೇಳುವದೇನಂದರೆ; ನಿನ್ನ ಕೈಯಿಂದ ಬಡಿದು ನಿನ್ನ ಪಾದದಿಂದ ತುಳಿದು ಹೇಳ ಬೇಕಾದದ್ದೇನಂದರೆ--ಮನೆಯವರ ಸಮಸ್ತ ಕೆಟ್ಟ ಅಸಹ್ಯಗಳೇ ಅಯ್ಯೋ, ಅವರು ಕತ್ತಿಯಿಂದಲೂ ಬರ ದಿಂದಲೂ ಮತ್ತು ವ್ಯಾಧಿಗಳಿಂದಲೂ ಬೀಳುವರು.
12. ದೂರದಲ್ಲಿರುವವನು ವ್ಯಾಧಿಯಿಂದ ಸಾಯುವನು; ಹತ್ತಿರದಲ್ಲಿರುವವನು ಕತ್ತಿಯಿಂದ ಬೀಳುವನು; ಉಳಿದು ಮುತ್ತಿಗೆಯಲ್ಲಿರುವವನು ಬರದಿಂದ ಸಾಯುವನು; ಹೀಗೆ ನಾನು ಅವರ ಮೇಲೆ ನನ್ನ ಉಗ್ರತೆಯನ್ನು ತೀರಿಸಿಕೊಳ್ಳುವೆನು.
13. ಆಮೇಲೆ ನೀವು ಅವರಲ್ಲಿ ಹತವಾದ ಮನುಷ್ಯರು ಅವರಲ್ಲಿರುವಾಗ ಅವರ ವಿಗ್ರಹಗಳ ಮಧ್ಯದಲ್ಲಿ ಅವರ ಯಜ್ಞವೇದಿಗಳ ಸುತ್ತ ಲಾಗಿಯೂ ಎತ್ತರವಾದ ಪ್ರತಿಯೊಂದು ಗುಡ್ಡದ ಮೇಲೆಯೂ ಸಮಸ್ತ ಪರ್ವತಗಳ ತುದಿಯಲ್ಲಿಯ ಪ್ರತಿಯೊಂದು ಹಸುರಾದ ಮರದ ಕೆಳಗೂ ಪ್ರತಿ ಯೊಂದು ದಪ್ಪವಾದ ಓಕ್‌ ಮರದ ಕೆಳಗಡೆಯೂ ಅವರು ತಮ್ಮ ವಿಗ್ರಹಗಳಿಗೆಲ್ಲಾ ಸುವಾಸನೆಯನ್ನು ಅರ್ಪಿಸುವದರಲ್ಲಿಯೂ ನಾನೇ ಕರ್ತನೆಂದು ತಿಳಿಯು ವಿರಿ
14. ಹೀಗೆ ನಾನು ನನ್ನ ಕೈಯನ್ನು ಅವರ ಮೇಲೆ ಚಾಚಿ ಅವರ ದೇಶವನ್ನು ನಾಶಮಾಡುವೆನು. ಹೌದು, ಅವರ ಎಲ್ಲಾ ನಿವಾಸಸ್ಥಳಗಳನ್ನು ದಿಬ್ಲದ ಅರಣ್ಯ ಕ್ಕಿಂತಲೂ ಹೆಚ್ಚಾಗಿ ಹಾಳುಮಾಡುವೆನು; ನಾನೇ ಕರ್ತನೆಂದು ಅವರು ತಿಳಿದುಕೊಳ್ಳುವರು.

Chapter 7

1. ಇದಾದ ಮೇಲೆ ಕರ್ತನ ವಾಕ್ಯವು ನನ್ನ ಕಡೆಗೆ ಬಂದು ಹೇಳಿದ್ದೇನೆಂದರೆ--
2. ಮನುಷ್ಯಪುತ್ರನೇ, ದೇವರಾದ ಕರ್ತನು ಇಸ್ರಾ ಯೇಲ್‌ ದೇಶಕ್ಕೆ ಹೀಗೆ ಹೇಳುತ್ತಾನೆ--ಅಂತ್ಯವು ಬಂದಿದೆ; ಈ ದೇಶದ ನಾಲ್ಕು ಮೂಲೆಗಳಲ್ಲೂ ಅಂತ್ಯವು ಬಂದಿದೆ.
3. ಈಗ ನಿನ್ನ ಮೇಲೂ ಅಂತ್ಯವು ಬಂದಿದೆ ಮತ್ತು ನನ್ನ ಕೋಪವನ್ನು ನಿನ್ನ ಮೇಲೆ ಕಳುಹಿಸುತ್ತೇನೆ; ನಿನ್ನ ಮಾರ್ಗಗಳ ಪ್ರಕಾರ ನಿನಗೆ ನ್ಯಾಯತೀರಿಸುತ್ತೇನೆ. ನಿನ್ನ ಎಲ್ಲಾ ಅಸಹ್ಯಗಳಿಗೋಸ್ಕರ ನಿನ್ನ ಮೇಲೆ ಮುಯ್ಯಿ ತೀರಿಸುವೆನು.
4. ನನ್ನ ಕಣ್ಣುಗಳು ನಿನ್ನನ್ನು ಕಟಾಕ್ಷಿಸುವದಿಲ್ಲ; ನಾನು ನಿನ್ನನ್ನು ಕನಿಕರಿಸು ವದೂ ಇಲ್ಲ, ಆದರೆ ನಿನ್ನ ಮಾರ್ಗಗಳ ಪ್ರಕಾರ ನಿನ್ನ ಮೇಲೆ ಮುಯ್ಯಿ ತೀರಿಸುತ್ತೇನೆ, ನಿನ್ನ ಅಸಹ್ಯಗಳು ನಿನ್ನ ಮಧ್ಯೆ ಇರುವವು, ನಾನೇ ಕರ್ತನೆಂದು ನಿನಗೆ ತಿಳಿಯುವದು.
5. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಕೇಡು ಒಂದೇ ಒಂದು ಕೇಡು, ಇಗೋ, ಬಂತು.
6. ಅಂತ್ಯವು ಬಂತು. ಅಂತ್ಯವು ಬಂದು ಅದು ನಿನಗೋಸ್ಕರ ಕಾಯುತ್ತಾ ಇದೆ. ಇಗೋ, ಅದು ಬಂತು.
7. ಓ ದೇಶದಲ್ಲಿ ವಾಸಿಸುವವನೇ, ನಿನಗಾಗಿ ಮುಂಜಾನೆ ಬಂತು, ಕಾಲವು ಬಂತು, ತೊಂದರೆಯ ದಿನವು ಹತ್ತಿರವಾಯಿತು ಮತ್ತು ಪರ್ವತಗಳ ಆರ್ಭಟದ ಧ್ವನಿ ಇಲ್ಲ.
8. ಈಗ ಸ್ವಲ್ಪ ಹೊತ್ತಿನಲ್ಲಿ ನನ್ನ ಉಗ್ರವನ್ನು ನಿನ್ನ ಮೇಲೆ ಸುರಿಯುವೆನು; ನನ್ನ ಕೋಪವನ್ನು ನಿನ್ನ ಮೇಲೆ ತೀರಿಸಿಬಿಡುವೆನು; ನಾನು ನಿನ್ನ ಮಾರ್ಗಗಳ ಪ್ರಕಾರ ಮುಯ್ಯಿ ತೀರಿಸುವೆನು; ನಿನ್ನ ಎಲ್ಲಾ ಅಸಹ್ಯಗಳ ಪ್ರಕಾರ ನಿನ್ನ ಮೇಲೆ ಮುಯ್ಯಿ ತೀರಿಸುವೆನು.
9. ನನ್ನ ಕಣ್ಣು ಕಟಾಕ್ಷಿಸುವದಿಲ್ಲ; ನಾನು ನಿನ್ನನ್ನು ಕನಿಕರಿಸುವದೂ ಇಲ್ಲ, ನಿನ್ನ ಮಾರ್ಗಗಳಿಗೂ ನಿನ್ನ ಮಧ್ಯದಲ್ಲಿರುವ ಅಸಹ್ಯಗಳಿಗೂ ತಕ್ಕದ್ದನ್ನು ನಿನಗೆ ಮುಯ್ಯಿ ತೀರಿಸುತ್ತೇನೆ. ಆಗ ಕರ್ತನಾದ ನಾನೇ ಹೊಡೆಯುತ್ತಿರುವನೆಂದು ನಿನಗೆ ತಿಳಿಯುವದು.
10. ಇಗೋ, ಆ ದಿನವು ಬಂತು, ಮುಂಜಾನೆ ಹೊರಟುಹೋಯಿತು. ಕೋಲು ಚಿಗು ರಿತು, ಗರ್ವ ಅರಳಿತು.
11. ಬಲಾತ್ಕಾರವು ದುಷ್ಟತ್ವದ ಕೋಲಾಗಿ ಎದ್ದಿತು; ಅವರಲ್ಲಿಯೂ ಅವರ ಜನ ಸಮೂಹದಲ್ಲಿಯೂ ಅವರ ಸಂಪತ್ತಿನಲ್ಲಿಯೂ ಏನೂ ಉಳಿಯುವದಿಲ್ಲ; ಅವರಿಗೋಸ್ಕರ ಗೋಳಾಟವೂ ಇರುವದಿಲ್ಲ.
12. ಕಾಲವು ಬಂತು, ದಿನವು ಸವಿಾಪ ವಾಯಿತು; ಕೊಂಡುಕೊಳ್ಳುವವನಿಗೆ ಸಂತೋಷವಿಲ್ಲ ದಿರಲಿ, ಮಾರುವವನು ದುಃಖಿಸದಿರಲಿ; ಯಾಕಂದರೆ ಎಲ್ಲಾ ಜನಸಮೂಹದ ಮೇಲೆ ರೌದ್ರವಿದೆ.
13. ಮಾರಿ ದವನು ಇನ್ನೂ ಬದುಕಿದ್ದರೂ ಮಾರಿದ್ದರ ಬಳಿಗೆ ಹಿಂತಿರುಗುವದಿಲ್ಲ; ದರ್ಶನವು ತಿರುಗದ ಸಮಸ್ತ ಜನಸಮೂಹದ ವಿಷಯವಾಗಿದೆ. ಒಬ್ಬರೂ ತಮ್ಮ ಜೀವದ ಅಕ್ರಮದಲ್ಲಿ ಬಲಗೊಳ್ಳುವದಿಲ್ಲ.
14. ಅವರು ಕಹಳೆಯನ್ನೂದಿ ಎಲ್ಲವನ್ನೂ ಸಿದ್ಧಮಾಡಿಕೊಂಡಿದ್ದಾರೆ, ಆದರೆ ಯಾರೂ ಯುದ್ಧಕ್ಕೆ ಹೋಗುವದಿಲ್ಲ; ಯಾಕಂದರೆ ಎಲ್ಲಾ ಜನ ಸಮೂಹದ ಮೇಲೆ ನನ್ನ ಕೋಪವಿದೆ.
15. ಹೊರಗೆ ಕತ್ತಿಯೂ ಒಳಗೆ ವ್ಯಾಧಿಯೂ ಕ್ಷಾಮವೂ ಉಂಟು. ಹೊಲದಲ್ಲಿರುವವನನ್ನು ಕತ್ತಿಯು ಸಾಯಿಸುವದು; ಪಟ್ಟಣದಲ್ಲಿರುವವನನ್ನು ವ್ಯಾಧಿಯೂ ಬರವೂ ತಿಂದು ಬಿಡುವದು.
16. ಆದರೆ ಅವರಲ್ಲಿ ತಪ್ಪಿಸಿಕೊಳ್ಳುವವರು ತಪ್ಪಿಸಿಕೊಳ್ಳುವರು; ಪ್ರತಿಯೊ ಬ್ಬರೂ ತಮ್ಮ ತಮ್ಮ ಅಕ್ರಮಗಳ ನಿಮಿತ್ತ ಗೋಳಾಡಿ ಕಣಿವೆಯಲ್ಲಿರುವ ಪಾರಿವಾಳದ ಹಾಗೆ ಪರ್ವತಗಳ ಮೇಲೆ ಇರುವರು.
17. ಕೈಗಳೆಲ್ಲಾ ಜೋತಾಡುವವು; ಎಲ್ಲಾ ಮೊಣಕಾಲುಗಳು ನೀರಿನ ಹಾಗೆ ನಿತ್ರಾಣವಾಗು ವವು.
18. ಅವರು ತಮ್ಮಲ್ಲಿ ಗೋಣಿತಟ್ಟುಗಳನ್ನು ಕಟ್ಟಿ ಕೊಳ್ಳುವರು ಮತ್ತು ಭಯವು ಅವರನ್ನು ಮುಚ್ಚಿಬಿಡು ವದು; ಎಲ್ಲಾ ಮುಖಗಳ ಮೇಲೆ ನಾಚಿಕೆಯೂ ಅವರ ಎಲ್ಲಾ ತಲೆಗಳು ಬೋಳಾಗಿಯೂ ಇರುವವು.
19. ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು; ಅವರ ಬಂಗಾರವು ತೆಗೆದುಹಾಕಲ್ಪಡುವದು, ಅವರ ಬೆಳ್ಳಿ ಬಂಗಾರಗಳು ಕರ್ತನ ಕೋಪದ ದಿವಸದಲ್ಲಿ ಅವರನ್ನು ತಪ್ಪಿಸಲಾರವು ಮತ್ತು ಅವರ ಪ್ರಾಣಗಳನ್ನು ತೃಪ್ತಿಪಡಿ ಸುವದಿಲ್ಲ. ಅವರ ಕರುಳುಗಳನ್ನು ತುಂಬಿಸುವದಿಲ್ಲ. ಯಾಕಂದರೆ ಅದು ಅವರ ಅಕ್ರಮಗಳ ಎಡತಡೆಯ ಭಾಗವಾಗಿದೆ.
20. ಅವನ ಆಭರಣದ ಸೌಂದರ್ಯವಾ ದರೋ ಅವನು ಅದನ್ನು ಘನತೆಗಾಗಿ ಇಟ್ಟನು. ಆದರೆ ಅವರು ತಮ್ಮ ಅಸಹ್ಯಗಳ ವಿಗ್ರಹಗಳನ್ನೂ ಹೇಸಿಗೆ ಗಳನ್ನೂ ಅದರಲ್ಲಿ ಮಾಡಿದ್ದರಿಂದ ಅದನ್ನು ನಾನು ಅವರಿಂದ ದೂರಮಾಡಿದ್ದೇನೆ.
21. ನಾನು ಅದನ್ನು ಅಪರಿಚಿತರ ಕೈಗೆ ಕೊಳ್ಳೆಯಾಗಿಯೂ ಭೂಮಿಯ ದುಷ್ಟರಿಗೆ ಸೂರೆಯಾಗಿಯೂ ಒಪ್ಪಿಸುವೆನು ಮತ್ತು ಅವರು ಅದನ್ನು ಅಪವಿತ್ರಪಡಿಸುವರು.
22. ನನ್ನ ಮುಖವನ್ನು ನಾನು ಅವರ ಕಡೆಯಿಂದ ತಿರುಗಿಸುವೆನು; ನನ್ನ ರಹಸ್ಯ ಸ್ಥಳವನ್ನು ಅಪವಿತ್ರಪಡಿಸುವರು. ದರೋಡೆ ಕೋರರು ಅದರಲ್ಲಿ ಸೇರಿ ಅದನ್ನು ಅಪವಿತ್ರ ಪಡಿಸುವರು.
23. ಒಂದು ಸರಪಳಿಯನ್ನು ಮಾಡು; ಯಾಕಂದರೆ ದೇಶವು ರಕ್ತಾಪರಾಧದಿಂದ ತುಂಬಿದೆ ಮತ್ತು ನಗರವು ಹಿಂಸೆಯಿಂದ ತುಂಬಿದೆ.
24. ಆದ ಕಾರಣ ನಾನು ಅನ್ಯಜನಾಂಗಗಳಲ್ಲಿ ಕೆಟ್ಟವರನ್ನು ತರುತ್ತೇನೆ ಮತ್ತು ಅವರು ಅವರ ಮನೆಗಳನ್ನು ವಶ ಪಡಿಸಿಕೊಳ್ಳುವರು; ನಾನು ಬಲಿಷ್ಠರ ಅಟ್ಟಹಾಸವನ್ನು ನಿಲ್ಲಿಸುತ್ತೇನೆ ಮತ್ತು ಅವರ ಪರಿಶುದ್ಧ ಸ್ಥಳಗಳು ಅಪವಿತ್ರವಾಗುವವು.
25. ನಾಶವು ಬರುತ್ತದೆ ಮತ್ತು ಅವರು ಸಮಾಧಾನವನ್ನು ಹುಡುಕುತ್ತಾರೆ; ಆದರೆ ಅದು ಇರುವದಿಲ್ಲ.
26. ಕೇಡಿನ ಮೇಲೆ ಕೇಡು ಬರು ವದು; ಸುದ್ದಿಯ ಮೇಲೆ ಸುದ್ದಿ ಬರುವದು. ಆಗ ಅವರು ಪ್ರವಾದಿಯ ದರ್ಶನವನ್ನು ಹುಡುಕುವರು. ಆದರೆ ನ್ಯಾಯಪ್ರಮಾಣವು ಯಾಜಕರನ್ನೂ ಆಲೋ ಚನೆಯು ಪೂರ್ವಿಕರನ್ನೂ ಬಿಟ್ಟು ನಾಶವಾಗುವದು.
27. ಅರಸನು ದುಃಖಿಸುವನು, ಪ್ರಧಾನನು ನಿರ್ಗತಿಕನಾ ಗುವನು; ದೇಶದ ಜನರ ಕೈಗಳು ತೊಂದರೆಗೊಳ್ಳು ವವು; ಅವರ ಮಾರ್ಗಗಳ ಪ್ರಕಾರ ಅವರ ಹಾಗೆಯೇ ಮಾಡುವೆನು; ಅವರ ನ್ಯಾಯಗಳ ಪ್ರಕಾರ ಅವರಿಗೆ ನ್ಯಾಯತೀರಿಸುವೆನು. ನಾನೇ ಕರ್ತನೆಂದು ಅವರಿಗೆ ತಿಳಿಯುವದು.

Chapter 8

1. ಆರನೇ ವರುಷದ ಆರನೆಯ ತಿಂಗಳಿನ ಐದನೆಯ ದಿನದಲ್ಲಿ ಆಗಿದ್ದೇನಂದರೆ--ನಾನೂ ಯೆಹೂದದ ಹಿರಿಯರೂ ನನ್ನ ಮನೆಯಲ್ಲಿ ಕುಳಿತುಕೊಂಡಿರುವಾಗ ಅಲ್ಲಿ ದೇವರಾದ ಕರ್ತನ ಹಸ್ತವು ನನ್ನ ಮೇಲೆ ಬಿತ್ತು.
2. ಆಮೇಲೆ ನಾನು ನೋಡಲಾಗಿ ಇಗೋ, ಬೆಂಕಿಯಂತೆ ತೋರುವ ಒಬ್ಬನ ರೂಪವು ಕಾಣಿಸಿತು; ಅವನ ನಡುವಿನ ಮೇಲ್ಗಡೆಯೂ ಕೆಳಗಡೆಯೂ ಮೆರಗು ಮಾಡಿದ ಪೀತರತ್ನ ವರ್ಣದ ಹಾಗೆ ಹೊಳೆಯುತ್ತಿತ್ತು.
3. ಕೈಯ ಹಾಗಿರುವ ಹಸ್ತವನ್ನು ಚಾಚಿ, ನನ್ನ ತಲೆಯ ಕೂದಲಿನಿಂದ ನನ್ನನ್ನು ಹಿಡಿ ದನು; ಆಗ ಆತ್ಮನು ನನ್ನನ್ನು ಭೂಮಿಗೂ ಆಕಾಶಕ್ಕೂ ಮಧ್ಯದಲ್ಲಿ ಎತ್ತಿ ನನ್ನನ್ನು ದೇವರದರ್ಶನಗಳಲ್ಲಿ ಯೆರೂ ಸಲೇಮಿಗೆ ಉತ್ತರದ ಕಡೆಗೆ ಎದುರಾಗಿರುವ ಒಳ ಬಾಗಲಿನ ಕಡೆಗೆ ಅಸೂಯೆ ಎಬ್ಬಿಸುವ ವಿಗ್ರಹವು ಇದ್ದಲ್ಲಿಗೆ ತೆಗೆದುಕೊಂಡು ಹೋದನು.
4. ಇಗೋ, ಇಸ್ರಾ ಯೇಲಿನ ದೇವರ ಮಹಿಮೆಯು ನಾನು ಆ ಬಯಲು ಸೀಮೆಯಲ್ಲಿ ನೋಡಿದ ಆಕಾರದ ಪ್ರಕಾ ರವೇ ಅಲ್ಲಿ ಇತ್ತು.
5. ಆಮೇಲೆ ಆತನು ನನಗೆ --ಮನುಷ್ಯಪುತ್ರನೇ, ಈಗ ಉತ್ತರದ ಕಡೆಗೆ ನಿನ್ನ ಕಣ್ಣುಗಳನ್ನು ಎತ್ತು ಅಂದಾಗ ನಾನು ಉತ್ತರದ ಕಡೆಗೆ ಕಣ್ಣುಗಳನ್ನೆತ್ತಿದೆನು; ಇಗೋ, ಉತ್ತರದಲ್ಲಿ ಯಜ್ಞ ವೇದಿಯ ಬಾಗಿಲಲ್ಲಿ ಅಸೂಯೆ ವಿಗ್ರಹವು ಪ್ರವೇಶ ದಲ್ಲಿತ್ತು.
6. ಇದಲ್ಲದೆ ಆತನು ನನಗೆ ಹೇಳಿದ್ದೇನಂದರೆ --ಮನುಷ್ಯಪುತ್ರನೇ, ಅವರು ಮಾಡುತ್ತಿರುವದನ್ನು ನೋಡುತ್ತಿರುವಿಯಾ? ನಾನು ನನ್ನ ಪರಿಶುದ್ಧ ಸ್ಥಳವನ್ನು ಬಿಟ್ಟು ದೂರ ಹೋಗುವ ಹಾಗೆ ಇಸ್ರಾಯೇಲಿನ ಮನೆತನದವರು ಇಲ್ಲಿ ನಡೆಸುತ್ತಿರುವ ದೊಡ್ಡ ಅಸಹ್ಯ ಗಳನ್ನು ನೋಡುತ್ತಿರುವಿಯಾ? ಆದರೆ ಮತ್ತೆ ತಿರು ಗಿಕೋ, ನೀನು ಇನ್ನೂ ದೊಡ್ಡ ಅಸಹ್ಯಗಳನ್ನು ನೋಡುವಿ ಅಂದನು.
7. ಆಗ ಅವನು ನನ್ನನ್ನು ಅಂಗಳದ ಬಾಗಲಿಗೆ ತಂದನು; ಮತ್ತು ನಾನು ನೋಡುವಾಗ ಇಗೋ, ಗೋಡೆಯಲ್ಲಿ ಒಂದು ರಂಧ್ರವನ್ನು ಕಂಡೆನು
8. ಆಮೇಲೆ ಆತನು ನನಗೆ--ಮನುಷ್ಯಪುತ್ರನೇ, ಈಗ ಗೋಡೆಯಲ್ಲಿ ಕೊರೆ ಎಂದು ಹೇಳಿದನು. ಯಾವಾಗ ನಾನು ಗೋಡೆಯನ್ನು ಕೊರೆದೆನೋ ಒಂದು ಬಾಗಿಲು ಕಾಣಿಸಿತು.
9. ಆಗ ಆತನು ನನಗೆ--ಒಳಗೆ ಹೋಗು; ಅವರು ಮಾಡುವ ಕೆಟ್ಟ ಅಸಹ್ಯಗಳನ್ನು ನೋಡು ಅಂದನು.
10. ಹಾಗೆಯೇ ನಾನು ಒಳಗೆ ಹೋಗಿ ನೋಡಿದೆನು; ಇಗೋ, ಎಲ್ಲಾ ಜಾತಿಯ ಕ್ರಿಮಿಕೀಟಗಳೂ ಅಸಹ್ಯ ಮೃಗಗಳೂ ಇಸ್ರಾಯೇಲ್ಯರು ಪೂಜಿಸುವ ಸಕಲ ಮೂರ್ತಿಗಳೂ ಈ ಗೋಡೆಯ ಸುತ್ತಲೂ ಚಿತ್ರಿಸ ಲ್ಪಟ್ಟಿವೆ.
11. ಇದಲ್ಲದೆ ಇಸ್ರಾಯೇಲಿನ ಮನೆತನ ದವರಲ್ಲಿ ಎಪ್ಪತ್ತು ಮಂದಿಯೂ ಅವರ ಮಧ್ಯದಲ್ಲಿ ಶಾಫಾನನ ಮಗನಾದ ಯಾಜನ್ಯನೂ ನಿಂತುಕೊಂಡಿ ದ್ದರು; ಪ್ರತಿಯೊಬ್ಬನ ಕೈಯಲ್ಲೂ ಅವನವನ ಧೂಪಾ ರತಿ ಇತ್ತು; ಧೂಪದ ಸುವಾಸನೆಯು ಮೇಘವಾಗಿ ಏರುತ್ತಿತ್ತು.
12. ಆಗ ಆತನು ನನಗೆ ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರ ಪೂರ್ವಿಕರು ಕತ್ತಲೆ ಯಲ್ಲಿ ಪ್ರತಿಯೊಬ್ಬನೂ ತನ್ನ ಕೊಠಡಿಗಳಲ್ಲಿ ಚಿತ್ರಗಳನ್ನು ಮಾಡುವದನ್ನು ನೋಡಿದೆಯಾ?--ಕರ್ತನು ನಮ್ಮನ್ನು ನೋಡುವದಿಲ್ಲ, ಕರ್ತನು ಭೂಮಿಯನ್ನು ತೊರೆದು ಬಿಟ್ಟಿದ್ದಾನೆ ಎಂದು ಹೇಳುವರು.
13. ಇದಲ್ಲದೆ ಆತನು ಹೇಳಿದ್ದೇನಂದರೆ--ಮತ್ತೊಂದು ಸಾರಿ ತಿರುಗಿಕೋ; ಅವರು ಮಾಡುವ ಇನ್ನೂ ಮಹಾ ಅಸಹ್ಯವಾದವು ಗಳನ್ನು ನೋಡುವಿ ಅಂದನು.
14. ಆಗ ಅವನು ನನ್ನನ್ನು ಕರ್ತನ ಆಲಯದ ಉತ್ತರ ಕಡೆಗೆ ಎದುರಾಗಿ ಬಾಗಲಿದ್ದ ಕಡೆಗೆ ತಂದನು; ಇಗೋ, ಅಲ್ಲಿ ತಮ್ಮೂಜ್‌ಗೋಸ್ಕರ ಅಳುವ ಹೆಂಗಸರು ಕೂತಿದ್ದರು.
15. ಆಮೇಲೆ ನನಗೆ ಆತನು, ಓ ನರಪುತ್ರನೇ, ನೋಡಿದಿಯೋ? ಮತ್ತೊಂದು ಸಾರಿ ತಿರುಗಿಕೋ ಇವುಗಳಿಗಿಂತ ಇನ್ನೂ ದೊಡ್ಡ ಅಸಹ್ಯವಾದವುಗಳನ್ನು ನೋಡುವಿ ಎಂದು ಹೇಳಿದನು.
16. ಆಗ ಅವನು ನನ್ನನ್ನು ಕರ್ತನ ಆಲ ಯದ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋದನು. ಇಗೋ, ಕರ್ತನ ಮಂದಿರದ ಬಾಗಿಲಲ್ಲಿ ದ್ವಾರಾಂಗ ಳಕ್ಕೂ ಯಜ್ಞವೇದಿಗೂ ಮಧ್ಯದಲ್ಲಿ ಸುಮಾರು ಇಪ್ಪ ತ್ತೈದು ಮಂದಿಯು ಕರ್ತನ ಮಂದಿರಕ್ಕೆ ಬೆನ್ನು ಕೊಟ್ಟು, ಪೂರ್ವದಿಕ್ಕಿನ ಕಡೆಗೆ ತಮ್ಮ ಮುಖಗಳನ್ನು ತಿರು ಗಿಸಿ ಸೂರ್ಯ ನಮಸ್ಕಾರ ಮಾಡುತ್ತಿದ್ದರು.
17. ಆಗ ಆತನು ನನಗೆ--ಓ ಮನುಷ್ಯಪುತ್ರನೇ, ನೋಡಿ ದೆಯಾ? ಅವರು ಇಲ್ಲಿ ಮಾಡುವ ಅಸಹ್ಯವಾದವುಗಳು ಯೆಹೂದನ ಮನೆತನದವರಿಗಲ್ಲವೇ? ಅವರು ದೇಶವನ್ನು ಹಿಂಸೆಯಿಂದ ತುಂಬಿಸಿದ್ದಲ್ಲದೆ ನನ್ನನ್ನು ಕೆಣಕಬೇಕೆಂದು ಮತ್ತೆ ಯತ್ನಿಸುತ್ತಿದ್ದಾರೆ. ನೋಡು, ಅವರ ಮೂಗಿಗೆ ಕೊಂಬೆಗಳನ್ನಿಟ್ಟು ಕೊಳ್ಳುತ್ತಾರೆ.
18. ಆದದರಿಂದ ನಾನು ಸಹ ಉಗ್ರ ದಿಂದಲೇ ಇರುವೆನು. ನನ್ನ ಕಣ್ಣು ಕನಿಕರಿಸುವದೂ ಇಲ್ಲ, ನಾನು ಕಟಾಕ್ಷಿಸುವದೂ ಇಲ್ಲ, ಅವರು ನನ್ನ ಕಿವಿಗಳಲ್ಲಿ ಮಹಾಧ್ವನಿಯಿಂದ ಕಿರಿಚಿದರೂ ನಾನು ಕೇಳಿಸಿಕೊಳ್ಳುವದೂ ಇಲ್ಲ.

Chapter 9

1. ಇದಲ್ಲದೆ ಆತನು ಮಹಾಶಬ್ದದಿಂದ ನನ್ನ ಕಿವಿಗಳಲ್ಲಿ ಕೂಗಿ ಹೇಳಿದ್ದೇನಂದರೆ-- ಪಟ್ಟಣದಲ್ಲಿ ವಿಚಾರಣೆ ಹೊಂದಿದ ಪ್ರತಿಯೊಬ್ಬರೂ ಕೈಯಲ್ಲಿ ನಾಶಮಾಡುವ ಆಯುಧಗಳನ್ನು ಹಿಡಿದು ಕೊಂಡು ಸವಿಾಪಕ್ಕೆ ಬನ್ನಿರಿ ಅಂದಾಗ
2. ಇಗೋ, ಆರು ಮಂದಿ ಮನುಷ್ಯರು ಉತ್ತರ ದಿಕ್ಕಿನ ಮೇಲ್ಭಾಗದ ಆ ಮಾರ್ಗದಿಂದ ಬಂದರು ಮತ್ತು ಪ್ರತಿ ಮನುಷ್ಯನ ಕೈಯಲ್ಲಿ ಕೊಲ್ಲುವ ಆಯುಧವು ಇತ್ತು; ಅವರಲ್ಲಿ ಒಬ್ಬನು ನಾರುಮಡಿಯನ್ನು ಧರಿಸಿಕೊಂಡು ತನ್ನ ಪಕ್ಕೆಯಲ್ಲಿ ಲೇಖಕನ ದೌತಿಯನ್ನು ಇಟ್ಟುಕೊಂಡಿ ದ್ದನು. ಇವರೆಲ್ಲರೂ ಕಂಚಿನ ಯಜ್ಞವೇದಿಯ ಬಳಿ ಯಲ್ಲಿ ನಿಂತರು.
3. ಇಸ್ರಾಯೇಲಿನ ದೇವರ ಮಹಿ ಮೆಯು ಯಾವದರ ಮೇಲಿತ್ತೋ ಆ ಕೆರೂಬಿಯನ್ನು ಬಿಟ್ಟು ಮನೆಯ ಹೊಸ್ತಿಲಿಗೆ ಹೋಯಿತು; ತನ್ನ ಪಕ್ಕದಲ್ಲಿ ಲೇಖಕನ ದೌತಿ ಇಟ್ಟುಕೊಂಡು ಆ ನಾರುಮಡಿಯನ್ನು ಧರಿಸಿದ್ದ ಆ ಮನುಷ್ಯನ ಕಡೆಗೆ ಕೂಗಿ
4. ಕರ್ತನು ಅವನಿಗೆ ಹೇಳಿದ್ದೇನಂದರೆ--ಯೆರೂ ಸಲೇಮಿನ ಪಟ್ಟಣದ ಮಧ್ಯೆ ಹಾದುಹೋಗಿ ಅವರ ಮಧ್ಯೆ ನಡೆಯುವ ಎಲ್ಲಾ ಅಸಹ್ಯವಾದವುಗಳ ನಿಮಿತ್ತ ನಿಟ್ಟುಸಿರು ಬಿಡುತ್ತಾ ಅಳುತ್ತಿರುವವರೆಲ್ಲರ ಹಣೆಯ ಮೇಲೆ ಗುರುತು ಹಾಕು ಅಂದನು.
5. ಅದನ್ನು ನಾನು ಕೇಳುತ್ತಿರುವಾಗ ಇತರರಿಗೆ ಅವನು ಹೇಳಿದ್ದೇನಂದರೆ --ನೀವೂ ಅವನ ಹಿಂದೆ ಪಟ್ಟಣದಲ್ಲಿ ಹಾದು ಹೋಗಿ ಹೊಡೆಯಿರಿ; ನಿಮ್ಮ ಕಣ್ಣುಗಳು ಕನಿಕರಿಸದೆ ಇರಲಿ, ಕಟಾಕ್ಷಿಸದೆಯೂ ಇರಲಿ.
6. ವೃದ್ಧ ಯುವಕ ಯುವತಿ ಯರನ್ನು ಎಳೆಕೂಸುಗಳನ್ನು ಮತ್ತು ಹೆಂಗಸರನ್ನು ಸಂಪೂರ್ಣವಾಗಿ ಕೊಂದುಹಾಕಿರಿ. ಆದರೆ ಗುರುತು ಯಾವನ ಮೇಲೆ ಇದೆಯೋ ಅವನ ಹತ್ತಿರ ಹೋಗ ಬೇಡಿರಿ; ನನ್ನ ಪರಿಶುದ್ಧ ಸ್ಥಳದಿಂದಲೇ ಪ್ರಾರಂಭಿಸಿರಿ ಅಂದಾಗ, ಅವರು ಆಲಯದ ಮುಂದಿದ್ದ ಹಿರಿಯರಿಂದ ಪ್ರಾರಂಭಿಸಿದರು.
7. ಆತನು ಅವರಿಗೆ--ಆಲಯವನ್ನು ಅಶುದ್ಧ ಮಾಡಿರಿ, ಹತರಾದವರಿಂದ ಅಂಗಳಗಳನ್ನು ತುಂಬಿಸಿ, ಹೊರಡಿರಿ ಎಂದು ಹೇಳಿದನು. ಅವರು ಹೊರಟು ನಗರದಲ್ಲಿದ್ದವರನ್ನು ಹತಮಾಡಿದರು.
8. ಅವರು ಹತಮಾಡುತ್ತಿರುವಾಗ ನಾನು ಬಿಡಿಸಲ್ಪಟ್ಟೆನು. ಆಗ ನಾನು ಮೋರೆ ಕೆಳಗಾಗಿ ಬಿದ್ದು ಕೂಗಿ--ಹಾ, ದೇವರಾದ ಕರ್ತನೇ, ನೀನು ಯೆರೂಸಲೇಮಿನ ಮೇಲೆ ನಿನ್ನ ಕೋಪಾಗ್ನಿಯನ್ನು ಸುರಿಯುವದರಲ್ಲಿಯೇ ಇಸ್ರಾ ಯೇಲ್ಯರಲ್ಲಿ ಉಳಿದವರನ್ನೆಲ್ಲಾ ನಾಶಮಾಡುವಿಯಾ ಎಂದೆನು.
9. ಆಗ ಆತನು ನನಗೆ ಹೇಳಿದ್ದೇನಂದರೆಇಸ್ರಾಯೇಲಿನ ಮತ್ತು ಯೆಹೂದ ಮನೆತನದವರ ಅಕ್ರಮವು ಅತಿ ದೊಡ್ಡದಾಗಿದೆ; ದೇಶವು ರಕ್ತದಿಂದ ತುಂಬಿದೆ; ಪಟ್ಟಣವು ವಕ್ರತ್ವದಿಂದ ತುಂಬಿದೆ; ಯಾಕಂದರೆ ಕರ್ತನು ಭೂಮಿಯನ್ನು ತೊರೆದುಬಿಟ್ಟಿದ್ದಾನೆ; ಕರ್ತನು ನೋಡುವದಿಲ್ಲ ಎಂದು ಅವರು ಹೇಳುತ್ತಾರೆ.
10. ಆದದರಿಂದ ನಾನಂತೂ ಕನಿಕರಿಸುವದೂ ಇಲ್ಲ ಕಟಾಕ್ಷಿಸುವದೂ ಇಲ್ಲ ಆದರೆ ಅವರ ಮಾರ್ಗದಲ್ಲಿಯೇ ಅವರ ತಲೆಯ ಮೇಲೆ ಮುಯ್ಯಿತೀರಿಸುವೆನು ಅಂದನು.
11. ಇಗೋ, ನಾರುಮಡಿಯನ್ನು ತನ್ನ ಪಕ್ಕೆ ಯಲ್ಲಿ ಧರಿಸಿಕೊಂಡಂಥ ಆ ಮನುಷ್ಯನು ವರ್ತಮಾನ ವನ್ನು ತಂದು ನೀನು ಆಜ್ಞಾಪಿಸಿದ ಹಾಗೆ ಮಾಡಿದ್ದೇನೆ ಅಂದನು.

Chapter 10

1. ಆಗ ನಾನು ನೋಡಲಾಗಿ ಇಗೋ,ಕೆರೂಬಿಯರ ತಲೆಯ ಮೇಲಿದ್ದ ವಿಶಾಲ ವಾದ ಆಕಾಶದಲ್ಲಿ ಅವರ ಮೇಲೆ ನೀಲಮಣಿಯಂತೆ ಸಿಂಹಾಸನಾಕಾರದಂತಿರುವ ರೂಪವು ತೋರಿತು.
2. ಆತನು ನಾರುಮಡಿಯನ್ನು ಧರಿಸಿ ಕೊಂಡಿದ್ದ ಮನುಷ್ಯನಿಗೆ ಹೇಳಿದ್ದೇನಂದರೆ--ನೀನು ಕೆರೂಬಿಗಳ ಕೆಳಗೆ ಇರುವ ಚಕ್ರಗಳ ನಡುವೆ ಪ್ರವೇಶಿಸಿ, ಕೆರೂಬಿಗಳ ನಡುವೆ ಇರುವ ಉರಿಕೆಂಡಗಳ ತಳದಲಿ ನಿನ್ನ ಕೈತುಂಬ ಎತ್ತಿ ಅದನ್ನು ಪಟ್ಟಣದ ಮೇಲೆ ಚೆಲ್ಲು ಅಂದನು. ಹಾಗೆಯೇ ನಾನು ಕಂಡಂತೆ ಒಳಗೆ ಪ್ರವೇಶಿಸಿದನು.
3. ಆ ಮನುಷ್ಯನು ಒಳಗೆ ಹೋಗು ವಾಗ ಕೆರೂಬಿಯರು ಆಲಯದ ಬಳಿಯಲ್ಲಿ ನಿಂತಿ ದ್ದರು. ಮೇಘವು ಒಳಗಿನ ಅಂಗಳವನ್ನು ತುಂಬಿಸಿ ಕೊಂಡಿತ್ತು.
4. ಆಗ ಕರ್ತನ ಮಹಿಮೆಯು ಕೆರೂಬಿಗಳನ್ನು ಬಿಟ್ಟು ಮೇಲಕ್ಕೆ ಹೋಗಿ ಆಲಯದ ಹೊಸ್ತಿಲಲ್ಲಿ ನಿಂತಿತು, ಆಲಯವು ಮೇಘದಿಂದ ತುಂಬಿತ್ತು. ಆಗ ಕರ್ತನ ಮಹಿಮೆಯ ಪ್ರಕಾಶವು ಅಂಗಳದಲ್ಲಿ ತುಂಬಿತ್ತು.
5. ಕೆರೂಬಿಗಳ ರೆಕ್ಕೆಗಳ ಶಬ್ದವು ಮಾತನಾಡುವ ಸರ್ವಶಕ್ತನ ದೇವರ ಹಾಗೆ ಹೊರಗಣ ಅಂಗಳದ ವರೆಗೂ ಕೇಳಿಬಂತು.
6. ಆತನು ನಾರು ಮಡಿಯನ್ನು ಧರಿಸಿಕೊಂಡ ಮನುಷ್ಯನಿಗೆ--ಚಕ್ರಗಳ ಮಧ್ಯದಿಂದಲೂ ಕೆರೂಬಿಯರ ಮಧ್ಯದಿಂದಲೂ ಬೆಂಕಿ ಯನ್ನು ತೆಗೆದುಕೊಳ್ಳಲು ಆಜ್ಞಾಪಿಸಿದನು. ಅವನು ಒಳಗೆ ಹೋಗಿ ಚಕ್ರಗಳ ಬಳಿಯಲ್ಲಿ ನಿಂತನು.
7. ಒಬ್ಬ ಕೆರೂಬಿಯನು ಕೆರೂಬಿಯರ ಮಧ್ಯದೊಳಗಿಂದ ತನ್ನ ಕೈಯನ್ನು ಕೆರೂಬಿಯರ ಮಧ್ಯದೊಳಗಿರುವ ಬೆಂಕಿಗೆ ಚಾಚಿ, ತಕ್ಕೊಂಡು ನಾರುಮಡಿಯನ್ನು ಧರಿಸಿಕೊಂಡಿ ದ್ದವನ ಕೈಗೆ ಇಟ್ಟನು. ಇವನು ಅದನ್ನು ತೆಗೆದುಕೊಂಡು ಹೊರಗೆ ಹೋದನು.
8. ಕೆರೂಬಿಯರಲ್ಲಿ ಅವರ ರೆಕ್ಕೆ ಗಳ ಕೆಳಗೆ ಮನುಷ್ಯನ ಕೈಗೆ ಸಮಾನವಾದದ್ದು ಕಂಡುಬಂತು.
9. ನಾನು ನೋಡಿದಾಗ ಇಗೋ, ಒಬ್ಬೊಬ್ಬ ಕೆರೂ ಬಿಯನ ಬಳಿಯಲ್ಲಿ ಒಂದು ಚಕ್ರ, ಈ ಪ್ರಕಾರ ಕೆರೂಬಿಯರ ಬಳಿಯಲ್ಲಿ ನಾಲ್ಕು ಚಕ್ರಗಳಿದ್ದವು; ಆ ಚಕ್ರಗಳ ವರ್ಣವು ಪೀತರತ್ನದ ಹಾಗೆ ಇತ್ತು.
10. ಅವುಗಳ ಆಕಾರವು ನಾಲ್ಕಕ್ಕೂ ಒಂದೇ ರೂಪ ವಿತ್ತು; ಚಕ್ರದಲ್ಲಿ ಚಕ್ರವು ಇದ್ದ ಹಾಗೆ ಇದ್ದವು.
11. ಅವು ಹೋಗುತ್ತಿರುವಾಗ ಅವುಗಳು ನಾಲ್ಕು ಕಡೆಗಳಲ್ಲೂ ಹೋಗುತ್ತಿದ್ದವು. ಹೋಗುವಾಗ ತಿರುಗಿ ಕೊಳ್ಳಲಿಲ್ಲ. ಆದರೆ ಅವುಗಳ ತಲೆ ಯಾವ ಸ್ಥಳವನ್ನು ನೋಡುತ್ತಿತ್ತೋ ಅಲ್ಲಿಗೆ ಅದರ ಹಿಂದೆಯೇ ಹೋದವು, ಹೋಗುವಾಗ ತಿರುಗಲಿಲ್ಲ.
12. ಅವುಗಳ ಪೂರ್ತಿ ದೇಹವು, ಬೆನ್ನುಗಳು, ಕೈಗಳು, ರೆಕ್ಕೆಗಳು, ಮತ್ತು ಚಕ್ರಗಳು, ಇವುಗಳಿಗೆ ಸುತ್ತಲೂ ಕಣ್ಣುಗಳು ಇದ್ದವು. ಅಲ್ಲಿ ನಾಲ್ಕೂ ಚಕ್ರಗಳ ಮೇಲೂ ಇದ್ದವು.
13. ಚಕ್ರಗಳೋ ಅವುಗಳಿಗೆ ನಾನು ಕೇಳುವ ಹಾಗೆ ಓ ಚಕ್ರಗಳೇ ಎಂದು ಕೂಗಲ್ಪಟ್ಟಿತು.
14. ಒಬ್ಬೊಬ್ಬ ನಿಗೆ ನಾಲ್ಕು ಮುಖಗಳಿದ್ದವು, ಮೊದಲನೆಯ ಮುಖವು ಕೆರೂಬಿಯನ ಮುಖ, ಎರಡನೆಯ ಮುಖವು ಮನು ಷ್ಯನ ಮುಖ ಮೂರನೆಯದು ಸಿಂಹದ ಮುಖ ಮತ್ತು ನಾಲ್ಕನೆಯದು ಹದ್ದಿನ ಮುಖಗಳಾಗಿದ್ದವು.
15. ಆಗ ಕೆರೂಬಿಯರು ಮೇಲಕ್ಕೆತ್ತಲ್ಪಟ್ಟರು. ನಾನು ಕೆಬಾರ್‌ ನದಿಯ ಬಳಿಯಲ್ಲಿ ನೋಡಿದ ಜೀವಿಯು ಇದೇ.
16. ಕೆರೂಬಿಯರು ಹೋದಾಗ, ಚಕ್ರಗಳು ಅವರ ಸಂಗಡ ಹೋದವು. ಕೆರೂಬಿಯರು ಭೂಮಿಯನ್ನು ಬಿಟ್ಟು ಮೇಲೇರುವಾಗ ತಮ್ಮ ರೆಕ್ಕೆಗಳನ್ನು ಚಾಚಿದಾಗ, ಅವರ ಚಕ್ರಗಳು ಪಕ್ಕಕ್ಕೆ ತಿರುಗಲಿಲ್ಲ.
17. ಅವು ನಿಂತಾಗ ಇವೂ ನಿಂತವು. ಅವು ಎತ್ತಲ್ಪಟ್ಟಾಗ ಇವೂ ಅವುಗಳ ಸಂಗಡ ಎತ್ತಲ್ಪಟ್ಟವು; ಯಾಕಂದರೆ ಇವುಗಳಲ್ಲಿ ಆ ಜೀವಿಗಳ ಆತ್ಮವು ಇತ್ತು.
18. ಆಗ ಕರ್ತನ ಮಹಿಮೆಯು ಆಲಯದ ಹೊಸ್ತಿಲನ್ನು ಬಿಟ್ಟು ಕೆರೂಬಿಯರ ಮೇಲೆ ನಿಂತಿತು.
19. ಕೆರೂಬಿಯರು ತಮ್ಮ ರೆಕ್ಕೆಗಳನ್ನು ಎತ್ತಿ ಕೊಂಡು ನಾನು ನೋಡುವಾಗಲೇ ಭೂಮಿಯನ್ನು ಬಿಟ್ಟು ಮೇಲೆಕ್ಕೇರಿ ಹೋದರು. ಅವು ಹೊರಟಾಗ ಚಕ್ರಗಳೂ ಅವರ ಸಂಗಡ ಇದ್ದವು, ಅವರು ಕರ್ತನ ಆಲಯದ ಮೂಡಣ ಬಾಗಲಿನ ದ್ವಾರದ ಬಳಿಯಲ್ಲಿ ನಿಂತಿದ್ದರು. ಮತ್ತು ಇಸ್ರಾಯೇಲಿನ ದೇವರ ಮಹಿ ಮೆಯು ಅವರ ಮೇಲೆ ಇತ್ತು.
20. ಕೆಬಾರ್‌ ನದಿಯ ಬಳಿಯಲ್ಲಿ ನಾನು ನೋಡಿದ ಜೀವಿಯು ಇದೇ. ಅವು ಕೆರೂಬಿಯರೆಂದು ತಿಳಿದುಕೊಂಡೆನು.
21. ಪ್ರತಿಯೊಬ್ಬ ನಿಗೂ ನಾಲ್ಕು ಮುಖಗಳು ಮತ್ತು ನಾಲ್ಕು ರೆಕ್ಕೆಗಳು ಇದ್ದವು, ಅವರ ರೆಕ್ಕೆಗಳ ಕೆಳಗೆ ಮನುಷ್ಯರ ಕೈಗಳ ರೂಪವಿತ್ತು;
22. ಅವುಗಳ ಮುಖಗಳ ರೂಪವು ನಾನು ಕೆಬಾರ್‌ ನದಿಯ ಬಳಿಯಲ್ಲಿ ನೋಡಿದ ಆ ಮುಖಗಳ ಹಾಗೆ ಇತ್ತು. ಅವರ ಆಕಾರವೂ ಅವರೂ ಹಾಗೆಯೇ ಇದ್ದರು. ಅವರಲ್ಲಿ ಪ್ರತಿಯೊಬ್ಬರೂ ನೇರವಾಗಿ ಹೋಗುತ್ತಿದ್ದರು.

Chapter 11

1. ಇದಲ್ಲದೆ ಆತ್ಮನು ನನ್ನನ್ನು ಎತ್ತಿ ಕರ್ತನ ಆಲಯದ ಪೂರ್ವಬಾಗಲಿಗೆ ಮೂಡಣದಿಕ್ಕಿಗೆ ಅಭಿಮುಖವಾಗಿರುವ ಕಡೆಗೆ ತೆಗೆದುಕೊಂಡು ಹೋದನು. ಆಗ ಇಗೋ, ಬಾಗಲಿನ ಮುಂದೆ ಇಪ್ಪತ್ತೈದು ಮಂದಿ ಮನುಷ್ಯರು; ಅವರೊಳಗೆ ನಾನು ಜನರ ಪ್ರಧಾನರಾದ ಅಜ್ಜೂರನ ಮಗನಾದ ಯಾಜನ್ಯ ನನ್ನೂ ಬೆನಾಯನ ಮಗನಾದ ಪೆಲತ್ಯನನ್ನೂ ನೋಡಿ ದೆನು.
2. ಆಮೇಲೆ ಆತನು ನನಗೆ ಹೇಳಿದ್ದೇನಂದರೆ --ಮನುಷ್ಯಪುತ್ರನೇ, ಈ ಪಟ್ಟಣದಲ್ಲಿ ಕುತಂತ್ರಗ ಳನ್ನು ಕಲ್ಪಿಸಿ ದುರಾಲೋಚನೆಗಳನ್ನು ಹೇಳಿ ಕೊಡುವ ವರಾದ ಈ ಜನರು--
3. ಅದು ಸವಿಾಪವಲ್ಲ, ಮನೆಗ ಳನ್ನು ಕಟ್ಟೋಣ; ಈ ಪಟ್ಟಣವು ಅಂಡೆ, ನಾವು ಮಾಂಸವು ಎನ್ನುತ್ತಾರೆ.
4. ಆದದರಿಂದ ಓ ಮನುಷ್ಯ ಪುತ್ರನೇ, ಅವರಿಗೆ ವಿರೋಧವಾಗಿ ಪ್ರವಾದಿಸು.
5. ಕರ್ತನ ಆತ್ಮನು ನನ್ನ ಮೇಲೆ ಬಂದು ನನಗೆ ಹೇಳಿದ್ದೇನಂದರೆ--ಮಾತನಾಡು; ಕರ್ತನು--ಇಸ್ರಾ ಯೇಲಿನ ಮನೆತನದವರೇ, ನೀವು ಹೀಗೆ ಹೇಳಿದ್ದೀರಿ. ಯಾಕಂದರೆ ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಎಲ್ಲವುಗಳನ್ನೂ ನಾನು ಬಲ್ಲೆನು.
6. ನೀವು ಈ ಪಟ್ಟಣದಲ್ಲಿ ನರಹತ್ಯವನ್ನು ಹೆಚ್ಚೆಚ್ಚಾಗಿ ಮಾಡಿ ಹತರಾದವರಿಂದ ಬೀದಿಗಳನ್ನು ತುಂಬಿಸಿದ್ದೀರಿ.
7. ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ನೀವು ಅದರ ಮಧ್ಯದಲ್ಲಿ ಇಟ್ಟಿರುವ ಹತರಾದವರು ಅವರೇ ಮಾಂಸವಾಗಿದ್ದಾರೆ, ಈ ಪಟ್ಟಣವು ಹಂಡೆಯಾಗಿದೆ. ಆದರೆ ನಾನು ನಿಮ್ಮನ್ನು ಆದರಿಂದ ಹೊರಗೆ ತರುತ್ತೇನೆ.
8. ನೀವು ಕತ್ತಿಗೆ ಭಯಪಟ್ಟಿರಿ; ನಾನು ನಿಮ್ಮ ಮೇಲೆ ಒಂದು ಕತ್ತಿ ಯನ್ನು ತರುತ್ತೇನೆ ಎಂದು ದೇವರಾದ ಕರ್ತನು ಹೇಳುತ್ತಾನೆ.
9. ನಾನು ನಿಮ್ಮನ್ನು ಅದರ ಮಧ್ಯದಿಂದ ಹೊರಗೆ ತೆಗೆದು ನಿಮ್ಮನ್ನು ಪರಕೀಯರ ಕೈಗಳಿಗೆ ಒಪ್ಪಿಸುವೆನು ಮತ್ತು ನಿಮ್ಮಲ್ಲಿ ನ್ಯಾಯ ತೀರ್ಪುಗಳನ್ನು ನಡಿಸುವೆನು.
10. ನೀವು ಕತ್ತಿಯ ಮೂಲಕ ಬೀಳುವಿರಿ; ನಾನು ನಿಮ್ಮ ಇಸ್ರಾಯೇಲಿನ ಮೇರೆಯಲ್ಲಿ ನ್ಯಾಯತೀರಿಸುವೆನು; ಆಗ ನಾನೇ ಕರ್ತನೆಂದು ನಿಮಗೆ ತಿಳಿಯುವದು.
11. ಈ ಪಟ್ಟಣವು ನಿಮ್ಮ ಹಂಡೆ ಯಾಗುವದಿಲ್ಲ, ನೀವು ಅದರ ಮಧ್ಯದಲ್ಲಿ ಮಾಂಸ ವಾಗುವದಿಲ್ಲ; ಆದರೆ ಇಸ್ರಾಯೇಲಿನ ಮೇರೆಯಲ್ಲಿ ನಿಮಗೆ ನ್ಯಾಯತೀರಿ ಸುವೆನು.
12. ನಾನೇ ಕರ್ತನೆಂದು ನೀವು ತಿಳಿದುಕೊಳ್ಳು ವಿರಿ; ನೀವು ನನ್ನ ನಿಯಮಗಳಲ್ಲಿ ನಡೆಯಲಿಲ್ಲ; ನನ್ನ ನ್ಯಾಯಗಳನ್ನು ಪಾಲಿಸಲಿಲ್ಲ; ಆದರೂ ನಿಮ್ಮ ಸುತ್ತಲಿರುವ ಅನ್ಯ ಜನಾಂಗಗಳ ನ್ಯಾಯಗಳ ಪ್ರಕಾರ ಮಾಡಿದ್ದೀರಿ.
13. ನಾನು ಪ್ರವಾದಿಸುತ್ತಿರುವಾಗ ಆದದ್ದೇನಂದರೆ, ಬೆನಾಯನ ಮಗನಾದ ಪೆಲತ್ಯನು ಸತ್ತನು. ಆಗ ನಾನು ಮುಖ ಕೆಳಗಾಗಿ ಬಿದ್ದು ಗಟ್ಟಿಯಾಗಿ ಕೂಗಿ--ಹಾ, ದೇವರಾದ ಕರ್ತನೇ, ನೀನು ಇಸ್ರಾಯೇಲಿನಲ್ಲಿ ಉಳಿದವರನ್ನು ಪೂರ್ಣವಾಗಿ ಮುಗಿಸಿಬಿಡುತ್ತೀಯೋ ಎಂದು ಹೇಳಿದೆನು.
14. ಕರ್ತನ ವಾಕ್ಯವು ಹೀಗೆ ಹೇಳುತ್ತಾ ನನ್ನ ಕಡೆಗೆ ಬಂತು--
15. ಮನುಷ್ಯಪುತ್ರನೇ, ನಿನ್ನ ಸಹೋದರರಿಗೆ, ಹೌದು, ನಿನ್ನ ಸಹೋದರರಿಗೆ, ನಿನ್ನ ಸಮಸ್ತ ಬಂಧು ಗಳಿಗೆ, ಇಸ್ರಾಯೇಲಿನ ಮನೆತನದವರಿಗೆ, ಇವರೆಲ್ಲ ರಿಗೆ ಯೆರೂಸಲೇಮಿನ ನಿವಾಸಿಗಳು--ಕರ್ತನಿಂದ ದೂರ ಹೋಗಿರಿ, ಈ ದೇಶವು ನಮಗೆ ಸ್ವಾಸ್ತ್ಯವಾಗಿ ಕೊಡಲ್ಪಟ್ಟಿದೆ ಎಂದು ಹೇಳಿದರು.
16. ಆದದರಿಂದ ನೀವು ಹೇಳತಕ್ಕದ್ದೇನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಅವರನ್ನು ಅನ್ಯ ಜನಾಂಗ ಗಳಿಂದ ದೂರ ಹಾಕಿದ್ದಾಗ್ಯೂ ದೇಶಗಳನ್ನು ಚದರಿಸಿ ದ್ದಾಗ್ಯೂ ಅವರು ಹೋಗುವ ದೇಶಗಳಲ್ಲಿ ನಾನು ಸ್ವಲ್ಪ ಕಾಲದ ವರೆಗೆ ಪವಿತ್ರಾಲಯವಾಗಿರುವೆನು.
17. ಆದದರಿಂದ ನೀನು ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆಹೇಳುತ್ತಾನೆ--ನಾನು ನಿಶ್ಚ ಯವಾಗಿ ನಿಮ್ಮನ್ನು ಜನಾಂಗಗಳೊಳಗಿಂದ ನೀವು ಚದ ರಿಹೋದ ದೇಶಗಳೊಳಗಿಂದ ಕೂಡಿಸುತ್ತೇನೆ; ಇಸ್ರಾ ಯೇಲ್‌ ದೇಶವನ್ನು ನಿಮಗೆ ಕೊಡುತ್ತೇನೆ.
18. ಅವರು ಅಲ್ಲಿಗೆ ಬಂದು ಎಲ್ಲಾ ಹೇಸಿಗೆಯ ಸಂಗತಿಗಳನ್ನೂ ಎಲ್ಲಾ ಅಸಹ್ಯವಾದವುಗಳನ್ನೂ ಅಲ್ಲಿಂದ ತೆಗೆದು ಹಾಕುವರು;
19. ಅವರಿಗೆ ಒಂದು ಹೃದಯವನ್ನು ಕೊಡು ವೆನು. ನಿಮ್ಮಲ್ಲಿ ಒಂದು ಹೊಸ ಆತ್ಮವನ್ನು ಇಡುವೆನು; ಅವರೊಳಗಿಂದ ಕಠಿಣ ಹೃದಯವನ್ನು ಹೊರಗೆ ತೆಗೆದು ಮೃದು ಹೃದಯವನ್ನು ಕೊಡುವೆನು.
20. ಆಗ ಅವರು ನನ್ನ ನಿಯಮಗಳಲ್ಲಿ ನಡೆದುಕೊಂಡು ನನ್ನ ನಿಯಮಗ ಳನ್ನು ಕೈಕೊಂಡು ನಡೆಯುವರು. ಅವರು ನನ್ನ ಜನರಾಗು ವರು, ನಾನು ಅವರ ದೇವರಾಗುವೆನು.
21. ಆದರೆ ಯಾರ ಹೃದಯವು ಅವರ ಹೇಸಿಗೆಗಳ ಮತ್ತು ಅವರ ಅಸಹ್ಯಗಳ ಹೃದಯದ ಬಳಿಗೆ ಹೋಗುತ್ತದೋ, ನಾನು ಅವರ ಮಾರ್ಗವನ್ನು ಅವರ ತಲೆಗಳ ಮೇಲೆ ಮುಯ್ಯಿ ತೀರಿಸುತ್ತೇನೆ ಎಂದು ದೇವರಾದ ಕರ್ತನು ಹೇಳುತ್ತಾನೆ.
22. ಆಮೇಲೆ ಕೆರೂಬಿಯರು ತಮ್ಮ ರೆಕ್ಕೆಗಳನ್ನು ಎತ್ತಿದರು, ಅವರ ಪಕ್ಕದಲ್ಲಿ ಚಕ್ರಗಳಿದ್ದವು; ಇಸ್ರಾ ಯೇಲಿನ ದೇವರ ಮಹಿಮೆ ಅವರ ಮೇಲೆ ಇತ್ತು.
23. ಕರ್ತನ ಮಹಿಮೆಯು ಪಟ್ಟಣದ ಮಧ್ಯದೊಳಗಿಂದ ಮೇಲಕ್ಕೇರಿ ಪಟ್ಟಣದ ಮೂಡಣದಲ್ಲಿರುವ ಪರ್ವತದ ಮೇಲೆ ನಿಂತಿತು.
24. ಅನಂತರ ಆತ್ಮನು ನನ್ನನ್ನು ಎತ್ತಿ ದೇವರ ಆತ್ಮದಿಂದಾದ ದರ್ಶನದಿಂದ ಕಸ್ದೀಯರ ದೇಶಕ್ಕೆ ಸೆರೆಯವರ ಬಳಿಗೆ ಕರೆದುಕೊಂಡು ಹೋದನು; ಆಗ ನಾನು ನೋಡಿದ ದರ್ಶನವು ನನ್ನಿಂದ ಇಲ್ಲದೆ ಹೋಯಿತು.
25. ಆಮೇಲೆ ಕರ್ತನು ನನಗೆ ತೋರಿಸಿದ ಎಲ್ಲಾ ಸಂಗತಿಗಳನ್ನು ಸೆರೆಯವರೊಂದಿಗೆ ನಾನು ಮಾತನಾಡಿದೆನು.

Chapter 12

1. ಕರ್ತನ ವಾಕ್ಯವು ಮತ್ತೆ ಬಂದು ನನಗೆ ಹೇಳಿದ್ದೇನಂದರೆ--
2. ಮನುಷ್ಯಪುತ್ರನೇ, ನೀನು ತಿರುಗಿ ಬೀಳುವ ಮನೆತನದವರ ಮಧ್ಯದಲ್ಲಿ ವಾಸಿಸುತ್ತಿರುವಿ, ಅವರಿಗೆ ನೋಡುವದಕ್ಕೆ ಕಣ್ಣು ಗಳುಂಟು ನೋಡುವದಿಲ್ಲ, ಕೇಳುವದಕ್ಕೆ ಕಿವಿಗಳುಂಟು ಕೇಳುವದಿಲ್ಲ; ಅವರು ತಿರುಗಿ ಬೀಳುವ ಮನೆತನ ದವರು.
3. ಮನುಷ್ಯ ಪುತ್ರನೇ, ನೀನು ತೆಗೆದುಹಾಕು ವದಕ್ಕೆ ಸಾಮಾನುಗಳನ್ನು ಸಿದ್ಧಮಾಡಿ ಹಗಲಿನಲ್ಲಿ ಅವರ ದೃಷ್ಟಿಯಿಂದ ತೊಲಗಿ ಹೋಗು; ಹೌದು, ಅವರ ಕಣ್ಣುಗಳ ಮುಂದೆಯೇ ನಿನ್ನ ಸ್ಥಳವನ್ನು ಬಿಟ್ಟು ಬೇರೊಂದು ಸ್ಥಳಕ್ಕೆ ಹೋಗು; ಅವರು ತಿರುಗಿ ಬೀಳುವ ಮನೆತನದವರಾದಾಗ್ಯೂ ಒಂದು ವೇಳೆ ಮನಸ್ಸು ಮಾಡಿಯಾರು.
4. ನಿನ್ನ ಸಾಮಾಗ್ರಿಗಳನ್ನು ತೆಗೆದುಹಾಕು ವದಕ್ಕಾಗುವಂತ ಸಾಮಾಗ್ರಿಗಳನ್ನು ಹಗಲಿನಲ್ಲಿ ಅವರ ಕಣ್ಣುಗಳ ಮುಂದೆ ಹೊರಗೆ ತರಬೇಕು; ಸಂಜೆಯಲ್ಲಿ ಸೆರೆಗೆ ಹೋಗುವವರ ಹಾಗೆ ನೀನು ಅವರ ಕಣ್ಣುಗಳ ಮುಂದೆಹೋಗಬೇಕು.
5. ಅವರ ಕಣ್ಣುಗಳ ಮುಂದೆಯೇ ನೀನು ಗೋಡೆಯನ್ನು ಕೊರೆದು ಅಲ್ಲಿಂದ ಹೊತ್ತು ಕೊಂಡು ಹೊರಗೆ ಹೊರಟುಹೋಗು.
6. ಅವರ ಕಣ್ಣು ಗಳ ಮುಂದೆ ಸಾಮಾಗ್ರಿಯನ್ನು ಹೆಗಲಿನ ಮೇಲೆ ಹೊತ್ತುಕೊಂಡು ನಸುಬೆಳಕಿನಲ್ಲಿ ಹೋಗಬೇಕು; ನೆಲ ವನ್ನು ನೋಡದ ಹಾಗೆ ನಿನ್ನ ಮುಖವನ್ನು ಮುಚ್ಚಿ ಕೊಳ್ಳಬೇಕು. ನಾನು ನಿನ್ನನ್ನು ಇಸ್ರಾಯೇಲಿನ ಮನೆತನ ದಲ್ಲಿರುವವರಿಗೆ ಗುರುತನ್ನಾಗಿ ಇಟ್ಟಿದ್ದೇನೆ.
7. ನಾನು ಆಜ್ಞೆಯನ್ನು ಹೊಂದಿದ ಪ್ರಕಾರ ಮಾಡಿದೆನು; ನನ್ನ ಸಾಮಗ್ರಿಗಳನ್ನು ಸೆರೆಯ ಸಾಮಗ್ರಿಗಳಂತೆ ಹಗಲಿ ನಲ್ಲಿಯೇ ಹೊರಗೆ ತಂದೆನು; ನಸುಬೆಳಕಿನಲ್ಲಿ ನನ್ನ ಕೈಯಿಂದಲೇ ಗೋಡೆಯನ್ನು ಕೊರೆದೆನು; ಅದನ್ನು ನಾನು ನಸುಬೆಳಕಿನಲ್ಲಿ ಹೊರಗೆ ತಂದು ಅವರ ಕಣ್ಣುಗಳ ಮುಂದೆ ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದೆನು.
8. ಬೆಳಗಿನ ಜಾವದಲ್ಲಿ ಕರ್ತನ ವಾಕ್ಯವು ನನ್ನ ಕಡೆಗೆ ಬಂದು ಹೇಳಿದ್ದೇನಂದರೆ--
9. ಮನುಷ್ಯ ಪುತ್ರನೇ, ಆ ಇಸ್ರಾಯೇಲಿನ ಮನೆತನದವರು ತಿರುಗಿ ಬೀಳುವ ಮನೆತನದವರಲ್ಲವೇ? ನೀನು ಏನು ಮಾಡುತ್ತೀ ಎಂದು ಹೇಳುತ್ತಾರಲ್ಲಾ.
10. ಅವರಿಗೆ ನೀನು ಹೀಗೆ ಹೇಳಬೇಕು ಎಂದು ದೇವರಾದ ಕರ್ತನು ಹೇಳುತ್ತಾನೆ--ಈ ಭಾರವು ಯೆರೂಸಲೇಮಿನಲ್ಲಿರುವ ಪ್ರಭುವನ್ನೂ ಅದರ ಮಧ್ಯದಲ್ಲಿರುವ ಸಮಸ್ತ ಇಸ್ರಾ ಯೇಲಿನ ಮನೆತನದವರನ್ನೂ ಕುರಿತದ್ದಾಗಿದೆ.
11. ಹೀಗೆ ಹೇಳು--ನಾನು ನಿಮಗೆ ಗುರುತಾಗಿದ್ದೇನೆ. ನಾನು ಮಾಡಿದ ಹಾಗೆ ಅವರಿಗೆ ಮಾಡಲ್ಪಡುವದು, ಅವರು ಸಾಗಿ ಸೆರೆಗೆ ಹೋಗುವರು.
12. ಅವರ ಮಧ್ಯದಲ್ಲಿರುವ ಪ್ರಭುವು ಹೆಗಲ ಮೇಲೆ ಹೊರೆಯನ್ನು ಹೊತ್ತು ಕೊಂಡು ಕತ್ತಲಲ್ಲಿ ಹೊರಟು ಹೋಗುವನು; ಅವರು ಗೋಡೆಯನ್ನು ಕೊರೆದು ಆ ಕಿಂಡಿಯ ಮೂಲಕ ತಮ್ಮ ಸಾಮಗ್ರಿಗಳನ್ನು ಹೊರಗೆ ಸಾಗಿಸುವರು. ಅವನು ತನ್ನ ಕಣ್ಣುಗಳಿಂದ ನೆಲವನ್ನು ನೋಡದ ಹಾಗೆ ಮುಖ ವನ್ನು ಮುಚ್ಚಿಕೊಳ್ಳುವನು.
13. ನನ್ನ ಬಲೆಯನ್ನು ಸಹ ನಾನು ಅವನ ಮೇಲೆ ಹರಡುವೆನು. ಅವನು ನನ್ನ ಉರ್ಲಿನಲ್ಲಿ ಸಿಕ್ಕಿಬೀಳುವನು. ನಾನು ಅವನನ್ನು ಕಸ್ದೀಯ ದೇಶದ ಬಾಬೆಲಿಗೆ ಒಯ್ಯುವೆನು. ಆದರೆ ಅವನು ಅದನ್ನು ನೋಡದೆ ಅಲ್ಲಿಯೇ ಸಾಯುವನು.
14. ಅವನ ಸುತ್ತಲೂ ಅವನಿಗೆ ಸಹಾಯ ಮಾಡುವವರೆಲ್ಲರನ್ನೂ ಅವನ ಎಲ್ಲಾ ಸೈನ್ಯಗಳನ್ನೂ ಎಲ್ಲಾ ದಿಕ್ಕುಗಳಿಗೆ ಚದರಿಸಿ ಅವರ ಹಿಂದೆ ಕತ್ತಿಯನ್ನು ಬೀಸುವೆನು.
15. ನಾನು ಅವರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳ ಮೇಲೆ ಚದರಿಸುವಾಗ ನಾನೇ ಕರ್ತನು ಎಂದು ಅವರು ತಿಳಿದುಕೊಳ್ಳುವರು.
16. ಆದರೆ ಅವರು ಎಲ್ಲಿ ಬರು ವರೋ ಆ ಅನ್ಯಜನಾಂಗಗಳೊಳಗೆ ತಮ್ಮ ಅಸಹ್ಯಗಳ ನ್ನೆಲ್ಲಾ ತಿಳಿಸುವ ಹಾಗೆ ಅವರಲ್ಲಿ ಕೆಲವರನ್ನು ಕತ್ತಿ ಯಿಂದಲೂ ಬರಗಾಲದಿಂದಲೂ ವ್ಯಾಧಿಯಿಂದಲೂ ಉಳಿಸುವೆನು. ಆಗ ನಾನೇ ಕರ್ತನು ಎಂದು ಅವರು ತಿಳಿದುಕೊಳ್ಳುವರು.
17. ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
18. ಮನುಷ್ಯಪುತ್ರನೇ, ನಿನ್ನ ರೊಟ್ಟಿ ಯನ್ನು ನಡುಕದಿಂದ ತಿನ್ನು ಮತ್ತು ನೀರನ್ನು ದಿಗಿಲಿ ನಿಂದಲೂ ಎಚ್ಚರಿಕೆಯಿಂದಲೂ ಕುಡಿ.
19. ನಿನ್ನ ದೇಶದ ಜನರಿಗೆ ಹೀಗೆ ಹೇಳು--ಯೆರೂಸಲೇಮಿನ ನಿವಾಸಿ ಗಳಿಗೆ ಮತ್ತು ಇಸ್ರಾಯೇಲ್ಯರ ದೇಶಕ್ಕೆ ದೇವರಾದ ಕರ್ತನು ಹೇಳಿದ್ದೇನಂದರೆ--ಅವರು ತಮ್ಮ ರೊಟ್ಟಿ ಯನ್ನು ಎಚ್ಚರಿಕೆಯಿಂದಲೇ ತಿನ್ನುವರು; ನೀರನ್ನು ವಿಸ್ಮಯ ದಿಂದಲೇ ಕುಡಿಯುವರು. ಯಾಕಂದರೆ ಅದರಲ್ಲಿ ವಾಸ ವಾಗಿರುವವರೆಲ್ಲರ ಬಲಾತ್ಕಾರದಿಂದ ಅವರ ದೇಶವು ಅವರ ಪರಿಪೂರ್ಣತೆಯನ್ನೆಲಾ ಬಿಟ್ಟು ಹಾಳಾಗು ವದು.
20. ನಿವಾಸಿಗಳುಳ್ಳ ಪಟ್ಟಣಗಳು ಹಾಳಾಗುವವು. ದೇಶವು ನಿರ್ಜನವಾಗುವದು; ಆಗ ನಾನೇ ಕರ್ತ ನೆಂದು ನೀವು ತಿಳಿಯುವಿರಿ.
21. ಕರ್ತನ ವಾಕ್ಯವು ನನ್ನ ಕಡೆಗೆ ಬಂದು ಹೇಳಿದ್ದೇ ನಂದರೆ--
22. ಮನುಷ್ಯಪುತ್ರನೇ, ದಿನಗಳು ಬಹಳವಾ ಗುತ್ತಿವೆ; ಪ್ರತಿ ದರ್ಶನವು ತಪ್ಪುತ್ತದೆ ಎಂದು ಇಸ್ರಾ ಯೇಲ್‌ ದೇಶದಲ್ಲಿ ಹೇಳಿಕೊಳ್ಳುವ ಆ ಗಾದೆ ಏನು?
23. ಆದದರಿಂದ ಅವರಿಗೆ ಹೀಗೆ ಹೇಳು ದೇವರಾದ ಕರ್ತನು ಹೇಳುವದೇನಂದರೆ--ನಾನು ಈ ಗಾದೆ ಯನ್ನು ನಿಲ್ಲಿಸುತ್ತೇನೆ, ಅದನ್ನು ಇನ್ನು ಮೇಲೆ ಇಸ್ರಾ ಯೇಲಿನಲ್ಲಿ ಗಾದೆಯಂತೆ ಉಪಯೋಗಿಸುವದಿಲ್ಲ; ದಿನಗಳು ಹತ್ತಿರವಾಗಿವೆ ಪ್ರತಿ ದರ್ಶನವು ಸವಿಾಪ ವಾಗಿದೆ ಎಂದು ಅವರಿಗೆ ಹೇಳು.
24. ಇಸ್ರಾಯೇಲಿನ ಮನೆತನದವರೊಳಗೆ ಇನ್ನು ಮೇಲೆ ಯಾವ ವ್ಯರ್ಥ ದರ್ಶನವೂ ಮೋಸದ ಶಕುನವೂ ಇರುವದಿಲ್ಲ.
25. ನಾನೇ ಕರ್ತನು, ನಾನೇ ಮಾತನಾಡುತ್ತೇನೆ. ನಾನು ಆಡುವ ಮಾತು ನೆರವೇರುವದು, ಅದು ಇನ್ನು ನಿಧಾನವಾಗುವದಿಲ್ಲ. ಓ ತಿರುಗಿ ಬೀಳುವ ಮನೆತನ ದವರೇ, ನಿಮ್ಮ ದಿವಸಗಳಲ್ಲಿ ನಾನು ನುಡಿದದ್ದನ್ನು ನಡಿಸುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
26. ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ --
27. ಮನುಷ್ಯಪುತ್ರನೇ, ಇಗೋ, ಇಸ್ರಾಯೇಲಿನ ಮನೆತನದವರು--ಇವನಿಗಾದ ದರ್ಶನವು ಬಹು ದೂರ ಕಾಲಕ್ಕೆ ಸಂಬಂಧಿಸಿದ್ದು, ದೂರ ಕಾಲವನ್ನು ಕುರಿತು ಪ್ರವಾದಿಸುತ್ತಾನೆಂದು ಹೇಳುತ್ತಾರೆ.
28. ಆದದರಿಂದ ಅವರು ಹೀಗೆ ಹೇಳುವರೆಂದು ದೇವರಾದ ಕರ್ತನು ಹೇಳುತ್ತಾನೆ; ನನ್ನ ಮಾತುಗಳಲ್ಲಿ ಒಂದಾದರೂ ಇನ್ನು ಮೇಲೆ ದೂರವಾಗುವದಿಲ್ಲ; ನಾನು ಆಡಿದ ಮಾತು ನಡಿಸಲ್ಪಡುವದೆಂದು ದೇವರಾದ ಕರ್ತನು ಹೇಳುತ್ತಾನೆ.

Chapter 13

1. ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ
2. ಮನುಷ್ಯಪುತ್ರನೇ, ಪ್ರವಾದಿ ಸುತ್ತಿರುವ ಇಸ್ರಾಯೇಲಿನ ಪ್ರವಾದಿಗಳಿಗೆ ವಿರುದ್ಧ ವಾಗಿ ನೀನು ಪ್ರವಾದಿಸಿ, ತಮ್ಮ ಸ್ವಂತ ಹೃದಯಗ ಳೊಳಗಿಂದ ಪ್ರವಾದಿಸುತ್ತಿರುವವರಿಗೆ ಹೀಗೆ ಹೇಳು --ಕರ್ತನ ವಾಕ್ಯವನ್ನು ಕೇಳಿರಿ;
3. ದೇವರಾದ ಕರ್ತನು ಹೀಗೆ ಹೇಳುತ್ತಾನೆ; ಯಾವ ಸಾಕ್ಷಾತ್ಕಾರವೂ ಇಲ್ಲದೆ ಸ್ವಬುದ್ಧಿಯನ್ನೇ ಅನುಸರಿಸುತ್ತಿರುವ ಓ ಮೂರ್ಖ ಪ್ರವಾದಿಗಳೇ, ನಿಮಗೆ ಅಯ್ಯೋ!
4. ಓ ಇಸ್ರಾಯೇಲೇ, ನಿನ್ನ ಪ್ರವಾದಿಗಳು ನಿರ್ಜನ ಸ್ಥಳಗಳಲ್ಲಿರುವ ನರಿಗಳ ಹಾಗೆ ಇದ್ದಾರೆ.
5. ಕರ್ತನ ದಿನದಲ್ಲಿ ಯುದ್ಧಕ್ಕೆ ನಿಲ್ಲ ಬೇಕೆಂದು ಇಸ್ರಾಯೇಲ್‌ ಮನೆತನದವರಿಗಾಗಿ ಬೇಲಿ ಯನ್ನು ಕಟ್ಟಲಿಲ್ಲ, ನೀವು ಪೌಳಿಯ ಒಡಕುಗಳನ್ನೇರ ಲಿಲ್ಲ.
6. ಅವರು ವ್ಯರ್ಥವಾದದ್ದನ್ನೂ ಸುಳ್ಳು ಭವಿಷ್ಯ ವಾದದ್ದನ್ನೂ ನೋಡಿದ್ದಾರೆಂದು ಕರ್ತನು ಹೇಳುತ್ತಾನೆ; ಆದರೆ ಕರ್ತನು ಅವರನ್ನು ಕಳುಹಿಸಲಿಲ್ಲ; ತಾವು ನುಡಿದ ಮಾತು ಬೇರೆಯವರು ನಿರೀಕ್ಷಿಸುವಂತೆ ಮಾಡುತ್ತಾರೆ.
7. ವ್ಯರ್ಥ ದರ್ಶನವನ್ನು ನೋಡಿರುವಿ ರಲ್ಲಾ. ಸುಳ್ಳಾದ ಭವಿಷ್ಯವನ್ನು ಹೇಳಿದ್ದೀರಲ್ಲಾ. ನಾನು ಮಾತನಾಡದೆ ಇದ್ದರೂ--ಕರ್ತನೇ ಹೇಳಿದನೆಂದು ಹೇಳಿದ್ದಿರಲ್ಲಾ.
8. ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ನೀವು ವ್ಯರ್ಥವಾಗಿ ಮಾತನಾಡಿದ್ದರಿಂದಲೂ ಸುಳ್ಳನ್ನು ಕಂಡದ್ದರಿಂದಲೂ ಇಗೋ, ನಾನು ನಿಮಗೆ ವಿರೋಧವಾಗಿರುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
9. ವ್ಯರ್ಥವಾದದ್ದನ್ನು ದರ್ಶಿಸಿ, ಸುಳ್ಳು ಭವಿಷ್ಯಗಳನ್ನು ಹೇಳುವ ಪ್ರವಾದಿಗಳ ಮೇಲೆ ನನ್ನ ಕೈ ಮಾಡುವೆನು. ಅವರು ನನ್ನ ಜನರ ಸಭೆಯಲ್ಲಿ ಇರುವದೂ ಇಲ್ಲ, ಇಸ್ರಾಯೇಲನ ಮನೆತನದವರ ಪಟ್ಟಿಯಲ್ಲಿ ಬರೆಯಲ್ಪಡುವದೂ ಇಲ್ಲ; ಇಸ್ರಾಯೇಲಿನ ದೇಶದಲ್ಲಿ ಪ್ರವೇಶಿಸುವದೂ ಇಲ್ಲ; ನಾನೇ ದೇವರಾದ ಕರ್ತನೆಂದು ನೀವು ತಿಳಿದುಕೊಳ್ಳುವಿರಿ.
10. ಸಮಾಧಾನ ವಿಲ್ಲದಿರುವಾಗ ಅವರು ಸಮಾಧಾನವೆಂದು ಹೇಳಿದ್ದರಿಂ ದಲೂ ಮತ್ತು ಇಗೋ, ಒಬ್ಬನು ಗೋಡೆಯನ್ನು ಕಟ್ಟಿದರೆ ಮತ್ತೊಬ್ಬನು ಅದಕ್ಕೆ ಸುಣ್ಣ ಹಚ್ಚಿದ್ದರಿಂದಲೂ
11. ಸುಣ್ಣ ಹಚ್ಚುತ್ತಿರುವವನಿಗೆ--ಅದು ಬೀಳುವದೆಂದು ಹೇಳು; ಅಲ್ಲಿ ವಿಪರೀತ ಮಳೆ ಬರುವದು ಮತ್ತು ದೊಡ್ಡ ಕಲ್ಮಳೆಯು ಬೀಳುವದು; ಬಿರುಗಾಳಿಯು ಅದನ್ನು ಸೀಳಿಬಿಡುವದು.
12. ಇಗೋ, ಗೋಡೆ ಬಿದ್ದು ಹೋದಮೇಲೆ--ನೀವು ಹಚ್ಚಿದ ಸುಣ್ಣ ಎಲ್ಲಿ ಎಂದು ನಿಮಗೆ ಹೇಳುವರಲ್ಲಾ?
13. ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಅದನ್ನು ನನ್ನ ಉರಿಯಲ್ಲಿ ಬಿರುಗಾಳಿಯಿಂದ ಸೀಳಿಬಿಡುವೆನು. ಅದನ್ನು ನಾಶ ಪಡಿಸುವ ಹಾಗೆ ನನ್ನ ಕೋಪದಿಂದ ವಿಪರೀತ ಮಳೆಯೂ ನನ್ನ ಉರಿಯಿಂದ ಕಲ್ಮಳೆಯ ಕಲ್ಲುಗಳೂ ಸುರಿಯುವವು;
14. ನೀವು ಸುಣ್ಣ ಬಳಿದ ಗೋಡೆಯನ್ನು ನಾನು ಈಗ ಕೆಡವಿ ನೆಲಸಮ ಮಾಡಿ ಅದರ ಅಸ್ತಿವಾರ ವನ್ನು ಕಾಣದ ಹಾಗೆ ಮಾಡುವೆನು. ಅದು ಬಿದ್ದು ಹೋಗುವದು, ನೀವು ಅದರಲ್ಲಿ ನಾಶ ಮಾಡಲ್ಪಡು ವಿರಿ. ಆಗ ನಾನೇ ಕರ್ತನೆಂದು ನಿಮಗೆ ತಿಳಿದು ಬರುವದು.
15. ಹೀಗೆ ನಾನು ಗೋಡೆಯಲ್ಲಿಯೂ ಅದಕ್ಕೆ ಸುಣ್ಣ ಬಳಿದವರಲ್ಲಿಯೂ ರೋಷವನ್ನು ತೀರಿಸಿ ಕೊಂಡು ಇನ್ನು ಗೋಡೆಯಾದರೂ ಅದಕ್ಕೆ ಸುಣ್ಣ ಹಚ್ಚಿದವರಾದರೂ ಇಲ್ಲವೆಂದು
16. ಯೆರೂಸಲೇಮಿನ ವಿಷಯ ಪ್ರವಾದಿಸಿ ಸಮಾಧಾನವಿಲ್ಲದಿರುವಾಗ ಅದಕ್ಕೆ ಸಮಾಧಾನದ ದರ್ಶನವನ್ನು ಕಂಡ ಇಸ್ರಾಯೇಲಿನ ಪ್ರವಾದಿಗಳು ನಿಮಗೆ ಇಲ್ಲವೆಂದು ದೇವರಾದ ಕರ್ತನು ಹೇಳುತ್ತಾನೆ.
17. ಇದೇ ರೀತಿ ಮನುಷ್ಯಪುತ್ರನೇ, ತಮ್ಮ ಹೃದಯ ದೊಳಗಿಂದ ಪ್ರವಾದಿಸುವ ನಿನ್ನ ಜನರ ಕುಮಾರ್ತೆ ಯರಿಗೆ ವಿರೋಧವಾಗಿ ನಿನ್ನ ಮುಖವನ್ನು ಮಾಡಿ, ನೀನು ಅವರಿಗೆ ಪ್ರವಾದಿಸಿ ಹೀಗೆ ಹೇಳು ಎಂದು ದೇವರಾದ ಕರ್ತನು ಹೇಳುತ್ತಾನೆ--
18. ಪ್ರಾಣಗಳನ್ನು ಬೇಟೆಯಾಡಬೇಕೆಂದು ಎಲ್ಲರ ಮೊಣಕೈಗಳಿಗೆ ದಿಂಡು ಗಳನ್ನು ಹೊಲಿದು ಪ್ರತಿಯೊಂದು ಎತ್ತರದ ತಲೆಗಳಿಗೆ ವಸ್ತ್ರಗಳನ್ನು ಕಟ್ಟುವ ಕುಮಾರ್ತೆಯರಿಗೆ ಅಯ್ಯೋ! ನನ್ನ ಜನರ ಪ್ರಾಣಗಳನ್ನು ಬೇಟೆಯಾಡುವಿರೋ? ನಿಮ್ಮ ಬಳಿಗೆ ಬರುವ ಪ್ರಾಣಗಳನ್ನು ಬದುಕಿಸುವಿರೋ?
19. ಸುಳ್ಳಿಗೆ ಕಿವಿಗೊಡುವ ನನ್ನ ಜನರಿಗೆ ಸುಳ್ಳು ಹೇಳಿ, ಸಾಯದಿರುವವರನ್ನು ಸಾಯಿಸಿ, ಸಾಯುವವರನ್ನು ಬದುಕಿಸಿ, ಒಂದು ಹಿಡಿ ಬಾರ್ಲಿಗೂ ತುಂಡು ರೊಟ್ಟಿಗೂ ನನ್ನನ್ನು ನನ್ನ ಜನರೊಳಗೆ ಅಪವಿತ್ರಪಡಿಸುವಿರೋ?
20. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಿಮ್ಮ ಪ್ರಾಣಗಳನ್ನು ಹಾರಿಸುವದಕ್ಕಾಗಿ ಬೇಟೆಯಾ ಡುವ ದಂಡುಗಳಿಗೆ ವಿರೋಧವಾಗಿದ್ದೇನೆ. ಅವುಗಳನ್ನು ನಿಮ್ಮ ತೋಳುಗಳಿಂದ ಹರಿದುಬಿಡುವೆನು. ನೀವು ಹಾರಿಸುವದಕ್ಕಿರುವ ಬೇಟೆಯಾಡುವ ಪ್ರಾಣಗಳನ್ನು ಬಿಡಿಸುತ್ತೇನೆ.
21. ನಿಮ್ಮ ವಸ್ತ್ರಗಳನ್ನು ಹರಿದು ಬಿಟ್ಟು ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುತ್ತೇನೆ. ಅವರು ಇನ್ನು ಮೇಲೆ ನಿಮ್ಮ ಕೈಗೆ ಬೇಟೆಯಾಗಿ ಸಿಕ್ಕು ವದಿಲ್ಲ. ನಾನೇ ಕರ್ತನೆಂದು ನೀವು ತಿಳಿದುಕೊಳ್ಳುವಿರಿ.
22. ನಾನು ಯಾವನನ್ನು ದುಃಖಪಡಿಸಲಿಲ್ಲವೋ ಆ ನೀತಿವಂತನ ಹೃದಯಕ್ಕೆ ನೀವು ಸುಳ್ಳಾಡಿ ದುಃಖಪಡಿಸಿ ದ್ದೀರಿ; ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು ಪ್ರಾಣವನ್ನು ಉಳಿಸಿಕೊಳ್ಳದಂತೆ ನೀವು ಅವನ ಕೈಗಳನ್ನು ಬಲಪಡಿಸಿದ್ದೀರಿ.
23. ಆದದರಿಂದ ನೀವು ಇನ್ನು ಮೇಲೆ ವ್ಯರ್ಥವಾದದ್ದನ್ನು ಕಾಣುವದಿಲ್ಲ; ಭವಿಷ್ಯವನ್ನೂ ಕಾಣು ವದಿಲ್ಲ; ಯಾಕಂದರೆ ನಾನು ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುವೆನು; ನಾನೇ ಕರ್ತನೆಂದು ನೀವು ತಿಳಿದುಕೊಳ್ಳುವಿರಿ.

Chapter 14

1. ಆಮೇಲೆ ಇಸ್ರಾಯೇಲಿನ ಹಿರಿಯರಲ್ಲಿ ಕೆಲವರು ನನ್ನ ಬಳಿಗೆ ಬಂದು ನನ್ನ ಮುಂದೆ ಕುಳಿತುಕೊಂಡರು.
2. ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
3. ಮನುಷ್ಯಪುತ್ರನೇ, ಈ ಮನು ಷ್ಯರು ತಮ್ಮ ವಿಗ್ರಹಗಳನ್ನು ತಮ್ಮ ಹೃದಯಗಳಲ್ಲೇ ಸ್ಥಾಪಿಸಿ ತಮ್ಮ ಅಕ್ರಮವಾದ ಎಡೆತಡೆಗಳನ್ನು ತಮ್ಮ ಮುಖದ ಮುಂದೆಯೇ ಇಟ್ಟುಕೊಂಡಿದ್ದಾರೆ. ಇವರೆಲ್ಲ ರನ್ನೂ ನಾನು ವಿಚಾರಿಸಬೇಕೇ?
4. ಆದದರಿಂದ ನೀನು ಅವರ ಸಂಗಡ ಮಾತನಾಡಿ ಹೇಳಬೇಕಾದದ್ದೇನಂದರೆ --ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಸ್ರಾ ಯೇಲಿನ ಮನೆತನದವರ ಪ್ರತಿಯೊಬ್ಬನೂ ತಮ್ಮ ವಿಗ್ರಹಗಳನ್ನು ಹೃದಯಗಳಲ್ಲಿ ನೆಲೆಗೊಳಿಸಿ ಅಕ್ರಮದ ಎಡೆತಡೆಗಳನ್ನು ತಮ್ಮ ಮುಂದೆ ಇಟ್ಟುಕೊಂಡು ಪ್ರವಾ ದಿಯ ಬಳಿಗೆ ಬರುವ ಮನುಷ್ಯನು ಯಾವನೋ ಅವನಿಗೆ ಕರ್ತನಾದ ನಾನು ಅವರ ವಿಗ್ರಹಗಳ ಸಮೂ ಹಕ್ಕೆ ತಕ್ಕ ಹಾಗೆ ಉತ್ತರ ಕೊಡುತ್ತೇನೆ.
5. ಹೀಗೆ ನಾನು ಇಸ್ರಾಯೇಲಿನ ಮನೆತನ ದವರನ್ನು ಅವರ ಸ್ವಂತ ಹೃದಯದಿಂದಲೇ ಸಿಕ್ಕಿಸಿ ಹಿಡಿಯುತ್ತೇನೆ. ಯಾಕಂದರೆ ಅವರೆಲ್ಲರೂ ತಮ್ಮ ವಿಗ್ರಹಗಳ ಮುಖಾಂತರ ನನಗೆ ಅನ್ಯರಾದರು.
6. ಇಸ್ರಾಯೇಲಿನ ಮನೆತನದವರಿಗೆ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಮಾನ ಸಾಂತರಪಟ್ಟು ನಿಮ್ಮ ವಿಗ್ರಹಗಳನ್ನು ಬಿಟ್ಟು ನೀವಾ ಗಿಯೇ ತಿರುಗಿ ಕೊಳ್ಳಿರಿ; ನಿಮ್ಮ ಅಸಹ್ಯವಾದವುಗಳ ನ್ನೆಲ್ಲಾ ಬಿಟ್ಟು ನಿಮ್ಮ ಮುಖಗಳನ್ನು ತಿರುಗಿಸಿರಿ.
7. ನನಗೆ ತನ್ನನ್ನು ಅನ್ಯನನ್ನಾಗಿ ಮಾಡಿಕೊಂಡು ತನ್ನ ಹೃದಯದಲ್ಲಿ ವಿಗ್ರಹಗಳನ್ನು ಸ್ಥಾಪಿಸಿ ಅಕ್ರಮದ ಎಡೆತಡೆಯನ್ನು ತನ್ನ ಮುಖದ ಮುಂದೆ ಇಟ್ಟುಕೊಂಡು ಪ್ರವಾದಿಯ ಬಳಿಗೆ ನನ್ನ ವಿಷಯವಾಗಿ ವಿಚಾರಿಸಲು ಬರುವ ಪ್ರತಿಯೊಬ್ಬ ಇಸ್ರಾಯೇಲಿನ ಮನೆತನದವರಲ್ಲಿಯೂ ಇಸ್ರಾಯೇಲಿನಲ್ಲಿ ತಂಗುವ ಅನ್ಯರಲ್ಲಿಯೂ ಪ್ರತಿಯೊ ಬ್ಬನಿಗೂ ಕರ್ತನಾದ ನಾನೇ ಉತ್ತರ ಕೊಡುತ್ತೇನೆ.
8. ನಾನು ಆ ಮನುಷ್ಯನ ಮೇಲೆ ಉಗ್ರಕೋಪಗೊಂಡು ಅವು ನನ್ನ ಗುರುತನ್ನಾಗಿಯೂ ಗಾದೆಯನ್ನಾಗಿಯೂ ಮಾಡಿಕೊಂಡು ನನ್ನ ಜನರ ಮಧ್ಯದೊಳಗಿಂದ ಕಡಿದು ಬಿಡುವೆನು; ನಾನೇ ಕರ್ತನೆಂದು ತಿರಿಗಿ ತಿಳಿದುಕೊಳ್ಳು ವಿರಿ.
9. ಪ್ರವಾದಿಯು ಮೋಸಹೋಗಿ ವಾಕ್ಯವನ್ನು ಹೇಳಿದರೆ ಕರ್ತನಾದ ನಾನೇ ಆ ಪ್ರವಾದಿಯನ್ನು ಮೋಸಗೊಳಿಸಿರುತ್ತೇನೆ; ನಾನು ನನ್ನ ಕೈಯನ್ನು ಅವನ ಮೇಲೆ ಚಾಚಿ ನನ್ನ ಜನರಾದ ಇಸ್ರಾಯೇಲ್ಯರ ಮಧ್ಯ ದೊಳಗಿಂದ ನಾಶಪಡಿಸುವೆನು.
10. ಅವರು ತಮ್ಮ ಅಕ್ರಮದ ದಂಡನೆಯನ್ನು ಹೊರುವರು; ವಿಚಾರಿಸು ವವನ ದಂಡನೆಯು ಹೇಗೋ ಹಾಗೆಯೇ ಪ್ರವಾ ದನೆಯ ದಂಡನೆಯೂ ಇರುವದು.
11. ಇಸ್ರಾಯೇಲಿನ ಮನೆತನದವರು ಇನ್ನು ಮೇಲೆ ನನ್ನನ್ನು ಬಿಟ್ಟು ತಿರುಗದೇ ತಮ್ಮ ಎಲ್ಲಾ ದ್ರೋಹಗಳಿಂದ ಅಶುದ್ಧರಾಗದೆ ಇರುವ ದರಿಂದ ಅವರು ನನ್ನ ಜನರಾಗಿರುವರು ಅವರಿಗೆ ನಾನು ದೇವರಾಗಿರುವೆನು, ಎಂದು ದೇವರಾದ ಕರ್ತನು ಹೇಳುತ್ತಾನೆ.
12. ಕರ್ತನ ವಾಕ್ಯವು ನನಗೆ ತಿರಿಗಿ ಬಂದು ಹೇಳಿದ್ದೇ ನಂದರೆ--
13. ಮನುಷ್ಯಪುತ್ರನೇ, ದೇಶವು ದೊಡ್ಡ ಅಪರಾಧದಿಂದ ನನಗೆ ವಿರುದ್ಧವಾಗಿ ಪಾಪಮಾಡಿದೆ, ನಾನು ಅದರ ಮೇಲೆ ನನ್ನ ಕೈಚಾಚಿ ಅದರ ಜೀವನಾಧಾ ರವನ್ನು ತೆಗೆದುಹಾಕಿ ಕ್ಷಾಮವು ಬರುವ ಹಾಗೆ ಮಾಡಿ ಮನುಷ್ಯರನ್ನೂ ಮೃಗಗಳನ್ನೂ ಅದರೊಳಗಿಂದ ಕಡಿದು ಬಿಡುವಾಗ,
14. ನೋಹ ದಾನಿಯೇಲ ಯೋಬ ಎಂಬ ಈ ಮೂವರು ಅದರಲ್ಲಿದ್ದರೂ ತಮ್ಮ ನೀತಿಯಿಂದ ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುತ್ತಿದ್ದರು ಎಂದು ದೇವರಾದ ಕರ್ತನು ಹೇಳುತ್ತಾನೆ.
15. ನಾನು ದುಷ್ಟ ಮೃಗಗಳನ್ನು ದೇಶದಲ್ಲಿ ಹಾದು ಹೋಗುವಂತೆ ಮಾಡಿ ಅದನ್ನು ನಿರ್ಜನಪಡಿಸಿ, ಹಾಳು ಮಾಡಿ ಯಾರೂ ಮೃಗಗಳ ನಿಮಿತ್ತ ಹಾದು ಹೋಗದಂತೆ ಮಾಡಿದರೆ
16. ಈ ಮೂವರು ಮನುಷ್ಯರು ಅದರಲ್ಲಿ ಇದ್ದರೂ ನನ್ನ ಜೀವದಾಣೆ, ಅವರು ಕುಮಾರರ ನ್ನಾಗಲೀ ಕುಮಾರ್ತೆಯರನ್ನಾಗಲೀ ತಪ್ಪಿಸದೆ ತಾವು ಮಾತ್ರ ತಪ್ಪಿಸಿಕೊಳ್ಳುವರು; ಆದರೆ ದೇಶವು ಹಾಳಾಗುವದು ಎಂದು ದೇವರಾದ ಕರ್ತನು ಹೇಳುತ್ತಾನೆ.
17. ಇಲ್ಲ ದಿದ್ದರೆ ನಾನು ಆ ದೇಶದ ಮೇಲೆ ಕತ್ತಿಯನ್ನು ತರಿಸಿ --ಕತ್ತಿಯೇ, ಆ ದೇಶದಲ್ಲಿ ಹಾದುಹೋಗು ಎಂದು ಹೇಳಿ, ಅದು ಮನುಷ್ಯರನ್ನೂ ಮೃಗಗಳನ್ನೂ ಅದರೊಳ ಗಿಂದ ಕಡಿದುಬಿಟ್ಟಾಗ
18. ಈ ಮೂವರು ಅದರೊಳ ಗಿದ್ದರೂ ಅವರು ಕುಮಾರರನ್ನಾದರೂ ಕುಮಾರ್ತೆ ಯರನ್ನಾದರೂ ತಪ್ಪಿಸದೆ, ನನ್ನ ಜೀವದಾಣೆ ತಾವು ಮಾತ್ರ ತಪ್ಪಿಸಿಕೊಳ್ಳುವರು ಎಂದು ದೇವರಾದ ಕರ್ತನು ಹೇಳುವನು;
19. ಇಲ್ಲದಿದ್ದರೆ ನಾನು ಆ ದೇಶದ ಮೇಲೆ ವ್ಯಾಧಿಯನ್ನು ಕಳುಹಿಸಿ, ಅದರ ಮೇಲೆ ನನ್ನ ರೋಷ ವನ್ನು ರಕ್ತದಲ್ಲಿ ಸುರಿದು, ಮನುಷ್ಯರನ್ನೂ ಮೃಗಗಳನ್ನೂ ಅದರೊಳಗಿಂದ ಕಡಿದುಬಿಟ್ಟರೆ,
20. ನೋಹ ದಾನಿ ಯೇಲ ಯೋಬ ಎಂಬವರು ಅದರಲ್ಲಿದ್ದಾಗ್ಯೂ ಅವರು ಮಗನನ್ನಾದರೂ ಮಗಳನ್ನಾದರೂ ತಪ್ಪಿಸದೆ ನನ್ನ ಜೀವ ದಾಣೆ, ತಮ್ಮ ಪ್ರಾಣಗಳನ್ನು ಮಾತ್ರ ನೀತಿಯಿಂದ ತಪ್ಪಿಸುವರು ಎಂದು ದೇವರಾದ ಕರ್ತನು ಹೇಳುತ್ತಾನೆ.
21. ದೇವರಾದ ಕರ್ತನು ಹೀಗೆ ಹೇಳುತ್ತಾನೆ; ನಾನು ಕತ್ತಿ ಬರಗಾಲ ದುಷ್ಟಮೃಗ ವ್ಯಾಧಿಗಳೆಂಬ ನನ್ನ ನಾಲ್ಕು ಕಠಿಣವಾದ ನ್ಯಾಯತೀರ್ಪುಗಳನ್ನು ಯೆರೂಸ ಲೇಮಿನ ಮೇಲೆ ಕಳುಹಿಸಿ ಮನುಷ್ಯರನ್ನೂ ಮೃಗಗಳನ್ನೂ ಕಡಿದು ಬಿಟ್ಟ ಮೇಲೆ ಮತ್ತೆ ಏನಾಗುವದು?
22. ಆದಾಗ್ಯೂ ಇಗೋ, ಅದರಲ್ಲಿ ಕುಮಾರ ಕುಮಾರ್ತೆಯರಲ್ಲಿ ಕೆಲವರು ಹೇಗೂ ತಪ್ಪಿಸಿಕೊಂಡು ಅಲ್ಲಿಂದ ಉಳಿದು ಒಯ್ಯಲ್ಪಡುವರು. ಇಗೋ, ಅವರು ನಿಮ್ಮ ಬಳಿಗೆ ಬಂದಾಗ ನೀವು ಅವರ ದುರ್ಮಾರ್ಗ, ದುಷ್ಕೃತ್ಯಗಳನ್ನು ಕಂಡು ನಾನು ಯೆರೂಸಲೇಮಿನ ಮೇಲೆ ತಂದ ಕೇಡಿನ ವಿಷಯವಾಗಿಯೂ ನಾನು ಅವರ ಮೇಲೆ ತಂದ ಎಲ್ಲವುಗಳ ವಿಷಯವಾಗಿಯೂ ಸಮಾಧಾನ ಹೊಂದು ವಿರಿ.
23. ನೀವು ಅದರ ದುರ್ಮಾರ್ಗಗಳನ್ನೂ ದುಷ್ಕೃತ್ಯ ಗಳನ್ನೂ ನೋಡುವಾಗ ಅದರಿಂದಲೇ ನಿಮಗೆ ಸಮಾಧಾನವಾಗುವದು; ನಾನು ಅದರೊಳಗೆ ಮಾಡಿದ್ದೆಲ್ಲವು ಕಾರಣವಿಲ್ಲದೆ ಮಾಡಲಿಲ್ಲವೆಂದು ತಿಳಿದುಕೊಳ್ಳುವಿರಿ ಎಂದು ದೇವರಾದ ಕರ್ತನು ಹೇಳುತ್ತಾನೆ.

Chapter 15

1. ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--
2. ಮನುಷ್ಯಪುತ್ರನೇ, ದ್ರಾಕ್ಷೇಗಿಡವು ಬೇರೆ ಗಿಡಗಳಿಗಿಂತಲೂ ಇಲ್ಲವೆ ಅಡವಿ ಯಲ್ಲಿರುವ ಮರಗಳ ಕೊಂಬೆಗಳಿಗಿಂತಲೂ ಹೆಚ್ಚೇನು?
3. ಕಟ್ಟಿಗೆಯನ್ನು ತೆಗೆದುಕೊಂಡು ಅದರಿಂದ ಯಾವ ಕೆಲಸವನ್ನಾದರೂ ಮಾಡುವರೋ? ಅಥವಾ ಅದರ ಮೇಲೆ ಯಾವ ಸಾಮಗ್ರಿಯನನ್ನಾದರೂ ನೇತುಹಾಕು ವದಕ್ಕೆ ಅದರಿಂದ ಗೂಟವನ್ನು ಮಾಡಿಕೊಳ್ಳುವರೋ?
4. ಇಗೋ, ಅದು ಸೌದೆಗಾಗಿ ಬೆಂಕಿಗೆ ಹಾಕಲ್ಪಡುತ್ತದೆ; ಬೆಂಕಿಯು ಅದರ ಎರಡು ಕೊನೆಗಳನ್ನು ತಿಂದುಬಿಡು ತ್ತದೆ; ಅದರ ಮಧ್ಯಭಾಗವು ಸುಟ್ಟುಹೋಗುತ್ತದೆ. ಇದೇನಾದರೂ ಕೆಲಸಕ್ಕೆ ಬರುವದೋ?
5. ಇಗೋ, ಇದು ಸಂಪೂರ್ಣವಾಗಿದ್ದಾಗಲೇ ಕೆಲಸಕ್ಕೆ ಬರಲಿಲ್ಲ ಎಂದ ಮೇಲೆ ಬೆಂಕಿಯು ಅದನ್ನು ತಿಂದು ಸುಟ್ಟು ಬಿಟ್ಟಮೇಲೆ ಯಾವ ಕೆಲಸಕ್ಕೆ ಬಂದೀತು?
6. ಆದದ ರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ವನವೃಕ್ಷಗಳಲ್ಲಿ ದ್ರಾಕ್ಷೇಗಿಡಗಳನ್ನು ನಾನು ಹೇಗೆ ಬೆಂಕಿಗೆ ಸೌದೆಗಾಗಿ ಮಾಡಿರುವೆನೋ? ಹಾಗೆಯೇ ನಾನು ಯೆರೂಸಲೇಮಿನ ನಿವಾಸಿಗಳನ್ನೂ ಕೊಟ್ಟಿದ್ದೇನೆ.
7. ನನ್ನ ಮುಖವನ್ನು ಅವರಿಗೆ ವಿರೋಧವಾಗಿ ತಿರುಗಿಸುತ್ತೇನೆ. ಅವರು ಹೊರಗೆ ಬಂದು ಬೆಂಕಿಯೊಳಗಿಂದ ತಪ್ಪಿಸಿ ಕೊಂಡರೂ ಮತ್ತೊಂದು ಬೆಂಕಿಯು ಅವರನ್ನು ನುಂಗಿ ಬಿಡುವದು. ನಾನು ನನ್ನ ಮುಖವನ್ನು ಅವರಿಗೆ ವಿರೋಧವಾಗಿ ಇಡುವಾಗ ನಾನೇ ಕರ್ತನೆಂದು ತಿಳಿದುಕೊಳ್ಳುವಿರಿ.
8. ಅವರು ಅತಿಕ್ರಮಿಸಿದ್ದರಿಂದ ನಾನು ಆ ದೇಶವನ್ನು ಹಾಳು ಮಾಡುವೆನೆಂದು ದೇವರಾದ ಕರ್ತನು ಹೇಳುತ್ತಾನೆ.

Chapter 16

1. ಕರ್ತನ ವಾಕ್ಯವು ನನ್ನ ಕಡೆಗೆ ಬಂದು ಹೇಳಿದ್ದೇನಂದರೆ--
2. ಮನುಷ್ಯಪುತ್ರನೇ, ಯೆರೂಸಲೇಮಿಗೆ ಅದರ ಅಸಹ್ಯವಾದವುಗಳನ್ನು ತಿಳಿದುಕೊಳ್ಳುವ ಹಾಗೆ ಮಾಡು.
3. ದೇವರಾದ ಕರ್ತನು ಯೆರೂಸಲೇಮಿನವರಿಗೆ ಹೀಗೆ ಹೇಳುತ್ತಾನೆ--ನಿನ್ನ ಹುಟ್ಟುವಿಕೆಯೂ ನಿನ್ನ ಹುಟ್ಟಿದ ಸ್ಥಳವೂ ಕಾನಾನ್‌ ದೇಶದಿಂದಾದದ್ದೇ; ನಿನ್ನ ತಂದೆ ಅಮೋರಿಯನು, ನಿನ್ನ ತಾಯಿ ಹಿತ್ತಿಯಳು
4. ನಿನ್ನ ಜನನವನ್ನು ಕುರಿತು ನೀನು ಹುಟ್ಟಿದ ದಿನದಲ್ಲಿ ನಿನ್ನ ಹೊಕ್ಕಳು ಕತ್ತರಿಸ ಲ್ಪಡಲಿಲ್ಲ; ಶುದ್ಧವಾಗುವ ಹಾಗೆ ನೀರಿನಿಂದ ತೊಳೆ ಯಲ್ಪಡಲಿಲ್ಲ, ನಿನಗೆ ಉಪ್ಪು ಹಾಕಲಿಲ್ಲ, ನಿನ್ನನ್ನು ಬಟ್ಟೆಯಿಂದ ಸುತ್ತಲಿಲ್ಲ.
5. ನಿನ್ನನ್ನು ಕರುಣಿಸಿ ಕಟಾಕ್ಷಿಸಿ ಯಾರೂ ನಿನಗೆ ಇಂಥ ಒಂದು ಸಹಾಯವನ್ನು ಮಾಡ ಲಿಲ್ಲ, ಆದರೆ ನೀನು ಹುಟ್ಟಿದ ದಿನದಲ್ಲಿ ಅಸಹ್ಯಪಟ್ಟು ನಿನ್ನನ್ನು ಹೊಲದಲ್ಲಿ ಬಿಸಾಡಿದರು.
6. ನಾನು ನಿನ್ನ ಬಳಿಯಲ್ಲಿ ಹಾದು ಹೋಗುವಾಗ ನೀನು ನಿನ್ನ ಸ್ವಂತ ರಕ್ತದಲ್ಲಿ ಬಿದ್ದು ಹೊರಳಾಡುತ್ತಿದ್ದ ನಿನ್ನನ್ನು ನಾನು ನಿನ್ನ ರಕ್ತದಲ್ಲಿ ನೋಡಿದಾಗ ಬದುಕು ಎಂದೆನು; ಹೌದು, ನೀನು ನಿನ್ನ ರಕ್ತದಲ್ಲಿ ಬಿದ್ದಿರುವಾಗ ನಾನು ಬದುಕು ಅಂದೆನು.
7. ಭೂಮಿಯಲ್ಲಿಯ ಮೊಳಿಕೆಯೋ ಎಂಬಂತೆ ನಾನು ನಿನ್ನನ್ನು ಬೆಳೆಸಲು (ಹೆಚ್ಚಿಸಲು) ನೀನು ಬಲಿತು ಪ್ರಾಯವು ತುಂಬಿ ಅತಿ ಸೌಂದರ್ಯವಂತೆಯಾದೆ; ನಿನ್ನ ಸ್ತನಗಳು ರೂಪಗೊಂಡವು; ನಿನ್ನ ಕೂದಲು ಬೆಳೆಯಿತು; ಆದರೆ ಮೊದಲು ನೀನು ಬರೀ ಬೆತ್ತಲೆ ಯಾಗಿದ್ದೆ.
8. ಈಗ ನಾನು ನಿನ್ನ ಬಳಿ ಹಾದು ಹೋಗು ವಾಗ ನಿನ್ನನ್ನು ನೋಡಲು ಇಗೋ, ನಿನ್ನ ಕಾಲವು ಪ್ರೇಮಿಸುವ ಕಾಲವಾಗಿತ್ತು; ಆಗ ನಾನು ನನ್ನ ಸೆರಗನ್ನು ನಿನ್ನ ಮೇಲೆ ಹೊದಿಸಿ, ನಿನ್ನ ಬೆತ್ತಲೆಯನ್ನು ಮುಚ್ಚಿದೆನು. ಹೌದು, ನಾನು ನಿನಗೆ ಆಣೆಯಿಟ್ಟು ಒಡಂಬಡಿಕೆ ಮಾಡಿಕೊಂಡದ್ದರಿಂದ ನೀನು ನನ್ನವಳಾದೆ ಎಂದು ದೇವರಾದ ಕರ್ತನು ಹೇಳುತ್ತಾನೆ.
9. ಆಮೇಲೆ ನಿನ್ನನ್ನು ನೀರಿನಿಂದ ತೊಳೆದೆನು; ಹೌದು, ನಿನ್ನ ರಕ್ತವನ್ನು ಶುದ್ಧವಾಗಿ ನಿನ್ನಿಂದ ತೊಳೆದೆನು; ನಿನಗೆ ಎಣ್ಣೆಯಿಂದ ಅಭಿಷೇಕ ಮಾಡಿದೆನು.
10. ಇದಲ್ಲದೆ ನಾನು ಕಸೂ ತಿಯ ಬಟ್ಟೆಯನ್ನು ನಿನಗೆ ತೊಡಿಸಿ, ಕಡಲ ಪ್ರಾಣಿಯ ಜೋಡುಗಳನ್ನು ಕೊಟ್ಟೆನು, ನಯವಾದ ನಾರುಮಡಿ ಯನ್ನು ನಿನಗೆ ಉಡಿಸಿದೆನು, ರೇಷ್ಮೆಯ ಹೊದಿಕೆಯನ್ನು ನಿನಗೆ ಹೊದಿಸಿದೆನು.
11. ನಾನು ಆಭರಣಗಳಿಂದಲೂ ನಿನ್ನನ್ನು ಅಲಂಕರಿಸಿದೆನು; ನಾನು ನಿನ್ನ ಕೈಗಳಿಗೆ ಕಡಗ ಗಳನ್ನು, ನಿನ್ನ ಕೊರಳಿಗೆ ಸರವನ್ನು ಹಾಕಿದೆನು.
12. ನಿನ್ನ ಹಣೆಯ ಮೇಲೆ ರತ್ನಾಭರಣವನ್ನೂ ನಿನ್ನ ಕಿವಿಗಳಲ್ಲಿ ವಾಲೆಗಳನ್ನೂ ನಿನ್ನ ತಲೆಯ ಮೇಲೆ ಶೃಂಗಾರ ಕಿರೀಟವನ್ನೂ ಇಟ್ಟೆನು.
13. ನಿನ್ನ ಒಡವೆಗಳು ಬೆಳ್ಳಿ ಬಂಗಾರಗಳು, ನಿನ್ನ ಉಡುಪು ನಯವಾದ ನಾರುಮಡಿ, ರೇಷ್ಮೆಯ ಹೊದಿಕೆ, ಕಸೂತಿಯ ಬಟ್ಟೆ; ನಯವಾದ ಹಿಟ್ಟನ್ನೂ ಜೇನನ್ನೂ ಎಣ್ಣೆಯನ್ನೂ ತಿನ್ನುತ್ತಿದ್ದೆ, ನಿನ್ನ ಲಾವಣ್ಯವು ಅತಿ ಮನೋಹರವಾಗಿ ವೃದ್ಧಿಗೊಂಡು ನೀನು ರಾಣಿಯಾದೆ.
14. ಇದಲ್ಲದೆ, ನಿನ್ನ ಸೌಂದ ರ್ಯದಿಂದ ನಿನ್ನ ಕೀರ್ತಿಯು ಅನ್ಯಜನಾಂಗಗಳಲ್ಲಿ ಹಬ್ಬಿತು; ಯಾಕಂದರೆ ನಾನು ನಿನ್ನ ಮೇಲೆ ಇಟ್ಟ ಸಂಪೂರ್ಣ ವೈಭವದಿಂದಲೇ ಎಂದು ದೇವರಾದ ಕರ್ತನು ಹೇಳುತ್ತಾನೆ.
15. ಆದರೆ ನೀನು ನಿನ್ನ ಸೌಂದರ್ಯದಲ್ಲಿ ಭರವಸ ವಿಟ್ಟು ನಿನ್ನ ಕೀರ್ತಿಯ ನಿಮಿತ್ತವಾಗಿ ಸೂಳೆತನ ಮಾಡಿದೆ; ಹಾದುಹೋಗುವ ಪ್ರತಿಯೊಬ್ಬನ ಸಂಗಡ ಮಿತಿವಿಾರಿ ಹಾದರತನ ಮಾಡಿದೆ; ಒಬ್ಬೊಬ್ಬನಿಗೂ ಒಳಗಾದೆ.
16. ನಿನ್ನ ವಸ್ತ್ರಗಳನ್ನು ತೆಗೆದುಕೊಂಡು ಚಿತ್ರ ವಿಚಿತ್ರ ಮಾಡಿ ಅಲಂಕರಿಸಿಕೊಂಡು ಪೂಜಾಸ್ಥಳದಲ್ಲಿ ವ್ಯಭಿಚಾರ ಮಾಡಿದೆ, ಇದು ನಡೆಯತಕ್ಕದ್ದಲ್ಲ ಮತ್ತು ನಡೆಯಬಾರದಂಥ ಕೆಲಸವಾಗಿದೆ.
17. ಇದಲ್ಲದೆ ನಾನು ನಿನಗೆ ಬೆಳ್ಳಿ ಬಂಗಾರದಿಂದ ಮಾಡಿಸಿಕೊಟ್ಟಿದ್ದ ನಿನ್ನ ಅಂದವಾದ ಆಭರಣಗಳನ್ನು ತೆಗೆದು ಅವುಗಳಿಂದ ಪುರುಷ ರೂಪಗಳನ್ನು ಮಾಡಿಕೊಂಡು ಅದರ ಸಂಗಡ ವ್ಯಭಿಚಾರ ಮಾಡಿದಿ.
18. ನಿನ್ನ ಕಸೂತಿಯ ಬಟ್ಟೆಗಳನ್ನು ತೆಗೆದು ಅವರಿಗೆ ಹೊದಿಸಿ ನನ್ನ ಎಣ್ಣೆಯನ್ನೂ ಧೂಪ ವನ್ನೂ ಅವರ ಮುಂದೆ ಇಟ್ಟೆ.
19. ನಾನು ನಿನಗೆ ನನ್ನ ಆಹಾರವನ್ನೂ ನಿನಗೆ ನಯವಾದ ಹಿಟ್ಟನ್ನೂ ಎಣ್ಣೆ ಮತ್ತು ಜೇನುಗಳನ್ನೂ ಸುವಾಸನೆಗಾಗಿ ಕೊಟ್ಟೆ. ಆದರೆ ನೀನು ಅವುಗಳನ್ನು ಅವರ ಮುಂದೆ ಇಟ್ಟೆ ಎಂದು ದೇವರಾದ ಕರ್ತನು ಹೇಳುತ್ತಾನೆ.
20. ಇದಾದ ಮೇಲೆ ನನಗೆ ಹುಟ್ಟಿದ್ದ ನನ್ನ ಕುಮಾರರನ್ನೂ ಕುಮಾರ್ತೆ ಯರನ್ನೂ ಅವರ ಆಹಾರಕ್ಕಾಗಿ ಅರ್ಪಿಸಿದಿ. ಈ ನಿನ್ನ ವ್ಯಭಿಚಾರ ಸಾಮಾನ್ಯವಾದದ್ದಲ್ಲ,
21. ನೀನು ನನ್ನ ಮಕ್ಕಳನ್ನು ಕೊಂದು ಅವರಿಗೆ ಬೆಂಕಿಯನ್ನು ದಾಟುವ ಹಾಗೆ ಒಪ್ಪಿಸಿದಿಯಲ್ಲಾ;
22. ನಿನ್ನ ಎಲ್ಲಾ ಅಸಹ್ಯಗಳ ಲ್ಲಿಯೂ ನಿನ್ನ ವ್ಯಭಿಚಾರಗಳಲ್ಲಿಯೂ ನಿನ್ನ ಎಳೆಯ ಪ್ರಾಯದ ದಿವಸಗಳನ್ನು ನೀನು ಬರೀ ಬೆತ್ತಲೆಯಾಗಿ ನಿನ್ನ ರಕ್ತದಲ್ಲಿ ಹೊರಳಾಡುತ್ತಿದ್ದದ್ದನ್ನು ನೀನು ಜ್ಞಾಪಕ ಮಾಡಲಿಲ್ಲ.
23. ಇದಲ್ಲದೆ ಈ ನಿನ್ನ ಎಲ್ಲಾ ಕೆಟ್ಟತನಗಳ ತರುವಾಯ ಆಗಿದ್ದೇನಂದರೆ (ಅಯ್ಯೋ! ಅಯ್ಯೋ ಎಂದು ನಿನಗೆ ದೇವರಾದ ಕರ್ತನು ಹೇಳುತ್ತಾನೆ;)
24. ನೀನು ಪ್ರತಿಯೊಂದು ಬೀದಿಯಲ್ಲಿಯೂ ಉನ್ನತ ಸ್ಥಳಗಳನ್ನು ಕಟ್ಟಿ ನಿನಗೆ ಉತ್ತಮವಾದ ಸ್ಥಳಗ ಳನ್ನು ಮಾಡಿಕೊಂಡಿರುವಿ.
25. ಪ್ರತಿಯೊಂದು ಕಡೆ ಮೂಲೆ ಮೂಲೆಗೂ ಉನ್ನತ ಸ್ಥಳವನ್ನು ಕಟ್ಟಿ ನಿನ್ನ ಸೌಂದರ್ಯವನ್ನು ದುರುಪಯೋಗಪಡಿಸಿಕೊಂಡು ಹಾದು ಹೋಗುವ ಪ್ರತಿಯೊಬ್ಬರಿಗೂ ನಿನ್ನ ಕಾಲು ಗಳನ್ನು ಅಗಲಿಸಿದಿ; ನಿನ್ನ ವ್ಯಭಿಚಾರವನ್ನು ವೃದ್ಧಿಸಿದಿ.
26. ಇದಲ್ಲದೆ ಮಾಂಸದಲ್ಲಿ (ಶರೀರಭಾವದಲ್ಲಿ) ಮದಿ ಸಿದ ನಿನ್ನ ನೆರೆಯವರಾದ ಐಗುಪ್ತ್ಯರ ಸಂಗಡ ವ್ಯಭಿ ಚಾರ ಮಾಡಿದಿ; ಮತ್ತು ನನ್ನನ್ನು ರೇಗಿಸುವ ಹಾಗೆ ವ್ಯಭಿಚಾರವನ್ನು ಹೆಚ್ಚಿಸಿದಿ.
27. ಆದದರಿಂದ ಇಗೋ, ನಾನು ನನ್ನ ಕೈಯನ್ನು ನಿನ್ನ ಮೇಲೆ ಚಾಚಿ ನಿನ್ನ ಸಾಮಾನ್ಯವಾದ ಆಹಾರವನ್ನು ಕಡಿಮೆಮಾಡಿದೆ; ನಿನ್ನ ದುರ್ಮಾರ್ಗಕ್ಕೆ ನಾಚಿಕೆಪಟ್ಟು ನಿನ್ನ ಕೆಟ್ಟ ನಡತೆಗೆ ಅಸಹ್ಯಪಡುವವರಾದ ಫಿಲಿಷ್ಟಿಯರ ಕುಮಾರ್ತೆಯರ ಚಿತ್ತಕ್ಕೆ ನಿನ್ನನ್ನು ಒಪ್ಪಿಸಿಬಿಟ್ಟೆ.
28. ಇದಲ್ಲದೆ ಅಶ್ಶೂರ್ಯ ರೊಂದಿಗೂ ತೃಪ್ತಿಯಾಗಲಾರದಷ್ಟು ವ್ಯಭಿಚಾರಮಾಡಿ ದರೂ ನಿನಗೆ ತೃಪ್ತಿಯಾಗಲಿಲ್ಲ; ಹೌದು, ಅವರ ಸಂಗಡ ವ್ಯಭಿಚಾರ ಮಾಡಿದ್ದೀ; ಆದರೂ ತೃಪ್ತಿಯಾಗ ಲಿಲ್ಲ.
29. ಇದಲ್ಲದೆ ಈ ನಿನ್ನ ವ್ಯಭಿಚಾರವನ್ನು ಕಾನಾನ್‌ ದೇಶದಿಂದ ಕಸ್ದೀಯ ದೇಶದವರೆಗೂ ಹೆಚ್ಚು ಮಾಡಿದಿ. ಆದರೂ ನೀನು ಇದರಲ್ಲಿ ತೃಪ್ತಿ ಹೊಂದಲಿಲ್ಲ.
30. ನೀನು ಈ ಸಂಗತಿ ಗಳನ್ನೆಲ್ಲಾ ಸ್ವಯಿಚ್ಛೆಯಾಗಿ ನಡೆಸುವ ಜಾರಸ್ತ್ರೀಯ ಕೆಲಸವನ್ನೇ ಮಾಡಿದಿಯಲ್ಲಾ! ನಿನ್ನ ಹೃದಯವು ಎಷ್ಟೊಂದು ಬಲಹೀನವಾಗಿದೆ ಎಂದು ದೇವರಾದ ಕರ್ತನು ಹೇಳುತ್ತಾನೆ.
31. ಪ್ರತಿಯೊಂದು ಬೀದಿಯ ಕೊನೆಯಲ್ಲಿಯೂ ಗದ್ದುಗೆಯನ್ನು ಕಟ್ಟಿ ಪ್ರತಿಯೊಂದು ಹಾದಿಯಲ್ಲಿಯೂ ಉನ್ನತಸ್ಥಾನವನ್ನು ಮಾಡಿಕೊಂಡು ಕೂಲಿಯನ್ನು ಉದಾಸೀನ ಮಾಡುವ ವ್ಯಭಿಚಾರಿಣಿಯು ನೀನಲ್ಲ;
32. ಆದರೆ ಗಂಡನಿಗೆ ಬದ ಲಾಗಿ ಅನ್ಯರನ್ನು ಅಂಗೀಕರಿಸುವ ವ್ಯಭಿಚಾರಿ ಹೆಂಡತಿ ಯಾಗಿರುವಿ!
33. ಅವರು ವ್ಯಭಿಚಾರಿಗಳಿಗೆಲ್ಲ ಬಹು ಮಾನ ಕೊಡುತ್ತಾರೆ; ಆದರೆ ನೀನು ನಿನ್ನ ಪ್ರಿಯರಿಗೆಲ್ಲ ನಿನ್ನ ಬಹುಮಾನಗಳನ್ನು ಕೊಟ್ಟು ಅವರನ್ನು ಬಾಡಿಗೆಗೆ ಪಡೆದು ನಿನ್ನ ವ್ಯಭಿಚಾರಕ್ಕಾಗಿ ನಿನ್ನ ಬಳಿಗೆ ಬರುವ ಹಾಗೆ ಅವರಿಗೆ ಬಹುಮಾನ ಕೊಡುತ್ತೀ.
34. ಹೀಗಿರುವ ದರಿಂದ ಹೆಂಗಸರಿಗೆ ವಿರೋಧವಾದದ್ದು ನಿನ್ನ ವ್ಯಭಿ ಚಾರದಲ್ಲಿ ನಿನಗಾಯಿತು; ವ್ಯಭಿಚಾರಮಾಡುವ ಹಾಗೆ ನಿನ್ನನ್ನು ಯಾರೂ ಹಿಂಬಾಲಿಸುವದಿಲ್ಲ; ನೀನು ಬಹು ಮಾನ ಕೊಡುತ್ತೀಯೇ ಹೊರತು ನಿನಗೆ ಯಾರೂ ಬಹುಮಾನ ಕೊಡುವದಿಲ್ಲ. ಆದದರಿಂದ ಇದು ವಿರೋಧವಾದದ್ದಾಗಿದೆ.
35. ಆದಕಾರಣ ಓ ವ್ಯಭಿಚಾರಿಣಿಯೇ, ನೀನು ಕರ್ತನ ವಾಕ್ಯವನ್ನು ಕೇಳು.
36. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಿನ್ನ ಅಸಹ್ಯವು ಸುರಿಯಲ್ಪಟ್ಟ ಕಾರಣ ದಿಂದಲೂ ನಿನ್ನ ಬೆತ್ತಲೆತನವು ಪ್ರಕಟವಾಗುವಂತೆ ನಿನ್ನ ಪ್ರಿಯರ ಸಂಗಡ ಮಾಡಿದ ವ್ಯಭಿಚಾರದಿಂದಲೂ ನಿನ್ನ ಎಲ್ಲಾ ಅಸಹ್ಯವಾದ ವಿಗ್ರಹಗಳಿಂದಲೂ ನೀನು ಅವರಿಗೆ ಕೊಟ್ಟ ನಿನ್ನ ಮಕ್ಕಳ ರಕ್ತದಿಂದಲೂ
37. ಇಗೋ, ನೀನು ಆನಂದ ಪಟ್ಟವರೊಂದಿಗೆ ಪ್ರೀತಿ ಮಾಡಿದವರೆ ಲ್ಲರನ್ನೂ ಹಗೆಮಾಡಿದವರೆಲ್ಲರನ್ನೂ ಸಹ ಕೂಡಿಸು ವೆನು; ನಾನು ಅವರನ್ನು ನಿನಗೆ ವಿರುದ್ಧವಾಗಿ ಸುತ್ತಲೂ ಕೂಡಿಸಿ ಅವರಿಗೆ ನಿನ್ನ ಬೆತ್ತಲೆಯನ್ನು ಪ್ರಕಟಪಡಿಸು ವೆನು. ಆಗ ಅವರು ನಿನ್ನ ಬೆತ್ತಲೆಯನ್ನು ನೋಡುವರು.
38. ದಾಂಪತ್ಯವನ್ನು ಮುರಿದು ರಕ್ತ ಸುರಿಸುವಂಥ ಹೆಂಗಸರಿಗೆ ವಿಧಿಸುವಂಥ ತಕ್ಕ ದಂಡನೆಗಳನ್ನು ನಿನಗೂ ವಿಧಿಸಿ, ಕೋಪೋದ್ರೇಕದಿಂದಲೂ ರೋಷಾವೇಶ ದಿಂದಲೂ ನಿನಗೆ ರಕ್ತವನ್ನು ಸುರಿಸುವೆನು.
39. ಇದಲ್ಲದೆ ನಿನ್ನನ್ನು ಅವರ ಕೈಗಳಲ್ಲಿ ಒಪ್ಪಿಸುವೆನು. ಅವರು ನಿನ್ನ ಎತ್ತರ ಸ್ಥಳಗಳನ್ನೆಲ್ಲಾ ಕೆಡವಿಹಾಕಿ ನಿನ್ನ ಉನ್ನತ ಸ್ಥಾನ ಗಳನ್ನು ಒಡೆದು ಬಿಡುವರು; ಅವರು ನಿನ್ನ ವಸ್ತ್ರಗಳನ್ನು ತೆಗೆದುಹಾಕಿ ನಿನ್ನ ಸೌಂದರ್ಯವುಳ್ಳ ಆಭರಣಗಳನ್ನು ಕಸಿದುಕೊಂಡು ನಿನ್ನನ್ನು ಬರೀ ಬೆತ್ತಲೆಯನ್ನಾಗಿ ಮಾಡಿ ಬಿಟ್ಟು ಹೋಗುವರು.
40. ಅವರು ನಿನಗೆ ವಿರುದ್ಧವಾಗಿ ಒಂದು ಕೂಟವನ್ನು ಕರಕೊಂಡು ಬಂದು ಕಲ್ಲುಗಳನ್ನು ನಿನ್ನ ಮೇಲೆ ಎಸೆದು, ತಮ್ಮ ಕತ್ತಿಗಳಿಂದ ನಿನ್ನನ್ನು ತಿವಿಯುವರು.
41. ಅವರು ನಿನ್ನ ಮನೆಗಳನ್ನು ಸುಟ್ಟು ಬಹಳ ಸ್ತ್ರೀಯರ ಕಣ್ಣುಗಳ ಮುಂದೆ ನಿನಗೆ ನ್ಯಾಯ ತೀರಿಸುವರು; ನೀನು ವ್ಯಭಿಚಾರ ಮಾಡುವದನ್ನು ನಾನು ನಿಲ್ಲಿಸುವೆನು; ಆಗ ನೀನು ಕೂಲಿ ಸಹ ಕೊಡುವದನ್ನು ನಿಲ್ಲಿಸುವೆನು;
42. ಈ ರೀತಿ ನನ್ನ ಸಿಟ್ಟನ್ನು ನಿನ್ನಲ್ಲಿ ವಿಶ್ರಾಂತಿ ಪಡಿಸುತ್ತೇನೆ, ನನ್ನ ರೋಷವನ್ನು ನಿನ್ನ ಕಡೆಯಿಂದ ತೊಲಗಿಸುತ್ತೇನೆ; ಶಾಂತನಾಗಿ ನಿನ್ನ ಮೇಲೆ ಕೋಪ ಗೊಳ್ಳುವದಿಲ್ಲ.
43. ನೀನು ನಿನ್ನ ಯೌವನ ದಿವಸಗಳನ್ನು ಜ್ಞಾಪಕಮಾಡಿಕೊಳ್ಳದೆ ಈ ಸಂಗತಿಗಳಿಂದ ನೀನು ನನಗೆ ಬೇಸರಪಡಿಸಿದ್ದರಿಂದ ಇಗೋ, ನಾನು ಸಹ ನಿನ್ನ ದುರ್ಮಾರ್ಗದ ಫಲವನ್ನು ನಿನ್ನ ತಲೆಗೆ ಕಟ್ಟುವೆನು ಎಂದು ದೇವರಾದ ಕರ್ತನು ಹೇಳುತ್ತಾನೆ. ನಿನ್ನ ಎಲ್ಲಾ ಅಸಹ್ಯವಾದವುಗಳ ಮೇಲೆ ಈ ಅಪವಿತ್ರತೆಯನ್ನು ನೀನು ಮಾಡಬಾರದು.
44. ಇಗೋ, ಗಾದೆ ಹೇಳುವವರೆಲ್ಲರೂ--ತಾಯಿಯಂತೆ ಮಗಳು ಎಂಬ ಗಾದೆಯನ್ನು ನಿನಗೆ ವಿರುದ್ಧವಾಗಿ ಹೇಳುವರು.
45. ಗಂಡನಿಗೂ ಮಕ್ಕಳಿಗೂ ಬೇಸರ ಪಡುವವಳಾದ ನಿನ್ನ ತಾಯಿಗೆ ನೀನು ತಕ್ಕ ಮಗಳು; ಗಂಡನಿಗೂ ಮಕ್ಕಳಿಗೂ ಬೇಸರ ಪಡುವವರಾದ ನಿನ್ನ ಅಕ್ಕಂದಿರಿಗೆ ನೀನು ತಕ್ಕ ತಂಗಿ; ನಿನ್ನ ತಾಯಿ ಹಿತ್ತಿಯಳು, ನಿನ್ನ ತಂದೆ ಅಮೋರಿಯನು.
46. ನಿನ್ನ ಎಡಗಡೆಯಲ್ಲಿ ಕುಮಾರ್ತೆಯರೊಂದಿಗೆ ವಾಸಿಸುವ ಸಮಾರ್ಯವೇ ನಿನ್ನ ಅಕ್ಕ; ಬಲಗಡೆಯಲ್ಲಿ ಕುಮಾರ್ತೆಯರೊಂದಿಗೆ ವಾಸಿಸುವ ಸೊದೋಮ್‌ ನಿನ್ನ ತಂಗಿ.
47. ಆದರೂ ನೀನು ಅವರ ಮಾರ್ಗಗಳಲ್ಲಿ ನಡೆಯಲಿಲ್ಲ, ಅವರ ಅಸಹ್ಯಗಳ ಹಾಗೆ ಮಾಡಲಿಲ್ಲ, ಅವರ ದುರ್ನಡತೆಯು ಅತ್ಯಲ್ಪವೆಂದು ಸದಾ ಅವರಿಗಿಂತ ಬಹಳ ಕೆಟ್ಟವಳಾಗಿ ನಡೆದುಕೊಂಡೆ.
48. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನನ್ನ ಜೀವದಾಣೆ, ನಿನ್ನ ತಂಗಿಯಾದ ಸೊದೋಮು, ತಾನಾದರೂ ತನ್ನ ಕುಮಾರ್ತೆಯ ರಾದರೂ ನೀನು ನಿನ್ನ ಕುಮಾರ್ತೆಯರು ಮಾಡಿದ ಹಾಗೆ ಮಾಡಲಿಲ್ಲ.
49. ಇಗೋ, ಸೊದೋಮ್‌ ಎಂಬ ನಿನ್ನ ತಂಗಿಯ ಅಕ್ರಮವನ್ನೂ ಗರ್ವವನ್ನೂ ನೋಡು; ರೊಟ್ಟಿಯ ತೃಪ್ತಿಯು ಅವಳಿಗೂ ಅವಳ ಕುಮಾರ್ತೆ ಯರಿಗೂ ನಿರ್ಭಯವಾದ ಸೌಖ್ಯವಾಗಿದೆ; ಆಕೆಯು ದೀನದರಿದ್ರರಿಗೆ ಬೆಂಬಲವಾಗಿರಲಿಲ್ಲ.
50. ಇದಲ್ಲದೆ ಅವರು ಅಹಂಕಾರಿಗಳಾಗಿದ್ದು ನನ್ನ ಮುಂದೆ ಅಸಹ್ಯ ವಾದವುಗಳನ್ನು ನಡಿಸಿದರು. ಆದದರಿಂದ ನಾನು ಅದನ್ನು ನೋಡಿ ಅವರನ್ನು ನಿರ್ಮೂಲ ಮಾಡಿದೆನು.
51. ಸಮಾರ್ಯವೆಂಬಾಕೆಯು ಸಹ ನೀನು ಮಾಡಿದ ಪಾಪಗಳಲ್ಲಿ ಅರ್ಧವನ್ನೂ ಮಾಡಲಿಲ್ಲ. ನೀನು ನಿನ್ನ ಅಕ್ಕತಂಗಿಯರಿಗಿಂತಲೂ ಅತ್ಯಧಿಕವಾದ ಅಸಹ್ಯವಾದ ಕಾರ್ಯಗಳನ್ನು ಮಾಡಿದಿ, ನೀನು ಮಾಡಿದ ಲೆಕ್ಕವಿಲ್ಲ ದಷ್ಟು ದುರಾಚಾರಗಳಿಂದ ಅವರನ್ನು ನೀತಿವಂತರೆಂದು ತೋರ್ಪಡಿಸಿದೆ.
52. ನಿನ್ನ ದೋಷಗಳೇ ನಿನ್ನ ಅಕ್ಕ ತಂಗಿಯರ ಪಕ್ಷವಾಗಿ ನಿಂತಿದ್ದರಿಂದ ನೀನು ನಾಚಿಕೆ ಪಡು; ನೀನು ಅವರಿಗಿಂತ ಅಸಹ್ಯವಾಗಿ ಮಾಡಿದ ನಿನ್ನ ಪಾಪಗಳಿಗೆ ತಕ್ಕ ನಿಂದೆಯನ್ನು ಹೊತ್ತುಕೋ; ಅವರು ನಿನಗಿಂತ ನೀತಿವಂತರು; ಹೌದು, ನೀನು ನಿನ್ನ ಸಹೋದರಿಗಳನ್ನು ನೀತಿವಂತರೆಂದು ತೋರ್ಪಡಿಸಿ ದ್ದರಿಂದ ನೀನೇ ನಾಚಿಕೆಪಟ್ಟು ನಿನ್ನ ನಿಂದೆಯನ್ನು ಹೊತ್ತುಕೋ.
53. ನಾನು ಅವರ ಸೆರೆಯನ್ನೂ ಕುಮಾರ್ತೆಯರ ಸಹಿತವಾದ ಸೊದೋಮಿನ ಸೆರೆಯನ್ನೂ ಕುಮಾರ್ತೆ ಯರ ಸಹಿತವಾದ ಸಮಾರ್ಯದ ಸೆರೆಯನ್ನೂ ತಪ್ಪಿಸುವಾಗ ಅವರೊಂದಿಗೆ ನಿನ್ನ ಸೆರೆಯವರ ಸೆರೆಯನ್ನು ತಪ್ಪಿಸುವೆನು.
54. ನೀನು ನಿನ್ನ ನಿಂದೆಯನ್ನು ಹೊತ್ತು ಕೊಂಡು ಅವರನ್ನು ಆದರಿಸುವಾಗ ನೀನು ಲಜ್ಜೆಪಡುವಿ, ನಾಚಿಕೆಗೊಳ್ಳುವಿ.
55. ಆ ಸಮಾರ್ಯ, ಸೊದೋಮ್‌ ಎಂಬ ನಿನ್ನ ಅಕ್ಕತಂಗಿಯರೂ ಕುಮಾರ್ತೆಯರೂ ತಮ್ಮ ಪೂರ್ವಸ್ಥಿತಿಗೆ ತಿರುಗುವರು. ನೀನೂ ಕುಮಾರ್ತೆ ಯರೂ ಪೂರ್ವಸ್ಥಿತಿಗೆ ತಿರುಗಿಕೊಳ್ಳುವಿರಿ.
56. ನಿನ್ನ ಸಹೋದರಿಯಾದ ಸೊದೋಮ್‌ ನಿನ್ನ ಗರ್ವದ ದಿವಸಗಳಲ್ಲಿ ನಿನ್ನ ಬಾಯಿಂದ ಉಚ್ಚರಿಸಲ್ಪಡಲಿ.
57. ಅರಾಮಿನ ಕುಮಾರ್ತೆಯರಿಂದಲೂ ಮತ್ತು ಅದರ ಸುತ್ತಲಿರುವಂತೆ ಎಲ್ಲವುಗಳಿಂದಲೂ, ನಿನ್ನನ್ನು ಉದಾ ಸೀನ ಮಾಡಿದಂತ ಎಲ್ಲಾ ಫಿಲಿಷ್ಟಿಯರ ಕುಮಾರ್ತೆಯ ರಿಂದಲೂ ನಿನಗೆ ನಿಂದೆಯು ಬಂದ ಕಾಲದ ಹಾಗೆ ನಿನ್ನ ಕೆಟ್ಟತನವು ಪ್ರಕಟವಾಗುವದಕ್ಕೆ ಪೂರ್ವದಲ್ಲಿಯೇ
58. ನೀನು ನಿನ್ನ ದುಷ್ಕರ್ಮಗಳನ್ನೂ ಅಸಹ್ಯಗಳನ್ನೂ ಹೊತ್ತುಕೊಂಡಿರುವಿ ಎಂದು ಕರ್ತನು ಹೇಳುತ್ತಾನೆ.
59. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ಮಾಡಿದ್ದಕ್ಕೆ ತಕ್ಕ ಹಾಗೆ ನಾನು ನಿನಗೆ ಮಾಡುತ್ತೇನೆ; ನೀನು ಒಡಂಬಡಿಕೆಯನ್ನು ವಿಾರಿ ನನ್ನ ಆಣೆಯನ್ನು ತಿರಸ್ಕರಿಸಿರುವಿ.
60. ಆದಾಗ್ಯೂ ನಿನ್ನ ಯೌವನದ ದಿನಗಳಲ್ಲಿ ನಾನು ನಿನ್ನ ಸಂಗಡ ಮಾಡಿದ ನನ್ನ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಂಡು ನಿನಗಾಗಿ ನಿತ್ಯವಾದ ಒಡಂಬಡಿಕೆ ಯೊಂದನ್ನು ಸ್ಥಾಪಿಸುವೆನು.
61. ಆಗ ನೀನು ನಿನ್ನ ಮಾರ್ಗಗಳನ್ನು ಜ್ಞಾಪಕಮಾಡಿಕೊಂಡು ನಿನ್ನ ಸಹೋ ದರಿಗಳಾದ ನಿನ್ನ ಅಕ್ಕತಂಗಿಯರನ್ನು ಸೇರುವಾಗ ನಾಚಿಕೆಪಡುವಿ. ಅವರನ್ನು ನಿನ್ನ ಕುಮಾರ್ತೆಗಳಂತೆ ಕೊಡುವೆನು. ಆದರೆ ಇದು ನಿನ್ನ ಒಡಂಬಡಿಕೆ ಯಿಂದಲ್ಲ.
62. ನಾನು ಈ ಒಡಂಬಡಿಕೆಯನ್ನು ನಿಮ್ಮೊಂದಿಗೆ ಸ್ಥಾಪಿಸುವೆನು; ಆದದರಿಂದ ನಾನೇ ಕರ್ತ ನೆಂದು ನಿಮಗೆ ಗೊತ್ತಾಗುವದು.
63. ನಾನು ನಿನ್ನ ದುಷ್ಕೃತ್ಯಗಳನ್ನೆಲ್ಲಾ ಕ್ಷಮಿಸಿಬಿಟ್ಟ ಮೇಲೆ ನೀನು ಅವು ಗಳನ್ನು ಜ್ಞಾಪಕಕ್ಕೆ ತಂದುಕೊಂಡು ನಿನ್ನ ಅವಮಾನದ ನಿಮಿತ್ತ ಇನ್ನು ನೀನು ಬಾಯಿ ತೆರೆಯಲೇಬಾರದೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ.

Chapter 17

1. ಕರ್ತನ ವಾಕ್ಯವು ನನ್ನ ಕಡೆಗೆ ಬಂದು ಹೇಳಿದ್ದೇನಂದರೆ--
2. ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರಿಗೆ ಸಾಮ್ಯಗಳನು ಒಗಟಾಗಿ ಹೇಳು.
3. ಹೇಳತಕ್ಕದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ. ದೊಡ್ಡ ರೆಕ್ಕೆಗಳೂ ಉದ್ದವಾದ ರೆಕ್ಕೆಗಳೂ ಉಳ್ಳಂಥ ವಿಧವಿಧವಾದ ಬಣ್ಣ ಬಣ್ಣದ ಪುಕ್ಕಗಳಿಂದ ತುಂಬಿದ್ದಂಥ ಒಂದು ದೊಡ್ಡ ಹದ್ದು ಲೆಬನೋನಿಗೆ ಬಂದು, ದೇವದಾರಿನ ಮರದ ಮೇಲ್ಗಡೆಯ ಕೊಂಬೆಯನ್ನು ಕಿತ್ತುಹಾಕಿತು.
4. ಅದರ ಚಿಗುರುಗಳ ಕೊನೆಯನ್ನು ಕಿತ್ತು ವ್ಯಾಪಾರದ ದೇಶಕ್ಕೆ ತೆಗೆದುಕೊಂಡು ಹೋಗಿ ವರ್ತಕರಿರುವ ನಗರದಲ್ಲಿ ಇಟ್ಟಿತು.
5. ಅದು ದೇಶದ ಬೀಜವನ್ನೂ ಸಹ ತೆಗೆದು ಕೊಂಡು ಹೋಗಿ ಫಲವುಳ್ಳ ಹೊಲದಲ್ಲಿ ಇರಿಸಿತು; ಅದು ಹೆಚ್ಚು ನೀರಿರುವ ಸ್ಥಳದಲ್ಲಿ ಅದನ್ನು ನೆಟ್ಟು ನೀರವಂಜಿಯ ಮರದ ಹಾಗೆ ಬೆಳೆಯಿಸಿತು.
6. ಅದು ಮೊಳೆತು ತಗ್ಗಾದ ಪ್ರಮಾಣದಲ್ಲಿ ಹಬ್ಬುವ ದ್ರಾಕ್ಷೇ ಗಿಡವಾಯಿತು; ಅದರ ಬಳ್ಳಿಗಳು ಅದರ ಕಡೆಗೆ ತಿರುಗಿ ಕೊಂಡವು, ಅದರ ಬೇರುಗಳು ಅದರ ಕೆಳಗಿದ್ದವು; ಹೀಗೆ ಅದು ದ್ರಾಕ್ಷೇ ಗಿಡವಾಯಿತು, ಕೊಂಬೆಗಳು ಒಡೆದು ಬಳ್ಳಿಗಳು ಹಬ್ಬಿದವು.
7. ದೊಡ್ಡ ರೆಕ್ಕೆಗಳೂ ಬಹಳ ಗರಿಗಳೂ ಇದ್ದ ಇನ್ನೊಂದು ದೊಡ್ಡ ಹದ್ದು ಇತ್ತು; ಆಗ ಇಗೋ, ಆ ದ್ರಾಕ್ಷೇ ಗಿಡವು ತಾನು ನಾಟಿಕೊಂಡಿದ್ದ ಪಾತಿಯೊಳಗಿಂದ ಅದರ ಕಡೆಗೆ ತನ್ನ ಬೇರುಗಳನ್ನು ತಿರುಗಿಸಿ ತನ್ನ ರೆಂಬೆಗಳನ್ನು ಚಾಚಿ ಅದರ ಮೂಲಕ ನೀರನ್ನು ಹಾಯಿಸುತ್ತಿತ್ತು.
8. ಅದು ಕೊಂಬೆ ಗಳನ್ನು ಬೆಳೆಸಿ ಫಲಫಲಿಸುವ ಹಾಗೆಯೂ ಒಳ್ಳೇ ದ್ರಾಕ್ಷೇಗಿಡ ಆಗುವ ಹಾಗೆಯೂ ಒಳ್ಳೇ ಭೂಮಿಯಲ್ಲಿ ಹೆಚ್ಚು ನೀರಿನ ಬಳಿಯಲ್ಲಿ ಬೆಳೆಸಲ್ಪಟ್ಟಿತು.
9. ನೀನು ಹೇಳಬೇಕಾದದ್ದೇನಂದರೆ -- ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಅದು ಸಮೃದ್ಧಿಯಾಗಿ ರುವದೋ? ಆ ಹದ್ದು ಅದರ ಬೇರುಗಳನ್ನು ಕಿತ್ತು ಅದರ ಹಣ್ಣುಗಳನ್ನು ತೆಗೆದುಬಿಟ್ಟರೆ ಅದು ಒಣಗುವದಿಲ್ಲವೇ? ಅದರ ಮೊಳಕೆಯ ಎಲೆಗಳೆಲ್ಲಾ ಒಣಗಿಹೋದಾಗ ಅದನ್ನು ಬೇರು ಸಹಿತ ಕೀಳಬೇಕಾದರೆ ಮಹಾಬಲವಾಗಲೀ ಅಥವಾ ಬಹಳ ಜನರಾಗಲೀ ಇರಬೇಕು.
10. ಹೌದು, ಇಗೋ, ನೆಟ್ಟಿರಲಾಗಿ ಅದು ಸಮೃದ್ಧಿಯಾಗಿರುವದೇ? ಅದಕ್ಕೆ ಮೂಡಣಗಾಳಿ ತಗಲುವಾಗ ಅದು ಸಂಪೂರ್ಣ ವಾಗಿ ಒಣಗುವದಿಲ್ಲವೇ? ಅದು ಮೊಳೆತ ಪಾತಿಗಳ ಲ್ಲಿಯೇ ಒಣಗಿಹೋಗುವದು.
11. ಇದಲ್ಲದೆ ಕರ್ತನ ವಾಕ್ಯವು ಉಂಟಾಗಿ ನನಗೆ ಹೇಳಿದ್ದೇನಂದರೆ--
12. ಇದರ ಅಭಿಪ್ರಾಯ ನಿಮಗೆ ತಿಳಿಯುವದಿಲ್ಲವೋ? ಅವರಿಗೆ ಎದುರು ಬೀಳುವ ಮನೆಯವರಿಗೆ ಹೀಗೆ ಹೇಳು--ಇಗೋ, ಬಾಬೆಲಿನ ಅರಸನು ಯೆರೂಸಲೇಮಿಗೆ ಬಂದು ಅದರ ಅರಸ ನನ್ನೂ ಅದರ ಪ್ರಧಾನರನ್ನೂ ಕರೆದುಕೊಂಡು ತನ್ನ ಬಳಿಗೆ ಬಾಬೆಲಿಗೆ ಒಯ್ದಿದ್ದಾನೆ.
13. ಅರಸನ ಸಂತಾನ ದವರನ್ನು ಕರೆದುಕೊಂಡು ಅವನ ಸಂಗಡ ಒಡಂಬಡಿಕೆ ಮಾಡಿ ಅವನಿಂದ ಪ್ರಮಾಣಮಾಡಿಸಿ ದೇಶದ ಬಲಿಷ್ಠರನ್ನು ತೆಗೆದುಕೊಂಡು ಹೋಗಿದ್ದಾನೆ.
14. ಆ ರಾಜ್ಯವು ತಗ್ಗಾಗಿ ಮೇಲೇಳದ ಹಾಗಿದ್ದರೂ ಅವನು ಒಡಂಬಡಿಕೆಯನ್ನು ಕೈಕೊಳ್ಳುವದರಿಂದ ಅದು ನಿಲ್ಲುವದು.
15. ಆದರೆ ಇವನು ಅವನಿಗೆ ವಿರುದ್ಧವಾಗಿ ತಿರುಗಿಬಿದ್ದು ತನ್ನ ರಾಯಭಾರಿಗಳನ್ನು ಐಗುಪ್ತಕ್ಕೆ ಕಳು ಹಿಸಿ ತನಗೆ ಕುದುರೆಗಳನ್ನೂ ಬಹಳ ಜನರನ್ನೂ ಕೊಡ ಬೇಕೆಂದು ಹೇಳಿ ಕಳುಹಿಸಿದನು. ಇವನು ಅಭಿವೃದ್ಧಿ ಯಾಗುವನೋ? ಇಂಥಾ ಸಂಗತಿಗಳನ್ನು ಮಾಡುವ ವನು ತಪ್ಪಿಸಿಕೊಳ್ಳುವನೋ? ಅಥವಾ ಒಡಂಬಡಿಕೆ ಯನ್ನು ಮುರಿದು ತಪ್ಪಿಸಿಕೊಳ್ಳಲಾಗುವದೋ?
16. ನಿಶ್ಚ ಯವಾಗಿ ಅವನಿಗೆ ಅರಸುತನವನ್ನು ಕೊಟ್ಟ ಅರಸನೂ ಅಂದರೆ ಯಾವನ ಪ್ರಮಾಣವನ್ನು ತಿರಸ್ಕರಿಸಿದನೋ ಯಾವನ ಒಡಂಬಡಿಕೆಯನ್ನು ವಿಾರಿದನೋ ಅವನು ಇರುವಲ್ಲಿಯೇ ಬಾಬೆಲಿನ ಮಧ್ಯದಲ್ಲಿ ನನ್ನ ಜೀವದಾಣೆ, ಇವನು ಸಾಯುವನು ಎಂದು ದೇವರಾದ ಕರ್ತನು ಹೇಳುತ್ತಾನೆ.
17. ಇಲ್ಲವೆ ಫರೋಹನೂ ಅವನ ಮಹಾ ಸೈನ್ಯವೂ ದೊಡ್ಡ ಪರಿವಾರವೂ ಬಂದು ಬಹಳ ಜನ ರನ್ನು ಕೊಲ್ಲುವದಕ್ಕೆ ದಿಬ್ಬಗಳನ್ನು ಕೋಟೆಗಳನ್ನೂ ಕಟ್ಟುವಾಗಲೂ ಅವನಿಗೆ ಯುದ್ಧದಲ್ಲಿ ಸಹಾಯ ಮಾಡುವದಿಲ್ಲ.
18. ಅವನು ಪ್ರಮಾಣವನ್ನು ತಿರಸ್ಕರಿಸಿ ಕೈಕೊಟ್ಟಾಗ್ಯೂ; ಇಗೋ, ಒಡಂಬಡಿಕೆಯನ್ನು ವಿಾರಿ ಇವುಗಳನ್ನೆಲ್ಲಾ ಮಾಡಿದ್ದ ರಿಂದ ತಪ್ಪಿಸಿಕೊಳ್ಳುವದಿಲ್ಲ.
19. ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಅವನು ತಿರಸ್ಕರಿಸಿದ ನನ್ನ ಪ್ರಮಾಣವನ್ನೂ ಅವನು ವಿಾರಿದ ಒಡಂಬಡಿಕೆಯನ್ನೂ ನನ್ನ ಜೀವ ದಾಣೆ ನಿಶ್ಚಯವಾಗಿ ಅವನ ತಲೆಯ ಮೇಲೆಯೇ ಮುಯ್ಯಿ ತೀರಿಸುವೆನು.
20. ನಾನು ಅವನ ಮೇಲೆ ನನ್ನ ಬಲೆಯನ್ನು ಬೀಸುತ್ತೇನೆ; ಆಗ ಅವನು ನನ್ನ ಉರ್ಲಿನಲ್ಲಿ ಸಿಕ್ಕಿಬೀಳುವನು; ನಾನು ಅವನನ್ನು ಬಾಬೆಲಿಗೆ ಒಯ್ದು ಅವನು ನನಗೆ ವಿರೋಧವಾಗಿ ಮಾಡಿರುವ ಅಪರಾಧದ ವಿಷಯದಲ್ಲಿ ನಾನು ಅವರೊಂದಿಗೆ ವಾದಿಸುವೆನು.
21. ಅವನ ಸೈನ್ಯಗಳೆಲ್ಲಾ ಚದರಿಸಲ್ಪಟ್ಟು ಓಡಿಹೋಗಿ ಅವನ ಸಂಗಡ ಕತ್ತಿಯಿಂದ ಬೀಳುವರು; ಉಳಿದವರು ಎಲ್ಲಾ ದಿಕ್ಕುಗಳಿಗೆ ಚದರಿಸ ಲ್ಪಡುವರು; ಆಗ ಕರ್ತನಾದ ನಾನೇ ಅದನ್ನು ಹೇಳಿ ದೆನೆಂದು ನಿಮಗೆ ತಿಳಿಯುವದು.
22. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇದ ಲ್ಲದೆ ನಾನು ಉನ್ನತವಾದ ದೇವದಾರಿನ ಎತ್ತರವಾದ ರೆಂಬೆಗಳನ್ನು ತೆಗೆದುಕೊಂಡು ಅದನ್ನು ನೆಡುವೆನು; ಎಳೆಯದಾದ ಒಂದನ್ನು ಕತ್ತರಿಸಿ ಎತ್ತರವಾದ ಪರ್ವತದ ಮೇಲೆ ನಾಟುವೆನು.
23. ಇಸ್ರಾಯೇಲಿನ ಉನ್ನತ ಪರ್ವತದಲ್ಲಿ ನಾನು ಅದನ್ನು ನೆಡುವೆನು; ಅದರ ಕೊಂಬೆಗಳು ಒಡೆದು ಫಲಫಲಿಸುವದು; ಘನವುಳ್ಳ ದೇವದಾರು ಆಗುವದು; ಪ್ರತಿಯೊಂದು ಪುಕ್ಕಗಳುಳ್ಳ ಪಕ್ಷಿಗಳು ಅದರ ಕೊಂಬೆಗಳ ನೆರಳಿನ ಕೆಳಗೆ ವಾಸ ಮಾಡುವವು; ಅದರಡಿಯಲ್ಲಿ ವಾಸಿಸುವವು.
24. ಕರ್ತ ನಾದ ನಾನು ಎತ್ತರವಾದ ಮರವನ್ನು ತಗ್ಗಿಸಿ, ತಗ್ಗಾ ದದ್ದನ್ನು ಎತ್ತರಪಡಿಸಿ (ಬೆಳಸಿ) ಹಸುರಾಗಿರುವದನ್ನು ಒಣಗಿಸಿ, ಒಣಗಿದ್ದನ್ನು ಚಿಗುರಿಸಿದ್ದೇನೆ ಎಂದು ಅರ ಣ್ಯದ ಸಕಲ ವೃಕ್ಷಗಳು ತಿಳಿಯುವವೆಂದು ಕರ್ತನಾದ ನಾನೇ ಮಾತನಾಡಿ ಅದನ್ನು ಮಾಡಿದ್ದೇನೆ.

Chapter 18

1. ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--
2. ತಂದೆಗಳು ಹುಳಿ ದ್ರಾಕ್ಷೆಗಳನ್ನು ತಿಂದರು ಮಕ್ಕಳ ಹಲ್ಲು ಉಳಿತು ಹೋಯಿತು ಎಂಬ ಗಾದೆಯನ್ನು ಇಸ್ರಾಯೇಲ್‌ ದೇಶದ ವಿಷಯವಾಗಿ ನೀವು ಉಪಯೋಗಿಸುವ ಇದರ ಅರ್ಥವೇನು?
3. ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ನನ್ನ ಜೀವದಾಣೆ, ನೀವು ಈ ಗಾದೆಯನ್ನು ಇಸ್ರಾಯೇಲಿನಲ್ಲಿ ಇನ್ನು ಹೇಳುವ ಸಂದರ್ಭವು ಇರುವದಿಲ್ಲ.
4. ಇಗೋ, ಎಲ್ಲಾ ಪ್ರಾಣಗಳು ನನ್ನವೇ; ತಂದೆಯ ಪ್ರಾಣವು ಹೇಗೋ ಹಾಗೆಯೇ ಮಗನ ಪ್ರಾಣವು ನನ್ನದೇ; ಪಾಪ ಮಾಡುವವನೇ ತಾನಾ ಗಿಯೇ ಸಾಯುವನು.
5. ಒಬ್ಬ ಮನುಷ್ಯನು ನೀತಿವಂತ ನಾಗಿದ್ದು, ನೀತಿಯನ್ನೂ ನ್ಯಾಯವನ್ನೂ ನಡಿಸಿ,
6. ಪರ್ವತಗಳ ಮೇಲೆ ತಿನ್ನದೆ, ಇಸ್ರಾಯೇಲಿನ ಮನೆ ತನದವರ ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತದೆ, ತನ್ನ ನೆರೆಯವನ ಹೆಂಡತಿಯನ್ನು ಕೆಡಿಸದೆ, ಮುಟ್ಟಾ ಗಿರುವ ಸ್ತ್ರೀ ಹತ್ತಿರ ಸವಿಾಪಿಸದೆ;
7. ಯಾರನ್ನೂ ಉಪದ್ರಪಡಿಸದೆ, ಸಾಲ ಮಾಡಿದವನ ಒತ್ತೆಯನ್ನು ಹಿಂದಕ್ಕೆ ಕೊಟ್ಟು, ಹಿಂಸಿಸಿ, ಸುಲಿಗೆ ಮಾಡದೆ, ಹಸಿದವನಿಗೆ ತನ್ನ ರೊಟ್ಟಿಯನ್ನು ಕೊಟ್ಟು ಮತ್ತು ಬೆತ್ತಲೆ ಯಿರುವವನಿಗೆ ಬಟ್ಟೆಯನ್ನು ಹೊದಿಸಿ,
8. ಬಡ್ಡಿಗೆ ಸಾಲ ಕೊಡದೆ, ಲಾಭವನ್ನು ತೆಗೆದುಕೊಳ್ಳದೆ, ಅನ್ಯಾಯ ದಿಂದ ತನ್ನ ಕೈಯನ್ನು ಹಿಂತೆಗೆದು ಒಬ್ಬರಿಗೊಬ್ಬರು ಸತ್ಯದ ನ್ಯಾಯವನ್ನು ನಡಿಸಿ,
9. ಸತ್ಯವನ್ನು ಮಾಡುವದ ಕ್ಕಾಗಿ ನನ್ನ ನಿಯಮಗಳಲ್ಲಿ ನಡೆದು, ನನ್ನ ನ್ಯಾಯಗಳನ್ನು ಕೈಕೊಂಡು ಸತ್ಯಪರನಾಗಿ ನಡೆದರೆ ಅವನು ನೀತಿ ವಂತನು ಮತ್ತು ನಿಶ್ಚಯವಾಗಿ ಬದುಕುವವನು ಎಂದು ದೇವರಾದ ಕರ್ತನು ಹೇಳಿದ್ದಾನೆ.
10. ಆದರೆ ಇಂತಹ ವನು ಪಡೆದ ಮಗನು ದರೋಡೆಕೋರನಾಗಿ ರಕ್ತವನ್ನು ಚೆಲ್ಲುವವನಾದರೆ ಇಂತಹ ಕೆಲಸಗಳನ್ನು ಮಾಡುತ್ತಾನೆ.
11. ಅಂತಹ ಕೆಲಸಗಳನ್ನು ಮಾಡಿದರೂ ಪರ್ವತಗಳ ಮೇಲೆ ತಿಂದು ತನ್ನ ನೆರೆಯವನ ಹೆಂಡತಿಯನ್ನು ಕೆಡಿಸಿ,
12. ಬಡವರನ್ನೂ ದರಿದ್ರರನ್ನೂ ಉಪದ್ರಗೊಳಿಸಿ, ಹಿಂಸಿಸಿ, ಸುಲಿಗೆ ಮಾಡಿ ಒತ್ತೆಗಳನ್ನು ಹಿಂದಕ್ಕೆ ಕೊಡದೆ, ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತಿ ಅಸಹ್ಯ ವಾದವುಗಳನ್ನು ಮಾಡಿ;
13. ಬಡ್ಡಿಗೆ ಕೊಟ್ಟು ಲಾಭ ತೆಗೆದುಕೊಂಡು ಅವನು ಬದುಕುವನೋ? ಅವನು ಬದುಕುವದಿಲ್ಲ, ಅವನು ಈ ಅಸಹ್ಯಗಳನ್ನೆಲ್ಲಾ ಮಾಡಿ ದ್ದಾನೆ; ಅವನು ನಿಶ್ಚಯವಾಗಿ ಸಾಯುವನು ಅವನ ರಕ್ತವು ಅವನ ಮೇಲೆಯೇ ಇರುವದು.
14. ಆಗ ಇಗೋ, ಅವನು ಮಗನನ್ನು ಪಡೆದ ಮೇಲೆ ತನ್ನ ತಂದೆ ಮಾಡಿದ ಪಾಪಗಳನ್ನೆಲ್ಲಾ ನೋಡಿ ಆಲೊಚಿಸಿ, ಅವುಗಳಂತೆ ಮಾಡದೆ;
15. ಪರ್ವತಗಳ ಮೇಲೆ ತಿನ್ನದೆ, ಇಸ್ರಾಯೇಲಿನ ಮನೆತನ ದವರ ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತದೆ, ತನ್ನ ನೆರೆಯವನ ಹೆಂಡತಿಯನ್ನು ಕೆಡಿಸದೆ,
16. ಇಲ್ಲವೆ ಯಾರಿಗೂ ತೊಂದರೆಪಡಿಸದೆ, ಒತ್ತೆಯನ್ನು ಹಿಡಿಯದೆ, ಇಲ್ಲವೆ ಹಿಂಸೆಯಿಂದ ಸುಲಿಗೆ ಮಾಡದೆ, ಹಸಿದವನಿಗೆ ತನ್ನ ರೊಟ್ಟಿಯನ್ನು ಕೊಟ್ಟು ಬೆತ್ತಲೆಯಾದವನಿಗೆ ವಸ್ತ್ರ ವನ್ನು ಹೊದಿಸಿ,
17. ಬಡವನ ಮೇಲೆ ಕೈಮಾಡದೆ, ಬಡ್ಡಿಯನ್ನೂ ಲಾಭವನ್ನು ತೆಗೆದುಕೊಳ್ಳದೆ, ನನ್ನ ನ್ಯಾಯ ಗಳನ್ನು ಮಾಡಿ ನಿಯಮಗಳಲ್ಲಿ ನಡೆದರೆ, ಅವನು ತನ್ನ ತಂದೆಯ ಅಕ್ರಮಗಳ ನಿಮಿತ್ತ ಸಾಯುವದಿಲ್ಲ ನಿಶ್ಚಯವಾಗಿ ಬದುಕುವನು.
18. ಆತನ ತಂದೆಯ ವಿಷಯವಾದರೋ ಅವನು ಬಹಳ ಬಲಾತ್ಕಾರ ಮಾಡಿ ದ್ದರಿಂದಲೂ ತನ್ನ ಸಹೋದರನನ್ನು ಹಿಂಸಿಸಿ ಸುಲಿಗೆ ಮಾಡಿದ್ದರಿಂದಲೂ ತನ್ನ ಜನರ ಮಧ್ಯದಲ್ಲಿ ಕೆಟ್ಟದನ್ನು ಮಾಡಿದ್ದರಿಂದಲೂ ಇಗೋ, ಅವನು ಅಕ್ರಮದಲಿ ಸಾಯುವನು.
19. ಆದಾಗ್ಯೂ ಇನ್ನೂ ನೀವು--ಮಗನು ತಂದೆಯ ಅಕ್ರಮವನ್ನು ಹೊರುವದಿಲ್ಲವೇ ಎಂದು ಹೇಳುವಿರಿ; ನಿಶ್ಚಯವಾಗಿ ಮಗನು ನ್ಯಾಯವನ್ನೂ ನೀತಿಯನ್ನೂ ಮಾಡಿ ನನ್ನ ನಿಯಮಗಳನ್ನೆಲ್ಲಾ ಕೈಕೊಂಡು ನಡೆದರೆ ಅವನು ನಿಶ್ಚಯವಾಗಿ ಬದುಕುವನು.
20. ಪಾಪ ಮಾಡುವ ಪ್ರಾಣವು ತಾನಾಗಿ ಸಾಯುವದು; ಮಗನು ತಂದೆಯ ಅಕ್ರಮವನ್ನು ಹೊರುವದಿಲ್ಲ. ತಂದೆಯು ಮಗನ ಅಕ್ರಮವನ್ನು ಹೊರುವದಿಲ್ಲ. ನೀತಿವಂತನ ನೀತಿಯು ಅವನ ಮೇಲೆಯೇ ಇರುವದು. ದುಷ್ಟನ ದುಷ್ಟತ್ವವು ಅವನ ಮೇಲೆಯೇ ಇರುವದು.
21. ಆದರೆ ದುಷ್ಟನು ತಾನು ಮಾಡಿದ ಪಾಪಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು ನನ್ನ ನಿಯಮಗಳನ್ನೆಲ್ಲಾ ಕೈಕೊಂಡು ನ್ಯಾಯವನ್ನೂ ನೀತಿಯನ್ನೂ ನಡೆಸಿದರೆ ಅವನು ಸಾಯದೆ ನಿಶ್ಚಯವಾಗಿ ಬದುಕುವನು.
22. ಅವನು ಮಾಡಿದ ಅಪರಾಧಗಳೆಲ್ಲಾ ಅವನಿಗೆ ವಿರುದ್ದವಾಗಿ ಜ್ಞಾಪಕಮಾಡಲ್ಪಡುವದಿಲ್ಲ; ಅವನು ಮಾಡಿದ ನೀತಿಯಿಂದಲೇ ಅವನು ಬದುಕುವನು.
23. ದುಷ್ಟನು ಸಾಯುವದರಲ್ಲಿ ನನಗೆ ಸ್ವಲ್ಪವಾದರೂ ಸಂತೋಷವಿ ರುವದೋ ಎಂದು ದೇವರಾದ ಕರ್ತನು ಹೇಳುತ್ತಾನೆ; ಅವನು ತನ್ನ ನಡತೆಗಳಿಂದ ಹಿಂತಿರುಗಿಕೊಂಡು ಬದು ಕಿದರೆ ನನಗೆ ಸಂತೋಷವಲ್ಲವೇ?
24. ಆದರೆ ನೀತಿ ವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡಿ ದುಷ್ಟನು ಮಾಡುವ ಎಲ್ಲಾ ಅಸಹ್ಯವಾದವುಗಳ ಹಾಗೆ ಮಾಡಿದರೆ ಅವನು ಬದುಕುವನೇ? ಅವನು ಮಾಡಿ ರುವ ಎಲ್ಲಾ ನೀತಿಯು ಜ್ಞಾಪಕಮಾಡಲ್ಪಡುವದಿಲ್ಲ; ಅವನು ಮಾಡಿರುವ ಅಪರಾಧದಿಂದಲೂ ಪಾಪ ದಿಂದಲೂ ಅವುಗಳಲ್ಲಿ ಸಾಯುವನು.
25. ಆದರೆ ನೀವು, ಕರ್ತನ ಮಾರ್ಗವು ಸರಿಯಲ್ಲ ಅನ್ನುತ್ತೀರಿ; ಓ ಇಸ್ರಾ ಯೇಲಿನ ಮನೆಯವರೇ, ಈಗ ಕೇಳಿರಿ, ನನ್ನ ಮಾರ್ಗವು ಸಮವಲ್ಲವೇ? ನಿಮ್ಮ ಮಾರ್ಗಗಳು ಸಮವಲ್ಲದವು ಗಳೇ.
26. ನೀತಿವಂತನು ತನ್ನ ನೀತಿಯನ್ನು ಬಿಟ್ಟು ತಿರುಗಿಕೊಂಡು ಅನ್ಯಾಯಮಾಡಿ ಇವುಗಳಲ್ಲಿ ಸತ್ತರೆ, ಅವನು ಮಾಡಿದ ಅನ್ಯಾಯದಿಂದಲೇ ಸಾಯುವನು.
27. ದುಷ್ಟನು ತನ್ನ ದುಷ್ಟತನವನ್ನು ಬಿಟ್ಟು ನ್ಯಾಯವನ್ನೂ ನೀತಿಯನ್ನೂ ಅನುಸರಿಸಿದರೆ ತನ್ನ ಪ್ರಾಣವನ್ನು ಉಳಿಸಿಕೊಂಡು ಬದುಕುವನು.
28. ತಾನು ಆಲೋಚಿಸಿ ತಾನು ಮಾಡುವ ಎಲ್ಲಾ ದುಷ್ಕೃತ್ಯಗಳನ್ನು ಬಿಟ್ಟು ತಿರುಗಿ ಕೊಳ್ಳುವದರಿಂದ ಸಾಯದೆ ನಿಶ್ಚಯವಾಗಿ ಬದುಕು ವನು.
29. ಆದರೆ ಇಸ್ರಾಯೇಲಿನ ಮನೆತನದವರು ಕರ್ತನ ಮಾರ್ಗ ಸಮವಲ್ಲ ಎನ್ನುತ್ತಾರೆ. ಇಸ್ರಾಯೇಲಿನ ಮನೆತನದವರೇ, ನನ್ನ ಮಾರ್ಗ ಸರಿಯಲ್ಲವೇ? ನಿಮ್ಮ ಮಾರ್ಗಗಳು ಸಮವಲ್ಲದವುಗಳೇ.
30. ಆದದರಿಂದ ಇಸ್ರಾಯೇಲಿನ ಮನೆತನದವರೇ, ನಿಮ್ಮ ನಿಮ್ಮ ಮಾರ್ಗಗಳ ಪ್ರಕಾರ ನ್ಯಾಯತೀರಿಸುವೆನಂದು ದೇವ ರಾದ ಕರ್ತನು ಹೇಳುತ್ತಾನೆ; ನಿಮ್ಮ ದುಷ್ಟತ್ವಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು ಪಶ್ಚಾತ್ತಾಪಪಡಿರಿ; ಆಗ ಅಕ್ರಮ ಗಳು ನಿಮ್ಮನ್ನು ಆಳುವದಿಲ್ಲ.
31. ನೀವು ಮಾಡುವ ದುಷ್ಟತ್ವಗಳನ್ನೆಲ್ಲಾ ನಿಮ್ಮಿಂದ ಬಿಟ್ಟುಬಿಡಿರಿ; ಹೊಸ ಹೃದಯವನ್ನೂ ಹೊಸ ಆತ್ಮವನ್ನೂ ನೀವು ಪಡಕೊಳ್ಳಿರಿ; ಯಾಕಂದರೆ ಓ ಇಸ್ರಾಯೇಲಿನ ಮನೆತನದವರೇ, ನೀವು ಸಾಯುವದೇಕೆ?
32. ಸಾಯುವವನ ಸಾವಿನಲ್ಲಿ ನನಗೆ ಸಂತೋಷವಿಲ್ಲವೆಂದು ದೇವರಾದ ಕರ್ತನು ಹೇಳುತ್ತಾನೆ; ಆದಕಾರಣ ತಿರುಗಿಕೊಂಡು ಬಾಳಿರಿ.

Chapter 19

1. ಇದಲ್ಲದೆ ನೀನು ಇಸ್ರಾಯೇಲಿನ ಪ್ರಧಾನ ವಿಷಯವಾಗಿ ಈ ಪ್ರಲಾಪ ವನ್ನೆತ್ತಿ
2. ಹೀಗೆ ಹೇಳು--ನಿನ್ನ ತಾಯಿ ಏನು? ಒಂದು ಸಿಂಹಿಣಿಯೇ, ಆಕೆ ಸಿಂಹಗಳ ಜೊತೆ ಮಲಗಿ ಪ್ರಾಯದ ಸಿಂಹಗಳ ಮಧ್ಯದಲ್ಲಿ ತನ್ನ ಮರಿಗಳನ್ನು ಸಾಕಿದಳು.
3. ತನ್ನ ಮರಿಗಳಲ್ಲಿ ಒಂದನ್ನು ಬೆಳೆಸಿದಳು; ಇದು ಪ್ರಾಯದ ಸಿಂಹವಾಯಿತು, ಇದು ಕೊಳ್ಳೆ ಹೊಡೆಯು ವದನ್ನು ಕಲಿತು ಮನುಷ್ಯರನ್ನು ನುಂಗಿಬಿಟ್ಟಿತು.
4. ಜನಾಂಗಗಳವರು ಅದರ ಸುದ್ದಿಯನ್ನು ಕೇಳಿದರು; ಅವರ ಹಳ್ಳದಲ್ಲಿ ಇದನ್ನು ಹಿಡಿದುಕೊಂಡರು, ಸಂಕೋ ಲೆಗಳಿಂದ ಬಂಧಿಸಿ ಐಗುಪ್ತದೇಶಕ್ಕೆ ತೆಗೆದುಕೊಂಡು ಹೋದರು.
5. ಆಗ ಅವಳು ಅದನ್ನು ನೋಡಿ ತನ್ನ ನಿರೀಕ್ಷೆ ಕೆಟ್ಟುಹೋಯಿತೆಂದು ಕಾದು ತನ್ನ ಮರಿಗಳಲ್ಲಿ ಮತ್ತೊಂದನ್ನು ತೆಗೆದುಕೊಂಡು ಅದನ್ನು ಪ್ರಾಯದ ಸಿಂಹವಾಗಿ ಮಾಡಿದಳು.
6. ಅದು ಸಿಂಹಗಳ ಮಧ್ಯೆ ತಿರುಗಾಡಿ ಪ್ರಾಯದ ಸಿಂಹವಾಗಿ ಕೊಳ್ಳೆ ಹೊಡೆ ಯುವದನ್ನು ಕಲಿತು ಮನುಷ್ಯರನ್ನು ನುಂಗಿಬಿಟ್ಟಿತು.
7. ಅವರ ಅರಮನೆಗಳನ್ನು ಹಾಳು ಮಾಡಿತು; ಅವರ ನಗರಗಳನ್ನೂ ನಾಶಮಾಡಿತು. ಅದರ ಗರ್ಜನೆಯ ಶಬ್ದದಿಂದಾಗಿ ದೇಶವೂ ಅದರ ಪರಿಪೂರ್ಣತೆಯೂ ಬೀಡಾಗಿದ್ದನ್ನು ಅದು ತಿಳಿದುಕೊಂಡಿತು.
8. ಆಗ ಜನಾಂಗಗಳು ಸುತ್ತಲಿನ ಪ್ರಾಂತ್ಯಗಳೊಳಗಿಂದ ಕೂಡಿ ಬಂದು ಅದಕ್ಕೆ ವಿರೋಧವಾಗಿ ನಿಂತು ಅದರ ಮೇಲೆ ಬಲೆಯನ್ನೊಡ್ಡಿದರು. ಆಗ ಅದು ಅವರ ಹಳ್ಳದಲ್ಲಿ ಸಿಕ್ಕಿ ಬಿದ್ದಿತು.
9. ಅದಕ್ಕೆ ಸಂಕೋಲೆಗಳನ್ನು ತೊಡಿಸಿ, ಕಾವಲಿರಿಸಿ, ಬಾಬೆಲಿನ ಅರಸನ ಬಳಿಗೆ ತೆಗೆದುಕೊಂಡು ಹೋದರು. ಅದರ ಶಬ್ದವು ಇನ್ನು ಮೇಲೆ ಇಸ್ರಾ ಯೇಲಿನ ಪರ್ವತಗಳ ಮೇಲೆ ಕೇಳಲ್ಪಡದ ಹಾಗೆ ಅದನ್ನು ದುರ್ಗದಲ್ಲಿರಿಸಿದರು.
10. ನಿನ್ನ ತಾಯಿ ನಿನ್ನ ರಕ್ತದಲ್ಲಿ ನೀರಿನ ಬಳಿ ನೆಟ್ಟ ದ್ರಾಕ್ಷೆಯ ಗಿಡದ ಹಾಗೆ ಇದ್ದಾಳೆ; ಅದು ನೀರಾವರಿ ಯಿಂದಲೂ ಫಲವುಳ್ಳದ್ದಾಗಿಯೂ ತುಂಬಾ ಕೊಂಬೆ ಗಳುಳ್ಳದ್ದಾಗಿಯೂ ಇದೆ.
11. ಆಳುವವರ ರಾಜದಂಡ ಗಳಿಗೆ ತಕ್ಕ ಬಲವುಳ್ಳ ಬಳ್ಳಿಗಳು ಅದರಲ್ಲಿವೆ; ಅದರ ಉದ್ದವು ಎಲ್ಲಾ ರೆಂಬೆಗಳಿಗಿಂತ ಹೆಚ್ಚಾಗಿವೆ; ಹಾಗೆಯೇ ಅದು ತನ್ನ ಎತ್ತರಕ್ಕೆ ಬಹು ಕೊಂಬೆಗಳ ಮಧ್ಯದಲ್ಲಿ ಉದ್ದವಾಗಿ ಕಾಣಬರುತ್ತಿದೆ.
12. ಆದರೆ ಅದು ರೋಷ ದಲ್ಲಿ ಕೀಳಲ್ಪಟ್ಟು ನೆಲಕ್ಕೆ ಹಾಕಲ್ಪಟ್ಟಿತು; ಮೂಡಣ ಗಾಳಿಯು ಅದರ ಫಲವನ್ನು ಒಣಗಿಸಿತು; ಬಲವಾದ ಬಳ್ಳಿಗಳು ಮುರಿಯಲ್ಪಟ್ಟು ಒಣಗಿ ಹೋದವು; ಬೆಂಕಿಯು ಅವುಗಳನ್ನು ಸುಟ್ಟುಹಾಕಿತು.
13. ಈಗ ಅದು ಅರಣ್ಯದಲ್ಲಿ ಒಣಗಿ ನೀರಿಲ್ಲದಂಥ ಪ್ರದೇಶದಲ್ಲಿ ನೆಡಲ್ಪಟ್ಟಿದೆ.
14. ಅದರ ಕೊಂಬೆಗಳ ಬಳ್ಳಿಗಳೊಳಗಿಂದ ಬೆಂಕಿಯು ಹೊರಟು ಅದರಲ್ಲಿ ಫಲವನ್ನು ತಿಂದು ಬಿಟ್ಟಿದೆ; ಅದರಲ್ಲಿ ಆಳುವದಕ್ಕೆ ರಾಜದಂಡಕ್ಕಾಗಿ ತಕ್ಕದಾದ ಬಲವುಳ್ಳ ಬಳ್ಳಿಯು ಈಗ ಇಲ್ಲ; ಇದು ಪ್ರಲಾಪವಾಗಿದೆ; ಪ್ರಲಾಪಕ್ಕಾಗಿಯೇ ಇದೆ.

Chapter 20

1. ಏಳನೆಯ ವರುಷದ ಐದನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಆದದ್ದೇನಂದರೆ-- ಇಸ್ರಾಯೇಲಿನ ಹಿರಿಯರಲ್ಲಿ ಕೆಲವರು ಕರ್ತನ ಬಳಿಗೆ ವಿಚಾರಣೆಗಾಗಿ ಬಂದು ನನ್ನ ಮುಂದೆ ಕುಳಿತು ಕೊಂಡರು.
2. ಆಮೇಲೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ,
3. ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಹಿರಿಯರ ಸಂಗಡ ಮಾತನಾಡಿ ಅವ ರಿಗೆ ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನನ್ನ ಬಳಿಗೆ ವಿಚಾರಣೆಗಾಗಿ ಬಂದಿರೋ? ನನ್ನ ಜೀವದಾಣೆ, ನಾನು ನಿಮ್ಮಿಂದ ವಿಚಾರಿಸಲ್ಪಡುವದಿಲ್ಲವೆಂದು ದೇವರಾದ ಕರ್ತನು ಹೇಳುತ್ತಾನೆ.
4. ಅವರಿಗೆ ನ್ಯಾಯತೀರಿಸುವಿಯೋ? ಮನುಷ್ಯಪುತ್ರನೇ, ನೀನು ಅವರಿಗೆ ನ್ಯಾಯತೀರಿಸು ವಿಯೋ? ಅವರ ತಂದೆಗಳ ಅಸಹ್ಯವಾದವುಗಳನ್ನು ಅವರಿಗೆ ತಿಳಿಸು.
5. ಅವರಿಗೆ ಹೇಳಬೇಕಾದದ್ದೇನಂದರೆ --ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಇಸ್ರಾಯೇಲನ್ನು ಆದುಕೊಂಡು ಯಾಕೋಬನ ಮನೆಯ ವಂಶದವರಿಗೆ ನನ್ನ ಕೈಯೆತ್ತಿ ಮತ್ತು ಐಗುಪ್ತ ದೇಶದಲ್ಲಿ ಅವರಿಗೆ ನನ್ನನ್ನು ತಿಳಿಯಪಡಿಸಿದ ದಿನದಲ್ಲಿ ನಾನು ಅವರಿಗೆ ನನ್ನ ಕೈಯೆತ್ತಿ ನಿಮ್ಮ ದೇವರಾದ ಕರ್ತನು ನಾನೇ ಎಂದು ಅವರಿಗೆ ಹೇಳಿದಾಗ,
6. ನಾನು ಅವರಿಗೆ ನನ್ನ ಕೈಯೆತ್ತಿ--ಐಗುಪ್ತ ದೇಶದಿಂದ ಹೊರಗೆ ತಂದು ಅವರಿಗೋಸ್ಕರ ನಾನೇ ನೋಡಿಕೊಂಡಂಥ ಹಾಲೂ ಜೇನೂ ಹರಿಯುವ ಕೀರ್ತಿಯುಳ್ಳ ಎಲ್ಲಾ ದೇಶಗಳಿಗೂ ಅವರನ್ನು ಆ ದಿವಸದಲ್ಲಿ ಕರೆತಂದೆನು.
7. ಆಮೇಲೆ ನಾನು ಅವರಿಗೆ ನಿಮ್ಮಲ್ಲಿ ಒಬ್ಬೊಬ್ಬನು ತಮ್ಮ ತಮ್ಮ ಕಣ್ಣುಗಳಿಗೆ ಅಸಹ್ಯವಾದವುಗಳನ್ನು ಬಿಸಾಡಿ. ಐಗುಪ್ತದ ವಿಗ್ರಹಗಳಿಂದ ನಿಮ್ಮನ್ನು ಅಶುದ್ಧಪಡಿಸಿ ಕೊಳ್ಳಬೇಡಿರಿ. ನಿಮ್ಮ ದೇವರಾದ ಕರ್ತನು ನಾನಾಗಿರು ವೆನು ಅಂದೆನು.
8. ಆದರೆ ಅವರು ನನಗೆ ವಿರುದ್ಧವಾಗಿ ತಿರುಗಿಬಿದ್ದರು; ನನಗೆ ಕಿವಿಗೊಡಲಿಲ್ಲ. ಅವರು ತಮ್ಮ ತಮ್ಮ ಕಣ್ಣುಗಳಿಗೆ ಅಸಹ್ಯವಾದವುಗಳನ್ನು ಬಿಸಾಡಲಿಲ್ಲ; ಅವರು ಐಗುಪ್ತದ ವಿಗ್ರಹಗಳನ್ನು ಬಿಡಲಿಲ್ಲ; ಆಗ ನಾನು ಅವರ ಮೇಲೆ ನನ್ನ ರೋಷವನ್ನು ಸುರಿಸಿ, ಐಗುಪ್ತದೇಶದಲ್ಲಿ ಅವರ ಮೇಲೆ ನನ್ನ ಕೋಪವನ್ನು ತೀರಿಸುವೆನೆಂದು ಹೇಳಿದೆನು.
9. ಆದರೆ ಅವರು ಯಾರ ಮಧ್ಯದಲ್ಲಿದ್ದರೋ ನಾನು ಯಾರ ಮುಂದೆ ಅವರನ್ನು ಐಗುಪ್ತದೇಶದಿಂದ ಹೊರಗೆ ತಂದು ನನ್ನನ್ನು ತಿಳಿಯ ಪಡಿಸಿದೆನೋ? ಆ ಅನ್ಯ ಜನಾಂಗಗಳ ಕಣ್ಣುಗಳ ಮುಂದೆ ನನ್ನ ಹೆಸರು ಅಪವಿತ್ರವಾಗದ ಹಾಗೆ ನನ್ನ ಹೆಸರಿಗೋಸ್ಕರವೇ ಈ ಕೆಲಸ ಮಾಡಿದೆನು;
10. ಆದದರಿಂದ ನಾನು ಅವರನ್ನು ಐಗುಪ್ತ ದೇಶದಿಂದ ಹೊರಗೆ ಕರತಂದು ಅರಣ್ಯದೊಳಗೆ ಅವರನ್ನು ಬರಮಾಡಿದೆನು.
11. ಯಾವ ಸಂಗತಿಗಳನ್ನು ಮಾಡಿದರೆ ಮನುಷ್ಯನು ಬದುಕುವನೋ? ಆ ನನ್ನ ನಿಯಮಗಳನ್ನು ಅವರಿಗೆ ಕೊಟ್ಟು ನನ್ನ ನ್ಯಾಯಗಳನ್ನು ಅವರಿಗೆ ತಿಳಿಸಿದೆನು.
12. ಇದಲ್ಲದೆ ಅವರನ್ನು ಪರಿಶುದ್ಧ ಮಾಡುವ ಕರ್ತನು ನಾನೇ ಎಂದು ಅವರು ತಿಳಿಯುವ ಹಾಗೆ ನನಗೂ ಅವರಿಗೂ ಗುರುತಾಗಿರುವದಕ್ಕೆ ನನ್ನ ಸಬ್ಬತ್‌ ದಿನಗಳನ್ನು ನಾನು ಅವರಿಗೆ ಕೊಟ್ಟೆನು.
13. ಆದರೆ ಇಸ್ರಾಯೇಲಿನ ಮನೆತನದವರು ಅರಣ್ಯದಲ್ಲಿಯೂ ನನಗೆ ವಿರುದ್ಧ ವಾಗಿ ತಿರುಗಿಬಿದ್ದರು; ಆಜ್ಞಾವಿಧಿಗಳನ್ನು ಅನುಸರಿಸುವ ಮನುಷ್ಯನು ಬದುಕುವನು. ಅವುಗಳಲ್ಲಿ ನಡೆಯದೆ ನನ್ನ ನ್ಯಾಯಗಳನ್ನು ಅಸಡ್ಡೆ ಮಾಡಿ ನನ್ನ ಸಬ್ಬತ್‌ ದಿನಗಳನ್ನು ಸಹ ಬಹಳವಾಗಿ ಅಪವಿತ್ರಪಡಿಸಿದರು; ಆಗ ನಾನು ಅವರ ಮೇಲೆ ನನ್ನ ರೋಷದಿಂದ ದಹಿಸಿಬಿಡುವೆನೆಂದು ಹೇಳಿದೆನು.
14. ಆದರೆ ನಾನು ಅವರನ್ನು ಯಾರ ಕಣ್ಣುಗಳ ಮುಂದೆ ಬರಮಾಡಿದೆನೋ ಆ ಅನ್ಯಜನಾಂಗಗಳ ದೃಷ್ಟಿಯಲ್ಲಿ ಅಪವಿತ್ರವಾಗದ ಹಾಗೆ ನನ್ನ ಹೆಸರಿಗಾಗಿಯೇ ಕೆಲಸ ಮಾಡಿದೆನು.
15. ಆದಾಗ್ಯೂ ಹಾಲೂ ಜೇನೂ ಹರಿಯುವಂಥ ದೇಶ ಗಳಿಗೆ ಕೀರ್ತಿಯಾಗಿರುವಂಥ ಆ ದೇಶದಲ್ಲಿ ಅವರನ್ನು ಸೇರಿಸುವದಿಲ್ಲವೆಂದು ಅರಣ್ಯದಲ್ಲಿ ಅವರಿಗೆ ನನ್ನ ಕೈ ಎತ್ತಿದೆನು.
16. ಅವರ ಹೃದಯವು ತಮ್ಮ ವಿಗ್ರಹಗಳಲ್ಲಿ ಆಸಕ್ತವಾಗಿ ನನ್ನ ನಿಯಮಗಳನ್ನು ಅನುಸರಿಸದೆ ನಿರಾಕರಿಸಿ ನಾನು ನೇಮಿಸಿದ ಸಬ್ಬತ್‌ ದಿನಗಳನ್ನು ಅಪವಿತ್ರ ಮಾಡಿದರು.
17. ಆದರೂ ಅವರನ್ನು ನಾನು ನಾಶಮಾಡದ ಹಾಗೆ ನನ್ನ ಕಣ್ಣು ಕನಿಕರಿಸಿತು; ನಾನು ಅವರನ್ನು ಅರಣ್ಯದಲ್ಲಿ ಸಂಪೂರ್ಣವಾಗಿ ಮುಗಿಸಿಬಿಡ ಲಿಲ್ಲ.
18. ಆದರೆ ನಾನು ಅರಣ್ಯದಲ್ಲಿ ಅವರ ಮಕ್ಕಳಿಗೆ ಹೇಳಿದ್ದೇನಂದರೆ--ನಿಮ್ಮ ತಂದೆಗಳ ನಿಯಮಗಳಲ್ಲಿ ನಡೆಯಬೇಡಿರಿ, ಅವರ ನ್ಯಾಯಗಳನ್ನು ಅನುಸರಿಸ ಬೇಡಿರಿ, ಅವರ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರ ಮಾಡಿಕೊಳ್ಳಬೇಡಿರಿ;
19. ನಾನೇ ಕರ್ತನೂ ನಿಮ್ಮ ದೇವರೂ ಆಗಿದ್ದೇನೆ ನನ್ನ ನಿಯಮಗಳಲ್ಲಿಯೇ ನಡೆ ಯಿರಿ ನ್ಯಾಯಗಳನ್ನು ಕೈಕೊಂಡು ಅವುಗಳನ್ನೇ ಮಾಡಿರಿ;
20. ನನ್ನ ಸಬ್ಬತ್ತುಗಳನ್ನು ಪರಿಶುದ್ಧಮಾಡಿರಿ ನಾನೇ ನಿಮ್ಮ ದೇವರಾದ ಕರ್ತನು ಎಂದು ಅವು ನಿಮಗೂ ನನಗೂ ನೀವು ತಿಳಿಯುವ ಹಾಗೆ ಗುರುತುಗಳಾಗಿರುವವು.
21. ಆದಾಗ್ಯೂ ಮಕ್ಕಳು ನನಗೆ ವಿರೋಧವಾಗಿ ತಿರುಗಿ ಬಿದ್ದರು; ಯಾವವುಗಳನ್ನು ಮನುಷ್ಯನು ಮಾಡಿದರೆ ಬದುಕುವನೋ ಆ ನನ್ನ ನಿಯಮಗಳಲ್ಲಿ ನಡೆಯಲಿಲ್ಲ ನನ್ನ ನ್ಯಾಯಗಳನ್ನು ಕೈಕೊಂಡುಮಾಡಲಿಲ್ಲ; ನನ್ನ ಸಬ್ಬತ್ತುಗಳನ್ನು ಅಪವಿತ್ರ ಪಡಿಸಿದಾಗ ಅವರ ಮೇಲೆ ನನ್ನ ರೋಷವನ್ನು ಸುರಿದುಬಿಡುವೆನೆಂದೂ ನನ್ನ ಕೋಪ ವನ್ನು ಅರಣ್ಯದಲ್ಲಿ ಅವರ ಮೇಲೆ ತೀರಿಸಿಬಿಡುವೆ ನೆಂದೂ ಹೇಳಿದೆನು.
22. ಆದಾಗ್ಯೂ ನಾನು ನನ್ನ ಕೈಯನ್ನು ಹಿಂತೆಗೆದು ನಾನು ಅವರನ್ನು ಯಾರ ಕಣ್ಣುಗಳ ಮುಂದೆ ಹೊರಗೆ ಬರಮಾಡಿದೆನೋ ಆ ಅನ್ಯಜನಾಂಗ ಗಳ ದೃಷ್ಟಿಯಲ್ಲಿ ನನ್ನ ಹೆಸರು ಅಪವಿತ್ರವಾಗದ ಹಾಗೆ ನನ್ನ ಹೆಸರಿಗೋಸ್ಕರವೇ ಕೆಲಸ ಮಾಡಿದೆನು.
23. ನಾನು ಅವರನ್ನು ಅನ್ಯಜನಾಂಗಗಳಲ್ಲಿ ಚದರಿಸುತ್ತೇನೆಂದೂ ದೇಶಗಳಲ್ಲಿ ಹರಡಿಸುತ್ತೇನೆಂದೂ ಅರಣ್ಯದಲ್ಲಿ ಅವರ ಮೇಲೆ ಕೈ ಎತ್ತಿದೆನು;
24. ಅವರು ನನ್ನ ನ್ಯಾಯಗಳಲ್ಲಿ ನಡೆಯದೆ, ನನ್ನ ನಿಯಮಗಳನ್ನು ಅಲಕ್ಷಿಸಿ ನನ್ನ ಸಬ್ಬತ್ತುಗಳನ್ನು ಅಪವಿತ್ರಪಡಿಸಿದರು; ತಮ್ಮ ಪಿತೃಗಳ ವಿಗ್ರಹಗಳ ಕಡೆಗೆ ಕಣ್ಣಿಟ್ಟಿದ್ದರು.
25. ಆದಕಾರಣ ನಾನು ಅವರಿಗೆ ಅಹಿತವಾದ ನಿಯಮಗಳನ್ನೂ ಅವರು ಬದುಕಬಾರದ ನ್ಯಾಯಗಳನ್ನೂ ಕೊಟ್ಟೆನು.
26. ನಾನೇ ಕರ್ತನೆಂದು ಅವರು ತಿಳಿಯುವ ಹಾಗೆ ಅವರು ತಮ್ಮ ಚೊಚ್ಚಲು ಮಕ್ಕಳನ್ನು ಬೆಂಕಿಗೆ ಆಹುತಿಮಾಡಿದ್ದರಿಂದ ಅವರು ಹಾಳಾಗಿ ಬಿದ್ದಿರುವಂತೆ ನಾನು ಅವರ ಅರ್ಪಣೆಗಳನ್ನು ಅಪವಿತ್ರಪಡಿಸಿದೆನು.
27. ಆದದರಿಂದ ಮನುಷ್ಯಪುತ್ರನೇ, ನೀನು ಇಸ್ರಾ ಯೇಲಿನ ಮನೆತನದವರ ಸಂಗಡ ಮಾತಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಅದೇನಂದರೆ, ನನಗೆ ವಿರುದ್ಧವಾಗಿ ಬಹಳ ಅಪರಾಧ ಮಾಡಿದ್ದರಲ್ಲಿ ನಿಮ್ಮ ಪಿತೃಗಳು ನನ್ನನ್ನು ದೂಷಿಸಿದರು.
28. ನಾನು ಕೈ ಎತ್ತಿ ಅವರಿಗೆ ಕೊಟ್ಟ ದೇಶದಲ್ಲಿ ನಾನು ಅವರನ್ನು ಬರಮಾಡಿದ ಮೇಲೆ ಅವರು ಎತ್ತರವಾದ ಎಲ್ಲಾ ಗುಡ್ಡಗಳನ್ನೂ ಗಾತ್ರವಾದ ಮರಗಳನ್ನೂ ನೋಡಿ ಅಲ್ಲಿ ತಮ್ಮ ಬಲಿಗಳನ್ನರ್ಪಿಸಿ ಅಲ್ಲಿ ರೇಗಿಸುವ ತಮ್ಮ ಕಾಣಿಕೆಗಳನ್ನರ್ಪಿಸಿ ಸುವಾಸನೆ ಗಳನ್ನಿಟ್ಟು ಪಾನದ್ರವ್ಯವನ್ನು ಸುರಿದರು.
29. ಆಗ ನಾನು ಅವರಿಗೆ ಹೇಳಿದ್ದೇನಂದರೆ--ನೀವು ಹೋಗುವ ಈ ಎತ್ತರವಾದ ಸ್ಥಳವು ಏನು? ಅದಕ್ಕೆ ಈ ದಿನದ ವರೆಗೂ ಬಾ--ಮಾ ಎಂದು ಕರೆಯುವರು.
30. ಆದದರಿಂದ ನೀನು ಇಸ್ರಾಯೇಲಿನ ಮನೆತನದವರಿಗೆ ಹೇಳಬೇಕಾ ದದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳು ತ್ತಾನೆ; ನಿಮ್ಮ ಪಿತೃಗಳ ಹಾಗೆ ನಿಮ್ಮನ್ನು ಅಪವಿತ್ರ ಪಡಿಸಿಕೊಳ್ಳುತ್ತೀರೋ? ಅವರ ಅಸಹ್ಯವಾದವುಗಳ ಪ್ರಕಾರ ವ್ಯಭಿಚಾರಮಾಡುತ್ತೀರೋ?
31. ನಿಮ್ಮ ದಾನ ಗಳನ್ನು ತರುವಾಗಲೂ ನಿಮ್ಮ ಕುಮಾರರನ್ನು ಬೆಂಕಿ ಯಿಂದ ದಾಟಿಸುವಾಗಲೂ ನೀವು ಇಂದಿನ ವರೆಗೂ ನಿಮ್ಮ ಎಲ್ಲಾ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರಪಡಿಸಿ ಕೊಳ್ಳುತ್ತೀರಿ; ಹೀಗಾದರೆ ನಾನು ನಿಮ್ಮಿಂದ ವಿಚಾರಿಸ ಲ್ಪಟ್ಟೆನೊ? ನನ್ನ ಜೀವದಾಣೆ ನಾನು ನಿಮ್ಮಿಂದ ವಿಚಾರಿಸ ಲ್ಪಡುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ;
32. ನಾವು ಅನ್ಯಜನಾಂಗಗಳ ಹಾಗೆಯೂ ದೇಶದಲ್ಲಿ ರುವ ಕುಟುಂಬಗಳ ಹಾಗೆಯೂ ಇದ್ದು ಮರಕ್ಕೂ ಕಲ್ಲಿಗೂ ಸೇವೆ ಮಾಡುತ್ತೇವೆಂದು ನಿಮ್ಮ ಮನಸ್ಸಿನಲ್ಲಿ ಹುಟ್ಟುವ ಯೋಚನೆಯು ಎಷ್ಟು ಮಾತ್ರಕ್ಕೂ ಆಗದು.
33. ದೇವರಾದ ಕರ್ತನು ಹೇಳುವದೇನಂದರೆ--ನನ್ನ ಜೀವದಾಣೆ, ನಿಶ್ಚಯವಾಗಿ ಬಲವಾದ ಕೈಯಿಂ ದಲೂ ಚಾಚಿದ ತೋಳಿನಿಂದಲೂ ಸುರಿಸಿದ ರೋಷ ದಿಂದಲೂ ನಾನು ನಿಮ್ಮ ಮೇಲೆ ಅಧಿಕಾರ ನಡಿಸು ತ್ತೇನೆ.
34. ಬಲವಾದ ಕೈಯಿಂದಲೂ ಚಾಚಿದ ತೋಳಿ ನಿಂದಲೂ ಸುರಿಸಿದ ರೋಷದಿಂದಲೂ ನಿಮ್ಮನ್ನು ಜನ ಗಳೊಳಗಿಂದ ಹೊರತಂದು ನೀವು ಚದರಿಹೋಗಿ ರುವ ದೇಶಗಳೊಳಗಿಂದ ನಿಮ್ಮನ್ನು ಒಂದಾಗಿ ಕೂಡಿಸಿ,
35. ನಿಮ್ಮನ್ನು ಜನಗಳಿರುವ ಅರಣ್ಯದೊಳಗೆ ತಂದು ನಾನು ನಿಮ್ಮೊಂದಿಗೆ ಅಲ್ಲಿ ಮುಖಾಮುಖಿಯಾಗಿ ವಾದಿಸುವೆನು.
36. ಇದೇ ರೀತಿ ನಾನು ನಿಮ್ಮ ಪಿತೃಗಳ ಸಂಗಡ ಐಗುಪ್ತ ದೇಶದ ಅರಣ್ಯದಲ್ಲಿ ವಾದಿಸಿದೆನು; ಈಗಲೂ ನಿಮ್ಮ ಸಂಗಡ ವಾದಿಸಿದೆನು ಎಂದು ದೇವ ರಾದ ಕರ್ತನು ಹೇಳುತ್ತಾನೆ.
37. ನಾನು ನಿಮ್ಮನ್ನು ಕೋಲಿನ ಕೆಳಗೆ ಹಾದುಹೋಗುವಂತೆ ಮಾಡಿ ಒಡಂಬ ಡಿಕೆಯ ಬಂಧನದಲ್ಲಿ ನಿಮ್ಮನ್ನು ಸೇರಿಸುತ್ತೇನೆ.
38. ಇದ ಲ್ಲದೆ ತಿರುಗಿಬಿದ್ದವರನ್ನೂ ನನಗೆ ವಿರೋಧವಾಗಿ ಅಪರಾಧಮಾಡಿದವರನ್ನೂ ನಿಮ್ಮೊಳಗಿಂದ ಶುದ್ಧಿ ಮಾಡುತ್ತೇನೆ. ಅವರು ತಂಗುವ ದೇಶದೊಳಗಿಂದ ಅವರನ್ನು ಹೊರಗೆ ತರುತ್ತೇನೆ. ಅವರು ಇಸ್ರಾಯೇಲ್‌ ದೇಶದೊಳಗೆ ಹೋಗದ ಹಾಗೆ ಮಾಡಿ ನಾನೇ ಕರ್ತ ನೆಂಬದನ್ನು ಅವರಿಗೆ ತಿಳಿಸುತ್ತೇನೆ.
39. ನಿಮ್ಮ ವಿಷಯ ವಾಗಿ ಓ ಇಸ್ರಾಯೇಲಿನ ಮನೆತನದವರೇ, ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನೀವು ನನಗೆ ಕಿವಿಗೊಡದಿದ್ದರೆ ಹೋಗಿ ಇನ್ನು ಮೇಲೆಯೂ ನಿಮ್ಮ ನಿಮ್ಮ ವಿಗ್ರಹಗಳನ್ನು ಸೇವಿಸಿರಿ; ಆದರೆ ನಿಮ್ಮ ದಾನಗ ಳಿಂದಲೂ ವಿಗ್ರಹಗಳಿಂದಲೂ ಇನ್ನು ಮೇಲೆ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಪಡಿಸಬೇಡಿರಿ.
40. ನನ್ನ ಪರಿಶುದ್ಧ ಪರ್ವತದಲ್ಲಿ ಅಂದರೆ ಇಸ್ರಾಯೇಲಿನ ಉನ್ನತ ಪರ್ವತದಲ್ಲಿಯೇ ಇಸ್ರಾಯೇಲಿನ ಮನೆತನ ದವರೆಲ್ಲರೂ ದೇಶದಲ್ಲಿರುವವರೆಲ್ಲರೂ ನನ್ನನ್ನು ಸೇವಿ ಸುವರು. ನಾನು ಅಲ್ಲಿ ಅವರಿಗೆ ಮೆಚ್ಚಿ ನಿಮ್ಮ ಎತ್ತುವ ಅರ್ಪಣೆಗಳನ್ನೂ ನಿಮ್ಮ ಕಾಣಿಕೆಗಳ ಪ್ರಥಮ ಫಲ ವನ್ನೂ ನಿಮ್ಮ ಎಲ್ಲಾ ಪರಿಶುದ್ಧ ಸಂಗತಿಗಳನ್ನೂ ಅಂಗೀಕರಿಸುವೆನು.
41. ನಾನು ನಿಮ್ಮನ್ನು ಜನರಿಂದ ಹೊರತಂದು ನೀವು ಚದರಿರುವ ದೇಶಗಳೊಳಗಿಂದ ನಿಮ್ಮನ್ನು ಕೂಡಿಸುವಾಗ ನಿಮ್ಮ ಸುವಾಸನೆಯ ಸಂಗಡ ನಾನು ನಿಮ್ಮನ್ನು ಅಂಗೀಕರಿಸುವೆನು, ನಾನು ಅನ್ಯ ಜನಾಂಗಗಳ ಮುಂದೆ ನಿಮ್ಮಲ್ಲಿ ಪರಿಶುದ್ಧವೆನಿಸಿಕೊಳ್ಳು ವೆನು.
42. ಆಗ ನಾನು ನಿಮ್ಮ ಮೇಲೆ ಇಸ್ರಾಯೇಲ್‌ ದೇಶದಲ್ಲಿ ನನ್ನ ಕೈಯೆತ್ತಿ ನಿಮ್ಮ ಪಿತೃಗಳಿಗೆ ಕೊಟ್ಟ ದೇಶದಿಂದ ನಿಮ್ಮನ್ನು ಕರೆದುಕೊಂಡು ಬರುವಾಗ ನಾನೇ ಕರ್ತನೆಂದು ತಿಳಿದುಕೊಳ್ಳುವಿರಿ.
43. ಅಲ್ಲಿ ನೀವು ನಿಮ್ಮ ಮಾರ್ಗಗಳನ್ನು ಬಿಟ್ಟು ನೀವು ಯಾವ ಸಂಗತಿ ಗಳಿಂದ ಅಶುದ್ಧವಾಗಿದ್ದಿರೋ ಆ ನಿಮ್ಮ ಕ್ರಿಯೆಗಳನ್ನೆಲ್ಲಾ ಜ್ಞಾಪಕಮಾಡಿಕೊಳ್ಳುವಿರಿ; ನೀವು ಮಾಡಿದ ನಿಮ್ಮ ಎಲ್ಲಾ ಕೆಟ್ಟತನದ ನಿಮಿತ್ತವಾಗಿ ನಿಮ್ಮ ಸ್ವಂತ ದೃಷ್ಟಿ ಯಲ್ಲಿಯೇ ನೀವು ಅಸಹ್ಯರಾಗುವಿರಿ.
44. ಇದಲ್ಲದೆ ಇಸ್ರಾಯೇಲಿನ ಮನೆತನದವರೇ, ನಿಮ್ಮ ದುರ್ಮಾರ್ಗ ಗಳ ಪ್ರಕಾರವಲ್ಲ, ನಿಮ್ಮ ದುಷ್ಕ್ರಿಯೆಗಳ ಪ್ರಕಾರವಲ್ಲ, ನನ್ನ ಹೆಸರಿಗೋಸ್ಕರವೇ ನಿಮಗೆ ಮಾಡಿದಾಗ ನಾನೇ ಕರ್ತನೆಂದು ತಿಳಿದುಕೊಳ್ಳುವಿರಿ ಎಂದು ದೇವರಾದ ಕರ್ತನು ಹೇಳುತ್ತಾನೆ.
45. ಇದಲ್ಲದೆ ಕರ್ತನ ವಾಕ್ಯವು ಬಂದು ನನಗೆ ಹೇಳಿದ್ದೇನಂದರೆ--
46. ಮನುಷ್ಯಪುತ್ರನೇ, ದಕ್ಷಿಣದ ಕಡೆಗೆ ಮುಖಮಾಡಿ ತೆಂಕಣದ ಕಡೆಗೆ ಮಾತ ನಾಡು; ದಕ್ಷಿಣ ಬಯಲು ಅರಣ್ಯಕ್ಕೆ ವಿರೋಧವಾಗಿ ಪ್ರವಾದಿಸು.
47. ದಕ್ಷಿಣದ ಅರಣ್ಯಕ್ಕೆ ಹೇಳಬೇಕಾದ ದ್ದೇನಂದರೆ--ಕರ್ತನ ವಾಕ್ಯವನ್ನು ಕೇಳು, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನಲ್ಲಿ ಬೆಂಕಿ ಹಚ್ಚುತ್ತೇನೆ; ಅದು ನಿನ್ನಲ್ಲಿರುವ ಎಲ್ಲಾ ಹಸೀ ಮರಗಳನ್ನು ಮತ್ತು ಎಲ್ಲಾ ಒಣಮರಗಳನ್ನು ತಿಂದುಬಿಡುವದು; ಉರಿಯುವ ಉರಿ ಆರಿಹೋಗು ವದಿಲ್ಲ; ದಕ್ಷಿಣ ಮೊದಲುಗೊಂಡು ಉತ್ತರದ ವರೆಗೂ ಎಲ್ಲಾ ಮುಖಗಳು ಅದರಲ್ಲಿ ಸುಟ್ಟು ಹೋಗುವವು.
48. ಕರ್ತನಾದ ನಾನೇ ಅದನ್ನು ಹಚ್ಚಿದೆನೆಂದು ಶರೀರ ದಲ್ಲಿರುವವರೆಲ್ಲರೂ ತಿಳಿದುಕೊಳ್ಳುವರು! ಅದು ಆರಿ ಹೋಗುವ ದಿಲ್ಲ.
49. ಆಗ ನಾನು ಹೇಳಿದ್ದೇನಂದರೆ --ಹಾ, ದೇವರಾದ ಕರ್ತನೇ, ಅವನು ಸಾಮ್ಯಗಳನ್ನು ಹೇಳುವದಿಲ್ಲವೇ ಎಂದು ನನ್ನ ವಿಷಯವಾಗಿ ಹೇಳುತ್ತಾರೆ.

Chapter 21

1. ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
2. ಮನುಷ್ಯಪುತ್ರನೇ, ನೀನು ಯೆರೂಸಲೇಮಿಗೆ ಅಭಿಮುಖನಾಗಿ ಅಲ್ಲಿನ ಪರಿಶುದ್ಧ ಸ್ಥಳಗಳ ಕಡೆಗೆ ಮಾತನಾಡುತ್ತಾ ಇಸ್ರಾ ಯೇಲ್‌ ದೇಶಕ್ಕೆ ವಿರುದ್ಧವಾಗಿ ಪ್ರವಾದಿಸು.
3. ಇಸ್ರಾ ಯೇಲ್‌ ದೇಶಕ್ಕೆ ಹೇಳಬೇಕಾದದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ; ಇಗೋ, ನಾನು ನಿಮಗೆ ವಿರೋಧವಾಗಿದ್ದೇನೆ ಮತ್ತು ನನ್ನ ಕತ್ತಿಯನ್ನು ಅದರ ಒರೆಯಿಂದ ಹೊರಗೆ ತೆಗೆದು ನಿನ್ನೊಳಗಿರುವ ನೀತಿ ವಂತನನ್ನೂ ದುಷ್ಟನನ್ನೂ ಕಡಿದುಬಿಡುವೆನು.
4. ನಾನು ನೀತಿವಂತನನ್ನೂ ದುಷ್ಟನನ್ನೂ ಕಡಿದು ಬಿಡುವದರಿಂದ ನನ್ನ ಕತ್ತಿಯು ದಕ್ಷಿಣದಿಂದ ಮೊದಲುಗೊಂಡು ಉತ್ತ ರದ ಮನುಷ್ಯರೆಲ್ಲರಿಗೆ ವಿರೋಧವಾಗಿ ಅದರ ಒರೆ ಯನ್ನು ಬಿಟ್ಟು ಹೋಗುವದು.
5. ಆಗ ಕರ್ತನಾದ ನಾನೇ ನನ್ನ ಕತ್ತಿಯನ್ನು ಹೊರಗೆ ತೆಗೆದೆನೆಂದು ಮನುಷ್ಯ ರೆಲ್ಲರಿಗೂ ತಿಳಿಯುವದು; ಅದು ಮತ್ತೆ ತಿರುಗಿ ಬರು ವದೇ ಇಲ್ಲ.
6. ಆದದರಿಂದ ಮನುಷ್ಯಪುತ್ರನೇ, ನಿನ್ನ ನಡು ಮುರಿದಂತೆ ನಿಟ್ಟುಸಿರಿಡು, ಕಹಿಯಾದ ಮನಸ್ಸಿ ನಿಂದ ಅವರ ಕಣ್ಣುಗಳ ಮುಂದೆಯೇ ನಿಟ್ಟುಸಿರಿಡು.
7. ನೀನು ಯಾಕೆ ನಿಟ್ಟುಸಿರಿಡುತ್ತೀ ಎಂದು ಅವರು ನಿನಗೆ ಕೇಳಿದಾಗ ನೀನು ಹೇಳಬೇಕಾದದ್ದೇನಂದರೆ -- ಆ ಸುದ್ದಿಯ ನಿಮಿತ್ತವೇ ಅದು ಬರುವದು; ಯಾಕಂದರೆ ಆಗ ಹೃದಯಗಳೆಲ್ಲಾ ಕರಗುವವು; ಕೈಗಳೆಲ್ಲಾ ನಿತ್ರಾಣ ವಾಗುವವು, ಪ್ರತಿಯೊಂದು ಆತ್ಮವು ಕುಂದಿ ಹೋಗು ವದು, ಮತ್ತು ಎಲ್ಲಾ ಮೊಣಕಾಲುಗಳು ನೀರಿನ ಹಾಗೆ ನಿತ್ರಾಣಗೊಳ್ಳುವವು; ಇಗೋ, ಅದು ಬರುತ್ತದೆ, ತರಲ್ಪಡುತ್ತದೆ ಎಂದು ದೇವರಾದ ಕರ್ತನು ಹೇಳುತ್ತಾನೆ.
8. ಇದಲ್ಲದೆ ಮತ್ತೆ ಕರ್ತನ ವಾಕ್ಯವು ಬಂದು ನನಗೆ ಹೇಳಿದ್ದೇನಂದರೆ--
9. ಮನುಷ್ಯಪುತ್ರನೇ, ಪ್ರವಾದಿಸು ಮತ್ತು ಹೇಳು--ಕರ್ತನು ಹೀಗೆ ಹೇಳುವನೆಂದು ಹೇಳು--ಕತ್ತಿಯು, ಆ ಒಂದು ಕತ್ತಿಯು ಹದಮಾಡ ಲ್ಪಟ್ಟಿದೆ; ಮೆರುಗು ಸಹ ಮಾಡಲ್ಪಟ್ಟಿದೆ;
10. ಅದು ಕೊಂದೇ ಕೊಲ್ಲುವ ಹಾಗೆ ಹದಮಾಡಲ್ಪಟ್ಟಿದೆ; ಥಳಥಳಿಸುವ ಹಾಗೆ ಮಸೆಯಲ್ಪಟ್ಟಿದೆ; ಹಾಗಾದರೆ ನಾವು ಸಂತೋಷಪಡಬಹುದೋ? ನನ್ನ ಮಗನ ಕೋಲು ಪ್ರತಿಯೊಂದು ಮರವನ್ನು ತಿರಸ್ಕಾರ ಮಾಡು ತ್ತದೆ.
11. ಕೈಗೆ ಸಿದ್ದವಾಗುವಂತೆ ಅವನು ಅದನ್ನು ಮಸೆಯುವದಕ್ಕೆ ಕೊಟ್ಟಿದ್ದಾನೆ; ಕೊಲ್ಲುವವನ ಕೈಗೆ ಕೊಡುವ ಹಾಗೆ ಆ ಕತ್ತಿಗೆ ಹದವನ್ನೂ ಸಾಣೆಯನ್ನೂ ಮಾಡಲಾಗಿದೆ.
12. ಮನುಷ್ಯಪುತ್ರನೇ, ಕೂಗು ಮತ್ತು ಗೋಳಾಡು; ಇದು ನನ್ನ ಜನರ ಮೇಲೆಯೂ ಇಸ್ರಾಯೇಲಿನ ಎಲ್ಲಾ ಅಧಿಪತಿಗಳ ಮೇಲೆಯೂ ಇರುವದು; ಕತ್ತಿಯ ಮುಖಾಂತರ ಅಂಜಿಕೆಯು ನನ್ನ ಜನರ ಮೇಲೆ ಬರುವದು. ಆದದರಿಂದ ತೊಡೆಯನ್ನು ಬಡಿದುಕೋ.
13. ಇದು ಒಂದು ಶೋಧನೆ; ಕತ್ತಿಯು ತಿರಸ್ಕರಿಸಲ್ಪಟ್ಟಿದ್ದೇ; ಕೋಲು ಸಹ ತಿರಸ್ಕಾರವಾದರೆ ಗತಿಯೇನು? ಅದು ಇನ್ನು ಆಗದು ಎಂದು ದೇವರಾದ ಕರ್ತನು ಹೇಳುತ್ತಾನೆ.
14. ಆದದರಿಂದ ಮನುಷ್ಯ ಪುತ್ರನೇ ನೀನು ಚಪ್ಪಾಳೆ ತಟ್ಟಿ ಪ್ರವಾದಿಸು; ಹತ ರಾದವರ ಕತ್ತಿಯು ಮೂರನೆಯ ಸಾರಿಯೂ ಎರಡ ರಷ್ಟು ಮಾಡಲಿ; ಅದು ತಮ್ಮ ರಹಸ್ಯ ಕೋಣೆಗಳಲ್ಲಿ ಪ್ರವೇಶಿಸಿ ಮಹಾ ಪ್ರಜೆಗಳನ್ನು ಸಂಹರಿಸಿದ ಕತ್ತಿಯೇ.
15. ಅವರ ಹೃದಯವು ಕುಂದುವ ಹಾಗೆಯೂ ಅವರ ಎಲ್ಲಾ ಬಾಗಿಲುಗಳಲ್ಲಿ ಬೀಳೋಣವು ಹೆಚ್ಚಾಗುವ ಹಾಗೆಯೂ ಕತ್ತಿಯ ಮೊನೆಯನ್ನಿಟ್ಟಿದ್ದೇನೆ; ಹಾ, ಅದು ಥಳಥಳಿಸುತ್ತಿದೆ, ಕೊಲೆ ಮಾಡುವದಕ್ಕೆ ಮಸಿಯಲ್ಪಟ್ಟಿದೆ.
16. ನೀನು ಯಾವ ಕಡೆಗಾದರೂ ಹೋಗು ಎಡಗಡೆ ಅಥವಾ ಬಲಗಡೆ ನೀನು ನಿನ್ನ ಮುಖವು ಇರುವ ಕಡೆಗೆ ಹೋಗು.
17. ನಾನು ಸಹ ಕೈತಟ್ಟಿ ನನ್ನ ರೋಷವನ್ನು ತೀರಿಸಿಕೊಳ್ಳುವೆನು ಎಂದು ಕರ್ತನಾದ ನಾನು ಹೇಳಿದ್ದೇನೆ.
18. ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇ ನಂದರೆ--
19. ಮನುಷ್ಯಪುತ್ರನೇ, ಬಾಬೆಲಿನ ಅರಸನ ಕತ್ತಿಯು ಬರುವ ಹಾಗೆ ನೀನು ಎರಡು ಮಾರ್ಗಗ ಳನ್ನು ನೇಮಿಸಿಕೋ; ಅವೆರಡೂ ಒಂದೇ ದೇಶದಿಂದ ಹೊರಡಬೇಕು; ಇದರಲ್ಲಿ ಒಂದು ಸ್ಥಳವನ್ನು ಆರಿ ಸಿಕೋ, ಅದು ಪಟ್ಟಣದ ಮಾರ್ಗದ ಪ್ರಾರಂಭದಲ್ಲಿ ಆರಿಸಿಕೋ.
20. ಅಮ್ಮೋನ್ಯರ ರಬ್ಬಾ ಎಂಬ ಕೋಟೆ ಯುಳ್ಳ ಯೆರೂಸಲೇಮಿನಲ್ಲಿರುವ ಯೆಹೂದಕ್ಕೂ ಕತ್ತಿ ಬರುವ ಹಾಗೆ ಮಾರ್ಗವನ್ನು ನೇಮಿಸಿಕೋ.
21. ಬಾಬೆಲಿನ ಅರಸನು ಮಾರ್ಗವು ಒಡೆಯುವ ಸ್ಥಳದಲ್ಲಿ (ಎರಡು ದಾರಿಯ ಮಗ್ಗುಲಲ್ಲಿ) ಶಕುನವನ್ನು ನೋಡುವದಕ್ಕೆ ನಿಂತಿದ್ದಾನೆ; ಬಾಣಗಳನ್ನು ಅಲ್ಲಾಡಿಸಿ ದನು; ಮೂರ್ತಿಗಳ ಹತ್ತಿರ ವಿಚಾರಿಸಿದನು. ಪಿತ್ತ ಚೀಲವನ್ನು ನೋಡಿದನು.
22. ಅವನು ಬಲಗೈಯಲ್ಲಿ ಯೆರೂಸಲೇಮಿಗಾದ ಶಕುನವು ಇತ್ತು. ಬಡಿಯುವ ಆಯುಧಗಳನ್ನಿಟ್ಟು ಬಾಯಿಬಿಟ್ಟು ಸಂಹಾರ ಧ್ವನಿಗೈದು ಆರ್ಭಟದಿಂದ ಬಾಗಿಲುಗಳ ಎದುರಾಗಿ ಬಡಿಯುವ ಆಯುಧಗಳನ್ನಿಟ್ಟು ಮೊಹರ್ಚೆಯನ್ನು ಹಾಕಿ ಕೋಟೆ ಯನ್ನು ಕಟ್ಟಿದ್ದು ಸೂಚನೆಯಾಗಿದೆ.
23. ಅದು ಅವರಿಗೆ ಸುಳ್ಳು ಶಕುನದ ಹಾಗೆ ಕಾಣುವದು; ಆಣೆಯಿಟ್ಟು ಮಾಡಿದ ಪ್ರಮಾಣಗಳು ಅವರ ಮೇಲೆ ಉಂಟಾಗು ವವು; ಆದರೆ ಅವರು ಹಿಡಿಯಲ್ಪಡುವ ಹಾಗೆ ಅಕ್ರಮವನ್ನು ಜ್ಞಾಪಕಪಡಿಸುವರು.
24. ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮ ದ್ರೋಹಗಳು ಪ್ರಕಟವಾಗಿ ನಿಮ್ಮ ಕೆಲಸಗಳಲ್ಲೆಲ್ಲಾ ನಿಮ್ಮ ಪಾಪಗಳು ಕಾಣುವ ಹಾಗೆ ನೀವು ನಿಮ್ಮ ಅಕ್ರಮಗಳನ್ನು ಜ್ಞಾಪಕಕ್ಕೆ ತಂದದ್ದರಿಂದ ನೀವು ಕೈಯಲ್ಲಿ ಹಿಡಿಯಲ್ಪಡುವಿರಿ.
25. ದುಷ್ಟನಾದ ಭ್ರಷ್ಟ ಇಸ್ರಾಯೇಲನ ಪ್ರಭುವೇ, ನೀನು ಮಾಡಿದ ಅಕ್ರಮಗಳಿಂದ ನಿನಗೆ ಅಂತ್ಯ ದಿವಸವು ಬಂದಿತು.
26. ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ಮುಂಡಾಸವನ್ನು ಎತ್ತಿಡು, ಕಿರೀಟವನ್ನು ತೆಗೆದುಹಾಕು; ಅದು ಹಾಗೆಯೇ ಇರುವದಿಲ್ಲ; ತಗ್ಗಿಸಲ್ಪಟ್ಟವನನ್ನು ಹೆಚ್ಚಿಸಿ ಹೆಚ್ಚಿಸಲ್ಪಟ್ಟವನನ್ನು ತಗ್ಗಿಸು.
27. ನಾನು ತಳ್ಳಿಬಿಡು ವೆನು, ತಳ್ಳಿಬಿಡುವೆನು, ಅದನ್ನು ತಳ್ಳಿಬಿಡುವೆನು; ನ್ಯಾಯ ಯಾರದು? ಅವನು ಬರುವ ವರೆಗೂ ಇದು ಇರುವದಿಲ್ಲ; ನಾನು ಅವನಿಗೆ ಇದನ್ನು ಕೊಟ್ಟು ಬಿಡುತ್ತೇನೆ.
28. ಮನುಷ್ಯಪುತ್ರನೇ, ನೀನು ಪ್ರವಾದಿಸಿ ಹೇಳ ಬೇಕಾದದ್ದೇನಂದರೆ--ದೇವರಾದ ಕರ್ತನು ಅಮ್ಮೋನಿ ಯರ ವಿಷಯವಾಗಿಯೂ ಅವರ ನಿಂದೆಯ ವಿಷಯವಾಗಿಯೂ ಹೀಗೆ ಹೇಳುತ್ತಾನೆ--ಹೌದು, ನೀನು ಹೀಗೆ ಹೇಳು, ಹಿರಿದ ಕತ್ತಿಯು ಥಳಥಳಿಸುವದ ರಿಂದ ಸಂಹರಿಸುವದಕ್ಕೆ ಹಿಡಿದಿದೆ; ಮಿಂಚುವಂತೆ ಬಹಳವಾಗಿ ಮಸೆದಿದೆ.
29. ನಿನ್ನ ಜೋಯಿಸರು ವ್ಯರ್ಥವಾದದ್ದನ್ನು ನೋಡಿ ಸಾಕ್ಷಾತ್ಕರಿಸಿ ಸುಳ್ಳಾಗಿ ಶಕುನ ಹೇಳುತ್ತಿದ್ದಾರೆ, ಹೀಗೆ ನಿನ್ನನ್ನು ಹತವಾದ ದುಷ್ಟರ ಕುತ್ತಿಗೆಗಳ ಮೇಲೆ ತಂದಿದ್ದಾರೆ. ಅವರ ಅಂತ್ಯದಿನವು ಬಂದಿದೆ; ಅದೇ ಅವರ ಅಕ್ರಮಗಳಿಗೆ ಅಂತ್ಯವಾಗಿದೆ.
30. ಅದನ್ನು ನಾನು ಮತ್ತೆ ಒರೆಗೆ ಸೇರಿಸುವೆನೋ? ನೀನು ನಿರ್ಮಿಸಲ್ಪಟ್ಟ ಸ್ಥಳದಲ್ಲಿಯೇ ನೀನು ಹುಟ್ಟಿದ ಸ್ಥಳದಲ್ಲಿಯೇ ನಿನಗೆ ನ್ಯಾಯತೀರಿಸುವೆನು.
31. ನನ್ನ ಕ್ರೋಧವನ್ನು ನಿನ್ನ ಮೇಲೆ ಸುರಿಸುವೆನು. ನನ್ನ ಉಗ್ರದ ಬೆಂಕಿಯನ್ನು ನಿನ್ನ ಮೇಲೆ ಊದಿ ನಾಶಪಡಿಸುವದರಲ್ಲಿ ಗಟ್ಟಿಗರಾದಂಥ ಕ್ರೂರ ಜನರ ಕೈಗೆ ನಿನ್ನನ್ನು ಒಪ್ಪಿಸು ವೆನು.
32. ನೀನು ಅಗ್ನಿಗೆ ಆಹುತಿಯಾಗುವ ಸೌದೆಯಾ ಗುವಿ, ನಿನ್ನ ರಕ್ತವು ದೇಶದ ಮಧ್ಯದಲ್ಲೆಲ್ಲಾ ಇರುವದು; ನೀನು ಇನ್ನು ಮೇಲೆ ಜ್ಞಾಪಕಕ್ಕೆ ಬರುವದಿಲ್ಲವೆಂದು ಕರ್ತನಾದ ನಾನೇ ಹೇಳಿದ್ದೇನೆ.

Chapter 22

1. ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
2. ಈಗ ಮನುಷ್ಯ ಪುತ್ರನೇ, ನೀನು ನ್ಯಾಯತೀರಿಸುವೆಯಾ? ರಕ್ತಾಪರಾಧ ವುಳ್ಳ ಪಟ್ಟಣಕ್ಕೆ ನ್ಯಾಯತೀರಿಸುವೆಯಾ ಹೌದು ಅದರ ಅಸಹ್ಯವಾದವುಗಳನ್ನೆಲ್ಲಾ ಅದಕ್ಕೆ ತಿಳಿಸುವಿ.
3. ನೀನು ಹೇಳಬೇಕಾದದ್ದೇನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಪಟ್ಟಣವು ಅದರ ಮಧ್ಯದಲ್ಲಿ ಅದರ ಕಾಲ ಬರುವ ಹಾಗೆ ರಕ್ತವನ್ನು ಚೆಲ್ಲುತ್ತದೆ. ತನ್ನನ್ನು ಅಶುದ್ಧ ಮಾಡುವ ಹಾಗೆ ತನ್ನಲ್ಲಿ ವಿಗ್ರಹಗಳನ್ನು ಮಾಡಿಕೊಂಡಿದೆ.
4. ನೀನು ಚೆಲ್ಲಿದ ನಿನ್ನ ರಕ್ತದಿಂದ ನಿನಗೆ ಅಪರಾಧ ಬಂದಿತು; ನೀನು ಮಾಡಿದ ನಿನ್ನ ವಿಗ್ರಹಗಳಿಂದ ನೀನು ಅಶುದ್ಧವಾದೆ; ನಿನ್ನ ದಿನಗಳನ್ನು ಸವಿಾಪಿಸಿರುವೆ; ನಿನ್ನ ವರುಷಗಳನ್ನು ಮುಟ್ಟಿರುವೆ. ಆದದರಿಂದ ನಿನ್ನನ್ನು ಅನ್ಯಜನಾಂಗಗಳಿಗೆ ನಾಚಿಕೆ ಯಾಗಿಯೂ ಎಲ್ಲಾ ದೇಶಗಳಿಗೆ ನಿಂದೆಯಾಗಿಯೂ ಮಾಡಿದ್ದೇನೆ.
5. ಅಶುದ್ಧ ಹೆಸರುಳ್ಳವಳೇ, ಬಹಳ ತೊಂದರೆಗೊಳಗಾದವಳೇ, ನಿನಗೆ ಹತ್ತಿರದವರೂ ದೂರದವರೂ ನಿಂದಿಸುವರು.
6. ಇಗೋ ಇಸ್ರಾ ಯೇಲಿನ ಪ್ರಭುಗಳಲ್ಲಿ ಪ್ರತಿಯೊಬ್ಬನು ತನ್ನ ತನ್ನ ಶಕ್ತ್ಯಾನುಸಾರವಾಗಿ ರಕ್ತವನ್ನು ನಿನ್ನ ಮೇಲೆ ಚೆಲ್ಲುತ್ತಲೇ ಇದ್ದಾನೆ.
7. ನಿನ್ನಲ್ಲಿ ತಂದೆಯನ್ನೂ ತಾಯಿಯನ್ನೂ ಅಲಕ್ಷ್ಯ ಮಾಡಿದ್ದಾರೆ; ನಿನ್ನಲ್ಲಿ ಅಪರಿಚಿತರಿಗೆ ಬಲಾತ್ಕಾರ ಮಾಡಿದ್ದಾರೆ; ನಿನ್ನಲ್ಲಿ ದಿಕ್ಕಿಲ್ಲದವನನ್ನೂ ವಿಧವೆಯನ್ನೂ ಪೀಡಿಸಿದ್ದಾರೆ.
8. ನೀನು ನನ್ನ ಪರಿಶುದ್ಧ ಸಂಗತಿಗಳನು ತಿರಸ್ಕರಿಸಿ ನನ್ನ ಸಬ್ಬತ್ತುಗಳನ್ನು ಅಪವಿತ್ರಪಡಿಸಿದ್ದೀ.
9. ನಿನ್ನಲ್ಲಿ ರಕ್ತಚೆಲ್ಲುವ ಹಾಗೆ ಚಾಡಿ ಹೇಳುವ ಜನ ಇದ್ದಾರೆ; ಬೆಟ್ಟಗಳ ಮೇಲೆ ತಿನ್ನುವವರಿದ್ದಾರೆ; ದುರಾ ಚಾರಿಗಳು ನಿನ್ನ ಮಧ್ಯದಲ್ಲಿದ್ದಾರೆ.
10. ನಿನ್ನಲ್ಲಿ ತಂದೆಯ ಬೆತ್ತಲೆತನವನ್ನು ಹೊರಗೆಡವಿದ್ದಾರೆ; ನಿನ್ನಲ್ಲಿ ಮುಟ್ಟಾಗಿ ಪ್ರತ್ಯೇಕವಾಗಿರುವವರನ್ನು ಕೂಡಿದ್ದಾರೆ;
11. ಒಬ್ಬನು ತನ್ನ ನೆರೆಯವನ ಹೆಂಡತಿಯ ಸಂಗಡ ದುರಾಚಾರವನ್ನು ಮಾಡಿದ್ದಾನೆ; ಮತ್ತೊಬ್ಬನು ಅಕೃತ್ಯದಿಂದ ಸೊಸೆಯನ್ನು ಕೆಡಿಸಿದ್ದಾನೆ; ಇನ್ನೊಬ್ಬನು ತನ್ನ ತಂದೆಯ ಮಗಳಾದ ತನ್ನ ಸಹೋದರಿಯನ್ನೇ ಭಂಗಪಡಿಸಿದ್ದಾನೆ.
12. ನಿನ್ನಲ್ಲಿ ರಕ್ತ ಚೆಲ್ಲುವ ಹಾಗೆ ಲಂಚತಿಂದಿದ್ದಾರೆ; ಬಡ್ಡಿಯನ್ನೂ ಲಾಭವನ್ನೂ ತೆಗೆದುಕೊಂಡಿದ್ದಾರೆ; ಬಲಾತ್ಕಾರದಿಂದ ನಿನ್ನ ನೆರೆಯವರಲ್ಲಿ ದುರ್ಲಾಭಮಾಡಿಕೊಂಡಿದ್ದಾರೆ; ನನ್ನನ್ನು ಮರೆತುಬಿಟ್ಟಿ ದ್ದಾರೆಂದು ದೇವರಾದ ಕರ್ತನು ಹೇಳುತ್ತಾನೆ.
13. ಆದದರಿಂದ ಇಗೋ, ನೀನು ಮಾಡಿದ ಈ ದುರ್ಲಾಭದಿಂದಲೂ ನಿನ್ನಲ್ಲಿರುವ ನಿನ್ನ ರಕ್ತಾಪ ರಾಧದಿಂದಲೂ ನಾನು ನನ್ನ ಕೈ ಬಡಿದುಕೊಂಡಿದ್ದೇನೆ.
14. ನಾನು ನಿನ್ನೊಳಗೆ ಕೆಲಸ ನಡೆಸುವ ದಿವಸಗಳಲ್ಲಿ ನಿನ್ನ ಹೃದಯವು ನಿಲ್ಲುವದೋ? ನಿನ್ನ ಕೈಗಳು ಬಲವಾಗಿರುವವೋ? ಕರ್ತನಾದ ನಾನೇ ಹೇಳಿದ್ದೇನೆ, ನಾನೇ ಅದನ್ನು ಮಾಡುತ್ತೇನೆ.
15. ನಿನ್ನನ್ನು ಅನ್ಯ ಜನಾಂಗಗಳಲ್ಲಿ ಚದರಿಸಿ, ದೇಶಗಳಲ್ಲಿ ಹರಡಿಸುವೆನು; ನಿನ್ನ ಅಶುದ್ಧತ್ವವನ್ನು ನಿನ್ನಿಂದ ತೆಗೆದು ನಾಶಮಾಡುವೆನು.
16. ಆಗ ನೀನು ಅನ್ಯಜನಾಂಗಗಳ ಮುಂದೆ ನೀನು ನಿನ್ನ ಬಾಧ್ಯತೆಯನ್ನು ತಕ್ಕೊಳ್ಳುವಿ; ನಾನೇ ಕರ್ತನೆಂದು ನೀನು ತಿಳಿದುಕೊಳ್ಳುವಿ.
17. ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇ ನಂದರೆ --
18. ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರು ನನಗೆ (ಮಂಡೂರ) ಕಿಟ್ಟದ ಹಾಗಾದರು ಅವರೆಲ್ಲರೂ ಬಲೆಯ ಮಧ್ಯದಲ್ಲಿರುವ ಹಿತ್ತಾಳೆ, ತವರ, ಕಬ್ಬಿಣದ, ಹಾಗೆ ಇದ್ದಾರೆ. ಸೀಸದ ಮತ್ತು ಬೆಳ್ಳಿಯ ಕಿಟ್ಟಗಳ ಹಾಗೆಯೂ ಇದ್ದಾರೆ.
19. ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ನೀವೆಲ್ಲರೂ ಕಿಟ್ಟವಾಗಿರುವದರಿಂದ ಇಗೋ, ನಾನು ನಿಮ್ಮನ್ನು ಯೆರೂಸಲೇಮಿನ ಮಧ್ಯಕ್ಕೆ ಕೂಡಿಸುತ್ತೇನೆ.
20. ಅವರು ಬೆಳ್ಳಿ, ಹಿತ್ತಾಳೆ, ಕಬ್ಬಿಣ, ಸೀಸ ಮತ್ತು ತಗಡುಗಳನ್ನು ಹೇಗೆ ಒಲೆಯೊಳಗೆ ಕೂಡಿಸಿ ಅದಕ್ಕೆ ಬೆಂಕಿಯನ್ನೂದಿ ಕರಗಿಸುವರೋ ಹಾಗೆಯೇ ನಾನು ನಿಮ್ಮನ್ನು ನನ್ನ ಕೋಪದಲ್ಲಿಯೂ ನನ್ನ ರೋಷದಲ್ಲಿಯೂ ಕರಗಿಸಿಬಿಡುವೆನು.
21. ಹೌದು, ನನ್ನ ರೋಷದ ಬೆಂಕಿಯಿಂದ ನಾನು ನಿಮ್ಮ ಮೇಲೆ ಊದುವೆನು. ನೀವು ಅದರೊಳಗೆ ಕರಗಿ ಹೋಗುವಿರಿ.
22. ಬೆಳ್ಳಿಯು ಕುಲುಮೆಯಲ್ಲಿ ಕರಗುವ ಹಾಗೆ ನೀವು ನನ್ನ ರೋಷಾಗ್ನಿಯಲ್ಲಿ ಕರಗು ವಿರಿ; ನಿನ್ನ ಮೇಲೆ ರೋಷಾಗ್ನಿಯನ್ನು ಸುರಿಸಿದಾತನು ಕರ್ತನಾದ ನಾನೇ ಎಂದು ನಿಮಗೆ ತಿಳಿಯುತ್ತದೆ.
23. ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ --
24. ಮನುಷ್ಯಪುತ್ರನೇ, ಅದಕ್ಕೆ ಹೀಗೆ ಹೇಳು ಅಶುದ್ಧರಾಗದಂಥ ರೌದ್ರದ ದಿವಸ ಗಳಲ್ಲಿ ಮಳೆ ಸುರಿಯುವಂತಹ ದೇಶವು ನೀನೇ,
25. ಕೊಳ್ಳೆಯನ್ನು ಸುಲಿದುಕೊಳ್ಳುವ ಘರ್ಜಿಸುವ ಸಿಂಹದ ಹಾಗೆ ಅದರ ಮಧ್ಯದಲ್ಲಿ ಪ್ರವಾದಿಗಳ ಒಳಸಂಚು ಉಂಟು; ಪ್ರಾಣಗಳನ್ನು ತಿಂದುಬಿಟ್ಟಿದ್ದಾರೆ. ಸಂಪತ್ತನ್ನೂ ಅಮೂಲ್ಯವಾದ ವಸ್ತುವನ್ನೂ ದೋಚಿ ಕೊಂಡಿದ್ದಾರೆ, ಅವರು ಅದರ ಮಧ್ಯದಲ್ಲಿ ಬಹಳ ಜನರನ್ನು ವಿಧವೆಯರನ್ನಾಗಿ ಮಾಡಿದ್ದಾರೆ.
26. ಅದರ ಯಾಜಕರು ನನ್ನ ವಿಧಿಗಳನ್ನು ಭಂಗಪಡಿಸಿದ್ದಾರೆ; ನನ್ನ ಪರಿಶುದ್ಧ ವಸ್ತುಗಳನ್ನು ಅಪವಿತ್ರಪಡಿಸಿದ್ದಾರೆ; ಪರಿಶುದ್ಧ ವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ಭೇದವೆಣಿಸಲಿಲ್ಲ; ಶುದ್ಧಾಶುದ್ಧ ವಿವೇಚನೆಯನ್ನು ಬೋಧಿಸಲಿಲ್ಲ, ನನ್ನ ಸಬ್ಬತ್ತುಗಳಿಗೆ ತಮ್ಮ ಕಣ್ಣುಗಳನ್ನು ಮರೆಮಾಡಿದ್ದಾರೆ. ಆದದರಿಂದ ನಾನು ಅವರಲ್ಲಿ ಅಪವಿತ್ರನಾದೆನು.
27. ಅಲ್ಲಿನ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ ಪ್ರಾಣ ಗಳನ್ನು ನುಂಗುವ ಹಾಗೆ ಬೇಟೆಯ ತೋಳಗಳಂತಿ ದ್ದಾರೆ.
28. ಅವರ ಪ್ರವಾದಿಗಳು ಅವರಿಗೆ ಸುಣ್ಣ ಹಚ್ಚುತ್ತಾರೆ, ಮೋಸವನ್ನು ದರ್ಶಿಸಿ ಸುಳ್ಳು ಶಕುನ ಹೇಳುತ್ತಾರೆ; ಕರ್ತನು ಮಾತನಾಡದಿರುವದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳು ತ್ತಾರೆ.
29. ದೇಶದ ಜನರು ಬಲಾತ್ಕಾರ ಮಾಡಿದ್ದಾರೆ, ಕೊಳ್ಳೆಯನ್ನು ಹೊಡೆದಿದ್ದಾರೆ. ಬಡವನನ್ನೂ ದರಿದ್ರ ರನ್ನೂ ಪೀಡಿಸಿದ್ದಾರೆ; ಹೌದು, ಅವರು ನ್ಯಾಯವಿಲ್ಲದೆ ಒಬ್ಬ ಅಪರಿಚಿತನನ್ನು ಬಲಾತ್ಕಾರಪಡಿಸಿದ್ದಾರೆ.
30. ಬೇಲಿ ಕಟ್ಟುವ ಮನುಷ್ಯನನ್ನು ದೇಶಕ್ಕೋಸ್ಕರ ನಾನು ಅದನು ನಾಶಮಾಡದ ಹಾಗೆ ಪೌಳಿಯ ಒಡಕಿನಲ್ಲಿ ನಿಲ್ಲತಕ್ಕ ವನನ್ನು ಹುಡುಕಿದೆನು, ಆದರೆ ಸಿಕ್ಕಲಿಲ್ಲ.
31. ಆದದ ರಿಂದ ನನ್ನ ರೋಷವನ್ನು ಅವರ ಮೇಲೆ ಸುರಿಸಿದ್ದೇನೆ; ನನ್ನ ಸಿಟ್ಟಿನ ಬೆಂಕಿಯಿಂದ ಅವರನ್ನು ಸಂಹರಿಸಿದ್ದೇನೆ; ಅವರ ಮಾರ್ಗವನ್ನು ಅವರ ತಲೆಗಳ ಮೇಲೆ ಮುಯ್ಯಿ ತೀರಿಸಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ.

Chapter 23

1. ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
2. ಮನುಷ್ಯಪುತ್ರನೇ, ಒಬ್ಬ ತಾಯಿಯ ಮಕ್ಕಳಾದ ಇಬ್ಬರು ಹೆಂಗಸರಿದ್ದರು;
3. ಅವರು ಐಗುಪ್ತದಲ್ಲಿ ವ್ಯಭಿಚಾರ ಮಾಡುತ್ತಿದ್ದರು. ಅವರು ಎಳೆಯ ಪ್ರಾಯದಲ್ಲಿ ವ್ಯಭಿಚಾರ ಮಾಡಿದ್ದ ರಿಂದ ಕನ್ಯಾವಸ್ಥೆಯ ಅವರ ಸ್ತನಗಳು ಹಿಸುಕಲ್ಪಟ್ಟವು; ಅವುಗಳ ತೊಟ್ಟುಗಳು ನಸುಕಲ್ಪಟ್ಟವು.
4. ಅವರುಗಳ ಹೆಸರುಗಳೇನಂದರೆ ಒಹೊಲ ಎಂಬವಳು ದೊಡ್ಡವಳು ಒಹೊಲೀಬ ಎಂಬವಳು ಚಿಕ್ಕವಳು; ಅವರು ನನ್ನವ ರಾಗಿದ್ದು ಕುಮಾರ ಮತ್ತು ಕುಮಾರ್ತೆಯರನ್ನು ಹೆತ್ತರು; ಅವರ ಹೆಸರು ಹೀಗೆ--ಒಹೋಲ ಎಂಬದು ಸಮಾ ರ್ಯವು ಮತ್ತು ಒಹೊಲೀಬ ಎಂಬದು ಯೆರೂಸ ಲೇಮು.
5. ಒಹೊಲಳು ನನ್ನ ವಶವಾಗಿರುವಾಗ ಅವಳು ತನ್ನ ಪ್ರಿಯರನ್ನು, ತನ್ನ ನೆರೆಯವರಾದ ಅಶ್ಶೂರ್ಯ ದವರನ್ನು,
6. ಅವರೆಲ್ಲರೂ ನೀಲಿಯಿಂದ ಹೊದಿಸಲ್ಪಟ್ಟ (ಧರಿಸಲ್ಪಟ್ಟ) ಯೋಧರು (ಮುಖಂಡರೂ) ಅಧಿಕಾರ ಸ್ಥರೂ ಅಪೇಕ್ಷಿಸತಕ್ಕ ಯೌವನಸ್ಥರೂ ಕುದುರೆಗಳ ಮೇಲೆ ಸವಾರಿ ಮಾಡುವ ರಾಹುತರೂ ಆಗಿರುವ ಅಂಥವರನ್ನು, ಮೋಹಿಸಿದಳು.
7. ಅವರಿಗೆ ಅವಳು ತನ್ನನ್ನು ವ್ಯಭಿಚಾರಿಣಿಯಾಗಿ ಒಪ್ಪಿಸಿದಳು, ಅವರೆಲ್ಲರೂ ಅಶ್ಶೂರದಲ್ಲಿ ಆರಿಸಲ್ಪಟ್ಟವರಾಗಿದ್ದರು. (ನೇಮಿಸ ಲ್ಪಟ್ಟವರು) ಅವಳು ಯಾರನ್ನು ಮೋಹಿಸಿದಳೋ ಅವರ ವಿಗ್ರಹಗಳಿಂದ ತನ್ನನ್ನು ಅಪವಿತ್ರಪಡಿಸಿಕೊಂಡಳು.
8. ಇಲ್ಲವೆ ಅವಳು ಐಗುಪ್ತದಲ್ಲಿದ್ದಂದಿನಿಂದಲೂ ವ್ಯಭಿ ಚಾರವನ್ನು ಸಹ ಬಿಡಲಿಲ್ಲ. ಅವಳ ಯೌವನದಲ್ಲಿ ಅವರು ಅವಳ ಸಂಗಡ ಇದ್ದರು; ಅವರೆಲ್ಲರೂ ಅವಳ ಕನ್ಯತ್ವದ ಸ್ತನಗಳನ್ನು ಒತ್ತಿ, ತಮ್ಮ ವ್ಯಭಿಚಾರಗಳನ್ನು ಅವಳ ಮೇಲೆ ನಡೆಸಿದರು.
9. ಆದದರಿಂದ ನಾನು ಅವಳನ್ನು ಅವಳ ಪ್ರಿಯರಿಂದಲೂ ಒಪ್ಪಿಸುವ ಅವಳ ಅಶ್ಶೂರ್ಯರಿಂದಲೂ ಅವರೆಲ್ಲರಿಂದಲೂ ಮೋಹಿಸ ಲ್ಪಟ್ಟಳು;
10. ಅವರು ಅವಳ ಬೆತ್ತಲೆತನವನ್ನು ಬಯಲು ಪಡಿಸಿದರು ಅವಳ ಪುತ್ರರನ್ನೂ ಹೆಣ್ಣು ಮಕ್ಕಳನ್ನೂ ತೆಗೆದುಕೊಂಡು ಖಡ್ಗದಿಂದ ಕೊಂದುಹಾಕಿದರು; ಸ್ತ್ರೀಯರಲ್ಲಿ (ಕೆಟ್ಟತನಕ್ಕೆ) ಹೆಸರುಗೊಂಡಳು; ಅವಳಲ್ಲಿ ನ್ಯಾಯ ತೀರ್ಪುಮಾಡಿದರು.
11. ಅವಳ ಸಹೋದರಿ ಒಹೊಲೀಬಳು ಇದನ್ನು ನೋಡಿದಾಗ ಅವಳಿಗಿಂತ ಅಧಿಕವಾಗಿ ಮೋಹಗೊಂಡಳು. ತನ್ನ ಸಹೋದರಿಯ ವ್ಯಭಿಚಾರಕ್ಕಿಂತಲೂ ಹೆಚ್ಚಾಗಿ ವ್ಯಭಿಚಾರಗಳನ್ನು ನಡೆ ಸಿದಳು.
12. ಅವಳು ತನ್ನ ನೆರೆಯವರಾದ ಅಶ್ಶೂರ್ಯ ರನ್ನೂ ನಾಯಕರು ಮತ್ತು ಅಧಿಕಾರಸ್ಥರು ಗಂಭೀರವಾಗಿ ಧರಿಸಲ್ಪಟ್ಟು ಕುದುರೆಗಳ ಮೇಲೆ ಸವಾರಿಮಾಡುವ ರಾಹುತರಾಗಿಯೂ ಅಪೇಕ್ಷಿಸತಕ್ಕ ಯೌವನಸ್ಥರಾ ಗಿಯೂ ಇರುವಂಥ ಅವರನ್ನು ಮೋಹಿಸಿದಳು.
13. ಆಗ ನಾನು ಅವಳು ಅಪವಿತ್ರವಾದಳೆಂದು ನೋಡಿದೆನು; ಅವರಿಬ್ಬರೂ ಒಂದೇ ಮಾರ್ಗವನ್ನು ಹಿಡಿದರು.
14. ಅವಳು ತನ್ನ ವ್ಯಭಿಚಾರವನ್ನು ಇನ್ನು ಹೆಚ್ಚಿಸಿದಳು; ಗೋಡೆಯ ಮೇಲೆ ಬರೆಯಲ್ಪಟ್ಟ ಮನುಷ್ಯರನ್ನೂ ಕುಂಕುಮ ಇಟ್ಟುಕೊಂಡ ಕಸ್ದೀಯರ ಹಾಗೆ ಕಂಡು ಬರುವ ಪ್ರತಿಮೆಗಳನ್ನೂ (ಮನುಷ್ಯ ಆಕಾರಗಳನ್ನೂ) ನೋಡಿದಾಗ,
15. ಸೊಂಟಕ್ಕೆ ನಡುಕಟ್ಟನ್ನು ಕಟ್ಟಿ ಕೊಂಡಂಥ ತನ್ನ ತಲೆಗಳಲ್ಲಿ ಅಲಂಕಾರವಾದ ರುಮಾ ಲನ್ನು ಧರಿಸಿದಂಥ ಎಲ್ಲರೂ ನೋಟದಲ್ಲಿ ಅವರ ಸ್ವದೇಶವಾದ ಕಸ್ದೀಯಕ್ಕೆ ಸೇರಿದ ಬಾಬೆಲಿನ ಕುಮಾರರ ಹಾಗಿರುವದನ್ನು;
16. ಅವಳು ಅವಳ ಕಣ್ಣುಗಳಿಂದ ತಕ್ಷಣವೇ ಅವರನ್ನು ನೋಡಿದಾಗ ಅವರನ್ನು ಮೋಹಿಸಿ ದಳು; ಅವರ ಬಳಿಗೆ ಕಸ್ದೀಯಕ್ಕೆ ದೂತರನ್ನು ಕಳುಹಿಸಿ ದಳು.
17. ಬಾಬೆಲಿನವರು ಅವಳ, ಪ್ರೀತಿಯ ಹಾಸಿ ಗೆಯ ಮೇಲೆ ಬಂದು ಅವಳನ್ನು ವ್ಯಭಿಚಾರದಿಂದ ಅಪವಿತ್ರಪಡಿಸಿದರು; ಅವಳು ಅವರಿಂದ ಹಾಳಾದ ಮೇಲೆ ತನ್ನ ಮನಸ್ಸನ್ನು ಅವರ ಕಡೆಯಿಂದ ಅಗಲಿಸಿ ಕೊಂಡಳು.
18. ಹೀಗೆ ಅವಳು ವ್ಯಭಿಚಾರವನ್ನು ಕಂಡುಹಿಡಿದು ತನ್ನ ಬೆತ್ತಲೆತನವನು ಬಯಲುಪಡಿಸಿ ಕೊಂಡಾಗ, ತನ್ನ ಅನುರಾಗವು ಮೊದಲು ಇವಳ ಸಹೋದರಿಯಿಂದ ಅಗಲಿದ ಹಾಗೆ ಇವಳಿಂದಲೂ ಅಗಲಿತು.
19. ಆದರೂ ಅವಳು ಐಗುಪ್ತದೇಶದಲ್ಲಿ ವ್ಯಭಿಚಾರ ಮಾಡಿದಾಗ ತನ್ನ ಯೌವನದ ದಿನಗಳನ್ನು ಜ್ಞಾಪಕಮಾಡಿಕೊಂಡು ತನ್ನ ವ್ಯಭಿಚಾರವನ್ನು ಹೆಚ್ಚಿಸಿ ದಳು.
20. ಹೇಗಂದರೆ, ಕತ್ತೆಗಳ ಮಾಂಸದಂತೆ ಮಾಂಸ ವುಳ್ಳವರಾಗಿಯೂ ಕುದುರೆಗಳ ವೀರ್ಯದಂತೆ ವೀರ್ಯ ವುಳ್ಳವರಾಗಿಯೂ ಇರುವ ತನ್ನ ಉಪಪತಿಗಳನ್ನು ಮೋಹಿಸಿದರು.
21. ಹೀಗೆ ಐಗುಪ್ತರಿಂದ ನಿನ್ನ ಯೌವ ನದ ಸ್ತನಗಳ ತೊಟ್ಟುಗಳನ್ನು ಒತ್ತಿಸಿಕೊಂಡು ನಿನ್ನ ಯೌವನದ ದುಷ್ಕರ್ಮವನ್ನು ನೆನಪಿಗೆ ತಂದುಕೋ.
22. ಆದದರಿಂದ ಒಹೊಲೀಬಳೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಯಾರಿಂದ ನಿನ್ನ ಮನಸ್ಸು ಅಗಲಿಹೋಯಿತೋ ಆ ನಿನ್ನ ಪ್ರಿಯನನ್ನು ನಾನು ನಿನಗೆ ವಿರೋಧವಾಗಿ ಎಬ್ಬಿಸುತ್ತೇನೆ, ನಾನು ಅವರನ್ನು ಪ್ರತಿಯೊಂದು ಕಡೆಗೂ ವಿರೋಧವಾಗಿ ತರುತ್ತೇನೆ.
23. ಬಾಬೆಲಿನವರು, ಎಲ್ಲಾ ಕಸ್ದೀಯರು, ಪೆಕೋದಿನವರು, ಷೋಯದವರು ಕೋಯದವರು, ಮತ್ತು ಎಲ್ಲಾ ಅಶ್ಶೂರ್ಯರ ಜೊತೆಗೆ ಅವರೆಲ್ಲಾ ಅಪೇಕ್ಷಿಸುವಂತಹ ಯೌವನಸ್ಥರೂ ಸೈನ್ಯಾಧಿಪತಿಗಳೂ ಅಧಿಕಾರಸ್ಥರೂ ಯುದ್ಧಶಾಲಿಗಳೂ ಖ್ಯಾತಿಹೊಂದಿ ದವರೂ ಎಲ್ಲರೂ ಕುದುರೆಗಳ ಮೇಲೆ ಸವಾರಿಮಾಡಿ ದವರೇ.
24. ಅವರೆಲ್ಲರೂ ರಥಗಳ ಸಂಗಡಲೂ ಬಂಡಿ ಗಳ ಸಂಗಡಲೂ ಜನಗಳ ಸಮೂಹದ ಸಂಗಡಲೂ ಬಲವುಳ್ಳವರಾಗಿ ನಿನಗೆ ವಿರುದ್ಧವಾಗಿ ಬರುವರು. ಸುತ್ತಲೂ ಖೇಡ್ಯವನ್ನೂ ಗುರಾಣಿಯನ್ನೂ ಶಿರಸ್ತ್ರಾಣ ವನ್ನೂ ನಿನಗೆ ವಿರುದ್ಧವಾಗಿರಿಸುವೆನು. ಇದಲ್ಲದೆ ನಾನು ಅವರ ಮುಂದೆ ನ್ಯಾಯವನ್ನು ಇಡುವೆನು; ಅವರು ತಮ್ಮ ನ್ಯಾಯಗಳ ಪ್ರಕಾರ ನಿನಗೆ ನ್ಯಾಯತೀರಿಸುವರು.
25. ಇದಲ್ಲದೆ ನನ್ನ ಅಸೂಯೆಯನ್ನು ನಿನಗೆ ವಿರುದ್ಧವಾಗಿ ಬರಮಾಡುವೆನು; ಅವರು ನಿನ್ನಲ್ಲಿ ಕೋಪತೀರಿಸಿ ಕೊಳ್ಳುವರು; ನಿನ್ನ ಮೂಗನ್ನೂ ಕಿವಿಗಳನ್ನೂ ತೆಗೆದು ಹಾಕುವರು; ನಿನ್ನಲ್ಲಿ ಉಳಿದವರು ಕತ್ತಿಯಿಂದ ಬೀಳು ವರು; ನಿನ್ನ ಗಂಡು ಹೆಣ್ಣು ಮಕ್ಕಳನ್ನು ಅಪಹರಿಸುವರು; ನಿನ್ನಲ್ಲಿ ಉಳಿದವರೆಲ್ಲರೂ ಅಗ್ನಿಗೆ ಆಹುತಿಯಾಗುವರು.
26. ಇದಲ್ಲದೆ ನಿನ್ನ ವಸ್ತ್ರಗಳನ್ನು ತೆಗೆದುಹಾಕಿ, ನಿನ್ನ ಸೌಂದರ್ಯದ ಒಡವೆಗಳನ್ನು ಕಸಿದುಕೊಳ್ಳುವರು;
27. ಹೀಗೆ ನಾನು ನಿನ್ನ ದುಷ್ಕರ್ಮವನ್ನು ನೀನು ಐಗುಪ್ತದಲ್ಲಿದ್ದಂದಿನಿಂದ ನಡೆಸಿದ ವ್ಯಭಿಚಾರವನ್ನು ನಿನ್ನಿಂದ ತೊಲಗಿಸುವೆನು; ಆಮೇಲೆ ನೀನು ಅವರ ಕಡೆಗೆ ಕಣ್ಣೆತ್ತದೆ, ಐಗುಪ್ತವನ್ನು ಜ್ಞಾಪಕಕ್ಕೆ ತರದೇ ಇರುವಿ.
28. ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಇಗೋ, ನೀನು ಹಗೆಮಾಡುವವರ ಕೈಯಲ್ಲಿಯೂ ಯಾರ ಕಡೆಯಿಂದ ನಿನ್ನ ಮನಸ್ಸು ಅಗಲಿ ಹೋಯಿತೋ ಅವರ ಕೈಯಲ್ಲಿಯೂ ನಿನ್ನನ್ನು ಒಪ್ಪಿಸುತ್ತೇನೆ.
29. ಅವರು ನಿನ್ನ ವಿಷಯದಲ್ಲಿ ಹಗೆಯವರಾಗಿ ನಡೆಯುವರು; ನಿನ್ನ ಕಷ್ಟಾರ್ಜಿತವನ್ನು ತೆಗೆದುಕೊಂಡು ನಿನ್ನನ್ನು ಬೆತ್ತಲೆಯಾಗಿಯೂ ಬರಿದಾಗಿಯೂ ಮಾಡಿ ಬಿಡುವರು. ಆಗ ನಿನ್ನ ವ್ಯಭಿಚಾರವೂ ದುಷ್ಕರ್ಮವೂ ಜಾರತ್ವವೂ ಪ್ರಕಟವಾಗುವದು.
30. ನೀನು ಅನ್ಯಜನಾಂಗಗಳ ಹಿಂದೆ ಹೋಗಿ ವ್ಯಭಿಚರಿಸಿದ್ದರಿಂದಲೂ ಅವರ ವಿಗ್ರಹ ಗಳಿಂದ ನಿನ್ನನ್ನು ಅಪವಿತ್ರಪಡಿಸಿಕೊಂಡಿದ್ದರಿಂದಲೂ ಇವುಗಳನ್ನು ನಾನು ನಿನಗೆ ಮಾಡುತ್ತೇನೆ.
31. ನೀನು ನಿನ್ನ ಸಹೋದರಿಯ ಮಾರ್ಗದಲ್ಲಿಯೇ ನಡೆದದ್ದರಿಂದ ಅವಳ ಪಾತ್ರೆಯನ್ನು ನಿನ್ನ ಕೈಗೆ ಕೊಡುತ್ತೇನೆ.
32. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನಿನ್ನ ಸಹೋದರಿಯ ಆಳವಾದ ದೊಡ್ಡ ಪಾತ್ರೆಯಲ್ಲಿ ಕುಡಿಯುವಿ. ನೀನು ಹಾಸ್ಯಕ್ಕೂ ನಿಂದೆಗೂ ಗುರಿ ಯಾಗುವಿ. ಅದೇ ನಿನಗೆ ಹೆಚ್ಚಾಗುವದು.
33. ನಿನ್ನ ಸಹೋದರಿಯಾದ ಸಮಾರ್ಯದ ಪಾತ್ರೆಯಿಂದಲೇ ವಿಸ್ಮಯವೂ ನಾಶನವೂ ಆಗುವದು; ನೀನು ಅಮಲೇರಿ ದುಃಖದಿಂದಲೂ ತುಂಬಿರುವಿ.
34. ನೀನು ಅದರಲ್ಲಿ ಸ್ವಲ್ಪವೂ ಉಳಿಯದಂತೆ ಹೀರಿ ಕುಡಿದು ಅದನ್ನು ಬೋಕಿಗಳ ಹಾಗೆ ಒಡೆದುಹಾಕುವಿ ಮತ್ತು ನೀನೇ ನಿನ್ನ ಸ್ತನಗಳನ್ನು ಕಿತ್ತುಕೊಳ್ಳುವಿ; ನಾನೇ ಅದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳಿದ್ದಾನೆ.
35. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನನ್ನನ್ನು ಮರೆತುಬಿಟ್ಟು ನನ್ನನ್ನು ನಿನ್ನ ಬೆನ್ನ ಹಿಂದಕ್ಕೆ ಎಸೆದು ಮರೆತದ್ದರಿಂದ ನಿನ್ನ ದುಷ್ಕರ್ಮವನ್ನೂ ವ್ಯಭಿಚಾರವನ್ನೂ ಅನುಭವಿಸಲೇಬೇಕು.
36. ಇದಲ್ಲದೆ ಕರ್ತನು ನನಗೆ ಹೇಳಿದ್ದೇನಂದರೆ --ಮನುಷ್ಯಪುತ್ರನೇ, ಒಹೊಲಳಿಗೂ ಒಹೊಲೀ ಬಳಿಗೂ ನ್ಯಾಯತೀರಿಸುವಿಯೋ? ಹೌದು, ಅವರ ಅಸಹ್ಯಗಳನ್ನು ಅವರಿಗೆ ತಿಳಿಸು.
37. ಹೇಗಂದರೆ, ಅವರು ವ್ಯಭಿಚಾರ ಮಾಡಿದ್ದಾರೆ, ರಕ್ತವು ಅವರ ಕೈಗಳಲ್ಲಿ ಅದೆ; ತಮ್ಮ ವಿಗ್ರಹಗಳಿಂದ ವ್ಯಭಿಚಾರ ಮಾಡಿದ್ದಾರೆ, ನನಗೆ ಹೆತ್ತ ತಮ್ಮ ಗಂಡು ಮಕ್ಕಳನ್ನು ಆ ವಿಗ್ರಹಗಳಿಗೆ ಬಲಿಯಾಗಿ ಕೊಟ್ಟಿದ್ದಾರೆ.
38. ಇದಲ್ಲದೆ ಇದನ್ನು ಮಾಡಿದ ದಿನದಲ್ಲಿಯೇ ನನ್ನ ಪರಿಶುದ್ಧಸ್ಥಳವನ್ನು ಅಪವಿತ್ರಪಡಿಸಿ ನನ್ನ ಸಬ್ಬತ್ತುಗಳನ್ನು ಕೆಡಿಸಿದ್ದಾರೆ.
39. ತಮ್ಮ ಮಕ್ಕಳನ್ನು ವಿಗ್ರಹಗಳಿಗೋಸ್ಕರ ಕೊಂದು ಹಾಕಿದ ಮೇಲೆ ಅದೇ ದಿನದಲ್ಲಿ ನನ್ನ ಪರಿಶುದ್ಧ ಸ್ಥಳವನ್ನು ಕೆಡಿಸುವದಕ್ಕೆ ಬಂದರು. ಇಗೋ, ಅವರು ನನ್ನ ಆಲಯದ ಮಧ್ಯದಲ್ಲಿಯೇ ಹೀಗೆ ಮಾಡಿದ್ದಾರೆ;
40. ದೂತನನ್ನು ಕಳುಹಿಸಿ ದೂರದಿಂದ ಬರಬೇಕೆಂದು ಮನುಷ್ಯರನ್ನು ಕರೇ ಕಳುಹಿಸಿದ್ದಾರೆ; ಇಗೋ, ಬಂದರು. ಅವರಿಗಾಗಿ ನೀನು ಸ್ನಾನಮಾಡಿ ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು ನಿನ್ನನ್ನು ಆಭರಣಗಳಿಂದ ಅಲಂಕರಿಸಿ ಕೊಂಡೆ.
41. ವೈಭವದ ಮಂಚದ ಮೇಲೆ ಕೂತು ಕೊಂಡೆ; ಅವರ ಮುಂದೆ ನನ್ನ ಧೂಪವೂ ನನ್ನ ಎಣ್ಣೆಯೂ ಇರಿಸಲ್ಪಟ್ಟ ಮೇಜೂ ಸಿದ್ಧಮಾಡಲ್ಪಟ್ಟಿತು.
42. ಅವಳ ಸಂಗಡ ಸುಖವುಳ್ಳ ಸಮೂಹದ ಶಬ್ದವು ಇತ್ತು; ಸಾಧಾರಣ ಮನುಷ್ಯರ ಸಂಗಡ ಅರಣ್ಯದಿಂದ ಸಿಬಾಯರು ಕರೆಯಲ್ಪಟ್ಟು ಅವರು ತಮ್ಮ ಕೈಗಳ ಮೇಲೆ ಕಡಗಗಳನ್ನೂ ತಮ್ಮ ತಲೆಗಳ ಮೇಲೆ ಶೃಂಗಾರವಾದ ಕಿರೀಟವನ್ನೂ ಇಟ್ಟರು.
43. ಆಮೇಲೆ ನಾನು ಅವಳಿಗೆ ಹೇಳಿದ್ದೇನಂದರೆ, ವ್ಯಭಿಚಾರದಿಂದ ಸವೆದು ಹೋದ ವಳು ಅವಳೇ, ಮತ್ತೆ ಅವರು ಅವಳ ಸಂಗಡ ವ್ಯಭಿಚರಿಸಬಹುದೇ?
44. ಆದರೂ ವ್ಯಭಿಚಾರಿಣಿ ಯನ್ನು ಸೇರುವ ಹಾಗೆ ಅವರು ಅವಳನ್ನು ಸೇರಿದರು. ಹಾಗೆಯೇ ದುಷ್ಕರ್ಮಿ ಸ್ತ್ರೀಯರಾದ ಒಹೊಲಳ ಬಳಿಗೂ ಒಹೊಲೀಬಳ ಬಳಿಗೂ ಹೋದರು.
45. ನೀತಿ ಯುಳ್ಳ ಮನುಷ್ಯರು ಅವರಿಗೆ ನ್ಯಾಯತೀರಿಸಿ ವ್ಯಭಿ ಚಾರಿಣಿಯರಿಗೂ ರಕ್ತಸುರಿಸುವ ಹೆಂಗಸರಿಗೂ ತಕ್ಕ ದಂಡನೆಯನ್ನು ವಿಧಿಸುವರು; ಅವರು ವ್ಯಭಿಚಾರಿಣಿ ಯರು, ಅವರ ಕೈ ರಕ್ತವಾಗಿದೆ.
46. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಅವರಿಗೆ ವಿರೋಧವಾಗಿ ಸಂಘವನ್ನು ಕೂಡಿಸಿ ಅವರನ್ನು ತೆಗೆದುಹಾಕಲ್ಪಡು ವದಕ್ಕೂ ಸೂರೆಗೂ ಒಪ್ಪಿಸುವೆನು.
47. ಆ ಸಂಘದವರು ಅವರ ಮೇಲೆ ಕಲ್ಲೆಸೆದು ತಮ್ಮ ಕತ್ತಿಗಳಿಂದ ಕೊಯ್ದು ಅವರ ಕುಮಾರರನ್ನೂ ಕುಮಾರ್ತೆಯರನ್ನೂ ಕೊಂದು ಹಾಕಿ ಬೆಂಕಿಯಿಂದ ಅವರ ಮನೆಗಳನ್ನೆಲ್ಲಾ ಸುಟ್ಟು ಬಿಡುವರು.
48. ಹೀಗೆ ಸ್ತ್ರೀಯರೆಲ್ಲರೂ ನಿಮ್ಮ ದುಷ್ಕ ರ್ಮದ ಪ್ರಕಾರ ಮಾಡದಿರಲೆಂದು ಬೋಧಿಸಿ ದೇಶ ದೊಳಗಿಂದ ದುಷ್ಕರ್ಮವನ್ನು ತೆಗೆದುಹಾಕುವೆನು.
49. ನಿಮ್ಮ ದುಷ್ಕರ್ಮದ ಫಲವನ್ನು ನಿಮ್ಮ ಮೇಲೆಯೇ ಮುಯ್ಯಿ ತೀರಿಸುವೆನು. ನೀವು ನಿಮ್ಮ ವಿಗ್ರಹಗಳ ಪಾಪಗಳನ್ನು ಹೊರುವಿರಿ; ಆಗ ದೇವರಾದ ಕರ್ತನು ನಾನೇ ಎಂದು ತಿಳಿದುಕೊಳ್ಳುವಿರಿ.

Chapter 24

1. ಒಂಭತ್ತನೇ ವರುಷದ ಹತ್ತನೇ ತಿಂಗಳಿನ ಹತ್ತನೇ ದಿನದಲ್ಲಿ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ
2. ಮನುಷ್ಯಪುತ್ರನೇ, ಈ ದಿನದ, ಇದೇ ದಿನದ ಹೆಸರನ್ನು ಬರೆದುಕೋ; ಅದೇ ದಿನದಲ್ಲಿ ಬಾಬೆಲಿನ ಅರಸನು ಯೆರೂಸಲೇಮಿಗೆ ಮುತ್ತಿಗೆ ಹಾಕುತ್ತಾನೆ.
3. ತಿರುಗಿ ಬೀಳುವ ಮನೆತನ ದವರಿಗೆ ಸಾಮ್ಯವನ್ನು ತಿಳಿಸಿ ಅವರಿಗೆ ಹೇಳಬೇಕಾದದ್ದೇ ನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ಹಂಡೆಯನ್ನು ಒಲೆಯ ಮೇಲಿಡು, ಅದರಲ್ಲಿ ನೀರನ್ನು ಸುರಿ.
4. ತೊಡೆಯನ್ನೂ ಹೆಗಲನ್ನೂ ಎಲ್ಲಾ ಒಳ್ಳೇ ತುಂಡುಗಳನ್ನೂ ಒಟ್ಟಿಗೆ ಸೇರಿಸಿ ಒಳ್ಳೆ ಎಲುಬುಗಳ ಜೊತೆ ಅದನ್ನು ತುಂಬಿಸಿ;
5. ಹಿಂಡಿನಲ್ಲಿ ಶ್ರೇಷ್ಠವಾದ ದ್ದನ್ನು ತೆಗೆದುಕೊಂಡು ಎಲುಬಿನ ರಾಶಿಯನ್ನೂ ಅದರ ಕೆಳಗೆ ಇಟ್ಟು ಅದನ್ನು ಚೆನ್ನಾಗಿ ಕುದಿಸು; ಆ ಎಲುಬುಗಳೂ ಅದರಲ್ಲಿ ಚೆನ್ನಾಗಿ ಬೇಯಲಿ.
6. ಆದಕಾರಣ ದೇವರಾದ ಕರ್ತನು ಹೀಗೆ ಹೇಳು ತ್ತಾನೆ; ರಕ್ತಮಯವಾದ ಆ ಪಟ್ಟಣಕ್ಕೆ ಅಯ್ಯೋ! ಯಾವದರ ಕಲ್ಮಶವು ಹೊರಗೆ ಬಾರದೆ ಅದರಲ್ಲಿ ಉಳಿದಿರುವದೋ ಆ ಹಂಡೆಗೆ ಅಯ್ಯೋ, ಅದರಿಂದ ತುಂಡು ತುಂಡಾಗಿ ಹೊರಗೆ ತೆಗೆ; ಆಯ್ಕೆಯ ಚೀಟಿಯು ಅದರ ಮೇಲೆ ಬೀಳದಿರಲಿ.
7. ಅದರ ರಕ್ತವು ಅದರ ಮಧ್ಯದಲ್ಲಿದೆ; ಅದು ಅದನ್ನು ಬಂಡೆಯ ತುದಿಯಲ್ಲಿ ಇಟ್ಟಿದೆ; ದೂಳು ಮುಚ್ಚುವ ಹಾಗೆ ನೆಲದ ಮೇಲೆ ಚೆಲ್ಲಲಿಲ್ಲ;
8. ಮುಯ್ಯಿಗೆಮುಯ್ಯಿ ತೀರಿಸುವದಕ್ಕೆ ರೋಷ ವನ್ನೆಬ್ಬಿಸುವ ಹಾಗೆ ನಾನು ಅದರ ರಕ್ತಾಪರಾಧವನ್ನು ಮುಚ್ಚಿಬಿಡದಂತೆ ಬಂಡೆಯ ತುದಿಯ ಮೇಲೆ ಇಟ್ಟಿ ದ್ದೇನೆ;
9. ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಆ ರಕ್ತಾಪರಾಧವುಳ್ಳ ಪಟ್ಟಣವು ಹಾಳಾ ಗಲಿ, ನಾನೇ ಬೆಂಕಿಯನ್ನು ರಾಶಿಯಾಗಿ ಹೆಚ್ಚಿಸುವೆನು.
10. ಬಹಳ ಸೌದೆ ಹಾಕಿ, ಬೆಂಕಿಯನ್ನು ಹೆಚ್ಚಿಸಿ, ಮಾಂಸ ವನ್ನು ಬೇಯಿಸು; ಮಸಾಲೆ ಚೆನ್ನಾಗಿ ಇರಲಿ, ಮತ್ತು ಎಲುಬುಗಳು ಸುಡಲಿ.
11. ಆಮೇಲೆ ಅದರ ಹಿತ್ತಾಳೆ ಬಿಸಿಯಾಗಿ ಮೈಲಿಗೆ ಕರಗಿ ಕಲ್ಮಶವು ಹೋಗುವ ಹಾಗೆ ಅದನ್ನು ಬರಿದು ಮಾಡಿ ಕೆಂಡಗಳ ಮೇಲೆ ಇಡು.
12. ಅದರ ಕಲ್ಮಶವು ಆಯಾಸವನ್ನುಂಟು ಮಾಡಿತೇ ಹೊರತು ಅದಕ್ಕೆ ಹತ್ತಿದ್ದ ಆ ಬಹಳವಾದ ಕಿಲುಬು ಹೋಗಲಿಲ್ಲ, ಅದು ಬೆಂಕಿಯಲ್ಲಿರಲಿ;
13. ನಿನ್ನ ಅಶುದ್ಧ ತ್ವವು ದುಷ್ಕರ್ಮವುಳ್ಳದ್ದು; ನಾನು ನಿನ್ನನ್ನು ಪರಿಶುದ್ಧ ಮಾಡಿದರೂ ನೀನು ಶುದ್ಧವಾಗದ ಕಾರಣ ನಾನು ನನ್ನ ರೋಷವನ್ನು ನಿನ್ನ ಮೇಲೆ ಕಳುಹಿಸುವಷ್ಟು ಕಾಲದ ವರೆಗೂ ಇನ್ನು ಮೇಲೆ ನೀನು ನಿನ್ನ ಅಪವಿತ್ರತ್ವದಿಂದ ಇನ್ನು ಶುದ್ಧವಾಗುವದಿಲ್ಲ.
14. ಕರ್ತನಾದ ನಾನೇ ಅದನ್ನು ಹೇಳಿದ್ದೇನೆ, ಅದು ನಡೆಯುವದು; ನಾನು ಅದನ್ನು ಮಾಡದೆ ಬಿಡುವದಿಲ್ಲ; ಕಟಾಕ್ಷ ತೋರಿಸು ವದಿಲ್ಲ; ಪಶ್ಚಾತ್ತಾಪಪಡುವದಿಲ್ಲ. ನಿನ್ನ ಮಾರ್ಗಗಳ ಪ್ರಕಾರವೂ ನಿನ್ನ ಕ್ರಿಯೆಗಳ ಪ್ರಕಾರವೂ ನಿನಗೆ ನ್ಯಾಯ ತೀರಿಸುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
15. ಇದಲ್ಲದೆ, ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
16. ಮನುಷ್ಯಪುತ್ರನೇ, ಇಗೋ, ಒಂದೇ ಏಟಿನಿಂದ ನೇತ್ರಾನಂದವಾಗಿರುವದನ್ನು ನಿನ್ನಿಂದ ತೆಗೆಯುತ್ತೇನೆ; ಆದರೆ ನೀನು ದುಃಖಪಡಬೇಡ, ಅಳಬೇಡ, ನಿನ್ನ ಕಣ್ಣೀರು ಹರಿದು ಹೋಗದಿರಲಿ.
17. ವ್ಯಸನದಿಂದ ಸತ್ತವರಿಗಾಗಿ ಅರಚಬೇಡ, ಗೋಳಾಡ ಬೇಡ ನೀನು ರುಮಾಲನ್ನು ಕಟ್ಟಿಕೊಂಡು ಕಾಲುಗಳಿಗೆ ಜೋಡುಗಳನ್ನು ಮೆಟ್ಟಿಕೋ; ತುಟಿಗಳನ್ನು ಮುಚ್ಚಿಕೊಳ್ಳ ಬೇಡ; ಮನುಷ್ಯರ ರೊಟ್ಟಿಯನ್ನು ತಿನ್ನಬೇಡ.
18. ಹಾಗೆಯೇ ನಾನು ಬೆಳಗಿನ ಜಾವದಲ್ಲಿ ಜನ ರೊಂದಿಗೆ ಮಾತನಾಡಿದೆನು; ಸಂಜೆ ನನ್ನ ಹೆಂಡತಿ ಸತ್ತಳು; ಆಗ ಮುಂಜಾನೆ ಅಪ್ಪಣೆಯಾದ ಪ್ರಕಾರವೇ ನಾನು ಮಾಡಿದೆನು.
19. ಆಗ ಜನರು--ನೀನು ಮಾಡುವ ಆ ಸಂಗತಿಗಳಿಂದ ನಮಗೆ ಪ್ರಯೋಜನವೇ ನೆಂದು ತಿಳಿಸುವದಿಲ್ಲವೇ ಎಂದರು.
20. ಆಮೇಲೆ ನಾನು ಅವರಿಗೆ ಉತ್ತರಿಸಿದೆನು; ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
21. ಇಸ್ರಾಯೇಲ್ಯರ ಮನೆ ತನದವರೊಂದಿಗೆ ಮಾತನಾಡಿ ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳು--ಇಗೋ, ನಾನು ನನ್ನ ಪರಿಶುದ್ಧ ಸ್ಥಳವನ್ನೂ ನಿಮ್ಮ ಬಲದ ಶ್ರೇಷ್ಠತ್ವವನ್ನೂ ನಿಮ್ಮ ನೇತ್ರಾನಂದಕರವಾದದ್ದನ್ನೂ ನಿಮ್ಮ ಮನಸ್ಸು ಅಭಿಲಾಷಿಸುವದನ್ನೂ ನಾನು ಅಪವಿತ್ರಪಡಿಸುವೆನು; ನೀವು ಬಿಟ್ಟಿರುವ ನಿಮ್ಮ ಕುಮಾರರೂ ಕುಮಾರ್ತೆಯರೂ ಕತ್ತಿಯಿಂದ ಬೀಳುವರು.
22. ನಾನು ಮಾಡಿದ ಹಾಗೆ ನೀವು ಮಾಡುವಿರಿ; ನಿಮ್ಮ ತುಟಿಗಳನ್ನು ಮುಚ್ಚಿಕೊಳ್ಳ ಬಾರದು ಅವರ ರೊಟ್ಟಿಯನ್ನೂ ತಿನ್ನಬಾರದು.
23. ನಿಮ್ಮ ರುಮಾಲುಗಳು ತಲೆಯ ಮೇಲೆಯೂ ನಿಮ್ಮ ಜೋಡು ಗಳು ನಿಮ್ಮ ಪಾದಗಳ ಅಡಿಯಲ್ಲಿಯೂ ಇರುವವು; ನೀವು ಗೋಳಾಡದೆ ಅಳದೆ ನಿಮ್ಮ ಅಕ್ರಮಗಳಿಂದ ಕುಂದಿಹೋಗಿ ಒಬ್ಬರ ಸಂಗಡಲೊಬ್ಬರು ನರುಳುವಿರಿ.
24. ಹೀಗೆ ಯೆಹೆಜ್ಕೇಲನು ನಿಮಗೆ ಮುಂಗುರುತಾ ರುವನು; ಅವನು ಮಾಡಿದ ಎಲ್ಲವುಗಳ ಹಾಗೆ ನೀವೂ ಮಾಡುವಿರಿ; ಆ ರೀತಿ ಆದಾಗ ನಾನೇ ಕರ್ತನೆಂದು ತಿಳಿಯುವಿರಿ.
25. ಇದಲ್ಲದೆ ಮನುಷ್ಯಪುತ್ರನೇ, ಅವರ ಮಹತ್ತಾದ ಸಂತೋಷವನ್ನೂ ನೇತ್ರಾನಂದಕರವಾದದ್ದನ್ನೂ ಅವರು ಆಶಿಸುವದನ್ನೂ ಕುಮಾರ ಕುಮಾರ್ತೆಯರನ್ನೂ ಅವರ ಬಲದಿಂದ ನಾನು ತೆಗೆದುಹಾಕುವ
26. ಆ ದಿನದಲ್ಲಿ ತಪ್ಪಿಸಿಕೊಂಡವನು ನಿನ್ನ ಕಿವಿಗಳಿಗೆ ಸುದ್ದಿಯನ್ನು ತರುವ ಹಾಗೆ ನಿನ್ನ ಬಳಿಗೆ ಬರುವನಲ್ಲವೆ?
27. ಆ ದಿನದಲ್ಲಿ ತಪ್ಪಿಸಿಕೊಂಡವನ ಕಡೆಗೆ ನಿನ್ನ ಬಾಯಿತೆರೆದಿರುವದು ನೀನು ಇನ್ನು ಮೂಕನಾಗಿರದೆ ಮಾತನಾಡುವಿ ಮತ್ತು ಅವರಿಗೆ ಮುಂಗುರುತಾಗಿರುವಿ, ಆಗ ನಾನೇ ಕರ್ತನೆಂದು ತಿಳಿಯುವರು.

Chapter 25

1. ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
2. ಮನುಷ್ಯಪುತ್ರನೇ, ನೀನು ಅಮ್ಮೋನನ ಕುಮಾರರಿಗೆ ಅಭಿಮುಖನಾಗಿ ಅವರಿಗೆ ವಿರೋಧವಾಗಿ ಪ್ರವಾದಿಸು;
3. ಅಮ್ಮೋನನ ಕುಮಾರರಿಗೆ ಹೇಳು, ದೇವರಾದ ಕರ್ತನ ವಾಕ್ಯವನ್ನು ಕೇಳಿರಿ; ದೇವರಾದ ಕರ್ತನು ಹೇಳುವದೇನಂದರೆ --ನೀನು ನನ್ನ ಪರಿಶುದ್ದಸ್ಥಳವನ್ನು ಅಪವಿತ್ರಪಡಿಸಿದಾ ಗಲೂ ಇಸ್ರಾಯೇಲಿನ ದೇಶವು ಹಾಳಾದಾಗಲೂ ಯೆಹೂದನ ಮನೆತನದವರು ಸೆರೆಯಲ್ಲಿದ್ದಾಗಲೂ ಅಹಾ, ಅಂದವಾದದರಿಂದ ನಿನ್ನನ್ನು ಹೆಚ್ಚಿಸಿಕೊಂಡದ್ದ ರಿಂದ
4. ಇಗೋ, ನಾನು ನಿನ್ನನ್ನು ಮೂಡಣದವರಿಗೆ ಸ್ವಾಸ್ತ್ಯವಾಗಿ ಕೊಡುತ್ತೇನೆ, ಅವರು ತಮ್ಮ ಭವನಗಳನ್ನು ನಿನ್ನಲ್ಲಿ ಇರಿಸುವರು, ತಮ್ಮ ನಿವಾಸಗಳನ್ನು ನಿನ್ನಲ್ಲಿ ಮಾಡಿಕೊಳ್ಳುವರು, ಅವರು ನಿನ್ನ ಫಲವನ್ನು ತಿಂದು ನಿನ್ನ ಹಾಲನ್ನೇ ಕುಡಿಯುವರು.
5. ನಾನು ರಬ್ಬಾವನ್ನು ಒಂಟೆಗಳ ನಿವಾಸಸ್ಥಳವಾಗಿಯೂ ಅಮ್ಮೋನ್ಯರ ಮಂದೆ ಗಳು ಮಲಗುವ ಸ್ಥಳವನ್ನಾಗಿಯೂ ಮಾಡುವೆನು. ಆಗ ನಾನೇ ಕರ್ತನೆಂದು ನೀವು ತಿಳಿಯುವಿರಿ.
6. ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ಕೈತಟ್ಟಿ ಕಾಲಿನಿಂದ ತುಳಿದು ಇಸ್ರಾಯೇಲ್‌ ದೇಶವನ್ನು ಮನಃ ಪೂರ್ವಕವಾಗಿ ತಿರಸ್ಕರಿಸಿ ಅದರ ಆ ಸ್ಥಿತಿಗೆ ಸಂತೋಷ ಪಟ್ಟದ್ದರಿಂದ
7. ಇಗೋ, ನಾನು ನನ್ನ ಕೈಯನ್ನು ನಿಮ್ಮ ಮೇಲೆ ಚಾಚಿ, ಅನ್ಯಜನಾಂಗಗಳಿಗೆ ಕೊಳ್ಳೆಯಾಗಿ ಕೊಟ್ಟು ಜನಗಳೊಳಗೆ ನಿನ್ನನ್ನು ಕಡಿದುಬಿಟ್ಟು ದೇಶದೊಳಗಿಂದ ನಿನ್ನನ್ನು ನಾಶಮಾಡಿ ಸಂಹಾರ ಮಾಡುವೆನು, ಆಗ ನಾನೇ ಕರ್ತನೆಂದು ತಿಳಿಯುವಿ.
8. ದೇವರಾದ ಕರ್ತನು ಹೀಗೆ ಹೇಳುತ್ತಾನೆ, ಮೋವಾಬು ಮತ್ತು ಸೇಯಾರು--ಇಗೋ, ಯೆಹೂ ದನ ಮನೆಯು ಸಮಸ್ತ ಅನ್ಯಜನಾಂಗಗಳ ಹಾಗಿದೆ ಎಂದು ಹೇಳುವರು.
9. ಆದದರಿಂದ ಇಗೋ, ನಾನು ಮೋವಾಬಿನ ಗಡಿಯನ್ನು ಪಟ್ಟಣಗಳ ಕಡೆ ಯಿಂದಲೂ ಅದರ ಪ್ರಾಂತ್ಯದಲ್ಲಿರುವಂತ ಮಹತ್ತಾದ ರಮ್ಯ ದೇಶದ ಪಟ್ಟಣಗಳಾದ ಬೇತ್‌ಯೆಷೀ ಮೋತ್‌ ಬಾಳ್‌ಮೆ ಯೋನ್‌ ಕಿರ್ಯಾಥಯಿಮ್‌
10. ಸೀಮೆಗಳನ್ನಲ್ಲದೆ ಅಮ್ಮೋನನಿಗೆ ಮೂಡಣದ ವರೆಗೆ ಸ್ವಾಸ್ತ್ಯವಾಗಿ ಕೊಟ್ಟು ಅಮ್ಮೋನ್ಯರು ಜನಾಂಗಗಳೊಳಗೆ ಜ್ಞಾಪಕ ಮಾಡದ ಹಾಗೆ ಅವ ರಿಗೆ ಸ್ವಾಸ್ತ್ಯವಾಗಿ ಕೊಡುವೆನು;
11. ಮೋವಾಬ್ಯರಿಗೆ ನಾನು ನ್ಯಾಯಗಳನ್ನು ತೀರಿಸುವೆನು; ಆಗ ನಾನೇ ಕರ್ತನೆಂದು ಅವರಿಗೆ ತಿಳಿಯುವದು.
12. ದೇವರಾದ ಕರ್ತನು--ಎದೋಮು ಮತ್ತು ಯೆಹೂದನ ಮನೆತನದವರಿಗೆ ಮುಯ್ಯಿಗೆಮುಯ್ಯಿ ತೀರಿಸಿದ್ದರಿಂದಲೇ ಮತ್ತು ಅತಿ ಅಪರಾಧ ಮಾಡಿ ಅವರಲ್ಲಿ ಸೇಡು ತೀರಿಸಿ ತೆಗೆದುಕೊಂಡದ್ದರಿಂದಲೇ ಎಂದು ಹೇಳುತ್ತಾನೆ.
13. ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನೂ ನನ್ನ ಕೈಯನ್ನು ಎದೋಮಿನ ಮೇಲೆ ಚಾಚುತ್ತೇನೆ, ಅದರೊಳಗಿನಿಂದ ಮನುಷ್ಯರನ್ನೂ ಮೃಗಗಳನ್ನೂ ಕಡಿದುಬಿಡುತ್ತೇನೆ, ತೇಮಾನು ಮೊದಲುಗೊಂಡು ಅದನ್ನು ಕಾಡನ್ನಾಗಿ ಮಾಡುತ್ತೇನೆ; ದೆದಾನಿಯವರು ಕತ್ತಿಯಿಂದ ಬೀಳು ವರು.
14. ನಾನು ನನ್ನ ಜನರಾದ ಇಸ್ರಾಯೇಲಿನ ಮೂಲಕವಾಗಿ ನನ್ನ ಪ್ರತಿದಂಡನೆಯನ್ನು ಎದೋಮಿನ ಮೇಲೆ ಇಡುವೆನು, ಅವರು ಎದೋಮಿನಲ್ಲಿ ನನ್ನ ಕೋಪದ ಪ್ರಕಾರವೂ ರೋಷದ ಪ್ರಕಾರವೂ ಮಾಡು ವರು; ಹೀಗೆಯೇ ಅವರು ನನ್ನ ಪ್ರತಿದಂಡನೆಯನ್ನು ತಿಳಿಯುವರೆಂದು ದೇವರಾದ ಕರ್ತನು ಹೇಳುತ್ತಾನೆ.
15. ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಫಿಲಿಷ್ಟಿಯರು ಮುಯ್ಯಿಗೆ ಮುಯ್ಯಿ ನಡಿಸಿ, ಹಗೆಯುಳ್ಳ ಹೃದಯದಿಂದ ಸೇಡು ತೀರಿಸಿಕೊಂಡು ಪೂರ್ವದ ಕ್ರೋಧದಿಂದ ಕೆಡಿಸಿದರು.
16. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನನ್ನ ಕೈಯನ್ನು ಫಿಲಿಷ್ಟಿಯರ ಮೇಲೆ ಚಾಚುತ್ತೇನೆ; ಕೆರೇತಿಯರನ್ನು ಕಡಿದುಬಿಡುತ್ತೇನೆ; ಉಳಿದವರನ್ನು ಸಮುದ್ರತೀರದಲ್ಲಿ ನಾಶಮಾಡುತ್ತೇನೆ;
17. ನಾನು ದೊಡ್ಡ ಪ್ರತಿದಂಡನೆ ಯನ್ನು ಉರಿಯುಳ್ಳ ಗದರಿಕೆಗಳ ಸಂಗಡ ಅವರಲ್ಲಿ ತೀರಿಸುತ್ತೇನೆ; ಹೀಗೆ ಪ್ರತೀಕಾರ ಮಾಡಿದ ಮೇಲೆ ನಾನೇ ಕರ್ತನೆಂದು ಅವರಿಗೆ ತಿಳಿಯುವದು.

Chapter 26

1. ಹನ್ನೊಂದನೇ ವರುಷದ ತಿಂಗಳಿನ ಮೊದಲನೇ ದಿನದಲ್ಲಿ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
2. ಮನುಷ್ಯಪುತ್ರನೇ, ತೂರ್‌, ಯೆರೂಸಲೇಮಿನ ವಿಷಯವಾಗಿ ಆಹಾ, ಜನರ ದ್ವಾರವಾಗಿದ್ದದ್ದು ಮುರಿದು ಹೋಯಿತು, ಅದು ನನ್ನ ಕಡೆಗೆ ತಿರುಗಿಕೊಂಡಿದೆ, ಯೆರೂಸಲೇಮು ಹಾಳಾದ ಕಾರಣ ನಾನು ತುಂಬಿಕೊಳ್ಳುವೆನು ಎಂದು ಹೇಳಿದ್ದರಿಂದ
3. ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ತೂರ್‌ ದೇಶವೇ, ನಾನು ನಿನಗೆ ವಿರೋಧವಾಗಿದ್ದೇನೆ, ಸಮುದ್ರವು ತನ್ನ ಅಲೆಗಳನ್ನು ಹೇಗೆ ಬರಮಾಡುವದೋ ಹಾಗೆಯೇ ನಾನು ನಿನಗೆ ವಿರೋಧವಾಗಿ ಅನೇಕ ಜನಾಂಗಗಳನ್ನು ನಿನ್ನ ಮೇಲೆ ಬರಮಾಡುವೆನು.
4. ಅವರು ತೂರಿನ ಗೋಡೆಗಳನ್ನು ಕೆಡಿಸಿ ಅದರ ಗೋಪುರಗಳನ್ನು ಒಡೆದು ಬಿಡುವರು, ನಾನು ಅದರ ದೂಳನ್ನು ಅದರಿಂದ ಒರಿಸಿ ಅದನ್ನು ಬಂಡೆಯ ತುದಿಯಂತೆ ಮಾಡುವೆನು.
5. ಅದು ಸಮು ದ್ರದ ಮಧ್ಯದಲ್ಲಿ ಬಲೆಗಳನ್ನು ಹಾಕುವ ಸ್ಥಳವಾಗಿ ರುವದು; ನಾನೇ ಅದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ. ಅದು ಜನಾಂಗಗಳಿಗೆ ಕೊಳ್ಳೆ ಯಾಗಿರುವದು,
6. ಇದಲ್ಲದೆ ಬಯಲು ಭೂಮಿಯಲ್ಲಿ ರುವ ಅದರ ಕುಮಾರ್ತೆಯರು ಖಡ್ಗದಿಂದ ಕೊಲ್ಲಲ್ಪಡು ವರು, ಆಗ ನಾನೇ ಕರ್ತನೆಂದು ಎಲ್ಲರಿಗೂ ತಿಳಿಯುವದು.
7. ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ಉತ್ತರದ ರಾಜಾಧಿರಾಜನೂ ಬಾಬೆಲಿನ ಅರಸನೂ ಆದ ನೆಬೂಕದ್ನೆಚ್ಚರನನ್ನು ಕುದುರೆಗಳ ಸಂಗಡಲೂ ಸವಾರರ ಸಂಗಡಲೂ ರಥಗಳ ಸಂಗಡಲೂ ಬಹು ಜನರ ಸಂಗಡಲೂ ತೂರಿನ ಮೇಲೆ ತರುತ್ತೇನೆ.
8. ಅವನು ಬಯಲು ಭೂಮಿಯಲ್ಲಿನ ನಿನ್ನ ಕುಮಾರ್ತೆಯರನ್ನು ಖಡ್ಗದಿಂದ ಕೊಂದು ನಿನಗೆ ವಿರೋಧವಾಗಿ ಕೋಟೆಯನ್ನು ಕಟ್ಟಿ ದಿಬ್ಬ ಹಾಕಿ ನಿನಗೆ ವಿರೋಧವಾಗಿ ಖೇಡ್ಯವನ್ನು ಎತ್ತುವನು;
9. ತನ್ನ ಯುದ್ಧಯಂತ್ರಗಳನ್ನು ನಿನ್ನ ಗೋಡೆಗಳಿಗೆ ವಿರೋಧ ವಾಗಿ ತಾಕಿಸುವೆನು ನಿನ್ನ ಗೋಪುರಗಳನ್ನು ತನ್ನ ಕೊಡಲಿಗಳಿಂದ ಒಡೆದು ಬಿಡುವನು.
10. ಅವನ ಲೆಕ್ಕವಿಲ್ಲದ ಕುದುರೆಗಳಿಂದ ಎದ್ದ ಧೂಳು ನಿನ್ನನ್ನು ಮುಚ್ಚುವದು; ಗೋಡೆಯಿಲ್ಲದ ಕೋಟೆಯೊಳಗೆ ಶತ್ರು ಗಳು ಪ್ರವೇಶಿಸುವ ಪ್ರಕಾರ ಅವರು ನಿನ್ನ ಬಾಗಿಲು ಗಳಲ್ಲಿ ಪ್ರವೇಶಿಸುವಾಗ ಸವಾರರ, ರಥಗಳ, ಚಕ್ರಗಳ ಶಬ್ದದಿಂದ ನಿನ್ನ ಗೋಡೆಗಳು ಕದಲುವವು.
11. ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನೆಲ್ಲಾ ತುಳಿಸುವನು; ಜನರನ್ನು ಕತ್ತಿಯಿಂದ ಕೊಲ್ಲುವನು; ಬಲವಾದ ಕೋಟೆಗಳು ನೆಲಕ್ಕೆ ಬೀಳುವವು.
12. ಅವರು ನಿನ್ನ ಸಂಪತ್ತನ್ನು ಕಸಿದುಕೊಂಡು, ಸರಕುಗಳನ್ನು ಕೊಳ್ಳೇ ಹೊಡೆದು, ಗೋಡೆಗಳನ್ನು ಒಡೆದು, ರಮ್ಯವಾದ ಮನೆಗಳನ್ನು ಕೆಡವಿ, ಕಲ್ಲುಗಳನ್ನೂ ಮರಗಳನ್ನೂ ದೂಳನ್ನೂ ನೀರಿನಲ್ಲಿ ಹಾಕುವರು.
13. ಆಗ ನಿನ್ನ ಹಾಡು ಗಳ ಶಬ್ದವನ್ನು ನಿಲ್ಲಿಸುವೆನು, ಇನ್ನು ನಿನ್ನ ಕಿನ್ನರಿಗಳ ಧ್ವನಿ ಕೇಳಲ್ಪಡುವದಿಲ್ಲ.
14. ನಿನ್ನನ್ನು ಬಂಡೆಯ ತುದಿ ಯಂತೆ ಮಾಡುವೆನು. ನೀನು ಅಲ್ಲಿ ಬಲೆ ಹಾಸುವ ಸ್ಥಳವಾಗುವಿ. ಇನ್ನು ನೀನು ಕಟ್ಟಲ್ಪಡುವದಿಲ್ಲ; ಯಾಕಂ ದರೆ ಕರ್ತನಾದ ನಾನೇ ಅದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ.
15. ದೇವರಾದ ಕರ್ತನು ತೂರಿಗೆ ಹೀಗೆ ಹೇಳು ತ್ತಾನೆ--ನಿಮ್ಮನ್ನು ಬೀಳುವಿಕೆಯ ಶಬ್ದದಿಂದಲೂ ಗಾಯ ಪಟ್ಟವರು ಕೂಗುವಾಗಲೂ ನಿನ್ನ ಮಧ್ಯದಲ್ಲಿ ಕೊಲೆ ಯಾಗುವಾಗಲೂ ದ್ವೀಪಗಳು ನಡುಗುವದಿಲ್ಲವೇ?
16. ಆಮೇಲೆ ಸಮುದ್ರದ ಎಲ್ಲಾ ಪ್ರಭುಗಳು ತಮ್ಮ ಸಿಂಹಾಸನಗಳನ್ನು ಬಿಟ್ಟು ಇಳಿಯುವರು; ತಮ್ಮ ನಿಲು ವಂಗಿಗಳನ್ನು ತೆಗೆದುಹಾಕುವರು, ಚಿತ್ರವಾಗಿ ಹೊಲಿದ ತಮ್ಮ ವಸ್ತ್ರಗಳನ್ನು ಇಟ್ಟುಬಿಡುವರು; ನಡುಗುವಿಕೆಯನ್ನು ಹೊದ್ದುಕೊಳ್ಳುವರು; ನೆಲದ ಮೇಲೆ ಕುಳಿತುಕೊಳ್ಳು ವರು, ಕ್ಷಣಕ್ಷಣಕ್ಕೂ ನಡುಗುವರು, ನಿನ್ನ ವಿಷಯ ವಾಗಿ ಆಶ್ಚರ್ಯಪಡುವರು.
17. ನಿನ್ನ ವಿಷಯದಲ್ಲಿ ಗೋಳಾಟವನ್ನೆತ್ತಿ ನಿನಗೆ ಹೇಳುವದೇನಂದರೆ, ಸಮು ದ್ರಗಳ ಬಳಿಯಲ್ಲಿ ವಾಸಿಸಿದವಳೇ, ಹೆಸರು ಗೊಂಡ ಪಟ್ಟಣವೇ, ನೀನೂ ತನ್ನ ನಿವಾಸಿಗಳೂ ಸಮುದ್ರದಲ್ಲಿ ಬಲವಾಗಿದ್ದವಳೇ, ಅದರ ಸಮುದ್ರ ಸಂಚಾರವನ್ನೂ ಭಯಪಡಿಸಿದವಳೇ, ಅಯ್ಯೋ, ಹೇಗೆ ನಾಶವಾದಿ?
18. ಈಗ ನೀನು ಬೀಳುವ ದಿವಸದಲ್ಲಿ ದ್ವೀಪಗಳು ನಡುಗುವವು ಹೌದು, ನೀನು ಹೋಗಿಬಿಡುವದರಿಂದ ಸಮುದ್ರದಲ್ಲಿರುವ ದ್ವೀಪಗಳು ಗಾಬರಿಯಾಗುವವು.
19. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ನಿನ್ನನ್ನು ನಿವಾಸಿಗಳಿಲ್ಲದ ಪಟ್ಟಣದ ಹಾಗೆ ಹಾಳಾದ ಪಟ್ಟಣವಾಗಿ ಮಾಡುವಾಗ ಹೆಚ್ಚು ನೀರು ಮುಚ್ಚುವ ಹಾಗೆ ಅಗಾಧವನ್ನು ನಿನ್ನ ಮೇಲೆ ಬರ ಮಾಡುವೆನು.
20. ನಿನ್ನನ್ನು ಅಧೋಲೋಕಕ್ಕೆ ತಳ್ಳಿ ಪಾತಾಳಕ್ಕೆ ಇಳಿದ ನಿಮ್ಮ ಪೂರ್ವ ಕಾಲದವರೊಂದಿಗೆ ವಾಸಿಸುವಂತೆ ಮಾಡುವೆನು. ನಾನು ನಿನ್ನ ಮಹಿಮೆಯನ್ನು ಜೀವ ಲೋಕದಲ್ಲಿ ನೆಲೆಗೊಳಿಸದ ನಿರ್ನಿವಾಸಿಯಾಗುವಂತೆ ನಿನ್ನನ್ನು ಪಾತಾಳಕ್ಕಿಳಿದವರ ಸಹವಾಸಕ್ಕೆ ಸೇರಿಸುವೆನು.
21. ನಾನೂ ನಿನ್ನನ್ನು ದಿಗಿಲುಪಡಿಸುವೆನು, ಇನ್ನು ಮೇಲೆ ನೀನು ಇರುವದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡು ಕಿದರೂ ನೀನು ಸಿಗುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.

Chapter 27

1. ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
2. ಮನುಷ್ಯಪುತ್ರನೇ, ಈಗ ತೂರಿನ ಬಗ್ಗೆ ನೀನು ಗೋಳಾಟವನ್ನೆತ್ತು;
3. ತೂರಿಗೆ ಹೇಳು--ಸಮುದ್ರದ ಪ್ರವೇಶದಲ್ಲಿ ವಾಸಿಸುವವಳೇ, ಬಹು ದ್ವೀಪಗಳಿಗೆ ಜನರ ವ್ಯಾಪಾರವನ್ನು ನಡಿಸುವ ವಳೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ಓ ತೂರೇ, ನಾನು ಪೂರ್ಣ ಸೌಂದರ್ಯವಂತಳೆಂದು ನೀನು ಹೇಳಿದ್ದೀ.
4. ನಿನ್ನ ಮೇರೆಗಳು ಸಮುದ್ರದ ಮಧ್ಯದಲ್ಲಿವೆ, ನಿನ್ನನ್ನು ಕಟ್ಟಿದವರು ನಿನ್ನ ಸೌಂದರ್ಯ ವನ್ನು ಸಂಪೂರ್ಣಪಡಿಸಿದ್ದಾರೆ.
5. ಸೆನೀರಿನ ತುರಾಯಿ ಮರಗಳಿಂದ ನಿನ್ನ ಹಡಗಿನ ಹಲಗೆಗಳನ್ನೆಲ್ಲಾ ಕಟ್ಟಿ ದ್ದಾರೆ, ನಿನಗೆ ಪಠಸ್ತಂಭಗಳನ್ನು ಮಾಡುವದಕ್ಕೆ ಲೆಬ ನೋನಿನಿಂದ ದೇವದಾರುಗಳನ್ನು ತಂದಿದ್ದಾರೆ.
6. ನಿನ್ನ ಹುಟ್ಟು ಗೋಲನ್ನು ಬಾಷಾನಿನ ಓಕ್‌ ವೃಕ್ಷದಿಂದ ಮಾಡಿದ್ದಾರೆ, ಕಿತ್ತೀಯರ ದ್ವೀಪಗಳಿಂದ ತಂದ ದಂತದ ಹಲಗೆಗಳಿಂದ ಅಶ್ಶೂರ್ಯರ ಗುಂಪಿನವರು ಕೆತ್ತಿದ್ದಾರೆ.
7. ನಿನ್ನ ಹಾಯಿಯು ನಿನಗೆ ಧ್ವಜವು ಆಗಲೆಂದು ಅದನ್ನು ಐಗುಪ್ತದ ಕಸೂತಿಯ ನಾರುಬಟ್ಟೆಯಿಂದ ಮಾಡಿ ದ್ದಾರೆ. ಎಲೀಷದ ದ್ವೀಪಗಳಿಂದ ತಂದ ನೀಲಿಯೂ ನೇರಳೆ ಬಣ್ಣವೂ ನಿನಗೆ ಮುಚ್ಚಳವಾಯಿತು.
8. ಚೀದೋ ನಿನ ಅರ್ವಾದಿನ ನಿವಾಸಿಗಳು ನಿನಗೆ ಹುಟ್ಟು ಹಾಕುವ ವರಾಗಿದ್ದಾರೆ; ತೂರೇ, ನಿನ್ನಲ್ಲಿನ ವಿವೇಕಿಗಳೇ ನಿನ್ನ ನಾವಿಕರು.
9. ಗೆಬಲಿನ ಹಿರಿಯರೂ ಅದರ ಜ್ಞಾನಿಗಳೂ ನಿನ್ನ ಬಿರುಕುಗಳನ್ನು ಮುಚ್ಚುವವರಾಗಿ ನಿನ್ನಲ್ಲಿದ್ದಾರೆ. ಸಮುದ್ರದ ಸಕಲ ನಾವೆಗಳೂ ನಾವಿಕರ ಸಮೇತ ನಿನ್ನ ಬಳಿಯಲ್ಲಿದ್ದು ನಿನಗೆ ಸರಕುಗಳನ್ನು ತಂದೊಪ್ಪಿಸು ತ್ತಿದ್ದವು.
10. ಪಾರಸೀಯರೂ ಲೂದ್ಯರೂ ಪೂಟ್ಯರೂ ನಿನ್ನ ಸೈನ್ಯಾಧಿಕಾರಿಗಳಾಗಿ ನಿನ್ನ ಸೈನ್ಯದಲ್ಲಿದ್ದರು; ಗುರಾಣಿ ಯನ್ನೂ ಶಿರಸ್ತ್ರಾಣವನ್ನೂ ನಿನ್ನಲ್ಲಿ ತೂಗಿಸಿದರು. ಇವರು ನಿನಗೆ ಮಹತ್ತನ್ನು ಕೊಟ್ಟರು.
11. ಅರ್ವಾದಿನವರು ನಿನ್ನ ದಂಡಿನ ಸಂಗಡ ನಿನ್ನ ಗೋಡೆಗಳ ಸುತ್ತಲೂ ಮೇಲೆ ಇದ್ದರು; ಗಮ್ಮಾದ್ಯರು ನಿನ್ನ ಕೊತ್ತಲುಗಳಲ್ಲಿ ಕಾವಲಾಗಿದ್ದರು. ತಮ್ಮ ಖೇಡ್ಯಗಳನ್ನು ಸುತ್ತ ಮುತ್ತಲೂ ನಿನ್ನ ಗೋಡೆಗಳ ಮೇಲೆ ನೇತುಹಾಕಿ ಇವರು ನಿನ್ನ ಸೌಂದರ್ಯವನ್ನು ಪೂರ್ತಿಗೊಳಿಸಿದರು.
12. ತಾರ್ಷೀಷಿನವರು ನಿನ್ನ ಕಡೆಯ ವರ್ತಕರಾಗಿ ಬೆಳ್ಳಿ, ಕಬ್ಬಿಣ, ತವರ, ಸೀಸಗಳಿಂದ ನಿನ್ನ ಸಂತೆಗಳಲ್ಲಿ ವ್ಯಾಪಾರ ಮಾಡಿದರು; ಅಪಾರವಾದ ಬಗೆಬಗೆಯ ಆಸ್ತಿಯು ನಿನಗೆ ಬೇಕಾಗಿತ್ತು.
13. ಯಾವಾನ್‌, ತೂಬಲ್‌, ಮೇಷೆಕ್‌ ಇವರು ನಿನ್ನ ವರ್ತಕರಾಗಿದ್ದರು; ಮನುಷ್ಯರ ಪ್ರಾಣಗಳಿಂದಲೂ (ವ್ಯಕ್ತಿ) ಹಿತ್ತಾಳೆಯ ಪಾತ್ರೆ ಗಳಿಂದಲೂ ನಿನ್ನ ಸಂತೆಯಲ್ಲಿ ವ್ಯಾಪಾರ ನಡಿಸಿದರು.
14. ತೋಗರ್ಮದ ಮನೆತನದವರು ಕುದುರೆಗಳಿಂ ದಲೂ ಕುದುರೆ ಸವಾರಿಗಳಿಂದಲೂ ಹೇಸರ ಕತ್ತೆ ಗಳಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡಿಸಿದರು.
15. ದೇದಾನಿನವರು ನಿನ್ನ ವರ್ತಕರಾಗಿದ್ದರು; ಅನೇಕ ದ್ವೀಪಗಳು ನಿನ್ನ ಕೈಕೆಳಗೆ ವ್ಯಾಪಾರವನ್ನು ನಡೆಸಿದವು; ಅವರು ದಂತದಕೊಂಬುಗಳನ್ನೂ ಕರೀ ಮರಗಳನ್ನೂ ನಿನಗೆ ಕಾಣಿಕೆಯಾಗಿ ತರುತ್ತಿದ್ದರು.
16. ನಿನ್ನ ಕೈಕೆಲಸದ ವಸ್ತುಗಳು ಅಪಾರವಾಗಿದ್ದದರಿಂದ ಅರಾಮಿನವರು ನಿನ್ನವರಾಗಿ ವ್ಯಾಪಾರಮಾಡಿ ಕೆಂಪರಳು, ರಕ್ತಾಂಬರ, ಕಸೂತಿಯ ವಸ್ತ್ರ, ನಾರುಬಟ್ಟೆ, ಹವಳ, ಮಾಣಿಕ್ಯ ಮೊದಲಾದ ಸರಕುಗಳನ್ನು ನಿನಗೆ ತಂದು ಸುರಿದರು.
17. ಯೆಹೂದವೂ ಇಸ್ರಾಯೇಲ್‌ ದೇಶವೂ ನಿನ್ನ ಕಡೆಯ ವರ್ತಕರಾಗಿ ಮಿನ್ನೀಥಿನ ಗೋಧಿಯಿಂದಲೂ ಕಂಡಸಕ್ಕರೆ, ಜೇನು, ಎಣ್ಣೆ ಮತ್ತು ಸುಗಂಧ ತೈಲ ದಿಂದಲೂ ನಿನ್ನ ಸಂತೆಯಲ್ಲಿ ವ್ಯಾಪಾರ ನಡೆಸಿದರು.
18. ನಿನ್ನ ಕೈಕೆಲಸದ ವಸ್ತುಗಳು ನಿನ್ನಲ್ಲಿ ಅಪಾರವಾಗಿ ದ್ದದರಿಂದಲೂ ಅಪರಿಮಿತವಾದ ಬಗೆ ಬಗೆಯ ಆಸ್ತಿಯೂ ನಿನಗೆ ಬೇಕಾಗಿದ್ದರಿಂದಲೂ
19. ದಾನ್‌ ಮತ್ತು ಯಾವಾನ್‌ ಸಹ ಹೋಗುವಾಗ ಬರುವಾಗ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು. ಮೆರಗುವ ಕಬ್ಬಿಣ ದಾಲ್ಚಿನ್ನಿ, ಬಜೆ ಇವುಗಳು ನಿನ್ನ ಸಂತೆಯಲ್ಲಿ ಇದ್ದವು.
20. ದೇದಾನು ರಥಗಳ ಸವಾರಿಗಳಿಗೆ ತಕ್ಕ ಒಳ್ಳೆಯ ಬಟ್ಟೆಗಳಿಂದ ನಿನ್ನ ಸಂಗಡ ವ್ಯಾಪಾರ ಮಾಡುತ್ತಿತ್ತು.
21. ಅರಬಿಯ ಮತ್ತು ಕೇದಾರಿನ ಎಲ್ಲಾ ಪ್ರಧಾನಿಗಳು ನಿನ್ನ ಕೈಕೆಲಸದ ವ್ಯಾಪಾರಿಗಳಾಗಿದ್ದರು; ಕುರಿಮರಿಗಳಿಂದಲೂ ಟಗರುಗಳಿಂದಲೂ ಹೋತಗ ಳಿಂದಲೂ ನಿನ್ನೊಡನೆ ವ್ಯಾಪಾರ ಮಾಡಿದರು.
22. ಶೆಬ ದವರು, ರಗ್ಮದವರು ನಿನ್ನ ಕಡೆಯ ವರ್ತಕರಾಗಿ ಶ್ರೇಷ್ಟವಾದ ಎಲ್ಲಾ ಸುಗಂಧ ದ್ರವ್ಯದಿಂದಲೂ ಬೆಲೆ ಯುಳ್ಳ ಎಲ್ಲಾ ರತ್ನಗಳಿಂದಲೂ ಚಿನ್ನದಿಂದಲೂ ನಿನ್ನ ಸಂತೆಗಳಲ್ಲಿ ವ್ಯಾಪಾರ ನಡೆಸಿದರು.
23. ಹಾರಾನ್‌, ಕನ್ನೆ, ಏದೆನ್‌, ಶೆಬ, ಅಶ್ಶೂರ್‌ ಮತ್ತು ಕಿಲ್ಮದ್‌ವರು ನಿನ್ನ ವ್ಯಾಪಾರಿಗಳಾಗಿದ್ದರು.
24. ಇವರು ಎಲ್ಲಾ ತರಹದ ಸಾಮಾನುಗಳಲ್ಲೂ ನಿನ್ನ ವ್ಯಾಪಾರಿಗಳಾಗಿದ್ದರು. ಅಂದರೆ ನೀಲಿಬಟ್ಟೆಗಳು, ಕಸೂತಿಯ ಕೆಲಸ ದೇವ ದಾರುವಿನಿಂದ ಮಾಡಿ ಹಗ್ಗಗಳಿಂದ ಕಟ್ಟಿದಂತ, ರೇಷ್ಮೆ ತುಂಬಿಸಿದ ಪೆಟ್ಟಿಗೆಗಳನ್ನು ತಂದು ನಿನ್ನ ಪಟ್ಟಣಗಳಲ್ಲಿ ವರ್ತಕರಾಗಿದ್ದರು.
25. ತಾರ್ಷೀಷಿನ ಹಡಗುಗಳು ನಿನ್ನ ಮಾರುಕಟ್ಟೆಯಲ್ಲಿ ಸರಕುಗಳನ್ನು ತರುತ್ತಿದ್ದವು; ಹೀಗೆ ನೀನು ತುಂಬಿದ್ದೀ ಮತ್ತು ಸಮುದ್ರಗಳ ಮಧ್ಯದಲ್ಲಿ ಬಹಳ ಘನವುಳ್ಳವಳಾದಿ.
26. ಹುಟ್ಟುಹಾಕುವವರು ನಿನ್ನನ್ನು (ಮಹಾತರಂಗ ಗಳಿಗೆ) ಸಿಕ್ಕಿಸಿದ್ದಾರೆ. ಮೂಡಣ ಗಾಳಿಯು ಸಮುದ್ರದ ಮಧ್ಯದಲ್ಲಿ ನಿನ್ನನ್ನು ಮುರಿದಿದೆ.
27. ನಿನ್ನ ಆಸ್ತಿಪಾಸ್ತಿಗಳೂ ಸರಕುಗಳೂ ನಾವಿಕರೂ ಅಂಬಿಗರೂ ಒಡಕುಗಳನ್ನು ಮುಚ್ಚುವವರೂ ವ್ಯಾಪಾರಿ ಗಳೂ ನಿನ್ನಲ್ಲಿನ ಸಮಸ್ತ ಸೈನಿಕರೂ ಅಂತೂ ನಿನ್ನೊಳಗೆ ಸೇರಿಕೊಂಡಿರುವ ಸಿಬ್ಬಂದಿಯೆಲ್ಲವೂ ನಿನ್ನ ನಾಶನದ ದಿನದಲ್ಲಿ ಸಮುದ್ರದೊಳಗೆ ನಿನ್ನೊಂದಿಗೆ ಮುಳುಗಿ ಹೋಗುವರು.
28. ನಿನ್ನ ನಾವಿಕರ ಕಿರಿಚಾಟಕ್ಕೆ ಉಪ ನಗರಗಳು, ಪ್ರದೇಶಗಳು, ನಡುಗುವವು.
29. ಹುಟ್ಟು ಹಾಕುವವರೆಲ್ಲರೂ ಅಂಬಿಗರೂ ಸಮುದ್ರದ ಸಕಲ ನಾವಿಕರೂ ತಮ್ಮ ತಮ್ಮ ಹಡಗುಗಳಿಂದಿಳಿದು ನೆಲದ ಮೇಲೆ ನಿಂತುಕೊಂಡು,
30. ನಿನ್ನ ನಿಮಿತ್ತ ದುಃಖದಿಂದ ಅರಚಿ ತಲೆಗೆ ದೂಳೆರೆಚಿಕೊಂಡು ಬೂದಿಯಲ್ಲಿ ಬಿದ್ದು ಹೊರಳಾಡಿ;
31. ನಿನಗಾಗಿ ತಲೆಬೋಳಿಸಿಕೊಂಡು ಗೋಣಿಚೀಲವನ್ನು ಸುತ್ತಿಕೊಂಡು ಮನೋವ್ಯಥೆ ಯಿಂದ ಗೋಳಾಡಿ ನಿನಗೋಸ್ಕರ ಬಿಕ್ಕಿಬಿಕ್ಕಿ ಅಳುವರು.
32. ಅವರು ಗೋಳಾಡುತ್ತಾ ನಿನ್ನ ವಿಷಯವಾಗಿ ಶೋಕ ಗೀತವನ್ನೆತ್ತಿ ಹೀಗೆ ಪ್ರಲಾಪಿಸುವರು--ಸಮುದ್ರದ ನಡುವೆ ಹಾಳಾಗಿರುವ ತೂರಿನಂತ ಪಟ್ಟಣ ಯಾವದು?
33. ನಿನ್ನ ಸರಕು ಸಮುದ್ರದಿಂದ ಹೊರಟಾಗ ಅನೇಕ ಜನರಿಗೆ ತೃಪ್ತಿಪಡಿಸಿದೆ; ಅವುಗಳಿಂದ ಬಹು ಜನಾಂಗ ಗಳನ್ನು ತುಂಬಿಸಿದೆ; ನಿನ್ನ ಅಪಾರವಾದ ಐಶ್ವರ್ಯ ದಿಂದಲೂ ವ್ಯಾಪಾರದ ದಿನಸುಗಳಿಂದಲೂ ಭೂರಾಜ ರನ್ನು ಸಮೃದ್ಧಿಪಡಿಸಿದೆ.
34. ಈಗಲಾದರೋ ನೀನು ಸಮುದ್ರದಿಂದ ಹಾಳಾದೆ, ನಿನ್ನ ಸರಕುಗಳೂ ನಿನ್ನಲ್ಲಿ ಸೇರಿಕೊಂಡಿದ್ದ ಸಕಲ ಜನರೂ ಅಗಾಧ ಜಲದಲ್ಲಿ ಮುಳುಗಿ ಹೋದರು.
35. ದ್ವೀಪದ ನಿವಾಸಿಗಳೆಲ್ಲಾ ನಿನ್ನ ಸ್ಥಿತಿಗೆ ಬೆಚ್ಚಿ ವಿಸ್ಮಯರಾಗಿದ್ದಾರೆ. ಅರಸರು ಬಹಳ ವಾಗಿ ಭಯಪಟ್ಟಿದ್ದಾರೆ. ರಾಜರುಗಳು ನಡುಗಿ ಭೀತಿ ಗೊಂಡರು.
36. ಜನಾಂಗಗಳ ವರ್ತಕರು ನಿನ್ನನ್ನು ನೋಡಿ ಸಿಳ್ಳುಹಾಕುತ್ತಾರೆ. ನೀನು ಸಂಪೂರ್ಣ ಧ್ವಂಸ ವಾಗಿ ಇನ್ನೆಂದಿಗೂ ಇಲ್ಲದಂತಾಗಿರುವೆ.

Chapter 28

1. ಕರ್ತನ ವಾಕ್ಯವು ಮತ್ತೆ ಬಂದು ನನಗೆ ಹೇಳಿದ್ದೇನಂದರೆ--
2. ಮನುಷ್ಯಪುತ್ರನೇ, ತೂರಿನ ಪ್ರಭುವಿಗೆ ಹೇಳಬೇಕಾದದ್ದೇನಂದರೆ, ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನಿನ್ನ ಹೃದಯವು ಹೆಚ್ಚಿಸಲ್ಪಟ್ಟಿದ್ದರಿಂದ--ನಾನೇ ದೇವರು ದೇವರ ಸ್ಥಾನದಲ್ಲಿ ಸಮುದ್ರಗಳ ಮಧ್ಯದಲ್ಲಿ ಕುಳಿತುಕೊಂಡಿ ರುವೆನೆಂದು ಹೇಳಿದ್ದರಿಂದ ನೀನು ದೇವರಲ್ಲ, ಮನು ಷ್ಯನೇ; ಆದರೂ ನೀನು ನಿನ್ನ ಹೃದಯವನ್ನು ದೇವರ ಹೃದಯದಂತೆ ಮಾಡಿಕೊಂಡಿರುವೆ.
3. ಇಗೋ, ನೀನು ದಾನಿಯೇಲನಿಗಿಂತ ಜ್ಞಾನಿಯಾಗಿರುವೆ; ರಹಸ್ಯವಾದದ್ದು ಏನಿದ್ದರೂ ನಿನಗೆ ಮರೆಯಾಗಿರುವದಿಲ್ಲ.
4. ನಿನ್ನ ಜ್ಞಾನ ದಿಂದಲೂ ವಿವೇಕದಿಂದಲೂ ನಿನಗೆ ದ್ರವ್ಯವನ್ನುಂಟು ಮಾಡಿಕೊಂಡಿರುವೆ. ಚಿನ್ನವನ್ನೂ ಬೆಳ್ಳಿಯನ್ನೂ ನಿನ್ನ ಭಂಡಾರಗಳಲ್ಲಿ ಇಟ್ಟುಕೊಂಡಿರುವೆ.
5. ನಿನ್ನ ಅಧಿಕ ಜ್ಞಾನದಿಂದಲೂ ವ್ಯಾಪಾರದಿಂದಲೂ ಸಂಪತ್ತನ್ನು ವೃದ್ಧಿಮಾಡಿಕೊಂಡಿರುವಿ. ನಿನ್ನ ಆಸ್ತಿಯ ನಿಮಿತ್ತ ನಿನ್ನ ಹೃದಯವು ಹೆಚ್ಚಿಸಿಕೊಂಡಿದೆ;
6. ಆದದರಿಂದ ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನಿನ್ನ ಹೃದಯವನ್ನು ದೇವರ ಹೃದಯದಂತೆ ಮಾಡಿಕೊಂಡ ದ್ದರಿಂದ;
7. ಇಗೋ, ನಾನು ನಿನ್ನ ಮೇಲೆ ಭಯಂಕರ ವಾದ ಜನಾಂಗಗಳ ಅಪರಿಚಿತರನ್ನು ತರುತ್ತೇನೆ; ಅವರು ನಿನ್ನ ಜ್ಞಾನದ ಸೊಬಗಿನ ಮೇಲೆ ವಿರುದ್ಧವಾಗಿ ಕತ್ತಿಯನ್ನು ಹಿರಿಯುವರು; ನಿನ್ನ ಪ್ರಕಾಶವನ್ನು ಕೆಡಿಸುವರು.
8. ನಿನ್ನನ್ನು ಪಾತಾಳಕ್ಕೆ ತಳ್ಳಿಬಿಡುವರು, ಸಮುದ್ರಗಳ ಮಧ್ಯದಲ್ಲಿ ಹತವಾದವರ ಹಾಗೆ ನೀನು ಸಾಯುವೆ.
9. ನಿನ್ನನ್ನು ಕೊಲ್ಲಲು ಬರುವವನ ಮುಂದೆ ಇನ್ನು ನಾನು ದೇವರೆಂದು ಹೇಳುವಿಯೋ? ನಿನ್ನನ್ನು ಕೊಲ್ಲುವವನ ಕೈಯಲ್ಲಿ ನೀನು ದೇವರಲ್ಲ ನರ ಪ್ರಾಣಿಯೇ;
10. ನೀನು ಅನ್ಯರ ಕೈಯಿಂದ ಸುನ್ನತಿ ಹೀನರ ಮರಣಕ್ಕೆ ಗುರಿ ಯಾಗುವಿ ನಾನೇ ಇದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳಿದ್ದಾನೆ.
11. ಇದಲ್ಲದೆ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ,
12. ಮನುಷ್ಯಪುತ್ರನೇ, ತೂರಿನ ಅರಸನ ವಿಷಯದಲ್ಲಿ ಶೋಕಗೀತೆಯನ್ನೆತ್ತಿ ಅವನಿಗೆ ಹೀಗೆ ಹೇಳು--ದೇವರಾದ ಕರ್ತನು ಹೀಗೆ ಹೇಳು ತ್ತಾನೆ, ಸಂಪೂರ್ಣ ಜ್ಞಾನಿ, ಪರಿಪೂರ್ಣ ಸುಂದರವಾದ ನೀನು ಲೆಕ್ಕವನ್ನು ಮುದ್ರಿಸುತ್ತೀ.
13. ದೇವರ ತೋಟ ವಾದ ಏದೆನಿನಲ್ಲಿ ನೀನಿದ್ದಿ. ಮಾಣಿಕ್ಯ, ಪುಷ್ಯರಾಗ, ಪಚ್ಚೆ, ಪೀತರತ್ನ, ವಜ್ರ, ವೈಡೂರ್ಯ, ನೀಲ ಗೋಮೇ ಧಿಕ, ಕೆಂಪು, ಸ್ಪಟಿಕ, ಚಿನ್ನ ಈ ಅಮೂಲ್ಯವಾದವು ಗಳಿಂದ ಭೂಷಿತವಾಗಿದ್ದಿ. ನಿನ್ನಲ್ಲಿದ್ದ ದಮ್ಮಡಿಗಳೂ ಕೊಳಲುಗಳೂ ಇವುಗಳ ಕೆಲಸವು ನಿನ್ನಲ್ಲಿದ್ದು ನಿನ್ನ ಸೃಷ್ಟಿಯ ದಿನದಲ್ಲಿ ಸಿದ್ಧವಾದವು.
14. ನೀನೇ ಮುಚ್ಚು ವಂತ ಅಭಿಷೇಕಿಸಲ್ಪಟ್ಟ ಕೆರೂಬಿಯು ದೇವರ ಪರಿಶುದ್ಧ ಪರ್ವತದಲ್ಲಿ ನಿನ್ನನ್ನು ಇಟ್ಟೆನು; ಅಲ್ಲೇ ನೀನಿದ್ದಿ, ಬೆಂಕಿಯ ಕಲ್ಲುಗಳ, ಮಧ್ಯದಲ್ಲಿ ನೀನು ಕೆಳಗೂ ಮೇಲಕ್ಕೂ ತಿರುಗಾಡಿದಿ.
15. ನಿನ್ನ ಸೃಷ್ಟಿಯ ದಿನದಿಂದ ನಿನ್ನಲ್ಲಿ ಅಪರಾಧವು ಸಿಕ್ಕುವ ತನಕ ನಿನ್ನ ನಡತೆಯು ನಿರ್ದೋಷವಾಗಿ ಕಾಣುತ್ತಿತ್ತು.
16. ನಿನ್ನ ಮಿತಿಯಿಲ್ಲದ ವ್ಯಾಪಾರದಿಂದ ನಿನ್ನಲ್ಲಿ ಬಲಾತ್ಕಾರವು ತುಂಬಿ ನೀನು ಪಾಪಿಯಾದಿ; ಆದದರಿಂದ ನಿನ್ನನ್ನು ಅಪವಿತ್ರನೆಂದು ದೇವರ ಪರ್ವತದೊಳಗಿನಿಂದ ನಾನು ಬಿಸಾಡುವೆನು. ಓ ಮುಚ್ಚುವ ಕೆರೂಬಿಯೇ, ಬೆಂಕಿಯ ಕಲ್ಲುಗಳ ಮಧ್ಯದಿಂದ ನಿನ್ನನ್ನು ನಾಶಮಾಡುವೆನು.
17. ನಿನ್ನ ಸೌಂದರ್ಯದ ನಿಮಿತ್ತ ನಿನ್ನ ಹೃದಯವು ಉಬ್ಬಿ ಕೊಂಡಿತು; ನಿನ್ನ ಪ್ರಕಾಶದ ನಿಮಿತ್ತ ನಿನ್ನ ಜ್ಞಾನವನ್ನು ಕೆಡಿಸಿಕೊಂಡಿ; ನಾನು ನಿನ್ನನ್ನು ನೆಲಕ್ಕೆ ಹಾಕುವೆನು. ಅರಸನ ಮುಂದೆ ಅವರು ನೋಡುವ ಹಾಗೆ ನಿನ್ನನ್ನು ಇಡುತ್ತೇನೆ;
18. ನಿನ್ನ ಅಪಾರವಾದ ಅಪರಾಧಗ ಳಿಂದಲೂ ಅನ್ಯಾಯವಾದ ವ್ಯಾಪಾರಗಳಿಂದಲೂ ನಿನ್ನಲ್ಲಿನ ಪವಿತ್ರಾಲಯಗಳನ್ನು ಹೊಲಸು ಮಾಡಿದೆ. ಆದಕಾರಣ ನಾನು ನಿನ್ನೊಳಗಿಂದ ಬೆಂಕಿಯನು ಬರಮಾಡಿದೆನು, ಅದು ನಿನ್ನನ್ನು ನುಂಗಿತು; ನೋಡು ವವರೆಲ್ಲರ ಮುಂದೆ ನಿನ್ನನ್ನು ಬೂದಿ ಮಾಡುವೆನು;
19. ನಿನ್ನನ್ನು ಅರಿತ ಜನರೆಲ್ಲರೂ ನಿನ್ನ ವಿಷಯದಲ್ಲಿ ವಿಸ್ಮಯಗೊಳ್ಳುವರು; ನೀನು ಸಂಪೂರ್ಣ ಭೀತಿಗೊಳ ಗಾಗಿ ಇನ್ನೆಂದಿಗೂ ಇಲ್ಲದಂತಾಗುವಿ.
20. ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇ ನಂದರೆ,
21. ಮನುಷ್ಯಪುತ್ರನೇ, ನೀನು ಚೀದೋನಿಗೆ ಅಭಿಮುಖನಾಗಿ ಅದಕ್ಕೆ ವಿರುದ್ಧವಾಗಿ ಪ್ರವಾದಿಸು.
22. ನೀನು ಹೇಳಬೇಕಾದದ್ದೇನಂದರೆ -- ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಚಿದೋನೇ ನಾನು ನಿನಗೆ ವಿರೋಧವಾಗಿದ್ದೇನೆ; ನಿನ್ನ ಮಧ್ಯದಲ್ಲಿ ಘನವನ್ನು ಹೊಂದುವೆನು. ಆಗ ನಾನು ಅದರಲ್ಲಿ ನ್ಯಾಯಗಳನ್ನು ತೀರಿಸಿ, ಪರಿಶುದ್ಧನಾಗುವಾಗ ನಾನೇ ಕರ್ತನೆಂದು ತಿಳಿಯುವರು.
23. ಅದರಲ್ಲಿ ವ್ಯಾಧಿಯನ್ನೂ ಬೀದಿಗಳಲ್ಲಿ ರಕ್ತವನ್ನು ಕಳುಹಿಸುವೆನು; ಸುತ್ತಲೂ ಅದಕ್ಕೆ ವಿರುದ್ಧವಾಗಿ ಕತ್ತಿಯಿಂದ ಹತವಾದವರು ಅದರಲ್ಲಿ ಬೀಳುವರು; ಆಗ ನಾನೇ ಕರ್ತನೆಂದು ತಿಳಿಯುವರು.
24. ಇಸ್ರಾಯೇಲ್‌ ವಂಶದವರಿಗೆ ಚುಚ್ಚುವ ದತ್ತೂರಿ ಸುತ್ತಲೂ ಹೀನೈಸುವ ನೋಯಿಸುವ ಮುಳ್ಳು ಇನ್ನಿರದು; ನಾನೇ ದೇವರಾದ ಕರ್ತನೆಂದು ಅವರಿಗೆ ತಿಳಿಯುವದು.
25. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಇಸ್ರಾಯೇಲ್ಯರ ಮನೆತನದವರನ್ನು ಚದರಿಹೋದ ಜನಾಂಗದಿಂದ ಒಂದುಗೂಡಿಸಿ ಅನ್ಯಜನಾಂಗಗಳ ಮುಂದೆ ಅವರಲ್ಲಿ ಪರಿಶುದ್ಧವಾದ ಮೇಲೆ ಇಸ್ರಾ ಯೇಲ್ಯರು ನನ್ನ ಸೇವಕನಾದ ಯಾಕೋಬನಿಗೆ ನಾನು ಅನುಗ್ರಹಿಸಿದ ತಮ್ಮ ದೇಶದಲ್ಲಿಯೇ ವಾಸಿಸುವರು;
26. ಅವರು ನಿರ್ಭಯರಾಗಿ ಅಲ್ಲಿ ವಾಸಿಸುವರು; ಮನೆ ಗಳನ್ನು ಕಟ್ಟುವರು; ದ್ರಾಕ್ಷೇತೋಟಗಳನ್ನು ನೆಡುವರು; ಹೌದು, ಸುತ್ತಲಾಗಿ ಅವರನ್ನು ಅಸಡ್ಡೆ ಮಾಡಿದವರೆಲ್ಲರ ಮೇಲೆ ನಾನು ನ್ಯಾಯ ತೀರಿಸಿದ ಮೇಲೆ ಅವರು ನಿರ್ಭಯರಾಗಿ ವಾಸಿಸುವರು. ಕರ್ತನಾದ ನಾನೇ ಅವರ ದೇವರೆಂದು ತಿಳಿಯುವರು.

Chapter 29

1. ಹತ್ತನೇ ವರುಷದ ಹತ್ತನೇ ತಿಂಗಳಿನ, ಹನ್ನೆರಡನೇ ದಿನದಲ್ಲಿ ಕರ್ತನ ವಾಕ್ಯವು ನನಗೆ ಹೇಳಿದ್ದೇನಂದರೆ--
2. ಮನುಷ್ಯಪುತ್ರನೇ, ನೀನು ಐಗುಪ್ತದ ಅರಸನಾದ ಫರೋಹನ ಕಡೆಗೆ ಮುಖ ಮಾಡಿ ಅವನಿಗೂ ಸಮಸ್ತ ಐಗುಪ್ತಕ್ಕೂ ವಿರೋಧವಾಗಿ ಪ್ರವಾದಿಸು.
3. ನೀನು ಮಾತನಾಡಿ ಹೇಳಬೇಕಾದ ದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಐಗುಪ್ತದ ಅರಸನಾದ ಫರೋಹನೇ, ತನ್ನ ನದಿಗಳ ಮಧ್ಯದಲ್ಲಿ ಮಲಗಿಕೊಂಡು--ಈ ನದಿ ನನ್ನದು, ನಾನೇ ಅದನ್ನು ನನಗೋಸ್ಕರ ಮಾಡಿ ಕೊಂಡಿದ್ದೇನೆಂದು ಹೇಳಿಕೊಂಡ ದೊಡ್ಡ ಘಟ ಸರ್ಪವೇ, ಇಗೋ, ನಾನು ನಿನಗೆ ವಿರುದ್ಧವಾಗಿದ್ದೇನೆ.
4. ಆದರೆ ನಿನ್ನ ದವಡೆಗಳಲ್ಲಿ ಗಾಳಗಳನ್ನು ಹಾಕಿ, ನದಿಗಳ ವಿಾನುಗಳನ್ನು ಬೆನ್ನು ಚಿಪ್ಪುಗಳಿಗೆ ಅಂಟಿಕೊಳ್ಳುವಂತೆ ಮಾಡಿ ನಿನ್ನನ್ನು ನಿನ್ನ ನದಿಗಳೊಳಗಿಂದ ಮೇಲೆ ಎಳೆದು ನಿನ್ನ ವಿಾನುಗಳು ಚಿಪ್ಪುಗಳಿಗೆ ಅಂಟಿಕೊಳ್ಳುವಂತೆ ಮಾಡುವೆನು. ನಿನ್ನನ್ನೂ ನಿನ್ನ ನದಿಗಳ ವಿಾನುಗಳನ್ನೂ ಅರಣ್ಯದಲ್ಲಿ ಹಾಕುವೆನು; ನೀನು ಬಯಲುಗಳ ಮೇಲೆ ಬಿದ್ದಿರುವಿ; ನಿನ್ನನ್ನು ಯಾರೂ ಒಟ್ಟುಗೂಡಿಸುವದು ಇಲ್ಲ, ಸೇರಿಸುವದೂ ಇಲ್ಲ.
5. ಭೂಮಿಯ ಮೇಲಿರುವ ಮೃಗಗಳಿಗೂ ಆಕಾಶದ ಪಕ್ಷಿಗಳಿಗೂ ನಿನ್ನನ್ನು ಆಹಾರ ವನ್ನಾಗಿ ಕೊಟ್ಟಿದ್ದೇನೆ.
6. ಆಗ ಎಲ್ಲಾ ಐಗುಪ್ತದ ನಿವಾಸಿಗಳು ನಾನೇ ಕರ್ತನೆಂದು ತಿಳಿಯುವರು; ಅವರು ಇಸ್ರಾಯೇಲ್ಯರ ಮನೆತನದವರಿಗೆ ದಂಟಿನ ಊರು ಗೋಲಾಗಿದ್ದರು.
7. ಇಸ್ರಾಯೇಲ್ಯರು ನಿನ್ನ ಮೇಲೆ ಕೈಯಿಡಲು ನೀನು ಮುರಿದು ಅವರ ಹೆಗಲನ್ನು ಚುಚ್ಚಿದಿ; ಅವರು ನಿನ್ನನ್ನು ಊರಿಕೊಂಡಾಗ ನೀನು ಒಡೆದು ಅದರ ನಡುವುಗಳನ್ನೆಲ್ಲಾ ನಿಲ್ಲಿಸಿಬಿಟ್ಟೆ.
8. ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ನಾನು ನಿನ್ನ ಮೇಲೆ ಕತ್ತಿಯನ್ನು ತರುತ್ತೇನೆ. ಮನುಷ್ಯರನ್ನೂ ಮೃಗಗಳನ್ನೂ ನಿನ್ನೊಳಗಿಂದ ಕಡಿದುಬಿಡುತ್ತೇನೆ.
9. ಅವನು--ಆ ನದಿಯು ನನ್ನದೇ, ನಾನೇ ಅದನ್ನು ನಿರ್ಮಿಸಿದವನೆಂದು ಹೇಳಿಕೊಂಡದ್ದ ರಿಂದ ಐಗುಪ್ತ ದೇಶವು ಹಾಳು ಅರಣ್ಯವಾಗುವದು; ಆಗ ನಾನೇ ಕರ್ತನೆಂದು ಅವರು ತಿಳಿಯುವರು.
10. ಆದದರಿಂದ ಇಗೋ, ನಾನು ನಿನಗೆ ವಿರೋಧ ವಾಗಿಯೂ ನಿನ್ನ ನದಿಗಳಿಗೆ ವಿರುದ್ಧವಾಗಿಯೂ ಇದ್ದೇನೆ. ಐಗುಪ್ತದೇಶವನ್ನು ಸೆವೇನೆಯ ಗೋಪುರ ಮೊದಲುಗೊಂಡು ಕೂಷಿನ ಪ್ರಾಂತ್ಯದವರೆಗೂ ಸಂಪೂರ್ಣವಾಗಿ ಕಾಡಾಗಿಯೂ ಹಾಳಾಗಿಯೂ ಮಾಡುತ್ತೇನೆ.
11. ಯಾವ ಮನುಷ್ಯನ ಪಾದವಾದರೂ ಮೃಗಗಳ ಪಾದವಾದರೂ ಅದರಲ್ಲಿ ಹಾದುಹೋಗುವ ದಿಲ್ಲ ಅಥವಾ ನಾಲ್ವತ್ತು ವರ್ಷಗಳ ಕಾಲ ಅದರಲ್ಲಿ ವಾಸಮಾಡುವವರೇ ಇರುವದಿಲ್ಲ.
12. ನಾನು ಐಗುಪ್ತ ದೇಶದವನ್ನು ಹಾಳಾದ ದೇಶಗಳ ಮಧ್ಯದಲ್ಲಿ ಹಾಳು ಮಾಡುವೆನು; ಅದರ ಪಟ್ಟಣಗಳು ಕಾಡಾಗಿರುವ ಪಟ್ಟಣಗಳ ಮಧ್ಯದಲ್ಲಿ ನಾಲ್ವತ್ತು ವರ್ಷಗಳು ಹಾಳಾಗಿರುವವು; ನಾನು ಐಗುಪ್ತರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳಲ್ಲಿ ಹರಡಿಸಿಬಿಡುವೆನು.
13. ಆದರೂ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾಲ್ವತ್ತು ವರ್ಷಗಳ ಕೊನೆಯಲ್ಲಿ ನಾನು ಐಗುಪ್ತರಲ್ಲಿ ಚದರಿರುವ ಜನಾಂಗಗಳಲ್ಲಿ ಕೂಡಿಸುವೆನು.
14. ನಾನು ಐಗುಪ್ತರನ್ನು ಸೆರೆಯಿಂದ ತಿರುಗಿ ಬಿಡಿಸಿ ಅವರನ್ನು ಪತ್ರೋಸಿನ ದೇಶಕ್ಕೆ ಅಂದರೆ ಅವರ ಜನ್ಮದೇಶಕ್ಕೆ ಮತ್ತೆ ಬರಮಾಡು ವೆನು; ಅಲ್ಲಿ ಅವರು ಕನಿಷ್ಠ ರಾಜ್ಯದವರಾಗಿರುವರು.
15. ಆ ರಾಜ್ಯವು ಸಮಸ್ತ ರಾಜ್ಯಗಳಲ್ಲಿ ಕನಿಷ್ಠ ರಾಜ್ಯವೆನಿ ಸಿಕೊಳ್ಳುವದು; ಮಿಕ್ಕ ಜನಾಂಗಗಳಿಗಿಂತ ತಾನು ದೊಡ್ಡದೆಂದು ಅದು ಇನ್ನು ಮೇಲೆ ತಲೆ ಎತ್ತದು; ಅದು ಜನಾಂಗಗಳ ಮೇಲೆ ದೊರೆತನ ಮಾಡಲಾಗ ದಂತೆ ಅದನ್ನು ಕ್ಷೀಣಗತಿಗೆ ತರುವೆನು.
16. ಇನ್ನು ಅದು ಇಸ್ರಾಯೇಲ್‌ ವಂಶದವರ ಭರವಸವಾಗದೆ, ಇವರು ಅವರ ಕಡೆಗೆ ನೋಡಿದಾಗ ಅಕ್ರಮವನ್ನು ಜ್ಞಾಪಕಕ್ಕೆ ತರಬೇಕಾಗಿರುವದಿಲ್ಲ; ಆಗ ನಾನೇ ದೇವ ರಾದ ಕರ್ತನೆಂದು ಅವರಿಗೆ ತಿಳಿಯುವದು.
17. ಇಪ್ಪತ್ತೇಳನೇ ವರುಷದ ಮೊದಲನೇ ತಿಂಗಳಿನ, ಮೊದಲನೇ ದಿನದಲ್ಲಿ ಆದದ್ದೇನಂದರೆ ಕರ್ತನ ವಾಕ್ಯವು ನನಗೆ ಬಂದು ಹೀಗೆ ಹೇಳಿತು.
18. ಮನುಷ್ಯ ಪುತ್ರನೇ, ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ತೂರಿಗೆ ಮುತ್ತಿಗೆ ಹಾಕಿ ತನ್ನ ಸೈನಿಕರಿಂದ ಅತಿಶ್ರಮ ವಾದ ಸೇವೆಯನ್ನು ಮಾಡಿಸಿದನು. ಪ್ರತಿಯೊಬ್ಬನ ತಲೆ ಬೋಳಾಗಿದೆ, ಪ್ರತಿಯೊಬ್ಬನ ಹೆಗಲೂ ಸುಲಿದು ಹೋಗಿದೆ. ಆದರೆ ಅವನು ಆ ಮುತ್ತಿಗೆಯಲ್ಲಿ ಪಟ್ಟ ಶ್ರಮಕ್ಕೆ ಅವನಿಗಾಗಲೀ ಅವನ ಸೈನಿಕರಿಗಾಗಲೀ ತೂರ್‌ನಿಂದ ಪ್ರತಿಫಲವೇನೂ ದೊರೆಯಲಿಲ್ಲ.
19. ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ನಾನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಗೆ ಐಗುಪ್ತದೇಶವನ್ನು ಕೊಡುತ್ತೇನೆ, ಅವನು ಅದರ ಜನಸಮೂಹವನ್ನೂ ಕೊಳ್ಳೆಯನ್ನೂ ಸುಲಿಗೆಯನ್ನು ಸೂರೆಮಾಡುವನು. ಇದೇ ಅವನ ದಂಡು ಪಟ್ಟ ಶ್ರಮಕ್ಕೆ ಪ್ರತಿಫಲವಾಗುವದು.
20. ಅವನು ಅದಕ್ಕೆ ವಿರುದ್ಧವಾಗಿ ಪಟ್ಟ ಕಷ್ಟಗಳಿಗೋಸ್ಕರ ನಾನು ಅವನಿಗೆ ಐಗುಪ್ತದೇಶವನ್ನು ಕೊಟ್ಟಿದ್ದೇನೆ; ನನಗೋಸ್ಕರ ಅದನ್ನು ಮಾಡಿದ್ದಾರೆಂದು ದೇವರಾದ ಕರ್ತನು ಹೇಳುತ್ತಾನೆ.
21. ಆ ದಿನದಲ್ಲಿ ನಾನು ಇಸ್ರಾಯೇಲ್ಯರ ಮನೆ ತನದವರ ಕೊಂಬನ್ನು ಚಿಗುರಿಸುವೆನು. ಅವರ ಮಧ್ಯ ದಲ್ಲಿ ನಿನ್ನ ಬಾಯನ್ನು ತೆರೆಯುವಂತೆ ಮಾಡುವೆನು. ನಾನೇ ಕರ್ತನೆಂದು ಅವರು ತಿಳಿಯುವರು.

Chapter 30

1. ಕರ್ತನ ವಾಕ್ಯವು ಮತ್ತೆ ನನಗೆ ಬಂದು ಹೇಳಿದ್ದೇನಂದರೆ
2. ಮನುಷ್ಯಪುತ್ರನೇ, ಪ್ರವಾದಿಸು ಮತ್ತು ಹೇಳು--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಅಯ್ಯೋ! ದಿನವೇ ಎಂದು ಅರಚಿಕೊಳ್ಳಿರಿ.
3. ಆ ದಿನವು ಸವಿಾಪವಾಯಿತು, ಕರ್ತನ ದಿನವು, ಆ ಕಾರ್ಮುಗಿಲಿನ ದಿನವು ಸವಿಾಪ ವಾಯಿತು; ಅದೇ ಅನ್ಯಜನಾಂಗಗಳ ಕಾಲವಾಗಿ ರುವದು.
4. ಕತ್ತಿಯು ಐಗುಪ್ತದ ಮೇಲೆ ಬರುವದು, ಅಲ್ಲಿನ ಪ್ರಜೆಗಳು ಹತರಾಗಲು ಐಥಿಯೋಪ್ಯ ದಲ್ಲಿಯೂ ಸಂಕಟವಾಗುವದು; ಐಗುಪ್ತದ ಜನಸಮೂ ಹವು ಒಯ್ಯಲ್ಪಡುವದು ಅದರ ಅಸ್ತಿವಾರವು ಮುರಿದು ಹಾಳಾಗುವದು.
5. ಐಥಿಯೋಪ್ಯ, ಲಿಬಿಯ ಮತ್ತು ಲಿಡಿಯ ಎಲ್ಲಾ ಮಿಶ್ರಜನರೂ ಕೂಬ್ಯರೂ ಮಿತ್ರರಾಜ್ಯ ದವರೂ ಅವರ ಸಂಗಡ ಕತ್ತಿಯಿಂದ ಹತರಾಗುವರು.
6. ಕರ್ತನು ಹೀಗೆ ಹೇಳುತ್ತಾನೆ--ಐಗುಪ್ತಕ್ಕೆ ಆಧಾರ ವಾದವರು ಬೀಳುವರು. ಅದರ ಶಕ್ತಿಯ ಮದವು ಇಳಿದು ಹೋಗುವದು. ಅಲ್ಲಿನ ಜನರು ಮಿಗ್ದೋಲಿ ನಿಂದ ಸೆವೇನೆಯ ಗೋಪುರ ಮೊದಲುಗೊಂಡು ಅವರಲ್ಲಿ ಕತ್ತಿಯಿಂದ ಹತರಾಗುವರು ಎಂದು ದೇವ ರಾದ ಕರ್ತನು ಹೇಳುತ್ತಾನೆ.
7. ಆಗ ಅವರು ಹಾಳಾಗಿರುವ ದೇಶಗಳೊಳಗೆ ಹಾಳಾಗುವರು. ಅದರ ಪಟ್ಟಣ ಗಳು ಹಾಳಾದ ಪಟ್ಟಗಳ ಮಧ್ಯದಲ್ಲಿ ಇರುವವು.
8. ನಾನು ಐಗುಪ್ತದಲ್ಲಿ ಬೆಂಕಿಯಿಟ್ಟಾಗ ಅದಕ್ಕೆ ಸಹಾಯ ಮಾಡುವವರೆಲ್ಲರೂ ನಾಶವಾದ ಮೇಲೆ ಅವರಿಗೆ ನಾನೇ ಕರ್ತನೆಂದು ತಿಳಿಯುವದು.
9. ಆ ದಿನದಲ್ಲಿ ದೂತರು ನನ್ನ ಸನ್ನಿಧಾನದಿಂದ ಹೊರಟು ಹಡಗುಗಳಲ್ಲಿ ಪ್ರಯಾಣ ಮಾಡಿ ನಿಶ್ಚಿಂತರಾದ ಐಥಿಯೋಪ್ಯರನ್ನು ಹೆದರಿಸುವರು; ಐಗುಪ್ತದ ದಿನದಲ್ಲಿ ಆದಹಾಗೆ ಅವರ ಮೇಲೆ ದೊಡ್ಡಬಾಧೆ ಉಂಟಾಗುವದು; ಇಗೋ, ಅದು ಬಂತು.
10. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಐಗುಪ್ತದ ಜನಸಮೂಹವನ್ನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಿಂದ ಕೊನೆಗಾಣಿಸುವೆನು.
11. ಆ ದೇಶವನ್ನು ನಾಶಪಡಿಸುವದಕ್ಕೆ ಅವನನ್ನು ಅತಿಭಯಂಕರ ಜನಾಂಗದವರಾದ ಅವನೊಡನೆ ಬರ ಮಾಡುವೆನು. ಅವರು ಐಗುಪ್ತಕ್ಕೆ ವಿರೋಧವಾಗಿ ಕತ್ತಿ ಹಿರಿದು ದೇಶವನ್ನು ಹತವಾದವುಗಳಿಂದ ತುಂಬಿ ಸುವರು.
12. ಇದಲ್ಲದೆ ನಾನು ನದಿಗಳನ್ನು ಒಣಗಿಸಿ ದೇಶವನ್ನು ದುಷ್ಟರ ಕೈಗೆ ಮಾರಿಬಿಡುವೆನು; ದೇಶವನ್ನು ಅದರ ಪರಿಪೂರ್ಣತೆಯನ್ನೂ ಅವರ ಅನ್ಯರ ಕೈಯಿಂದ ಹಾಳುಮಾಡುವೆನು. ಕರ್ತನಾದ ನಾನೇ ಇದನ್ನು ಮಾತನಾಡಿದ್ದೇನೆ.
13. ದೇವರಾದ ಕರ್ತನು ಹೀಗೆ ಹೇಳುತ್ತಾನೆ. ನಾನು ವಿಗ್ರಹಗಳನ್ನು ಹಾಳು ಮಾಡಿ ಬೊಂಬೆಗಳನ್ನು ನೋಫಿನಲ್ಲಿ ತೀರಿಸಿಬಿಡುವೆನು; ಐಗುಪ್ತದೇಶದ ಪ್ರಭುವು ಇನ್ನು ಇರುವದಿಲ್ಲ, ನಾನು ಐಗುಪ್ತ ದೇಶದಲ್ಲಿ ಭಯವನ್ನು ಉಂಟುಮಾಡುತ್ತೇನೆ.
14. ನಾನು ಪತ್ರೋಸನ್ನು ಹಾಳು ಮಾಡುವೆನು; ಚೋವನಿನಲ್ಲಿ ಬೆಂಕಿಯಿಡುವೆನು, ನೋಪುರದಲ್ಲಿ ನ್ಯಾಯಗಳನ್ನು ತೀರಿಸುವೆನು.
15. ಐಗುಪ್ತಕ್ಕೆ ರಕ್ಷಣೆಯ ಕೋಟೆಯಾದ ಸೀನಿನ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ ನೋಪುರದ ಜನಸಮೂಹಗಳನ್ನೆಲ್ಲಾ ಕತ್ತರಿಸಿ ಬಿಡು ವೆನು.
16. ನಾನು ಐಗುಪ್ತಕ್ಕೆ ಕಿಚ್ಚನ್ನು ಹೆಚ್ಚಿಸಲು ಸೀನ್‌ ಪ್ರಾಣಸಂಕಟಪಡುವದು, ನೋಪುರವು ಭಾಗಭಾಗ ವಾಗಿ ಸೀಳಲ್ಪಡುವದು, ನೋಫಿನ ಮೇಲೆ ಪ್ರತಿ ದಿನವೂ ಇಕ್ಕಟ್ಟು ಇರುವದು.
17. ಆವೇನಿನ ಮತ್ತು ಪೀಬೆಸೆತಿನ ಯೌವನಸ್ಥರು ಕತ್ತಿಯಿಂದ ಸಾಯುವರು; ಈ ಪಟ್ಟಣಗಳು ಸೆರೆಯಾಗಿ ಹೋಗುವವು,
18. ತಹಪನೇಸಿನಲ್ಲಿಯೂ ನಾನು ಐಗುಪ್ತದ ನೊಗ ಗಳನ್ನು ಮುರಿಯುವಾಗ ಹಗಲು ಕತ್ತಲಾಗುವದು. ಅದರ ಶಕ್ತಿಯ ಮದವು ಅಡಗಿ ಹೋಗುವದು, ಅದನ್ನು ಮೇಘವು ಮುಚ್ಚುವದು. ಅದರ ಕುಮಾರಿ ಯರು ಸೆರೆಗೆ ಹೋಗುವರು.
19. ಹೀಗೆ ನಾನು ಐಗುಪ್ತ ದಲ್ಲಿ ನ್ಯಾಯಗಳನ್ನು ತೀರಿಸುವೆನು, ಆಗ ನಾನೇ ಕರ್ತನೆಂದು ಅವರಿಗೆ ತಿಳಿಯುವದು.
20. ಇದಲ್ಲದೆ ಹನ್ನೊಂದನೇ ವರುಷದಲ್ಲಿ ಮೊದಲ ನೆಯ ತಿಂಗಳಿನ, ಏಳನೆಯ ದಿನದಲ್ಲಿ ಏನಾಯಿತಂದರೆ, ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ --
21. ಮನುಷ್ಯ ಪುತ್ರನೇ, ನಾನು ಐಗುಪ್ತದ ಅರಸ ನಾದ ಫರೋಹನ ತೋಳನ್ನು ಮುರಿದು ಹಾಕಿದ್ದೇನೆ; ಇಗೋ, ಅದು ಕಟ್ಟಲ್ಪಡುವ ಹಾಗೆ ವಾಸಿಯಾಗುವದೇ ಇಲ್ಲ, ಅದು ಕತ್ತಿಯನ್ನು ಹಿಡಿಯುವ ಹಾಗೆಯೇ ಅದಕ್ಕೆ ಬಲಬರುವ ಹಾಗೆ ಪಟ್ಟಿ ಬಿಗಿಸಲ್ಪಡುವದಿಲ್ಲ.
22. ಆದ ದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಇಗೋ, ನಾನು ಐಗುಪ್ತದೇಶದ ಅರಸನಾದ ಫರೋಹನಿಗೆ ವಿರುದ್ಧವಾಗಿದ್ದೇನೆ. ಬಲವುಳ್ಳದ್ದೂ ಮುರಿದದ್ದೂ ಆಗಿರುವ ಅವನ ತೋಳುಗಳನ್ನು ಮುರಿ ಯುತ್ತೇನೆ; ಅವನ ಕೈಯಿಂದ ಕತ್ತಿಯನ್ನು ಬೀಳಿಸುತ್ತೇನೆ.
23. ಐಗುಪ್ತರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳ ಮೇಲೆ ಹರಡುವೆನು.
24. ಬಾಬೆಲಿನ ಅರಸನ ತೋಳು ಗಳನ್ನು ನಾನು ಬಲಪಡಿಸುವೆನು; ಅವನ ಕೈಯಲ್ಲಿ ನನ್ನ ಕತ್ತಿಯನ್ನಿಡುವೆನು; ಫರೋಹನ ತೋಳನ್ನು ಮುರಿಯುವೆನು, ಅವನು ಗಾಯದಿಂದ ಸಾಯುವ ಹಾಗೆ ಅವನ ಮುಂದೆ ನರಳಾಡುವನು.
25. ನಾನು ಬಾಬೆಲಿನ ಅರಸನ ತೋಳುಗಳಿಗೆ ಬಲ ಕೊಡುವೆನು, ಫರೋಹನ ತೋಳುಗಳು ಬಿದ್ದು ಹೋಗುವವು; ಯಾವಾಗ ನಾನು ನನ್ನ ಕತ್ತಿಯನ್ನು ಬಾಬೆಲಿನ ಅರಸನ ಕೈಗೆ ಕೊಡುವೆನೋ ಅದನ್ನು ಐಗುಪ್ತದೇಶದಿಂದ ಹೊರಗೆ ಚಾಚುವೆನೋ ಆಗ ನಾನೇ ಕರ್ತನೆಂದು ಅವರಿಗೆ ಗೊತ್ತಾಗುವದು.
26. ನಾನು ಐಗುಪ್ತರನ್ನು ಜನಾಂಗಗಳೊಳಗೆ ಚದರಿಸಿ ದೇಶಗಳಲ್ಲಿ ಹರಡಿಸು ತ್ತೇನೆ; ಆಗ ನಾನೇ ಕರ್ತನೆಂದು ಅವರಿಗೆ ತಿಳಿಯುವದು.

Chapter 31

1. ಹನ್ನೊಂದನೇ ವರುಷದಲ್ಲಿ ಮೂರನೇ ತಿಂಗಳಿನ, ಮೊದಲನೇ ದಿನದಲ್ಲಿ ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--
2. ಮನುಷ್ಯಪುತ್ರನೇ, ಐಗುಪ್ತದ ಅರಸನಾದ ಫರೋಹನೊಂದಿಗೆ ಮತ್ತು ಅವನ ಸಮೂಹದೊಂದಿಗೆ ಮಾತ ನಾಡಿ--ನೀನು ನಿನ್ನ ದೊಡ್ಡಸ್ತಿಕೆಯಲ್ಲಿ ಯಾರಿಗೆ ಸಮಾನನಾಗಿರುವೆ?
3. ಇಗೋ, ಅಶ್ಶೂರ್ಯವು ಲೆಬನೋನಿನ ಸುಂದರವಾದ ಕೊಂಬೆಗಳುಳ್ಳ ದೇವ ದಾರು ಆಗಿದೆ. ಅದರ ನೆರಳು ದಟ್ಟವಾಗಿದೆ, ಎತ್ತರವು ನೀಳವಾಗಿದೆ; ಅದರ ತುದಿಯು ದಟ್ಟವಾದ ಕೊಂಬೆಗಳ ಮಧ್ಯದಲ್ಲಿತ್ತು.
4. ನೀರು ಅದನ್ನು ಬೆಳೆಸಿತು, ಅಗಾಧವು ತನ್ನ ನದಿಗಳನ್ನು ಅದರ ಸುತ್ತಲೂ ಹರಿಸಿ ತನ್ನ ಕಾಲುವೆಗಳನ್ನು ಬಯಲಿನ ಮರಗಳಿಗೆಲ್ಲಾ ಕಳುಹಿಸಿ, ಅದನ್ನು ಎತ್ತರವಾಗಿ ಬೆಳೆಯುವಂತೆ ಮಾಡಿತು.
5. ಆದ ದರಿಂದ ಅದರ ಎತ್ತರವು ಬಯಲಿನ ಎಲ್ಲಾ ಮರ ಗಳಿಗಿಂತ ಎತ್ತರವಾಗಿತ್ತು; ಅದು ಹಬ್ಬಿದ್ದದರಿಂದ ಮತ್ತು ಹೆಚ್ಚು ನೀರಿನ ದೆಸೆಯಿಂದ ಅದರ ಕೊಂಬೆಗಳು ಅಧಿಕವಾದವು; ಅದರ ರೆಂಬೆಗಳು ಉದ್ದವಾದವು.
6. ಅದರ ಕೊಂಬೆಗಳಲ್ಲಿ ಆಕಾಶದ ಎಲ್ಲಾ ಪಕ್ಷಿಗಳು ತಮ್ಮ ಗೂಡುಗಳನ್ನು ಮಾಡಿದವು; ಅದರ ರೆಂಬೆ ಗಳ ಕೆಳಗೆ ಬಯಲಿನ ಎಲ್ಲಾ ಮೃಗಗಳು ಮರಿಗಳಿಗೆ ಜನ್ಮಕೊಟ್ಟವು; ಅದರ ಕೆಳಗೆ ನೆರಳಿನಲ್ಲಿ ಎಲ್ಲಾ ಮಹಾಜನಾಂಗಗಳು ವಾಸಮಾಡಿದವು.
7. ಹೀಗೆ ಅವನು ತನ್ನ ದೊಡ್ಡಸ್ತಿಕೆಯಲ್ಲಿ ತನ್ನ ಕೊಂಬೆಗಳ ಉದ್ದದಲ್ಲಿ ಸುಂದರವಾಗಿದ್ದನು; ಯಾಕಂದರೆ ಅವನ ಬೇರು ಮಹಾ ನೀರಿನಿಂದಾಗಿತ್ತು.
8. ದೇವರ ತೋಟದ ದೇವದಾರುಗಳು ಅವನನ್ನು ಮರೆಮಾಡಲಿಲ್ಲ; ತುರಾಯಿ ಮರಗಳು ಅವನ ಕೊಂಬೆಗಳಿಗೆ ಸಮ ವಾಗಲಿಲ್ಲ; ಆಲದ ಮರಗಳು ಅವನ ರೆಂಬೆಗಳಷ್ಟೂ ಇಲ್ಲ; ಆ ದೇವರ ತೋಟದ ಯಾವುದೇ ಮರವು ಇವನ ಸೌಂದರ್ಯಕ್ಕೆ ಸಮವಾಗಲಿಲ್ಲ.
9. ನಾನು ಅವನನ್ನು ಅವನ ಕೊಂಬೆಗಳ ಸಮೂಹದಿಂದ ಸೌಂದರ್ಯಪಡಿಸಿದೆನು; ಅದರಿಂದ ದೇವರ ತೋಟ ದಲ್ಲಿನ ಏದೆನಿನ ಮರಗಳೆಲ್ಲಾ ಅವನ ಮೇಲೆ ಹೊಟ್ಟೇ ಕಿಚ್ಚುಪಟ್ಟವು.
10. ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಯಾಕಂದರೆ ನೀನು ನೀಳದಲ್ಲಿ ಎತ್ತರವಾಗಿ ಅವನು ತನ್ನ ತಲೆಯನ್ನು ಒತ್ತಿಕೊಂಡಿರುವ ಕೊಂಬೆಗಳ ಕಡೆಗೆ ಚಾಚಿದ ಕಾರಣದಿಂದ ಅವನ ಹೃದಯವು ತನ್ನ ಎತ್ತರದಲ್ಲಿ ಹೆಚ್ಚಿಸಲ್ಪಟ್ಟಿದೆ.
11. ಆದದರಿಂದ ನಾನು ಅವನನ್ನು ಅನ್ಯಜನಾಂಗಗಳಲ್ಲಿ ಶೂರನಾದ ಒಬ್ಬನ ಕೈಗೆ ಒಪ್ಪಿಸಿದ್ದೇನೆ; ಇವನು ನಿಶ್ಚಯವಾಗಿ ಅವನನ್ನು ದಂಡಿಸುತ್ತಾನೆ. ಅವನ ದುಷ್ಟತ್ವದ ನಿಮಿತ್ತ ನಾನು ಅವನನ್ನು ತಳ್ಳಿಹಾಕಿದ್ದೇನೆ.
12. ಜನಾಂಗಗಳಲ್ಲಿ ಭಯಂಕರವಾದ ಅಪರಿಚಿತರು ಅವನನ್ನು ಕಡಿದುಹಾಕು ವರು. ಎಲ್ಲಾ ಬೆಟ್ಟಗಳ ಮೇಲೆಯೂ ತಗ್ಗುಗಳಲ್ಲಿಯೂ ಅವನ ಕೊಂಬೆಗಳು ಬೀಳುವವು, ದೇಶದ ಹಳ್ಳಗಳ ಲ್ಲೆಲ್ಲಾ ಅವನ ರೆಂಬೆಗಳು ಮುರಿದುಹೋಗುವವು; ಭೂಮಿಯ ಜನಗಳೆಲ್ಲಾ ಅವನ ನೆರಳಿನಿಂದ ದೂರ ಸರಿದು ಅವನನ್ನು ಬಿಟ್ಟುಬಿಡುವರು.
13. ಅವನ ಬುಡದ ಮೇಲೆ ಆಕಾಶದ ಪಕ್ಷಿಗಳೆಲ್ಲಾ ಕೂತುಕೊಳ್ಳುವವು; ಬಯಲಿನ ಎಲ್ಲಾ ಪ್ರಾಣಿಗಳು ಅವನ ರೆಂಬೆಗಳ ಬಳಿಯಲ್ಲಿರುವವು;
14. ನೀರಾವರಿಯ ಯಾವ ಮರಗಳು ತಮ್ಮ ಎತ್ತರವನ್ನು ಹೆಚ್ಚಿಸಿಕೊಂಡು ತಮ್ಮ ತುದಿಯನ್ನು ಮೋಡಗಳಿಗೆ ತಗಲಿಸದೆ ಇರುವದರಿಂದ ನೀರನ್ನು ಹೀರುತ್ತಲಿರುವ ದೊಡ್ಡ ದೊಡ್ಡ ಮರಗಳು ಎತ್ತರವಾಗಿ ಚಾಚಿಕೊಳ್ಳದೆ ಇರಲೆಂದು ಹೀಗಾಯಿತು, ಅವೆಲ್ಲಾ ಮರಣದ ಪಾಲಾಗುವವು; ಅವುಗಳಿಗೆ ಅಧೋ ಲೋಕವೇ ಗತಿಯಾಗುವದು, ಪಾತಾಳಕ್ಕೆ ಇಳಿದು ಹೋದ ಮನುಷ್ಯ ಜನ್ಮದವರ ಬಳಿಗೆ ಒಂದೇ ಗುಂಪಾಗಿ ಸೇರುವವು.
15. ದೇವರಾದ ಕರ್ತನು ಹೀಗೆ ಹೇಳುತ್ತಾನೆ. ಅವನು ಸಮಾಧಿಗೆ ಇಳಿದ ದಿನದಲ್ಲಿ ಗೋಳಾಟ ಹುಟ್ಟಿಸುವೆನು, ಅವನಿಗಾಗಿ ನಾನು ಅಗಾಧವನ್ನು ಮುಚ್ಚುವೆನು; ನಾನು ಅದರ ಪ್ರವಾಹವನ್ನು ತಡೆಹಿಡಿಯುವೆನು; ಮಹಾ ಜಲವು ನಿಲ್ಲಿಸಲ್ಪಡುವವು. ನಾನು ಲೆಬನೋನನ್ನು ಸಹ ಅವನಿಗೋಸ್ಕರ ಗೋಳಾಡಿಸುವೆನು. ಬಯಲಿನ ಮರಗಳೆಲ್ಲಾ ಅವನಿಗೋಸ್ಕರ ಕುಗ್ಗಿಹೋಗುವವು.
16. ನಾನು ಅದನ್ನು ಕುಣಿಗೆ ಇಳಿಯುವವರ ಜೊತೆಗೆ ಸೇರಿಸಬೇಕೆಂದು ಪಾತಾಳಕ್ಕೆ ತಳ್ಳಿಬಿಟ್ಟಾಗ ಅದು ಬಿದ್ದ ಶಬ್ದಕ್ಕೆ ಸಕಲ ಜನಾಂಗಗಳು ನಡುಗಿದವು; ಅಧೋ ಲೋಕಕ್ಕೆ ಪಾಲಾದ ಏದೆನಿನ ಎಲ್ಲಾ ಮರಗಳು, ಲೆಬನೋನಿನ ಉತ್ತಮೋತ್ತಮವಾದ ವೃಕ್ಷಗಳು, ನೀರು ಕುಡಿಯುವವುಗಳೆಲ್ಲಾ ಕೆಳಗಿನ ಸೀಮೆಯಲ್ಲಿ ಸಂತೈಸಿ ಕೊಂಡವು.
17. ಅವರು ಕೂಡ ಅನ್ಯಜನಾಂಗಗಳೊಳಗೆ ಅವನ ನೆರಳಿನಲ್ಲಿ ಕುಳಿತುಕೊಳ್ಳುವರು; ಅವನ ಕೈಗಳು ಸಹ ಅವನ ಸಂಗಡವೇ ಪಾತಾಳಕ್ಕೆ ಕತ್ತಿಯಿಂದ ಹತವಾದವರ ಬಳಿಗೆ ಇಳಿದುಹೋಗುವವು;
18. ನೀನು ಹೀಗೆ ಘನತೆಯಿಂದಲೂ ದೊಡ್ಡಸ್ತಿಕೆ ಯಿಂದಲೂ ಏದೆನಿನ ಯಾವ ಮರಗಳಿಗೆ ಸಮ ನಾಗಿರುವೆ? ಆದರೂ ಏದೆನಿನ ಮರಗಳ ಸಂಗಡ ಕೆಳಗಿನ ಸೀಮೆಗಳಿಗೆ ಇಳಿಸಲ್ಪಡುವಿ; ಸುನ್ನತಿಯಿಲ್ಲದವರ ಮಧ್ಯದಲ್ಲಿ ಕತ್ತಿಯಿಂದ ಹತವಾದವರ ಸಂಗಡ ಮಲ ಗುವಿ. ಇದೇ ಫರೋಹನನೂ ಅವನ ಎಲ್ಲಾ ಜನ ಸಮೂಹವೂ ಆಗಿವೆ ಎಂದು ದೇವರಾದ ಕರ್ತನು ಹೇಳುತ್ತಾನೆ.

Chapter 32

1. ಹನ್ನೆರಡನೇ ವರುಷದ, ಹನ್ನೆರಡನೇ ತಿಂಗಳಿನ, ಮೊದಲನೇ ದಿನದಲ್ಲಿ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
2. ಮನುಷ್ಯ ಪುತ್ರನೇ, ಐಗುಪ್ತ ಅರಸನಾದ ಫರೋಹನ ವಿಷಯ ವಾಗಿ ಗೋಳಾಟವನ್ನೆತ್ತಿ ಅವನಿಗೆ ನೀನು ಹೇಳಬೇಕಾ ದದ್ದೇನಂದರೆ--ನೀನು ಜನಾಂಗಗಳಲ್ಲಿ ಪ್ರಾಯದ ಸಿಂಹಕ್ಕೆ ಸಮನಾಗಿರುವೆ; ಸಮುದ್ರಗಳಲ್ಲಿರುವ ತಿಮಿಂಗಲದ ಹಾಗಿರುವೆ. ನೀನಿದ್ದ ನದಿಗಳನ್ನು ಭೇಧಿಸಿಕೊಂಡು ಬಂದ ನೀರನ್ನು ನಿನ್ನ ಕಾಲುಗಳಿಂದ ಕಲಕಿ ಹೊಳೆಗಳನ್ನು ತುಳಿದು ಬದಿಗೆ ಮಾಡಿದೆ.
3. ದೇವರಾದ ಕರ್ತನು ಹೀಗೆ ಹೇಳುತ್ತಾನೆ, ಆದುದ ರಿಂದ ನಾನು ಗುಂಪಾಗಿ ಕೂಡಿದ ಬಹಳ ಜನಾಂಗಗಳ ಮೇಲೆ ಬಲೆಯನ್ನು ಬೀಸುವೆನು; ಅವರು ನಿನ್ನನ್ನು ನನ್ನ ಬಲೆಯಲ್ಲಿ ಮೇಲಕ್ಕೆಳೆಯುವರು.
4. ಆಗ ನಾನು ನಿನ್ನನ್ನು ನೆಲದ ಮೇಲೆ ಹಾಕಿಬಿಡುವೆನು, ಬಯಲಿನ ಮೇಲೆ ಬಿಸಾಡುವೆನು; ಆಕಾಶದ ಪಕ್ಷಿಗಳನ್ನೆಲ್ಲಾ ನಿನ್ನ ಮೇಲೆ ಕೂರಿಸಿ, ಸಮಸ್ತ ಭೂಮಿಯ ಮೇಲಿನ ಮೃಗಗಳನ್ನು ನಿನ್ನಿಂದ ತೃಪ್ತಿಪಡಿಸುವೆನು.
5. ನಿನ್ನ ಮಾಂಸವನ್ನು ಬೆಟ್ಟಗಳ ಮೇಲೆ ಹಾಕಿ, ನಿನ್ನ ರಾಶಿ ಯಿಂದ ಕಣಿವೆಗಳನ್ನು ತುಂಬಿಸುವೆನು.
6. ನಿನ್ನ ರಕ್ತ ಪ್ರವಾಹದಿಂದ ದೇಶವನ್ನು ಬೆಟ್ಟಗಳ ತನಕ ತೋಯಿಸು ವೆನು; ನದಿಗಳು ನಿನ್ನಿಂದ ತುಂಬುವವು.
7. ಇದಲ್ಲದೆ, ನಾನು ನಿನ್ನನ್ನು ನಂದಿಸುವಾಗ ಆಕಾಶಕ್ಕೆ ಮುಸುಕುಹಾಕಿ ಅಲ್ಲಿನ ನಕ್ಷತ್ರಗಳನ್ನು ಕತ್ತಲಾಗ ಮಾಡಿ, ಸೂರ್ಯನನ್ನು ಮೋಡದಿಂದ ಮುಚ್ಚಿಬಿಡುವೆನು; ಚಂದ್ರನು ತನ್ನ ಬೆಳಕನ್ನು ಕೊಡದೆ ಇರುವನು.
8. ಆಕಾಶದಲ್ಲಿ ಪ್ರಕಾಶಿ ಸುವ ಬೆಳಕುಗಳನ್ನು ನಿನ್ನ ನಿಮಿತ್ತವಾಗಿ ನಾನು ಕತ್ತಲು ಮಾಡುವೆನು; ಆ ಕತ್ತಲೆಯನ್ನು ನಿನ್ನ ದೇಶದ ಮೇಲೆ ಇಡುತ್ತೇನೆಂದು ದೇವರಾದ ಕರ್ತನು ಹೇಳುತ್ತಾನೆ.
9. ಇದಲ್ಲದೆ ಜನಾಂಗಗಳೊಳಗೆ ನೀನು ಅರಿಯದ ದೇಶಗಳಲ್ಲಿ, ನಿನ್ನ ನಾಶನವನ್ನು ಪ್ರಸಿದ್ಧಿಪಡಿಸಿ, ಅನೇಕ ಜನಗಳ ಹೃದಯದಲ್ಲಿ ಗಲಿಬಿಲಿ ಎಬ್ಬಿಸುವೆನು.
10. ಹೌದು, ನಾನು ಅನೇಕ ಜನರನ್ನು ನಿನ್ನ ವಿಷಯದಲ್ಲಿ ವಿಸ್ಮಯಗೊಳಿಸುವೆನು, ನಾನು ಅವರ ಮುಂದೆ ನನ್ನ ಕತ್ತಿಯನ್ನು ಬೀಸುವಾಗ ಅವರ ಅರಸರು ನಿನ್ನ ವಿಷಯದಲ್ಲಿ ಭಯಭ್ರಾಂತಿಗೊಳ್ಳುವರು. ನೀನು ಬೀಳುವ ಆ ದಿನದಲ್ಲಿ ಅವರು ಕ್ಷಣಕ್ಷಣಕ್ಕೆ ತಮ್ಮ ತಮ್ಮ ಪ್ರಾಣದ ಬಗ್ಗೆ ನಡುಗುವರು.
11. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಬಾಬೆಲಿನ ಅರಸನ ಕತ್ತಿಯು ನಿನ್ನ ಮೇಲೆ ಬರುವದು;
12. ಪರಾಕ್ರಮ ಶಾಲಿಗಳ ಕತ್ತಿಗಳಿಂದ ಜನಾಂಗಗಳಲ್ಲಿ ಭಯಂಕರ ರಾಗಿರುವ ನಿನ್ನ ಸಮೂಹವನ್ನು ನಾನು ಬೀಳುವಂತೆ ಮಾಡುವೆನು; ಅವರು ಐಗುಪ್ತದ ಮಹತ್ತನ್ನು ಕೆಡಿಸು ವರು; ಅದರ ಜನಸಮೂಹವೆಲ್ಲಾ ಹಾಳಾಗುವದು.
13. ನಾನು ಆ ಬಹುಪ್ರವಾಹಗಳ ಬಳಿಯಲ್ಲಿರುವ ಅದರ ಮೃಗಗಳನ್ನೆಲ್ಲಾ ನಾಶಮಾಡುವೆನು; ಆ ನೀರಿನಲ್ಲಿ ಇನ್ನು ಮೇಲೆ ಮನುಷ್ಯನ ಕಾಲಾಗಲಿ, ಪ್ರಾಣಿಗಳ ಗೊರಸಾಗಲಿ ಕಲಕಿಸುವದಿಲ್ಲ.
14. ಆಮೇಲೆ ನಾನು ಆ ನೀರುಗಳನ್ನು ಆಳವಾಗಿ ಮಾಡುವೆನು; ಅದರ ನದಿಗಳನ್ನು ಎಣ್ಣೆಯ ಹಾಗೆ ಹರಿಯುವಂತೆ ಮಾಡು ವೆನು ಎಂದು ದೇವರಾದ ಕರ್ತನು ಹೇಳುತ್ತಾನೆ.
15. ನಾನು ಐಗುಪ್ತದೇಶವನ್ನು ಹಾಳು ಮಾಡುವಾಗ, ಆ ದೇಶವು ಪರಿಪೂರ್ಣವಾಗಿ ಹಾಳಾಗುವಾಗ ಮತ್ತು ನಾನು ಅವರ ನಿವಾಸಿಗಳನ್ನೆಲ್ಲಾ ಹೊಡೆಯುವಾಗ ನಾನೇ ಕರ್ತನೆಂದು ಅವರಿಗೆ ತಿಳಿಯುವದು.
16. ಇದು ಅವರು ಗೋಳಾಡುವಂತಹ ಗೋಳಾಟವಾಗಿದೆ; ಐಗುಪ್ತದ ವಿಷಯವಾಗಿಯೂ ಅದರ ಎಲ್ಲಾ ಜನ ಸಮೂಹದ ವಿಷಯವಾಗಿಯೂ ಜನಾಂಗಗಳ ಕುಮಾರ್ತೆಯರು ಇದನ್ನು ಕುರಿತು ಗೋಳಾಡುವರು; ಎಂದು ದೇವರಾದ ಕರ್ತನು ಹೇಳುತ್ತಾನೆ.
17. ಇದಲ್ಲದೆ ಹನ್ನೆರಡನೇ ವರ್ಷದ, ತಿಂಗಳಿನ ಹದಿನೈದನೇ ದಿನದಲ್ಲಿ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
18. ಮನುಷ್ಯಪುತ್ರನೇ, ಐಗುಪ್ತದ ಜನಸಮೂಹದ ವಿಷಯವಾಗಿ ಗೋಳಾಡು. ಅದನ್ನು, ಅದರ ಸಂಗಡ ಘನವುಳ್ಳ ಜನಾಂಗಗಳ ಕುಮಾರ್ತೆ ಯರನ್ನು ಭೂಮಿಯ ಕೆಳಗಿನ ಭಾಗಗಳಿಗೆ ಕುಣಿಯೊ ಳಗೆ ಇಳಿಯುವವರ ಜೊತೆ ತಳ್ಳಿಬಿಡು.
19. ನೀನು ಸೌಂದರ್ಯದಲ್ಲಿ ಯಾರಿಗೆ ಹೋಲುವಿ? ಕೆಳಗೆ ಹೋಗು ಮತ್ತು ಸುನ್ನತಿಯಿಲ್ಲದವರ ಸಂಗಡ ಮಲಗು.
20. ಅವರು ಕತ್ತಿಯಿಂದ ಹತರಾದವರ ಮಧ್ಯದಲ್ಲಿ ಬೀಳುವರು. ಅವಳು ಕತ್ತಿಗೆ ಒಪ್ಪಿಸಲ್ಪಟ್ಟಿದ್ದಾಳೆ; ಅವಳನ್ನೂ ಅವಳ ಎಲ್ಲಾ ಸಮೂಹವನ್ನೂ ಎಳೆಯಿರಿ.
21. ಶೂರರಲ್ಲಿ ಬಲಿಷ್ಠರೂ ಅವನಿಗೆ ಸಹಾಯ ಮಾಡಿದವರ ಸಂಗಡ ಪಾತಾಳದೊಳಗಿಂದ ಅವನ ಸಂಗಡ ಮಾತನಾಡುವರು; ಅವರು ಇಳಿದುಹೋಗಿ ಸುನ್ನತಿ ಯಿಲ್ಲದವರಾಗಿಯೂ ಕತ್ತಿಯಿಂದ ಹತರಾದವರಾ ಗಿಯೂ ಮಲಗಿದ್ದಾರೆ.
22. ಅಲ್ಲಿ ಅಶ್ಶೂರ್ಯ ಮತ್ತು ಅದರ ಎಲ್ಲಾ ಗುಂಪು ಇರುವದು; ಸುತ್ತಲೂ ಅದರ ಸಮಾಧಿಗಳಿರುವವು; ಅವರೆಲ್ಲರೂ ಕತ್ತಿಯಿಂದ ಬಿದ್ದು ಹತರಾದವರೇ.
23. ಅವರ ಸಮಾಧಿಗಳು ಕುಣಿಯ ಕಡೆಗಳಲ್ಲಿ ಇಡಲ್ಪಟ್ಟಿವೆ, ಅದರ ಸಮಾಧಿಯ ಸುತ್ತಲೂ ಅವರ ಗುಂಪುಗಳಿವೆ. ಜೀವಿತರ ದೇಶದಲ್ಲಿ ಭಯಂಕ ರರಾಗಿದ್ದ ಇವರೆಲ್ಲರೂ ಕತ್ತಿಯಿಂದ ಬಿದ್ದು ಹತರಾ ದರು.
24. ಅಲ್ಲಿ ಏಲಾಮು ಮತ್ತು ಅದರ ಎಲ್ಲಾ ಸಮೂಹವು ಆಕೆಯ ಸಮಾಧಿಯ ಸುತ್ತಲೂ ಇದೆ; ಅವರೆಲ್ಲರೂ ಕತ್ತಿಯಿಂದ ಬಿದ್ದು ಹತರಾದವರೇ; ಸುನ್ನತಿಯಿಲ್ಲದವರಾಗಿ ಭೂಮಿಯ ಕೆಳಗಿನ ಭಾಗಗಳಿಗೆ ಇಳಿದುಹೋದವರೇ, ಅವರು ಜೀವಿತರ ದೇಶದಲ್ಲಿ ಭಯಂಕರರಾಗಿದ್ದಾಗ್ಯೂ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತುಕೊಂಡಿದ್ದಾರೆ.
25. ಅವರು ಅದರ ಎಲ್ಲಾ ಸಮೂಹಕ್ಕೂ ಹತವಾದವರ ಮಧ್ಯದಲ್ಲಿ ಹಾಸಿಗೆ ಹಾಕಿದ್ದಾರೆ; ಅದರ ಸುತ್ತಲೂ ಅವರ ಸಮಾಧಿಗಳಿವೆ; ಅವರೆಲ್ಲರೂ ಕತ್ತಿಯಿಂದ ಹತರಾಗಿ ಸುನ್ನತಿಯಿಲ್ಲದವರಾಗಿದ್ದಾರೆ; ಅವರು ಜೀವಿತರ ದೇಶದಲ್ಲಿ ಭಯಂಕರರಾಗಿದ್ದಾಗ್ಯೂ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತು ಕೊಂಡು ಹತರಾದವರ ಮಧ್ಯದಲ್ಲಿ ಇಡಲ್ಪಟ್ಟಿದ್ದಾರೆ.
26. ಅಲ್ಲಿ ಮೇಷೆಕೂ ತೂಬಲೂ ಮತ್ತು ಅದರ ಎಲ್ಲಾ ಸಮೂಹವೂ ಅದರ ಸಮಾಧಿಗಳೂ ಅದರ ಸುತ್ತಲಾಗಿ ಇವೆ ಇವರೆಲ್ಲರೂ ಜೀವಿತರ ದೇಶದಲ್ಲಿ ಭಯಂಕರರಾಗಿ ದ್ದಾಗ್ಯೂ ಸುನ್ನತಿಯಿಲ್ಲದೆ ಕತ್ತಿಯಿಂದ ಹತರಾದವರು.
27. ಸುನ್ನತಿಯಿಲ್ಲದವರಲ್ಲಿ ಬಿದ್ದಂತ ತಮ್ಮ ಯುದ್ಧದ ಆಯುಧಗಳ ಸಂಗಡ ಪಾತಾಳಕ್ಕೆ ಇಳಿದಂತ ಶೂರರ ಸಂಗಡ ಇವರು ಮಲಗಬೇಡವೇ? ಅವರು ತಮ್ಮ ಕತ್ತಿಗಳನ್ನು ತಮ್ಮ ತಲೆಗಳ ಕೆಳಗೆ ಇಟ್ಟುಕೊಂಡಿದ್ದಾರೆ; ಅವರು ಜೀವಿತರ ದೇಶದಲ್ಲಿ ಶೂರರಿಗೆ ಭಯಂಕರ ರಾಗಿದ್ದಾಗ್ಯೂ ಅವರ ಅಕ್ರಮಗಳು ಅವರ ಎಲುಬು ಗಳ ಮೇಲೆ ಇರುವವು.
28. ಹೌದು, ನೀನು ಸುನ್ನತಿಯಿಲ್ಲದವರ ಮಧ್ಯದಲ್ಲಿ ಮುರಿಯಲ್ಪಡುವಿ; ಕತ್ತಿಯಿಂದ ಹತರಾದವರ ಸಂಗಡ ಮಲಗುವಿ.
29. ಅಲ್ಲಿ ಎದೋಮೂ ಅದರ ಅರಸರೂ ಮತ್ತು ಎಲ್ಲಾ ಪ್ರಧಾನರೂ ಶೂರರಾಗಿದ್ದಾಗ್ಯೂ ಕತ್ತಿಯಿಂದ ಹತವಾ ದವರ ಸಂಗಡ ಹೂಣಲ್ಪಟ್ಟಿದ್ದಾರೆ; ಅವರು ಸುನ್ನತಿಯಿಲ್ಲದವರ ಸಂಗಡವೂ ಕುಣಿಗೆ ಇಳಿಯುವವರ ಸಂಗಡವೂ ಹತರಾದವರು.
30. ಅಲ್ಲಿ ಉತ್ತರದ ಪ್ರಧಾ ನರೂ ಚೀದೋನಿನವರೆಲ್ಲರೂ ಹತರಾದವರ ಸಂಗಡ ಇಳಿದಿದ್ದಾರೆ; ಅವರು ಭಯಂಕರತ್ವದಿಂದ ತಮ್ಮ ಪರಾ ಕ್ರಮಕ್ಕೆ ನಾಚಿಕೆಪಟ್ಟಿದ್ದಾರೆ; ಹತರಾದವರ ಸಂಗಡ ಇಳಿದಿದ್ದಾರೆ; ಸುನ್ನತಿಯಿಲ್ಲದವರಾಗಿದ್ದು ಕತ್ತಿಯಿಂದ ಹತರಾಗಿ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತವರಾಗಿದ್ದಾರೆ.
31. ಫರೋಹನು ತನ್ನ ಯಾವ ಸಮೂಹವನ್ನು ನೋಡಿ ಆದರಣೆ ಹೊಂದುವನೋ ಹೌದು, ಅವನೂ ಅವನ ಎಲ್ಲಾ ಸೈನ್ಯವು ಹತರಾದವರು ಎಂದು ದೇವರಾದ ಕರ್ತನು ಹೇಳುತ್ತಾನೆ.
32. ನಾನು ನನ್ನ ಭಯವನ್ನು ಜೀವಿತರ ದೇಶದಲ್ಲಿ ಉಂಟು ಮಾಡಿದ್ದೇನೆ. ಆ ಫರೋಹನೂ ಅವನ ಎಲ್ಲಾ ಸಮೂಹದ ಸಹಿತವಾಗಿ ಕತ್ತಿಯಿಂದ ಹತರಾದವರ ಸಂಗಡ, ಸುನ್ನತಿಯಿಲ್ಲದವರ ಮಧ್ಯದಲ್ಲಿ ಮಲಗಿಸಲ್ಪಡುವನೆಂದು ದೇವರಾದ ಕರ್ತನು ಹೇಳುತ್ತಾನೆ.

Chapter 33

1. ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
2. ಮನುಷ್ಯಪುತ್ರನೇ, ನಿನ್ನ ಜನರ ಮಕ್ಕಳೊಂದಿಗೆ ಮಾತನಾಡು ಮತ್ತು ಅವ ರಿಗೆ--ನಾನು ಒಂದು ದೇಶದ ಮೇಲೆ ಯಾವಾಗ ಕತ್ತಿಯನ್ನು ತರುವೆನೋ ಆಗ ಆ ದೇಶದ ಜನರು ತಮ್ಮ ಪ್ರಾಂತ್ಯದ ಒಬ್ಬ ಮನುಷ್ಯನನ್ನು ಆರಿಸಿ ತಮಗೆ ಕಾವಲುಗಾರನನ್ನಾಗಿ ಇಟ್ಟರೆ,
3. ಅವನ ಕತ್ತಿಯು ದೇಶದ ಮೇಲೆ ಬರುವದನ್ನು ನೋಡಿ, ಕಹಳೆಯನ್ನೂದಿ ಜನರನ್ನು ಎಚ್ಚರಿಸಿದಾಗ,
4. ಯಾವನು ಕಹಳೆಯ ಧ್ವನಿಯನ್ನು ಕೇಳಿ ಎಚ್ಚರವಾಗುವದಿಲ್ಲವೋ? ಆಗ ಕತ್ತಿಯು ಬಂದು ಅವನನ್ನು ತೆಗೆದುಕೊಂಡರೆ ಅವನ ರಕ್ತವು ಅವನ ತಲೆಯ ಮೇಲೆಯೇ ಇರುವದು.
5. ಅವನು ಕಹಳೆಯ ಧ್ವನಿಯನ್ನು ಕೇಳಿ ಎಚ್ಚರಗೊಳ್ಳಲಿಲ್ಲ; ಅವನ ರಕ್ತವು ಅವನ ಮೇಲೆ ಇರುವದು. ಆದರೆ ಎಚ್ಚರಿಕೆಯಾಗುವವನು ತನ್ನ ಪ್ರಾಣವನ್ನು ಉಳಿಸಿಕೊ ಳ್ಳುವನು.
6. ಆದರೆ ಕಾವಲುಗಾರನು ಕತ್ತಿಯನ್ನು ನೋಡಿ, ಒಂದು ವೇಳೆ ಕಹಳೆಯನ್ನು ಊದದೆ ಜನರನ್ನೂ ಎಚ್ಚರಿಸದಿದ್ದರೆ, ಆಗ ಕತ್ತಿಯು ಬಂದು ಅವರೊಳಗಿಂದ ಯಾರೊಬ್ಬನನ್ನಾದರೂ ತೆಗೆದುಕೊಂಡರೆ ಅವನು ತನ್ನ ಅಕ್ರಮದಲ್ಲಿ ತೆಗೆಯಲ್ಪಡುತ್ತಾನೆ. ಆದರೆ ನಾನು ಅವನ ರಕ್ತವನ್ನು ಕಾವಲುಗಾರನ ಕೈಯಿಂದ ವಿಚಾರಿಸುವೆನು.
7. ಓ ಮನುಷ್ಯಪುತ್ರನೇ, ನಿನ್ನನ್ನು ನಾನು ಇಸ್ರಾಯೇಲಿನ ಮನೆತನದವರಿಗೆ ಕಾವಲುಗಾರನನ್ನಾಗಿ ಇಟ್ಟಿದ್ದೇನೆ; ಆದದರಿಂದ ನೀನು ನನ್ನ ಬಾಯಿಯ ವಾಕ್ಯವನ್ನು ಕೇಳು, ನನ್ನಿಂದ ಅವರನ್ನು ಎಚ್ಚರಿಸು.
8. ನಾನು ದುಷ್ಟನಿಗೆ--ಓ ದುಷ್ಟ ಮನುಷ್ಯನೇ, ನೀನು ನಿಶ್ಚಯವಾಗಿ ಸಾಯುವಿ ಎಂದು ಹೇಳುವಾಗ ಒಂದು ವೇಳೆ ನೀನು ಅವನೊಂದಿಗೆ ಮಾತನಾಡದೆ ದುಷ್ಟನನ್ನು ಅವನ ಮಾರ್ಗದಿಂದ ಎಚ್ಚರಿಸದಿದ್ದರೆ ಆ ದುಷ್ಟ ಮನುಷ್ಯನು ಅವನ ಅಕ್ರಮಗಳಲ್ಲಿಯೇ ಸಾಯುವನು; ಅವನ ರಕ್ತವನ್ನು ನಾನು ನಿನ್ನ ಕೈಯಿಂದ ವಿಚಾರಿಸುವೆನು.
9. ಆದಾಗ್ಯೂ ನೀನು ಒಂದು ವೇಳೆ ದುಷ್ಟನನ್ನು ಅವನ ದುಮಾರ್ಗಗಳಿಂದ ತಿರುಗಲು ಎಚ್ಚರಿಸಿದರೂ ಅವನು ತನ್ನ ದುಷ್ಟಮಾರ್ಗದಿಂದ ತಿರುಗದಿದ್ದರೆ ಅವನ ಅಕ್ರಮಗಳಲ್ಲಿಯೇ ಸಾಯುವನು; ಆದರೆ ನೀನು ನಿನ್ನ ಪ್ರಾಣವನ್ನು ತಪ್ಪಿಸಿಕೊಳ್ಳುವಿ.
10. ಓ ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಮನೆತನದವರೊಂದಿಗೆ ಮಾತನಾಡಿ ಹೀಗೆ ಹೇಳು --ನಮ್ಮ ಅಪರಾಧಗಳೂ ಪಾಪಗಳೂ ನಮ್ಮ ಮೇಲಿದ್ದು ನಾವು ಅವುಗಳಲ್ಲಿ ಕ್ಷೀಣಿಸುತ್ತಾ ಹೋದರೆ ಹೇಗೆ ಬದುಕುವೆವು; ಎಂದು ಹೇಳುವಿರಲ್ಲಾ?
11. ಅವರಿಗೆ ಹೀಗೆ ಹೇಳು ಎಂದು ದೇವರಾದ ಕರ್ತನು ಹೇಳುತ್ತಾನೆ --ನನ್ನ ಜೀವದಾಣೆ, ನನಗೆ ದುಷ್ಟನ ಸಾವಿನಿಂದ ಸಂತೋಷ ಸಿಗುವದಿಲ್ಲ; ಆದರೆ ಆ ದುಷ್ಟನು ದುರ್ಮಾ ರ್ಗದಿಂದ ತಿರುಗಿಕೊಂಡು ಜೀವಿಸುವದಾದರೆ ಅದರಲ್ಲಿಯೇ ನನಗೆ ಸಂತೋಷಸಿಗುವದು; ಇಸ್ರಾ ಯೇಲಿನ ಮನೆತನದವರೇ, ನೀವು ನಿಮ್ಮ ನಿಮ್ಮ ದುಷ್ಟಮಾರ್ಗಗಳನ್ನು ಬಿಟ್ಟು ತಿರುಗಿರಿ, ನೀವು ತಿರುಗಿ ಕೊಳ್ಳಿರಿ. ನೀವು ಸಾಯುವದು ಯಾಕೆ?
12. ಮನುಷ್ಯ ಪುತ್ರನೇ. ನೀನು ನಿನ್ನ ಜನರ ಮಕ್ಕಳಿಗೆ ಹೇಳು--ನೀತಿವಂತನ ನೀತಿಯು ಅವನ ಅಪರಾಧದ ದಿನದಲ್ಲಿ ಅವನನ್ನು ತಪ್ಪಿಸುವದಿಲ್ಲ; ಹಾಗೆಯೇ ದುಷ್ಟನ ದುಷ್ಟತ್ವವು ಅವನು ತನ್ನ ದುಷ್ಟತ್ವವನ್ನು ಬಿಟ್ಟು ತಿರುಗುವ ದಿನದಲ್ಲಿ ಅದರಿಂದ ಬೀಳುವದಿಲ್ಲ; ನೀತಿವಂತನು ಪಾಪಮಾಡುವ ದಿನದಲ್ಲಿ ನೀತಿಯಿಂದ ಬದುಕ ಲಾರನು.
13. ನಾನು ನೀತಿವಂತನಿಗೆ--ನೀನು ನಿಶ್ಚಯವಾಗಿ ಬದುಕುವಿ ಎಂದು ಹೇಳುವಾಗ--ಅವನು ಒಂದು ವೇಳೆ ಅವನ ಸ್ವಂತ ನೀತಿಯನ್ನು ನಂಬಿ ಅನ್ಯಾಯವನ್ನು ಮಾಡಿದರೆ ಅವನ ಎಲ್ಲಾ ನೀತಿಯು ಜ್ಞಾಪಕಮಾಡಿ ಕೊಳ್ಳಲ್ಪಡುವದಿಲ್ಲ; ಆದರೆ ಅವನು ಮಾಡಿದ ಅವನ ಅಕ್ರಮಗಳಿಗಾಗಿಯೇ ಅವನು ಸಾಯುತ್ತಾನೆ.
14. ನಾನು ದುಷ್ಟನಿಗೆ--ನೀನು ನಿಶ್ಚಯ ವಾಗಿ ಸಾಯುವಿ ಎಂದು ಹೇಳುವಾಗ ಅವನು ಪಾಪ ದಿಂದ ತಿರುಗಿಕೊಂಡರೆ ಮತ್ತು ನ್ಯಾಯವನ್ನೂ ನೀತಿ ಯನ್ನೂ ಮಾಡಿದರೆ
15. ದುಷ್ಟನು ತನ್ನ ಒತ್ತೆಯನ್ನು ಹಿಂದಕ್ಕೆ ಕೊಟ್ಟರೆ ಮತ್ತು ದೋಚಿಕೊಂಡದ್ದನ್ನು ತಿರುಗಿ ಕೊಟ್ಟು ಅನ್ಯಾಯವನ್ನು ಮಾಡದೆ ಜೀವದ ನಿಯಮಗಳಲ್ಲಿ ನಡೆದರೆ ಅವನು ಸಾಯದೆ ಖಂಡಿತ ವಾಗಿ ಬದುಕುವನು.
16. ಅವನು ಮಾಡಿರುವ ಪಾಪ ಗಳಲ್ಲಿ ಒಂದಾದರೂ ಅವನಿಗೆ ವಿರೋಧವಾಗಿ ಜ್ಞಾಪ ಕಕ್ಕೆ ಬರುವದಿಲ್ಲ; ಅವನು ನ್ಯಾಯವನ್ನೂ ನೀತಿ ಯನ್ನೂ ಮಾಡಿದ್ದರಿಂದ ನಿಶ್ಚಯವಾಗಿ ಬದುಕುವನು.
17. ಆದರೂ ನಿನ್ನ ಜನರ ಮಕ್ಕಳು--ಕರ್ತನ ಮಾರ್ಗವು ಸಮವಿಲ್ಲ ಅನ್ನುತ್ತಾರೆ. ಅವರಿಗಾದರೋ ಅವರ ಮಾರ್ಗವೇ ಸಮವಾಗಿಲ್ಲ.
18. ಯಾವಾಗ ನೀತಿ ವಂತನು ತನ್ನ ನೀತಿಯಿಂದ ತಿರುಗಿಕೊಳ್ಳುವನೋ ಮತ್ತು ಅಕ್ರಮವನ್ನು ಮಾಡುವನೋ ಅವನು ಖಂಡಿತ ವಾಗಿಯೂ ಅದರಲ್ಲಿಯೇ ಸಾಯುವನು.
19. ಆದರೆ ದುಷ್ಟನು ದುಷ್ಟತ್ವವನ್ನು ಬಿಟ್ಟು ತಿರುಗಿಕೊಂಡು ನ್ಯಾಯ ವನ್ನೂ ನೀತಿಯನ್ನೂ ನಡೆಸಿದರೆ ಅವನು ಅದರಲ್ಲಿಯೇ ಬದುಕುವನು.
20. ಆದರೂ ನೀವು ಕರ್ತನ ಮಾರ್ಗ ಸರಿಯಲ್ಲ ಅನ್ನುತ್ತೀರಿ; ಓ ಇಸ್ರಾಯೇಲಿನ ಮನೆತನ ದವರೇ, ನಿಮ್ಮಲ್ಲಿ ಪ್ರತಿಯೊಬ್ಬರಿಗೆ ನಿಮ್ಮ ಮಾರ್ಗಗಳ ಪ್ರಕಾರ ನಾನು ನ್ಯಾಯ ತೀರಿಸುವೆನು.
21. ನಮ್ಮ ಸೆರೆಯ ಹನ್ನೆರಡನೇ ವರುಷದ ಹತ್ತನೇ ತಿಂಗಳಿನ ಐದನೇ ದಿನದಲ್ಲಿ ಆದದ್ದೇನಂದರೆ, ಯೆರೂಸ ಲೇಮಿನಿಂದ ತಪ್ಪಿಸಿಕೊಂಡವನೊಬ್ಬನು ನನ್ನ ಬಳಿಗೆ ಬಂದು ಪಟ್ಟಣವು ಹೊಡೆಯಲ್ಪಟ್ಟಿದೆ ಎಂದು ಹೇಳಿದನು.
22. ಆಗ ಅವನು ತಪ್ಪಿಸಿಕೊಂಡು ಬರುವ ದಕ್ಕಿಂತ ಮೊದಲೇ, ಸಾಯಂಕಾಲದಲ್ಲಿ ಕರ್ತನ ಕೈ ನನ್ನ ಮೇಲೆ ಇತ್ತು. ಅವನು ಮುಂಜಾನೆ ನನ್ನ ಬಳಿಗೆ ಬರುವ ತನಕ ನನ್ನ ಬಾಯಿ ತೆರೆಯಲ್ಪಟ್ಟಿದೆ; ನನ ಬಾಯಿ ತೆರೆದಿತ್ತು. ನಾನು ಮೂಕನಾಗಿರಲಿಲ್ಲ.
23. ಆಮೇಲೆ, ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇ ನಂದರೆ--
24. ಮನುಷ್ಯಪುತ್ರನೇ, ಇಸ್ರಾಯೇಲಿನ ದೇಶದ ಹಾಳು ಪ್ರದೇಶಗಳಲ್ಲಿ ವಾಸಿಸುವರು-- ಅಬ್ರಹಾಮನೇ ಒಬ್ಬನಾಗಿದ್ದು ದೇಶವನ್ನು ಸ್ವತಂತ್ರಿಸಿ ಕೊಂಡನು, ಆದರೆ ನಾವು ಬಹಳ ಜನರಾಗಿದ್ದು ದೇಶವು ನಮಗೆ ಸ್ವಾಸ್ತ್ಯವಾಗಿ ಕೊಡಲ್ಪಟ್ಟಿದೆ ಎಂದು ಹೇಳುತ್ತಾರೆ.
25. ಆದದರಿಂದ ನೀನು ಅವರಿಗೆ ಹೇಳಬೇಕಾದದ್ದೇ ನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀವು ರಕ್ತದಿಂದ ಕೂಡಿದ ಮಾಂಸವನ್ನು ತಿನ್ನುವರ ಲ್ಲವೇ? ನಿಮ್ಮ ಕಣ್ಣುಗಳು ವಿಗ್ರಹಗಳ ಕಡೆಗೆ ಎತ್ತಿ ರಕ್ತವನ್ನು ಚೆಲ್ಲುವ ನೀವು ದೇಶವನ್ನು ಸ್ವಾಧೀನಪಡಿಸಿ ಕೊಳ್ಳುವಿರೋ?
26. ನೀವು ನಿಮ್ಮ ಕತ್ತಿಯ ಮೇಲೆ ನಿಂತು ಅಸಹ್ಯವಾದ ಕೆಲಸಗಳನ್ನು ಮಾಡುವಿರಿ; ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ನೆರೆಯವನ ಹೆಂಡತಿಯನ್ನು ಕೆಡಿಸುತ್ತಾನೆ; ಹೀಗಾದರೆ ನೀವು ದೇಶವನ್ನು ಸ್ವತಂತ್ರಿಸಿ ಕೊಳ್ಳಬಹುದೋ?
27. ನೀನು ಅವರಿಗೆ ಹೇಳಬೇಕಾದ ದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ನನ್ನ ಜೀವದಾಣೆ, ನಿಶ್ಚಯವಾಗಿ ಹಾಳು ಸ್ಥಳಗಳಲ್ಲಿರುವವರು ಕತ್ತಿಯಿಂದ ಬೀಳುವರು; ಬಯಲಿ ನಲ್ಲಿರುವವರಿಗೆ ಮೃಗಗಳನ್ನು ಆಹಾರವನ್ನಾಗಿ ಕೊಡು ತ್ತೇನೆ; ಕೋಟೆಗಳಲ್ಲಿಯೂ ಗುಹೆಗಳಲ್ಲಿಯೂ ಇರುವ ವರು ವ್ಯಾಧಿಗಳಿಂದ ಸಾಯುವರು.
28. ನಾನು ಈ ದೇಶವನ್ನು ಹಾಳುಪಾಳು ಮಾಡುವೆನು. ಅದರ ಬಲದ ಮಹತ್ತು ತೀರಿಹೋಗುವದು. ಇಸ್ರಾಯೇಲಿನ ಪರ್ವತಗಳು ಹಾದುಹೋಗುವವರಿಲ್ಲದೆ ಹಾಳಾಗು ವವು.
29. ಆಮೇಲೆ ಅವರು ಮಾಡಿದ ಎಲ್ಲಾ ಅಸಹ್ಯಗ ಳಿಂದಾಗಿ ನಾನು ಆ ದೇಶವನ್ನು ಸಂಪೂರ್ಣವಾಗಿ ನಾಶಗೊಳಿಸಿದಾಗ ನಾನೇ ಕರ್ತನೆಂದು ಅವರು ತಿಳಿಯುವರು.
30. ಇದಲ್ಲದೆ ಮನುಷ್ಯಪುತ್ರನೇ, ನಿನ್ನ ಜನರ ಮಕ್ಕಳು ಇನ್ನು ಮನೆಗಳ ಬಾಗಲುಗಳಿಗೂ ಗೋಡೆಗಳಿಗೂ ವಿರುದ್ಧವಾಗಿ ಮಾತನಾಡುತ್ತಾರೆ, ನಿನ್ನ ವಿಷಯವಾಗಿ ಮಾತನಾಡಿಕೊಂಡು ಒಬ್ಬರಿಗೊಬ್ಬರು ತಮ್ಮ ತಮ್ಮ ಸಹೋದರರೆಲ್ಲರೂ--ಕರ್ತನಿಂದ ಹೊರಡುವ ಮಾತು ಏನೆಂದು ಕೇಳಿ ಪ್ರಾರ್ಥಿಸೋಣ ಬನ್ನಿ ಎಂದು ಹೇಳಿಕೊಳ್ಳುತ್ತಾರೆ.
31. ಬೇರೆ ಜನರು ಬರುವ ಹಾಗೆ ಅವರು ನಿನ್ನ ಬಳಿಗೆ ಬಂದು ಜನರು ಕುಳಿತುಕೊಳ್ಳುವ ಹಾಗೆ ನಿನ್ನ ಮುಂದೆ ಕುಳಿತುಕೊಳ್ಳುವರು; ಅವರು ನಿನ್ನ ವಾಕ್ಯಗಳನ್ನು ಕೇಳುವರು, ಆದರೆ ಅವರು ಅವುಗಳನ್ನು ಮಾಡುವದಿಲ್ಲ. ಅವರು ತಮ್ಮ ಬಾಯಿಂದ ಹೆಚ್ಚಾದ ಪ್ರೀತಿಯನ್ನು ತೋರಿಸುವರು; ಆದರೆ ಅವರ ಹೃದಯವು ಲೋಭತ್ವದ ಕಡೆಗೆ ಹೋಗುವದು.
32. ಇಗೋ, ನೀನು ಅವರಿಗೆ ಇಂಪಾದ ಶಬ್ದವುಳ್ಳಂತ, ತಂತಿವಾದ್ಯಗಳನ್ನು ಚೆನ್ನಾಗಿ ಬಾರಿಸುವಂತ ಒಬ್ಬನ ಮನೋಹರವಾದ ರಾಗದ ಹಾಗಿರುವಿ; ಅವರು ನಿನ್ನ ಮಾತುಗಳನ್ನು ಕೇಳುತ್ತಾರೆ, ಆದರೆ ಅವುಗಳನ್ನು ಮಾಡುವದಿಲ್ಲ.
33. ಯಾವಾಗ ಇದು ಬರುತ್ತದೋ ಆಗ ಅವರಿಗೆ ಪ್ರವಾದಿಯು ತಮ್ಮ ಸಂಗಡ ಇದ್ದಾನೆಂದು ತಿಳಿಯುವದು.

Chapter 34

1. ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
2. ಮನುಷ್ಯಪುತ್ರನೇ, ಇಸ್ರಾಯೇಲಿನ ಕುರುಬರಿಗೆ ವಿರುದ್ಧವಾಗಿ ಪ್ರವಾದಿಸು, ಪ್ರವಾದಿಸಿ ಅವರಿಗೆ ಹೀಗೆ ಹೇಳು--ದೇವರಾದ ಕರ್ತನು ಕುರುಬರಿಗೆ ಹೀಗೆ ಹೇಳುತ್ತಾನೆ--ತಮ್ಮನ್ನು ತಾವೇ ಮೇಯಿಸಿಕೊಳ್ಳುವ ಇಸ್ರಾಯೇಲಿನ ಕುರುಬ ರಿಗೆ ಅಯ್ಯೋ, ಕುರುಬರು ಮಂದೆಗಳನ್ನು ಮೇಯಿಸ ಬಾರದೋ?
3. ನೀವು ಕೊಬ್ಬನ್ನು ತಿನ್ನುತ್ತೀರಿ, ಉಣ್ಣೆಯ ಬಟ್ಟೆಯನ್ನು ಹಾಕುತ್ತೀರಿ, ಅವುಗಳಲ್ಲಿ ಕೊಬ್ಬಿದ್ದನ್ನು ಕೊಲ್ಲುತ್ತೀರಿ, ಆದರೆ ಮಂದೆಯನ್ನು ನೀವು ಮೇಯಿ ಸುವದಿಲ್ಲ,
4. ಕ್ಷೀಣವಾದದ್ದನ್ನು ನೀವು ಬಲಪಡಿಸುವ ದಿಲ್ಲ, ಖಾಯಿಲೆಯಾದದ್ದನ್ನು ವಾಸಿ ಮಾಡಿಸುವದಿಲ್ಲ, ಮುರಿದದ್ದನ್ನು ಕಟ್ಟುವದಿಲ್ಲ; ಕಳೆದು ಹೋದದ್ದನ್ನು ಹುಡುಕುವದಿಲ್ಲ, ಓಡಿಸಿದ್ದನ್ನು ನೀವು ಹಿಂದಕ್ಕೆ ತರು ವದಿಲ್ಲ. ಆದರೆ ಬಲಾತ್ಕಾರದಿಂದ ಮತ್ತು ಕ್ರೂರತನ ದಿಂದ ಅವುಗಳ ಮೇಲೆ ದೊರೆತನ ಮಾಡುತ್ತೀರಿ.
5. ಅವು ಚದರಿಹೋದವು; ಯಾಕಂದರೆ ಅಲ್ಲಿ ಕುರುಬ ರಿಲ್ಲ; ಅವರು ಚದರಿಹೋದಾಗ ಬಯಲಿನಲ್ಲಿರುವ ಎಲ್ಲಾ ಮೃಗಗಳಿಗೆ ಆಹಾರವಾದವು.
6. ನನ್ನ ಕುರಿಗಳು ಎಲ್ಲಾ ಪರ್ವತಗಳ ಮೇಲೆಯೂ ಪ್ರತಿಯೊಂದು ಎತ್ತರವಾದ ಬೆಟ್ಟಗಳ ಮೇಲೆಯೂ ಅಲೆದಾಡುತ್ತಿವೆ; ಹೌದು, ನನ್ನ ಮಂದೆಯು ಭೂಮಂಡಲದಲ್ಲೆಲ್ಲಾ ಚದರಿ ಹೋಗಿದೆ; ಯಾವನೂ ಅವುಗಳಿಗಾಗಿ ವಿಚಾರಿಸಲಿಲ್ಲ ಅಥವಾ ಹುಡುಕಲಿಲ್ಲ.
7. ಆದದರಿಂದ ಕುರುಬರೇ, ನೀವು ಕರ್ತನ ವಾಕ್ಯವನ್ನು ಕೇಳಿರಿ.
8. ದೇವ ರಾದ ಕರ್ತನು ಹೀಗೆ ಹೇಳುತ್ತಾನೆ; ನನ್ನ ಜೀವದಾಣೆ, ನಿಶ್ಚಯವಾಗಿ ನನ್ನ ಮಂದೆಯು ಕೊಳ್ಳೆಯಾದದ ರಿಂದಲೂ ನನ್ನ ಮಂದೆಯು ಕುರುಬ ನಿಲ್ಲದೆ ಬಯಲಿನ ಮೃಗಗಳಿಗೆಲ್ಲಾ ಆಹಾರವಾದದ್ದರಿಂದಲೂ ನನ್ನ ಕುರು ಬರು ನನ್ನ ಮಂದೆಯನ್ನು ಹುಡುಕದೆ ಇದ್ದದರಿಂದಲೂ ಕುರುಬರು ತಮ್ಮನ್ನು ಮೇಯಿಸಿಕೊಂಡರೇ ಹೊರತು ತಮ್ಮ ಕುರಿಗಳನ್ನು ಮೇಯಿಸದಿದ್ದದರಿಂದಲೂ
9. ಓ ಕುರುಬರೇ, ನೀವು ಕರ್ತನ ವಾಕ್ಯವನ್ನು ಕೇಳಿರಿ.
10. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಕುರುಬರಿಗೆ ವಿರುದ್ಧವಾಗಿದ್ದೇನೆ; ನನ್ನ ಮಂದೆ ಯನ್ನು ಅವರ ಕೈಯಿಂದ ವಿಚಾರಿಸುವೆನು; ಅವರು ಮಂದೆ ಮೇಯಿಸುವದನ್ನು ನಿಲ್ಲಿಸಿಬಿಡುತ್ತೇನೆ. ಇನ್ನು ಮೇಲೆ ಕುರುಬರು ತಮ್ಮ ಹೊಟ್ಟೆಯನ್ನು ತುಂಬಿಸಿ ಕೊಳ್ಳರು. ನಾನು ನನ್ನ ಮಂದೆಯನ್ನು ಅವರಿಗೆ ಆಹಾರ ವಾಗದ ಹಾಗೆ ಅವರ ಬಾಯಿಂದ ತಪ್ಪಿಸುತ್ತೇನೆ.
11. ದೇವರಾದ ಕರ್ತನು ಹೀಗೆ ಹೇಳುತ್ತಾನೆ; ಇಗೋ, ನಾನು ಹೌದು, ನಾನೇ ನನ್ನ ಕುರಿಗಳನ್ನು ವಿಚಾರಿಸಿ ಅವುಗಳನ್ನು ಹುಡುಕುತ್ತೇನೆ.
12. ಕುರುಬನು ಚದರಿದ್ದ ತನ್ನ ಕುರಿಗಳ ಮಧ್ಯದಲ್ಲಿ ಇರುವ ದಿನದಲ್ಲಿ ತನ್ನ ಮಂದೆಯನ್ನು ಹುಡುಕುವ ಪ್ರಕಾರ ನಾನು ನನ್ನ ಕುರಿಗಳನ್ನು ಹುಡುಕಿ ಕಾರ್ಮುಗಿಲಿನ ದಿನದಲ್ಲಿ ಚದರಿ ಹೋದ ಅವುಗಳನ್ನು ಎಲ್ಲಾ ಸ್ಥಳಗಳಿಂದ ಬಿಡಿಸುವೆನು.
13. ಜನಗಳೊಳಗಿಂದ ಅವುಗಳನ್ನು ಹೊರಗೆ ತೆಗೆದು, ದೇಶಗಳಿಂದ ಅವುಗಳನ್ನು ಕೂಡಿಸಿ, ಅವುಗಳ ಸ್ವಂತ ದೇಶಕ್ಕೆ ತರುವೆನು. ಇಸ್ರಾಯೇಲಿನ ಪರ್ವತಗಳ ಮೇಲೆ ನದಿಗಳಲ್ಲಿ ನಿವಾಸಿಸುವ ಎಲ್ಲಾ ದೇಶಗಳಲ್ಲಿ ಮೇಯಿಸುವೆನು.
14. ನಾನು ಒಳ್ಳೇ ಮೇವಿನಲ್ಲಿ ಅವು ಗಳನ್ನು ಮೇಯಿಸುವೆನು; ಇಸ್ರಾಯೇಲಿನ ಎತ್ತರವಾದ ಪರ್ವತಗಳಲ್ಲಿ ಅವುಗಳ ಮಂದೆಯು ಇರುವದು. ಅವುಗಳು ಆ ಒಳ್ಳೆಯ ಮಂದೆಯಲ್ಲಿ ಮಲಗಿ ಇಸ್ರಾ ಯೇಲಿನ ಪರ್ವತಗಳ ಮೇಲೆ ಪುಷ್ಟಿಯುಳ್ಳ ಮೇವನ್ನು ಮೇಯುವವು.
15. ನಾನೇ ನನ್ನ ಮಂದೆಯನ್ನು ಮೇಯಿಸಿ, ನಾನೇ ಅವುಗಳನ್ನು ಮಲಗಿಸುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
16. ಕಳೆದು ಹೋದದ್ದನ್ನು ನಾನೇ ಹುಡುಕುವೆನು; ಓಡಿಸಲ್ಪಟ್ಟಿದ್ದನ್ನು ನಾನೇ ಮತ್ತೆ ತರುವೆನು, ಮುರಿದದ್ದನ್ನು ನಾನೇ ಕಟ್ಟುವೆನು, ಬಲಹೀನವಾದದ್ದನ್ನು ನಾನೇ ಬಲಪಡಿಸುವೆನು. ಆದರೆ ಕೊಬ್ಬಿದ್ದನ್ನೂ ಬಲಿಷ್ಠವಾದದ್ದನ್ನೂ ನಾನೇ ಸಂಹರಿಸು ವೆನು; ನಾನೇ ಅವುಗಳಿಗೆ ನ್ಯಾಯದಂಡನೆ ಎಂಬ ಮೇವನ್ನು ಮೇಯಿಸುವೆನು.
17. ನಿಮಗೆ ಓ ನನ್ನ ಮಂದೆಯೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ದನಗಳ ಪಶುಗಳ ನಡುವೆ ಮತ್ತು ಟಗರುಗಳ ಹೋತಗಳ ನಡುವೆ ನಾನು ನ್ಯಾಯತೀರಿಸುವೆನು.
18. ಒಳ್ಳೇಯ ಮೇವನ್ನು ಚೆನ್ನಾಗಿ ಮೇದು ಮಿಕ್ಕ ಮೇವನ್ನು ತುಳಿದು ಕಸಮಾಡಿದ್ದು ಅಲ್ಪಕಾರ್ಯವೋ? ಮತ್ತು ತಿಳಿ ನೀರನ್ನು ಕುಡಿದು ಮಿಕ್ಕಿದ್ದನ್ನು ಕಾಲಿನಿಂದ ಕಲಕಿ ಬದಿ ಮಾಡಿದ್ದು ಸಣ್ಣ ಕೆಲಸವೋ?
19. ನನ್ನ ಮಂದೆಗಳಾದರೋ ನಿಮ್ಮ ಕಾಲಲ್ಲಿ ಕಸಮಾಡಿದ್ದನ್ನು ತಿನ್ನುವವು; ನಿನ್ನ ಕಾಲಿನಿಂದ ಕಲಕಿ ಬದಿಯಾದದ್ದನ್ನೇ ಕುಡಿಯುವವು.
20. ಆದದರಿಂದ ದೇವರಾದ ಕರ್ತನು ನಿಮಗೆ ಹೀಗೆ ಹೇಳುತ್ತಾನೆ-- ಇಗೋ, ನಾನು, ನಾನೇ ಕೊಬ್ಬಿದ ದನಕ್ಕೂ ಮತ್ತು ಬಡಕಲಾದ ದನಕ್ಕೂ ನಡುವೆ ನ್ಯಾಯತೀರಿಸುತ್ತೇನೆ.
21. ನೀವು ಅವುಗಳನ್ನು ಪಕ್ಕೆ ಮತ್ತು ಹೆಗಲುಗಳಿಂದ ನೂಕುತ್ತಾ ದುರ್ಬಲವಾದವುಗಳನ್ನು ಕೊಂಬುಗಳಿಂದ ಹಾಯುತ್ತಾ ನನ್ನ ಮಂದೆಯನ್ನು ದೂರ ಚದುರಿಸಿ ಬಿಟ್ಟಿರಿ.
22. ಆದದರಿಂದ ನಾನು ನನ್ನ ಮಂದೆಯನ್ನು ಕಾಪಾಡುತ್ತೇನೆ; ಅವು ಎಂದೆಂದೂ ಕೊಳ್ಳೆಯಾಗು ವದಿಲ್ಲ; ನಾನು ದನಗಳ ಮತ್ತು ಪಶುಗಳ ಮಧ್ಯೆ ನ್ಯಾಯತೀರಿಸುವೆನು.
23. ನಾನು ಅವುಗಳ ಮೇಲೆ ಒಬ್ಬ ಕುರುಬನನ್ನು ನೇಮಿಸುವೆನು; ಅವನು ಅವುಗಳನ್ನು ಮೇಯಿಸುತ್ತಾನೆ. ನನ್ನ ಸೇವಕನಾದ ದಾವೀದನೇ ಅವುಗಳನ್ನು ಮೇಯಿಸಿ ಅವುಗಳಿಗೆ ಕುರುಬನಾಗುತ್ತಾನೆ.
24. ಕರ್ತನಾದ ನಾನೇ ಅವುಗಳಿಗೆ ದೇವರಾಗಿರುವೆನು; ಮತ್ತು ನನ್ನ ಸೇವಕನಾದ ದಾವೀದನು ಅವುಗಳ ಮಧ್ಯೆ ಪ್ರಧಾನನಾಗಿರುವನೆಂದು ಕರ್ತನಾದ ನಾನೇ ಅದನ್ನು ಮಾತಾಡಿದ್ದೇನೆ;
25. ಅವರ ಸಂಗಡ ಸಮಾ ಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಕೆಟ್ಟ ಮೃಗಗಳನ್ನು ದೇಶದೊಳಗೆ ಇಲ್ಲದಂತೆ ಮಾಡುವೆನು; ಅವರು ನಿರ್ಭಯವಾಗಿ ಅರಣ್ಯಗಳಲ್ಲಿ ವಾಸಿಸಿ ಅಡವಿಗಳಲ್ಲಿ ಮಲಗುವರು.
26. ಅವರನ್ನೂ ನನ್ನ ಪರ್ವತಗಳ ಸುತ್ತಣ ಪ್ರದೇಶಗಳನ್ನೂ ಆಶೀರ್ವದಿ ಸುವೆನು, ಕಾಲಕ್ಕೆ ಸರಿಯಾಗಿ ಮಳೆಯನ್ನು ಸುರಿಸುವೆನು; ದಿವ್ಯಾಶೀರ್ವಾದದ ಮಳೆಯಾಗುವದು;
27. ಬಯಲಿನ ಮರವು ಅದರ ಫಲವನ್ನು ಕೊಡುವದು, ಭೂಮಿಯು ಅದರ ಆದಾಯವನ್ನು ಕೊಡುವದು, ಅವರು ತಮ್ಮ ದೇಶದಲ್ಲಿ ನಿರ್ಭಯವಾಗಿರುವರು; ನಾನೇ ಅದರ ನೊಗದ ಬಂಧನಗಳನ್ನು ಬಿಡಿಸಿ ಅವರಿಂದ ಸೇವೆ ಮಾಡಿಸಿಕೊಂಡವರ ಕೈಯಿಂದ ಅವರನ್ನು ತಪ್ಪಿಸಿದಾಗ ನಾನೇ ಕರ್ತನೆಂದು ಅವರು ತಿಳಿಯುವರು;
28. ಅವರು ಇನ್ನು ಮೇಲೆ ಅನ್ಯಜನಾಂಗಗಳಿಗೆ ಕೊಳ್ಳೆಯಾಗು ವದಿಲ್ಲ; ಭೂಮಿಯ ಮೃಗಗಳು ಅವರನ್ನು ತಿನ್ನುವದಿಲ್ಲ; ಯಾರೂ ಅವರನ್ನು ಹೆದರಿಸುವವರಿಲ್ಲದೆ ನಿರ್ಭಯ ವಾಗಿ ವಾಸಿಸುವರು.
29. ನಾನು ಅವರಿಗಾಗಿ ಒಂದು ಪ್ರಸಿದ್ಧ ಫಲವೃಕ್ಷವನ್ನು ಬೆಳೆಯಿಸುವೆನು; ಇನ್ನು ಮೇಲೆ ಅವರು ದೇಶದಲ್ಲಿ ಹಸಿವೆಯಿಂದ ನಾಶವಾ ಗುವದಿಲ್ಲ; ಅವರು ಅನ್ಯಜನರ ತಿರಸ್ಕಾರಕ್ಕೆ ಇನ್ನು ಮೇಲೆ ಗುರಿಯಾಗುವದೇ ಇಲ್ಲ.
30. ಆಗ ಅವರು ತಮ್ಮ ಕರ್ತನಾದ ದೇವರೆಂಬ ನಾನೇ ಅವರ ಸಂಗಡ ಇರುವೆನೆಂದೂ ಇಸ್ರಾಯೇಲಿನ ಮನೆತನದವರಾದ ಅವರೇ ನನ್ನ ಜನರಾಗಿರುವರೆಂದೂ ತಿಳಿಯುವರು ಎಂದು ದೇವರಾದ ಕರ್ತನು ಹೇಳುತ್ತಾನೆ.
31. ನನ್ನ ಕುರಿಗಳೂ ನನ್ನ ಮೇವಿನ ಮಂದೆಯೂ ಆಗಿರುವ ನೀವು ನರಪ್ರಾಣಿಗಳು. ನಾನು ನಿಮ್ಮ ದೇವರು ಎಂದು ದೇವರಾದ ಕರ್ತನು ಹೇಳುತ್ತಾನೆ.

Chapter 35

1. ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ,
2. ಮನುಷ್ಯಪುತ್ರನೇ, ನೀನು ಸೇಯಾರ್‌ ಪರ್ವತಕ್ಕೆ ಅಭಿಮುಖವಾಗಿ ಅದಕ್ಕೆ ವಿರೋಧವಾಗಿ ಪ್ರವಾದಿಸು;
3. ಅದಕ್ಕೆ ಹೇಳು--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಸೇಯಾರ್‌ ಪರ್ವತವೇ, ನಾನು ನಿನಗೆ ವಿರುದ್ಧವಾಗಿ ದ್ದೇನೆ. ನಾನು ನನ್ನ ಕೈಯನ್ನು ನಿನಗೆ ವಿರುದ್ಧವಾಗಿ ಚಾಚುತ್ತೇನೆ. ನಾನು ನಿನ್ನನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ.
4. ನಾನು ನಿನ್ನ ಪಟ್ಟಣಗಳನ್ನು ನಾಶಮಾಡಲು ನೀನು ಹಾಳಾಗುವಿ; ಆಗ ನಾನೇ ಕರ್ತನೆಂದು ನೀನು ತಿಳಿದುಕೊಳ್ಳುವಿ.
5. ನೀನು ಇಸ್ರಾಯೇಲ್ಯರ ಮೇಲೆ ದೀರ್ಘ ದ್ವೇಷವಿಟ್ಟು ಅವರ ಅಪರಾಧದ ಕೊನೆಯ ಕಾಲದಲ್ಲಿ ಅಪತ್ತು ಸಂಭವಿಸಿ ದಾಗ ಅವರನ್ನು ಕತ್ತಿಯ ಬಾಯಿಗೆ ಗುರಿಮಾಡಿದಿ.
6. ಆದದರಿಂದ ದೇವರಾದ ಕರ್ತನು ಹೇಳುತ್ತಾನೆ-- ನನ್ನ ಜೀವದಾಣೆ, ನಾನು ನಿನ್ನನ್ನು ರಕ್ತಮಯವಾಗಿ ಮಾಡುವೆನು; ರಕ್ತದ ಕೋಡಿಯು ನಿನ್ನನ್ನು ಬೆನ್ನಟ್ಟು ವದು; ನೀನು ರಕ್ತಸುರಿಸುವದಕ್ಕೆ ಹೇಸದೆ ಹೋದ ಕಾರಣ ರಕ್ತಪ್ರವಾಹವೇ ನಿನ್ನ ಬೆನ್ನು ಹತ್ತುವದು.
7. ಹೀಗೆ ನಾನು ಸೇಯಾರ್‌ ಪರ್ವತವನ್ನು ಸಂಪೂರ್ಣ ಹಾಳು ಮಾಡುವೆನು; ಅದರೊಳಗೆ ಹಾದು ಹೋಗು ವವನನ್ನೂ ಹಿಂತಿರುಗುವವನನ್ನೂ ಕಡಿದುಹಾಕುವೆನು.
8. ಅದರ ಪರ್ವತಗಳನ್ನು ನಿನ್ನವರ ಹೆಣಗಳಿಂದ ತುಂಬಿ ಸುವರು. ನಿನ್ನ ಕತ್ತಿಯಿಂದ ಹತವಾದವರು ನಿನ್ನ ಹಳ್ಳ ಕೊಳ್ಳಗಳಲ್ಲಿಯೂ ಬೀಳುವರು.
9. ನಾನು ನಿನ್ನನ್ನು ನಿತ್ಯ ನಾಶಕ್ಕೆ ಗುರಿಮಾಡುವೆನು; ನಿನ್ನ ನಗರಗಳು ಹಿಂತಿರುಗುವದಿಲ್ಲ ನಾನೇ ಕರ್ತನೆಂದು ನೀನು ತಿಳಿದುಕೊಳ್ಳುವಿ.
10. ಕರ್ತನು ಅವುಗಳಲ್ಲಿರುವದರಿಂದ ಈ ಎರಡು ಜನಾಂಗಗಳೂ ಈ ಎರಡು ರಾಜ್ಯಗಳೂ ನನ್ನವಾಗು ವವು. ನೀನು ಹೇಳಿದ್ದರಿಂದ ನಾವು ಅವುಗಳನ್ನು ವಶಮಾಡಿಕೊಳ್ಳುತ್ತೇವೆ.
11. ಆದದರಿಂದ ದೇವರಾದ ಕರ್ತನು ಹೇಳುತ್ತಾನೆ--ನನ್ನ ಜೀವದಾಣೆ, ನಾನು ನಿನ್ನ ಕೋಪದ ಪ್ರಕಾರವೂ ನೀನು ದ್ವೇಷದಿಂದ ಅವರಿಗೆ ವಿರುದ್ಧವಾಗಿ ನಡೆಸಿದ ಹೊಟ್ಟೇಕಿಚ್ಚಿನ ಪ್ರಕಾರವೂ ನಿನಗೆ ನ್ಯಾಯತೀರಿಸಿದ ಮೇಲೆ ನಾನು ಅವರ ಮಧ್ಯದಲ್ಲಿ ನನ್ನನ್ನು ತಿಳಿಯಪಡಿಸುತ್ತೇನೆ.
12. ಆಗ ನಾನೇ ಕರ್ತನೆಂದು ನೀನು ತಿಳಿಯುವಿ ಮತ್ತು ಇಸ್ರಾಯೇಲಿನ ಪರ್ವತಗಳ ವಿಷಯವಾಗಿ--ಅವು ಹಾಳಾಗಿವೆ ನಮಗೆ ಆಹಾರವಾಗಿ ಕೊಡಲ್ಪಟ್ಟಿವೆ ಎಂದು ಹೇಳಿ ಮಾತ ನಾಡಿದ ನಿನ್ನ ಎಲ್ಲಾ ದೂಷಣೆಗಳನ್ನು ಕೇಳಿರುವೆನೆಂದು ತಿಳಿಯುವಿ.
13. ಹೀಗೆ ನಿಮ್ಮ ಬಾಯಿಂದ ನೀವು ನನಗೆ ವಿರೋಧವಾಗಿ ಕೊಚ್ಚಿದ್ದನ್ನೂ ನನಗೆ ವಿರೋಧವಾಗಿ ನಿಮ್ಮ ಮಾತುಗಳಿಂದ ಹೆಚ್ಚಿಸಿದ್ದನ್ನೂ ನಾನು ಕೇಳಿದ್ದೇನೆ.
14. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಯಾವಾಗ ಸಂಪೂರ್ಣ ಭೂಮಿಯು ಸಂತೋಷಪಡು ತ್ತದೋ ಆಗ ನಾನು ನಿನ್ನನ್ನು ಹಾಳುಮಾಡುವೆನು.
15. ಹೇಗೆ ನೀನು ಇಸ್ರಾಯೇಲ್ಯರ ಸ್ವಾತಂತ್ರ್ಯದ ನಾಶನಕ್ಕೆ ಸಂತೋಷಪಟ್ಟೆಯೋ ಹಾಗೆಯೇ ನಿನ್ನ ನಾಶನಕ್ಕೆ ಸಂತೋಷಪಡುವ ಹಾಗೆ ಮಾಡುವೆನು. ಓ ಸೇಯಾರ್‌ ಪರ್ವತವೇ ಮತ್ತು ಸಮಸ್ತ ಎದೋಮೇಸಂಪೂರ್ಣವಾಗಿ ಹಾಳಾಗುವಿ; ಆಗ ನಾನೇ ಕರ್ತ ನೆಂದು ನಿಮಗೆ ತಿಳಿಯುವದು.

Chapter 36

1. ಅಲ್ಲದೆ ಮನುಷ್ಯಪುತ್ರನೇ, ಇಸ್ರಾಯೇಲ್‌ ಪರ್ವತಗಳ ಕಡೆಗೆ ಪ್ರವಾದಿಸು ಮತ್ತು ಹೇಳು--ಇಸ್ರಾಯೇಲ್‌ ಪರ್ವತಗಳೇ, ನೀವು ಕರ್ತನ ವಾಕ್ಯವನ್ನು ಕೇಳಿರಿ;
2. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಯಾಕಂದರೆ ನಿನ್ನ ಶತ್ರುವು ನಿನಗೆ ವಿರೋಧವಾಗಿ ಆಹಾ, ಪೂರ್ವದ ಉತ್ತಮ ಸ್ಥಳಗಳು ನಮಗೆ ಸ್ವಾಸ್ತ್ಯವಾದವು ಎಂದು ಹೇಳುವರು;
3. ಆದದ ರಿಂದ ಪ್ರವಾದಿಸು ಮತ್ತು ಹೇಳು, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಅವರು ನಿನ್ನನ್ನು ಹಾಳುಮಾಡಿ; ಎಲ್ಲಾ ಕಡೆಗಳಿಂದಲೂ ನುಂಗಿಬಿಟ್ಟರು. ಅದು ನೀವು ಅನ್ಯಜನಾಂಗಗಳ ಉಳಿಯುವಿಕೆಗೆ ಸ್ವಾಸ್ತ್ಯವಾಗ ಬೇಕೆಂದು ನೀವು ಮಾತನಾಡುವವರ ತುಟಿಗಳಲ್ಲಿಯೂ ಜನರ ನಿಂದೆಯಲ್ಲಿಯೂ ಮೇಲೆತ್ತಲ್ಪಟ್ಟಿದ್ದೀರಿ;
4. ಆದ ದರಿಂದ ಇಸ್ರಾಯೇಲ್‌ ಪರ್ವತಗಳೇ, ನೀವು ದೇವ ರಾದ ಕರ್ತನ ವಾಕ್ಯವನ್ನು ಕೇಳಿರಿ--ಹೀಗೆ ಪರ್ವತ ಗಳಿಗೂ ಬೆಟ್ಟಗಳಿಗೂ ನದಿಗಳಿಗೂ ಕಣಿವೆಗಳಿಗೂ ಹಾಳಾದ ಒಣಭೂಮಿಗೂ ಸುತ್ತಣ ಅನ್ಯಜನಾಂಗ ಗಳಲ್ಲಿ ಉಳಿದವರು ಕೊಳ್ಳೆಹೊಡೆದು ತೊರೆದು ಬಿಡುವ ಹಾಳು ಪಟ್ಟಣಗಳಿಗೂ ದೇವರಾದ ಕರ್ತನು ಹೇಳು ತ್ತಾನೆ.
5. ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಿಶ್ಚಯವಾಗಿ ನನ್ನ ರೋಷದ ಬೆಂಕಿ ಯಿಂದ ಅನ್ಯಜನಾಂಗಗಳಲ್ಲಿ ಉಳಿದವರಿಗೂ ಎಲ್ಲಾ ಎದೋಮಿಗೆ ವಿರುದ್ಧವಾಗಿ ನಾನು ಮಾತನಾಡಿದ್ದೇನೆ; ಅವರ ಸಂಪೂರ್ಣ ಹೃದಯದ ಸಂತೋಷದಿಂದಲೂ ತಮ್ಮ ಹಗೆಯ ಮನೋಭಾವದಿಂದಲೂ ನನ್ನ ದೇಶ ವನ್ನು ಕೊಳ್ಳೆಯಾಗಿ ಹೊರಗೆ ಹಾಕುವ ಹಾಗೆ ತಮಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದಾರೆ.
6. ಆದದರಿಂದ ಇಸ್ರಾಯೇಲ್‌ ದೇಶಕ್ಕೆ ಸಂಬಂಧಪಟ್ಟ ಹಾಗೆ ಪ್ರವಾದಿಸು; ಪರ್ವತ ಗಳಿಗೂ ಬೆಟ್ಟಗಳಿಗೂ ಹಳ್ಳಕೊಳ್ಳಗಳಿಗೂ ಹೇಳಬೇಕಾ ದದ್ದೇನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಇಗೋ, ಅನ್ಯಜನಾಂಗಗಳ ಅವಮಾನವನ್ನು ನೀನು ಹೊತ್ತದ್ದರಿಂದ ನಾನು ರೋಷದಿಂದಲೂ ರೌದ್ರ ದಿಂದಲೂ ಮಾತನಾಡಿದ್ದೇನೆ.
7. ಆದದರಿಂದ ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ನನ್ನ ಕೈಯನ್ನು ಮೇಲೆತ್ತಿದ್ದೇನೆ, ನಿಶ್ಚಯವಾಗಿ ನಿನ್ನ ಮೇಲಿ ರುವ ಅನ್ಯಜನಾಂಗಗಳು ತಾವಾಗಿಯೇ ತಮ್ಮ ನಿಂದೆಯನ್ನು ಹೊರುವರು.
8. ಆದರೆ ಓ ಇಸ್ರಾಯೇಲ್‌ ಪರ್ವತಗಳೇ, ನೀವು ನಿಮ್ಮ ಕೊಂಬೆಗಳನ್ನು ಹೊರಡಿಸಿ ನನ್ನ ಜನರಾದ ಇಸ್ರಾಯೇಲ್ಯರಿಗೆ ಫಲಕೊಡುವಿರಿ; ಅವರ ಬರುವಿಕೆಯು ಸವಿಾಪವಾಗಿದೆ.
9. ಇಗೋ, ನಾನು ನಿಮ್ಮ ಪಕ್ಷದಲ್ಲಿ ಇದ್ದೇವೆ, ನಾನು ನಿಮ್ಮ ಕಡೆಗೆ ತಿರುಗಿ ಕೊಳ್ಳುತ್ತೇನೆ. ನೀವು ಉತ್ತುಬಿತ್ತುವಿರಿ.
10. ನಾನು ಮನುಷ್ಯರನ್ನೂ ಎಲ್ಲಾ ಇಸ್ರಾಯೇಲ್‌ ಮನೆತನದ ವರನ್ನೂ ಅಂದರೆ ಎಲ್ಲರನ್ನೂ ನಿನ್ನ ಮೇಲೆ ವೃದ್ಧಿ ಮಾಡುತ್ತೇನೆ, ಪಟ್ಟಣಗಳು ಜನಭರಿತವಾಗುವವು, ಹಾಳಾದ ಪ್ರದೇಶಗಳು ಕಟ್ಟಲ್ಪಡುವವು;
11. ನಾನು ನಿಮ್ಮಲ್ಲಿ ಮನುಷ್ಯರನ್ನೂ ಮೃಗಗಳನ್ನೂ ವೃದ್ಧಿಮಾಡು ವೆನು; ಅವು ಹೆಚ್ಚಾಗಿ ನಿಮಗೆ ಫಲವನ್ನು ತರುವವು; ನಾನು ನಿಮ್ಮನ್ನು ನಿಮ್ಮ ಹಳೆಯ ಸ್ಥಳಗಳಲ್ಲಿ ವಾಸಿಸುವಂತೆ ಮಾಡಿ ನಿಮ್ಮ ಮೊದಲಿನ ಸ್ಥಿತಿಗಿಂತ ನಿಮ್ಮನ್ನು ಉತ್ತಮ ಸ್ಥಿತಿಗೆ ತರುವೆನು; ಆಗ ನಾನೇ ಕರ್ತನೆಂದು ನೀವು ತಿಳಿಯುವಿರಿ.
12. ಹೌದು, ಮನುಷ್ಯರು ನಿಮ್ಮ ಮೇಲೆ ನಡೆಯುವಂತೆ ನಾನು ಮಾಡುವೆನು, ಅದು ನನ್ನ ಜನರಾದ ಇಸ್ರಾಯೇಲ್ಯರ ಮೇಲೆಯೇ; ಅವರು ನಿನ್ನನ್ನು ಸ್ವಾಧೀನಮಾಡಿಕೊಳ್ಳುವರು, ನೀನು ಅವರಿಗೆ ಸ್ವಾಸ್ಥ್ಯವಾಗುವಿ ಮತ್ತು ನೀನು ಇನ್ನು ಮೇಲೆ ಅವರನ್ನು ಮಕ್ಕಳಿಲ್ಲದ ಮನುಷ್ಯರನ್ನಾಗಿ ಮಾಡುವದಿಲ್ಲ.
13. ದೇವ ರಾದ ಕರ್ತನು ಹೀಗೆ ಹೇಳುತ್ತಾನೆ, ನೀನು ಮನುಷ್ಯರನ್ನು ನುಂಗುವಂಥ ದೇಶ ಮತ್ತು ನಿನ್ನ ಜನಗಳನ್ನು ಮಕ್ಕಳಿಲ್ಲ ದಂಥ ಜನಾಂಗಗಳನ್ನಾಗಿ ಮಾಡುವಂಥದ್ದು ಆಗಿರುವಿ ಎಂದು ಅವರು ನಿನಗೆ ಹೇಳುವರು;
14. ಆದದರಿಂದ ಇನ್ನು ಮುಂದೆ ನೀನು ಮನುಷ್ಯರನ್ನು ನುಂಗುವದಿಲ್ಲ; ಇನ್ನು ಮೇಲೆ ನಿನ್ನ ಜನಾಂಗದವರನ್ನು ಮಕ್ಕಳಿಲ್ಲದವ ರನ್ನಾಗಿ ಮಾಡುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.
15. ಅಲ್ಲದೆ ಇನ್ನು ಮೇಲೆ ನೀನು ಅನ್ಯ ಜನಾಂಗಗಳ ನಿಂದೆಯನ್ನು ಕೇಳಿಸಿಕೊಳ್ಳದಂತೆ ನಾನು ಮಾಡುವೆನು; ನೀನು ಇನ್ನು ಮೇಲೆ ಜನಾಂಗದವರಿಂದ ತಿರಸ್ಕರಿಸಲ್ಪಡುವದಿಲ್ಲ; ನೀನು ನಿನ್ನ ಜನಾಂಗವನ್ನು ಇನ್ನೆಂದಿಗೂ ಬೀಳಿಸುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.
16. ಇದಲ್ಲದೆ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ--
17. ಮನುಷ್ಯಪುತ್ರನೇ, ಯಾವಾಗ ಇಸ್ರಾಯೇಲ್ಯರ ಮನೆತನದವರು ಸ್ವಂತ ದೇಶದಲ್ಲಿ ವಾಸಿಸಿದರೋ, ಆಗ ಅವರು ಅದನ್ನು ತಮ್ಮ ಸ್ವಂತ ಮಾರ್ಗಗಳಿಂದಲೂ ದುಷ್ಕಾರ್ಯಗಳಿಂದಲೂ ಅಶುದ್ಧ ಗೊಳಿಸಿದರು. ಅವರ ಆ ದುಷ್ಕಾರ್ಯಗಳು ನನ್ನ ಮುಂದೆ ಮುಟ್ಟಾಗಿರುವವಳ ಅಶುದ್ಧತ್ವದ ಹಾಗಿತ್ತು.
18. ಆದದರಿಂದ ಅವರು ದೇಶದಲ್ಲಿ ಚೆಲ್ಲಿದ ರಕ್ತದ ನಿಮಿತ್ತವಾಗಿಯೂ ಅವರು ಅದನ್ನು ಅಶುದ್ಧಪಡಿಸಿದ ಅವರ ವಿಗ್ರಹಗಳ ನಿಮಿತ್ತವಾಗಿಯೂ ನನ್ನ ರೋಷ ವನ್ನು ಅವರ ಮೇಲೆ ಸುರಿಸಿದೆನು.
19. ನಾನು ಅವರನ್ನು ಅನ್ಯಜನಾಂಗಗಳಲ್ಲಿ ಚದರಿಸಿದೆನು. ಅವರು ಆ ದೇಶ ಗಳಲ್ಲಿ ಚದರಿಹೋದರು; ಅವರ ಮಾರ್ಗಗಳ ದುಷ್ಕ್ರಿ ಯೆಗಳ ಪ್ರಕಾರವಾಗಿ ಅವರಿಗೆ ನಾನು ನ್ಯಾಯ ತೀರಿಸಿದೆನು.
20. ಅವರು ಆ ಅನ್ಯಜನಾಂಗಗಳೊಳಗೆ ಸೇರಿಕೊಂಡ ಮೇಲೆ--ಇವರೇ ಕರ್ತನ ಜನರು ಮತ್ತು ಇವರು ಆತನ ದೇಶದಿಂದ ಹೊರಟುಹೋದರು ಎಂದು ಅವರಿಗೆ ಹೇಳಿ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಮಾಡುವರು.
21. ಆದರೆ ಇಸ್ರಾಯೇಲಿನ ಮನೆತನದವರು ತಾವು ಹೋದ ಅನ್ಯಜನಾಂಗಗಳಲ್ಲಿ ಅಪವಿತ್ರಮಾಡಿದ ನನ್ನ ಪರಿಶುದ್ಧವಾದ ಹೆಸರನ್ನು ನಾನು ಕನಿಕರಿಸಿದೆನು.
22. ಆದದರಿಂದ ನೀನು ಇಸ್ರಾ ಯೇಲನ ಮನೆತನದವರಿಗೆ ಹೇಳು--ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು--ಓ ಇಸ್ರಾಯೇಲಿನ ಮನೆತನದವರೇ, ನಾನು ಇದನ್ನು ನಿಮಗಾಗಿ ಮಾಡು ತ್ತಿಲ್ಲ, ಆದರೆ ನೀವು ಹೋಗುವಾಗ ಅನ್ಯಜನಾಂಗಗಳ ಮಧ್ಯೆ ಅಪವಿತ್ರಪಡಿಸಿದ ನನ್ನ ಪರಿಶುದ್ಧನಾಮಕ್ಕಾಗಿ ಮಾಡುತ್ತೇನೆ.
23. ನೀವು ಅನ್ಯಜನಾಂಗಗಳ ಮಧ್ಯೆ ಅಪವಿತ್ರಪಡಿಸಿದ ನನ್ನ ಮಹತ್ತರ ನಾಮವನ್ನು ನಾನು ಪರಿಶುದ್ಧಮಾಡುವೆನು; ಹಾಗೆ ನಾನು ಅವರ ಕಣ್ಣುಗಳ ಮುಂದೆ ನಿಮ್ಮಲ್ಲಿ ಪರಿಶುದ್ಧನಾದ ಮೇಲೆ ಆ ಅನ್ಯ ಜನಾಂಗಗಳವರು ನಾನೇ ಕರ್ತನೆಂದು ತಿಳಿಯುವರು ಎಂದು ದೇವರಾದ ಕರ್ತನು ಹೇಳುತ್ತಾನೆ.
24. ನಾನು ನಿಮ್ಮನ್ನು ಅನ್ಯಜನಾಂಗಗಳ ಮಧ್ಯದಿಂದ ತೆಗೆದು ಎಲ್ಲಾ ದೇಶಗಳೊಳಗಿಂದ ಕೂಡಿಸಿ ನಿಮ್ಮ ನಿಮ್ಮ ಸ್ವಂತ ದೇಶಗಳಲ್ಲಿ ಸೇರಿಸುವೆನು.
25. ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಚಿಮುಕಿಸುತ್ತೇನೆ ಮತ್ತು ನೀವು ಶುದ್ಧರಾಗುವಿರಿ; ಅಶುದ್ಧತ್ವಗಳಿಂದಲೂ ನಿಮ್ಮ ಎಲ್ಲಾ ವಿಗ್ರಹಗಳಿಂದಲೂ ನಿಮ್ಮನ್ನು ಶುದ್ಧೀಕರಿಸುವೆನು.
26. ನಿನಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನಿಮ್ಮ ದೇಹದಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ.
27. ನನ್ನ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನೀವು ನನ್ನ ನಿಯಮ ಗಳಲ್ಲಿ ನಡೆಯುವ ಹಾಗೆ ಮಾಡುವೆನು ಮತ್ತು ನೀವು ನನ್ನ ನ್ಯಾಯವಿಧಿಗಳನ್ನು ಅನುಸರಿಸಿ ನಡೆಯುವಿರಿ.
28. ನಾನು ನಿಮ್ಮ ತಂದೆಗಳಿಗೆ ಕೊಟ್ಟ ದೇಶದಲ್ಲಿ ವಾಸಿ ಸುವಿರಿ; ನೀವು ನನ್ನ ಜನರಾಗಿರುವಿರಿ; ನಾನು ನಿಮ್ಮ ದೇವರಾಗಿರುವೆನು.
29. ಅಲ್ಲದೆ ನಾನು ನಿಮ್ಮನ್ನು ನಿಮ್ಮ ಅಶುದ್ಧತ್ವಗಳಿಂದಲೂ ಸಹ ರಕ್ಷಿಸುವೆನು; ಬೆಳೆ ಬೆಳೆ ಯಲೆಂದು ಹೇಳಿ ಅದನ್ನು ಹೆಚ್ಚಿಸುವೆನು, ಕ್ಷಾಮವನ್ನು ನಿಮ್ಮ ಮೇಲೆ ಬರಮಾಡುವದಿಲ್ಲ.
30. ಅನ್ಯಜನಾಂಗ ಗಳಲ್ಲಿ ನಿಮಗೆ ಬರಗಾಲದ ನಿಂದೆಯು ಇನ್ನು ಮೇಲೆ ಬಾರದ ಹಾಗೆ ನಾನು ಮರಗಳ ಫಲವನ್ನೂ ಹೊಲದ ಆದಾಯವನ್ನು ಹೆಚ್ಚಿಸುವೆನು.
31. ಆಮೇಲೆ ನೀವು ನಿಮ್ಮ ದುರ್ಮಾರ್ಗ ದುರಾಚಾರಗಳನ್ನು ಜ್ಞಾಪಕಕ್ಕೆ ತಂದುಕೊಂಡು ನಿಮ್ಮ ಅಪರಾಧಗಳ ಮತ್ತು ಅಸಹ್ಯ ಕಾರ್ಯಗಳ ನಿಮಿತ್ತ ನಿಮಗೆ ನೀವೇ ಹೇಸಿಕೊಳ್ಳುವಿರಿ.
32. ಇದು ನಿಮಗಾಗಿ ಮಾಡಲಿಲ್ಲವೆಂದು ನಿಮಗೆ ತಿಳಿದಿರಲಿ ಎಂದು ದೇವರಾದ ಕರ್ತನು ಹೇಳುತ್ತಾನೆ; ಓ ಇಸ್ರಾಯೇಲಿನ ಮನೆತನದವರೇ, ನಿಮ್ಮ ದುರ್ಮಾ ರ್ಗಗಳಿಗೆ ನಾಚಿಕೆ ಪಟ್ಟು ಲಜ್ಜೆಹೊಂದಿರಿ.
33. ದೇವ ರಾದ ಕರ್ತನು ಹೀಗೆ ಹೇಳುತ್ತಾನೆ; ನಾನು ನಿಮ್ಮ ಎಲ್ಲಾ ಅಕ್ರಮಗಳಿಂದ ನಿಮ್ಮನ್ನು ಶುದ್ಧಮಾಡುವ ಆ ದಿನದಲ್ಲಿ ಪಟ್ಟಣಗಳನ್ನು ನಿವಾಸಿಗಳಿಂದ ತುಂಬಿಸು ವೆನು; ಹಾಳಾಗಿರುವ ಸ್ಥಳಗಳೂ ಸಹ ಕಟ್ಟಲ್ಪಡುವವು.
34. ದೇಶವು ಅಲ್ಲಿ ಹಾದುಹೋಗುವ ಜನರೆಲ್ಲರ ಮುಂದೆ ಬೀಡಾಗಿ ಕಾಣದೆ ಉಳುಮೆಗೊಂಡಿರುವದು.
35. ಹಾಳಾಗಿದ್ದ ಈ ದೇಶವು ಏದೆನಿನ ಉದ್ಯಾನವನದ ಹಾಗಾಯಿತೆಂದು ಮತ್ತು ಹಾಳಾಗಿ ಬಿದ್ದುಹೋಗಿ ಬೀಡಾಗಿ ನಶಿಸಿ ಹೋಗಿರುವ ಪಟ್ಟಣಗಳು ನಾಡಾಗಿ ಕೋಟೆಗಳಿಂದಲೂ ನಿವಾಸಿಗಳಿಂದಲೂ ತುಂಬಿವೆ ಎಂದು ಹೇಳುವರು.
36. ಆಮೇಲೆ ನಿಮ್ಮ ಸುತ್ತಲೂ ಉಳಿದಿರುವ ಅನ್ಯಜನಾಂಗಗಳು ನಶಿಸಿ ಹೋಗಿರುವ ಸ್ಥಳಗಳನ್ನು ಮತ್ತು ಹಾಳಾಗಿರುವ ಸ್ಥಳದಲ್ಲಿ ಗಿಡ ನೆಟ್ಟ ವನು ಕರ್ತನಾದ ನಾನೇ ಎಂದು ತಿಳಿಯುವರು; ಕರ್ತನಾದ ನಾನೇ ಇದನ್ನು ಹೇಳಿದ್ದೇನೆ, ನಾನೇ ಇದನ್ನು ಮಾಡುತ್ತೇನೆ.
37. ದೇವರಾದ ಕರ್ತನು ಹೀಗೆ ಹೇಳುತ್ತಾನೆ; ಇದನ್ನು ಅವರಿಗೆ ಮಾಡಲು ನಾನಿನ್ನೂ ಇಸ್ರಾಯೇಲನ ಮನೆ ತನದವರಿಂದ ವಿಚಾರಿಸುವೆನು; ನಾನು ಅವರನ್ನು ಮನುಷ್ಯರಲ್ಲಿ ಮಂದೆಯಂತೆ ಹೆಚ್ಚಿಸುವೆನು.
38. ಪರಿ ಶುದ್ಧ ಮಂದೆಯ ಹಾಗೆಯೂ ಯೆರೂಸಲೇಮಿನ ಪರಿಶುದ್ಧ ಹಬ್ಬಗಳ ಮಂದೆಯ ಹಾಗೆಯೂ ಇರುವರು; ಆದಕಾರಣ ಬೀಡಾದ ಪಟ್ಟಣಗಳು ಮನುಷ್ಯರ ಮಂದೆಗಳಿಂದ ತುಂಬುವವು; ನಾನೇ ಕರ್ತನೆಂದು ಅವರಿಗೆ ತಿಳಿಯುವದು.

Chapter 37

1. ಕರ್ತನ ಕೈ ನನ್ನ ಮೇಲೆ ಇತ್ತು; ಅದು ಕರ್ತನ ಆತ್ಮದ ಮೂಲಕ ನನ್ನನ್ನು ಹೊರಗೆ ತಂದು ಪೂರ್ತಿಯಾಗಿ ಎಲುಬುಗಳು ತುಂಬಿರುವ ಕಣಿವೆಗಳ ಮಧ್ಯ ತಳದಲ್ಲಿ ನನ್ನನ್ನು ಬಿಟ್ಟಿತು.
2. ಅವುಗಳ ಸುತ್ತಲೂ ನನ್ನನ್ನು ಹಾದುಹೋಗುವಂತೆ ಮಾಡಿತು; ಇಗೋ, ತೆರೆದಿರುವ ಆ ಕಣಿವೆಯಲ್ಲಿ ಒಣಗಿಹೋದ ಎಲುಬುಗಳು ಲೆಕ್ಕವಿಲ್ಲದಷ್ಟು ಬಿದ್ದಿದ್ದವು.
3. ಆತನು ನನಗೆ ಹೇಳಿದ್ದು--ಮನಷ್ಯಪುತ್ರನೇ, ಈ ಎಲುಬುಗಳು ಜೀವಿಸುವವೇ ಎಂದಾಗ ನಾನು ಉತ್ತರವಾಗಿ, ಓ ದೇವರಾದ ಕರ್ತನೇ, ನೀನೇ ತಿಳಿದಿರುವೆ ಎಂದೆನು.
4. ಆತನು ನನಗೆ ಹೇಳಿದ್ದೇನಂದರೆ--ಈ ಎಲುಬುಗಳ ಮೇಲೆ ಪ್ರವಾದಿಸು ಮತ್ತು ಅವುಗಳಿಗೆ ಹೇಳು--ಓ ಒಣಗಿದ ಎಲುಬುಗಳೇ, ನೀವು ಕರ್ತನ ವಾಕ್ಯವನ್ನು ಕೇಳಿರಿ.
5. ದೇವರಾದ ಕರ್ತನು ಈ ಎಲುಬುಗಳಿಗೆ ಹೀಗೆ ಹೇಳುತ್ತಾನೆ--ಇಗೋ, ನಾನು ನಿಮ್ಮಲ್ಲಿ ಉಸಿರನ್ನು ಬರಮಾಡುತ್ತೇನೆ; ನೀವು ಬದುಕುವಿರಿ;
6. ನಾನು ನಿಮ್ಮ ಮೇಲೆ ನರಗಳನ್ನು ಹಬ್ಬಿಸಿ ಮಾಂಸವನ್ನು ಹರಡಿ ಚರ್ಮದಿಂದ ಮುಚ್ಚಿ ನಿಮ್ಮೊಳಗೆ ಉಸಿರನ್ನು ಕೊಟ್ಟು ಬದುಕಿಸುತ್ತೇನೆ; ನಾನೇ ಕರ್ತನೆಂದು ನೀವು ತಿಳಿ ಯುವಿರಿ.
7. ಹಾಗೆಯೇ ನಾನು ಆಜ್ಞೆಯನ್ನು ಪಡೆದ ಪ್ರಕಾರ ಪ್ರವಾದಿಸಿದೆನು; ನಾನು ಪ್ರವಾದಿಸುವಾಗ ಅಲ್ಲಿ ಒಂದು ಶಬ್ದವಾಯಿತು; ಇಗೋ, ಅದು ಕದ ಲುತ್ತಿತ್ತು, ಎಲುಬುಗಳೆಲ್ಲಾ ಒಂದು ಗೂಡಿ ಎಲುಬಿಗೆ ಎಲುಬು ಸೇರಿಕೊಂಡಿತು.
8. ನಾನು ನೋಡಿದಾಗ ಇಗೋ, ನರಗಳು ಹಬ್ಬಿಕೊಂಡವು ಮಾಂಸವು ಹರಡಿಕೊಂಡಿತು, ಅವುಗಳ ಮೇಲೆ ಚರ್ಮವು ಮುಚ್ಚಿ ಕೊಂಡಿತು. ಆದರೆ ಅವುಗಳಿಗೆ ಉಸಿರೇ ಇರಲಿಲ್ಲ.
9. ಆಮೇಲೆ ಆತನು ನನಗೆ ಹೇಳಿದ್ದೇನಂದರೆ--ಪ್ರವಾ ದಿಸು, ಉಸಿರಿನ ಕಡೆಗೆ ಪ್ರವಾದಿಸು, ಮನುಷ್ಯ ಪುತ್ರನೇ, ಆ ಉಸಿರಿಗೆ ಹೇಳು--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಓ ಉಸಿರೇ, ನಾಲ್ಕು ದಿಕ್ಕುಗಳಿಂದ ಬಂದು ಈ ಹತ ಶರೀರಗಳು ಬದುಕುವಂತೆ ಅದರ ಮೇಲೆ ಸುಳಿ,
10. ನಾನು ಆತನ ಆಜ್ಞೆಯ ಹಾಗೆಯೇ ಪ್ರವಾದಿಸಿದೆನು; ಅವುಗಳಲ್ಲಿ ಉಸಿರು ಬಂತು; ಅವುಗಳೆಲ್ಲಾ ಕಾಲೂರಿ ನಿಂತು ಅತ್ಯಂತ ಮಹಾ ಸೈನ್ಯ ವಾದವು.
11. ಆಮೇಲೆ ಆತನು ನನಗೆ ಹೇಳಿದ್ದೇನಂದರೆ--ಮನುಷ್ಯಪುತ್ರನೇ, ಈ ಎಲುಬುಗಳು ಸಂಪೂರ್ಣ ಇಸ್ರಾಯೇಲ್‌ ಮನೆತನಗಳೇ; ಇಗೋ, ನಮ್ಮ ಎಲುಬುಗಳು ಒಣಗಿಸಲ್ಪಟ್ಟಿವೆ ಮತ್ತು ನಮ್ಮ ನಿರೀಕ್ಷೆಯು ಕಳೆದುಹೋಗಿದೆ; ನಾವು ಶುದ್ಧವಾಗಿ ನಮ್ಮ ಭಾಗಗಳನ್ನು ಕತ್ತರಿಸಿಕೊಂಡಿದ್ದೇವೆ ಎಂದು ಅವರು ಹೇಳುವರು.
12. ಆದದರಿಂದ ನೀನು ಪ್ರವಾದಿಸು ಮತ್ತು ಅವರಿಗೆ ಹೇಳು--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಓ ನನ್ನ ಜನರೇ, ನಾನು ನಿಮ್ಮ ಸಮಾಧಿಗಳನ್ನು ತೆರೆಯುವೆನು ಮತ್ತು ಸಮಾಧಿಗಳಿಂದ ನೀವು ಹೊರಗೆ ಬರುವಂತೆ ಮಾಡುವೆನು. ಇಸ್ರಾ ಯೇಲ್‌ ದೇಶಕ್ಕೆ ನಿಮ್ಮನ್ನು ತರುವೆನು.
13. ಓ ನನ್ನ ಜನರೇ, ಯಾವಾಗ ನಾನು ನಿಮ್ಮ ಸಮಾಧಿಗಳನ್ನು ತೆರೆದು ಹೊರಗೆ ಬರಮಾಡುವೆನೋ ಆಗ ನಾನೇ ಕರ್ತನೆಂದು ನೀವು ತಿಳಿದುಕೊಳ್ಳುವಿರಿ.
14. ನನ್ನ ಆತ್ಮ ವನ್ನು ನಿಮ್ಮೊಳಗೆ ಇಟ್ಟಾಗ ನೀವು ಬದುಕುವಿರಿ ಮತ್ತು ನಾನು ನಿಮ್ಮನ್ನು ನಿಮ್ಮ ಸ್ವಂತ ದೇಶದಲ್ಲಿರಿಸುವೆನು; ಆಮೇಲೆ ನಾನೇ ಕರ್ತನು ಮಾತನಾಡಿ ನಡೆಸಿದ್ದೇನೆಂ ದು ನೀವು ತಿಳಿಯುವಿರಿ ಎಂದು ಕರ್ತನು ಹೇಳುತ್ತಾನೆ.
15. ಕರ್ತನ ವಾಕ್ಯವು ನನಗೆ ತಿರುಗಿ ಬಂದು ಹೇಳಿದ್ದೇ ನಂದರೆ--
16. ಇದಾದ ಮೇಲೆ ಮನುಷ್ಯಪುತ್ರನೇ, ನೀನು ಒಂದು ಕೋಲನ್ನು ತೆಗೆದುಕೊಂಡು ಅದರ ಮೇಲೆ ಯೆಹೂದನ ಮತ್ತು ಅವನ ಜೊತೆಗಾರರಾದ ಇಸ್ರಾಯೇಲಿನ ಮಕ್ಕಳದು ಎಂದು ಬರೆದಿಡು. ಆಮೇಲೆ ಮತ್ತೊಂದು ಕೋಲನ್ನು ತೆಗೆದುಕೊಂಡು ಅದರ ಮೇಲೆ ಯೋಸೇಫನಿಗೂ ಎಫ್ರಾಯಾಮಿಗೂ ಅವನ ಜೊತೆ ಗಾರರಾದ ಇಸ್ರಾಯೇಲನ ಮನೆತನದವರೆಲ್ಲರಿಗೂ ಇರುವ ಕೋಲು ಎಂದು ಬರೆದಿಡು.
17. ಆ ಒಂದೊಂ ದನ್ನು ಒಂದೇ ಕೋಲಾಗುವ ಹಾಗೆ ಜೋಡಿಸು; ಅವು ಒಂದಾಗಿ ನಿನ್ನ ಕೈಸೇರುವವು.
18. ನಿನ್ನ ಜನರ ಮಕ್ಕಳು ಮಾತನಾಡಿ ಯಾವಾಗ ಹೇಳುವರೋ ಆಗ ಇವುಗಳು--ಇದು ನಿನಗೆ ಏನು, ಏನೆಂದು ನೀನು ತೋರಿಸುವದಿಲ್ಲವೇ ಅಂದಾಗ
19. ಇಗೋ, ದೇವ ರಾದ ಕರ್ತನು ಹೀಗೆ ಹೇಳುತ್ತಾನೆಂದು ಅವರಿಗೆ ಹೇಳು--ನಾನು ಎಫ್ರಾಯಾಮಿನ ಕೈಯಲ್ಲಿರುವ ಯೋಸೇಫನ ಕೋಲನ್ನೂ ಅವನ ಜೊತೆಗಾರರಾದ ಇಸ್ರಾಯೇಲ್ಯರ ಗೋತ್ರಗಳನ್ನೂ ತೆಗೆದುಕೊಂಡು ಅವನ ಸಂಗಡ ಅಂದರೆ ಯೆಹೂದನ ಕೋಲಿನ ಸಂಗಡ ಸೇರಿಸಿ ಅವುಗಳನ್ನು ಒಂದೇ ಕೋಲನ್ನಾಗಿ ಮಾಡುವೆನು. ಅವರು ನನ್ನ ಕೈಯಲ್ಲಿ ಒಂದಾಗುವರು ಎಂಬದು;
20. ನೀನು ಬರೆದ ಆ ಕೋಲುಗಳನ್ನು ಅವರ ಕಣ್ಣುಗಳ ಮುಂದೆ ನಿನ್ನ ಕೈಯಲ್ಲಿರುವವು.
21. ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಅವರಿಗೆ ಹೇಳು--ನಾನು ಇಸ್ರಾಯೇಲನ ಮಕ್ಕಳನ್ನು ಅವರು ಹೋಗಿರುವ ಕಡೆಯಿಂದಲೂ ಅವರನ್ನು ಒಂದುಗೂಡಿಸಿ ಅವರನ್ನು ಅವರ ಸ್ವಂತ ದೇಶಕ್ಕೆ ತರುವೆನು.
22. ನಾನು ಅವರನ್ನು ಇಸ್ರಾಯೇಲ್‌ ಪರ್ವತಗಳಿರುವ ದೇಶದಲ್ಲಿ ಒಂದೇ ಜನಾಂಗವನ್ನಾಗಿ ಮಾಡುತ್ತೇನೆ ಒಬ್ಬ ಅರಸನೇ ಅವರೆಲ್ಲ ರಿಗೂ ಅರಸನಾಗಿರುವನು; ಇನ್ನು ಮೇಲೆ ಅವರು ಎರಡು ಜನಾಂಗಗಳಾಗಲಿ ಅಥವಾ ರಾಜ್ಯಗಳಂತಾ ಗಲಿ ವಿಭಾಗಿಸಲ್ಪಡುವದಿಲ್ಲ.
23. ಇಲ್ಲವೆ ಅವರು ಇನ್ನು ತಮ್ಮ ವಿಗ್ರಹಗಳಿಂದಲೂ ಅಸಹ್ಯಗಳಿಂದಲೂ ಎಲ್ಲಾ ಅಕ್ರಮಗಳಿಂದಲೂ ಅಶುದ್ಧವಾಗುವದಿಲ್ಲ; ಆದರೆ ನಾನು ಅವರನ್ನು ಪಾಪಮಾಡಿದವರ ಎಲ್ಲಾ ನಿವಾಸಿ ಗಳಿಂದ ರಕ್ಷಿಸಿ, ಅವರನ್ನು ಶುದ್ಧಮಾಡುವೆನು; ಹೀಗೆ ಅವರು ನನ್ನ ಜನರಾಗಿರುವರು ನಾನು ಅವರಿಗೆ ದೇವರಾಗಿರುವೆನು.
24. ನನ್ನ ಸೇವಕನಾದ ದಾವೀದನು ಅವರ ಮೇಲೆ ಅರಸನಾಗಿರುವನು; ಅವರೆಲ್ಲರಿಗೂ ಒಬ್ಬನೇ ಕುರುಬನಿರುವನು ನನ್ನ ನ್ಯಾಯನಿಯಮ ಗಳನ್ನೇ ಅನುಸರಿಸುವಂತೆ ಮಾಡುವೆನು.
25. ನನ್ನ ಸೇವಕನಾದ ಯಾಕೋಬನಿಗೆ ನಾನು ಕೊಟ್ಟ ದೇಶದಲ್ಲಿ ನಿಮ್ಮ ತಂದೆಗಳು(ಪಿತೃಗಳು) ವಾಸಮಾಡಿದ ಆ ದೇಶದಲ್ಲಿಯೂ ಅವರೂ ಅವರ ಮಕ್ಕಳೂ ಮತ್ತು ಅವರ ಮಕ್ಕಳ ಮಕ್ಕಳೂ ಎಂದೆಂದಿಗೂ ಅಲ್ಲಿಯೇ ವಾಸಮಾಡುವರು; ನನ್ನ ಸೇವಕನಾದ ದಾವೀದನು ಎಂದೆಂದಿಗೂ ಅವರಿಗೆ ಪ್ರಧಾನನಾಗಿರುವನು.
26. ಇದಾದ ಮೇಲೆ ನಾನು ಅವರೊಂದಿಗೆ ಸಮಾ ಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಇದು ಅವರೊಂದಿಗೆ ನಿತ್ಯವಾದ ಒಡಂಬಡಿಕೆಯಾಗಿ ರುವದು; ನಾನು ಅವರನ್ನು ಆ ಸ್ಥಳದಲ್ಲಿರಿಸುವೆನು ಅವರನ್ನು ವೃದ್ಧಿಗೊಳಿಸುವೆನು; ನನ್ನ ಪರಿಶುದ್ಧ ಸ್ಥಳವನ್ನು ಎಂದೆಂದಿಗೂ ಅವರ ಮಧ್ಯದಲ್ಲಿಡುವೆನು.
27. ನನ್ನ ಗುಡಾರವು ಸಹ ಅವರೊಂದಿಗಿರುವದು; ಹೌದು, ನಾನು ಅವರ ದೇವರಾಗಿರುವೆನು ಮತ್ತು ಅವರು ನನ್ನ ಜನರಾಗಿರುವರು.
28. ನನ್ನ ಪರಿಶುದ್ಧ ಸ್ಥಳವು ಎಂದೆಂದಿಗೂ ಅವರ ಮಧ್ಯದೊಳಗಿರುವಾಗ, ಕರ್ತ ನಾದ ನಾನೇ ಇಸ್ರಾಯೇಲ್ಯರನ್ನು ಪರಿಶುದ್ಧ ಗೊಳಿಸಿದೆನೆಂದು ಅನ್ಯಜನರು ತಿಳಿದುಕೊಳ್ಳುವರು.

Chapter 38

1. ಕರ್ತನ ವಾಕ್ಯವು ಬಂದು ನನಗೆ ಹೇಳಿದ್ದೇನಂದರೆ--
2. ಮನುಷ್ಯಪುತ್ರನೇ, ಮೆಷೆಕ್‌ ಮತ್ತು ತೂಬಲಿನವರಿಗೆ ಮುಖ್ಯ ಪ್ರಭುಗಳಾ ಗಿರುವ ಮಾಗೋಗ್‌ ದೇಶದ ಗೋಗನಿಗೆ ನೀನು ಅಭಿಮುಖನಾಗಿ ಅವನಿಗೆ ವಿರುದ್ಧವಾಗಿ ಪ್ರವಾದಿಸು
3. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಮೆಷೆಕ್‌ ತೂಬಲಿಗೆ ಮುಖ್ಯ ಪ್ರಭುವಾದ ಗೋಗನೇ, ನಾನು ನಿನಗೆ ವಿರೋಧವಾಗಿದ್ದೇನೆ.
4. ನಾನು ನಿನ್ನನ್ನು ಹಿಂದಕ್ಕೆ ತಿರುಗಿಸಿ ನಿನ್ನ ದವಡೆಗಳಲ್ಲಿ ಕೊಕ್ಕೆಗಳನ್ನು ಹಾಕು ವೆನು; ನಾನು ನಿನ್ನನ್ನೂ ನಿನ್ನ ಎಲ್ಲಾ ಸೈನ್ಯವನ್ನೂ ಕುದುರೆಗಳನ್ನೂ ಕುದುರೆ ಸವಾರರನ್ನೂ ಮುಂದೆ ತರುವೆನು. ಇವರೆಲ್ಲರೂ ನಾನಾ ತರವಾದ ಆಯುಧ ಗಳನ್ನು ತೊಟ್ಟಿರುವರು, ಇವರೊಂದಿಗೆ ಖೇಡ್ಯವೂ ಮತ್ತು ಗುರಾಣಿಯೂ ಉಳ್ಳ ಮಹಾಸಮೂಹವನ್ನು ತರುವೆನು; ಇವರೆಲ್ಲರೂ ಕತ್ತಿಗಳನ್ನು ಹಿಡಿದಿರುವರು.
5. ಅವರೊಂದಿಗೆ ಪರ್ಷಿಯಾ ಇಥಿಯೋಪ್ಯ ಲಿಬಿಯಾ ಇವರೆಲ್ಲರೊಂದಿಗೆ ಗುರಾಣಿ ಮತ್ತು ಶಿರಸ್ತ್ರಾಣಗಳು ಇದ್ದವು.
6. ಗೋಮೆರ್‌ ಮತ್ತು ಅವನ ಎಲ್ಲಾ ದಳಗಳನ್ನು ಉತ್ತರ ದಿಕ್ಕಿನ ತೋಗರ್ಮನ ಮನೆತನದವರನ್ನೂ ಅವನ ಎಲ್ಲಾ ದಳಗಳನ್ನೂ ನಿನ್ನ ಸಂಗಡವಿರುವ ಅನೇಕ ಜನರನ್ನೂ ಹೊರಗೆ ತರುವೆನು.
7. ನೀನು ಸಿದ್ಧನಾಗಿ ನಿನ್ನ ಸಂಗಡ ಕೂಡಿ ಬಂದಿರುವ ನಿನ್ನ ಎಲ್ಲಾ ಕೂಟಗಳನ್ನು ಸಿದ್ಧಮಾಡಿಕೊಂಡು ನೀನು ಅವರಿಗೆ ಕಾವಲಿರು.
8. ಬಹಳ ದಿವಸಗಳಾದ ಮೇಲೆ ನಾನು ನಿನ್ನನ್ನು ಪರಿಶೀ ಲಿಸುತ್ತೇನೆ; ವರುಷಗಳ ಅಂತ್ಯದಲ್ಲಿ ನೀನು ಕತ್ತಿಯಿಂದ ಹಿಂತಿರುಗಿಸಲ್ಪಟ್ಟಂಥ ದೇಶಕ್ಕೂ ಯಾವಾಗಲೂ ಬೀಡಾ ಗಿದ್ದ ಇಸ್ರಾಯೇಲ್‌ ಪರ್ವತಗಳ ಮೇಲೆಯೂ ಜನಾಂಗಗಳೊಳಗಿಂದ ಮುಂದೆ ತರಲ್ಪಟ್ಟು ಎಲ್ಲರೂ ಭದ್ರವಾಗಿ ವಾಸಿಸುವವರ ಬಳಿಗೂ ಬರುವಿ.
9. ನೀನು ಮೇಲೇರಿ ಬಿರುಗಾಳಿಯಂತೆ ಬರುವಿ. ನೀನೂ ನಿನ್ನ ಎಲ್ಲಾ ದಂಡುಗಳೂ ಮತ್ತು ಅನೇಕ ಜನರ ಸಹಿತವಾಗಿ ಮೇಘದಂತೆ ದೇಶವನ್ನು ಮುಚ್ಚುವಿರಿ.
10. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇದೂ ಸಹ ಆಗುವದು, ಅದೇ ಸಮಯದಲ್ಲಿ ನಿನ್ನ ಮನಸ್ಸಿಗೆ ಕೆಲವು ಸಂಗತಿಗಳು ಬರುವವು ನೀನು ಒಂದು ಕೆಟ್ಟಯೋಚನೆಯನ್ನು ಯೋಚಿಸುವಿ,
11. ನೀನು ಪೌಳಿಗೋಡೆಯಿಲ್ಲದ ಹಳ್ಳಿಗಳುಳ್ಳ ದೇಶಕ್ಕೆ ನಾನು ಹೋಗುವೆನು; ಪೌಳಿ ಗೋಡೆಗಳಿಲ್ಲದೆ ಇಲ್ಲವೆ ಬಾಗಲುಗಳು ಅಗುಳಿಗಳು ಇಲ್ಲದೆ ಅದೂ ಅವರು ವಿಶ್ರಾಂತಿಯಿಂದಲೂ ಸುಖ ವಾಗಿ ವಾಸಿಸುತ್ತಿರುವಾಗ ನಾನು ಹೋಗಿ,
12. ಸುಲಿಗೆ ಯನ್ನು ಕೊಳ್ಳೆಯನ್ನು ತೆಗೆದುಕೊಳ್ಳುವೆನು; ಹೀಗೆ ನಿವಾಸಗಳಿದ್ದು ಬೀಡಾಗಿದ್ದ ಸ್ಥಳಗಳಲ್ಲಿಯೂ ಜನಾಂಗ ಗಳಿಂದ ಕೂಡಿಸಲ್ಪಟ್ಟಂತಹ ದನಗಳೂ ಸಂಪತ್ತೂ ಉಳ್ಳಂಥ ಮತ್ತು ಭೂಮಿಯ ಮಧ್ಯದಲ್ಲಿ ವಾಸಮಾಡು ವಂಥ ಜನರ ಮೇಲೆಯೂ ಕೈಹಾಕವೆನು ಎಂದು ಹೇಳುವಿ.
13. ಶೇಬಾ, ದೇದಾನ್‌ ಮತ್ತು ತಾರ್ಷೀಷಿನ ವರ್ತಕರು, ಎಲ್ಲಾ ಪ್ರಾಯದ ಸಿಂಹಗಳೊಂದಿಗೆ ಅಲ್ಲಿ ನಿನಗೆ--ನೀನು ಸುಲಿಗೆ ತೆಗೆದುಕೊಳ್ಳಬೇಕೆಂದು ಬಂದಿಯಾ ಕೊಳ್ಳೆಹೊಡೆಯುವದಕ್ಕಾಗಿಯೇ ನಿನ್ನ ತಂಡ ವನ್ನು ಕೂಡಿಸಿದೆಯೋ? ಬಂಗಾರ ಮತ್ತು ಬೆಳ್ಳಿಯನ್ನು ಹೊತ್ತುಕೊಂಡು ದನಗಳನ್ನು ಸಂಪತ್ತನ್ನೂ ತೆಗೆದು ಕೊಂಡು ಮಹಾಸುಲಿಗೆ ತೆಗೆದುಕೊಳ್ಳಬೇಕೆಂದೋ ಅನ್ನುವರು.
14. ಆದದರಿಂದ ಮನುಷ್ಯಪುತ್ರನೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಗೋಗನಿಗೆ ಪ್ರವಾ ದಿಸು ಮತ್ತು ಹೇಳು--ಯಾವಾಗ ನನ್ನ ಜನರಾದ ಇಸ್ರಾಯೇಲ್ಯರು ಸುಖವಾಗಿ ವಾಸಿಸುವರೋ ಆ ದಿನದಲ್ಲಿ ಅದು ನಿನಗೆ ತಿಳಿಯುವುದಿಲ್ಲವೋ
15. ನೀನು ಉತ್ತರ ಭಾಗಗಳ ನಿನ್ನ ಸ್ಥಳದಿಂದ ಬರುವಿ; ನೀನೂ ನಿನ್ನ ಸಂಗಡ ಅನೇಕ ಜನರೂ ಕುದುರೆಗಳನ್ನು ಹತ್ತಿದ ವರಾಗಿ ಬಲವಾದ ಸೈನ್ಯವಾಗಿಯೂ ಮಹಾದಂಡಾ ಗಿಯೂ ಬರುವಿರಿ.
16. ನೀನು ದೇಶವನ್ನು ಮುಚ್ಚುವ ಮೇಘದಂತೆ ನನ್ನ ಜನರಾಗಿರುವ ಇಸ್ರಾಯೇಲ್ಯರಿಗೆ ವಿರೋಧವಾಗಿ ಅವರ ಮೇಲೆ ಬರುವಿ; ಇದು ನಡೆ ಯುವ ಕೊನೆಯ ದಿವಸಗಳಲ್ಲಿ ಓ ಗೋಗನೇ, ನಾನು ಅವರ ಕಣ್ಣುಗಳ ಮುಂದೆ ನಿನ್ನಲ್ಲಿ ಪರಿಶುದ್ಧನಾಗುವಾಗ, ಅನ್ಯಜನಾಂಗಗಳು ನನ್ನನ್ನು ತಿಳಿಯುವ ಹಾಗೆ ನಿನ್ನನ್ನು ನನ್ನ ದೇಶಕ್ಕೆ ಬರಮಾಡುವೆನು.
17. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಯಾವನ ವಿಷಯವಾಗಿ ನನ್ನ ಸೇವಕರಾದ ಇಸ್ರಾಯೇಲಿನ ಪ್ರವಾದಿಗಳಿಂದ ಪೂರ್ವಕಾಲದಲ್ಲಿ ಮಾತನಾಡಿದೆನೋ ಅವನು ನೀನೇ ಅಲ್ಲವೇ? ನಿನ್ನನ್ನು ಅವರಿಗೆ ವಿರೋಧವಾಗಿ ಬರ ಮಾಡುತ್ತೇನೆಂದು ಆ ದಿನಗಳಲ್ಲಿ ಅನೇಕ ವರ್ಷಗ ಳಿಗೆ ಮುಂಚೆ ಪ್ರವಾದಿಸಿದರಲ್ಲವೇ?
18. ಆ ದಿನದಲ್ಲಿ ಗೋಗನು ಇಸ್ರಾಯೇಲ್‌ ದೇಶಕ್ಕೆ ವಿರೋಧವಾಗಿ ಬರುವಾಗ ರೋಷವು ನನ್ನ ಮುಖದ ಮೇಲೆ ಬರುವದೆಂದು ದೇವರಾದ ಕರ್ತನು ಹೇಳುತ್ತಾನೆ.
19. ನನ್ನ ಈ ರೋಷದಲ್ಲಿ ಮತ್ತು ನನ್ನ ಕೋಪದ ಬೆಂಕಿಯಲ್ಲಿ ನಾನು ಮಾತನಾಡುತ್ತೇನೆ. ನಿಶ್ಚಯವಾಗಿ ಆ ದಿನ ಇಸ್ರಾಯೇಲ್‌ ದೇಶದಲ್ಲಿ ಮಹಾಕಂಪನ ಉಂಟಾಗು ವದು;
20. ಆಗ ಸಮುದ್ರದ ವಿಾನುಗಳು ಆಕಾಶದ ಪಕ್ಷಿಗಳು ಬಯಲಿನ ಮೃಗಗಳು ಮತ್ತು ಭೂಮಿಯ ಮೇಲೆ ಹರಿದಾಡುವ ಎಲ್ಲಾ ಜಂತುಗಳು, ಭೂಮಿಯ ಎಲ್ಲಾ ಮನುಷ್ಯರ ಸಂಗಡ ನನ್ನ ಸಮ್ಮುಖದಲ್ಲಿ ನಡುಗುವವು; ಪರ್ವತಗಳು ಕೆಡವಲ್ಪಡುವವು, ಇಳಿ ಜಾರುಗಳು ಬೀಳುವವು, ಪ್ರತಿಯೊಂದು ಗೋಡೆಯೂ ನೆಲಕ್ಕೆ ಉರುಳುವವು.
21. ನನ್ನ ಎಲ್ಲಾ ಪರ್ವತಗಳಲ್ಲೂ ನಾನು ಅವನಿಗೆ ವಿರುದ್ಧವಾಗಿ ಕತ್ತಿಯನ್ನು ಕರೆಯುವೆ ನೆಂದೂ ದೇವರಾದ ಕರ್ತನು ಹೇಳುತ್ತಾನೆ; ಪ್ರತಿ ಯೊಬ್ಬ ಮನುಷ್ಯನ ಕತ್ತಿಯೂ ಅವನ ಸಹೋದರನಿಗೆ ವಿರೋಧವಾಗಿರುವದು.
22. ನಾನು ಅವನಿಗೆ ವಿರುದ್ಧ ವಾಗಿ ವ್ಯಾಧಿಯಿಂದಲೂ ರಕ್ತದಿಂದಲೂ ವಾದಿಸು ತ್ತೇನೆ. ನಾನು ಅವನ ಮೇಲೆ ಅವನ ದಂಡುಗಳ ಮೇಲೆ ಮಳೆಯನ್ನು ಸುರಿಸುವೆನು. ಅವನೊಂದಿಗಿರುವ ಅನೇಕ ಜನರ ಮೇಲೆ ಬೆಂಕಿಯನ್ನೂ ಗಂಧಕವನ್ನೂ ನುಣುಪಾದ ಕಲ್ಲುಗಳಿಂದ ತುಂಬಿ ಹರಿಯುವಂತಹ ಮಹಾ ಮಳೆಯನ್ನು ಸುರಿಸುವೆನು.
23. ಹೀಗೆ ನನ್ನೊಂದಿಗೆ ನಾನೇ ಹೆಚ್ಚಿಸಿಕೊಂಡು ಮತ್ತು ನನಗೆ ನಾನೇ ಪರಿಶುದ್ಧಪಡಿಸಿಕೊಂಡು ಅನೇಕ ಜನಾಂಗಗಳ ಕಣ್ಣುಗಳ ಮುಂದೆ ನಾನು ತಿಳಿಯಪಡಿಸಿಕೊಳ್ಳುತ್ತೇನೆ. ಅವರು ನಾನೇ ಕರ್ತನೆಂದು ತಿಳಿದುಕೊಳ್ಳುವರು.

Chapter 39

1. ಆದದರಿಂದ, ಮನುಷ್ಯಪುತ್ರನೇ, ನೀನು, ಗೋಗನಿಗೆ ವಿರುದ್ಧವಾಗಿ ಪ್ರವಾದಿಸಿ, ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು ಹೇಳು --ಇಗೋ, ಮೇಷಕ್‌ ಮತ್ತು ತೂಬಲಿಗೆ ಮುಖ್ಯ ಪ್ರಭುವಾದ ಓ ಗೋಗನೇ, ನಾನು ನಿನಗೆ ವಿರೋಧ ವಾಗಿದ್ದೇನೆ;
2. ನಾನು ನಿನ್ನನ್ನು ಹಿಂದಕ್ಕೆ ತಿರುಗಿಸಿ, ನಿನ್ನನ್ನು ಆರನೆಯ ಭಾಗವನ್ನಾಗಿ ಮಾಡಿಬಿಡುವೆನು; ಉತ್ತರದ ಭಾಗಗಳಿಂದ ಬರುವಂತೆ ಮಾಡುವೆನು ಮತ್ತು ನಿನ್ನನ್ನು ಇಸ್ರಾಯೇಲ್ಯರ ಪರ್ವತಗಳ ಮೇಲೆ ತರುವೆನು;
3. ನಾನು ನಿನ್ನ ಎಡಗೈಯಲ್ಲಿರುವ ಬಿಲ್ಲನ್ನು ಹೊಡೆಯುವೆನು ನಿನ್ನ ಬಲಗೈಯಲ್ಲಿರುವ ಬಾಣಗಳು ಉದುರಿ ಬೀಳುವಂತೆ ಮಾಡುವೆನು.
4. ನೀನೂ ನಿನ್ನ ಎಲ್ಲಾ ದಳಗಳೂ ನಿನ್ನೊಂದಿಗಿರುವ ನಿನ್ನ ಜನರೂ ಇಸ್ರಾಯೇಲಿನ ಪರ್ವತಗಳ ಮೇಲೆ ಬೀಳುವಿರಿ; ಎಲ್ಲಾ ತರಹದ ಮಾಂಸ ತಿನ್ನುವ ಪಕ್ಷಿಗಳಿಗೂ ಬಯಲಿನ ಮೃಗಗಳಿಗೂ ತಿನ್ನುವಂತೆ ನಾನು ನಿನ್ನನ್ನು ಕೊಡುವೆನು.
5. ನೀನು ತೆರೆದ ಬಯಲಿನ ಮೇಲೆ ಬೀಳುವಿ; ನಾನೇ ಇದನ್ನು ಹೇಳಿರುವೆನು ಎಂದು ದೇವರಾದ ಕರ್ತನು ಹೇಳುತ್ತಾನೆ.
6. ನಾನು ಮಾಗೋಗ್‌ ಮತ್ತು ಅವ ರೊಂದಿಗೆ ದ್ವೀಪಗಳಲ್ಲಿ ನಿರ್ಲಕ್ಷ್ಯವಾಗಿ ವಾಸಿಸುವವರ ಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ; ಅವರು ನಾನೇ ಕರ್ತನೆಂದು ತಿಳಿಯುವರು.
7. ಹೀಗೆ ನನ್ನ ಜನರಾದ ಇಸ್ರಾಯೇಲಿನ ಮಧ್ಯದಲ್ಲಿ ನಾನು ನನ್ನ ಪರಿಶುದ್ಧವಾದ ಹೆಸರನ್ನು ವ್ಯಕ್ತಪಡಿಸುತ್ತೇನೆ; ಅವರು ಇನ್ನೆಂದಿಗೂ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರವಾಗದ ಹಾಗೆ ನಾನು ಮಾಡುತ್ತೇನೆ. ಅನ್ಯಜನರು ಇಸ್ರಾಯೇಲ್ಯರಲ್ಲಿ ಒಬ್ಬ ಪರಿಶುದ್ಧನಾದ ಕರ್ತನು ನಾನೇ ಎಂದು ತಿಳಿಯುವರು.
8. ಇಗೋ, ಇದು ಬಂತು, ಮತ್ತು ಇದು ನೆರವೇರಿತು; ನಾನು ಮುಂತಿಳಿಸಿದ ದಿನವು ಇದೇ ಎಂದು ದೇವರಾದ ಕರ್ತನು ಹೇಳುತ್ತಾನೆ;
9. ಆ ಇಸ್ರಾಯೇಲಿನ ಪಟ್ಟಣಗಳ ನಿವಾಸಿಗಳು ಹೋಗಿ, ಆಯುಧಗಳಾದ ಗುರಾಣಿ ಗಳನ್ನು ಖೇಡ್ಯಗಳನ್ನೂ ಬಿಲ್ಲುಗಳನ್ನೂ ಬಾಣಗಳನ್ನೂ ಕೈದೊಣ್ಣೆಗಳನ್ನೂ ಭಲ್ಲೆಗಳನ್ನೂ ಬೆಂಕಿಹಚ್ಚಿ ಸುಡುವರು; ಅವರು ಅವುಗಳನ್ನು ಏಳು ವರ್ಷಗಳು ಬೆಂಕಿಯಿಂದ ಸುಡುವರು.
10. ಅದಕ್ಕಾಗಿ ಅವರು ಬಯಲಿನಿಂದ ಮರ ಗಳನ್ನಾಗಲಿ ತೆಗೆದುಕೊಳ್ಳುವುದಿಲ್ಲ, ಅಥವಾ ಅರಣ್ಯ ದಲ್ಲಿ ಯಾವುದನ್ನೂ ಕತ್ತರಿಸಿಕೊಳ್ಳುವದೂ ಇಲ್ಲ; ಅವರು ಆಯುಧಗಳನ್ನು ಬೆಂಕಿಯಿಂದಲೇ ಸುಡುವರು; ಅವರು ಸೂರೆಯಾದವುಗಳನ್ನು ಸೂರೆಮಾಡುವರು ಮತ್ತು ಕೊಳ್ಳೆಹೊಡೆದವರನ್ನು ತಾವು ಕೊಳ್ಳೆಹೊಡೆ ಯುವರು ಎಂದು ದೇವರಾದ ಕರ್ತನು ಹೇಳುತ್ತಾನೆ.
11. ಆ ದಿನದಲ್ಲಿ ಆಗುವದೇನಂದರೆ -- ನಾನು ಗೋಗನಿಗೆ ಇಸ್ರಾಯೇಲಿನ ಸಮಾಧಿಗಳಲ್ಲಿ ಸ್ಥಳವನ್ನು ಕೊಡುತ್ತೇನೆ; ಯಾವದಂದರೆ ಸಮುದ್ರದ ಪೂರ್ವದಲ್ಲಿ ರುವ ಪ್ರಯಾಣಿಕರು ಹಾದುಹೋಗುವ ಕಣಿವೆಯೇ; ಆಗ ಅದು ಹಾದುಹೋಗುವವರನ್ನು ನಿಲ್ಲಿಸುವದು; ಅಲ್ಲಿ ಗೋಗನನ್ನೂ ಅವನ ಎಲ್ಲಾ ದಳವನ್ನೂ ಸಮಾಧಿ ಮಾಡುವರು; ಆ ಕಣಿವೆಯನ್ನು ಹಮೋನ ಗೋಗ್‌ ಎಂದು ಕರೆಯುವರು.
12. ಇಸ್ರಾಯೇಲನ ಮನೆತನ ದವರು ದೇಶವನ್ನು ಶುದ್ಧಮಾಡುವ ಹಾಗೆ ಅವರನ್ನು ಏಳು ತಿಂಗಳುಗಳ ವರೆಗೂ ಸಮಾಧಿಮಾಡುವರು.
13. ಹೌದು ದೇಶದ ಎಲ್ಲಾ ಜನರು ಅವರನ್ನು ಹೂಣಿಡುವರು; ನಾನು ಮಹಿಮೆಯನ್ನು ಹೊಂದುವ ದಿನದಲ್ಲಿ ಅದರ ಪ್ರಖ್ಯಾತಿ ಅವರಿಗಾಗುವದು ಎಂದು ದೇವರಾದ ಕರ್ತನು ಹೇಳುತ್ತಾನೆ.
14. ದೇಶವನ್ನು ಶುದ್ಧೀಕರಿಸುವ ಹಾಗೆ ಅದರ ಮೇಲೆ ಮಿಕ್ಕವರನ್ನು ಹಾದುಹೋಗುವವರ ಸಹಾಯದಿಂದ ಹೂಣಿಡುವ ದಕ್ಕೆ ಯಾವಾಗಲೂ ದೇಶವನ್ನು ಹಾದುಹೋಗುವ ಮನುಷ್ಯರನ್ನೇ ನೇಮಿಸುವರು ಮತ್ತು ಇವರು ಏಳು ತಿಂಗಳುಗಳಾದ ಮೇಲೆ ಹುಡುಕುವರು.
15. ಪ್ರಯಾಣಿ ಕರು ಆ ದೇಶದಲ್ಲಿ ಹಾದುಹೋದ ಮೇಲೆ ಹೂಣಿಡು ವರು. ಹಮೋನ ಗೋಗನ ಕಣಿವೆಯಲ್ಲಿ ಹೂಣಿ ಡುವ ತನಕ ಆ ದೇಶದಲ್ಲಿ ಹಾದುಹೋಗುವವರು ಯಾವದಾದರೊಂದು ಮನುಷ್ಯನ ಎಲುಬನ್ನು ನೋಡಿ ದಾಗ ಅದಕ್ಕೆ ಗುರುತು ಹಾಕುವರು.
16. ಹೀಗೆ ಅವರು ಶುದ್ಧೀಕರಿಸಿದ ಆ ನಗರದ ಹೆಸರು ಹಮೋನ.
17. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಮನುಷ್ಯಪುತ್ರನೇ, ನೀನು ಪ್ರತಿಯೊಂದು ರೀತಿಯ ಪಕ್ಷಿಗಳಿಗೂ ಮತ್ತು ಬಯಲಿನ ಪ್ರತಿಯೊಂದು ಪ್ರಾಣಿ ಗಳಿಗೂ ಮಾತನಾಡಿ--ಒಟ್ಟಾಗಿ ಬನ್ನಿರಿ. ನಾನು ನಿಮ ಗಾಗಿ ಅರ್ಪಿಸುವ ನನ್ನ ಯಜ್ಞಕ್ಕೋಸ್ಕರ ಪ್ರತಿಯೊಂದು ಕಡೆಯಿಂದಲೂ ಸೇರಿರಿ; ಇದು ಇಸ್ರಾಯೇಲ್‌ ಪರ್ವತಗಳ ಮೇಲೆ ನಡೆಯುವ ಮಹಾಯಜ್ಞವಾಗಿದೆ. ನೀವು ಮಾಂಸವನ್ನು ತಿಂದು ರಕ್ತವನ್ನು ಕುಡಿಯ ಬಹುದು.
18. ನೀವು ಶೂರರ ಮಾಂಸವನ್ನು ತಿನ್ನುವಿರಿ ಮತ್ತು ಭೂಮಿಯ ಪ್ರಭುಗಳ ಟಗರು ಕುರಿಮರಿ ಹೋತ ಮತ್ತು ಹೋರಿಗಳ ಬಾಷಾನಿನ ಕೊಬ್ಬಿದ ಪಶು ಇವೆಲ್ಲವುಗಳ ರಕ್ತವನ್ನು ಕುಡಿಯುವಿರಿ.
19. ನಾನು ನಿಮಗೋಸ್ಕರ ಅರ್ಪಿಸಿದ ನನ್ನ ಯಜ್ಞದಲ್ಲಿ ನಿಮಗೆ ತೃಪ್ತಿಯಾಗುವ ವರೆಗೂ ಕೊಬ್ಬನ್ನು ತಿಂದು ಮತ್ತೇರುವ ವರೆಗೂ ರಕ್ತವನ್ನು ಕುಡಿಯಬಹುದು.
20. ಹೀಗೆ ನೀವು ನನ್ನ ಮೇಜಿನಲ್ಲಿ ಕುದುರೆಗಳಿಂದಲೂ ರಥಗಳಿಂದಲೂ ಶೂರರಿಂದಲೂ ಯುದ್ಧದ ಎಲ್ಲಾ ಮನುಷ್ಯರಿಂದಲೂ ತುಂಬುವಿರಿ ಎಂದು ದೇವರಾದ ಕರ್ತನು ಹೇಳುತ್ತಾನೆ.
21. ನಾನು ನನ್ನ ಮಹಿಮೆಯನ್ನು ಅನ್ಯಜನಾಂಗಗಳಲ್ಲಿ ಸ್ಥಾಪಿಸುತ್ತೇನೆ; ಎಲ್ಲಾ ಅನ್ಯಜನಾಂಗಗಳು ನಾನು ನಡೆಸಿದ ನನ್ನ ನ್ಯಾಯತೀರ್ಪನ್ನು ಮತ್ತು ಅವರ ಮೇಲೆ ಇರಿಸಿದ ನನ್ನ ಕೈಯನ್ನು ನೋಡುವವು.
22. ಹೀಗೆ ಇಸ್ರಾಯೇಲನ ಮನೆತನದವರು ಕರ್ತನಾದ ನಾನೇ ಅಂದಿನಿಂದಲೂ ಇನ್ನು ಮುಂದೆಯೂ ಅವರ ದೇವ ರಾಗಿರುವೆನೆಂದು ತಿಳಿಯುವರು.
23. ಇಸ್ರಾಯೇಲನ ಮನೆತನದವರು ತಮ್ಮ ಅಕ್ರಮಗಳ ನಿಮಿತ್ತವಾಗಿ ಸೆರೆಗೆ ಹೋದರೆಂದು ಅನ್ಯಜನಾಂಗಗಳು ತಿಳಿಯುವವು; ಅವರು ನನಗೆ ವಿರೋಧವಾಗಿ ದ್ರೋಹ ಮಾಡಿದ್ದರಿಂದ ನಾನು ಅವರಿಗೆ ನನ್ನ ಮುಖವನ್ನು ಮರೆಮಾಡಿಕೊಂಡು ಅವರನ್ನು ಅವರ ವೈರಿಗಳ ಕೈಗೆ ಒಪ್ಪಿಸಿದೆನು. ಹೀಗೆ ಅವರೆಲ್ಲರೂ ಕತ್ತಿಯಿಂದ ಹತರಾದರು.
24. ಅವರ ಅಶುದ್ಧತ್ವದ ಪ್ರಕಾರವೂ ಅಕ್ರಮಗಳ ಪ್ರಕಾರವೂ ನಾನು ಅವರನ್ನು ದಂಡಿಸಿ, ನನ್ನ ಮುಖವನ್ನು ಅವರಿಂದ ಮರೆಮಾಡಿದ್ದೇನೆ.
25. ಆದದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಈಗ ನಾನು ಯಾಕೋಬಿನ ಸೆರೆಯನ್ನು ತಿರಿಗಿ ತರುತ್ತೇನೆ, ಸಂಪೂರ್ಣ ಇಸ್ರಾಯೇಲಿನ ಮನೆತನದ ವರ ಮೇಲೆ ಕರುಣೆಯಿಡುತ್ತೆನೆ; ನನ್ನ ಪರಿಶುದ್ಧ ಹೆಸರಿಗಾಗಿ ಸ್ವಗೌರವುಳ್ಳವನಾಗಿರುವೆನು.
26. ಅವರು ಹೆದರಿಸುವವರಿಲ್ಲದೆ ಕ್ಷೇಮವಾಗಿ ತಮ್ಮ ದೇಶದಲ್ಲಿ ವಾಸಮಾಡಿದಾಗ ಉಂಟಾದ ತಮ್ಮ ನಾಚಿಕೆಯನ್ನೂ ನನಗೆ ವಿರೋಧವಾಗಿ ಅತಿಕ್ರಮಿಸಿದ ಎಲ್ಲಾ ಅತಿಕ್ರಮ ಗಳನ್ನು ಹೊತ್ತ ತರುವಾಯ,
27. ನಾನು ಅವರನ್ನು ಜನಗಳೊಳಗಿಂದ ಮತ್ತೆ ತಂದ ಮೇಲೆ ಅವರ ಶತ್ರುಗಳ ದೇಶದೊಳಗಿಂದ ಅವರನ್ನು ಕೂಡಿಸಿ ಅನೇಕ ಜನಾಂಗ ಗಳ ಮುಂದೆ ಅವರಲ್ಲಿ ಪರಿಶುದ್ಧನಾಗುವೆನು;
28. ಆಮೇಲೆ ಅವರನ್ನು ಅನ್ಯಜನಾಂಗಗಳೊಳಗಿಂದ ಸೆರೆಗೈದವನೂ ಇನ್ನು ಮೇಲೆ ಅವರಲ್ಲಿ ಒಬ್ಬನನ್ನಾದರೂ ಉಳಿಸದೆ ದೇಶಕ್ಕೆ ಕೂಡಿಸಿದವನು ನಾನೇ ಅವರ ದೇವರಾದ ಕರ್ತನೆಂದು ಅವರು ತಿಳಿಯುವರು.
29. ಇಲ್ಲವೇ ನಾನು ನನ್ನ ಮುಖವನ್ನು ಎಂದಿಗೂ ಮರೆಮಾಡುವದಿಲ್ಲ; ನಾನು ನನ್ನ ಆತ್ಮವನ್ನು ಇಸ್ರಾ ಯೇಲಿನ ಮನೆತನದವರ ಮೇಲೆ ಸುರಿದಿರುವೆನೆಂದು ದೇವರಾದ ಕರ್ತನು ಹೇಳುತ್ತಾನೆ.

Chapter 40

1. ನಮ್ಮ ಸೆರೆಯ ಇಪ್ಪತ್ತೈದನೆಯ ವರ್ಷದ ಆರಂಭದ ತಿಂಗಳಿನ ಹತ್ತನೇ ದಿನದಲ್ಲಿ ಪಟ್ಟಣವು ಒಡೆದು ಹಾಕಲ್ಪಟ್ಟ ಮೇಲೆ, ಹದಿನಾಲ್ಕನೇ ವರುಷದ ಅದೇ ದಿನದಲ್ಲಿ, ಕರ್ತನ ಕೈ ನನ್ನ ಮೇಲೆ ಇದ್ದು ನನ್ನನ್ನು ಅಲ್ಲಿಗೆ ಬರಮಾಡಿತು.
2. ದೇವರ ದರ್ಶನಗಳಲ್ಲಿ ಆತನು ನನ್ನನ್ನು ಇಸ್ರಾಯೇಲ್‌ ದೇಶಕ್ಕೆ ತಂದು ಅತಿ ಎತ್ತರವಾದ ಪರ್ವತಗಳ ಮೇಲೆ ನನ್ನನ್ನು ಇರಿಸಿದನು, ಅದರ ಮೇಲೆ ದಕ್ಷಿಣದ ಕಡೆಯಲ್ಲಿ ಪಟ್ಟಣವು ಕಟ್ಟಿರುವಂತಿತ್ತು.
3. ನನ್ನನ್ನು ಅಲ್ಲಿಗೆ ತಂದಾಗ ಇಗೋ, ಅಲ್ಲಿ ಹಿತ್ತಾಳೆಯಂತೆ ತೋರುವ ಒಬ್ಬ ಮನುಷ್ಯನು ಇದ್ದನು. ಅವನ ಕೈಯಲ್ಲಿ ನಾರಿನ ನೂಲು ಅಳತೆಯ ಕೋಲು ಇತ್ತು. ಅವನು ಬಾಗಿಲಲ್ಲೇ ನಿಂತಿ ದ್ದನು.
4. ಆ ಮನುಷ್ಯನು ನನಗೆ--ಮನುಷ್ಯ ಪುತ್ರನೇ, ನಿನ್ನ ಕಣ್ಣುಗಳಿಂದ ನೋಡಿ ನಿನ್ನ ಕಿವಿಗಳಿಂದ ಕೇಳು ನಾನು ನಿನಗೆ ತೋರಿಸುವ ಎಲ್ಲಾ ಸಂಗತಿಗಳಿಗೆ ನಿನ್ನ ಮನಸ್ಸಿಡು, ನಾನು ನಿನಗೆ ತೋರಿಸುವ ಹಾಗೆಯೇ ನೀನು ಇಲ್ಲಿಗೆ ತರಲ್ಪಟ್ಟಿರುವೆ. ನೀನು ನೋಡುವವು ಗಳನ್ನೆಲ್ಲಾ ಇಸ್ರಾಯೇಲ್ಯರ ಮನೆತನದವರಿಗೆ ತಿಳಿಸು ಅಂದನು.
5. ನೋಡು, ಮನೆಯ ಹೊರಗೆ ಸುತ್ತಮುತ್ತಲೂ ಇರುವ ಗೋಡೆ; ಆ ಮನುಷ್ಯನ ಕೈಯಲ್ಲಿ ಒಂದು ಹಿಡಿ ಉದ್ಧವಾದಂಥ ಆರುಮೊಳ ಉದ್ದ ಅಳತೆ ಕೋಲು ಇತ್ತು; ಹಾಗೆಯೇ ಅವನು ಆ ಕಟ್ಟಡದ ಅಗಲವನ್ನು ಅಳತೆ ಮಾಡಿದಾಗ ಅದರ ಎತ್ತರ ಅಗಲ ಒಂದೇ ಕೋಲಾಗಿತ್ತು.
6. ಆಮೇಲೆ ಅವನು ಮೂಡಣಕ್ಕೆ ಅಭಿಮುಖವಾಗಿರುವ ಬಾಗಲಿಗೆ ಬಂದು, ಅದರ ಮೆಟ್ಟಲುಗಳನ್ನು ಹತ್ತಿ ಆ ಬಾಗಲಿನ ಹೊಸ್ತಿಲನ್ನು ಅಳೆದನು, ಅದು ಒಂದೇ ಕೋಲಿನ ಅಗಲವಾಗಿತ್ತು, ಮತ್ತು ಒಂದೇ ಕೋಲು ಅಗಲವಾದ ಹೊಸ್ತಿಲಿನ ಬಾಗಲೂ ಅಲ್ಲಿ ಇತ್ತು.
7. ಪ್ರತಿಯೊಂದು ಚಿಕ್ಕ ಕೋಣೆಯು ಒಂದು ಕೋಲು ಉದ್ದವಾಗಿ ಒಂದು ಕೋಲು ಅಗಲವಾಗಿ ಇತ್ತು; ಕೊಠಡಿಗಳ ನಡುವೆ ಐದು ಮೊಳ ಒಳಬಾಗಲಿನ ಪಡಸಾಲೆಯ ಬಳಿಯಲ್ಲಿ ರುವ ಬಾಗಲಿನ ಹೊಸ್ತಿಲು ಒಂದು ಕೋಲಿನ ಅಳತೆ ಯಷ್ಟಿತ್ತು.
8. ಅವನು ಒಳಬಾಗಲಿನ ದ್ವಾರಾಂಗಣವನ್ನು ಒಂದು ಕೋಲೆಂದು ಅಳೆದನು.
9. ಆಮೇಲೆ ಬಾಗಲಿನ ದ್ವಾರಾಂಗಣವನ್ನು ಎಂಟು ಮೊಳವೆಂದೂ ಅದರ ಕಂಬಗಳನ್ನು ಎರಡು ಮೊಳವೆಂದೂ ಅಳೆದನು; ದ್ವಾರಾಂಗಣದ ಬಾಗಲು ಒಳಗಡೆ ಇತ್ತು.
10. ಮೂಡ ಣದ ಕಡೆಗಿರುವ ಬಾಗಲಿನ ಕೊಠಡಿಗಳು ಈ ಕಡೆ ಯಲ್ಲಿ ಮೂರು ಆ ಕಡೆಯಲ್ಲಿ ಮೂರು ಇದ್ದವು; ಆ ಮೂರಕ್ಕೂ ಒಂದೇ ಅಳತೆ ಇತ್ತು. ಈ ಕಡೆಯೂ ಆ ಕಡೆಯೂ ಕಂಬಗಳಿಗೂ ಸಹ ಒಂದೇ ಅಳತೆ ಇತ್ತು.
11. ಅವನು ಬಾಗಲಿನ ಪ್ರವೇಶದ ಅಗಲವು ಹತ್ತು ಮೊಳವೆಂದೂ ಬಾಗಲಿನ ಉದ್ದವು ಹದಿಮೂರು ಮೊಳವೆಂದೂ ಅಳೆದನು.
12. ಆ ಚಿಕ್ಕ ಕೊಠಡಿಗಳ ಮುಂದೆ ಇದ್ದ ಜಾಗವು ಸಹ ಆ ಕಡೆ ಈ ಕಡೆ ಒಂದೊಂದು ಮೊಳವಾಗಿತ್ತು; ಈ ಚಿಕ್ಕ ಕೊಠಡಿಗಳು ಆ ಕಡೆಗೂ ಈ ಕಡೆಗೂ ಆರಾರು ಮೊಳಗಳಾಗಿದ್ದವು.
13. ಆಗ ಅವನು ಬಾಗಲನ್ನು ಒಂದು ಕೊಠಡಿಯ ಮಾಳಿಗೆಯಿಂದ ಇನ್ನೊಂದು ಕೊಠಡಿಯ ಮಾಳಿಗೆಗೆ ಅಳೆದನು. ಆ ದ್ವಾರದಿಂದ ಈ ದ್ವಾರಕ್ಕೇರುವ ಅಗಲವು ಇಪ್ಪತ್ತೈದು ಮೊಳಗಳಾಗಿತ್ತು.
14. ಕಂಬಗಳನ್ನು ಸಹ ಅರವತ್ತು ಮೊಳಗಳ ಹಾಗೆ ಮಾಡಿದನು; ಅದು ಬಾಗಲಿನ ಸುತ್ತಮುತ್ತಲಿರುವ (ಅಂಗಳದ) ಕಂಬದ ವರೆಗೂ ಇತ್ತು.
15. ಪ್ರವೇಶದ ಬಾಗಲಿನ ಮುಂದುಗಡೆ ಯಿಂದ ಒಳ ಬಾಗಲಿನ ದ್ವಾರದ ಅಂಗಳದ ವರೆಗೂ ಐವತ್ತು ಮೊಳವಿತ್ತು.
16. ಚಿಕ್ಕ ಕೊಠಡಿಗಳಲ್ಲಿಯೂ ಬಾಗಲಿನ ಒಳಗಡೆ ಇರುವ ಅವುಗಳ ಕಂಬಗಳಲ್ಲಿಯೂ ಇಕ್ಕಟ್ಟಾದ ಕಿಟಕಿಗಳಿದ್ದವು; ಕೈಸಾಲೆಗಳಿಗೂ ಸಹ ಒಳಗಡೆ ಸುತ್ತಲೂ ಕಿಟಕಿಗಳಿದ್ದವು; ಒಂದೊಂದು ಕಂಬದ ಮೇಲೆ ಖರ್ಜೂರದ ಮರಗಳಿದ್ದವು.
17. ಆಗ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ತಂದನು; ಇಗೋ, ಕೊಠಡಿಗಳೂ ಕಲ್ಲು ಹಾಸಿದ ನೆಲವೂ ಅಂಗಳದ ಸುತ್ತಲೂ ಮಾಡಲ್ಪಟ್ಟಿದ್ದವು; ಕಲ್ಲು ಹಾಸಿದ ನೆಲದ ಬದಿಯಲ್ಲಿ ಮೂವತ್ತು ಕೊಠಡಿ ಗಳಿದ್ದವು.
18. ಬಾಗಲುಗಳ ಪಾರ್ಶ್ವದಲ್ಲಿ ಬಾಗಲುಗಳ ಉದ್ದಕ್ಕೆ ಸರಿಯಾಗಿ ಇದ್ದ ಆ ಕಲ್ಲು ಹಾಸಿದನೆಲವು ಕೆಳಗಿನ ನೆಲಗಟ್ಟಾಗಿತ್ತು.
19. ಆಗ ಅವನು ಕೆಳಗಿನ ಬಾಗಲಿನ ಮುಂದುಗಡೆಯಿಂದ ಒಳಗಿನ ಅಂಗಳದ ಹೊರಗಡೆಯ ವರೆಗೂ ಪೂರ್ವಕ್ಕೂ ಉತ್ತರಕ್ಕೂ ಇರುವ ಅಗಲವನ್ನು ನೂರು ಮೊಳವೆಂದು ಅಳೆದನು.
20. ಇದಲ್ಲದೆ ಉತ್ತರದ ಕಡೆಗೆ ಅಭಿಮುಖವಾದ ಹೊರ ಗಿನ ಬಾಗಲಿನ ಉದ್ದವನ್ನೂ ಅಗಲವನ್ನೂ ಅಳೆದನು.
21. ಅದರ ಚಿಕ್ಕ ಕೊಠಡಿಗಳು ಈ ಕಡೆಗೂ ಆ ಕಡೆಗೂ ಮೂರು ಮೂರು ಇದ್ದವು; ಅದರ ಕಂಬಗಳು ಕೈಸಾಲೆ ಗಳು ಮೊದಲನೇ ಭಾಗಲಿನ ಅಳತೆಯ ಹಾಗಿದ್ದವು; ಅದರ ಉದ್ದ ಐವತ್ತು ಮೊಳ ಅಗಲ ಇಪ್ಪತ್ತೈದು ಮೊಳ.
22. ಅದರ ಕಿಟಕಿಗಳೂ ಕೈಸಾಲೆಗಳೂ ಖರ್ಜೂ ರದ ಗಿಡಗಳೂ ಮೂಡಣ ಕಡೆಯ ಬಾಗಲಿನ ಕಡೆಗೆ ಅಭಿಮುಖವಾಗಿದ್ದವು; ಅವರು ಏಳು ಮೆಟ್ಟಲುಗಳನ್ನು ಏರಿದಾಗ, ಅದರ ಕೈಸಾಲೆಗಳು ಅದರ ಮುಂದಿದ್ದವು.
23. ಒಳಗಿನ ಅಂಗಳದ ಬಾಗಲು ಉತ್ತರ ಮತ್ತು ಪೂರ್ವಕ್ಕಿರುವ ಬಾಗಲಿಗೆ ಎದುರಾಗಿತ್ತು; ಅವನು ಬಾಗಲಿನಿಂದ ಬಾಗಲಿಗೆ ನೂರು ಮೊಳವೆಂದು ಅಳೆ ದನು.
24. ಆಮೇಲೆ ಅವನು ನನ್ನನ್ನು ದಕ್ಷಿಣದ ಕಡೆಗೆ ತಂದನು; ಇಗೋ, ದಕ್ಷಿಣದ ಕಡೆಗೆ ಬಾಗಲು ಇತ್ತು, ಅವನು ಅದರ ಕಂಬಗಳನ್ನು ಕೈಸಾಲೆಗಳನ್ನು ಈ ಅಳತೆಯ ಪ್ರಕಾರವೇ ಅಳೆದನು.
25. ಅದರಲ್ಲಿಯೂ ಅದರ ಕೈಸಾಲೆಗಳಲ್ಲಿಯೂ ಸುತ್ತಲೂ ಆ ಕಿಟಕಿಗಳ ಹಾಗೆಯೇ ಕಿಟಕಿಗಳೂ ಇದ್ದವು. ಉದ್ದವು ಐವತ್ತು ಮೊಳ ಅಗಲವು ಇಪ್ಪತ್ತೈದು ಮೊಳ;
26. ಅದಕ್ಕೆ ಏರುವ ಹಾಗೆ ಏಳು ಮೆಟ್ಟಲುಗಳು ಇದ್ದವು. ಅದರ ಕೈಸಾಲೆಗಳು ಅದರ ಮುಂದೆ ಇದ್ದವು; ಅದರ ಕಂಬಗಳ ಮೇಲೆ ಆ ಕಡೆಗೂ ಈ ಕಡೆಗೂ ಒಂದೊಂದು ಖರ್ಜೂರದ ಮರವಿತ್ತು.
27. ಒಳಗಿನ ಅಂಗಳದಲ್ಲಿ ದಕ್ಷಿಣದ ಕಡೆಗೆ ಬಾಗಲಿತ್ತು; ಅವನು ಒಂದು ಬಾಗಲಿನಿಂದ ಮತ್ತೊಂದು ಬಾಗಲಿಗೆ ದಕ್ಷಿಣವಾಗಿ ನೂರು ಮೊಳ ಅಳೆದನು.
28. ಆಮೇಲೆ ಅವನು ನನ್ನನ್ನು ದಕ್ಷಿಣ ಬಾಗಲಿನಿಂದ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಅವನು ಈ ಅಳತೆಗಳ ಪ್ರಕಾರ ದಕ್ಷಿಣದ ಬಾಗಲನ್ನು ಅಳೆದನು;
29. ಅಲ್ಲಿನ ಆ ಚಿಕ್ಕ ಕೊಠಡಿಗಳನ್ನೂ ಅದರ ಕಂಬ ಗಳನ್ನೂ ಕಮಾನುಗಳನ್ನೂ ಈ ಅಳತೆಯ ಪ್ರಕಾರ ಅಳೆದನು. ಅದರಲ್ಲಿಯೂ ಅದರ ಸುತ್ತಲಿರುವ ಕಮಾ ನುಗಳಲ್ಲಿಯೂ ಕಿಟಕಿಗಳಿದ್ದವು ಅದರ ಉದ್ದ ಐವತ್ತು ಮೊಳ, ಅಗಲ ಇಪ್ಪತ್ತೈದು ಮೊಳ;
30. ಸುತ್ತಲಿ ರುವ ಕಮಾನುಗಳು ಇಪ್ಪತ್ತೈದು ಮೊಳ ಉದ್ದವಾಗಿ ಐದು ಮೊಳ ಅಗಲವಾಗಿಯೂ ಇದ್ದವು.
31. ಅದರ ಕಮಾ ನುಗಳು ಹೊರಗಿನ ಅಂಗಳದ ಕಡೆಗಿದ್ದವು; ಅದರ ಕಂಬಗಳಲ್ಲಿ ಖರ್ಜೂರದ ಮರಗಳಿದ್ದವು. ಅದಕ್ಕೆ ಏರುವದಕ್ಕೆ ಎಂಟು ಮೆಟ್ಟಲುಗಳು ಇದ್ದವು.
32. ಅವನು ನನ್ನನ್ನು ಪೂರ್ವದ ಕಡೆಗಿರುವ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಈ ಅಳತೆಗಳ ಪ್ರಕಾರ ಬಾಗಲನ್ನು ಅಳೆದನು.
33. ಅಲ್ಲಿನ ಚಿಕ್ಕ ಕೊಠಡಿಗಳನ್ನೂ ಕಂಬಗಳನ್ನೂ ಕಮಾನುಗಳನ್ನೂ ಈ ಅಳತೆಗಳ ಪ್ರಕಾರವೇ ಅವನು ಅಳೆದನು; ಅದರಲ್ಲಿ ಸಹ ಸುತ್ತಲೂ ಇರುವ ಅದರ ಕಮಾನುಗಳಲ್ಲಿಯೂ ಕಿಟಕಿಗಳು ಇದ್ದವು. ಅದರ ಉದ್ದವು ಐವತ್ತು ಮೊಳ ಅಗಲವು ಇಪ್ಪತ್ತೈದು ಮೊಳ.
34. ಅದರ ಕಮಾನುಗಳು ಹೊರಗಿನ ಅಂಗಳದ ಕಡೆಗೆ ಇದ್ದವು; ಖರ್ಜೂರದ ಮರಗಳು ಆ ಕಡೆ ಈ ಕಡೆ ಅಲ್ಲಿನ ಕಂಬಗಳ ಮೇಲೆ ಇದ್ದವು; ಮೇಲೆ ಹೋಗುವದಕ್ಕೆ ಅದಕ್ಕೆ ಎಂಟು ಮೆಟ್ಟಲುಗಳು ಇದ್ದವು.
35. ಇದಲ್ಲದೆ ಅವನು ನನ್ನನ್ನು ಉತ್ತರದ ಬಾಗಲಿನ ಬಳಿಗೆ ಕರೆದುಕೊಂಡು ಹೋಗಿ ಈ ಅಳತೆಗಳ ಪ್ರಕಾರ ಅಳೆದನು;
36. ಅಲ್ಲಿನ ಚಿಕ್ಕ ಕೋಣೆಗಳು, ಕಂಬಗಳು ಕಮಾನುಗಳು ಮತ್ತು ಅದರ ಸುತ್ತಲೂ ಇರುವ ಕಿಟಕಿಗಳ ಉದ್ದವು ಐವತ್ತು ಮೊಳ, ಅಗಲವು ಇಪ್ಪತ್ತೈದು ಮೊಳ;
37. ಅದರ ಕಂಬಗಳು ಹೊರಗಿನ ಅಂಗಳದ ಕಡೆಗೆ ಇದ್ದವು; ಅದರ ಕಂಬಗಳ ಮೇಲೆ ಆ ಕಡೆಗೂ ಈ ಕಡೆಗೂ ಖರ್ಜೂರದ ಮರಗಳಿದ್ದವು; ಅದರ ಮೇಲೆ ಹೋಗುವ ಹಾಗೆ ಎಂಟು ಮೆಟ್ಟಲುಗಳು ಇದ್ದವು.
38. ಕೊಠಡಿಗಳೂ ಅವುಗಳ ಪ್ರವೇಶಗಳೂ ಬಾಗಲುಗಳ ಕಂಬಗಳ ಬಳಿಯಲ್ಲಿ, ದಹನ ಬಲಿಯನ್ನು ತೊಳೆ ಯುವಲ್ಲಿ ಇದ್ದವು;
39. ಬಾಗಲ ದ್ವಾರಾಂಗಣದಲ್ಲಿ ಎರಡು ಮೇಜುಗಳು ಆ ಕಡೆಗೆ ಇದ್ದವು. ದಹನಬಲಿ ಯನ್ನೂ ಪಾಪ ಬಲಿಯನ್ನೂ ಅಪರಾಧ ಬಲಿಯನ್ನೂ ವಧಿಸುವ ಹಾಗೆ ಅವು ಇದ್ದವು.
40. ಹೊರಗಡೆಯಲ್ಲಿ ಉತ್ತರದ ಬಾಗಲಿನ ಪ್ರವೇಶಕ್ಕೆ ಏರಿಹೋಗುವಲ್ಲಿ ಎರಡು ಮೇಜುಗಳೂ ಬಾಗಲಿನ ದ್ವಾರಾಂಗಣದ ಕಡೆಯಲ್ಲಿ ಎರಡು ಮೇಜುಗಳೂ ಇದ್ದವು.
41. ಬಾಗಲಿನ ಕೊನೆಯಲ್ಲಿ ಈ ಕಡೆ ನಾಲ್ಕು ಮೇಜುಗಳೂ ಆ ಕಡೆ ನಾಲ್ಕು ಮೇಜುಗಳೂ ಈ ರೀತಿ ಎಂಟು ಮೇಜುಗಳಿದ್ದವು; ಇವುಗಳ ಮೇಲೆ ಅವರು ಯಜ್ಞ ಗಳನ್ನು ಅರ್ಪಿಸುತ್ತಿದ್ದರು.
42. ದಹನಬಲಿಗಾಗಿ ಇದ್ದ ಆ ನಾಲ್ಕು ಮೇಜುಗಳು ಕೆತ್ತಿದ ಕಲ್ಲುಗಳಿಂದ ಮಾಡಲ್ಪಟ್ಟಿದ್ದವು; ಅವುಗಳ ಉದ್ದ ಅಗಲ ಒಂದುವರೆ ಮೊಳ, ಎತ್ತರ ಒಂದುವರೆ ಮೊಳ, ಇವುಗಳ ಮೇಲೆ ಅವರು ದಹನಬಲಿಯನ್ನೂ ಅರ್ಪಣೆಯನ್ನೂ ವಧಿ ಸುವ ಸಾಮಾನುಗಳನ್ನೂ ಇಟ್ಟರು.
43. ಒಳಗೆ ಸುತ್ತಲಾಗಿ ಕೈ ಅಗಲದಷ್ಟು ಕೊಂಡಿಗಳು ಜಡಿಯಲ್ಪಟ್ಟಿದ್ದವು. ಮೇಜುಗಳ ಮೇಲೆ ಅರ್ಪಣೆಯ ಮಾಂಸವಿತ್ತು.
44. ಒಳಗಿನ ಬಾಗಲಿನ ಹೊರಗೆ ಒಳಗಿನ ಅಂಗಳದಲ್ಲಿ ಹಾಡುವವರ ಕೊಠಡಿಗಳು ಇದ್ದವು; ಒಂದು ಉತ್ತರದ ಬಾಗಲಿನ ಕಡೆಗೆ ದಕ್ಷಿಣಕ್ಕೆ ಅಭಿಮುಖವಾಗಿತ್ತು; ಮತ್ತೊಂದು ಪೂರ್ವದ ಬಾಗಲಿನ ಕಡೆಗೆ ಉತ್ತರಕ್ಕೆ ಅಭಿಮುಖ ವಾಗಿತ್ತು.
45. ಅವನು ನನಗೆ ಹೇಳಿದ್ದೇ ನಂದರೆ--ದಕ್ಷಿಣಕ್ಕೆ ಅಭಿಮುಖವಾಗಿರುವ ಈ ಕೊಠಡಿ ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಯಾಜಕರದು.
46. ಉತ್ತರಕ್ಕೆ ಅಭಿಮುಖವಾಗಿರುವ ಕೊಠಡಿ ಯಜ್ಞವೇದಿಯ ಮೇಲ್ವಿಚಾರಕರಾದ ಯಾಜಕ ರದು. ಚಾದೋಕನ ಕುಮಾರರಾದ ಇವರು ಲೇವಿಯ ಕುಮಾರ ರಲ್ಲಿ ಕರ್ತನ ಸನ್ನಿಧಿಯ ಸೇವಕರಾಗಿದ್ದಾರೆ.
47. ಹೀಗೆ ಅವನು ಅಂಗಳವನ್ನು ಅಳೆದನು, ಅದರ ಉದ್ದ ನೂರು ಮೊಳ, ಅಗಲ ನೂರು ಮೊಳ, ಅದು ಚಚ್ಚೌಕವಾಗಿತ್ತು; ಆ ಯಜ್ಞವೇದಿಯು ಮನೆಯ ಮುಂದೆ ಇತ್ತು.
48. ಅವನು ನನ್ನನ್ನು ಮನೆಯ ದ್ವಾರಾಂಗಣಕ್ಕೆ ಕರೆದು ಕೊಂಡು ಹೋಗಿ ದ್ವಾರಾಂಗಣದ ಪ್ರತಿಯೊಂದು ಕಂಬವನ್ನು ಅಳೆದನು; ಆ ಕಡೆ ಈ ಕಡೆ ಐದುಮೊಳ ಮತ್ತು ಬಾಗಲಿನ ಅಗಲ ಆ ಕಡೆ ಮೂರುಮೊಳ, ಈ ಕಡೆ ಮೂರುಮೊಳ ಇತ್ತು.
49. ದ್ವಾರಾಂಗಣದ ಉದ್ದ ಇಪ್ಪತ್ತು ಮೊಳ ಅಗಲ ಹನ್ನೊಂದು ಮೊಳ ಮತ್ತು ಅವರು ಮೇಲಕ್ಕೆ ಹತ್ತುವ ಮೆಟ್ಟಲುಗಳಿಂದ ನನ್ನನ್ನು ಕರೆತಂದರು. ಪಡಸಾಲೆಯಲ್ಲಿ ಈ ಕಡೆ ಒಂದು, ಆ ಕಡೆ ಒಂದು; ಎರಡು ಸ್ತಂಭಗಳಿದ್ದವು.

Chapter 41

1. ಆಮೇಲೆ, ಅವನು ನನ್ನನು ದೇವಾಲಯಕ್ಕೆ ಕರೆತಂದು ಕಂಬಗಳನ್ನೂ ಒಂದು ಕಡೆಯಲ್ಲಿ ಆರು ಮೊಳ ಅಗಲವೆಂದೂ ಮತ್ತೊಂದು ಕಡೆ ಆರು ಮೊಳ ಅಗಲವೆಂದೂ ಅಳೆದನು. ಇದೇ ಆ ಗುಡಾರದ ಅಡ್ಡಗಲವಾಗಿತ್ತು.
2. ಬಾಗಲಿನ ಅಗಲವು ಹತ್ತು ಮೊಳ ಬಾಗಲಿನ ಪಾರ್ಶ್ವಗಳು ಒಂದು ಕಡೆಯಲ್ಲಿ ಐದು ಮೊಳ, ಇನ್ನೊಂದು ಕಡೆಯಲ್ಲಿ ಐದು ಮೊಳವೆಂದು ಅವನು ಅದರ ಉದ್ದವನ್ನು ನಲವತ್ತು ಮೊಳವೆಂದೂ ಅಗಲವನ್ನು ಇಪ್ಪತ್ತು ಮೊಳವೆಂದೂ ಅಳೆದನು.
3. ಆಮೇಲೆ ಅವನು ಒಳಗೆ ಹೋಗಿ ಬಾಗಿಲಿನ ಕಂಬವನ್ನು ಎರಡು ಮೊಳವೆಂದೂ ಬಾಗಿಲನ್ನು ಆರು ಮೊಳವೆಂದೂ ಬಾಗಿಲಿನ ಅಗಲ ಏಳು ಮೊಳವೆಂದೂ ಅಳೆದನು.
4. ಹೀಗೆ ಅವನು ಅದರ ಉದ್ದ ಇಪ್ಪತ್ತು ಮೊಳವೆಂದೂ ಅಗಲ ಇಪ್ಪತ್ತು ಮೊಳವೆಂದೂ ದೇವಾ ಲಯದ ಮುಂದೆ ಅಳೆದನು; ಇದೇ ಮಹಾಪರಿಶುದ್ಧ ಸ್ಥಳ ಎಂದು ಅವನು ನನಗೆ ಹೇಳಿದನು.
5. ಅನಂತರ ಅವನು ಆಲಯದ ಗೋಡೆಯನ್ನು ಆರು ಮೊಳವೆಂದೂ ಮನೆಯ ಸುತ್ತಲೂ ಎಲ್ಲಾ ಕಡೆಗಳಲ್ಲೂ ಇದ್ದ ಪಾರ್ಶ್ವದ ಕೊಠಡಿಗಳ ಅಗಲ ನಾಲ್ಕು ಮೊಳವೆಂದೂ ಅಳೆದನು.
6. ಆ ಪಾರ್ಶ್ವದ ಕೊಠಡಿಗಳು ನೂರು ಇದ್ದವು. ಒಂದರ ಮೇಲೆ ಒಂದರಂತೆ ಮೂವತ್ತು ಅಂತಸ್ತು ಇದ್ದವು; ಅವರು ಹಿಡಿಯಲ್ಪಡುವ ಹಾಗೆ ಪಾರ್ಶ್ವದ ಕೊಠಡಿಗಳಿಗಾಗಿ ಇರುವ ಆಲಯವನ್ನು ಹೊಂದಿದ ಗೋಡೆಯಲ್ಲಿ ಸುತ್ತ ಲಾಗಿ ಸೇರಿಸಲ್ಪಟ್ಟಿದ್ದವು. ಆದರೆ ಮನೆಯ ಗೋಡೆಯಲ್ಲಿ ಹಿಡಿಸಲ್ಪಡಲಿಲ್ಲ.
7. ಸುತ್ತಣ ಅಂತಸ್ತುಗಳು ಮೇಲೆ ಮೇಲೆ ಹೋದ ಹಾಗೆ ಆಯಾ ಕೊಠಡಿಗಳ ಅಗಲವು ಹೆಚ್ಚುತ್ತಾ ಬಂದಿತು; ಅವು ಮನೆಯನ್ನು ಸುತ್ತಿಕೊಂಡು ಮೇಲೆ ಮೇಲೆ ಹೋದಹಾಗೆಲ್ಲಾ ಅದನ್ನು ಬಿಗಿಯಾಗಿ ಹಿಡಿದು ಕೊಂಡಂತೆ ಇದ್ದವು; ಹೀಗೆ ಮೇಲಿನ ಅಂತಸ್ತುಗಳು ಮನೆಯ ಕಡೆಗೆ ಅಗಲವಾಗುತ್ತಾ ಬಂದವು; ಕೆಳ ಗಿನ ಅಂತಸ್ತಿನಿಂದ ಮಧ್ಯದ ಅಂತಸ್ತಿನ ಮಾರ್ಗವಾಗಿ ಮೇಲಿನ ಅಂತಸ್ತಿಗೆ ಹತ್ತುತ್ತಿದ್ದವು.
8. ಆಲಯದ ಸುತ್ತ ಮುತ್ತಲೂ ಒಂದು ಜಗುಲಿಯನ್ನು ನಾನು ನೋಡಿ ದೆನು. ಅದು ಪಾರ್ಶ್ವದ ಕೊಠಡಿಗಳಿಗೆ ತಳಹದಿಯಾಗಿ ನೆಲಮಟ್ಟದಿಂದ ಸುಮಾರು ಆರು ಮಹಾ ಮೊಳಗಳಷ್ಠು ಎತ್ತರವಾಗಿತ್ತು.
9. ಹೊರಗಡೆಯಲ್ಲಿ ಪಾರ್ಶ್ವದ ಕೊಠಡಿ ಗಳಿಗಾದ ಗೋಡೆಯ ದಪ್ಪವು ಐದು ಮೊಳ ಮತ್ತು ಉಳಿದದ್ದು ಒಳಗಿನ ಪಾರ್ಶ್ವಕೊಠಡಿಗಳ ಸ್ಥಳವಾಗಿತ್ತು.
10. ಕೊಠಡಿಗಳ ನಡುವೆ ಆಲಯದ ಸುತ್ತಲೂ ಪ್ರತಿ ಯೊಂದು ಕಡೆಗೂ ಇಪ್ಪತ್ತು ಮೊಳ ಅಗಲವಿತ್ತು;
11. ಪಾರ್ಶ್ವದ ಕೊಠಡಿಗಳ ಬಾಗಿಲುಗಳು ಬಿಡಲ್ಪಟ್ಟ ಸ್ಥಳದ ಕಡೆಗೆ ಇದ್ದವು, ಉತ್ತರದ ಕಡೆಗೆ ಒಂದು ಬಾಗಿಲೂ ದಕ್ಷಿಣದ ಕಡೆಗೆ ಮತ್ತೊಂದು ಬಾಗಿಲೂ ಇತ್ತು; ಬಿಡಲ್ಪಟ್ಟ ಸ್ಥಳದ ಅಗಲವು ಸುತ್ತಲೂ ಐದು ಮೊಳವಾಗಿತ್ತು.
12. ಈಗ ಪ್ರತ್ಯೇಕಿಸಿದ ಸ್ಥಳಕ್ಕೆ ಎದುರಾಗಿ ಪಶ್ಚಿಮದ ಕಡೆಗಿದ್ದ ಕಟ್ಟಡವು ಎಪ್ಪತ್ತು ಮೊಳ ಅಗಲವಾಗಿತ್ತು; ಕಟ್ಟಡದ ಗೋಡೆಯು ಸುತ್ತಲೂ ಐದು ಮೊಳ ದಪ್ಪವಾಗಿತ್ತು; ಅದರ ಉದ್ದವು ತ್ತೊಂಭತ್ತು ಮೊಳ ವಾಗಿತ್ತು.
13. ಹೀಗೆ ಅವನು ಆಲಯವನ್ನು ನೂರು ಮೊಳ ಉದ್ದವೆಂದೂ; ಪ್ರತ್ಯೇಕಿಸಿದ ಸ್ಥಳವನ್ನೂ ಕಟ್ಟಡವನ್ನೂ ಗೋಡೆಗಳ ಸಹಿತವಾಗಿ ನೂರುಮೊಳ ಉದ್ದವೆಂದೂ ಅಳೆದನು;
14. ಇದಲ್ಲದೆ ಆಲಯದ ಮುಂಭಾಗವು ಪೂರ್ವದ ಕಡೆಗೆ ಇದ್ದ ಪ್ರತ್ಯೇಕ ಸ್ಥಳಗಳು ನೂರು ಮೊಳ ಅಗಲವಾಗಿದ್ದವು.
15. ಪ್ರತ್ಯೇಕ ಸ್ಥಳಕ್ಕೆ ಎದುರಾಗಿಯೂ ಹಿಂದೆಯೂ ಇದ್ದಂತ ಕಟ್ಟಡ ವನ್ನು ಅಂದರೆ ಕೈಪಡಸಾಲೆಗಳನ್ನೂ ಆ ಕಡೆ ಈ ಕಡೆ ನೂರು ಮೊಳವೆಂದೂ ಅಳೆದನು; ಇದರೊಳಗೆ ಒಳಗಿನ ದೇವಾಲಯವೂ ಅಂಗಳದ ದ್ವಾರಂಗಣ ಶಾಲೆಗಳೂ ಇದ್ದವು;
16. ಬಾಗಲುಗಳ ಕಂಬಗಳನ್ನೂ ಇಕ್ಕಟ್ಟಾದ ಕಿಟಕಿ ಗಳನ್ನೂ ಅದರ ಸುತ್ತಲೂ ಇದ್ದಂತಹ ಮೂರು ಅಂತಸ್ತು ಗಳಲ್ಲಿ ಬಾಗಲಿಗೆ ಎದುರಾಗಿ ಸುತ್ತಲೂ ಮರದಿಂದ ಹೊದಿಸಲ್ಪಟ್ಟಿದ್ದವು. ಪಡಸಾಲೆಗಳನ್ನೂ ನೆಲವು ಮೊದಲ್ಗೊಂಡು ಮುಚ್ಚಲ್ಪಟ್ಟಂತ ಕಿಟಕಿಗಳ ವರೆಗೂ;
17. ಬಾಗಿಲಿನ ಮೇಲಕ್ಕೂ ಒಳಗಿನ ಆಲಯದ ವರೆಗೂ ಹೊರಗೂ ಸುತ್ತಲೂ ಇದ್ದ ಗೋಡೆ, ಒಳಗೂ ಹೊರಗೂ ಎಲ್ಲವನ್ನೂ ಅಳೆದನು.
18. ಅದು ಕೆರೂಬಿ ಗಳಿಂದಲೂ ಖರ್ಜೂರದ ಮರಗಳಿಂದಲೂ ಮಾಡ ಲ್ಪಟ್ಟಿತ್ತು. ಕೆರೂಬಿ ಮತ್ತು ಕೆರೂಬಿಗಳ ಮಧ್ಯೆ ಖರ್ಜೂರದ ಮರವಿತ್ತು ಪ್ರತಿಯೊಂದು ಕೆರೂಬಿಗೂ ಎರಡೆರಡು ಮುಖ.
19. ಹೀಗೆ ಈ ಕಡೆ ಖರ್ಜೂರದ ಮರದ ಎದುರಿಗೆ ಪ್ರಾಯದ ಸಿಂಹದ ಮುಖವೂ ಇತ್ತು; ಹೀಗೆ ಆಲಯದ ತುಂಬಾ ಸುತ್ತಮುತ್ತಲೂ ಮಾಡಲ್ಪಟ್ಟಿತ್ತು.
20. ನೆಲವು ಮೊದಲುಗೊಂಡು ಬಾಗ ಲಿನ ಮೇಲಿನ ವರೆಗೂ ದೇವಾಲಯದ ಗೋಡೆ ಯಲ್ಲಿಯೂ ಕೆರೂಬಿಗಳೂ ಮತ್ತು ಖರ್ಜೂರದ ಮರಗಳೂ ಮಾಡಲ್ಪಟ್ಟಿದ್ದವು.
21. ದೇವಾಲಯದ ಕಂಬ ಗಳು ಚಚ್ಚೌಕವಾಗಿದ್ದವು, ಪರಿಶುದ್ಧ ಸ್ಥಳವೂ ಸಹ ಹಾಗೆಯೇ ಇತ್ತು; ಒಂದು ಆಕಾರವು ಮತ್ತೊಂದು ಆಕಾರವನ್ನು ಹೋಲುತ್ತಿತ್ತು.
22. ಮರದ ಯಜ್ಞ ವೇದಿಯು ಮೂರುಮೊಳ ಎತ್ತರವಾಗಿತ್ತು; ಉದ್ದವು ಎರಡು ಮೊಳವಾಗಿತ್ತು; ಅದರ ಮೂಲೆಗಳೂ ಉದ್ದವೂ ಪಾರ್ಶ್ವವೂ ಮರದಿಂದಲೇ ಮಾಡಲ್ಪಟ್ಟಿತ್ತು; ಅವನು ನನಗೆ ಹೇಳಿದ್ದೇನಂದರೆ--ಕರ್ತನ ಮುಂದೆ ಇರುವ ಮೇಜು ಇದೇ ಎಂದು ಹೇಳಿದನು.
23. ದೇವಾ ಲಯಕ್ಕೂ ಪರಿಶುದ್ಧ ಸ್ಥಳಕ್ಕೂ ಎರಡು ಬಾಗಲುಗಳಿ ದ್ದವು.
24. ಆ ಎರಡು ಬಾಗಲುಗಳಿಗೆ ಎರಡು ಕದಗಳಿ ದ್ದವು, ಆ ಸುತ್ತಿಕೊಳ್ಳುವ ಕದಗಳು ಒಂದು ಬಾಗಲಿಗೆ ಎರಡು ಇನ್ನೊಂದು ಬಾಗಲಿಗೆ ಎರಡು ಇದ್ದವು.
25. ಆಲಯದ ಬಾಗಲುಗಳ ಮೇಲೆ ಕೆರೂಬಿಗಳೂ ಖರ್ಜೂರದ ಮರಗಳೂ ಗೋಡೆಗಳ ಮೇಲೆ ಮಾಡ ಲ್ಪಟ್ಟ ಹಾಗೆಯೇ ಮಾಡಲ್ಪಟ್ಟಿದ್ದವು; ದ್ವಾರಂಗಣದ ಮುಂದೆ ಹೊರಗಡೆಯಲ್ಲಿ ದಪ್ಪವಾದ ಹಲಗೆಗಳಿದ್ದವು.
26. ಇದಲ್ಲದೆ, ಈ ಕಡೆಯೂ ಆ ಕಡೆಯೂ ದ್ವಾರಾಂಗ ಣದ ಪಕ್ಕಕ್ಕೂ ಆಲಯದ ಪಾರ್ಶ್ವ ಕೊಠಡಿಗಳಿಗೂ ಇಕ್ಕಟ್ಟಾದ ಕಿಟಕಿಗಳೂ ಇದ್ದವು; ದಪ್ಪವಾದ ಹಲಗೆಗಳೂ ಸಹ ಇದ್ದವು.

Chapter 42

1. ಆ ಮೇಲೆ ಅವನು ನನ್ನನ್ನು ಉತ್ತರದ ಮಾರ್ಗವಾಗಿ ಹೊರಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ, ಪ್ರತ್ಯೇಕವಾದ ಸ್ಥಳಕ್ಕೆ ಎದುರಾಗಿಯೂ ಉತ್ತರದ ಕಡೆಯಲ್ಲಿ ಕಟ್ಟುವಿಕೆಯ ಕಟ್ಟಡದ ಮುಂದೆ ಇದ್ದ ಕೊಠಡಿಗೆ ಕರೆತಂದನು,
2. ನೂರುಮೊಳ ಉದ್ದಕ್ಕೆ ಎದುರಾಗಿರುವ ಉತ್ತರದ ಬಾಗಲಿನ ಅಗಲ ಐವತ್ತು ಮೊಳವಾಗಿತ್ತು.
3. ಒಳಗಿನ ಅಂಗಳಕ್ಕೆ ಇದ್ದ ಇಪ್ಪತ್ತು ಮೊಳಕ್ಕೆ ಎದುರಾಗಿಯೂ ಹೊರಗಿನ ಅಂಗಳಕ್ಕೆ ಇದ್ದ ಕಲ್ಲು ಹಾಸಿದ ನೆಲಕ್ಕೆ ಎದುರಾಗಿಯೂ ಮೂರು ಅಂತಸ್ತುಗಳಲ್ಲಿಯೂ ಪಡ ಸಾಲೆಗಳ ಮೇಲೆ ಪಡಸಾಲೆಗಳಿದ್ದವು.
4. ಕೊಠಡಿಗಳ ಮುಂದೆ ಒಳಗೆ ಹೋಗುವಂತೆ ಮತ್ತು ಹತ್ತು ಮೊಳಗಳು ಅಗಲವಾದಂತ ಒಂದು ಮೊಳದ ಹಾದಿ ಇತ್ತು; ಅವುಗಳ ಬಾಗಲುಗಳು ಉತ್ತರದ ಕಡೆಗಿದ್ದವು.
5. ಈಗ ಮೇಲಿನ ಕೊಠಡಿಗಳೇ ಚಿಕ್ಕವುಗಳಾಗಿದ್ದವು. ಕಟ್ಟಡದ ಕೆಳಗಿನ ಭಾಗಕ್ಕಿಂತಲೂ ಮಧ್ಯಭಾಗಕ್ಕಿಂತಲೂ ಪಡ ಸಾಲೆಗಳು ಎತ್ತರದಲ್ಲಿತ್ತು.
6. ಇವು ಮೂರು ಅಂತಸ್ತು ಗಳಾಗಿದ್ದವು; ಆದರೆ ಅಂಗಳದ ಕಂಬಗಳ ಹಾಗೆ ಇವುಗಳಿಗೆ ಕಂಬಗಳಿರಲಿಲ್ಲ; ಆದದರಿಂದ ನೆಲಕ್ಕೆ ಎತ್ತರದಲ್ಲಿನ ಮೇಲಣ ಕೋಣೆಗಳು ಕೆಳಗಿನ ಮತ್ತು ಮಧ್ಯದ ಕೋಣೆಗಳಿಗೆ ಚಾಚಿಕೊಂಡಿದ್ದವು.
7. ಕೊಠಡಿ ಗಳಿಗೆ ಎದುರಾಗಿ ಹೊರಗಿದ್ದ ಗೋಡೆಯು ಕೊಠಡಿಗಳ ಮುಂದೆ ಹೊರಗಿನ ಅಂಗಳದ ಕಡೆಗೆ ಇದ್ದದ್ದು ಐವತ್ತು ಮೊಳ ಉದ್ದವಾಗಿತ್ತು.
8. ಹೊರಗಿನ ಅಂಗಳದಲ್ಲಿದ್ದ ಕೊಠಡಿಗಳ ಉದ್ದವು ಐವತ್ತು ಮೊಳ ಉದ್ದವಾಗಿ ದೇವಾಲಯದ ಮುಂದೆ ನೂರು ಮೊಳವಿತ್ತು.
9. ಈ ಕೊಠಡಿಗಳ ಕೆಳಗೆ ಹೊರಗಿನ ಅಂಗಳದಿಂದ ಅವುಗ ಳೊಳಗೆ ಪ್ರವೇಶಿಸುವ ಹಾಗೆ ಪೂರ್ವದಿಕ್ಕಿಗೆ ಪ್ರವೇಶ ವಿತ್ತು.
10. ಕೊಠಡಿಗಳು ಪೂರ್ವದ ಕಡೆಗೆ ಅಂಗಳದ ಗೋಡೆಯ ದಪ್ಪದಲ್ಲಿ ಪ್ರತ್ಯೇಕ ಸ್ಥಳಕ್ಕೂ ಕಟ್ಟಡಕ್ಕೂ ಎದುರಾಗಿದ್ದವು.
11. ಅವುಗಳ ಮುಂದಿನ ದಾರಿಯು ಉತ್ತರದ ಕಡೆಯಲ್ಲಿದ್ದ ಕೊಠಡಿಗಳ ಆಕಾರದ ಹಾಗೆಯೇ ಇತ್ತು; ಅವುಗಳ ಉದ್ದವೂ ಅಗಲವೂ ಒಂದೇ ಆಗಿತ್ತು; ಅವುಗಳ ಹೊರಗೆ ಹೋಲುವಿಕೆಯು ಅವುಗಳ ಪ್ರಕಾರ ವಾಗಿಯೂ ಅವುಗಳ ಬಾಗಿಲುಗಳು ಹಾಗೆಯೇ ಇದ್ದವು.
12. ದಕ್ಷಿಣ ಕಡೆಗಿದ್ದ ಕೊಠಡಿಗಳ ಬಾಗಲುಗಳ ಪ್ರಕಾರ ಅವುಗಳನ್ನು ಒಬ್ಬನು ಪ್ರವೇಶಿಸುವಂತೆ ಪೂರ್ವದ ಕಡೆಯ ಗೋಡೆಗೆ ಸರಿಯಾದ ಮಾರ್ಗದ ಕೊನೆಯಲ್ಲಿ ಒಂದು ಬಾಗಿಲಿತ್ತು.
13. ಆಗ ಅವನು ನನಗೆ ಪ್ರತ್ಯೇಕ ಸ್ಥಳದ ಮುಂದೆ ಇರುವ ಉತ್ತರದ ಕೊಠಡಿಗಳು ದಕ್ಷಿಣದ ಕೊಠಡಿಗಳು ಪರಿಶುದ್ಧ ಕೊಠಡಿ ಗಳಾಗಿತ್ತು; ಅಲ್ಲಿ ಕರ್ತನಿಗಾಗಿ ಬರುವ ಯಾಜಕರು ಅತಿ ಪರಿಶುದ್ಧವಾದವುಗಳನ್ನು ತಿನ್ನಬೇಕು; ಅಂದರೆ ಕಾಣಿಕೆಯನ್ನೂ ಪಾಪದ ಬಲಿಯನ್ನೂ ಅಪರಾಧದ ಬಲಿಯನ್ನೂ ಅರ್ಪಿಸಬೇಕು; ಆ ಸ್ಥಳವು ಪರಿಶುದ್ಧ ವಾಗಿತ್ತು.
14. ಯಾಜಕರು ಅವುಗಳಲ್ಲಿ ಪ್ರವೇಶಿಸು ವಾಗ ಅವರು ಪರಿಶುದ್ಧ ಸ್ಥಳವನ್ನು ಬಿಟ್ಟು ಹೊರಗಿನ ಅಂಗಳಕ್ಕೆ ಹೋಗಬಾರದು; ಅವರು ತಾವು ಸೇವೆಗಾಗಿ ಧರಿಸಿದ ವಸ್ತ್ರಗಳನ್ನು ಅಲ್ಲೇ ತೆಗೆದಿಡಬೇಕು; ಅವು ಪರಿಶುದ್ಧವಾಗಿವೆ. ಅವರು ಜನರಿಗೆ ಸಂಬಂಧಪಟ್ಟ ಬೇರೆ ವಸ್ತ್ರಗಳನ್ನು ಧರಿಸಿಕೊಂಡು ಸವಿಾಪಿಸಬೇಕು ಅಂದನು.
15. ಹೀಗೆ ಅವನು ಒಳಗಿನ ಆಲಯದ ಅಳತೆ ಮಾಡಿ ಮುಗಿಸಿದ ಮೇಲೆ ನನ್ನನ್ನು ಪೂರ್ವದ ಕಡೆಗೆ ಅಭಿಮುಖವಾಗಿರುವ ಬಾಗಲಿನಿಂದ ಹೊರಗೆ ತಂದು ಅದನ್ನು ಸುತ್ತಲಾಗಿ ಅಳೆದನು.
16. ಅವನು ಅಳೆಯುವ ಕೋಲಿನಿಂದ ಪೂರ್ವದ ಭಾಗವನ್ನು ಅಳೆದನು. ಅದು ಅಳೆಯುವ ಕೋಲಿನ ಪ್ರಕಾರ ಸುತ್ತಲೂ ಐನೂರು ಕೋಲಾಗಿತ್ತು.
17. ಉತ್ತರ ಕಡೆಯಲ್ಲಿ ಸಹ ಅವನು ಉತ್ತರದ ಭಾಗವನ್ನು ಅಳತೆಯ ಕೋಲಿನ ಪ್ರಕಾರ ಸುತ್ತಲಾಗಿ ಐನೂರು ಕೋಲೆಂದು ಅಳೆದನು.
18. ಅವನು ಅಳತೆಯ ಕೋಲಿನಿಂದ ದಕ್ಷಿಣದ ಭಾಗ ವನ್ನು ಐನೂರು ಕೋಲೆಂದು ಅಳೆದನು.
19. ಅವನು ಪಶ್ಚಿಮದ ಕಡೆಗೆ ತಿರುಗಿ ಅಳತೆಯ ಕೋಲಿನಿಂದ ಐನೂರು ಕೋಲೆಂದು ಅಳೆದನು.
20. ಅವನು ನಾಲ್ಕೂ ಕಡೆಗಳಿಂದ ಅಳೆದನು; ಪರಿಶುದ್ಧ ಸ್ಥಳವನ್ನೂ ಅಪವಿತ್ರ ವಾದ ಸ್ಥಳವನ್ನೂ ಪ್ರತ್ಯೇಕ ಪಡಿಸುವ ಹಾಗೆ ಅದಕ್ಕೆ ಸುತ್ತಲಾಗಿ ಐನೂರು ಕೋಲು ಉದ್ದವಾದಂತ ಮತ್ತು ಐನೂರು ಕೋಲು ಅಗಲವಾದಂತ ಗೋಡೆ ಇತ್ತು.

Chapter 43

1. ಆ ಮೇಲೆ ಅವನು ನನ್ನನ್ನು ಪೂರ್ವದಿಕ್ಕಿಗೆ ಅಭಿಮುಖವಾದ ಬಾಗಲಿಗೆ ಕರೆದು ಕೊಂಡು ಹೋದನು;
2. ಇಗೋ, ಇಸ್ರಾಯೇಲಿನ ದೇವರ ಮಹಿಮೆಯು ಪೂರ್ವ ಮಾರ್ಗವಾಗಿ ಬಂದಿತು, ಆತನ ಧ್ವನಿಯು ಬಹು ನೀರುಗಳ ಶಬ್ಧದಂತೆ ಇತ್ತು; ಭೂಮಿಯು ಆತನ ಮಹಿಮೆಯಿಂದ ಪ್ರಕಾ ಶಿಸುತ್ತಿತ್ತು.
3. ಇದು, ನಾನು ನೋಡಿದ ದರ್ಶನದ ತೋರ್ವಿಕೆಯ ಪ್ರಕಾರ ಇತ್ತು ನಾನು ಪಟ್ಟಣವನ್ನು ನಾಶಮಾಡುವದಕ್ಕೆ ಬಂದಾಗ ನೋಡಿದ ಆ ದರ್ಶನದ ಹಾಗೆಯೇ ಇತ್ತು; ನಾನು ಕೇಬಾರ್‌ ನದಿಯ ದಡದ ಮೇಲೆ ನೋಡಿದ ದರ್ಶನಗಳ ಹಾಗೆ ಇತ್ತು; ಆಗ ನಾನು ಬೋರಲು ಬಿದ್ದೆನು.
4. ಆಗ ಕರ್ತನ ಮಹಿಮೆಯು ಪೂರ್ವದಿಕ್ಕಿಗೆ ಅಭಿಮುಖವಾಗಿದ್ದ ಬಾಗಲಿನ ಮಾರ್ಗವಾಗಿ ಆಲಯದೊಳಗೆ ಪ್ರವೇಶಿ ಸಿತು.
5. ಆಗ ಆತ್ಮವು ನನ್ನನ್ನು ಎತ್ತಿಕೊಂಡು ಒಳಗಿನ ಅಂಗಳಕ್ಕೆ ಕರೆ ತಂದಿತು; ಇಗೋ, ಕರ್ತನ ಮಹಿಮೆ ಯಿಂದ ಆಲಯವು ತುಂಬಿಕೊಂಡಿತ್ತು.
6. ನಾನು ಆಲಯದೊಳಗಿಂದ ನನ್ನ ಸಂಗಡ ಮಾತನಾಡುವದನ್ನು ಕೇಳಿದೆನು; ಆ ಪುರುಷನು ನನ್ನ ಬಳಿಯಲ್ಲಿಯೇ ನಿಂತಿ ದ್ದನು.
7. ಆತನು ನನಗೆ--ಮನುಷ್ಯಪುತ್ರನೇ, ನನ್ನ ಸಿಂಹಾಸನದ ಸ್ಥಳವನ್ನೂ ಅಂಗಾಲುಗಳ ಸ್ಥಳವನ್ನೂ ಮತ್ತು ನಾನು ಇಸ್ರಾಯೇಲಿನ ಮಕ್ಕಳ ಮಧ್ಯದಲ್ಲಿ ನಿತ್ಯವಾಗಿ ವಾಸವಾಗಿರುವ ಸ್ಥಳವನ್ನೂ ನನ್ನ ಪರಿಶುದ್ಧ ಹೆಸರನ್ನೂ ಇಸ್ರಾಯೇಲಿನ ಮನೆತನದವರೂ ಅಂದರೆ ಅವರಾದರೂ ಅವರ ಅರಸರಾದರೂ ತಮ್ಮ ವ್ಯಭಿಚಾರ ದಿಂದಲೂ ಎತ್ತರ ಸ್ಥಳಗಳಲ್ಲಿರುವ ಅವರ ಅರಸರ ಹೆಣಗಳಿಂದಲೂ ಇನ್ನು ಮೇಲೆ ಅಪವಿತ್ರಮಾಡುವ ದಿಲ್ಲ.
8. ಅವರು ತಮ್ಮ ಹೊಸ್ತಿಲನ್ನು ನನ್ನ ಹೊಸ್ತಿಲುಗಳ ಬಳಿಯಲ್ಲಿಯೂ ತಮ್ಮ ಕಂಬಗಳನ್ನು ನನ್ನ ಕಂಬಗಳ ಬಳಿಯಲ್ಲಿಯೂ ಇಟ್ಟು ನನಗೂ ಅವರಿಗೂ ಮಧ್ಯೆ ಗೋಡೆಯನ್ನು ಹಾಕಿದ್ದರಿಂದಲೂ ಅವರು ತಾವು ಮಾಡಿರುವ ಅಸಹ್ಯಗಳಿಂದ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಮಾಡಿದ್ದಾರೆ; ಆದಕಾರಣ ನಾನು ನನ್ನ ಕೋಪದಲ್ಲಿ ಅವರನ್ನು ಮುಗಿಸಿ ಬಿಟ್ಟಿದ್ದೇನೆ.
9. ಈಗ ಅವರು ಅವರ ವ್ಯಭಿಚಾರವನ್ನು ಮತ್ತು ಅವರ ಅರಸರ ಹೆಣಗಳನ್ನು ನನ್ನಿಂದ ದೂರವಾಗಿಡಲಿ, ನಾನು ಅವರ ಮಧ್ಯದಲ್ಲಿ ಎಂದೆಂದಿಗೂ ವಾಸಿಸುತ್ತೇನೆ ಅಂದನು.
10. ಮನುಷ್ಯಪುತ್ರನೇ, ನೀನು ಇಸ್ರಾಯೇಲಿನ ಮನೆತನದವರಿಗೆ ಈ ಮನೆಯನ್ನು ತೋರಿಸು ಅವರು ತಮ್ಮ ಅಕ್ರಮಗಳ ನಿಮಿತ್ತವಾಗಿ ನಾಚಿಕೆಪಡುವರು ಮತ್ತು ಅವರು ಮಾದರಿಯನ್ನು ಅಳೆಯಲಿ.
11. ಅವರು ಮಾಡಿದ್ದಕ್ಕಾಗಿ ನಾಚಿಕೆಪಟ್ಟರೆ ಮನೆಯ ರೂಪವನ್ನೂ ಆಕಾರವನ್ನೂ ಹೊರಡೋಣ ಬರೋಣಗಳನ್ನು ಅದರ ಎಲ್ಲಾ ನಿಯಮಗಳನ್ನೂ ಅದರ ಎಲ್ಲಾ ನ್ಯಾಯಪ್ರಮಾಣ ಗಳನ್ನ್ನೂ ಅವರಿಗೆ ತೋರಿಸು; ಅದರ ಎಲ್ಲಾ ನಿಯಮ ಗಳನ್ನೂ ಕೈಗೊಂಡು ಅವರು ಅವುಗಳನ್ನು ಮಾಡುವ ಹಾಗೆ ಅವರ ದೃಷ್ಟಿಯಲ್ಲಿಯೇ ಅವುಗಳನ್ನು ಬರೆ,
12. ಇದು ಆ ಆಲಯದ ನ್ಯಾಯಪ್ರಮಾಣವಾಗಿದೆ --ಆ ಪರ್ವತದ ಮೇಲೆಯೂ ಅದರ ಸುತ್ತಲೂ ನಿಗದಿಪಡಿಸಿದವರೆಗೂ ಎಲ್ಲವೂ ಅತ್ಯಂತ ಪರಿಶುದ್ಧ ವಾಗಿದೆ. ಇಗೋ, ಇದೇ ಆ ಆಲಯದ ನ್ಯಾಯ ಪ್ರಮಾಣವಾಗಿದೆ.
13. ಈ ಯಜ್ಞವೇದಿಯ ಅಳತೆಗಳು ಮೊಳದ ಪ್ರಕಾರವೇ ಇವೆ; ಮೊಳ ಅಂದರೆ ಮೊಳದ ಮೇಲೆ ಒಂದು ಹಿಡಿ ಉದ್ದ; ಕೆಳಭಾಗದ ಎತ್ತರವು ಒಂದು ಮೊಳ, ಮೇಲಿನ ಕೈ ಅಗಲದಷ್ಟು ಅಂಚಿನ ಉದ್ದವು ಸುತ್ತಲೂ ಒಂದು ಮೊಳ, ಅಂಚಿನ ತುದಿಯಲ್ಲಿ; ಸುತ್ತಲೂ ದಿಂಡಿನ ಅಗಲವು ಒಂದು ಮೊಳ; ಇದೇ ಯಜ್ಞವೇದಿಯ ಉನ್ನತ ಸ್ಥಳ.
14. ನೆಲದ ತಳದಿಂದ ಕೆಳಗಿನ ಅಡಿಯ ವರೆಗೂ ಎರಡು ಮೊಳವಿತ್ತು, ಅಗಲ ಒಂದು ಮೊಳ; ಸಣ್ಣಅಂಚು ಮೊದಲುಗೊಂಡು ದೊಡ್ಡ ಅಂಚಿನವರೆಗೂ ನಾಲ್ಕು ಮೊಳ ಮತ್ತು ಅಗಲವು ಒಂದು ಮೊಳ.
15. ಈ ಪ್ರಕಾರ ಯಜ್ಞವೇದಿಯು ನಾಲ್ಕು ಮೊಳವಾಗಿಯೂ; ಯಜ್ಞವೇದಿಯಿಂದ ಮೇಲಕ್ಕೆ ನಾಲ್ಕು ಕೊಂಬುಗಳುಳ್ಳದ್ದಾಗಿಯೂ ಇರ ಬೇಕು.
16. ಯಜ್ಞವೇದಿಯ ಉದ್ದವು ಹನ್ನೆರಡು ಮೊಳ, ಅಗಲ ಹನ್ನೆರಡು ಮೊಳ ನಾಲ್ಕು ಕಡೆಯ ಚೌಕಗಳು ಚಚ್ಚೌಕವಾಗಿರಬೇಕು.
17. ಅದರ ಅಂಚು ನಾಲ್ಕೂ ಕಡೆಗೆ ಹದಿನಾಲ್ಕು ಮೊಳ ಉದ್ದವಾಗಿಯೂ; ಹದಿ ನಾಲ್ಕು ಮೊಳ ಅಗಲವಾಗಿಯೂ ಅದರ ಸುತ್ತಲಿರುವ ಮೇರೆಯು ಅರ್ಧ ಮೊಳವಾಗಿಯೂ ತಳವು ಒಂದು ಮೊಳವಾಗಿಯೂ ಇರಬೇಕು; ಮೆಟ್ಟಲುಗಳು ಪೂರ್ವ ದಿಕ್ಕಿಗೆ ಎದುರಾಗಿರಬೇಕು.
18. ಅವನು ನನಗೆ ಹೇಳಿದ್ದೇನಂದರೆ--ಮನುಷ್ಯ ಪುತ್ರನೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆ; ಯಜ್ಞವೇದಿಯನ್ನು ಮಾಡುವ ದಿನದಲ್ಲಿ ಅದರ ಮೇಲೆ ದಹನಬಲಿಗಳನ್ನು ಅರ್ಪಿಸಿ ರಕ್ತವನ್ನು ಚಿಮುಕಿಸಬೇಕು; ಇವು ಅಲ್ಲಿನ ನಿಯಮಗಳಾಗಿವೆ.
19. ದೇವರಾದ ಕರ್ತನು ಹೇಳುವದೇನಂದರೆ--ನನಗೆ ಸೇವೆಮಾಡುವದಕ್ಕಾಗಿ ನನ್ನ ಬಳಿಗೆ ಸವಿಾಪಿಸುವ ಚಾದೋಕನ ವಂಶದವರಾದ ಯಾಜಕರಿಗೂ ಲೇವಿಯವರಿಗೂ ಪಾಪದ ಬಲಿಗಾಗಿ ಎಳೇ ಹೊರಿಯನ್ನು ಕೊಡಬೇಕು.
20. ಅದರ ರಕ್ತವನ್ನು ತೆಗೆದುಕೊಂಡು ಅದರ ನಾಲ್ಕು ಕೊಂಬುಗಳ ಅಂಚಿನ ನಾಲ್ಕು ಮೂಲೆಗಳಿಗೂ ಸುತ್ತಲೂ ಹಚ್ಚಿ ಶುದ್ಧಪಡಿಸಿ ದೋಷ ಪರಿಹರಿಸಬೇಕು.
21. ಇದಲ್ಲದೆ ನೀನು ಹೋರಿ ಯನ್ನು ಸಹ ಪಾಪದ ಅರ್ಪಣೆಗೆ ತೆಗೆದುಕೊಂಡು ಆಲಯದ ನೇಮಕವಾದ ಪರಿಶುದ್ಧ ಸ್ಥಳದಲ್ಲಿ ಹೊರಗೆ ಸುಡಬೇಕು.
22. ಎರಡನೇ ದಿನದಲ್ಲಿ ದೋಷವಿಲ್ಲದ ಮೇಕೆಯ ಮರಿಯನ್ನೂ ಪಾಪ ಬಲಿಯಾಗಿ ಅರ್ಪಿಸ ಬೇಕು; ಅವರು ಯಜ್ಞವೇದಿಯನ್ನು ಹೋರಿಯಿಂದ ಶುದ್ಧಮಾಡಿದ ಹಾಗೆ ಶುದ್ಧಮಾಡಬೇಕು.
23. ಹೀಗೆ ಅವರು ಶುದ್ಧ ಮಾಡಿದಾಗ ಕೊನೆಯಲ್ಲಿ ದೋಷ ವಿಲ್ಲದ ಒಂದು ಪ್ರಾಯದ ಹೋರಿಯನ್ನೂ ಪೂರ್ಣಾಂಗವಾದ ಮಂದೆಯೊಳಗಿರುವ ಒಂದು ಟಗರನ್ನೂ ಅರ್ಪಿಸಬೇಕು.
24. ನೀನು ಅವುಗಳನ್ನು ಕರ್ತನ ಮುಂದೆ ಅರ್ಪಿಸಬೇಕು; ಯಾಜಕರು ಅವುಗಳ ಮೇಲೆ ಉಪ್ಪನ್ನು ಹಾಕಿ ಅವುಗಳನ್ನು ಕರ್ತನಿಗೆ ದಹನಬಲಿಯಾಗಿ ಅರ್ಪಿಸಬೇಕು.
25. ಏಳು ದಿನಗಳ ತನಕ ಪ್ರತಿ ದಿನವೂ ನೀನು ಪಾಪ ಬಲಿಗಾಗಿ ಮೇಕೆಯನ್ನು ಸಿದ್ಧಮಾಡಬೇಕು ಮತ್ತು ಪೂರ್ಣಾಂಗ ವಾದ ಪ್ರಾಯದ ಹೋರಿಯನ್ನೂ ಮಂದೆಯೊಳಗಿನ ಟಗರನ್ನೂ ಸಿದ್ದಮಾಡಬೇಕು.
26. ಏಳು ದಿನಗಳ ತನಕ ಅವರು ಯಜ್ಞವೇದಿಯನ್ನು ಶುದ್ಧಮಾಡಿ ತಮ್ಮನ್ನು ತಾವೇ ಪ್ರತಿಷ್ಠಿಸಿಕೊಳ್ಳಬೇಕು.
27. ಈ ದಿನಗಳು ತೀರಿದಾಗ ಎಂಟನೇ ದಿನದ ತರುವಾಯ ಯಾಜಕರು ಯಜ್ಞವೇದಿಯ ಮೇಲೆ ನಿಮ್ಮ ದಹನಬಲಿಗಳನ್ನೂ ನಿಮ್ಮ ಸಮಾಧಾನದ ಬಲಿಗಳನ್ನೂ ಕೊಡುವರು. ಆಗ ನಾನು ನಿಮ್ಮನ್ನು ಅಂಗೀಕರಿಸುವೆನೆಂದು ದೇವರಾದ ಕರ್ತನು ಹೇಳುತ್ತಾನೆ.

Chapter 44

1. ಆಮೇಲೆ ಅವನು ನನ್ನನ್ನು ಪೂರ್ವದಿಕ್ಕಿಗೆ ಅಭಿಮುಖವಾದ ಹೊರಗಿನ ಪರಿಶುದ್ದ ಸ್ಥಳದ ಬಾಗಿಲಿನ ಮಾರ್ಗವಾಗಿ ಮತ್ತೆ ಬರಮಾಡಿದನು; ಅದು ಮುಚ್ಚಲ್ಪಟ್ಟಿತ್ತು.
2. ಆಮೇಲೆ ಕರ್ತನು ನನಗೆ ಹೇಳಿದ್ದೇನಂದರೆ--ಈ ಬಾಗಿಲು ಮುಚ್ಚಲ್ಪಟ್ಟಿರಬೇಕು, ಇದು ತೆರೆಯಬಾರದು; ಯಾವ ಮನುಷ್ಯನೂ ಇದರಿಂದ ಪ್ರವೇಶಿಸಬಾರದು; ಇಸ್ರಾಯೇಲ್ಯರ ದೇವರಾದ ಕರ್ತನು ಇದರಿಂದ ಪ್ರವೇಶಿಸಿದ್ದಾನೆ. ಆದದರಿಂದ ಇದು ಮುಚ್ಚಲ್ಪಡಬೇಕು.
3. ಇದು ಪ್ರಭುವಿಗಾಗಿದೆ; ಪ್ರಭುವು ಅದರೊಳಗೆ ಕುಳಿತುಕೊಂಡು, ಕರ್ತನ ಮುಂದೆ ರೊಟ್ಟಿಯನ್ನು ತಿನ್ನಬೇಕು; ಆತನು ಆ ಬಾಗಿಲಿನ ಪಡಸಾಲೆಯ ಮೂಲಕ ಪ್ರವೇಶಿಸಿ ಅದೇ ಮಾರ್ಗ ವಾಗಿ ಹೊರಗೆ ಹೋಗಬೇಕು.
4. ಆಮೇಲೆ ಅವನು ನನ್ನನ್ನು ಉತ್ತರದ ಬಾಗಿಲಿನ ಮಾರ್ಗವಾಗಿ ಆಲಯದ ಮುಂದೆ ಕರೆದುಕೊಂಡು ಹೋದನು; ನಾನು ನೋಡಲಾಗಿ ಇಗೋ, ಕರ್ತನ ಮಹಿಮೆಯು ಕರ್ತನ ಆಲಯವನ್ನು ತುಂಬಿಕೊಂಡಿತು. ನಾನು ಬೋರಲುಬಿದ್ದೆನು.
5. ಕರ್ತನು ನನಗೆ ಹೇಳಿದ್ದೇ ನಂದರೆ--ಮನುಷ್ಯಪುತ್ರನೇ, ಕರ್ತನ ಆಲಯದ ಸಕಲ ನೇಮನಿಷ್ಠೆಗಳ ವಿಷಯವಾಗಿಯೂ ನ್ಯಾಯ ಪ್ರಮಾಣದ ವಿಷಯವಾಗಿಯೂ ನಾನು ನಿನಗೆ ಹೇಳುವದನ್ನೆಲ್ಲಾ ನೀವು ಕಿವಿಯಾರೆ ಕೇಳಿ ಕಣ್ಣಾರೆ ಕಂಡು ಮನದಟ್ಟು ಮಾಡಿಕೋ; ಆಲಯದೊಳಗಿನ ಪ್ರವೇಶವನ್ನೂ ಪರಿಶುದ್ಧ ಸ್ಥಳದ ಪ್ರತಿಯೊಂದು ಹಾದು ಹೋಗುವವುಗಳನ್ನೂ ಗಮನಿಸು.
6. ತಿರುಗಿ ಬೀಳುವ ಇಸ್ರಾಯೇಲನ ಮನೆತನದವರಿಗೆ ನೀನು ಹೇಳಬೇಕಾ ದದ್ದೇನಂದರೆ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಓ ಇಸ್ರಾಯೇಲಿನ ಮನೆತನದವರೇ, ನೀವು ನಿಮ್ಮ ಎಲ್ಲಾ ಅಸಹ್ಯಗಳನ್ನು ಸಾಕುಮಾಡಿರಿ;
7. ಅವು ಗಳಲ್ಲಿ ನೀವು ನನ್ನ ರೊಟ್ಟಿಯನ್ನೂ ಕೊಬ್ಬನ್ನೂ ರಕ್ತವನ್ನೂ ಅರ್ಪಿಸುವಾಗ ನಿಮ್ಮ ಎಲ್ಲಾ ಅಸಹ್ಯಗಳಿ ಗೋಸ್ಕರ ನನ್ನ ಒಡಂಬಡಿಕೆಯನ್ನು ವಿಾರುವಂಥ ಹೃದಯದಲ್ಲಿಯೂ ಶರೀರದಲ್ಲಿಯೂ ಸುನ್ನತಿ ಯಿಲ್ಲದಂಥ ಪರಕೀಯರನ್ನು ನನ್ನ ಪರಿಶುದ್ಧಸ್ಥಳಕ್ಕೆ ಕರೆತಂದು ನನ್ನ ಆಲಯವನ್ನು ಅಪವಿತ್ರಪಡಿಸಿದಿರಿ;
8. ನೀವು ನನ್ನ ಪರಿಶುದ್ಧವಾದ ಜವಾಬ್ದಾರಿಯನ್ನು ಕೈಗೊಳ್ಳದೆ ಬೇರೆಯವರನ್ನು ಕಾಯುವದಕ್ಕೆ ನಿಮ್ಮ ಪರಿ ಶುದ್ದ ಸ್ಥಳದಲ್ಲಿ ಇರಿಸಿದ್ದೀರಿ.
9. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಹೃದಯದಲ್ಲಿಯೂ ಶರೀರದ ಲ್ಲಿಯೂ ಸುನ್ನತಿಯಿಲ್ಲದ ಯಾವೊಬ್ಬ ಪರಕೀಯನೂ ಇಸ್ರಾಯೇಲಿನ ಮಕ್ಕಳೊಳಗಿರುವ ಯಾವೊಬ್ಬ ಅಪರಿಚಿತನೂ ನನ್ನ ಪರಿಶುದ್ಧಸ್ಥಳದೊಳಗೆ ಪ್ರವೇಶಿಸ ಬಾರದು.
10. ಇಸ್ರಾಯೇಲ್ಯರು ತಪ್ಪಿಸಿಕೊಂಡು ನನ್ನಿಂದ ಅಗಲಿ, ತಮ್ಮ ವಿಗ್ರಹಗಳ ಕಡೆಗೆ ತಿರುಗಿ ಕೊಂಡ ವೇಳೆಯಲ್ಲಿ ನನಗೆ ದೂರವಾಗಿ ಹೋದ ಲೇವಿಯರು ಸಹ ತಮ್ಮ ಅಕ್ರಮಗಳನ್ನು ಹೊರುವರು.
11. ಆದರೂ ಅವರು ನನ್ನ ಪರಿಶುದ್ಧ ಸ್ಥಳದಲ್ಲಿ ಸೇವಿ ಸುವವರಾಗಿರುವರು; ಆಲಯದ ಬಾಗಿಲುಗಳ ಮೇಲ್ವಿ ಚಾರವನ್ನು ಹೊಂದಿ ಆಲಯಕ್ಕೆ ಸೇವೆಮಾಡುವರು; ಅವರು ಜನರಿಗೋಸ್ಕರ ದಹನಬಲಿಯನ್ನು ಬಲಿ ಯನ್ನೂ ಮಾಡಿ ಅವರಿಗೆ ಸೇವೆಮಾಡುವ ಹಾಗೆ ಅವರ ಮುಂದೆ ನಿಲ್ಲುವರು.
12. ಅವರು ತಮ್ಮ ವಿಗ್ರ ಹಗಳ ಮುಂದೆ ಜನರಿಗಾಗಿ ಸೇವೆಮಾಡಿ ಇಸ್ರಾ ಯೇಲಿನ ಮನೆತನದವರಿಗೆ ಅಕ್ರಮದ ಆತಂಕವಾ ದದ್ದೇ ಕಾರಣ, ನಾನು ನನ್ನ ಕೈಯನ್ನು ಅವರಿಗೆ ವಿರುದ್ಧವಾಗಿ ಚಾಚಿದ್ದೇನೆ, ಅವರು ತಮ್ಮ ಅಕ್ರಮವನ್ನು ಹೊರುವರೆಂದು ದೇವರಾದ ಕರ್ತನು ಹೇಳುತ್ತಾನೆ.
13. ಅವರು ಯಾಜಕರಾಗಿ ನನ್ನನ್ನು ಸವಿಾಪಿಸದೆ ಅತಿ ಪರಿಶುದ್ಧ ಸ್ಥಳದಲ್ಲಿ ನನ್ನ ಪರಿಶುದ್ಧವಾದವುಗಳಲ್ಲಿ ಒಂದನ್ನಾದರೂ ಸವಿಾಪಿಸದೆ, ತಮ್ಮ ನಾಚಿಕೆಯನ್ನೂ ತಾವು ಮಾಡಿದ ಅಸಹ್ಯಗಳನ್ನೂ ಹೊರುವರು.
14. ಆದರೆ ನಾನು ಅವರನ್ನು ಆಲಯದ ಎಲ್ಲಾ ಸೇವೆ ಗೋಸ್ಕರವೂ ಅದರಲ್ಲಿ ಮಾಡುವಂತ ಎಲ್ಲವುಗಳಿ ಗೋಸ್ಕರವೂ ಆಲಯದ ಕಾರ್ಯಗಳನ್ನು ನೋಡಿ ಕೊಳ್ಳುವವರನ್ನಾಗಿ ಮಾಡುವೆನು.
15. ಆದರೆ ಇಸ್ರಾಯೇಲಿನ ಮಕ್ಕಳು ನನ್ನನ್ನು ಬಿಟ್ಟು ಹೋದಾಗ ನನ್ನ ಪರಿಶುದ್ಧ ಸ್ಥಳದ ಕಾಯಿದೆಯನ್ನು ಕೈಕೊಂಡ ಚಾದೋಕನ ಮಕ್ಕಳಾಗಿರುವ ಲೇವಿಯರಾದ ಯಾಜಕರೂ ಇವರು ನನಗೆ ಸೇವೆಮಾಡುವ ಹಾಗೆ ನನ್ನ ಸವಿಾಪಕ್ಕೆ ಬಂದು, ನನ್ನ ಮುಂದೆ ನಿಂತು, ನನಗೆ ಕೊಬ್ಬನ್ನೂ ರಕ್ತವನ್ನೂ ಅರ್ಪಿಸುವರೆಂದು ದೇವರಾದ ಕರ್ತನು ಹೇಳುತ್ತಾನೆ.
16. ಇವರು ನನ್ನ ಪರಿಶುದ್ಧ ಸ್ಥಳವನ್ನು ಪ್ರವೇಶಿಸಿ, ನನಗೆ ಸೇವೆ ಮಾಡು ವದಕ್ಕಾಗಿ ನನ್ನ ಮೇಜಿನ ಬಳಿಗೆ ಬರುವರು ಅವರು ನನ್ನ ಕಾಯಿದೆಯನ್ನು ಕೈಕೊಳ್ಳುವರು.
17. ಅವರು ಒಳ ಗಿನ ಅಂಗಳಗಳ ಬಾಗಿಲನ್ನು ಪ್ರವೇಶಿಸುವಾಗ ನಾರಿನ ವಸ್ತ್ರಗಳನ್ನು ಧರಿಸಿಕೊಳ್ಳಬೇಕು; ಒಳಗಿನ ಅಂಗಳದ ಬಾಗಿಲುಗಳಲ್ಲಿಯೂ ಒಳಗಡೆಯೂ ಸೇವಿ ಸುತ್ತಿರುವಾಗ ಅವರ ಮೇಲೆ ಉಣ್ಣೆಯ ಉಡುಪೂ ಇರಕೂಡದು.
18. ಅವರ ತಲೆಗಳ ಮೇಲೆ ನಾರಿನ ರುಮಾಲುಗಳೂ ಅವರ ಸೊಂಟಗಳ ಮೇಲೆ ನಾರಿನ ಇಜಾರುಗಳು ಇರಬೇಕು; ಅವರು ಬೆವರು ಬರುವಂತವುಗಳನ್ನು ಕಟ್ಟಿಕೊಳ್ಳಬಾರದು.
19. ಇದಲ್ಲದೆ ಅವರು ಹೊರಗಿನ ಅಂಗಳಕ್ಕೆ ತೀರಾ ಹೊರಗಿನ ಅಂಗಳಕ್ಕೆ ಜನರ ಬಳಿಗೆ ಹೋಗುವಾಗ ತಾವು ಸೇವೆಮಾಡಿದ ತಮ್ಮ ವಸ್ತ್ರ ಗಳನ್ನು ತೆಗೆದು ಪರಿಶುದ್ಧ ಕೊಠಡಿಗಳಲ್ಲಿ ಇಟ್ಟು ಬೇರೆ ವಸ್ತ್ರಗಳನ್ನು ಧರಿಸಿಕೊಳ್ಳಬೇಕು; ತಮ್ಮ ವಸ್ತ್ರಗಳಿಂದ ಜನರನ್ನು ಪರಿಶುದ್ಧಗೊಳಿಸಬಾರದು.
20. ಇದಲ್ಲದೆ ಅವರು ತಮ್ಮ ತಲೆಗಳನ್ನು ಬೋಳಿಸಿಕೊಳ್ಳದೆ ಉದ್ದ ಕೂದಲನ್ನು ಬೆಳೆಸದೆ ತಮ್ಮ ತಲೆಕೂದಲುಗಳನ್ನು ಕತ್ತರಿಸಬೇಕು.
21. ಇದಲ್ಲದೆ ಯಾವ ಯಾಜಕನೇ ಆಗಲಿ, ಒಳಗಿನ ಅಂಗಳದಲ್ಲಿ ಪ್ರವೇಶಿಸುವಾಗ ದ್ರಾಕ್ಷಾ ರಸವನ್ನು ಕುಡಿಯಬಾರದು.
22. ಅವರು ಒಬ್ಬ ವಿಧವೆ ಯನ್ನಾಗಲಿ, ಹೊರಗೆ ಹಾಕಲ್ಪಟ್ಟವಳನ್ನಾಗಲಿ, ಹೆಂಡತಿ ಯನ್ನಾಗಲು ಸ್ವೀಕರಿಸಬಾರದು ಆದರೆ ಇಸ್ರಾಯೇಲಿನ ಮನೆತನದ ಸಂತಾನದವರಾದ ಕನ್ಯೆಯರನ್ನು ತೆಗೆದು ಕೊಳ್ಳಬಹುದು. ಅಥವಾ ಯಾಜಕನಿಂದ ವಿಧವೆಯಾಗಿ ರುವವಳನ್ನು ತೆಗೆದುಕೊಳ್ಳಬಹುದು.
23. ಅವರು ನನ್ನ ಜನರಿಗೆ ಪರಿಶುದ್ಧವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ಹೆಚ್ಚು ಕಡಿಮೆಯನ್ನು ಬೋಧಿಸಿ, ಅವರಿಗೆ ಹೊಲೆ ಯಾದದ್ದನ್ನೂ ಶುದ್ಧವಾದದ್ದನ್ನೂ ತಿಳಿಸಬೇಕು.
24. ಜಗಳವಾಡುವಾಗ ಅವರು ನ್ಯಾಯಕ್ಕಾಗಿ ನಿಂತು, ನನ್ನ ನ್ಯಾಯವಿಧಿಗಳ ಪ್ರಕಾರ ಅವರಿಗೆ ತಿಳಿಸಬೇಕು. ಅವರು ನನ್ನ ನ್ಯಾಯಪ್ರಮಾಣಗಳನ್ನೂ ನಿಯಮಗ ಳನ್ನೂ ನನ್ನ ಸಭೆಗಳಲ್ಲಿ ಕೈಕೊಳ್ಳಬೇಕು; ನನ್ನ ಸಬ್ಬತ್ತು ಗಳನ್ನು ಪರಿಶುದ್ಧಪಡಿಸಬೇಕು.
25. ಅವರು ಸತ್ತ ಮನುಷ್ಯರ ಬಳಿಗೆ ಬಂದು ಅಶುದ್ಧರಾಗಬಾರದು. ಆದರೆ ತಂದೆ ತಾಯಿ, ಮಗ, ಮಗಳು, ಸಹೋದರ, ಮತ್ತು ಗಂಡ ಇಲ್ಲದ ಸಹೋದರಿ, ಇವರಿಗೋಸ್ಕರ ಅವರು ಅಶುದ್ಧರಾಗಬಹುದು.
26. ಅವನು ಶುದ್ಧನಾದ ಮೇಲೆ ಅವನಿಗೆ ಏಳು ದಿವಸಗಳನ್ನು ಪ್ರತ್ಯೇಕಿಸಬೇಕು.
27. ಅವನು ಪರಿಶುದ್ಧ ಸ್ಥಳದಲ್ಲಿ ಸೇವೆ ಮಾಡುವದ ಕ್ಕೋಸ್ಕರ ಒಳಗಿನ ಅಂಗಳದ ಪರಿಶುದ್ಧ ಸ್ಥಳಕ್ಕೆ ಬರುವ ದಿನದಲ್ಲಿ ತನ್ನ ಪಾಪ ಬಲಿಯನ್ನು ಅರ್ಪಿಸಬೇಕೆಂದು ದೇವರಾದ ಕರ್ತನು ಹೇಳುತ್ತಾನೆ.
28. ಇದು ಅವರಿಗೆ ಬಾಧ್ಯತೆಯಾಗಿರುವದು; ನಾನೇ ಅವರಿಗೆ ಬಾಧ್ಯನಾಗಿ ರುವೆನು; ನೀವು ಇಸ್ರಾಯೇಲಿನಲ್ಲಿ ಅವರಿಗೆ ಸ್ವಾಸ್ತ್ಯ ವನ್ನು ಕೊಡಬಾರದು ಯಾಕಂದರೆ ನಾನೇ ಅವರಿಗೆ ಸ್ವಾಸ್ತ್ಯವಾಗಿರುವೆನು.
29. ಆಹಾರದ ಅರ್ಪಣೆಯನ್ನು ಪಾಪ ಬಲಿಯನ್ನೂ ಅಪರಾಧ ಬಲಿಯನ್ನೂ ಅವರು ತಿನ್ನಬೇಕು; ಇಸ್ರಾಯೇಲಿನಲ್ಲಿ ಪ್ರತಿಷ್ಠೆ ಮಾಡಿದ್ದೆಲ್ಲವೂ ಅವರಿಗೆ ಸಲ್ಲಬೇಕು.
30. ಇದಲ್ಲದೆ ಎಲ್ಲಾ ಪ್ರಥಮ ಫಲಗಳಲ್ಲಿ ಉತ್ಕೃಷ್ಟ ವಾದದ್ದೂ ನೀವು ನನಗೆ ಪ್ರತ್ಯೇ ಕಿಸಿ ಸಮರ್ಪಿಸಿದ ಎಲ್ಲಾ ಪದಾರ್ಥಗಳು ಯಾಜಕ ನದ್ದಾಗಬೇಕು; ನಿಮ್ಮ ಮನೆಯು ಆಶೀರ್ವಾದಕ್ಕೆ ನೆಲೆಯಾಗುವಂತೆ ಮೊದಲನೇ ಹಿಟ್ಟನ್ನು ನೀವು ಯಾಜಕ ರಿಗೆ ಕೊಡ ತಕ್ಕದ್ದು.
31. ಯಾಜಕರು, ತಾನಾಗಿ ಸತ್ತು ಬಿದ್ದ ಅಥವಾ ಕಾಡುಮೃಗದಿಂದ ಕೊಲ್ಲಲ್ಪಟ್ಟಂತ ಪಕ್ಷಿಯನ್ನಾಗಲಿ ಪಶುವನ್ನಾಗಲಿ ತಿನ್ನಬಾರದು.

Chapter 45

1. ಇದಲ್ಲದೆ ನೀವು ದೇಶವನ್ನು ಚೀಟುಹಾಕಿಸ್ವಾಸ್ತ್ಯವಾಗಿ ಹಂಚುವಾಗ, ಒಂದು ಪರಿಶುದ್ಧ ಭಾಗವನ್ನು ಪ್ರತ್ಯೇಕಿಸಿ, ಕರ್ತನಿಗೆ ಕಾಣಿಕೆಯಾಗಿ ಕೊಡಬೇಕು; ಅದು ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಹತ್ತು ಸಾವಿರ ಮೊಳ ಅಗಲವಾಗಿಯೂ ಇರಲಿ, ಇದು ಅದರ ಎಲ್ಲಾ ಮೇರೆಗಳಲ್ಲಿ ಸುತ್ತಲಾಗಿ ಪರಿಶುದ್ಧವಾಗಿರಲಿ.
2. ಇಲ್ಲಿ ಈ ಪರಿಶುದ್ಧ ಸ್ಥಳಕ್ಕಾಗಿ ಐನೂರು ಮೊಳ ಉದ್ದದ, ಐನೂರು ಮೊಳ ಅಗಲದ ಚಚ್ಚೌಕವಾಗಿರುವದು, ಉಪನಗರಕ್ಕಾಗಿ ಅಲ್ಲಿ ಸುತ್ತಲೂ ಐವತ್ತು ಮೊಳ ಇರುವದು.
3. ಈ ಅಳತೆಯು, ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಹತ್ತು ಸಾವಿರ ಮೊಳ ಅಗಲವಾಗಿಯೂ ಇರುವಂತೆ ನೀನು ಅಳೆಯಬೇಕು ಪರಿಶುದ್ಧ ಸ್ಥಳವೂ ಅತಿ ಶುದ್ಧವಾದದ್ದೂ ಇರಬೇಕು; ಪರಿಶುದ್ಧವಾದ ಜಾಗವೂ ಆಗಿರಬೇಕು.
4. ದೇಶದ ಪರಿಶುದ್ಧ ಭಾಗವು ಕರ್ತನಿಗೆ ಸೇವೆ ಮಾಡಲು ಸವಿಾಪಿ ಸುವಂತ, ಪರಿಶುದ್ಧ ಸ್ಥಳದ ಸೇವಕರಾದಂತ ಯಾಜಕರ ದಾಗಿರಬೇಕು; ಅದು ಅವರ ಮನೆಗಳಿಗೆ ಸ್ಥಳವಾಗಿಯೂ ಪರಿಶುದ್ಧ ಸ್ಥಳಕ್ಕೆ ಪರಿಶುದ್ಧ ಜಾಗವಾಗಿಯೂ ಇರಬೇಕು.
5. ಇಪ್ಪತ್ತೈದು ಸಾವಿರ ಮೊಳ ಉದ್ದವೂ ಹತ್ತು ಸಾವಿರ ಮೊಳ ಅಗಲವೂ ಆಲಯದಲ್ಲಿ ಸೇವೆಮಾಡುವ ಲೇವಿಯರಿಗೆ ತಮಗೆ ಸ್ವಾಸ್ತ್ಯವಾಗಿ ಇಪ್ಪತ್ತು ಕೊಠಡಿ ಗಳಿಗಾಗಿ ಇರಬೇಕು.
6. ನೀವು ಪಟ್ಟಣದ ಸ್ವಾಸ್ತ್ಯವನ್ನು ಕಾಣಿಕೆಯಾದ ಪರಿಶುದ್ಧ ಭಾಗಕ್ಕೆ ಎದುರಾಗಿ ಐದು ಸಾವಿರ ಮೊಳ ಅಗಲವಾಗಿಯೂ ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ನೇಮಿಸಬೇಕು, ಇದು ಸಮಸ್ತ ಇಸ್ರಾಯೇಲಿನ ಮನೆತನದವರಿಗೋಸ್ಕರ ಇರುವದು.
7. ಕಾಣಿಕೆಯಾದ ಪರಿಶುದ್ಧ ಭಾಗಕ್ಕೂ ನಗರದ ಸ್ವಾಸ್ತ್ಯಕ್ಕೂ ಈ ಕಡೆಯಲ್ಲಿಯೂ ಆ ಕಡೆಯಲ್ಲಿಯೂ ಕಾಣಿಕೆಯಾದ ಪರಿಶುದ್ಧ ಭಾಗದ ಮುಂದೆಯೂ ಪಟ್ಟಣದ ಸ್ವಾಸ್ತ್ಯದ ಮುಂದೆಯೂ ಅದರ ಪಶ್ಚಿಮದ ಕಡೆಯಲ್ಲಿ ಪಶ್ಚಿಮಕ್ಕೂ ಅದರ ಪೂರ್ವದ ಕಡೆಯಲ್ಲಿ ಪೂರ್ವಕ್ಕೂ ಪ್ರಭುವಿಗೆ ಪಾಲು ಇರಬೇಕು; ಅದರ ಉದ್ದವು ಭಾಗಗಳಲ್ಲಿ ಒಂದಕ್ಕೆ ಎದುರಾಗಿ, ಪಶ್ಚಿಮ ಮೇರೆ ಮೊದಲುಗೊಂಡು ಪೂರ್ವ ಮೇರೆಯ ತನಕ ಇರಬೇಕು.
8. ಈ ಭೂಮಿಯು ಅವನಿಗೆ ಇಸ್ರಾಯೇಲಿನಲ್ಲಿ ಸ್ವಾಸ್ತ್ಯವಾಗಿರುವದು; ಆಗ ನನ್ನ ಪ್ರಭುಗಳು ನನ್ನ ಜನರನ್ನು ಉಪದ್ರವಪಡಿಸು ವದೇ ಇಲ್ಲ; ಉಳಿದ ಭೂಮಿಯನ್ನು ಇಸ್ರಾಯೇಲಿನ ಮನೆತನದವರಿಗೆ ಅವರ ಗೋತ್ರಗಳ ಅನುಸಾರವಾಗಿ ಕೊಡಲ್ಪಡುವದು.
9. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಓ ಇಸ್ರಾಯೇಲಿನ ಪ್ರಭುಗಳೇ, ನೀವು ಸಾಕುಮಾಡಿರಿ, ಬಲಾತ್ಕಾರವನ್ನು ಸುಲಿಗೆಯನ್ನು ಬಿಡಿರಿ; ನ್ಯಾಯವನ್ನೂ ನೀತಿಯನ್ನೂ ಮಾಡಿರಿ; ನನ್ನ ಜನರನ್ನು ಓಡಿಸಬೇಡಿರಿ ಎಂದು ದೇವರಾದ ಕರ್ತನು ಹೇಳುತ್ತಾನೆ.
10. ನ್ಯಾಯ ವಾದ ತ್ರಾಸೂ ನ್ಯಾಯವಾದ ಏಫವೂ ನ್ಯಾಯವಾದ ಬತ್‌ (ಅಳತೆ) ನಿಮಗಿರಬೇಕು.
11. ಬತ್‌ ಹೋಮೆ ರಿನ ಹತ್ತನೇ ಪಾಲನ್ನೂ ಎಫವು ಹೋಮೆರಿನ ಹತ್ತನೆ ಪಾಲನ್ನೂ ಹಿಡಿಯುವ ಹಾಗೆ ಏಫಕ್ಕೂ ಬತಗೂ ಒಂದೇ ಅಳತೆ ಇರಬೇಕು. ಅವುಗಳ ಅಳತೆ ಹೋಮೆ ರಿನ ಅಳತೆಯ ಪ್ರಕಾರ ಇರಬೇಕು.
12. ಶೇಕೆಲ್‌ ಇಪ್ಪತ್ತು ಗೇರಾ ಆಗಿರಬೇಕು. ನಿಮ್ಮ ಮಾನೆಯು ಇಪ್ಪತ್ತು ಶೇಕೆಲು ಇಪ್ಪತ್ತೈದು ಶೇಕೆಲು ಮತ್ತು ಹದಿನೈದು ಶೇಕೆಲು ಆಗಿರಬೇಕು.
13. ನೀವು ಅರ್ಪಿಸಬೇಕಾದ ಕಾಣಿಕೆಗಳು ಗೋಧಿಯ ಹೋಮೆರಿನಲ್ಲಿ ಏಫದ ಆರನೇ ಪಾಲು ಮತ್ತು ಬಾರ್ಲಿಯ ಹೋಮೆರಿನಲ್ಲಿ ಏಫದ ಆರನೇ ಪಾಲನ್ನು ಕೊಡಬೇಕು,
14. ಎಣ್ಣೆಗೆ ಸಂಬಂಧಿಸಿದವು ಗಳಲ್ಲಿ ಬತ್‌ ಎಣ್ಣೆಯ ನಿಯಮ ಏನಂದರೆ--ಹತ್ತು ಬತಗಳುಳ್ಳ ಹೋಮೆರ್‌ ಇರುವ ಕೋರಿನೊಳಗಿಂದ ನೀವು ಬತ್ತಿನ ಹತ್ತನೇ ಪಾಲನ್ನು ಅರ್ಪಿಸಬೇಕು; ಯಾಕಂದರೆ ಹತ್ತು ಬತ್‌ಗಳು ಒಂದೇ ಹೋಮೆರ್‌.
15. ಇಸ್ರಾಯೇಲಿನ ನೀರುಗಳ ಮೇವುಗಳಿಂದ ಮೇದಿ ರುವ ಇನ್ನೂರರೊಳಗೆ ಒಂದು ಕುರಿಮರಿಯನ್ನು ಮಂದೆಯೊಳಗಿಂದ ಅರ್ಪಣೆಗಾಗಿಯೂ ದಹನಬಲಿ ಗಾಗಿಯೂ ಸಮಾಧಾನ ಯಜ್ಞಕ್ಕಾಗಿಯೂ ಅವರಿ ಗೋಸ್ಕರ ಸಮಾಧಾನಕ್ಕಾಗಿ ಅರ್ಪಿಸಬೇಕೆಂದು ದೇವ ರಾದ ಕರ್ತನು ಹೇಳುತ್ತಾನೆ.
16. ದೇಶದಲ್ಲಿರುವ ಜನ ರೆಲ್ಲರೂ ಈ ಕಾಣಿಕೆಯನ್ನು ಇಸ್ರಾಯೇಲನ ಪ್ರಭು ವಿಗಾಗಿ ಕೊಡಬೇಕು.
17. ಹಬ್ಬಗಳಲ್ಲಿಯೂ ಅಮಾ ವಾಸ್ಯೆಗಳಲ್ಲಿಯೂ ಸಬ್ಬತ್ತುಗಳಲ್ಲಿಯೂ ಇಸ್ರಾಯೇಲಿನ ಮನೆತನದವರ ಎಲ್ಲಾ ಸಭೆಗಳಲ್ಲಿಯೂ ಹೋಮ ಗಳನ್ನು ಅರ್ಪಣೆಗಳನ್ನು ನೈವೇದ್ಯಗಳನ್ನು ಕೊಡುವದು ಪ್ರಭುವಿನ ಕೆಲಸವಾಗಿರುವದು; ಅವನೇ ಇಸ್ರಾಯೇ ಲಿನ ಮನೆತನದವರಿಗಾಗಿ ಸಮಾಧಾನಕ್ಕಾಗಿ ಪಾಪಬಲಿ ಯನ್ನೂ ಅರ್ಪಣೆಯನ್ನೂ ದಹನಬಲಿಯನ್ನೂ ಸಮಾಧಾನ ಯಜ್ಞವನ್ನೂ ಸಿದ್ಧಮಾಡಬೇಕು.
18. ದೇವರಾದ ಕರ್ತನು ಹೀಗೆ ಹೇಳುತ್ತಾನೆ-- ಮೊದಲನೇ ತಿಂಗಳಿನ ಮೊದಲನೇ ದಿನದಲ್ಲಿ ನೀನು ಪೂರ್ಣಾಂಗವಾದ ಒಂದು ಎಳೇಹೋರಿಯನ್ನು ತೆಗೆದುಕೊಂಡು ಪರಿಶುದ್ಧ ಸ್ಥಳವನ್ನು ಶುದ್ಧಮಾಡ ಬೇಕು.
19. ಯಾಜಕನು ಪಾಪಬಲಿಯ ರಕ್ತವನ್ನು ತೆಗೆದುಕೊಂಡು ಬಲಿಪೀಠದ ಅಂಚಿನ ನಾಲ್ಕು ಮೂಲೆ ಗಳಿಗೂ ಒಳಗಿನ ಅಂಗಳದ ಬಾಗಿಲಿನ ಅಂಚಿಗೆ ಹಚ್ಚಬೇಕು;
20. ಈ ಪ್ರಕಾರ ನೀನು ತಿಂಗಳಿನ ಏಳನೇ ದಿನದಲ್ಲಿ ತಪ್ಪಿ ಹೋಗುವ ಎಲ್ಲರಿಗಾಗಿಯೂ ಬುದ್ಧಿ ಹೀನರಿಗಾಗಿಯೂ ಮಾಡಬೇಕು. ಹೀಗೆ ನೀವು ಆಲಯಕ್ಕೋಸ್ಕರವಾಗಿ ಸಮಾಧಾನಪಡಿಸಬೇಕು.
21. ಮೊದಲನೇ ತಿಂಗಳಿನ ಹದಿನಾಲ್ಕನೇ ದಿನದಲ್ಲಿ ನಿಮಗೆ ಏಳು ದಿನಗಳ ಹಬ್ಬವಾಗಿರುವ ಪಸ್ಕ ಹಬ್ಬವು ಇರಬೇಕು; ಅದರಲ್ಲಿ ನೀವು ಹುಳಿಯಿಲ್ಲದ ರೊಟ್ಟಿ ಯನ್ನು ತಿನ್ನಬೇಕು.
22. ಆ ದಿನದಲ್ಲಿ ಪ್ರಭುವು ತನಗಾಗಿಯೂ ದೇಶದ ಎಲ್ಲಾ ಜನರಿಗಾಗಿಯೂ ಪಾಪಬಲಿಗಾಗಿ ಹೋರಿಯನ್ನು ಸಿದ್ಧಮಾಡಬೇಕು.
23. ಹಬ್ಬದ ಏಳು ದಿವಸಗಳಲ್ಲಿ ಪ್ರತಿ ದಿನವೂ ಅವನು ಕರ್ತನಿಗೆ ದಹನಬಲಿಗಾಗಿ ಪೂರ್ಣಾಂಗವಾದ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಮತ್ತು ಪ್ರತಿ ದಿನವೂ ಪಾಪಬಲಿಗಾಗಿ ಮೇಕೆಯ ಮರಿಯನ್ನೂ ಸಿದ್ಧಮಾಡಬೇಕು;
24. ಅವನು ಹೋರಿಗೆ ಒಂದು ಏಫ, ಟಗರಿಗೆ ಒಂದು ಏಫ, ಈ ಪ್ರಕಾರ ಆಹಾರ ಅರ್ಪಣೆಯನ್ನೂ, ಏಫಕ್ಕೆ ಒಂದು ಹಿನ್ನು ಎಣ್ಣೆಯನ್ನೂ ಸಿದ್ಧಮಾಡಬೇಕು.
25. ಏಳನೇ ತಿಂಗಳಿನ ಹದಿನೈದನೇ ದಿನದಲ್ಲಿ ಏಳು ದಿವಸಗಳ ಹಬ್ಬದಲ್ಲಿ ಅವನು ಪಾಪಬಲಿಯ ವಿಷಯವಾಗಿಯೂ ದಹನಬಲಿಯ ವಿಷಯವಾಗಿಯೂ ಆಹಾರದ ಅರ್ಪಣೆಯ ವಿಷಯ ವಾಗಿಯೂ ಎಣ್ಣೆಯ ವಿಷಯವಾಗಿಯೂ ಇದೇ ರೀತಿ ಮಾಡಬೇಕು.

Chapter 46

1. ದೇವರಾದಕರ್ತನು ಹೀಗೆ ಹೇಳುತ್ತಾನೆ--ಒಳಗಿನ ಅಂಗಳದ ಪೂರ್ವದಿಕ್ಕಿಗೆ ಎದುರಾಗಿರುವ ಬಾಗಲು ಕೆಲಸ ನಡೆಯುವ ಆರು ದಿವಸಗಳಲ್ಲಿ ಮುಚ್ಚಲ್ಪಡಬೇಕು; ಆದರೆ ಸಬ್ಬತ್‌ ದಿವಸದಲ್ಲಿ ಅದು ತೆರೆಯಲ್ಪಡಬೇಕು, ಅಮಾವಾಸ್ಯೆಯ ದಿನದಲ್ಲೂ ಅದು ತೆರೆಯಲ್ಪಡಬೇಕು.
2. ಪ್ರಭುವು ಆ ಬಾಗಲಿನ ದ್ವಾರಾಂಗಣ ಮಾರ್ಗವಾಗಿ ಹೊರಗಿ ನಿಂದ ಪ್ರವೇಶಿಸಿ ಬಾಗಲಿನ ಕಂಬದ ಬಳಿಯಲ್ಲಿ ನಿಲ್ಲಬೇಕು, ಆಗ ಯಾಜಕರು ಅವನ ದಹನಬಲಿಯನ್ನು ಸಮಾಧಾನದ ಬಲಿಗಳನ್ನು ಸಿದ್ಧಮಾಡಬೇಕು; ಬಾಗ ಲಿನ ಹೊಸ್ತಿಲಲ್ಲಿ ಆರಾಧಿಸಿ ಹೋಗಬೇಕು. ಆದರೆ ಬಾಗಲು ಸಂಜೆಯವರೆಗೂ ಮುಚ್ಚಲ್ಪಡಬಾರದು;
3. ದೇಶದ ಜನರು ಸಬ್ಬತ್ತುಗಳಲ್ಲಿಯೂ, ಅಮಾವಾಸ್ಯೆ ಗಳಲ್ಲಿಯೂ ಈ ಬಾಗಲಿನ ಕದದ ಹತ್ತಿರ ಕರ್ತನ ಮುಂದೆ ಇದೇ ರೀತಿ ಆರಾಧಿಸಬೇಕು.
4. ಪ್ರಧಾನರು ಕರ್ತನಿಗೆ ಸಬ್ಬತ್‌ ದಿನದಲ್ಲಿ ಪೂರ್ಣಾಂಗವಾದ ಆರು ಕುರಿಮರಿಗಳು, ಪೂರ್ಣಾಂಗವಾದ ಒಂದು ಟಗರು ದಹನಬಲಿಯಾಗಿ ಅರ್ಪಿಸಬೇಕು.
5. ಹೇಗಂದರೆ ಆಹಾರದ ಅರ್ಪಣೆಯಾಗಿ ಟಗರಿಗೆ ಒಂದು ಎಫ, ಕುರಿಮರಿಗೆ ತಕ್ಕ ಅವನ ಕೈಲಾದಂತ ಆಹಾರ ಅರ್ಪ ಣೆಯು ಒಂದಕ್ಕೆ ಎಣ್ಣೆಯ ಒಂದು ಹಿನ್ನನ್ನು ಅರ್ಪಿಸ ಬೇಕು;
6. ಅಮಾವಾಸ್ಯೆಯ ದಿನದಲ್ಲಿ ಪೂರ್ಣಾಂಗ ವಾದ ಒಂದು ಎಳೇ ಹೋರಿ, ಆರು ಕುರಿಮರಿಗಳು, ಒಂದು ಟಗರು ಇವು ದೋಷವಿಲ್ಲದ್ದಾಗಿರಬೇಕು.
7. ಅವನು ಹೋರಿಗೆ ಒಂದು ಏಫವನ್ನೂ ಟಗರಿಗೆ ಒಂದು ಏಫವನ್ನೂ ಮತ್ತು ಕುರಿಮರಿಗೆ ಅವನ ಕೈಲಾಗುವಷ್ಟು ಏಫ ಒಂದಕ್ಕೆ ಎಣ್ಣೆಯ ಒಂದು ಹಿನ್ನನ್ನು ಅವನು ಆಹಾರದ ಅರ್ಪಣೆಗಾಗಿ ಸಿದ್ಧ ಮಾಡಬೇಕು.
8. ಪ್ರಧಾನರು ಪ್ರವೇಶಿಸುವಾಗ, ಅವನು ಬಾಗಲಿನ ದ್ವಾರಾಂಗಣದ ಪ್ರಕಾರವಾಗಿ ಪ್ರವೇಶಿಸಿ, ಅದೇ ಮಾರ್ಗವಾಗಿ ಹೊರಗೆ ಹೋಗಬೇಕು.
9. ಆದರೆ ದೇಶದ ಜನರು ಪರಿಶುದ್ಧ ಹಬ್ಬಗಳಲ್ಲಿ ಕರ್ತನ ಮುಂದೆ ಬರುವಾಗ ಉತ್ತರದ ಬಾಗಲಿನಿಂದ ಪ್ರವೇಶಿಸಿ ಆರಾ ಧಿಸಿದ ಮೇಲೆ ಅವನು ದಕ್ಷಿಣ ಬಾಗಲಿನ ಮಾರ್ಗ ವಾಗಿ ಹೊರಗೆ ಹೋಗಬೇಕು. ದಕ್ಷಿಣ ಬಾಗಲಿನ ಮಾರ್ಗವಾಗಿ ಪ್ರವೇಶಿಸಿದವನು ಉತ್ತರ ಬಾಗಲಿನ ಮಾರ್ಗವಾಗಿ ಹೊರಗೆ ಹೋಗಬೇಕು. ಅವನು ಪ್ರವೇಶಿಸಿದ ಬಾಗಲಿನ ಮಾರ್ಗವಾಗಿಯೇ ತಿರುಗಿ ಹೊರಗೆ ಹೋಗಬಾರದು; ಆದರೆ ಅದಕ್ಕೆ ಎದುರಾಗಿ ಹೊರಗೆ ಹೋಗಬೇಕು.
10. ಅವರು ಒಳಗೆ ಹೋಗು ವಾಗ ಅವರ ಮಧ್ಯದಲ್ಲಿರುವ ಪ್ರಧಾನನು ಒಳಗೆ ಹೋಗಬೇಕು. ಹೊರಗೆ ಹೋಗುವಾಗ ಹೊರಗೆ ಬರಬೇಕು.
11. ಪರಿಶುದ್ಧ ಹಬ್ಬಗಳಲ್ಲಿಯೂ ಸಭೆಗಳ ಲ್ಲಿಯೂ ಆಹಾರದ ಅರ್ಪಣೆಗೆ ಹೋರಿಗೆ ಒಂದು ಏಫವೂ ಟಗರಿಗೆ ಒಂದು ಏಫವೂ ಕುರಿಮರಿಗಳಿಗೆ ಅವರ ಕೈಲಾಗುವಷ್ಟು ಕೊಡಬೇಕು. ಏಫ ಒಂದಕ್ಕೆ ಎಣ್ಣೆಯ ಒಂದು ಹಿನ್ನು ಇರಬೇಕು.
12. ಪ್ರಧಾನನು ಉಚಿತವಾದ ದಹನಬಲಿಯನ್ನಾಗಲಿ ಸಮಾಧಾನದ ಬಲಿಗಳನ್ನಾಗಲಿ ಉಚಿತವಾಗಿ ಕರ್ತನಿಗೆ ಸಿದ್ಧಮಾಡು ವಾಗ ಅವರು ಪೂರ್ವದಿಕ್ಕಿಗೆ ಎದುರಾಗಿರುವ ಬಾಗಲನ್ನು ಅವನಿಗೆ ತೆರೆಯಬೇಕು; ಆಗ ಅವನು ತನ್ನ ದಹನಬಲಿಯನ್ನು ತನ್ನ ಸಮಾಧಾನದ ಬಲಿಗಳನ್ನು ಸಬ್ಬತ್ತು ದಿನದಲ್ಲಿ ಮಾಡಿದ ಹಾಗೆ ಸಿದ್ದಮಾಡಿ ಹೊರಗೆ ಹೋಗಬೇಕು, ಅವನು ಹೊರಗೆ ಹೋದ ಮೇಲೆ ಬಾಗಲನ್ನು ಮುಚ್ಚಬೇಕು.
13. ನೀನು ಪ್ರತಿದಿನವೂ ಕರ್ತನಿಗೆ ಒಂದು ವರುಷದ ದೋಷರಹಿತವಾದ ಕುರಿಮರಿಯ ದಹನಬಲಿಯನ್ನು ಸಿದ್ದಮಾಡಬೇಕು. ಹೀಗೆ ಪ್ರತಿದಿನವೂ ಮುಂಜಾನೆ ನಡೆಯಬೇಕು.
14. ಅದಕ್ಕೆ ಅರ್ಪಣೆಯಾಗಿ ಪ್ರತಿದಿನದ ಮುಂಜಾನೆಯಲ್ಲಿ ನೀನು ಏಫದ ಆರನೇ ಪಾಲನ್ನು ಗೋಧಿ ಹಿಟ್ಟಿನಲ್ಲಿ ಕಲಿಸುವ ಹಾಗೆ ಎಣ್ಣೆಯ ಹಿನ್ನಿನಲ್ಲಿ ಮೂರನೇ ಪಾಲನ್ನು ಸಿದ್ಧಮಾಡಬೇಕು. ಇದು ಕರ್ತನಿಗೆ ನಿತ್ಯನಿಯಮದ ಪ್ರಕಾರ ಎಡೆಬಿಡದೆ ಆಹಾರದ ಅರ್ಪಣೆಯಾಗಿದೆ.
15. ಹೀಗೆ ಅವರು ಕುರಿಮರಿಯನ್ನು ಆಹಾರದ ಅರ್ಪಣೆಯನ್ನು ಎಣ್ಣೆಯನ್ನು ಪ್ರತಿದಿನದ ಮುಂಜಾನೆಯಲ್ಲಿ ಎಡೆಬಿಡದೆ ದಹನಬಲಿಯನ್ನಾಗಿ ಸಿದ್ಧಮಾಡಬೇಕು.
16. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಪ್ರಧಾನನು ತನ್ನ ಕುಮಾರರಲ್ಲಿ ಯಾವನಿಗಾದರೂ ದಾನವನ್ನು ಕೊಟ್ಟರೆ ಅದರ ಬಾಧ್ಯತೆಯು ಅವನ ಕುಮಾರರಿಗೆ ಸಲ್ಲಬೇಕು. ಅದು ಬಾಧ್ಯವಾಗಿ ಅವರ ಸ್ವಾಸ್ತ್ಯವಾಗಿದೆ.
17. ಆದರೆ ಆತನು ತನ್ನ ಸ್ವಾಸ್ತ್ಯದೊಳ ಗಿಂದ ತನ್ನ ಸೇವಕರಲ್ಲಿ ಒಬ್ಬರಿಗೆ ದಾನವಾಗಿ ಕೊಟ್ಟರೆ, ಅದು ಬಿಡುಗಡೆ ವರುಷದ ವರೆಗೂ ಅವನಿಗಾಗಿ ರುವದು; ಆ ಮೇಲೆ ಮತ್ತೆ ಪ್ರಧಾನನಿಗೆ ಸೇರಬೇಕು. ಅವನ ಸ್ವಾಸ್ಥ್ಯವು ಅವನ ಕುಮಾರರಿಗೆ ಮಾತ್ರ ಸಲ್ಲಬೇಕು.
18. ಇದಾದ ಮೇಲೆ ಪ್ರಧಾನನು ಜನರ ಸ್ವಾಸ್ತ್ಯವನ್ನು ಬಲವಂತವಾಗಿ ತೆಗೆದುಕೊಂಡು ಬಾಧ್ಯತೆ ಯೊಳಗಿಂದ ಅವರನ್ನು ತಳ್ಳಬಾರದು ನನ್ನ ಜನರು ತಮ್ಮ ತಮ್ಮ ಬಾಧ್ಯತೆಯೊಳಗಿಂದ ಚದರಿಸಲ್ಪಡದ ಹಾಗೆ ಅವನು ತನ್ನ ಸ್ವಂತ ಬಾಧ್ಯತೆಯಿಂದಲೇ ತನ್ನ ಕುಮಾರರಿಗೆ ಸ್ವಾಸ್ತ್ಯವನ್ನು ಕೊಡಬೇಕು.
19. ಆಮೇಲೆ ಅವನು ನನ್ನನ್ನು ಬಾಗಲಿನ ಪಕ್ಕದಲ್ಲಿ ಪ್ರವೇಶವಿದ್ದ ಉತ್ತರಕ್ಕೆ ಅಭಿಮುಖವಾದ ಯಾಜಕರ ಪರಿಶುದ್ಧ ಕೊಠಡಿಗೆ ಕರೆದುಕೊಂಡು ಹೋದನು. ಅಲ್ಲಿ ಇಗೋ, ಎರಡು ಕಡೆಗಳಲ್ಲಿ ಪಶ್ಚಿಮದ ಕಡೆಗೆ ಒಂದು ಸ್ಥಳವಿತ್ತು.
20. ಆಗ ಅವನು ನನಗೆ--ಯಾಜಕರು ಅಪರಾಧ ಬಲಿಯನ್ನೂ ಪಾಪ ಬಲಿಯನ್ನೂ ಬೇಯಿಸಿದ ಆಹಾರದ ಅರ್ಪಣೆಯನ್ನು ಸುಡುವಂತೆ ಏರ್ಪಡಿ ಸಿರುವ ಸ್ಥಳವು ಇದೇ. ಜನರನ್ನು ಪರಿಶುದ್ಧ ಮಾಡು ವದಕ್ಕೆ ಅವರು ಅವುಗಳನ್ನು ಹೊರಗಿನ ಅಂಗಳಕ್ಕೆ ತೆಗೆದುಕೊಂಡು ಹೋಗಬಾರದು ಎಂದು ಹೇಳಿದನು.
21. ಆಗ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಅಂಗಳದ ನಾಲ್ಕು ಮೂಲೆ ಗಳನ್ನು ಹಾದುಹೋಗುವಂತೆ ಮಾಡಿದನು; ಇಗೋ, ಅಂಗಳದ ಒಂದೊಂದು ಮೂಲೆಯಲ್ಲಿ ಒಂದು ಅಂಗಳ ಇತ್ತು.
22. ಅಂಗಳದ ನಾಲ್ಕು ಮೂಲೆಯಲ್ಲಿ ನಲವತ್ತು ಮೊಳ ಉದ್ದವಾಗಿಯೂ ಮೂವತ್ತು ಮೊಳ ಅಗಲ ವಾಗಿಯೂ ಕೂಡಿಕೊಂಡಿದ್ದವು. ಆ ನಾಲ್ಕೂ ಮೂಲೆಗಳಿಗೂ ಒಂದೇ ಅಳತೆಯಾಗಿತ್ತು.
23. ಅವು ಗಳಲ್ಲಿ ಅಂದರೆ ಆ ನಾಲ್ಕರಲ್ಲಿ ಸುತ್ತಲೂ ಸಾಲು ಇತ್ತು. ಆ ಸಾಲುಗಳ ಕೆಳಗೆ ಸುತ್ತಲೂ ಬೇಯಿಸುವ ಸ್ಥಳಗಳು ಮಾಡಲ್ಪಟ್ಟಿದ್ದವು.
24. ಆ ಮೇಲೆ ಅವನು ನನಗೆ--ಇವು ಮನೆಯ ಸೇವಕರು ಜನರ ಬಲಿಯನ್ನು ಬೇಯಿಸುವಂತ ಸ್ಥಳಗಳು ಎಂದು ಹೇಳಿದನು.

Chapter 47

1. ಆಮೇಲೆ ಅವನು ನನ್ನನ್ನು ಮತ್ತೆ ಆಲಯದ ಬಾಗಲಿನ ಕಡೆಗೆ ಕರೆದುಕೊಂಡು ಹೋದನು. ಇಗೋ, ಆಲಯದ ಹೊಸ್ತಿಲಿನ ಕೆಳಗಿ ನಿಂದ ನೀರು ಹೊರಟು ಪೂರ್ವದ ಕಡೆಗೆ ನೀರು ಹರಿಯಿತು; ಆಲಯದ ಮುಂಭಾಗದಲ್ಲಿ ನೀರು ಇತ್ತು; ಆ ನೀರು ಬಲಪಾರ್ಶ್ವದಿಂದ ಯಜ್ಞವೇದಿಯ ದಕ್ಷಿಣದ ಕಡೆಗೆ ಹರಿಯಿತು.
2. ಆ ಮೇಲೆ ಅವನು ನನ್ನನ್ನು ಬಾಗಲಿನ ಮಾರ್ಗವಾಗಿ ಉತ್ತರ ಕಡೆಗೆ ಕರೆದುಕೊಂಡು ಹೋಗಿ ನನ್ನನ್ನು ಹೊರಗಿನ ಬಾಗಲಿನ ವರೆಗೂ ಹೊರಗಿನ ಮಾರ್ಗವಾದ ಪೂರ್ವಕ್ಕೆ ಅಭಿಮುಖವಾದ ಮಾರ್ಗವನ್ನು ಸುತ್ತುವಂತೆ ಮಾಡಿದನು. ಇಗೋ, ಅಲ್ಲಿಯೂ ಬಲಗಡೆಯಲ್ಲಿಯೂ ನೀರು ಹರಿಯುತ್ತಿತ್ತು.
3. ಕೈಯಲ್ಲಿ ನೂಲು ಇದ್ದ ಆ ಮನುಷ್ಯನು ಪೂರ್ವದ ಕಡೆಗೆ ಹೊರಟು ಸಾವಿರ ಮೊಳ ಅಳೆದ ಮೇಲೆ, ನನ್ನನ್ನು ನೀರಿನಿಂದ ದಾಟಿಸಿದನು; ಅಲ್ಲಿ ನೀರು ಹೆಜ್ಜೆ ಮುಳುಗುವಷ್ಟಿತ್ತು. 4
4. ಅವನು ಸಾವಿರ ಮೊಳಗಳನ್ನು ಅಳೆದ ಮೇಲೆ ನನ್ನನ್ನು ನೀರಿನಿಂದ ದಾಟಿಸಲು, ಆಗ ನೀರು ಮೊಣಕಾಲುಗಳ ತನಕ ಇತ್ತು; ಇನ್ನೂ ಸಾವಿರ ಅಳೆದು ನನ್ನನ್ನು ದಾಟಿಸಲಾಗಿ ನೀರು ಸೊಂಟದವರೆಗೂ ಇತ್ತು.
5. ಇನ್ನೂ ಸಾವಿರ ಅಳೆದ ಮೇಲೆ ಅದು ನಾನು ದಾಟಲಾಗದಂತ ನದಿಯಾಗಿತ್ತು; ನೀರು ಹೆಚ್ಚಿ, ಈಜುವಷ್ಟಾಗಿ ದಾಟಲಾಗದಷ್ಟು ನದಿಯಾಗಿತ್ತು.
6. ಅವನು ನನಗೆ ಹೇಳಿದ್ದೇನಂದರೆ, ಮನುಷ್ಯಪುತ್ರನೇ; ನೀನು ಇದನ್ನು ನೋಡಿದೆಯಾ ಎಂದು ನನ್ನನ್ನು ನಡೆಸಿಕೊಂಡು ಮತ್ತೆ ನದಿಯ ತೀರಕ್ಕೆ ಕರೆತಂದನು.
7. ನಾನು ತಿರಿಗಿ ಬಂದಾಗ ಇಗೋ, ನದಿಯ ತೀರದಲ್ಲಿ ಆಕಡೆಯೂ ಈಕಡೆಯೂ ಅತಿ ಹೆಚ್ಚು ಮರಗಳಿದ್ದವು.
8. ಆಗ ಅವನು ಹೇಳಿದ್ದೇನಂದರೆ, ಈ ನೀರು ಪೂರ್ವ ಸೀಮೆಗೆ ಹೋಗಿ ಒಣಭೂಮಿಗೆ ಇಳಿದು ಸಮುದ್ರ ಸೇರುವವು; ಸಮುದ್ರ ಸೇರಿದ ಮೇಲೆ ಆ ನೀರು ಸಿಹಿಯಾಗುವದು.
9. ಇದಲ್ಲದೆ ಆಗುವದೇನಂದರೆ, ಈ ದಿನ ಬರುವ ಎಲ್ಲಾ ಸ್ಥಳಗಳಲ್ಲಿ ಸಂಚರಿಸುವಂತ ಸಮಸ್ತ ಜೀವಿಗಳು ಬದುಕುವವು ಮತ್ತು ವಿಾನುಗಳು ಬಹು ದೊಡ್ಡ ಸಮೂಹವಾಗುವವು. ಈ ನೀರು ಅಲ್ಲಿಗೆ ಬರುವಾಗ ಅವು ಸ್ವಸ್ಥವಾಗುವವು; ಈ ನದಿಗಳು ಎಲ್ಲಿಗೆ ಬರುತ್ತವೋ ಅಲ್ಲಿ ಎಲ್ಲಾ ಬದುಕುವವು.
10. ಏನ್‌ಗೆದಿ ಮೊದಲುಗೊಂಡು ಏನ್‌ಎಗ್ಲಯಿಮಿನ ವರೆಗೂ ವಿಾನುಗಾರರು ಅದರ ಬಳಿಯಲ್ಲಿ ನಿಲ್ಲುವರು. ಅಲ್ಲಿ ಬಲೆಹಾಸುವ ಸ್ಥಳಗಳಿರುವವು. ಅದರ ವಿಾನು ಗಳು ಮಹಾಸಮುದ್ರದ ವಿಾನುಗಳಾಗಿ ಜಾತ್ಯಾನುಸಾರ ವಾಗಿ ಬಹಳವಾಗಿರುವವು,
11. ಆದರೆ ಅದರ ಕೆಸರಾದ ಸ್ಥಳಗಳು, ಕೊಳಚೆಗಳು, ಸ್ವಸ್ಥವಾಗುವದಿಲ್ಲ, ಅವು ಉಪ್ಪಿಗೆ ಒಪ್ಪಿಸಲ್ಪಡುವವು.
12. ನದಿಯ ಬಳಿ ಅದರ ತೀರದಲ್ಲಿ ಆ ಕಡೆಯೂ ಈ ಕಡೆಯೂ ಆಹಾರಕ್ಕಾಗಿ ಎಲ್ಲಾ ಮರಗಳು ಬೆಳೆಯುವವು, ಅವುಗಳ ಎಲೆಗಳು ಬಾಡುವದಿಲ್ಲ ಹಣ್ಣು ಮುಗಿದು ಹೋಗುವದಿಲ್ಲ. ಅವು ತಿಂಗಳುಗಳ ಪ್ರಕಾರ ಹೊಸ ಫಲಗಳನ್ನು ಫಲಿಸು ವವು; ಅವುಗಳ ನೀರು ಪರಿಶುದ್ಧ ಸ್ಥಳದಿಂದ ಹೊರಟು ಬಂದದ್ದು, ಅವುಗಳ ಹಣ್ಣುಗಳು ಆಹಾರಕ್ಕೂ ಎಲೆಗಳು ಔಷಧಕ್ಕೂ ಆಗುವವು.
13. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀವು ಇಸ್ರಾಯೇಲಿನ ಹನ್ನೆರಡು ಗೋತ್ರಗಳ ಪ್ರಕಾರ ದೇಶ ವನ್ನು ಬಾಧ್ಯವಾಗಿ ಹೊಂದುವ ಹಾಗೆ ಇದು ಮೇರೆಯಾ ಗಿದೆ; ಯೋಸೇಫನಿಗೆ ಎರಡು ಪಾಲುಗಳು ಕೊಡಲ್ಪ ಟ್ಟಿದೆ.
14. ನೀವು ಒಬ್ಬೊಬ್ಬರೂ ಸರಿಯಾಗಿ ಅದನ್ನು ಬಾಧ್ಯವಾಗಿ ಹೊಂದಬೇಕು; ಅದನ್ನು ನಿಮ್ಮ ಪಿತೃಗಳಿಗೆ ಕೊಡುವ ಹಾಗೆ ನಾನು ಕೈ ಎತ್ತಿದ್ದೇನೆ; ಈ ದೇಶವು ನಿಮಗೆ ಬಾಧ್ಯವಾಗಿ ಬರುವದು.
15. ಇದೇ ದೇಶದ ಮೇರೆಯು ಉತ್ತರದ ಕಡೆಗೆ ಮಹಾಸಮುದ್ರದ ಮೊದಲುಗೊಂಡು ಹೆತ್ಲೋನಿನ ಮಾರ್ಗವಾಗಿ ಚೆದಾ ದಿಗೆ ಸೇರುವ ವರೆಗೂ;
16. ಹಮಾತ್‌ ಬೇರೋತವು, ದಮಸ್ಕದ ವರೆಗೂ ಹಮಾತಿನ ಮೇರೆಗೂ ಮಧ್ಯವಾಗಿ ರುವ ಸಿಬ್ರಯಿಮ್‌ ಹವ್ರಾನಿನ ಮೇರೆಯಲ್ಲಿರುವ ಹಾಚೇರ್‌ ಹತ್ತೀಕೋನನ್ನೂ ಮತ್ತು ಸಮುದ್ರದಂತಿ ರುವ ಮೇರೆ ಏನಂದರೆ ಹಾಚರೇನೂ ದಮಸ್ಕದ
17. ಮೇರೆಯೂ ಉತ್ತರದ ಕಡೆಗಿರುವ ಹಮಾತ್ಯರದು ಹಮಾತಿನ ಮೇರೆಯೂ ಉತ್ತರದ ಕಡೆಯದಾಗಿದೆ.
18. ಪೂರ್ವದಲ್ಲಿ ಹವ್ರಾನ್‌, ದಮಸ್ಕ, ಗಿಲ್ಯಾದ್‌ ಇವು ಗಳಿಗೂ ಇಸ್ರಾಯೇಲ್‌ ದೇಶಕ್ಕೂ ಮಧ್ಯೆ ಯೊರ್ದನ್‌ ಹೊಳೆಯ ಮೇರೆಯಿಂದ ಮೂಡಣ ಸಮುದ್ರದಿಂದ ನೀವು ಅಳೆಯಬೇಕು; ಇದೇ ಮೂಡಣ ಮೇರೆಯಾ ಗಿದೆ.
19. ದಕ್ಷಿಣದ ಕಡೆಗಿರುವ ದಕ್ಷಿಣದ ಮೇರೆಯೂ ತಾಮಾರ್‌ ಮೊದಲುಗೊಂಡು ಕಾದೇಶಿನ ವಾಗ್ವಾದದ ನೀರಿನ ವರೆಗೂ ನದಿ ಮೊದಲುಗೊಂಡು ಮಹಾಸಮು ದ್ರದ ವರೆಗೂ ಇರುವದು. ಇದೇ ದಕ್ಷಿಣ ಭಾಗದ ದಕ್ಷಿಣದ ಮೇರೆ.
20. ಪಶ್ಚಿಮದ ಕಡೆಗೂ ಸಹ ಮೇರೆ ಯಿಂದ ಮೊದಲುಗೊಂಡು ಹಮಾತಿನ ಪ್ರದೇಶದ ವರೆಗೂ ಇರುವ ಮಹಾಸಮುದ್ರವು ಪಶ್ಚಿಮದ ಕಡೆ ಗಿದೆ, ಇದೇ ಪಶ್ಚಿಮದ ಮೇರೆ.
21. ಹೀಗೆ ನೀವು ಈ ದೇಶವನ್ನು ಇಸ್ರಾಯೇಲ್ಯರ ಕುಲಗಳ ಪ್ರಕಾರ ಪಾಲುಮಾಡಿ ಕೊಳ್ಳಬೇಕು.
22. ನೀವು ಅದನ್ನು ನಿಮಗೂ ನಿಮ್ಮ ಮಧ್ಯದಲ್ಲಿ ತಂಗುವಂತವರಿಗೂ ನಿಮ್ಮ ಮಧ್ಯದಲ್ಲಿ ಮಕ್ಕಳನ್ನು ಪಡೆದಂತ ಅನ್ಯಜನರಿಗೂ ಚೀಟುಹಾಕಿ ಬಾಧ್ಯವಾಗಿ ವಿಭಾಗಿಸಿ ಹಂಚಬೇಕು; ಅವರು ನಿಮಗೆ ಇಸ್ರಾಯೇಲಿನ ಮಕ್ಕಳೊಳಗೆ ಹುಟ್ಟಿದ ವರಾಗಿರಬೇಕು; ಅವರಿಗೆ ಇಸ್ರಾಯೇಲಿನ ಗೋತ್ರಗ ಳೊಳಗೆ ಬಾಧ್ಯತೆಯಾಗಬೇಕು.
23. ಅನ್ಯರು ಯಾವಗೋತ್ರದ ಸಂಗಡ ತಂಗುತ್ತಾರೋ ಅದರಲ್ಲಿಯೇ ನೀವು ಬಾಧ್ಯತೆ ಕೊಡಬೇಕೆಂದು ದೇವರಾದ ಕರ್ತನು ಹೇಳುತ್ತಾನೆ.

Chapter 48

1. ಈಗ ಆ ಗೋತ್ರಗಳ ಹೆಸರುಗಳು ಯಾವವಂದರೆ: ಉತ್ತರದ ಕೊನೆಯಿಂದ ಹೆತ್ಲೋನಿನ ಮಾರ್ಗದ ಮೇರೆಗೂ ಹಮಾತಿಗೆ ಹೋಗುವ ಮಾರ್ಗವಾಗಿ ಹಚರ್‌ ಏನಾನಿನ ಉತ್ತರದ ಕಡೆಗಿರುವ ದಮಸ್ಕದ ಮೇರೆಯೂ ಹಮಾತಿನ ಬಳಿ ಯಲ್ಲಿ ಇರುವ ಪೂರ್ವ, ಪಶ್ಚಿಮ ಇವೇ ಅದರ ಮೇರೆಗಳು, ದಾನ್‌ನ ಒಂದು ಭಾಗವಾಗಿದೆ.
2. ದಾನಿನ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿ ಮದ ವರೆಗೂ ಆಶೇರನಿಗೆ ಒಂದು ಭಾಗವಾಗಿದೆ.
3. ಆಶೇರನ ಮೇರೆಯ ಬಳಿಯಲ್ಲಿ ಪೂರ್ವದ ಕಡೆ ಯಿಂದ ಪಶ್ಚಿಮದ ಕಡೆಯ ವರೆಗೂ ನಫ್ತಾಲಿಗೆ ಒಂದು ಭಾಗವಾಗಿದೆ.
4. ನಫ್ತಾಲಿಯ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೆ ಮನಸ್ಸೆಗೆ ಒಂದು ಭಾಗ.
5. ಮನಸ್ಸೆಯ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೂ ಎಫ್ರಾಯಾಮ್‌ಗೆ ಒಂದು ಭಾಗ.
6. ಎಫ್ರಾ ಯಾಮ್‌ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ವರೆಗೆ ರೂಬೇನ್‌ಗೆ ಒಂದು ಭಾಗ.
7. ರೂಬೇನನ ಮೇರೆಯ ಬಳಿಯಲ್ಲಿ ಪೂರ್ವದ ಕಡೆ ಯಿಂದ ಪಶ್ಚಿಮದ ಕಡೆಯ ವರೆಗೂ ಯೆಹೂದಕ್ಕೆ ಒಂದು ಭಾಗ.
8. ಯೆಹೂದದ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೂ ಇಪ್ಪತ್ತೈದು ಸಾವಿರ ಮೊಳ ಅಗಲವಾದಂತ ಆ ಬೇರೆ ಪಾಲುಗಳಲ್ಲಿ ಒಂದರ ಹಾಗೆ ಉದ್ದವಾದಂತ ನೀವು ಅರ್ಪಿಸುವಂತ ಕಾಣಿಕೆ ಪೂರ್ವದಿಂದ ಪಶ್ಚಿಮದ ಕಡೆಯ ವರೆಗೂ ಇರಬೇಕು. ಅದರ ಮಧ್ಯದಲ್ಲಿ ಪರಿಶುದ್ಧ ಸ್ಥಳವೂ ಇರಬೇಕು.
9. ನೀವು ಕರ್ತನಿಗೆ ಅರ್ಪಿಸುವಂತ ಕಾಣಿಕೆ ಇಪ್ಪತ್ತೈದು ಸಾವಿರ ಉದ್ದವೂ ಹತ್ತು ಸಾವಿರ ಮೊಳ ಅಗಲವೂ ಆಗಿರಬೇಕು;
10. ಅವರಿಗಾಗಿ ಅಂದರೆ ಯಾಜಕರಿಗಾಗಿ ಪರಿಶುದ್ಧ ಕಾಣಿಕೆ ಇರಬೇಕು, ಅದು ಉತ್ತರಕ್ಕೆ ಇಪ್ಪತ್ತೈದು ಸಾವಿರ, ಪಶ್ಚಿಮಕ್ಕೆ ಹತ್ತು ಸಾವಿರ ಅಗಲವೂ ಪೂರ್ವಕ್ಕೆ ಹತ್ತು ಸಾವಿರ ಅಗಲವೂ ದಕ್ಷಿಣಕ್ಕೆ ಇಪ್ಪತ್ತೈದು ಸಾವಿರ ಉದ್ದವೂ ಇರಬೇಕು; ಅದರ ಮಧ್ಯದಲ್ಲಿ ಕರ್ತನ ಪರಿಶುದ್ಧ ಸ್ಥಳವೂ ಇರಬೇಕು.
11. ಇದು ನನ್ನ ಆಜ್ಞೆಯಂತೆ ನಡಕೊಂಡ ಇಸ್ರಾಯೇಲಿನ ಮಕ್ಕಳು ತಪ್ಪಿಹೋದಾಗ, ಲೇವಿಯರೂ ತಪ್ಪಿಹೋದ ಪ್ರಕಾರ ತಪ್ಪಿಹೋಗದೆ ಇದ್ದಂತ ಚಾದೋ ಕನ ಕುಮಾರರಲ್ಲಿ ಪರಿಶುದ್ಧ ಮಾಡಲ್ಪಟ್ಟ ಯಾಜಕರ ದಾಗಿರಬೇಕು;
12. ಅರ್ಪಿಸಲ್ಪಟ್ಟ ಈ ದೇಶದ ಕಾಣಿಕೆ ಲೇವಿಯರ ಮೇರೆಯ ಬಳಿಯಲ್ಲಿಯೇ ಅತಿ ಪರಿಶುದ್ಧ ವಾದದ್ದಾಗಿರಬೇಕು.
13. ಯಾಜಕರ ಮೇರೆಗೆ ಎದುರಾಗಿ ಲೇವಿಯರಿಗೆ ಇಪ್ಪತ್ತೈದು ಸಾವಿರ ಉದ್ದವೂ ಹತ್ತು ಸಾವಿರ ಅಗಲವೂ ಆಗಬೇಕು. ಎಲ್ಲಾ ಉದ್ದವೂ ಇಪ್ಪತ್ತೈದು ಸಾವಿರ ಮತ್ತು ಅಗಲವು ಹತ್ತು ಸಾವಿರ.
14. ಅವರು ಅದರಲ್ಲಿ ಏನನ್ನೂ ಮಾರಬಾರದು, ಬದಲಾ ಯಿಸಬಾರದು, ದೇಶದ ಪ್ರಥಮ ಫಲವನ್ನು ಯಾರಿ ಗೂ ಕೊಡಬಾರದು; ಅದು ಕರ್ತನಿಗೆ ಪರಿಶುದ್ಧವಾ ಗಿದೆ.
15. ಅಗಲದಲ್ಲಿ ಮಿಕ್ಕ ಐದು ಸಾವಿರವೂ ಇಪ್ಪತ್ತೈದು ಸಾವಿರಕ್ಕೆ ಎದುರಾಗಿಯೂ ಪಟ್ಟಣಕ್ಕೆ ಸಾಧಾರಣವಾದ ಸ್ಥಳವು ನಿವಾಸಗಳಿಗಾಗಿಯೂ ಉಪ ನಗರಗಳಾಗಿಯೂ ಸಾಧಾರಣವಾದ ಸ್ಥಳವಾಗಿರಬೇಕು; ಪಟ್ಟಣವು ಅದರ ಮಧ್ಯದಲ್ಲಿರಬೇಕು;
16. ಅದರ ಅಳತೆಗಳು ಹೀಗಿರ ಬೇಕು; ಉತ್ತರದ ಕಡೆಗೆ ನಾಲ್ಕು ಸಾವಿರದ ಐನೂರು ಮೊಳ ದಕ್ಷಿಣದ ಕಡೆಗೆ ನಾಲ್ಕು ಸಾವಿರದ ಐನೂರು ಮೊಳ ಪೂರ್ವದ ಕಡೆಗೆ ನಾಲ್ಕು ಸಾವಿರದ ಐನೂರು ಮೊಳ ಪಶ್ಚಿಮದ ಕಡೆಗೆ ನಾಲ್ಕು ಸಾವಿರದ ಐನೂರ ಮೊಳ;
17. ಪಟ್ಟಣದ ಪ್ರಾಂತ್ಯಗಳು ಹೀಗಿರಬೇಕು: ಉತ್ತರದಲ್ಲಿ ಇನ್ನೂರಾ ಐವತ್ತು ಮೊಳ; ದಕ್ಷಿಣದಲ್ಲಿ ಇನ್ನೂರಾ ಐವತ್ತು ಮೊಳ; ಪೂರ್ವದಲ್ಲಿ ಇನ್ನೂರಾ ಐವತ್ತು ಮೊಳ; ಪಶ್ಚಿಮದಲ್ಲಿ ಇನ್ನೂರಾ ಐವತ್ತು ಮೊಳ.
18. ಕಾಣಿಕೆಯಾದ ಪರಿಶುದ್ಧ ಭಾಗಕ್ಕೆ ಎದು ರಾಗಿರುವಂತದ್ದೂ ಉದ್ದದಲ್ಲಿ ಮಿಕ್ಕಾದದ್ದೂ ಪೂರ್ವಕ್ಕೆ ಹತ್ತು ಸಾವಿರ ಮೊಳವಾಗಿಯೂ ಪಶ್ಚಿಮಕ್ಕೆ ಹತ್ತು ಸಾವಿರ ಮೊಳವಾಗಿಯೂ ಇರಬೇಕು. ಅದು ಕಾಣಿಕೆಯ ಪರಿಶುದ್ಧ ಭಾಗಕ್ಕೆ ಎದುರಾಗಿರಬೇಕು. ಅದರ ಆದಾ ಯವು ಪಟ್ಟಣದಲ್ಲಿ ಸೇವೆ ಮಾಡುವವರ ಆಹಾರಕ್ಕಾಗು ವಷ್ಟು ಇರಬೇಕು.
19. ಪಟ್ಟಣದಲ್ಲಿ ಸೇವೆ ಮಾಡುವವರು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಂದ ಅದರಲ್ಲಿಯೇ ಸೇವೆಮಾಡಬೇಕು.
20. ಕಾಣಿಕೆಯ ಎಲ್ಲಾ ಸ್ಥಳವು ಇಪ್ಪ ತ್ತೈದು ಸಾವಿರ ಮೊಳ ಉದ್ದವಾಗಿಯೂ ಇಪ್ಪತ್ತೈದು ಸಾವಿರ ಮೊಳ ಅಗಲವಾಗಿಯೂ ಇರಬೇಕು; ನೀವು ಪರಿಶುದ್ಧ ಕಾಣಿಕೆಯನ್ನು ಚಚ್ಚೌಕವಾಗಿ ಪಟ್ಟಣದ ಸ್ವಾಸ್ತ್ಯದ ಸಂಗಡ ಅರ್ಪಿಸಬೇಕು.
21. ಪರಿಶುದ್ಧ ಕಾಣಿಕೆಗೂ ಪಟ್ಟಣದ ಸ್ವಾಸ್ತ್ಯಕ್ಕೂ ಈ ಕಡೆಗೂ ಆ ಕಡೆಗೂ ಮಿಕ್ಕಾದದ್ದು ಕಾಣಿಕೆಯ ಇಪ್ಪತ್ತೈದು ಸಾವಿರ ಮೊಳಕ್ಕೆ ಎದುರಾಗಿ ಪೂರ್ವದ ಮೇರೆಯಲ್ಲಿರು ವಂಥದ್ದೂ ಪಶ್ಚಿಮದಲ್ಲಿ ಇಪ್ಪತ್ತೈದು ಸಾವಿರ ಮೊಳಕ್ಕೆ ಎದುರಾಗಿ ಪಶ್ಚಿಮದ ಮೇರೆಯಲ್ಲಿರುವಂತದ್ದೂ ಪ್ರಧಾನನಿಗಾದ ಪಾಲಿಗೆ ಎದುರಾಗಿಯೂ ಇರಬೇಕು. ಅದು ಪರಿಶುದ್ಧ ಕಾಣಿಕೆಯೇ; ಆಲಯದ ಪರಿಶುದ್ಧ ಸ್ಥಳವೂ ಅದರ ಮಧ್ಯದಲ್ಲಿ ಇರಬೇಕು.
22. ಇದಲ್ಲದೆ ಲೇವಿಯರ ಸ್ವಾಸ್ತ್ಯದಿಂದ ಮೊದಲುಗೊಂಡು ಮತ್ತು ಪಟ್ಟಣದ ಸ್ವಾಸ್ತ್ಯದಿಂದ ಪ್ರಧಾನನ ನಡುವೆ ಇರುವಂಥ ದ್ದು ಯೆಹೂದದ ಮೇರೆಗೂ ಬೆನ್ಯಾವಿಾನನ ಮೇರೆಗೂ ಮಧ್ಯದಲ್ಲಿರುವಂಥದ್ದೂ ಪ್ರಧಾನನಿಗೆ ಆಗಬೇಕು.
23. ಮಿಕ್ಕ ಗೋತ್ರಗಳ ವಿಷಯವೇನಂದರೆ, ಪೂರ್ವ ದ ಕಡೆಯಿಂದ ಪಶ್ಚಿಮದ ವರೆಗೂ ಬೆನ್ಯಾವಿಾನನ
24. ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ವರೆಗೂ ಸಿಮೆಯೋನ್‌ನ ಒಂದು ಭಾಗ ವಾಗಿದೆ.
25. ಸಿಮೆಯೋನ್‌ ಮೇರೆಯ ಬಳಿಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೂ ಇಸ್ಸಾಕಾರನ ಒಂದು ಭಾಗವಾಗಿದೆ;
26. ಇಸ್ಸಾಕಾರ ಮೇರೆಯ ಬಳಿ ಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆಯ ವರೆಗೂ ಜೆಬುಲೋನನ ಒಂದು ಭಾಗವದೆ;
27. ಜೆಬು ಲೋನ್‌ನ ಮೇರೆಯ ಬಳಿಯಲ್ಲಿ ಪೂರ್ವದ ಕಡೆ ಯಿಂದ ಪಶ್ಚಿಮದ ಕಡೆಯ ವರೆಗೂ ಗಾದನ ಒಂದು ಭಾಗವಾಗಿದೆ.
28. ಗಾದನ ಮೇರೆಯ ಬಳಿಯಲ್ಲಿ ದಕ್ಷಿಣದ ಕಡೆಯಲ್ಲಿ ದಕ್ಷಿಣದ ಮೇರೆಯು ತಾಮಾರ್‌ ಮೊದಲುಗೊಂಡು ಕಾದೇಶಿನ ವಾಗ್ವಾದದ ನೀರುಗಳ ವರೆಗೂ ಮಹಾ ಸಮುದ್ರಕ್ಕೆ ಹೋಗುವ ನದಿಯ ವರೆಗೂ ಇರಬೇಕು.
29. ನೀವು ಇಸ್ರಾಯೇಲಿನ ಗೋತ್ರ ಗಳಿಗೆ ಚೀಟು ಹಾಕಿ ಬಾಧ್ಯವಾಗಿ ಹಂಚಿಕೊಡಬೇಕಾದ ದೇಶವು ಇದೇ; ಅದರ ಭಾಗಗಳು ಇವೆ. ಎಂದು ದೇವರಾದ ಕರ್ತನು ಹೇಳುತ್ತಾನೆ.
30. ಪಟ್ಟಣದ ಹೊರಗೆ ಹೋಗುವಿಕೆಯು ಹೀಗಿರ ಬೇಕು--ಉತ್ತರದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಅಳತೆಗಳು.
31. ಪಟ್ಟಣದ ಬಾಗಲುಗಳು ಇಸ್ರಾಯೇಲಿನ ಗೋತ್ರಗಳ ಹೆಸರುಗಳ ಪ್ರಕಾರ ಇರಬೇಕು; ಉತ್ತರಕ್ಕೆ ಮೂರು ಬಾಗಲುಗಳು; ರೂಬೇ ನನ ಬಾಗಲು ಒಂದು, ಯೆಹೂದನ ಬಾಗಲು ಒಂದು; ಲೇವಿಯ ಬಾಗಲು ಒಂದು.
32. ಪೂರ್ವದ ಗಡಿಯಲ್ಲಿ ನಾಲ್ಕು ಸಾವಿರದ ಐನೂರು, ಮತ್ತು ಮೂರು ಬಾಗ ಲುಗಳು; ಯೋಸೇಫನ ಬಾಗಲು ಒಂದು, ಬೆನ್ಯಾ ವಿಾನನ ಬಾಗಲು ಒಂದು; ದಾನನ ಬಾಗಲು ಒಂದು
33. ದಕ್ಷಿಣದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು ಅಳತೆಗಳು; ಮೂರು ಬಾಗಲುಗಳು; ಸಿಮೆಯೋನನ ಬಾಗಲು ಒಂದು, ಇಸ್ಸಾಕಾರನ ಬಾಗಲು ಒಂದು; ಜೆಬುಲೋನನ ಬಾಗಲು ಒಂದು.
34. ಪಶ್ಚಿಮದ ಕಡೆಯಲ್ಲಿ ನಾಲ್ಕು ಸಾವಿರದ ಐನೂರು, ಅದರ ಬಾಗಲುಗಳು ಮೂರು; ಗಾದ ಬಾಗಲು ಒಂದು, ಆಶೇರ ಬಾಗಲು ಒಂದು, ನಫ್ತಾಲಿ ಬಾಗಲು ಒಂದು.
35. ಸುತ್ತಲೂ ಹದಿನೆಂಟು ಸಾವಿರ ಅಳತೆಗಳು; ಆ ದಿನದಿಂದ ಆ ಪಟ್ಟಣದ ಹೆಸರು ಕರ್ತನು ನೆಲೆ ಯಾಗಿರುವನು ಎಂಬದೇ ಆಗಿರುವದು.


Free counters!   Site Meter(April28th2012)