Chapter 1
1. ದಾವೀದನ ಮಗನೂ ಯೆರೂಸಲೇಮಿನಲ್ಲಿ ಅರಸನೂ ಆಗಿದ್ದ ಪ್ರಸಂಗಿಯ ಮಾತುಗಳು. 2. ವ್ಯರ್ಥಗಳಲ್ಲಿ ವ್ಯರ್ಥ, ವ್ಯರ್ಥಗಳಲ್ಲಿ ವ್ಯರ್ಥ ಎಂದು ಪ್ರಸಂಗಿ ಹೇಳುತ್ತಾನೆ; ಎಲ್ಲವೂ ವ್ಯರ್ಥ. 3. ಸೂರ್ಯನ ಕೆಳಗೆ ಮನುಷ್ಯನು ಪಡುವ ಎಲ್ಲಾ ಪ್ರಯಾಸದಲ್ಲಿ ಅವನಿಗೆ ಲಾಭವೇನು? 4. ಒಂದು ಸಂತಾನವು ಗತಿಸುತ್ತದೆ, ಮತ್ತೊಂದು ಸಂತಾನವು ಬರುತ್ತದೆ; ಆದರೆ ಭೂಮಿಯು ಎಂದಿಗೂ ನಿಲ್ಲುತ್ತದೆ. 5. ಸೂರ್ಯನು ಏರುತ್ತಾನೆ, ಸೂರ್ಯನು ಇಳಿಯುತ್ತಾನೆ; ತಾನು ಏರಿದ ಸ್ಥಳಕ್ಕೆ ಆತುರಪಡುತ್ತಾನೆ. 6. ಗಾಳಿಯು ದಕ್ಷಿಣದ ಕಡೆಗೆ ಬೀಸುತ್ತದೆ, ಉತ್ತರದ ಕಡೆಗೆ ತಿರುಗುತ್ತದೆ; ಅದು ಬಿಡದೆ ಗುಂಡಾಗಿ ಸುತ್ತುತ್ತದೆ; ಆ ಗಾಳಿಯು ತನ್ನ ಸುತ್ತಳತೆಗಳ ಪ್ರಕಾರ ಹಿಂದಿರು ಗುತ್ತದೆ. 7. ನದಿಗಳೆಲ್ಲಾ ಹರಿದು ಸಮುದ್ರಕ್ಕೆ ಹೋಗುತ್ತವೆ, ಆದರೂ ಸಮುದ್ರವು ತುಂಬುವದಿಲ್ಲ; ನದಿ ಗಳು ಎಲ್ಲಿಂದ ಬಂದಿವೆಯೋ ಆ ಸ್ಥಳಕ್ಕೆ ಅವು ಹಿಂತಿರು ಗುತ್ತವೆ. 8. ಎಲ್ಲಾ ಕಾರ್ಯಗಳು ಪ್ರಯಾಸದಿಂದ ತುಂಬಿ ಯವೆ; ಅದನ್ನು ಮನುಷ್ಯನು ವಿವರಿಸಲಾರನು; ನೋಡುವದರಿಂದ ಕಣ್ಣು ತೃಪ್ತಿಗೊಳ್ಳದು. ಇಲ್ಲವೆ ಕೇಳು ವದರಿಂದ ಕಿವಿಯು ದಣಿಯದು. 9. ಇದ್ದದ್ದೇ ಇರು ವದು, ನಡೆದದ್ದೇ ನಡೆಯುವದು; ಸೂರ್ಯನ ಕೆಳಗೆ ಹೊಸದಾದದ್ದು ಯಾವದೂ ಇಲ್ಲ. 10. ನೋಡು, ಇದು ಹೊಸದು ಎಂದು ಯಾವ ವಿಷಯವಾಗಿ ಹೇಳ ಬಹುದೋ ಅದು ನಮಗಿಂತ ಮುಂಚೆ ಪುರಾತನ ಕಾಲದಿಂದ ಇದ್ದದ್ದೇ. 11. ಮೊದಲಿನ ಸಂಗತಿಗಳ ಜ್ಞಾಪ ಕವು ಇಲ್ಲ; ಮುಂದಿನ ಸಂಗತಿಗಳ ಜ್ಞಾಪಕವು ಅವುಗಳ ಮುಂದಿನವರಿಗೆ ಇರುವದಿಲ್ಲ. 12. ಪ್ರಸಂಗಿಯಾದ ನಾನು ಯೆರೂಸಲೇಮಿನಲ್ಲಿ ಇಸ್ರಾಯೇಲ್ಯರ ಮೇಲೆ ಅರಸನಾಗಿದ್ದೆನು. 13. ಆಕಾಶದ ಕೆಳಗೆ ನಡೆಯುವ ಎಲ್ಲವುಗಳ ವಿಷಯವಾಗಿ ಜ್ಞಾನ ದಿಂದ ವಿಚಾರಿಸಿ ವಿಮರ್ಶಿಸುವದಕ್ಕೆ ನಾನು ನನ್ನ ಮನಸ್ಸು ಇಟ್ಟೆನು; ಇದರ ವಿಷಯವಾದ ಪ್ರಯಾಸವು ಮನಸ್ಸಿನಲ್ಲಿ ಯೋಚಿಸುವಂತೆ ದೇವರು ಮನುಷ್ಯ ಮಕ್ಕಳಿಗೆ ಈ ಕಷ್ಟಕರವಾದ ಪ್ರಯಾಸವನ್ನು ಕೊಟ್ಟಿ ದ್ದಾನೆ. 14. ಸೂರ್ಯನ ಕೆಳಗೆ ನಡೆಯುವ ಎಲ್ಲಾ ಕೆಲಸಗಳನ್ನು ನಾನು ನೋಡಿದ್ದೇನೆ; ಇಗೋ, ಎಲ್ಲವು ವ್ಯರ್ಥವೂ ಮನಸ್ಸಿಗೆ ಆಯಾಸವೂ ಆಗಿವೆ. 15. ವಕ್ರ ವಾದದ್ದು ಸರಿಮಾಡುವದಕ್ಕೆ ಆಗುವದಿಲ್ಲ; ಇಲ್ಲದ್ದನ್ನು ಲೆಕ್ಕಿಸುವದು ಅಸಾಧ್ಯ. 16. ನಾನು ನನ್ನ ಮನಸ್ಸಿನಲ್ಲಿ ಯೋಚಿಸುತ್ತಾ--ಇಗೋ, ನಾನು ದೊಡ್ಡ ಸ್ಥಾನಕ್ಕೆ ಬಂದಿದ್ದೇನೆ ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಇದ್ದವರೆಲ್ಲರಿಗಿಂತ ನಾನು ಜ್ಞಾನವನ್ನು ಸಂಪಾದಿಸಿದ್ದೇನೆ. ಹೌದು, ಜ್ಞಾನದ ತಿಳುವಳಿಕೆಯ ದೊಡ್ಡ ಅನುಭವವು ನನ್ನ ಹೃದಯಕ್ಕೆ ಆಯಿತು ಎಂದು ಹೇಳಿದೆನು. 17. ಜ್ಞಾನ ವನ್ನೂ ಹುಚ್ಚುತನವನ್ನೂ ಬುದ್ಧಿಹೀನತೆಯನ್ನೂ ತಿಳು ಕೊಳ್ಳುವಂತೆ ನಾನು ಮನಸ್ಸಿಟ್ಟೆನು; ಇದು ಸಹ ಮನಸ್ಸಿಗೆ ಆಯಾಸವೆಂದು ನಾನು ಅರಿತುಕೊಂಡೆನು. 18. ಬಹು ಜ್ಞಾನವಿದ್ದಲ್ಲಿ ದುಃಖ; ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳು ವವನು ತನ್ನ ವ್ಯಥೆಯನ್ನು ಹೆಚ್ಚಿಸಿಕೊಳ್ಳುತ್ತಾನೆ.
Chapter 2
1. ನಾನು ನನ್ನ ಹೃದಯದಲ್ಲಿ--ಹೋಗು, ನಾನು ನಿನ್ನನ್ನು ಸಂತೋಷದ ಮೂಲಕ ಪರೀಕ್ಷಿಸುವೆನು; ಆದಕಾರಣ ಸುಖವನ್ನು ಅನುಭವಿಸು ಎಂದು ಅಂದುಕೊಂಡೆನು. ಇಗೋ, ಇದು ಕೂಡ ವ್ಯರ್ಥವೇ. 2. ನಗೆಯ ವಿಷಯವಾಗಿ--ಇದು ಹುಚ್ಚು ಎಂದೂ ಸಂತೋಷದ ವಿಷಯವಾಗಿ--ಇದೇನು ಮಾಡುತ್ತದೆ ಎಂದೂ ನಾನು ಹೇಳಿದೆನು. 3. ಜ್ಞಾನದಿಂದ ನನ್ನ ಹೃದಯವನ್ನು ಇನ್ನು ಸಂತೋಷಪಡಿಸುವದಕ್ಕಾಗಿ ದ್ರಾಕ್ಷಾರಸಕ್ಕೆ ನನ್ನನ್ನು ನಾನು ಒಪ್ಪಿಸಿ ಕೊಳ್ಳುವಂತೆಯೂ ಆಕಾಶದ ಕೆಳಗೆ ತಮ್ಮ ಜೀವ ಮಾನದಲ್ಲೆಲ್ಲಾ ಮನುಷ್ಯ ಪುತ್ರರಿಗೆ ಒಳ್ಳೆಯದೇನೆಂದು ನೋಡುವ ತನಕ ಬುದ್ಧಿ ಹೀನತೆಯನ್ನು ಹಿಡಿಯುವದಕ್ಕೂ ನಾನು ನನ್ನ ಹೃದಯ ದಲ್ಲಿ ವಿಚಾರ ಮಾಡಿಕೊಂಡೆನು. 4. ನಾನು ಮಹ ತ್ತಾದ ಕಾರ್ಯಗಳನ್ನು ನಡಿಸಿದೆನು, ಮನೆಗಳನ್ನು ಕಟ್ಟಿಸಿ ಕೊಂಡೆನು; ದ್ರಾಕ್ಷಾತೋಟಗಳನ್ನು ನೆಟ್ಟೆನು. 5. ಉದ್ಯಾನ ವನಗಳನ್ನೂ ಹಣ್ಣು ತೋಟಗಳನ್ನೂ ಮಾಡಿಕೊಂಡು ಅವುಗಳಲ್ಲಿ ತರತರವಾದ ಹಣ್ಣಿನ ವೃಕ್ಷಗಳನ್ನು ನೆಟ್ಟೆನು. 6. ವೃಕ್ಷಗಳನ್ನು ಬೆಳೆಸುವ ಮರಕ್ಕೆ ನೀರು ಹಾಯಿಸುವ ದಕ್ಕೆ ನಾನು ಕೊಳಗಳನ್ನು ಮಾಡಿಕೊಂಡೆನು. 7. ನನಗೆ ದಾಸದಾಸಿಯರು ಇದ್ದರು; ನನ್ನ ಮನೆಯಲ್ಲಿ ಹುಟ್ಟಿದ ದಾಸರು ನನಗೆ ಇದ್ದರು; ನನಗೆ ಮುಂಚೆ ಯೆರೂಸ ಲೇಮಿನಲ್ಲಿ ಇದ್ದವರಿಗಿಂತ ದನಕುರಿಗಳ ಸಂಪತ್ತು ಹೆಚ್ಚಾ ಗಿತ್ತು. 8. ನಾನು ಬೆಳ್ಳಿ ಬಂಗಾರಗಳನ್ನು ಅರಸರ ಮತ್ತು ಪ್ರಾಂತ್ಯಗಳ ವಿಶೇಷವಾದ ಸಂಪತ್ತನ್ನು ಸಂಗ್ರಹಿಸಿ ಕೊಂಡೆನು; ಗಾಯಕ ಗಾಯಕಿಯರನ್ನು ಮತ್ತು ಮನುಷ್ಯ ಪುತ್ರರಿಗೆ ಆನಂದಕರವಾದ ಸಂಗೀತ ವಾದ್ಯ ಗಳನ್ನು ಅವುಗಳಿಗೆ ಸಂಭವಿಸಿದವುಗಳನ್ನು ಸಂಪಾದಿಸಿ ಕೊಂಡೆನು. 9. ಹೀಗೆ ಯೆರೂಸಲೇಮಿನಲ್ಲಿ ನನಗಿಂತ ಮುಂಚೆ ಇದ್ದ ಎಲ್ಲರಿಗಿಂತಲೂ ನಾನು ಅಭಿವೃದ್ಧಿ ಹೊಂದಿ ದೊಡ್ಡವನಾಗಿದ್ದೆನು. 10. ನನ್ನ ಕಣ್ಣುಗಳು ಬಯಸಿದ್ದೆಲ್ಲವನ್ನು ಅವುಗಳಿಂದ ಹಿಂತೆಗೆಯಲಿಲ್ಲ, ಯಾವ ಸಂತೋಷಕ್ಕಾಗಿಯೂ ನನ್ನ ಹೃದಯವನ್ನು ನಾನು ತಡೆಯಲಿಲ್ಲ; ನನ್ನ ಎಲ್ಲಾ ಪ್ರಯಾಸದಲ್ಲಿ ನನ್ನ ಹೃದಯವು ಸಂತೋಷಿಸಿತು; ನನ್ನ ಪ್ರಯಾಸ ದಿಂದೆಲ್ಲಾ ನನಗಾದ ಪಾಲು ಇದೆ. 11. ಆಗ ನನ್ನ ಕೈಗಳು ನಡಿಸಿದವುಗಳೆಲ್ಲವನ್ನು ನಾನು ಪ್ರಯಾಸ ಪಟ್ಟ ಪ್ರಯಾಸವನ್ನು ದೃಷ್ಟಿಸಿದೆನು; ಇಗೋ, ಎಲ್ಲವೂ ವ್ಯರ್ಥ ಮತ್ತು ಮನಸ್ಸಿಗೆ ಆಯಾಸಕರ. ಸೂರ್ಯನ ಕೆಳಗೆ ಯಾವ ಲಾಭವಿಲ್ಲ. 12. ಜ್ಞಾನವನ್ನೂ ಹುಚ್ಚುತನವನ್ನೂ ಮೂಢತೆಯನ್ನೂ ನೋಡುವದಕ್ಕೆ ನಾನು ತಿರುಗಿಕೊಂಡೆನು; ಅರಸನ ತರುವಾಯ ಬರುವ ಮನುಷ್ಯನು ಏನು ಮಾಡಾನು? ಮೊದಲಿದ್ದದ್ದು ಆಗಲೇ ನಡೆಯಿತು. 13. ಆಗ ಕತ್ತಲೆಗಿಂತ ಬೆಳಕು ಶ್ರೇಷ್ಠವಾಗಿರುವಂತೆ ಮೂಢತನಕ್ಕಿಂತ ಜ್ಞಾನವು ಶ್ರೇಷ್ಠವಾಗಿದೆ ಎಂದು ನಾನು ಕಂಡೆನು. 14. ಜ್ಞಾನಿಯ ಕಣ್ಣುಗಳು ಅವನ ತಲೆಯಲ್ಲಿರುತ್ತವೆ. ಬುದ್ಧಿಹೀನನು ಕತ್ತಲೆಯಲ್ಲಿ ನಡೆಯುತ್ತಾನೆ; ಅವರೆಲ್ಲರಿಗೂ ಒಂದೇ ಗತಿಯು ಸಂಭವಿಸುವದೆಂದು ನನ್ನಷ್ಟಕ್ಕೆ ನಾನೇ ಗ್ರಹಿಸಿ ಕೊಂಡೆನು. 15. ಆಗ ನಾನು ನನ್ನ ಹೃದಯದಲ್ಲಿ --ಮೂಢನಿಗೆ ಸಂಭವಿಸುವಂತೆ ನನಗೂ ಸಂಭವಿಸು ತ್ತದೆ. ಇದರಿಂದ ಯಾಕೆ ನಾನು ಹೆಚ್ಚು ಜ್ಞಾನದಿಂದ ಇದ್ದೇನೆ ಎಂದು ಅಂದುಕೊಂಡೆನು. ಆಗ ನಾನು ಇದೂ ವ್ಯರ್ಥವೆಂದು ನನ್ನ ಹೃದಯದಲ್ಲಿ ಅಂದು ಕೊಂಡೆನು. 16. ಮೂಢನಿಗಿಂತ ಜ್ಞಾನವಂತನ ಜ್ಞಾಪ ಕವು ಎಂದಿಗೂ ಇರುವದಿಲ್ಲ; ಈಗ ಇರುವದು ಬರುವ ದಿವಸಗಳಲ್ಲಿ ಮರೆಯಲ್ಪಡುತ್ತದೆ. ಮೂಢನಂತೆ ಜ್ಞಾನಿಯೂ ಸಾಯುವದು ಹೇಗೆ? 17. ಆದಕಾರಣ ಜೀವವನ್ನು ನಾನು ಹಗೆಮಾಡಿದೆನು; ಸೂರ್ಯನ ಕೆಳಗೆ ನಡೆಯುವ ಕಾರ್ಯವು ವ್ಯಥೆಯಾಗಿ ನನಗೆ ತೋರಿತು; ಎಲ್ಲಾ ವ್ಯರ್ಥವೂ ಪ್ರಾಣಕ್ಕೆ ಆಯಾಸಕ ರವೂ ಆಗಿವೆ. 18. ಹೌದು, ಸೂರ್ಯನ ಕೆಳಗೆ ಪಟ್ಟ ನನ್ನ ಎಲ್ಲಾ ಪ್ರಯಾಸವನ್ನು ನಾನು ಹಗೆಮಾಡಿದೆನು; ನನ್ನ ತರು ವಾಯ ಬರುವ ಮನುಷ್ಯನಿಗೆ ನಾನು ಇದನ್ನೆಲ್ಲಾ ಬಿಟ್ಟುಬಿಡಬೇಕು. 19. ಅವನು ಜ್ಞಾನಿಯೋ ಮೂಢ ನೋ ಯಾರಿಗೆ ಗೊತ್ತು? ಆದರೂ ನಾನು ಪಟ್ಟ ಎಲ್ಲಾ ಪ್ರಯಾಸದ ಮೇಲೆಯೂ ಸೂರ್ಯನ ಕೆಳಗೆ ನಾನು ಜ್ಞಾನಿಯೆಂದು ತೋರ್ಪಡಿಸಿಕೊಂಡವರ ಮೇಲೆಯೂ ಅವನು ಆಳುವನು. ಇದೂ ವ್ಯರ್ಥವೇ. 20. ಆದದರಿಂದ ಸೂರ್ಯನ ಕೆಳಗೆ ಪ್ರಯಾಸ ಪಟ್ಟ ಎಲ್ಲಾ ಪ್ರಯಾಸದ ವಿಷಯವಾಗಿ ನನ್ನ ಹೃದಯವು ನಿರಾಶೆಗೊಳ್ಳುವಂತೆ ನಾನು ತಿರುಗಾಡಿದೆನು. 21. ಜ್ಞಾನ ದಲ್ಲಿಯೂ ತಿಳುವಳಿಕೆಯಲ್ಲಿಯೂ ಯಥಾರ್ಥವಾಗಿ ಪ್ರಯಾಸಪಟ್ಟ ಒಬ್ಬ ಮನುಷ್ಯನಿದ್ದಾನೆ; ಆದರೂ ಇವು ಗಳಲ್ಲಿ ಪ್ರಯಾಸಪಡದೆ ಇದ್ದ ಮನುಷ್ಯನಿಗೆ ಪಾಲಾಗಿ ಅವನು ಬಿಟ್ಟುಬಿಡುವನು. ಇದು ವ್ಯರ್ಥವೂ ದೊಡ್ಡ ಕೇಡೂ ಆಗಿದೆ. 22. ಸೂರ್ಯನ ಕೆಳಗೆ ತಾನು ಪ್ರಯಾಸ ಪಟ್ಟ ತನ್ನ ಹೃದಯದ ಆಯಾಸಕ್ಕಾಗಿಯೂ ತನ್ನ ಎಲ್ಲಾ ಪ್ರಯಾಸಕ್ಕಾಗಿಯೂ ಮನುಷ್ಯನಿಗೆ ಏನು ಸಿಕ್ಕುತ್ತದೆ? 23. ಅವನ ದಿವಸಗಳೆಲ್ಲಾ ವ್ಯಸನಮಯವೇ, ಅವನ ಪ್ರಯಾಸವು ದುಃಖಮಯವೇ; ಹೌದು, ಅವನ ಹೃದಯವು ರಾತ್ರಿಯಲ್ಲಿ ವಿಶ್ರಾಂತಿತಕ್ಕೊಳ್ಳುವದಿಲ್ಲ. ಇದೂ ಕೂಡ ವ್ಯರ್ಥವೇ. 24. ತನ್ನ ಪ್ರಯಾಸದಲ್ಲಿ ತನ್ನ ಪ್ರಾಣವು ಸುಖವನ್ನು ಅನುಭವಿಸುವಂತೆ ಮಾಡುತ್ತಾ ತಿಂದು ಕುಡಿಯುವ ದಕ್ಕಿಂತ ಶ್ರೇಷ್ಠವಾದದ್ದು ಮನುಷ್ಯನಿಗೆ ಯಾವದೂ ಇಲ್ಲ. ಇದೂ ಕೂಡ ದೇವರ ಕೈಯಿಂದಲೇ ಆಗುತ್ತದೆ ಎಂದು ನಾನು ಕಂಡೆನು. 25. ನನಗಿಂತ ಹೆಚ್ಚಾಗಿ ಯಾವನು ತಿನ್ನಲು ಶಕ್ತನು? ಯಾವನು ಅದಕ್ಕೆ ಆತುರ ಪಡಶಕ್ತನು? 26. ದೇವರು ತನ್ನ ದೃಷ್ಟಿಯಲ್ಲಿ ಒಳ್ಳೆಯ ವನಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಆನಂದವನ್ನೂ ದಯಪಾಲಿಸುತ್ತಾನೆ; ದೇವರ ದೃಷ್ಟಿಯಲ್ಲಿ ಒಳ್ಳೆಯವನಿಗೆ ಕೊಡುವದಕ್ಕಾಗಿ ಕೂಡಿಸಿ ಒದಗಿಸು ವಂತೆ ಪಾಪಿಗೆ ಪ್ರಯಾಸವನ್ನು ಕೊಡುತ್ತಾನೆ. ಎಲ್ಲಾ ವ್ಯರ್ಥವೂ ಪ್ರಾಣಕ್ಕೆ ಆಯಾಸಕರವೂ ಆಗಿದೆ.
Chapter 3
1. ಆಕಾಶದ ಕೆಳಗೆ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾಲವಿದೆ; ಪ್ರತಿಯೊಂದು ಉದ್ದೇಶಕ್ಕೂ ಒಂದು ಸಮಯವಿದೆ. 2. ಹುಟ್ಟುವದಕ್ಕೆ ಒಂದು ಸಮಯ, ಸಾಯುವದಕ್ಕೆ ಒಂದು ಸಮಯ; ನೆಡುವದಕ್ಕೆ ಒಂದು ಸಮಯ, ನೆಟ್ಟದ್ದನ್ನು ಕಿತ್ತು ಹಾಕು ವದಕ್ಕೆ ಒಂದು ಸಮಯ; 3. ಕೊಲ್ಲುವದಕ್ಕೆ ಒಂದು ಸಮಯ, ಸ್ವಸ್ಥಮಾಡುವದಕ್ಕೆ ಒಂದು ಸಮಯ ಕೆಡವಿ ಬಿಡುವದಕ್ಕೆ ಒಂದು ಸಮಯ, ಕಟ್ಟುವದಕ್ಕೆ ಒಂದು ಸಮಯ; 4. ಅಳುವದಕ್ಕೆ ಒಂದು ಸಮಯ, ನಗುವದಕ್ಕೆ ಒಂದು ಸಮಯ; ಗೋಳಾಡುವದಕ್ಕೆ ಒಂದು ಸಮಯ, ಕುಣಿದಾಡುವದಕ್ಕೆ ಒಂದು ಸಮಯ; 5. ಕಲ್ಲುಗಳನ್ನು ಎಸೆಯುವದಕ್ಕೆ ಒಂದು ಸಮಯ, ಕಲ್ಲುಗಳನ್ನು ಕೂಡಿಸು ವದಕ್ಕೆ ಒಂದು ಸಮಯ; ಅಪ್ಪಿಕೊಳ್ಳುವದಕ್ಕೆ ಒಂದು ಸಮಯ, ಅಪ್ಪಿಕೊಳ್ಳುವದರಿಂದ ನಿಗ್ರಹಿಸುವ ಸಮ ಯ; 6. ಗಳಿಸುವದಕ್ಕೆ ಒಂದು ಸಮಯ, ಕಳೆಯುವದಕ್ಕೆ ಒಂದು ಸಮಯ ಕಾಪಾಡುವದಕ್ಕೆ ಒಂದು ಸಮಯ, ಬಿಸಾಡುವದಕ್ಕೆ ಒಂದು ಸಮಯ; 7. ಹರಿಯುವದಕ್ಕೆ ಒಂದು ಸಮಯ, ಹೊಲಿಯುವದಕ್ಕೆ ಒಂದು ಸಮಯ ಸುಮ್ಮನೆ ಇರುವದಕ್ಕೆ ಒಂದು ಸಮಯ, ಮಾತಾಡು ವದಕ್ಕೆ ಒಂದು ಸಮಯ; 8. ಪ್ರೀತಿಸುವದಕ್ಕೆ ಒಂದು ಸಮಯ, ದ್ವೇಷಿಸುವದಕ್ಕೆ ಒಂದು ಸಮಯ; ಯುದ್ಧದ ಸಮಯ, ಸಮಾಧಾನದ ಸಮಯ. 9. ತಾನು ಪ್ರಯಾಸಪಡುವದರಲ್ಲಿ ದುಡಿಯುವವನಿಗೆ ಲಾಭವೇನಿದೆ? 10. ಅದರಲ್ಲಿ ಅಭ್ಯಾಸಿಸುವಂತೆ ಮನು ಷ್ಯರ ಪುತ್ರರಿಗೆ ದೇವರು ಕೊಟ್ಟ ಪ್ರಯಾಸವನ್ನು ನಾನು ಕಂಡಿದ್ದೇನೆ. 11. ತನ್ನ ಸಮಯದಲ್ಲಿ ಪ್ರತಿಯೊಂದನ್ನು ಆತನು ಸುಂದರವಾಗಿ ಮಾಡಿದ್ದಾನೆ. ಆದಿಯಿಂದ ಅಂತ್ಯದ ವರೆಗೂ ದೇವರು ನಡಿಸುವ ಕೆಲಸವನ್ನು ಯಾವ ಮನುಷ್ಯನೂ ಗ್ರಹಿಸಲಾರದಂತೆ ಅವರ ಹೃದಯದಲ್ಲಿ ಆತನು ಲೋಕವನ್ನು ಇಟ್ಟಿದ್ದಾನೆ. 12. ಒಬ್ಬನು ಸಂತೋಷಿಸಿ ತನ್ನ ಜೀವಮಾನದಲ್ಲಿ ಒಳ್ಳೇ ದನ್ನು ಮಾಡುವದೇ ಹೊರತು ಅವುಗಳಲ್ಲಿ ಯಾವ ಮೇಲೂ ಇಲ್ಲವೆಂದು ನಾನು ಬಲ್ಲೆನು. 13. ಪ್ರತಿ ಯೊಬ್ಬನು ತಿಂದು, ಕುಡಿದು, ತನ್ನ ಎಲ್ಲಾ ಪ್ರಯಾಸದ ಮೇಲನ್ನು ಅನುಭವಿಸುವದು ದೇವರ ದಾನದಿಂದಲೇ. 14. ದೇವರು ಮಾಡುವದೆಲ್ಲವು ಶಾಶ್ವತವಾಗಿರುವದೆಂದು ನಾನು ಬಲ್ಲೆನು; ಅದಕ್ಕೆ ಯಾವದನ್ನೂ ಸೇರಿಸಬಾರದು, ಇಲ್ಲವೆ ಅದರಿಂದ ಯಾವದನ್ನೂ ತೆಗೆಯಬಾರದು; ಮನುಷ್ಯರು ಆತನ ಎದುರಿನಲ್ಲಿ ಭಯಪಡುವಂತೆ ದೇವರು ಅದನ್ನು ಮಾಡುತ್ತಾನೆ. 15. ಇದ್ದದ್ದು ಈಗ ಇದೆ, ಇರುವದು ಆಗಲೇ ಇತ್ತು; ಗತಿಸಿಹೋದದ್ದನ್ನು ದೇವರು ಕೇಳುತ್ತಾನೆ. 16. ಕೆಟ್ಟದ್ದು ಇತ್ತೆಂದು ಸೂರ್ಯನ ಕೆಳಗೆ ನ್ಯಾಯ ತೀರ್ಪಿನ ಸ್ಥಳವನ್ನು ಮತ್ತು ದುಷ್ಕೃತ್ಯ ಇದೆಯೆಂದು ನೀತಿಯ ಸ್ಥಾನವನ್ನು ನಾನು ಕಂಡೆನು. 17. ನಾನು ನನ್ನ ಹೃದಯದಲ್ಲಿ -- ನೀತಿವಂತರನ್ನೂ ದುಷ್ಟರನ್ನೂ ದೇವರು ತೀರ್ಪುಮಾಡುವನು; ಪ್ರತಿಯೊಂದು ಉದ್ದೇ ಶಕ್ಕೂ ಪ್ರತಿಯೊಂದು ಕೆಲಸಕ್ಕೂ ಸಮಯವಿದೆ ಎಂದು ಅಂದುಕೊಂಡೆನು. 18. ಮನುಷ್ಯ ಪುತ್ರರ ಸ್ಥಿತಿಯ ವಿಷ ಯವಾಗಿ ದೇವರು ಅವರನ್ನು ಪ್ರತ್ಯಕ್ಷಪಡಿಸುವನೆಂದೂ ಅವರು ತಾವೇ ಮೃಗಗಳೆಂದು ತಾವು ಕಂಡುಕೊಳ್ಳ ಬೇಕೆಂದು ನನ್ನ ಹೃದಯದಲ್ಲಿ ಅಂದುಕೊಂಡೆನು. 19. ಮೃಗಗಳಿಗೆ ಸಂಭವಿಸುವದು ಮನುಷ್ಯರ ಪುತ್ರರಿಗೂ ಸಂಭವಿಸುತ್ತದೆ; ಅವರಿಗೆ ಒಂದೇ ಸಂಗತಿ ಸಂಭವಿಸು ತ್ತದೆ; ಒಂದು ಸಾಯುವ ಹಾಗೆ ಮತ್ತೊಂದು ಸಾಯು ತ್ತದೆ; ಹೌದು, ಅವರೆಲ್ಲರಿಗೂ ಒಂದೇ ಒಂದು ಉಸಿ ರಾಟ ಇದೆ; ಆದಕಾರಣ ಮೃಗಕ್ಕಿಂತ ಮನುಷ್ಯನಿಗೆ ಯಾವ ಶ್ರೇಷ್ಠತೆಯೂ ಇಲ್ಲ; ಎಲ್ಲವೂ ವ್ಯರ್ಥ. 20. ಎಲ್ಲವೂ ಒಂದೇ ಸ್ಥಳಕ್ಕೆ ಹೋಗುತ್ತವೆ; ಎಲ್ಲವು ಗಳೂ ಮಣ್ಣಿನವುಗಳೇ ಮತ್ತು ಎಲ್ಲವೂ ಮಣ್ಣಿಗೆ ಸೇರುತ್ತವೆ. 21. ಮನುಷ್ಯನ ಪ್ರಾಣವು ಮೇಲಕ್ಕೆ ಹೋಗುತ್ತದೆ ಎಂದೂ ಮೃಗದ ಪ್ರಾಣವು ಭೂಮಿಯ ಕೆಳಕ್ಕೆ ಹೋಗುತ್ತದೆ ಎಂದೂ ಯಾವನು ತಿಳಿದಾನು? 22. ಆದಕಾರಣ ಮನುಷ್ಯನು ತನ್ನ ಸ್ವಂತ ಕೆಲಸಗಳಲ್ಲಿ ಆನಂದಿಸುವದಕ್ಕಿಂತ ಒಳ್ಳೆಯದು ಯಾವದೂ ಇಲ್ಲ ವೆಂದು ನಾನು ಗ್ರಹಿಸುತ್ತೇನೆ; ಅದೇ ಅವನ ಪಾಲು; ಅದರಿಂದ ತನ್ನ ಜೀವಮಾನದ ನಂತರ ಸಂಭವಿಸುವದನ್ನು ನೋಡುವಂತೆ ಯಾವನು ಅವನನ್ನು ಪುನಃ ಬರಮಾಡುತ್ತಾನೆ.?
Chapter 4
1. ಹೀಗೆ ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನಡೆಯುತ್ತಿರುವ ಹಿಂಸೆಗಳನ್ನೆಲ್ಲಾ ನಾನು ಯೋಚಿಸಿದೆನು; ಹಿಂಸಿಸಲ್ಪಟ್ಟವರ ಕಣ್ಣೀರನ್ನೂ ಅವರನ್ನು ಆದರಿಸುವವರು ಯಾರೂ ಇಲ್ಲದಿರುವ ದನ್ನೂ ನೋಡಿದೆನು; ಅವರನ್ನು ಹಿಂಸೆಪಡಿಸುವವರ ಕಡೆಗೆ ಶಕ್ತಿ ಇತ್ತು; ಆದರೆ ಇವರನ್ನು ಆದರಿಸುವವನು ಯಾವನೂ ಇಲ್ಲ. 2. ಆದಕಾರಣ ಇನ್ನೂ ಜೀವ ದಿಂದಿದ್ದು ಬದುಕುವವರಿಗಿಂತ ಆಗಲೇ ಮೃತಪಟ್ಟ ಸತ್ತವರನ್ನು ನಾನು ಹೆಚ್ಚಾಗಿ ಹೊಗಳಿದೆನು. 3. ಹೌದು, ಇನ್ನೂ ಹುಟ್ಟದೆ, ಸೂರ್ಯನ ಕೆಳಗೆ ನಡೆಯುವ ಕೆಟ್ಟ ಕೃತ್ಯವನ್ನು ನೋಡದಿರುವವನೇ ಇವರಿಬ್ಬರಿ ಗಿಂತಲೂ ಶ್ರೇಷ್ಠನು. 4. ತಿರುಗಿ ಎಲ್ಲಾ ಪ್ರಯಾಸಕ್ಕಾಗಿಯೂ ಪ್ರತಿಯೊಂದು ಒಳ್ಳೆಯ ಕಾರ್ಯಕ್ಕಾಗಿಯೂ ಮನುಷ್ಯನು ತನ್ನ ನೆರೆಯವನ ಮೇಲೆ ಅಸೂಯೆ ಪಡುತ್ತಾನೆಂದೂ ನಾನು ತಿಳುಕೊಂಡೆನು. ಇದೂ ಕೂಡ ವ್ಯರ್ಥವೂ ಪ್ರಾಣಕ್ಕೆ ಆಯಾಸಕರವೂ ಆಗಿದೆ. 5. ಬುದ್ಧಿಹೀನನು ತನ್ನ ಕೈಗಳನ್ನು ಒಟ್ಟಿಗೆ ಮಡಚಿಕೊಂಡು ತನ್ನ ಸ್ವಂತ ಮಾಂಸವನ್ನು ತಿನ್ನುತ್ತಾನೆ. 6. ಪ್ರಯಾಸದಿಂದಲೂ ಪ್ರಾಣಕ್ಕೆ ಆಯಾಸದಿಂದಲೂ ತುಂಬಿದ ಎರಡು ಕೈಗಳಿಂದಾದದ್ದಕಿಂತ ನೆಮ್ಮದಿಯಿಂದ ಕೂಡಿದ ಒಂದು ಕೈಯಿಂದಾದದ್ದೇ ಲೇಸು. 7. ಆಗ ನಾನು ತಿರುಗಿಕೊಂಡು ಸೂರ್ಯನ ಕೆಳಗೆ ಇದ್ದ ವ್ಯರ್ಥವನ್ನು ಕಂಡೆನು. 8. ಎರಡನೆಯವನಿಲ್ಲದ ಒಬ್ಬೊಂಟಿಗನು ಒಬ್ಬನಿದ್ದಾನೆ; ಹೌದು, ಅವನಿಗೆ ಮಗುವಾಗಲೀ ಸಹೋದರನಾಗಲೀ ಇಲ್ಲ; ಆದರೂ ಅವನ ಪ್ರಯಾಸಕ್ಕೆ ಕೊನೆಯಿಲ್ಲ. ಅಲ್ಲದೆ ಐಶ್ವರ್ಯ ದಿಂದ ಅವನ ಕಣ್ಣು ತೃಪ್ತಿಹೊಂದದು; ಮಾತ್ರವಲ್ಲದೆ ಅವನು--ನಾನು ಯಾರಿಗೋಸ್ಕರ ಕಷ್ಟಪಟ್ಟು ಪ್ರಾಣ ವನ್ನು ಅದಕ್ಕೆ ಸುಖವಿಲ್ಲದ ಹಾಗೆ ಕೊರೆತೆಪಡಿಸು ತ್ತೇನೆ; ಎಂದು ಅವನು ಅಂದುಕೊಳ್ಳುವನು. ಇದು ಕೂಡ ವ್ಯರ್ಥವೇ; ಹೌದು, ವ್ಯಥೆಯಿಂದಾದ ಪ್ರಯಾಸವೇ. 9. ಒಬ್ಬನಿಗಿಂತ ಇಬ್ಬರು ಲೇಸು; ತಮ್ಮ ಪ್ರಯಾಸಕ್ಕೆ ಅವರಿಗೆ ಒಳ್ಳೆಯ ಪ್ರತಿಫಲವಿದೆ. 10. ಒಬ್ಬನು ಬಿದ್ದರೆ ಇನ್ನೊಬ್ಬನು ತನ್ನ ಸಂಗಡಿಗನನ್ನು ಎತ್ತುವನು; ಅವನು ಒಬ್ಬೊಂಟಿಗನಾಗಿ ಬಿದ್ದರೆ ಅಯ್ಯೋ! ಅವನಿಗೆ ಸಹಾಯ ಮಾಡುವದಕ್ಕೆ ಇನ್ನೊಬ್ಬ ನಿಲ್ಲ. 11. ತಿರುಗಿ ಇಬ್ಬರು ಜೊತೆಯಲ್ಲಿ ಮಲಗಿಕೊಂಡರೆ ಅವರಿಗೆ ಬೆಚ್ಚಗಾಗುತ್ತದೆ; ಒಬ್ಬನು ಹೇಗೆ ಬೆಚ್ಚಗಾಗಿ ರುತ್ತಾನೆ? 12. ಅವನನ್ನು ಒಬ್ಬನು ಜಯಿಸಿದರೆ ಇಬ್ಬರು ಅವನನ್ನು ಎದುರಿಸುವರು; ಮೂರು ಹುರಿಯ ಹಗ್ಗವು ಬೇಗನೆ ಕಿತ್ತುಹೋಗುವದಿಲ್ಲ. 13. ಬುದ್ಧಿಯ ಹೇಳಿಕೆಗೆ ಕಿವಿಗೊಡದ ಮುದುಕನೂ ಮೂಢನೂ ಆದ ಅರಸನಿಗಿಂತ ಬಡವನೂ ಜ್ಞಾನಿಯೂ ಆದ ಒಂದು ಮಗುವೇ ಮೇಲು. 14. ಸೆರೆ ಯಿಂದ ಆಳುವದಕ್ಕಾಗಿ ಅವನು ಬರುತ್ತಾನೆ; ಇದಲ್ಲದೆ, ತನ್ನ ರಾಜ್ಯದಲ್ಲಿ ಹುಟ್ಟಿದವನು ಬಡವನಾಗುತ್ತಾನೆ. 15. ತನಗೆ ಪ್ರತಿಯಾಗಿ ನಿಲ್ಲುವ ಎರಡನೆಯ ಮಗು ವಿನೊಂದಿಗೆ ನಡೆಯುವ ಜೀವಿತರನ್ನೆಲ್ಲಾ ಸೂರ್ಯನ ಕೆಳಗೆ ನಾನು ನೋಡಿದೆನು. 16. ಎಲ್ಲಾ ಜನರಿಗೂ ಅವರಿಗಿಂತ ಮುಂಚೆ ಇದ್ದ ಎಲ್ಲವುಗಳಿಗೂ ಅಂತ್ಯವಿಲ್ಲ; ಅವನ ತರುವಾಯ ಬರುವವನು ಸಹ ಅವನಲ್ಲಿ ಆನಂದಿಸುವದಿಲ್ಲ. ಖಂಡಿತವಾಗಿಯೂ ಇದೂ ಕೂಡ ವ್ಯರ್ಥವೂ ಮನಸ್ಸಿಗೆ ಆಯಾಸಕರವೂ ಆಗಿದೆ.
Chapter 5
1. ದೇವರ ಆಲಯಕ್ಕೆ ನೀನು ಹೋಗುವಾಗ ನಿನ್ನ ಹೆಜ್ಜೆಯನ್ನು ಗಮನಿಸು; ಬುದ್ಧಿಹೀನರು ಅರ್ಪಿಸುವ ಯಜ್ಞಕ್ಕಿಂತ, ಹೆಚ್ಚಾಗಿ ಕಿವಿಗೊಡುವದಕ್ಕೆ ಸಿದ್ಧನಾಗಿರು. ಅವರು ತಿಳಿಯದೆ ಕೆಟ್ಟದ್ದನ್ನೇ ಮಾಡು ತ್ತಾರೆ. 2. ನಿನ್ನ ಬಾಯಿಂದ ಆತುರಪಡದಿರು ಮತ್ತು ದೇವರ ಮುಂದೆ ಯಾವದನ್ನು ಉಚ್ಚರಿಸುವದಕ್ಕೆ ನಿನ್ನ ಹೃದಯವು ದುಡುಕದೇ ಇರಲಿ; ದೇವರು ಪರಲೋಕ ದಲ್ಲಿದ್ದಾನೆ; ನೀನು ಭೂಮಿಯ ಮೇಲೆ ಇದ್ದೀ; ಆದ ಕಾರಣ ನಿನ್ನ ಮಾತುಗಳು ಕೊಂಚವಾಗಿರಲಿ. 3. ಬಹಳ ಕೆಲಸದ ಮೂಲಕ ಕನಸು ಉಂಟಾಗುತ್ತದೆ; ಬಹು ಮಾತುಗಳಿಂದ ಮೂಢನ ಧ್ವನಿಯು ಗೊತ್ತಾಗುತ್ತದೆ; 4. ದೇವರಿಗೆ ನೀನು ಪ್ರಮಾಣವನ್ನು ಮಾಡಿದರೆ ಅದನ್ನು ತೀರಿಸಲು ತಡಮಾಡಬೇಡ; ಮೂಢರಲ್ಲಿ ಆತನಿಗೆ ಸಂತೋಷವಿಲ್ಲ; ನೀನು ಪ್ರಮಾಣಮಾಡಿದ್ದನು ತೀರಿಸು. 5. ಪ್ರಮಾಣಮಾಡಿ ತೀರಿಸದೆ ಇರುವದಕ್ಕಿಂತ ಪ್ರಮಾಣಮಾಡದೆ ಇರುವದು ಒಳ್ಳೇದು. 6. ನಿನ್ನ ಬಾಯಿಯು ನಿನ್ನ ದೇಹವನ್ನು ಪಾಪಮಾಡಿಸುವಂತೆ ಬಿಡಬೇಡ; ಇಲ್ಲವೆ ಅದು ತಪ್ಪು ಎಂದು ದೂತನ ಮುಂದೆ ಹೇಳಬೇಡ; ಇದರಿಂದ ದೇವರು ಯಾಕೆ ನಿನ್ನ ಮಾತಿಗೆ ಕೋಪಗೊಂಡು ನಿನ್ನ ಕೈಗಳ ಕೆಲಸವನ್ನು ಹಾಳುಮಾಡಬೇಕು? 7. ಬಹು ಕನಸುಗಳಲ್ಲಿ ಬಹಳ ಮಾತುಗಳಲ್ಲಿ ವಿಧವಿಧವಾದ ವ್ಯರ್ಥವಾದವುಗಳು ಇವೆ; ನೀನು ದೇವರಿಗೆ ಭಯಪಡು. 8. ಬಡವರ ಹಿಂಸೆಯನ್ನೂ ಒಬ್ಬ ಅಧಿಪತಿಯಲ್ಲಿ ನೀತಿ ನ್ಯಾಯಗಳ ಬಲಾತ್ಕಾರದ ವಕ್ರತೆಯನ್ನೂ ನೀನು ನೋಡಿದರೆ ಆ ಸಂಗತಿಯಲ್ಲಿ ಆಶ್ಚರ್ಯಪಡಬೇಡ; ಉನ್ನತೋನ್ನತನು ಲಕ್ಷಿಸುತ್ತಾನೆ; ಅವರಿಗಿಂತ ಉನ್ನತವಾ ದವರು ಇದ್ದಾರೆ. 9. ಇದಲ್ಲದೆ ಭೂಮಿಯ ಲಾಭವು ಎಲ್ಲರಿಗೂ ಇದೆ; ಭೂಮಿಯಿಂದಲೇ ಅರಸನಿಗೆ ಸೇವೆ ಯಾಗುತ್ತದೆ. 10. ಬೆಳ್ಳಿಯನ್ನು ಪ್ರೀತಿಸುವವನು ಬೆಳ್ಳಿಯಿಂದ ತೃಪ್ತ ನಾಗನು; ಸಮೃದ್ಧಿಯನ್ನು ಪ್ರೀತಿಸುವವನು ಅಭಿವೃದ್ಧಿ ಯಿಂದ ತೃಪ್ತನಾಗಲಾರನು; ಇದೂ ಕೂಡ ವ್ಯರ್ಥವೇ. 11. ಸೊತ್ತುಗಳು ಹೆಚ್ಚಿದರೆ ಅದನ್ನು ತಿನ್ನುವವರು ಹೆಚ್ಚಾ ಗುವರು; ಅವುಗಳನ್ನು ತಮ್ಮ ಕಣ್ಣುಗಳಿಂದ ನೋಡು ವದೇ ಹೊರತು ಅವುಗಳ ಸ್ವಂತದವರಿಗೆ ಯಾವ ಪ್ರಯೋಜನವಿದೆ? 12. ಪ್ರಯಾಸಪಡುವವನು ಸ್ವಲ್ಪ ತಿಂದರೂ ಹೆಚ್ಚಾಗಿ ತಿಂದರೂ ಅವನು ಹಾಯಾಗಿ ನಿದ್ರಿಸುತ್ತಾನೆ; ಐಶ್ವರ್ಯವಂತನ ಸಮೃದ್ಧಿಯು ಅವನನ್ನು ನಿದ್ರೆಮಾಡಗೊಡಿಸದು. 13. ಸೂರ್ಯನ ಕೆಳಗೆ ವ್ಯಥೆಯಿಂದ ಕೂಡಿದ ಒಂದು ಕೆಟ್ಟತನವನ್ನು ನಾನು ನೋಡಿದ್ದೇನೆ; ಅದು ಯಾವ ದಂದರೆ, ತಮ್ಮ ವ್ಯಥೆಗಾಗಿ ಅವುಗಳ ಯಜ ಮಾನರು ಇಟ್ಟುಕೊಂಡಿದ್ದ ಐಶ್ವರ್ಯವೇ. 14. ಆದರೆ ಕೆಟ್ಟ ಪ್ರಯಾ ಸದಿಂದ ಆ ಆಸ್ತಿಯು ನಾಶವಾಗುತ್ತದೆ; ಅವನು ಒಬ್ಬ ಮಗನನ್ನು ಪಡೆದಿದ್ದರೆ ಅವನ ಕೈಯಲ್ಲಿ ಏನೂ ಇರದು. 15. ತನ್ನ ತಾಯಿಯ ಗರ್ಭದಿಂದ ಅವನು ಹೇಗೆ ಬಂದನೋ ಅವನು ಬಂದ ಹಾಗೆ ಬೆತ್ತಲೆಯಾಗಿ ತಿರುಗಿ ಹೋಗುವನು; ತನ್ನ ಕೈಯಲ್ಲಿ ತಕ್ಕೊಂಡು ಹೋಗುವದಕ್ಕೆ ತನ್ನ ಪ್ರಯಾಸದಲ್ಲಿ ಯಾವದನ್ನು ತೆಗೆದುಕೊಂಡು ಹೋಗುವದಿಲ್ಲ. 16. ಇದೂ ಕೂಡ ವ್ಯಥೆಯಿಂದ ಕೂಡಿದ ಕೆಟ್ಟತನವೇ. ಅದು ಯಾವ ದಂದರೆ ಎಲ್ಲಾ ವಿಷಯಗಳಲ್ಲಿ ತಾನು ಹೇಗೆ ಬಂದನೋ ಹಾಗೆಯೇ ಹೋಗುವನು; ಗಾಳಿಗಾಗಿ ಪ್ರಯಾಸಪಟ್ಟ ವನಿಗೆ ಲಾಭವೇನಿದೆ? 17. ತನ್ನ ಜೀವಮಾನದಲ್ಲೆಲ್ಲಾ ಅವನು ಕತ್ತಲೆಯಲ್ಲಿ ತಿನ್ನುತ್ತಾನೆ; ತನ್ನ ವ್ಯಾಧಿಯೊಂದಿಗೆ ಅವನಿಗೆ ಬಹಳ ವ್ಯಥೆಯೂ ಕ್ರೋಧವೂ ಇರುತ್ತದೆ. 18. ನಾನು ಕಂಡದ್ದನ್ನು ನೋಡು; ದೇವರು ತನಗೆ ಕೊಟ್ಟದ್ದನ್ನು ಸೂರ್ಯನ ಕೆಳಗೆ ತಾನು ಕೈಕೊಂಡ ಪ್ರಯಾಸದ ಸುಖವನ್ನು ಅನುಭವಿಸಿ ತಿಂದು ಕುಡಿ ಯುವದು ಮನುಷ್ಯನಿಗೆ ಒಳ್ಳೆಯದೂ ಉಚಿತವಾದದ್ದೂ ಆಗಿದೆ; ಅದು ಅವನ ಪಾಲು. 19. ಪ್ರತಿ ಯೊಬ್ಬ ಮನುಷ್ಯನಿಗೆ ದೇವರು ಕೊಟ್ಟ ಆಸ್ತಿಪಾಸ್ತಿಗ ಳನ್ನೂ ಅವುಗಳನ್ನು ಅನುಭವಿಸುವದಕ್ಕೆ ಆತನು ಕೊಟ್ಟ ಸಾಮರ್ಥ್ಯವನ್ನೂ ಅವನು ತನ್ನ ಪಾಲನ್ನು ತೆಗೆದು ಕೊಂಡು ತನ್ನ ಪ್ರಯಾಸದಲ್ಲಿ ಆನಂದಿಸುವದೂ ದೇವರ ದಾನದಿಂದಲೇ. 20. ತನ್ನ ಜೀವಿತದ ದಿನಗಳನ್ನು ಅವನು ಹೆಚ್ಚಾಗಿ ಗಣನೆಗೆ ತಾರನು; ತನ್ನ ಹೃದಯದ ಸಂತೋಷ ದಲ್ಲಿ ದೇವರು ಅವನಿಗೆ ಉತ್ತರಕೊಡುತ್ತಾನೆ.
Chapter 6
1. ಸೂರ್ಯನ ಕೆಳಗೆ ಇರುವ ಒಂದು ಕೇಡನ್ನು ನಾನು ಕಂಡೆನು; ಅದು ಮನುಷ್ಯರೊ ಳಗೆ ಸಾಧಾರಣವಾಗಿದೆ. 2. ತಾನು ಅಪೇಕ್ಷೆ ಪಟ್ಟದ್ದ ರಲ್ಲಿ ಯಾವದೂ ತನ್ನ ಪ್ರಾಣಕ್ಕೆ ಕೊರತೆಯಾಗದಂತೆ ದೇವರು ತನಗೆ ಅನುಗ್ರಹಿಸಿದ ಧನವೂ ಐಶ್ವರ್ಯವೂ ಸನ್ಮಾನವೂ ಇರುವ ಮನುಷ್ಯನಿಗೆ ಅದನ್ನು ಅನುಭವಿಸು ವಂತೆ ಆತನು ಸಾಮರ್ಥ್ಯವನ್ನು ಕೊಡುವದಿಲ್ಲ; ಆದರೆ ಪರನು ಅದನ್ನು ಅನುಭವಿಸುತ್ತಾನೆ; ಇದು ವ್ಯರ್ಥವೂ ಕೆಟ್ಟರೋಗವೂ ಆಗಿದೆ. 3. ತನ್ನ ವರುಷಗಳ ದಿನಗಳು ಬಹಳವಾಗಿದ್ದು ತನ್ನ ಪ್ರಾಣವು ಸುಖದಿಂದ ತೃಪ್ತಿ ಪಡದೆ ತನಗೆ ಹೂಣಿಡುವಿಕೆಯು ಇಲ್ಲದೇ ಅವನು ನೂರು ಮಕ್ಕಳನ್ನು ಪಡೆದು ಅನೇಕ ವರುಷಗಳು ಬದುಕಿದರೆ ನಾನು ಹೇಳುವದೇನಂದರೆ, ಅವನಿ ಗಿಂತಲೂ ಇನ್ನು ಹುಟ್ಟದಿರುವವನೇ ಉತ್ತಮ. 4. ಅವನು ವ್ಯರ್ಥದಿಂದ ಬಂದು ಕತ್ತಲೆಯಲ್ಲಿ ಹೊರಟು ಹೋಗು ತ್ತಾನೆ; ಅವನ ಹೆಸರು ಕತ್ತಲೆಯಿಂದ ಮುಚ್ಚಲ್ಪಡುವದು. 5. ಇದಲ್ಲದೆ ಅವನು ಸೂರ್ಯನನ್ನು ನೋಡಲಿಲ್ಲ, ಯಾವದನ್ನು ಅರಿತಿರಲಿಲ್ಲ; ಮತ್ತೊಬ್ಬನಿಗಿಂತ ಇದಕ್ಕೆ ಹೆಚ್ಚಿನ ವಿಶ್ರಾಂತಿ ಇದೆ. 6. ಹೌದು, ಎರಡು ಸಾವಿರ ದಷ್ಟು ವರುಷಗಳು ಅವನು ಬದುಕಿದರೂ ಅವನು ಸುಖವನ್ನು ಅನುಭವಿಸಲಿಲ್ಲ; ಎಲ್ಲರೂ ಒಂದೇ ಸ್ಥಳಕ್ಕೆ ಹೋಗುತ್ತಾರಲ್ಲವೇ? 7. ಮನುಷ್ಯನ ಪ್ರಯಾಸವೆಲ್ಲಾ ಅವನ ಹೊಟ್ಟೆಗಾಗಿಯೇ ಮತ್ತು ಅವನ ಅಪೇಕ್ಷೆ ತೃಪ್ತಿಹೊಂದುವದಿಲ್ಲ. 8. ಬುದ್ಧಿಹೀನನಿಗಿಂತ ಜ್ಞಾನಿಗೆ ಹೆಚ್ಚು ಏನಿದೆ? ಜೀವಿತರ ಮುಂದೆ ನಡೆಯುವದಕ್ಕೆ ತಿಳಿದ ಬಡವನಿಗೆ ಏನಿದೆ? 9. ಅಪೇಕ್ಷೆಯ ತಿರುಗಾಟ ಕ್ಕಿಂತ ಕಣ್ಣುಗಳ ದೃಷ್ಟಿಯು ಉತ್ತಮ; ಇದೂ ಕೂಡ ವ್ಯರ್ಥವೂ ಮನಸ್ಸಿಗೆ ಆಯಾಸಕರವೂ ಆಗಿದೆ. 10. ಇದ್ದವನು ಆಗಲೇ ಹೆಸರುಗೊಂಡಿದ್ದಾನೆ; ಅವನು ಮನುಷ್ಯನೇ ಎಂದು ಗೊತ್ತಾಗಿದೆ; ಅಲ್ಲದೆ ಅವನಿಗಿಂತ ಬಲಿಷ್ಟನೊಂದಿಗೆ ಅವನು ಹೋರಾಡುವದಿಲ್ಲ. 11. ವ್ಯರ್ಥವಾದದ್ದನ್ನು ವೃದ್ಧಿಗೊಳಿಸುವ ಅನೇಕ ಸಂಗತಿ ಗಳು ಇರುವದರಿಂದ ಮನುಷ್ಯನಿಗೆ ಏನು ಲಾಭ? 12. ನೆರಳಿನಂತೆ ತನ್ನ ವ್ಯರ್ಥವಾದ ಜೀವಿತದ ಎಲ್ಲಾ ದಿವಸಗಳು ಕಳೆಯುವ ಮನುಷ್ಯನಿಗೆ ಈ ಜೀವಿತ ದಲ್ಲಿ ಯಾವದು ಒಳ್ಳೇದೆಂದು ಯಾವನು ಬಲ್ಲನು? ಸೂರ್ಯನ ಕೆಳಗೆ ಅವನ ತರುವಾಯ ಏನು ಇರುವ ದೆಂದು ಯಾವ ಮನುಷ್ಯನಿಗೆ ಹೇಳಬಲ್ಲನು.
Chapter 7
1. ಅಮೂಲ್ಯವಾದ ತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ; ಒಬ್ಬನ ಜನ್ಮದಿನಕ್ಕಿಂತ ಮರಣದ ದಿನವೇ ಮೇಲು. 2. ಔತಣದ ಮನೆಗೆ ಹೋಗುವದಕ್ಕಿಂತ ಗೋಳಾಟದ ಮನೆಗೆ ಹೋಗು ವದು ಲೇಸು; ಎಲ್ಲಾ ಮನುಷ್ಯರ ಅಂತ್ಯವು ಇದಾಗಿದೆ; ಇದರಿಂದ ಜೀವಿತನು ಅದನ್ನು ತಮ್ಮ ಹೃದಯದಲ್ಲಿ ಇಟ್ಟು ಸ್ಮರಿಸಿಕೊಳ್ಳುವನು. 3. ನಗೆಗಿಂತ ದುಃಖವು ವಾಸಿ; ಹೃದಯದ ದುಃಖದ ಭಾವನೆಯಿಂದ ಹೃದಯವು ಗುಣವಾಗುತ್ತದೆ. 4. ಗೋಳಾಟದ ಮನೆಯಲ್ಲಿ ಜ್ಞಾನಿಯ ಹೃದಯವು ಇರುವದು; ಮೂಢರ ಹೃದಯವು ಉಲ್ಲಾ ಸದ ಮನೆಯಲ್ಲಿರುವದು. 5. ಮೂಢರ ಹಾಡನ್ನು ಒಬ್ಬ ಮನುಷ್ಯನು ಕೇಳುವದಕ್ಕಿಂತ ಜ್ಞಾನಿಗಳ ಗದರಿಕೆಯನ್ನು ಕೇಳುವದು ಲೇಸು. 6. ಗಡಿಗೆಯ ಕೆಳಗೆ ಮುಳ್ಳುಗಳ ಚಟಚಟನೆಯ ಶಬ್ದ ಹೇಗೋ ಮೂಢನ ನಗುವು ಹಾಗೆಯೇ ಇರುವದು; ಇದೂ ಕೂಡ ವ್ಯರ್ಥವೇ. 7. ಖಂಡಿತವಾಗಿಯೂ ಬಲಾತ್ಕಾರವು ಜ್ಞಾನಿಯನ್ನು ಹುಚ್ಚನನ್ನಾಗಿ ಮಾಡುತ್ತದೆ; ಲಂಚವು ಹೃದಯವನ್ನು ನಾಶಮಾಡುತ್ತದೆ. 8. ಒಂದು ಸಂಗತಿಯ ಪ್ರಾರಂಭ ಕ್ಕಿಂತ ಅದರ ಅಂತ್ಯವೇ ಲೇಸು; ಆತ್ಮದಲ್ಲಿ ಗರ್ವಿಷ್ಠ ನಿಗಿಂತ ತಾಳ್ಮೆಯುಳ್ಳವನೇ ಉತ್ತಮ. 9. ಕೋಪಿಸಿಕೊಳ್ಳು ವದಕ್ಕೆ ನಿನ್ನ ಮನಸ್ಸಿನಲ್ಲಿ ಆತುರಪಡದಿರು; ಕೋಪವು ಮೂಢರ ಎದೆಯಲ್ಲಿ ನೆಲೆಗೊಳ್ಳುತ್ತದೆ. 10. ಹಿಂದಿನ ದಿವಸಗಳು ಈ ದಿವಸಗಳಿಗಿಂತ ಮೇಲಾ ಗಿರುವದಕ್ಕಾಗಿ ಕಾರಣವೇನು ಎಂದು ನೀನು ಹೇಳ ಬೇಡ. ಈ ವಿಷಯದಲ್ಲಿ ನೀನು ಜ್ಞಾನದಿಂದ ವಿಚಾರಿ ಸುವದಿಲ್ಲ. 11. ಜ್ಞಾನವು ಬಾಧ್ಯತೆಯ ಹಾಗೆ ಒಳ್ಳೇದು. ಸೂರ್ಯನನ್ನು ನೋಡುವವರಿಗೆ ಅದರಿಂದ ಲಾಭ ವಿದೆ. 12. ಜ್ಞಾನವು ಆಶ್ರಯ, ಧನವು ಆಶ್ರಯ; ಆದರೆ ತಿಳುವಳಿಕೆಯ ಶ್ರೇಷ್ಠತೆ ಏನಂದರೆ, ಅದನ್ನು ಹೊಂದಿದವರಿಗೆ ಜ್ಞಾನವು ಜೀವವನ್ನು ಕೊಡುತ್ತದೆ. 13. ದೇವರ ಕಾರ್ಯವನ್ನು ಯೋಚಿಸು; ಆತನು ಡೊಂಕು ಮಾಡಿದ್ದನ್ನು ಯಾವನು ನೆಟ್ಟಗೆ ಮಾಡಲು ಶಕ್ತನು. 14. ಅಭಿವೃದ್ಧಿಯ ದಿನದಲ್ಲಿ ಸಂತೋಷವಾಗಿರು; ಆದರೆ ವಿಪತ್ಕಾಲದ ದಿವಸದಲ್ಲಿ ಯೋಚಿಸು; ತನ್ನ ಅಂತ್ಯ ಬಂದಾಗ ಮನುಷ್ಯನು ಯಾವದನ್ನು ನೋಡದಂತೆ ದೇವರು ಸಹ ಒಂದರ ಮೇಲೊಂದನ್ನು ಇಟ್ಟಿದ್ದಾನೆ. 15. ನನ್ನ ವ್ಯರ್ಥದ ದಿನಗಳಲ್ಲಿ ಎಲ್ಲಾ ವಿಷಯಗಳನ್ನು ನಾನು ನೋಡಿದ್ದೇನೆ; ನೀತಿವಂತನು ತನ್ನ ನೀತಿಯಲ್ಲಿ ನಾಶವಾಗುತ್ತಾನೆ. ದುಷ್ಟನು ತನ್ನ ದುಷ್ಟತನದಲ್ಲಿ ತನ್ನ ಜೀವಮಾನವನ್ನು ಹೆಚ್ಚಿಸಿಕೊಳ್ಳುತ್ತಾನೆ. 16. ನೀನು ಅತಿ ಯಾಗಿ ನೀತಿವಂತನಾಗಿರಬೇಡ; ಅಲ್ಲದೆ ಅತಿಯಾಗಿ ನಿನ್ನನ್ನು ಜ್ಞಾನಿಯನ್ನಾಗಿ ಮಾಡಿಕೊಳ್ಳಬೇಡ; ನಿನ್ನನ್ನು ನೀನೇ ಯಾಕೆ ನಾಶಪಡಿಸಿಕೊಳ್ಳುವಿ? 17. ನೀನು ಅತಿ ಯಾಗಿ ದುಷ್ಟನಾಗಿರಬೇಡ; ಇಲ್ಲವೆ ಮೂರ್ಖನಾಗಿರ ಬೇಡ; ನಿನ್ನ ಸಮಯಕ್ಕಿಂತ ಮೊದಲು ನೀನು ಯಾಕೆ ಸಾಯುವಿ? 18. ನೀನು ಇದನ್ನು ಹಿಡಿದುಕೊಳ್ಳುವದು ಒಳ್ಳೇದು. ಹೌದು, ಇದರಿಂದ ನಿನ್ನ ಕೈಯನ್ನು ಹಿಂತೆ ಗೆಯಬೇಡ; ದೇವರಿಗೆ ಭಯಪಡುವವನು ಅವೆಲ್ಲವು ಗಳಿಂದ ಹೊರಗೆ ಬರುವನು. 19. ಪಟ್ಟಣದಲ್ಲಿರುವ ಹತ್ತು ಮಂದಿ ಬಲಿಷ್ಠರಿಗಿಂತ ಜ್ಞಾನವು ಜ್ಞಾನಿಗಳನ್ನು ಬಲಪಡಿಸುತ್ತದೆ. 20. ಪಾಪ ಮಾಡದೆ ಒಳ್ಳೇದನ್ನೇ ನಡಿಸುವ ನೀತಿವಂತನು ಭೂಮಿಯ ಮೇಲೆ ಒಬ್ಬನೂ ಇಲ್ಲ. 21. ನಿನ್ನ ಸೇವಕನು ನಿನ್ನನ್ನು ಶಪಿಸುವದನ್ನು ನೀನು ಕೇಳದಂತೆ ಆಡಿದ ಎಲ್ಲಾ ಮಾತುಗಳನ್ನು ನೀನು ಸಹ ಲಕ್ಷಿಸಬೇಡ; 22. ಅದೇ ಪ್ರಕಾರ ನೀನು ನೀನಾಗಿಯೇ ಅನೇಕಸಲ ಇತರರನ್ನು ಶಪಿಸಿದ್ದು ನಿನ್ನ ಹೃದಯಕ್ಕೆ ತಿಳಿದದೆ; 23. ಇದೆಲ್ಲವನ್ನು ನಾನು ಜ್ಞಾನದಿಂದ ಪರೀಕ್ಷಿಸಿದ್ದೇನೆ; ಆಗ--ನಾನು ಜ್ಞಾನಿಯಾಗಿರುವೆನು ಎಂದು ಅಂದು ಕೊಂಡೆನು; ಅದು ನನ್ನಿಂದ ದೂರವಾಯಿತು. 24. ದೂರ ದಲ್ಲಿರುವದನ್ನೂ ಅಗಾಧದಲ್ಲಿರುವದನ್ನೂ ಯಾವನು ಕಂಡುಕೊಂಡಾನು? 25. ಜ್ಞಾನದ ಮೂಲತತ್ವಗಳನ್ನೂ ಮೂಢತನದ ಕೆಟ್ಟತನವನ್ನೂ ಅಂದರೆ ಮೂಢತನ ವನ್ನೂ ಹುಚ್ಚುತನವನ್ನೂ ತಿಳುಕೊಳ್ಳುವಂತೆ ಪರೀಕ್ಷಿಸು ವವನಾಗಿಯೂ ನಾನು ನನ್ನ ಹೃದಯವನ್ನು ಪ್ರಯೋ ಗಿಸಿದೆನು. 26. ತನ್ನ ಹೃದಯವು ಉರುಲುಗಳೂ ಬಲೆ ಗಳೂ ಅವಳ ಕೈಗಳ ಕಟ್ಟುಗಳೂ ಆಗಿರುವ ಸ್ತ್ರೀಯು ಮರಣಕ್ಕಿಂತಲೂ ಕಠೋರವಾಗಿದ್ದಾಳೆಂದು ನಾನು ಕಂಡಿದ್ದೇನೆ. ದೇವರನ್ನು ಮೆಚ್ಚಿಸಿದವನು ಅವಳಿಂದ ತಪ್ಪಿಸಿಕೊಳ್ಳುವನು; ಪಾಪಿಯು ಅವಳಿಂದ ಹಿಡಿಯಲ್ಪ ಡುವನು. 27. ಇಗೋ, ಲೆಕ್ಕವನ್ನು ಕಂಡುಹಿಡಿಯಲು ಒಂದೊಂದನ್ನಾಗಿ ಎಣಿಸಿ ನಾನು ಇದನ್ನು ಕಂಡುಕೊಂಡೆ ನೆಂದು ಪ್ರಸಂಗಿ ಹೇಳುತ್ತಾನೆ: 28. ಅದನ್ನು ಇನ್ನೂ ನನ್ನ ಪ್ರಾಣವು ಹುಡುಕುತ್ತದೆ; ನನಗೆ ಸಿಕ್ಕಲಿಲ್ಲ; ಸಾವಿರದಲ್ಲಿ ಒಬ್ಬ ಪುರುಷನನ್ನು ನಾನು ಕಂಡುಕೊಂಡಿ ದ್ದೇನೆ; ಅವರೆಲ್ಲರಲ್ಲಿ ನಾನು ಒಬ್ಬ ಹೆಂಗಸನ್ನು ಕಂಡು ಕೊಳ್ಳಲಿಲ್ಲ. 29. ಇಗೋ, ದೇವರು ಮನುಷ್ಯನನ್ನು ಸತ್ಯವಂತನನ್ನಾಗಿ ಮಾಡಿದನು. ಇದನ್ನು ಮಾತ್ರ ನಾನು ಕಂಡುಕೊಂಡಿದ್ದೇನೆ, ಅವರಾದರೋ ಅನೇಕ ಕಲ್ಪನೆ ಗಳನ್ನು ಹುಡುಕಿದ್ದಾರೆ.
Chapter 8
1. ಜ್ಞಾನಿಯ ಹಾಗೆ ಇರುವವನು ಯಾರು? ಈ ಸಂಗತಿಯ ಅರ್ಥವನ್ನು ಬಲ್ಲವನು ಯಾರು? ಒಬ್ಬ ಮನುಷ್ಯನ ಜ್ಞಾನವು ಅವನ ಮುಖ ವನ್ನು ಬೆಳಗಿಸುತ್ತದೆ, ಅವನ ಧೈರ್ಯದ ಮುಖವು ಬದಲಾಗುವದು. 2. ನಾನು ನಿಮಗೆ--ದೇವರ ಮೇಲೆ ಆಣೆಯಿಟ್ಟು ಅರಸನ ಆಜ್ಞೆಯನ್ನು ಕೈಕೊಳ್ಳಿರಿ ಎಂದು ಆಲೋಚನೆ ಹೇಳಿಕೊಡುತ್ತೇನೆ. 3. ಅವನ ದೃಷ್ಟಿಯಿಂದ ಹೊರಗೆ ಹೋಗುವದಕ್ಕೆ ಆತುರಪಡಬೇಡಿರಿ; ಕೆಟ್ಟ ಕಾರ್ಯದಲ್ಲಿ ನಿಲ್ಲಬೇಡಿರಿ; ಅವನು ತನಗೆ ಇಷ್ಟ ಬಂದದ್ದನ್ನೆಲ್ಲಾ ಮಾಡುತ್ತಾನೆ. 4. ಅರಸನ ಮಾತು ಎಲ್ಲಿ ದೆಯೋ ಅಲ್ಲಿ ಶಕ್ತಿ ಇದೆ; ನೀನು ಏನು ಮಾಡು ತ್ತಿರುವೆ ಎಂದು ಅವನಿಗೆ ಹೇಳುವವನಾರು? 5. ಆಜ್ಞೆ ಯನ್ನು ಕೈಕೊಳ್ಳುವವನು ಯಾವನೂ ಕೆಟ್ಟದ್ದನ್ನು ಅನು ಭವಿಸನು: ಜ್ಞಾನಿಯ ಹೃದಯವು ಕಾಲ ನ್ಯಾಯ ಎರಡನ್ನೂ ತಿಳಿದುಕೊಳ್ಳುತ್ತದೆ. 6. ಪ್ರತಿಯೊಂದು ಕಾರ್ಯಕ್ಕೂ ಕಾಲ ಮತ್ತು ನ್ಯಾಯಗಳಿವೆ, ಆದದರಿಂದ ಮನುಷ್ಯನ ಕಷ್ಟವು ಅವನ ಮೇಲೆ ದೊಡ್ಡದಾಗಿ ಘೋರವಾಗಿದೆ. 7. ಮುಂದೆ ಆಗುವದೇನೆಂದು ಅವ ನಿಗೆ ತಿಳಿಯದು; ಅದು ಯಾವಾಗ ಆಗುವದೆಂದು ಯಾರು ಅವನಿಗೆ ಹೇಳುವರು? 8. ಆತ್ಮವನ್ನು ಹಿಡಿ ಯುವ ಶಕ್ತಿ ಯಾವ ಮನುಷ್ಯನಿಗೂ ಇಲ್ಲ; ಹಾಗೆಯೇ ಮರಣ ದಿನವನ್ನು ತಡೆಯುವ ಶಕ್ತಿಯು ಯಾರಿಗೂ ಇರುವದಿಲ್ಲ. ಯುದ್ಧದಿಂದ ಬಿಡುಗಡೆಯೂ ಹೇಗೆ ಇಲ್ಲವೋ ಹಾಗೆಯೇ ದುಷ್ಟನಿಗೆ ಅದರಿಂದ ಬಿಡು ಗಡೆಯೇ ಇಲ್ಲ. 9. ನಾನು ಇದನ್ನೆಲ್ಲಾ ನೋಡಿ ಸೂರ್ಯನ ಕೆಳಗೆ ಮಾಡುವ ಪ್ರತಿಯೊಂದು ಕೆಲ ಸಕ್ಕೂ ನನ್ನ ಹೃದಯವನ್ನು ಪ್ರಯೋಗಿಸಿದ್ದೇನೆ; ಒಬ್ಬ ಮನುಷ್ಯನು ಇನ್ನೊಬ್ಬನ ಮೇಲೆ ತನ್ನ ಹಾನಿಗಾಗಿ ಅಧಿಕಾರ ನಡಿಸುವಂತ ಕಾಲವೂ ಇದೆ. 10. ಪರಿಶುದ್ಧ ಸ್ಥಳದಿಂದ ತೊಲಗಿದ ದುಷ್ಟರು ಹೂಣ ಲ್ಪಡುವದನ್ನೂ ನಾನು ನೋಡಿದ್ದೇನೆ; ಅವರು ಹೀಗೆ ಮಾಡಿದ ಪಟ್ಟಣವನ್ನೇ ಮರೆತರು; ಇದೂ ಸಹ ನಿರರ್ಥಕವಾದದ್ದು; 11. ದುಷ್ಟ ಕೆಲಸಕ್ಕೆ ದಂಡನೆಯು ಕೂಡಲೇ ಆಗದಿರುವದರಿಂದ ಮನುಷ್ಯಪುತ್ರರ ಹೃದ ಯವು ಅವರನ್ನು ಕೆಟ್ಟದ್ದನ್ನು ಮಾಡುವದರಲ್ಲಿಯೇ ತುಂಬಿಸುವದು. 12. ಪಾಪಿಯು ನೂರು ಸಾರಿ ಕೆಟ್ಟದ್ದನ್ನು ಮಾಡಿ ದಿವಸಗಳನ್ನು ಹೆಚ್ಚಿಸಿದರೂ ದೇವರಿಗೆ ಭಯ ಪಟ್ಟು ಆತನಲ್ಲಿ ಭಯಪಡುವವರಿಗೆ ಒಳ್ಳೇದಾಗುವ ದೆಂದು ನಾನು ನಿಶ್ಚಯವಾಗಿಯೂ ಬಲ್ಲೆನು. 13. ಆದರೆ ದುಷ್ಟನಿಗೆ ಒಳ್ಳೆಯದಾಗುವದಿಲ್ಲ. ತನ್ನ ನೆರಳಿನ ಹಾಗಿ ರುವ ಅವನ ದಿವಸಗಳನ್ನು ಹೆಚ್ಚಿಸುವದಿಲ್ಲ; ಅವನು ದೇವರ ಮುಂದೆ ಭಯಪಡುವದಿಲ್ಲ. 14. ಭೂಮಿಯ ಮೇಲೆ ಮಾಡುವ ಒಂದು ವ್ಯರ್ಥವಾದದ್ದಿದೆ; ದುಷ್ಟರ ಕೆಲಸದ ಪ್ರಕಾರ ಅನುಭವಿಸುವ ನೀತಿವಂತರಿದ್ದಾರೆ; ನೀತಿವಂತರ ಕೆಲಸದ ಪ್ರಕಾರ ಅನುಭವಿಸುವ ದುಷ್ಟರಿ ದ್ದಾರೆ. ಇದೂ ಸಹ ವ್ಯರ್ಥವೆಂದು ನಾನು ಹೇಳಿದೆನು. 15. ಆಗ ನಾನು ಸಂತೋಷವನ್ನು ಹೊಗಳಿದೆನು. ಮನು ಷ್ಯನಿಗೆ ಸೂರ್ಯನ ಕೆಳಗೆ ಕುಡಿಯುವದೂ ತಿನ್ನುವದೂ ಸಂತೋಷಪಡುವದೇ ಹೊರತು ಬೇರೇನೂ ಒಳ್ಳೆ ಯದು ಇಲ್ಲ; ಸೂರ್ಯನ ಕೆಳಗೆ ದೇವರು ಅವನಿಗೆ ಕೊಡುವ ಜೀವನದ ದಿವಸಗಳಲ್ಲಿ ಅವನು ಪಡುವ ಕಷ್ಟದಿಂದ ಅದು ಅವನಿಗೆ ಸೇರುತ್ತದೆ. 16. ಜ್ಞಾನವನ್ನು ತಿಳಿದುಕೊಳ್ಳುವದಕ್ಕೂ ಮತ್ತು ಭೂಮಿಯ ಮೇಲೆ ಮಾಡುವ ಕಾರ್ಯವನ್ನು ನೋಡುವದಕ್ಕೂ ನಾನು ನನ್ನ ಹೃದಯವನ್ನು ಪ್ರಯೋಗಿಸಿದೆನು; (ಯಾಕಂದರೆ ರಾತ್ರಿಹಗಲು ತಮ್ಮ ಕಣ್ಣುಗಳಿಗೆ ನಿದ್ರೆ ನೋಡದ ವರೂ ಇದ್ದಾರೆ). 17. ತರುವಾಯ ದೇವರ ಎಲ್ಲಾ ಕೆಲಸಗಳನ್ನು ನಾನು ನೋಡಿದೆನು; ಅದೇನಂದರೆ, ಸೂರ್ಯನ ಕೆಳಗೆ ಮಾಡುವ ಕೆಲಸಗಳನ್ನು ಮನು ಷ್ಯನು ಕಾಣಲಾರನು; ಮನುಷ್ಯನು ಅದನ್ನು ಹುಡು ಕುವದಕ್ಕೆ ಎಷ್ಟು ಕಷ್ಟಪಟ್ಟರೂ ಅದನ್ನು ಕಂಡು ಕೊಳ್ಳಲಾರನು; ಹೌದು, ಜ್ಞಾನಿಯು ಅದನ್ನು ತಿಳಿದುಕೊಳ್ಳಲು ಯೋಚಿಸಿದರೂ ಅವನು ಅದನ್ನು ಕಂಡುಕೊಳ್ಳಲಾರನು.
Chapter 9
1. ನಾನು ಇವೆಲ್ಲವುಗಳ ಮೇಲೆ ಮನಸ್ಸಿಟ್ಟು ಇವೆಲ್ಲವುಗಳಲ್ಲಿ ನಾನು ತೀರ್ಮಾನಿಸಿ ದ್ದೇನಂದರೆ--ನೀತಿವಂತನು ಮತ್ತು ಜ್ಞಾನಿ ಇವರ ಕೆಲಸಗಳು ದೇವರ ಕೈಯಲ್ಲಿವೆ; ಯಾವ ಮನುಷ್ಯನೂ ಅವರ ಮುಂದಿರುವ ಎಲ್ಲವುಗಳನ್ನು, ಅಂದರೆ ಪ್ರೀತಿ ಯನ್ನು ಅಥವಾ ದ್ವೇಷವನ್ನು ತಿಳಿಯಲಾರನು. 2. ಎಲ್ಲವು ಗಳು ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವವು. ನೀತಿವಂತನಿಗೂ ದುಷ್ಟನಿಗೂ ಸಂಗತಿ ಒಳ್ಳೆಯವನಿಗೂ ಶುದ್ಧನಿಗೂ ಅಶುದ್ಧನಿಗೂ ಮತ್ತು ಅರ್ಪಿಸುವವನಿಗೂ ಅರ್ಪಿಸದವನಿಗೂ ಒಂದೇ ಗತಿಯಾಗುವದು. ಒಳ್ಳೆಯ ವನ ಹಾಗೆಯೇ ಪಾಪಿಯೂ ಇರುವನು; ಆಣೆಯಿಡು ವವನಿಗೆ ಹೇಗೋ ಹಾಗೆಯೇ ಆಣೆಗೆ ಭಯಪಡುವ ವನೂ ಇರುವನು. 3. ಸೂರ್ಯನ ಕೆಳಗೆ ಮಾಡುವ ಎಲ್ಲಾ ಸಂಗತಿಗಳಲ್ಲಿಯೂ ಇದೂ ಒಂದು ಕೆಟ್ಟದ್ದು; ಇದಕ್ಕೆಲ್ಲಾ ಒಂದು ಗತಿಯಿದೆ; ಹೌದು, ಮನುಷ್ಯ ಕುಮಾರರ ಹೃದಯಗಳು ಸಹ ಕೆಟ್ಟತನದಿಂದ ತುಂಬಿವೆ; ಅವರು ಜೀವಿಸುವಾಗ ಅವರ ಹೃದಯಗಳಲ್ಲಿ ಹುಚ್ಚು ತನವಿದೆ. ಅನಂತರ ಅವರು ಸಾಯುತ್ತಾರೆ (ಸತ್ತವರ ಬಳಿಗೆ ಹೋಗುತ್ತಾರೆ.) 4. ಜೀವಂತರಾಗಿರುವವರೆಲ್ಲ ರೊಂದಿಗೆ ಸೇರಿಕೊಂಡವನಿಗೆ ನಿರೀಕ್ಷೆ ಇರುವದು. ಸತ್ತ ಸಿಂಹಕ್ಕಿಂತ ಬದುಕಿರುವ ನಾಯಿಯೇ ಲೇಸು. 5. ಬದುಕಿರುವವರು ತಾವು ಸಾಯುತ್ತೇವೆಂದು ತಿಳಿದಿ ದ್ದಾರೆ; ಆದರೆ ಸತ್ತವರಿಗೆ ಏನೂ ತಿಳಿಯದು. ಇಲ್ಲವೆ ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇರದು. ಅವರ ಜ್ಞಾಪಕವು ಮರೆತುಹೋಗಿದೆ. 6. ಅವರ ಪ್ರೀತಿಯೂ ದ್ವೇಷವೂ ಹೊಟ್ಟೇಕಿಚ್ಚೂ ಸಹ ಈಗ ಅಳಿದು ಹೋಗಿವೆ. ಸೂರ್ಯನ ಕೆಳಗೆ ಆಗುವ ಯಾವ ದರಲ್ಲೂ ಎಂದಿಗೂ ಅವರಿಗೆ ಪಾಲು ಇಲ್ಲ. 7. ನೀನು ಹೋಗಿ ಸಂತೋಷದಿಂದ ನಿನ್ನ ರೊಟ್ಟಿ ಯನ್ನು ತಿಂದು ಹರ್ಷಹೃದಯದಿಂದ ನಿನ್ನ ದ್ರಾಕ್ಷಾ ರಸವನ್ನು ಕುಡಿ; ದೇವರು ಈಗ ನಿನ್ನ ಕೆಲಸಗಳನ್ನು ಒಪ್ಪಿಕೊಳ್ಳುತ್ತಾನೆ. 8. ನಿನ್ನ ವಸ್ತ್ರಗಳು ಯಾವಾಗಲೂ ಬಿಳುಪಾಗಿರಲಿ. ನಿನ್ನ ತಲೆಯಲ್ಲಿ ಎಣ್ಣೆಯು ಕಡಿಮೆ ಯಾಗದಿರಲಿ. 9. ನಿನ್ನ ನಿರ್ಥಕವಾದ ಎಲ್ಲಾ ದಿನಗಳಲ್ಲಿ ಸೂರ್ಯನ ಕೆಳಗೆ ಆತನು ನಿನಗೆ ಕೊಟ್ಟ ಜೀವನದ ಎಲ್ಲಾ ದಿನಗಳಲ್ಲಿ ನೀನು ಪ್ರೀತಿಸುವ ನಿನ್ನ ಹೆಂಡತಿ ಯೊಡನೆ ಆನಂದದಿಂದ ವಾಸಿಸು; ಸೂರ್ಯನ ಕೆಳಗೆ ನೀನು ಪಡುವ ಕಷ್ಟದಲ್ಲಿಯೂ ಇದೇ ನಿನ್ನ ಪಾಲಾಗಿದೆ. 10. ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಶಕ್ತಿಯಿಂದ ಮಾಡು; ನೀನು ಹೋಗಲಿರುವ ಸಮಾಧಿಯಲ್ಲಿ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ. 11. ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನೋಡಿದ್ದೇನಂದರೆ, ವೇಗಿಗಳಿಗೆ ಓಟವೂ ಪರಾಕ್ರಮ ಶಾಲಿಗಳಿಗೆ ಯುದ್ಧವೂ ಜ್ಞಾನಿಗಳಿಗೆ ರೊಟ್ಟಿಯೂ ವಿವೇಕಿಗಳಿಗೆ ಐಶ್ವರ್ಯವೂ ಪ್ರವೀಣರಿಗೆ ದಯೆಯೂ ಸಿಗುವದಿಲ್ಲ. ಕಾಲವೂ ಗತಿಯೂ ಅವರೆಲ್ಲರಿಗೆ ಸಂಭವಿ ಸುತ್ತವೆ. 12. ಮನುಷ್ಯನು ಸಹ ತನ್ನ ಕಾಲವನ್ನು ತಿಳಿದಲ್ಲಿ ಬಾಧೆಯನ್ನುಂಟುಮಾಡುವ ಬಲೆಯಿಂದ ಹಿಡಿಯುವ ವಿಾನಿನಂತೆಯೂ ಉರುಲಿನಲ್ಲಿ ಸಿಕ್ಕುವ ಪಕ್ಷಿಗ ಳಂತೆಯೂ ಮನುಷ್ಯನ ಮಕ್ಕಳ ಮೇಲೆ ಕೇಡಿನ ಕಾಲವು ತಕ್ಷಣ ಬೀಳುವಾಗ ಹಿಡಿಯಲ್ಪಡುತ್ತಾರೆ. 13. ನಾನು ಈ ಜ್ಞಾನವನ್ನೂ ಸಹ ಸೂರ್ಯನ ಕೆಳಗೆ ನೋಡಿದೆನು; ಇದು ನನಗೆ ದೊಡ್ಡದಾಗಿ ಕಾಣಿಸಿತು. 14. ಅಲ್ಲಿ ಒಂದು ಸಣ್ಣ ನಗರವಿತ್ತು; ಅದರಲ್ಲಿ ಕೆಲವು ಮನುಷ್ಯರಿದ್ದರು; ಆಗ ಅಲ್ಲಿಗೆ ಒಬ್ಬ ಮಹಾಅರಸನು ಬಂದು ಅದನ್ನು ಮುತ್ತಿಗೆಹಾಕಿ ಅದಕ್ಕೆ ಎದುರಾಗಿ ದೊಡ್ಡ ಕೊತ್ತಲುಗಳನ್ನು ಕಟ್ಟಿಸಿದನು. 15. ಆಗ ಅದ ರಲ್ಲಿ ಒಬ್ಬ ಜ್ಞಾನಿಯಾದ ಬಡಮನುಷ್ಯನು ಕಾಣಿಸಿ ಕೊಂಡು ಅವನು ತನ್ನ ಜ್ಞಾನದಿಂದ ಆ ಪಟ್ಟಣವನ್ನು ತಪ್ಪಿಸಿದನು. ಆದರೂ ಆ ಬಡಮನುಷ್ಯನನ್ನು ಯಾವನೂ ಜ್ಞಾಪಕಮಾಡಿಕೊಳ್ಳಲಿಲ್ಲ. 16. ಆ ಮೇಲೆ ನಾನು--ಜ್ಞಾನವು ಬಲಕ್ಕಿಂತ ಉತ್ತಮವಾದದ್ದಾಗಿ ದ್ದಾಗ್ಯೂ ಬಡವನ ಜ್ಞಾನವು ತಿರಸ್ಕರಿಸಲ್ಪಟ್ಟದ್ದಾಗಿದ್ದು ಅವನ ಮಾತುಗಳನ್ನು ಯಾರೂ ಲಕ್ಷಿಸುವದಿಲ್ಲ ಎಂದು ಅಂದುಕೊಂಡೆನು. 17. ಜ್ಞಾನಿಗಳ ಮಾತುಗಳು ಹುಚ್ಚರನ್ನು ಆಳುವವನ ಕೂಗಿಗಿಂತಲೂ ಸಮಾಧಾನವಾಗಿ ಕೇಳಲ್ಪಡುತ್ತವೆ. 18. ಯುದ್ಧದ ಆಯುಧಗಳಿಗಿಂತಲೂ ಜ್ಞಾನವು ಲೇಸು. ಆದರೆ ಒಬ್ಬ ಪಾಪಿಯು ಹೆಚ್ಚು ಒಳ್ಳೆಯದನ್ನು ನಾಶಪಡಿಸುತ್ತಾನೆ.
Chapter 10
1. ಸತ್ತ ನೊಣಗಳು ವೈದ್ಯನ ತೈಲವನ್ನು ದುರ್ವಾಸನೆಗೊಳಿಸುತ್ತವೆ; ಹಾಗೆಯೇ ಸ್ವಲ್ಪ ಮೂಢತನವು ಜ್ಞಾನ ಮತ್ತು ಘನಗಳಿಗೆ ಪ್ರಿಯ ನಾದವನನ್ನು ಕೆಡಿಸುತ್ತದೆ. 2. ಒಬ್ಬ ಜ್ಞಾನಿಯಾದ ಮನು ಷ್ಯನ ಹೃದಯವು ಅವನ ಬಲಗೈಯಲ್ಲಿರುತ್ತದೆ; ಆದರೆ ಒಬ್ಬ ಮೂರ್ಖನ ಹೃದಯವು ಅವನ ಎಡಗಡೆಯಿ ರುತ್ತದೆ. 3. ಹೌದು, ಮೂರ್ಖನು ಮಾರ್ಗದಲ್ಲಿ ನಡೆ ಯುವಾಗಲೂ ಸಹ ಅವನ ಜ್ಞಾನವು ಅವನನ್ನು ತಪ್ಪಿಸುತ್ತದೆ; ಅವನು ತಾನು ಮೂರ್ಖನೆಂದು ಪ್ರತಿಯೊಬ್ಬನಿಗೂ ಹೇಳುತ್ತಾನೆ. 4. ಆಳುವವನ ಆತ್ಮವು ನಿನಗೆ ವಿರುದ್ಧವಾಗಿ ಎದ್ದರೆ ನಿನ್ನ ಸ್ಥಳವನ್ನು ಬಿಡಬೇಡ; ತಾಳ್ಮೆಯು ಅಭ್ಯಂತರಗಳನ್ನು ತಡೆಯುತ್ತದೆ. 5. ಆಳುವ ವನ ಸಮ್ಮುಖದಿಂದ ಹೊರಟು ಬರುವ ತಪ್ಪಿನ ಹಾಗಿ ರುವ ಒಂದು ಕೇಡನ್ನು ನಾನು ಸೂರ್ಯನ ಕೆಳಗೆ ನೋಡಿದ್ದೇನೆ. 6. ಮೂರ್ಖತನವು ಬಹಳ ಎತ್ತರವಾದ ಸ್ಥಳದಲ್ಲಿಡಲ್ಪಡುತ್ತದೆ. ಸಿರಿತನವು ಕೆಳಗಿನ ಸ್ಥಳದಲ್ಲಿ ಕೂತುಕೊಳ್ಳುವದು. 7. ನಾನು ಕುದುರೆಗಳ ಮೇಲೆ ಸೇವಕರನ್ನೂ ಮತ್ತು ಪ್ರಭುಗಳು ಸೇವಕರ ಹಾಗೆ ಭೂಮಿಯ ಮೇಲೆ ನಡೆಯುವದನ್ನೂ ನೋಡಿದ್ದೇನೆ. 8. ಯಾವನು ಕುಣಿಯನ್ನು ಅಗೆಯುವನೋ ಅದರಲ್ಲೇ ಅವನು ಬೀಳುವನು; ಯಾವನು ಬೇಲಿಯನ್ನು ಮುರಿ ಯುವನೋ ಅವನನ್ನು ಹಾವು ಕಚ್ಚುವದು. 9. ಯಾವನು ಕಲ್ಲುಗಳನ್ನು ಕೀಳುವನೋ ಅವುಗಳಿಂದ ಅವನು ನೋವುಪಡುವನು; ಯಾವನು ಕಟ್ಟಿಗೆ ಕಡಿಯುವನೋ ಅದರಿಂದ ಅವನು ಅಪಾಯಗೊಳ್ಳುವನು. 10. ಕಬ್ಬಿಣ ಮೊಂಡಾಗಿದ್ದು ಅದರ ಬಾಯಿಯನ್ನು ಮಸೆಯದಿ ದ್ದರೆ ಅವನು ತಪ್ಪದೆ ಹೆಚ್ಚು ಬಲವನ್ನು ಹಾಕಬೇಕು; ಜ್ಞಾನವು ಬದುಕಿಗೆ ಪ್ರಯೋಜನವಾಗಿದೆ. 11. ನಿಶ್ಚಯ ವಾಗಿ ಮಂತ್ರವಿಲ್ಲದೆ ಹಾವು ಕಚ್ಚುವದು. ಹಾಗೆಯೇ ಹರಟೆಯವನಲ್ಲಿ ಪ್ರಯೋಜನವಿಲ್ಲ. 12. ಜ್ಞಾನಿಯ ಬಾಯಿಮಾತುಗಳು ಆನಂದಕರವಾಗಿವೆ; ಮೂರ್ಖನ ತುಟಿಗಳು ಅವನನ್ನೇ ನುಂಗಿಬಿಡುತ್ತವೆ. 13. ಅವನ ಬಾಯಿಯು ಮಾತುಗಳು ಆರಂಭದಲ್ಲಿ ಮೂಢತನ ದವುಗಳಾಗಿವೆ; ಅವನ ಮಾತಿನ ಅಂತ್ಯವು ಕೆಟ್ಟ ಮೂರ್ಖತನವಾಗಿದೆ. 14. ಮೂಢನು ಸಹ ಮಾತು ಗಳನ್ನು ಹೆಚ್ಚಿಸುತ್ತಾನೆ; ಆದರೂ ಅವನು ಏನೆಂದು ಹೇಳಲು ಸಾಧ್ಯವಿಲ್ಲ. ಅವನ ತರುವಾಯ ಆಗುವದನ್ನು ಅವನಿಗೆ ತಿಳಿಸುವವರು ಯಾರು? 15. ಮೂರ್ಖನ ಕಷ್ಟವು ಅವರಲ್ಲಿ ಪ್ರತಿಯೊಬ್ಬನನ್ನು ದಣಿಸುತ್ತದೆ; ನಗರಕ್ಕೆ ಹೇಗೆ ಹೋಗಬೇಕೆಂದು ಅವನಿಗೆ ತಿಳಿಯದು. 16. ಓ ದೇಶವೇ, ಹುಡುಗನು ನಿನ್ನ ಅರಸನಾಗಿದ್ದರೆ ಮತ್ತು ನಿನ್ನ ಪ್ರಧಾನರು ಬೆಳಿಗ್ಗೆ ಊಟಮಾಡಿದ್ದರೆ ನಿನಗೆ ಅಯ್ಯೋ! 17. ಓ ದೇಶವೇ, ಶ್ರೇಷ್ಠರ ಮಗನು ನಿನ್ನ ಅರಸನಾದರೆ ಮತ್ತು ನಿನ್ನ ಪ್ರಭುಗಳು ತಕ್ಕಕಾಲಕ್ಕೆ ಸರಿಯಾಗಿ ಅಮಲಿಗಾಗಿ ಅಲ್ಲದೆ ಶಕ್ತಿಗಾಗಿ ಊಟ ಮಾಡಿದರೆ ನಿನಗೆ ಆಶೀರ್ವಾದವಾಗಲಿ. 18. ಹೆಚ್ಚು ಸೋಮಾರಿತನದಿಂದ ತೊಲೆಗಳು ಜಗ್ಗುತ್ತವೆ ಮತ್ತು ಜೋಲುಗೈಯಿಂದ ಮನೆಗಳು ಸೋರುವವು. 19. ನಗೆಗಾಗಿ ಔತಣ ಮಾಡುತ್ತಾರೆ. ದ್ರಾಕ್ಷಾರಸವು ಸಂತೋಷ ಪಡಿಸುತ್ತದೆ. ಹಣವು ಸಮಸ್ತಕ್ಕೂ ಉತ್ತರಕೊಡುತ್ತದೆ. 20. ನಿಮ್ಮ ಊಹೆಯಲ್ಲೂ ಅರಸನನ್ನು ಶಪಿಸಬೇಡಿರಿ, ನೀವು ಮಲಗುವ ಕೋಣೆಯಲ್ಲಿ ಐಶ್ವರ್ಯವನ್ನು ಶಪಿಸಬೇಡಿರಿ. ಆಕಾಶದ ಪಕ್ಷಿಗಳು ಧ್ವನಿಯನ್ನು ಒಯ್ಯು ವವು; ರೆಕ್ಕೆಯುಳ್ಳವುಗಳು ವಿಷಯವನ್ನು ತಿಳಿಸುವವು.
Chapter 11
1. ನಿನ್ನ ರೊಟ್ಟಿಯನ್ನು ನೀರಿನ ಮೇಲೆ ಹಾಕು, ಬಹಳ ದಿನಗಳ ಮೇಲೆ ಅದು ನಿನಗೆ ಸಿಗುವದು. 2. ನಿನ್ನ ಭಾಗವನ್ನು ಏಳು ಮತ್ತು ಎಂಟು ಮಂದಿಗೆ ಸಹ ಕೊಡು; ಭೂಮಿಯ ಮೇಲೆ ಯಾವ ಕೇಡು ಬರುವದೋ ನಿನಗೆ ತಿಳಿಯದು. 3. ಮೋಡ ಗಳು ಮಳೆಯಿಂದ ತುಂಬಿದ್ದರೆ ಅವು ತಾವಾಗಿಯೇ ಭೂಮಿಯ ಮೇಲೆ ಬರಿದುಮಾಡಿಕೊಳ್ಳುತ್ತವೆ; ಮರವು ಉತ್ತರ ಇಲ್ಲವೆ ದಕ್ಷಿಣಕ್ಕೆ ಬಿದ್ದರೆ ಆ ಮರವು ಬಿದ್ದ ಸ್ಥಳದಲ್ಲಿಯೇ ಇರುವದು. 4. ಯಾವನು ಗಾಳಿಯನ್ನು ಲಕ್ಷಿಸುವನೋ ಅವನು ಬಿತ್ತುವದಿಲ್ಲ; ಮೋಡಗಳನ್ನು ಗಮನಿಸುವವನು ಕೊಯ್ಯುವದಿಲ್ಲ. 5. ಹೇಗೆ ನೀನು ಆತ್ಮೀಯ ಮಾರ್ಗವು ಯಾವದೆಂದೂ ಮತ್ತು ಮಗು ವಿರುವ ಅವಳ ಗರ್ಭದಲ್ಲಿ ಎಲುಬುಗಳು ಹೇಗೆ ಬೆಳೆಯುವವೆಂದೂ ತಿಳಿದುಕೊಳ್ಳಲಾರಿಯೋ ಹಾಗೆ ಯೇ ಎಲ್ಲವನ್ನೂ ಮಾಡುವ ದೇವರ ಕೆಲಸವನ್ನೂ ತಿಳಿದುಕೊಳ್ಳಲಾರಿ. 6. ಬೆಳಿಗ್ಗೆ ನಿನ್ನ ಬೀಜವನ್ನು ಬಿತ್ತು, ಸಂಜೆ ತನಕ ನಿನ್ನ ಕೈಯನ್ನು ಹಿಂತೆಗೆಯಬೇಡ; ಇದೋ, ಅದೋ ಯಾವದೋ ಕೈಗೂಡಿ ಬರು ವದೋ ಇಲ್ಲವೆ ಎರಡೂ ಒಂದೇ ರೀತಿ ಒಳ್ಳೆಯದಾ ಗುವವೋ ಎಂದು ನಿನಗೆ ತಿಳಿಯದು. 7. ನಿಜವಾಗಿ ಬೆಳಕು ಹಿತವಾಗಿಯೂ ಮತ್ತು ಸೂರ್ಯನನ್ನು ನೋಡುವದು ಕಣ್ಣುಗಳಿಗೆ ಮೆಚ್ಚಿಕೆಯಾಗಿಯೂ ಇರು ವದು. 8. ಆದರೆ ಅನೇಕ ವರುಷಗಳು ಒಬ್ಬ ಮನುಷ್ಯನು ಬದುಕಿ ಅವುಗಳಲ್ಲೆಲ್ಲಾ ಸಂತೋಷಪಟ್ಟರೂ ಅವನು ಕತ್ತಲೆಯ ದಿನಗಳನ್ನು ಜ್ಞಾಪಿಸಿಕೊಳ್ಳಲಿ. ಅವು ಅತಿ ಯಾಗಿರುವವು, ಬರುವವುಗಳೆಲ್ಲವು ವ್ಯರ್ಥವಾಗಿವೆ. 9. ಓ ಯೌವನಸ್ಥನೇ, ನಿನ್ನ ಯೌವನದಲ್ಲಿ ಸಂತೋಷಪಡು. ನಿನ್ನ ಯೌವನದ ದಿನಗಳಲ್ಲಿ ನಿನ್ನ ಹೃದಯವು ನಿನ್ನನ್ನು ಆನಂದಪಡಿಸಲಿ; ನೀನು ನಿನ್ನ ಹೃದಯದ ಮಾರ್ಗಗಳಲ್ಲಿಯೂ ನಿನ್ನ ಕಣ್ಣುಗಳ ನೋಟ ದಲ್ಲಿಯೂ ನಡೆ; ಆ ಎಲ್ಲಾ ಸಂಗತಿಗಳಿಗಾಗಿ ದೇವರು ನಿನ್ನನ್ನು ನ್ಯಾಯತೀರ್ಪಿಗೆ ತರುವನೆಂದು ತಿಳಿದುಕೋ. 10. ಆದಕಾರಣ ನಿನ್ನ ಹೃದಯದಿಂದ ದುಃಖವನ್ನು ತೆಗೆದು ಹಾಕು; ನಿನ್ನ ಶರೀರದಿಂದ ಕೆಟ್ಟದ್ದನ್ನು ತೆಗೆದುಬಿಡು; ಬಾಲ್ಯವೂ ಯೌವನವೂ ವ್ಯರ್ಥವಾಗಿವೆ.
Chapter 12
1. ಕಷ್ಟದ ದಿನಗಳು ಬರುವದಕ್ಕೆ ಮೊದಲು, ಇವುಗಳಲ್ಲಿ ನನಗೆ ಸಂತೋಷವಿಲ್ಲವೆಂದು ನೀನು ಹೇಳುವ ವರ್ಷಗಳು ಸವಿಾಪಿಸುವದಕ್ಕೆ ಮೊದಲು ಈಗ ನಿನ್ನ ಯೌವನದ ದಿನಗಳಲ್ಲಿ ಸೃಷ್ಟಿಕರ್ತ ನನ್ನು ಸ್ಮರಿಸಿಕೋ. 2. ಸೂರ್ಯನೂ ಬೆಳಕೂ ಚಂದ್ರನೂ ನಕ್ಷತ್ರಗಳೂ ಕತ್ತಲಾಗದಿರುವಾಗಲೇ ಮಳೆಯ ಮೋಡ ಗಳು ತಿರಿಗಿ ಬರುವದಕ್ಕಿಂತ ಮುಂಚೆಯೇ ಆತನನ್ನು ಸ್ಮರಿಸು. 3. ಆ ದಿನದಲ್ಲಿ ಮನೆ ಕಾಯುವವರು ನಡುಗು ವರು; ಬಲವಾದ ಮನುಷ್ಯರು ತಾವಾಗಿಯೇ ಬೊಗ್ಗು ವರು; ಅರೆಯುವವರು ಸ್ವಲ್ಪ ಇರುವದರಿಂದ ಸುಮ್ಮನಿ ರುವರು; ಕಿಟಕಿಗಳಿಂದ ಹೊರಗೆ ನೋಡುವವರು ಮಂಕಾಗುವರು. 4. ಅರೆಯುವ ಶಬ್ದವು ಕಡಿಮೆಯಾ ದಾಗ ಬೀದಿಯಲ್ಲಿ ಬಾಗಲುಗಳು ಮುಚ್ಚಿರುವವು. ಅವನು ಪಕ್ಷಿಯ ಶಬ್ದವಾದಾಗ ಎದ್ದೇಳುವನು. ಗಾನದ ಕುಮಾರ್ತೆಯರೆಲ್ಲಾ ಕುಗ್ಗುವರು. 5. ಅಲ್ಲದೆ ಅವರು ದಿನ್ನೆಗೆ ಹೆದರುವರು; ದಾರಿಯಲ್ಲಿ ಹೆದರಿಕೆಗಳಿರುವವು. ಬಾದಾಮಿಯ ಮರ ಹೂವು ಬಿಡುವದು; ಮಿಡತೆಯು ಭಾರವಾಗಿರುವದು. ಆಶೆ ಬಿದ್ದುಹೋಗುವದು. ಮನು ಷ್ಯನು ತನ್ನ ನಿತ್ಯ ಗೃಹಕ್ಕೆ ಹೋಗುವನು. ಗೋಳಾಡು ವವರು ಬೀದಿಯಲ್ಲಿ ತಿರುಗಾಡುವರು. 6. ಬೆಳ್ಳಿಯ ಸರಿಗೆ ಬಿಚ್ಚಲ್ಪಡುವದು; ಇಲ್ಲವೆ ಬಂಗಾರದ ಬಟ್ಟಲು ಒಡೆದು ಹೋಗುವದು. ಮಣ್ಣಿನ ಮಡಿಕೆಯು ಬುಗ್ಗೆಯ ಬಳಿಯಲ್ಲಿ ಒಡೆದು ಹೋಗುವದು. ಇಲ್ಲವೆ ಕೊಳದ ಹತ್ತಿರ ರಾಟೆ ಮುರಿಯುವದು. 7. ಆಮೇಲೆ ಧೂಳು ಅದು ಇದ್ದ ಹಾಗೆಯೇ ಭೂಮಿಗೆ ಹಿಂತಿರುಗುವದು; ಆತ್ಮವು ಅದನ್ನು ಕೊಟ್ಟ ದೇವರ ಬಳಿಗೆ ಹಿಂತಿರುಗು ವದು. 8. ವ್ಯರ್ಥದ ವ್ಯರ್ಥಗಳೂ ಎಲ್ಲವೂ ವ್ಯರ್ಥವೇ ಎಂದು ಪ್ರಸಂಗಿ ಹೇಳುವನು. 9. ಇದಲ್ಲದೆ ಪ್ರಸಂಗಿಯು ಜ್ಞಾನಿಯಾಗಿದ್ದು ಇನ್ನೂ ಜನಗಳಿಗೆ ತಿಳುವಳಿಕೆಯನ್ನು ಬೋಧಿಸುತ್ತಾ ಬಂದನು; ಹೌದು, ಅವನು ಪರೀಕ್ಷಿಸಿ, ವಿಚಾರಿಸಿ ಅನೇಕ ಜ್ಞಾನೋ ಕ್ತಿಗಳನ್ನು ಕ್ರಮವಾಗಿ ಹೊಂದಿಸಿದನು. 10. ಪ್ರಸಂಗಿಯು ಒಪ್ಪಿಕೊಳ್ಳುವಂತಹ ವಾಕ್ಯಗಳನ್ನು ಕಂಡುಹಿಡಿಯಲು ಹುಡುಕಿದನು: ಆ ಬರೆದವುಗಳು ಒಪ್ಪಿದ ಸತ್ಯವಾದ ಮಾತುಗಳು. 11. ಜ್ಞಾನಿಗಳ ಮಾತುಗಳು ಮುಳ್ಳುಗೋಲುಗಳ ಹಾಗೆಯೂ ಮತ್ತು ಸಭೆಗಳ ಯಜಮಾನರು ನೆಟ್ಟ ಮೊಳೆಗಳ ಹಾಗೆಯೂ ಒಬ್ಬ ಕುರುಬನಿಂದ ಕೊಡಲ್ಪ ಟ್ಟಿವೆ. 12. ಕೊನೆಗೆ ನನ್ನ ಮಗನೇ, ಇವುಗಳಿಂದ ಎಚ್ಚರಿಕೆ ಯಾಗಿರು. ಬಹಳ ಪುಸ್ತಕಗಳನ್ನು ಮಾಡುವದಕ್ಕೆ ಅಂತ್ಯ ವಿಲ್ಲ; ಹೆಚ್ಚು ಅಭ್ಯಾಸವು ಶರೀರಕ್ಕೆ ಆಯಾಸವಾಗಿದೆ. 13. ಸಮಸ್ತ ವಿಷಯವನ್ನು ನಾವು ಕೇಳಿ ಮುಗಿಸೋಣ; ದೇವರಿಗೆ ಭಯಪಡು; ಆತನ ಆಜ್ಞೆಗಳನ್ನು ಪಾಲಿಸು; ಇದೇ ಮನುಷ್ಯನ ಪ್ರಮುಖ ಕರ್ತವ್ಯ. 14. ಒಳ್ಳೇದಾಗಲಿ, ಕೆಟ್ಟದ್ದಾಗಲಿ, ಪ್ರತಿಯೊಂದು ರಹಸ್ಯದ ಸಂಗತಿಗೂ ದೇವರು ಪ್ರತಿಯೊಂದು ಕೆಲಸ ವನ್ನು ಕುರಿತು ನ್ಯಾಯವಿಚಾರಣೆಗೆ ತರುವನು.
(April28th2012)
|