Home Churches About
 

Chapter 1

1. ಕರ್ತನ ವಾಕ್ಯವು ಅಮಿತ್ತೈಯನ ಮಗನಾದ ಯೋನನಿಗೆ ಉಂಟಾಯಿತು.
2. ಹೇಗಂದರೆ--ಎದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ಅದಕ್ಕೆ ವಿರೋಧವಾಗಿ ಕೂಗು; ಅವರ ಕೆಟ್ಟತನವು ನನ್ನ ಸನ್ನಿಧಿಗೆ ಮುಟ್ಟಿದೆ ಎಂಬದು.
3. ಆದರೆ ಯೋನನು ಕರ್ತನ ಸಮ್ಮುಖದಿಂದ ತಾರ್ಷೀಷಿಗೆ ಓಡಿ ಹೋಗುವದಕ್ಕೆ ಎದ್ದು ಯೊಪ್ಪಕ್ಕೆ ಇಳಿದು ತಾರ್ಷೀಷಿಗೆ ಹೋಗುವ ಹಡಗನ್ನು ಕಂಡು ಅದರ ಪ್ರಯಾಣದ ತೆರವನ್ನು ಕೊಟ್ಟು ಕರ್ತನ ಸಮ್ಮುಖದಿಂದ ಅವರ ಸಂಗಡ ತಾರ್ಷಿಷಿಗೆ ಹೋಗುವದಕ್ಕೆ ಅದನ್ನು ಹತ್ತಿದನು.
4. ಆದರೆ ಕರ್ತನು ದೊಡ್ಡ ಗಾಳಿಯನ್ನು ಸಮುದ್ರದ ಮೇಲೆ ಕಳುಹಿಸಿದನು; ಸಮುದ್ರದಲ್ಲಿ ಮಹಾಬಿರುಗಾಳಿ ಉಂಟಾಗಿ ಹಡಗು ಒಡೆಯುವ ದಕ್ಕಿತ್ತು.
5. ಆಗ ಹಡಗಿನವರು ಭಯಪಟ್ಟು ಒಬ್ಬೊಬ್ಬನು ತನ್ನ ತನ್ನ ದೇವರಿಗೆ ಕೂಗಿ ಹಡಗನ್ನು ಹಗುರ ಮಾಡುವ ಹಾಗೆ ಅದರಲ್ಲಿದ್ದ ಸಾಮಾನುಗಳನ್ನು ಸಮುದ್ರದಲ್ಲಿ ಹಾಕಿಬಿಟ್ಟರು; ಆದರೆ ಯೋನನು ಹಡಗಿನ ಒಳಗೆ ಇಳಿದುಹೋಗಿ ಮಲಗಿಕೊಂಡು ಗಾಢ ನಿದ್ರೆಯಲ್ಲಿ ದ್ದನು.
6. ಆಗ ಹಡಗಿನ ಯಜಮಾನನು ಅವನ ಬಳಿಗೆ ಬಂದು--ನಿದ್ರೆಮಾಡುವವನೇ, ನಿನಗೆ ಏನಾಯಿತು? ಎದ್ದು ನಿನ್ನ ದೇವರನ್ನು ಕೂಗು; ಒಂದು ವೇಳೆ ನಾವು ನಾಶವಾಗದ ಹಾಗೆ ದೇವರು ನಮ್ಮನ್ನು ಜ್ಞಾಪಕ ಮಾಡ್ಯಾನು ಅಂದನು.
7. ಇದಲ್ಲದೆ ಅವರು ಒಬ್ಬರಿಗೊ ಬ್ಬರು--ಬನ್ನಿ, ಚೀಟುಗಳನ್ನು ಹಾಕೋಣ; ಯಾವನ ನಿಮಿತ್ತ ಈ ಕೇಡು ನಮಗೆ ಬಂತೋ ತಿಳಿಯೋಣ ಎಂದು ಹೇಳಿಕೊಂಡರು. ಹಾಗೆಯೇ ಅವರು ಚೀಟು ಗಳನ್ನು ಹಾಕಿದಾಗ ಯೋನನ ಮೇಲೆ ಚೀಟು ಬಿತ್ತು.
8. ಆಗ ಅವರು ಅವನಿಗೆ--ಯಾವದರ ನಿಮಿತ್ತ ಈ ಕೇಡು ನಮಗೆ ಬಂತು, ನಿನ್ನ ಕೆಲಸವೇನು, ಎಲ್ಲಿಂದ ಬಂದಿ,
9. ನಿನ್ನ ದೇಶ ಯಾವದು, ನೀನು ಯಾವ ಜನಾಂಗದವನು, ನಮಗೆ ತಿಳಿಸು ಅಂದರು. ಅವನು ಅವರಿಗೆ--ನಾನು ಇಬ್ರಿಯನು; ಸಮುದ್ರವನ್ನೂ ಒಣಗಿದ ಭೂಮಿಯನ್ನೂ ಉಂಟುಮಾಡಿದ ಪರ ಲೋಕದ ದೇವರಾದ ಕರ್ತನಿಗೆ ಭಯಪಡುವವ ನಾಗಿದ್ದೇನೆಂದು ಹೇಳಿದನು.
10. ಆಗ ಆ ಮನುಷ್ಯರು ಬಹಳ ಭಯಪಟ್ಟು--ಇದನ್ನು ಯಾಕೆ ಮಾಡಿದ್ದೀ ಎಂದು ಅವನಿಗೆ ಹೇಳಿದರು, ಕರ್ತನ ಸಮ್ಮುಖದಿಂದ ಓಡಿ ಹೋಗುತ್ತಾನೆಂದು ಆ ಮನುಷ್ಯರಿಗೆ ತಿಳಿದಿತ್ತು; ಅವನು ಅವರಿಗೆ ಹೇಳಿದ್ದನು.
11. ಆಗ ಅವರು ಅವನಿಗೆ--ಸಮುದ್ರವು ನಮಗೆ ಶಾಂತವಾಗುವ ಹಾಗೆ ನಿನಗೆ ಏನು ಮಾಡಬೇಕು? ಯಾಕಂದರೆ ಸಮುದ್ರವು ಹೆಚ್ಚಾಗಿ ಉಬ್ಬುತ್ತಾ ಬರುತ್ತಿದೆ ಅಂದರು.
12. ಅವನು ಅವ ರಿಗೆ--ನನ್ನನ್ನು ಎತ್ತಿ ಸಮುದ್ರದಲ್ಲಿ ಹಾಕಿರಿ, ಆಗ ಸಮುದ್ರವು ನಿಮಗೆ ಶಾಂತವಾಗುವದು; ನನ್ನ ನಿಮಿತ್ತ ಈ ದೊಡ್ಡ ಬಿರುಗಾಳಿ ನಿಮ್ಮ ಮೇಲೆ ಬಂತೆಂದು ಬಲ್ಲೆನು ಅಂದನು.
13. ಆದರೂ ಆ ಮನುಷ್ಯರು ದಡಕ್ಕೆ ತಿರುಗಿಕೊಳ್ಳುವ ಹಾಗೆ ಬಲವಾಗಿ ಹುಟ್ಟು ಹಾಕಿದರು; ಆದರೆ ಅವರಿಂದಾಗದೆ ಹೋಯಿತು. ಸಮುದ್ರವು ಅವರಿಗೆ ಎದುರಾಗಿ ಹೆಚ್ಚೆಚ್ಚಾಗಿ ಉಬ್ಬುತ್ತಾ ಬಂತು.
14. ಆದದರಿಂದ ಅವರು ಕರ್ತನಿಗೆ ಕೂಗಿ ಹೇಳಿದ್ದೇನಂದರೆ--ಓ ಕರ್ತನೇ, ನಾವು ಈ ಮನುಷ್ಯನ ಜೀವದ ನಿಮಿತ್ತ ನಾಶವಾಗದಿರಲಿ; ಅಪರಾಧವಿಲ್ಲದ ರಕ್ತವನ್ನು ನಮ್ಮ ಮೇಲೆ ಹೊರಿಸಬೇಡ; ಓ ಕರ್ತನೇ, ನೀನು ನಿನ್ನ ಚಿತ್ತಕ್ಕೆ ಬಂದ ಹಾಗೆ ಮಾಡಿದ್ದೀ ಅಂದರು.
15. ಆಗ ಅವರು ಯೋನನನ್ನು ಎತ್ತಿ ಸಮುದ್ರದಲ್ಲಿ ಹಾಕಿದರು; ಆಗ ಸಮುದ್ರವು ತನ್ನ ಉಗ್ರವನ್ನು ನಿಲ್ಲಿಸಿ ಬಿಟ್ಟಿತು.
16. ಆ ಮನುಷ್ಯರು ಯೆಹೋವನಿಗೆ ಬಹಳ ವಾಗಿ ಭಯಪಟ್ಟು ಕರ್ತನಿಗೆ ಬಲಿ ಅರ್ಪಿಸಿ ಪ್ರಮಾಣ ಗಳನ್ನು ಮಾಡಿಕೊಂಡರು.
17. ಆದರೆ ಕರ್ತನು ಯೋನನನ್ನು ನುಂಗುವ ಹಾಗೆ ದೊಡ್ಡ ವಿಾನನ್ನು ಸಿದ್ಧಮಾಡಿದ್ದನು; ಯೋನನು ಆ ವಿಾನಿನ ಹೊಟ್ಟೆಯಲ್ಲಿ ಮೂರು ಹಗಲು ಮೂರು ರಾತ್ರಿಯು ಇದ್ದನು.

Chapter 2

1. ಆಗ ಯೋನನು ವಿಾನಿನ ಹೊಟ್ಟೆಯೊಳಗಿಂದ ತನ್ನ ದೇವರಾದ ಕರ್ತನಿಗೆ ಪ್ರಾರ್ಥನೆ ಮಾಡಿ ಹೇಳಿದ್ದೇನಂದರೆ--
2. ನಾನು ನನ್ನ ವ್ಯಥೆಯ ದೆಸೆಯಿಂದ ಕರ್ತನಿಗೆ ಮೊರೆಯಿಟ್ಟೆನು; ಆತನು ನನ್ನ ಕೂಗನ್ನು ಕೇಳಿದನು; ನರಕದ ಹೊಟ್ಟೆ ಯೊಳಗಿಂದ ನಾನು ಕೂಗಿದೆನು, ಆಗ ನನ್ನ ಶಬ್ದವನ್ನು ನೀನು ಕೇಳಿದಿ.
3. ನನ್ನನ್ನು ನೀನು ಅಗಾಧದಲ್ಲಿಯೂ ಸಮುದ್ರಗಳ ಮಧ್ಯದಲ್ಲಿಯೂ ಹಾಕಿದಿ; ಪ್ರವಾಹಗಳು ನನ್ನನ್ನು ಸುತ್ತಿಕೊಂಡವು; ನಿನ್ನ ಎಲ್ಲಾ ಅಲೆಗಳೂ ನಿನ್ನ ತೆರೆಗಳೂ ನನ್ನ ಮೇಲೆ ದಾಟಿಹೋದವು.
4. ಆಗ ನಾನು ಹೇಳಿದ್ದು--ನಿನ್ನ ಕಣ್ಣುಗಳ ಎದುರಿನಿಂದ ಹೊರಗೆ ಹಾಕಲ್ಪಟ್ಟಿದ್ದೇನೆ; ಆದಾಗ್ಯೂ ನಾನು ನಿನ್ನ ಪರಿಶುದ್ಧ ಮಂದಿರದ ಕಡೆಗೆ ತಿರುಗಿ ನೋಡುವೆನು.
5. ನೀರು ಗಳು ಪ್ರಾಣದ ಮಟ್ಟಿಗೂ ನನ್ನನ್ನು ಸುತ್ತಿಕೊಂಡವು; ಅಗಾಧವು ನನ್ನನ್ನು ಸುತ್ತಲೂ ಮುಚ್ಚಿಕೊಂಡಿತು; ಆಪುಗಳು ನನ್ನ ತಲೆಯನ್ನು ಸುತ್ತಿಕೊಂಡಿದ್ದವು.
6. ಬೆಟ್ಟಗಳ ಬುಡದ ತನಕ ಇಳಿದು ಹೋದೆನು; ಭೂಮಿಯ ಅಡ್ಡದಂಡೆಗಳು ನಿತ್ಯವಾಗಿ ನನ್ನ ಸುತ್ತಲಿ ದ್ದವು; ಆದಾಗ್ಯೂ ಓ ದೇವರಾದ ನನ್ನ ಕರ್ತನೇ, ನೀನು ನನ್ನ ಪ್ರಾಣವನ್ನು ನಾಶನದೊಳಗಿಂದ ಎಬ್ಬಿಸಿದ್ದೀ.
7. ನನ್ನ ಪ್ರಾಣವು ನನ್ನಲ್ಲಿ ಕುಂದಿಹೋದಾಗ ಕರ್ತನನ್ನು ಜ್ಞಾಪಕ ಮಾಡಿಕೊಂಡೆನು; ನನ್ನ ಪ್ರಾರ್ಥನೆಯು ನಿನ್ನ ಬಳಿಗೆ ನಿನ್ನ ಪರಿಶುದ್ಧ ಮಂದಿರದೊಳಗೆ ಬಂತು.
8. ಸುಳ್ಳಾದ ವ್ಯರ್ಥತ್ವಗಳನ್ನು ಅನುಸರಿಸುವವರು ತಮ್ಮ ಸ್ವಂತ ಕರುಣೆಯನ್ನು ಮರೆತು ಬಿಡುತ್ತಾರೆ.
9. ಆದರೆ ನಾನು ಸ್ತೋತ್ರದ ಸ್ವರದಿಂದ ನಿನಗೆ ಬಲಿಅರ್ಪಿಸು ವೆನು; ನಾನು ಮಾಡಿದ ಪ್ರಮಾಣವನ್ನು ತೀರಿಸುವೆನು; ರಕ್ಷಣೆಯು ಕರ್ತನದೇ ಎಂದು ಹೇಳಿದನು.
10. ಆಗ ಕರ್ತನು ಆ ವಿಾನಿಗೆ ಹೇಳಿದ್ದರಿಂದ ಅದು ಯೋನನನ್ನು ಒಣ ಭೂಮಿಯ ಮೇಲೆ ಕಾರಿಬಿಟ್ಟಿತು.

Chapter 3

1. ಕರ್ತನ ವಾಕ್ಯವು ಎರಡನೇ ಸಾರಿ ಯೋನನಿಗೆ ಉಂಟಾಯಿತು,
2. ಏನಂದರೆ--ಎದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ನಾನು ನಿನಗೆ ಹೇಳಿದ ಪ್ರಕಟನೆಯನ್ನು ಅದಕ್ಕೆ ಸಾರು ಎಂದು ಹೇಳಿದನು.
3. ಹೀಗೆ ಯೋನನು ಎದ್ದು ಕರ್ತನ ವಾಕ್ಯದ ಪ್ರಕಾರ ನಿನೆವೆಗೆ ಹೋದನು; ಆ ನಿನೆವೆಯು ಮೂರು ದಿವಸದ ಪ್ರಯಾಣವಾದ ಮಹಾದೊಡ್ಡ ಪಟ್ಟಣ ವಾಗಿತ್ತು.
4. ಆಗ ಯೋನನು ಒಂದು ದಿನದ ಪ್ರಯಾಣ ಮಾಡಿ ಪಟ್ಟಣದಲ್ಲಿ ಪ್ರವೇಶಿಸಲಾರಂಭಿಸಿ--ಇನ್ನು ನಾಲ್ವತ್ತು ದಿವಸಗಳಾದ ಮೇಲೆ ನಿನೆವೆ ಕೆಡವಲ್ಪಡು ವದೆಂದು ಕೂಗಿ ಹೇಳಿದನು.
5. ಆಗ ನಿನೆವೆಯ ಮನು ಷ್ಯರು ದೇವರನ್ನು ನಂಬಿ ಉಪವಾಸವನ್ನು ಸಾರಿ ಅವ ರಲ್ಲಿ ದೊಡ್ಡವನು ಮೊದಲುಗೊಂಡು ಚಿಕ್ಕವನ ವರೆಗೂ ಗೋಣೀತಟ್ಟನ್ನು ಉಟ್ಟುಕೊಂಡರು.
6. ಆ ಮಾತು ನಿನೆವೆಯ ಅರಸನಿಗೆ ಮುಟ್ಟಿದಾಗ ಅವನು ತನ್ನ ಸಿಂಹಾಸನದಿಂದ ಎದ್ದು ತನ್ನ ನಿಲುವಂಗಿಯನ್ನು ತೆಗೆದಿಟ್ಟು ಗೋಣೀತಟ್ಟನ್ನು ಉಟ್ಟುಕೊಂಡು ಬೂದಿ ಯಲ್ಲಿ ಕೂತು ಕೊಂಡನು.
7. ಅವನು ಅರಸನಿಂದಲೂ ತನ್ನ ಶ್ರೇಷ್ಠರಿಂದಲೂ ಆದ ನಿರ್ಣಯವನ್ನು ನಿನೆವೆ ಯಲ್ಲಿ ಸಾರಿ ಹೇಳಿದ್ದೇನಂದರೆ--ಮನುಷ್ಯರಾಗಲಿ, ಮೃಗಗಳಾಗಲಿ, ದನಗಳಾಗಲಿ, ಕುರಿಗಳಾಗಲಿ, ಏನಾ ದರೂ ರುಚಿ ನೋಡದಿರಲಿ, ಮೇಯ ದಿರಲಿ, ನೀರನ್ನು ಕುಡಿಯದಿರಲಿ, ಮನುಷ್ಯರೂ ಮೃಗಗಳೂ ಗೋಣೀ ತಟ್ಟು ಹಾಕಿಕೊಂಡು ಬಲವಾಗಿ ದೇವರಿಗೆ ಮೊರೆಯಿ ಡಲಿ;
8. ಹೌದು, ಅವರು ತಮ್ಮ ತಮ್ಮ ದುರ್ಮಾರ್ಗ ಗಳನ್ನೂ ತಾವು ನಡಿಸುತ್ತಿರುವ ಹಿಂಸೆಯನ್ನು ಬಿಟ್ಟು ತಿರುಗಲಿ.
9. ದೇವರು ತಿರುಗಿ ಕೊಂಡು ಪಶ್ಚಾತ್ತಾಪಪಟ್ಟು ನಾವು ನಾಶವಾಗದ ಹಾಗೆ ತನ್ನ ಕೋಪದ ಉರಿಯನ್ನು ಬಿಟ್ಟಾನೇನೋ ಯಾರು ಬಲ್ಲರು ಅಂದನು.
10. ಆಗ ದೇವರು ಅವರ ಕ್ರಿಯೆಗಳನ್ನೂ ಅವರು ತಮ್ಮ ಕೆಟ್ಟ ಮಾರ್ಗವನ್ನೂ ಬಿಟ್ಟು ತಿರುಗಿದರೆಂದು ನೋಡಿದನು; ದೇವರು ಅವರಿಗೆ ಮಾಡುತ್ತೇನೆಂದು ಹೇಳಿದ ಕೇಡಿನ ವಿಷಯವಾಗಿ ಪಶ್ಚಾತ್ತಾಪಪಟ್ಟು ಅದನ್ನು ಮಾಡಲಿಲ್ಲ.

Chapter 4

1. ಆದರೆ ಅದು ಯೋನನಿಗೆ ತುಂಬಾಕರೆಕರೆಯಾಗಿ ಅವನಿಗೆ ಬಹು ಕೋಪ ಬಂತು.
2. ಅವನು ಕರ್ತನಿಗೆ ಪ್ರಾರ್ಥನೆ ಮಾಡಿ ಹೇಳಿದ್ದೇನಂದರೆ--ಓ ಕರ್ತನೇ, ನಾನು ನನ್ನ ದೇಶದಲ್ಲಿದ್ದಾಗಲೇ ಇದನ್ನೇ ನಾನು ಹೇಳಲಿಲ್ಲವೋ? ಆದಕಾರಣ ನಾನು ಮೊದಲು ತಾರ್ಷೀಷಿಗೆ ಓಡಿ ಹೋದೆನು; ನೀನು ಕರುಣೆಯೂ ಕನಿಕರವೂ ದೀರ್ಘಶಾಂತಿಯೂ ಬಹಳ ಕೃಪೆಯೂ ಉಳ್ಳದೇವರೆಂದೂ ಕೇಡಿನ ವಿಷಯವಾಗಿ ಪಶ್ಚಾತ್ತಾಪ ಪಡುವಾತನೆಂದೂ ನನಗೆ ತಿಳಿದಿತ್ತು.
3. ಆದದರಿಂದ ಓ ಕರ್ತನೇ, ಈಗಲೇ ನನ್ನ ಪ್ರಾಣವನ್ನು ನನ್ನಿಂದ ತೆಗೆ; ನಾನು ಬದುಕುವ ದಕ್ಕಿಂತ ಸಾಯುವದು ಒಳ್ಳೇದು ಅಂದನು.
4. ಆಗ ಕರ್ತನು -- ನೀನು ಕೋಪಮಾಡಿಕೊಳ್ಳುವದು ಒಳ್ಳೇದೋ ಎಂದು ಅವನಿಗೆ ಹೇಳಿದನು.
5. ಆಗ ಯೋನನು ಪಟ್ಟಣವನ್ನು ಬಿಟ್ಟು ಅದರ ಮೂಡಣ ಕಡೆಯಲ್ಲಿ ಕೂತುಕೊಂಡು ಗುಡಿಸಲನ್ನು ಮಾಡಿಕೊಂಡು ಪಟ್ಟಣದಲ್ಲಿ ಏನಾಗುವದೆಂದು ನೋಡುವ ವರೆಗೆ ಅದರ ನೆರಳಿನಲ್ಲಿ ಕೂತುಕೊಂಡನು.
6. ದೇವರಾದ ಕರ್ತನು ಒಂದು ಸೋರೇ ಗಿಡವನ್ನು ಎಬ್ಬಿಸಿ, ಅದು ಯೋನನ ಮೇಲೆ ಹಬ್ಬಿ ಬಂದು ಅವನ ತಲೆಯ ಮೇಲೆ ನೆರಳುಕೊಟ್ಟು ಅವನ ದುಃಖದಿಂದ ಅವನನ್ನು ಬಿಡಿಸುವಂತೆ ಮಾಡಿದನು: ಯೋನನು ಆ ಸೋರೇ ಗಿಡದ ವಿಷಯವಾಗಿ ಬಹಳ ಸಂತೋಷಪಟ್ಟನು.
7. ಆದರೆ ಮಾರನೇ ದಿನದಲ್ಲಿ ಉದಯವಾದಾಗ ದೇವರು ಒಂದು ಹುಳವನ್ನು ಸಿದ್ಧಮಾಡಿದನು; ಅದು ಸೋರೇ ಗಿಡವನ್ನು ಒಣಗುವ ಹಾಗೆ ಹೊಡೆಯಿತು.
8. ಆದದ್ದೇನಂದರೆ, ಸೂರ್ಯೋದಯವಾದಾಗ ದೇವರು ಉಗ್ರವಾದ ಮೂಡಣ ಗಾಳಿಯನ್ನು ಸಿದ್ಧ ಮಾಡಿದನು; ಆಗ ಬಿಸಿಲು ಯೋನನ ತಲೆಯ ಮೇಲೆ ಬಡಿದದ್ದರಿಂದ ಅವನು ಮೂರ್ಛೆಹೋಗಿ ತನ್ನಲ್ಲಿ ಮರಣವನ್ನು ಕೇಳಿಕೊಂಡು--ನಾನು ಬದುಕುವದಕ್ಕಿಂತ ಸಾಯುವದು ಒಳ್ಳೇದು ಅಂದನು.
9. ಆಗ ದೇವರು ಯೋನನಿಗೆ--ನೀನು ಸೋರೇ ಗಿಡವನ್ನು ಕುರಿತು ಕೋಪಮಾಡುವದು ಒಳ್ಳೇದೋ ಅಂದನು. ಅವನು --ನಾನು ಸಾಯುವಷ್ಟು ಕೋಪಮಾಡುವದು ಒಳ್ಳೇದೇ ಅಂದನು.
10. ಆಗ ಕರ್ತನು ಹೇಳಿದ್ದೇನಂದರೆ--ನೀನು ಕಷ್ಟಪಡದಂಥ, ಬೆಳೆಸದಂಥ, ಒಂದು ರಾತ್ರಿಯಲ್ಲಿ ಹುಟ್ಟಿ ಒಂದು ರಾತ್ರಿಯಲ್ಲಿ ನಾಶನವಾದಂಥ,
11. ಆ ಸೋರೇಗಿಡದ ಮೇಲೆ ಕನಿಕರ ಪಟ್ಟಿಯಲ್ಲಾ, ಹಾಗಾ ದರೆ ಎಡ ಬಲ ಕೈಗಳನ್ನು ತಿಳಿಯದವರಾದ ಲಕ್ಷ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಾದ ಜನರು, ಬಹಳ ದನ ಗಳು ಸಹ ಇರುವ ಆ ದೊಡ್ಡ ಪಟ್ಟಣವಾದ ನಿನೆವೆ ಯನ್ನು ನಾನು ಕನಿಕರಿಸಬಾರದೋ ಅಂದನು.


Free counters!   Site Meter(April28th2012)